Author: AIN Author

ಮಂಡ್ಯ:- ಓರ್ವ ಮಹಿಳೆ ಹಾಗೂ ಪುರುಷನ ಮೃತದೇಹ ಪತ್ತೆಯಾದ ಘಟನೆ ಜಿಲ್ಲೆಯ ಪಾಂಡವಪುರದ ಹಿರೋಡೆ ಕೆರೆಯಲ್ಲಿ ಜರುಗಿದೆ. ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಈ ಕೆರೆ ಸುತ್ತಲು ಬೆಟ್ಟ-ಗುಡ್ಡಗಳು ಆವರಿಸಿವೆ. ಕೆಲವು ಮೀನುಗಾರರು ಇಲ್ಲಿ ಪ್ರತಿನಿತ್ಯ ಮೀನು ಹಿಡಿಯುತ್ತಾರೆ. ಅದೇ ಈ ರೀತಿ ಇಂದು ಸಹ ಮೀನು ಹಿಡಿಯಲು ತೆರಳಿದಂತಹ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ಮೃತದೇಹ ಪತ್ತೆ ಆಗಿದೆ. ಇನ್ನು ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ ಇಬ್ಬರು ತಬ್ಬಿಕೊಂಡು ಇರುವ ರೀತಿಯಲ್ಲಿ ಕೆರೆಯ ಕೆಸರಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದು ಕಡೆ ಆತ್ಮಹತ್ಯೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ರೆ, ಮತ್ತೊಂದು ಕಡೆ ಕೊಲೆಯೋ ಎಂಬ ಅನುಮಾನ ಮೂಡಿದೆ. ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಇಬ್ಬರು ವ್ಯಕ್ತಿಗಳ ಮೃತದೇಹ ಪತ್ತೆಯಾಗಿರುವುದು ಸಹಜವಾಗಿಯೇ ನಗರ ಪ್ರದೇಶದ ಜನರ ಆಂತಕಕ್ಕೆ ಕಾರಣವಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಪಾಂಡವಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮೃತದೇಹಗಳನ್ನ ಕೆರೆಯಿಂದ ಹೊರ ತೆಗೆದಿದ್ದಾರೆ.…

Read More

ಹುಬ್ಬಳ್ಳಿ:15 ಬಜೆಟ್ ಗಳನ್ನು ಮಂಡನೆ ಮಾಡಿ, ದೊಡ್ಡ ಆರ್ಥಿಕತಜ್ಞ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ಧರಾ ಮಯ್ಯನವರು, ತಮ್ಮ ಜೀವನಕಾಲದಲ್ಲಿಯೇ ಮಾಡಿದ ಅತ್ಯಂತ ಕೆಟ್ಟ, ಕಳಪೆ, ನಿರಾಶಾದಾಯಕ ಆಗಿದೆ ಎಂದು ರಾಜ್ಯ ವಿಧಾನ ಸಭಾ ಸಭಾ ವಿರೋಧ ಪಕ್ಷದ ಉಪ ನಾಯಕ ಹಾಗೂ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು ಇದೊಂದುಸುಳ್ಳುಕಂತೆಗಳಿರುವ ಬಜೆಟ್ ಇದಾಗಿದೆ. ಅವರು ಪ್ರತಿ ಬಾರಿಯು ಕೇಂದ್ರದಿಂದ ದುಡ್ಡು ಬಂದಿಲ್ಲ ಎಂದು ಹೇಳುತ್ತಿರುತ್ತಾರೆ ಹಾಗೂ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಆದರೆ ಅವರ ಸಾಧನೆ ಶೂನ್ಯ. ಕಳೆದ ಬಾರಿ ಸನ್ 2023-24 ನೇ ಸಾಲಿನಲ್ಲಿ ಅವರು ಬಜೆಟ್ ಮಂಡಿಸಿದಾಗ 96,000 ಕೋಟಿಯನ್ನು ಸಾಮಾಜಿಕ ಸೇವೆಗಾಗಿ ಮೀಸಲಿಟ್ಟಿರುತ್ತೇನೆ ಎಂದು ವಾಗ್ದಾನ ಮಾಡಿದ್ರು ಕೂಡ 2,000 ಕೋಟಿಯಷ್ಟು ಕಡಿಮೆ ಮೊತ್ತವನ್ನು ಸಾಮಾಜಿಕ ಸೇವೆಗಾಗಿ ಮೀಸಲಿಟ್ಟಿರುತ್ತಾರೆ. ಹಿಂದಿನ ಬಾರಿ ಶ್ರೀ ಬಸವರಾಜ ಬೊಮ್ಮಾಯಿ…

Read More

ರಾಮನಗರ:- ಜಿಲ್ಲೆಯ ಕನಕಪುರ-ಸಾತನೂರು ರಸ್ತೆಯ ಜಕ್ಕೇಗೌಡನ ಗ್ರಾಮದಲ್ಲಿ ಕಬ್ಬಿಣ ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಜರುಗಿದೆ. ಕೊಲ್ಕತ್ತಾ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮತ್ತೊಬ್ಬ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಬಿಡಬ್ಲ್ಯುಎಸ್‌ಎಸ್‌ಬಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಬಂದಿದ್ದ ಕಾರ್ಮಿಕರು, ಕನಕಪುರದಿಂದ ಜಕ್ಕೇಗೌಡನದೊಡ್ಡಿ ಕಡೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಇಬ್ಬರ ಮೇಲೆ ಕಬ್ಬಿಣದ ಕಂಬಿಗಳು ಬಿದ್ದಿದ್ದರಿಂದ ಅವರು ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಸಾತನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಬೆಂಗಳೂರು:- 1 ವಾರದಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್​​ಗೆ ಚಳಿ, ಜ್ವರ ಬಿಡಿಸಿದ್ದೀವಿ. ಇದೇ ಮೊದಲ ಬಾರಿ ಬಜೆಟ್​ ಮಂಡನೆ ವೇಳೆ ಪ್ರತಿಭಟನೆ ಮಾಡಿದ್ದೇವೆ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ. ರಾಜ್ಯದಲ್ಲಿ ನಾನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಬಳಿಕ ಹೊಸ ಹುರುಪು ಬಂದಿದೆ. 40% ಕಾಂಗ್ರೆಸ್ ಸರ್ಕಾರದ ಬಜೆಟ್​ ಪಾರದರ್ಶಕವಾಗಿ ಇರಬೇಕಿತ್ತು. ಸರ್ಕಾರದ ಬಜೆಟ್​ಗೆ ಅದರದೇ ಆದ ಪಾವಿತ್ರ್ಯತೆ ಇದೆ. ಬಜೆಟ್​ ಓದುವಾಗಲೆ ಕೇಂದ್ರ ಸರ್ಕಾರ ಮೋಸ ಮಾಡಿದೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಒಬ್ಬರೇ ಅಲ್ಲ, ಬಿಜೆಪಿಯವರು ಬಜೆಟ್​ ಮಂಡಿಸಿದ್ದೇವೆ ಎಂದು ಕಿಡಿಕಾರಿದ್ದಾರೆ. ಬಿಎಸ್​ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದ್ದಾರೆ. ಬಜೆಟ್​ನಲ್ಲಿ ನಾವು ಯಾವತ್ತೂ ಸಹ ಕೇಂದ್ರ ಸರ್ಕಾರವನ್ನು ತೆಗಳಿಲ್ಲ‌ ಎಂದು ಹೇಳಿದ್ದಾರೆ ಇಲ್ಲಿ ಒಂದು ರೀತಿ ಚುನಾವಣೆಯ ಸ್ಟಂಟ್​ಗಾಗಿ ಸೋನಿಯಾ ಗಾಂಧಿ ಮೆಚ್ಚಿಸಲು ಮೋದಿರನ್ನು ಟಾರ್ಗೆಟ್ ಮಾಡಿದ್ದಾರೆ. ಮುಖ್ಯಮಂತ್ರಿಗಳ ಸೇಡಿನ ಭಾಷಣದ ವಿರುದ್ಧ ನಾನು ಮಾತನಾಡಿದ್ದೇನೆ. 7 ಕೋಟಿ ಜನರ…

Read More

ಬೆಂಗಳೂರು:- ರಾಜ್ಯದಲ್ಲಿರುವ ಬಿಜೆಪಿ MP ಗಳು ನಾಲಾಯಕ್ ಗಳು CM ಸಿದ್ದರಾಮಯ್ಯ ಹೇಳಿದ್ದಾರೆ. ಕಳೆದ ಬಜೆಟ್​​ಗಿಂತ 46,630 ಕೋಟಿ ರೂ. ಬಜೆಟ್​ ಗಾತ್ರ ಹೆಚ್ಚಳವಾಗಿದೆ. ಗ್ಯಾರಂಟಿಗಳಿಂದ ಆರ್ಥಿಕ ದಿವಾಳಿಯಾಗಿದೆ ಎಂದು ಹೇಳುತ್ತಿದ್ದಾರೆ. ಬಿಟ್ಟಿ ಗ್ಯಾರಂಟಿ ಕೊಟ್ಟಿದ್ದರಿಂದ ಆರ್ಥಿಕ ದಿವಾಳಿ ಅಂತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೂ ನಾವು ಅನುದಾವನ್ನು ಕೊಟ್ಟಿದ್ದೇವೆ. ಬರ ಹಿನ್ನೆಲೆ ಕೇಂದ್ರದ ಬಳಿ 18,171 ಕೋಟಿ ರೂ. ಕೇಳಿದ್ದೇವೆ. ಇದುವರೆಗೂ ಕೇಂದ್ರದಿಂದ ಒಂದು ರೂಪಾಯಿ ಸಹ ಬಂದಿಲ್ಲ. ಇದುವರೆಗೂ ಒಂದು ಮೀಟಿಂಗ್​ ಕೂಡ ಮಾಡಿಲ್ಲ, ರಾಜ್ಯದಲ್ಲಿ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರದಿಂದ ಇಲ್ಲಿವರೆಗೆ 1 ರೂಪಾಯಿ ಕೊಟ್ಟಿಲ್ಲ. ನಾವು ಸುಳ್ಳು ಹೇಳಿದ್ರೆ ರಾಜ್ಯಪಾಲರು ಓದುತ್ತಿದ್ದರಾ? ಬಜೆಟ್​ ಕೇಳುವುದಕ್ಕೆ ಆಗದೇ ವಿಲವಿಲ ಒದ್ದಾಡಿ ಎದ್ದೋದ್ರು. ಕೋಲೆ ಬಸವನ ತರ ಅಲ್ಲಾಡಿಸುತ್ತಾರೆ. ಆದ್ರೆ, ಅಲ್ಲಿ ಕೇಳಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಕೇಂದ್ರಕ್ಕೆ ಕೇಳಲ್ಲ. ಪಾರ್ಲಿಮೆಂಟ್​ನಲ್ಲಿ ಯಾವತ್ತಾದರೂ ಮಾತನಾಡಿದ್ದಾರಾ? ಇವರು ಎಂಪಿಗಳಾವುದಕ್ಕೇ ನಾಲಾಯಕ್ ಎಂದು ಕರ್ನಾಟಕ ಬಿಜೆಪಿ ಸಂಸದರ…

Read More

ಕಲಬುರ್ಗಿ:- ಬೆಂಗಳೂರಿಗೆ ಹೋಗಿ ಬರಲುರಾತ್ರಿ ವಿಮಾನ ಸೇವೆ ಶುರುವಾಗಬೇಕು ಅನ್ನೋ ಕಲಬುರಗಿ ಜನರ ಬಹುದಿನದ ಕನಸು ಕೊನೆಗೂ ನನಸಾಗಿದೆ. ಅಂದಹಾಗೆ Alliance Airlines ವಿಮಾನ ಹಾರಾಟ ನಡೆಸಲು ಮುಂದೆ ಬಂದಿದ್ದು ಫೆಬ್ರವರಿ 22 ರಂದು ಸಂಜೆ 6:45 ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 08:00 ಗಂಟೆಗೆ ಕಲಬುರಗಿಗೆ ಬರಲಿದೆ ಮತ್ತು ಇದೇ ವಿಮಾನ ರಾತ್ರಿ 8:45 ಕ್ಕೆ ಕಲಬುರಗಿಯಿಂದ ಹೊರಟು ಬೆಂಗಳೂರಿಗೆ ರಾತ್ರಿ 10:00 ತಲುಪಲಿದೆ. ಸದ್ಯಕ್ಕೆ ಈ ವಿಮಾನ ಪ್ರತಿ ಗುರುವಾರ ಸಂಚರಿಸಲಿದ್ದು ಮುಂಬರುವ ದಿನಗಳಲ್ಲಿ ಪ್ರತಿದಿನ ಸೇವೆ ಪ್ರಾರಂಭವಾಗಲಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿದ ಸಂಸದ ಉಮೇಶ್ ಜಾಧವ್ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ…

Read More

ಬಳ್ಳಾರಿ:- ಜಿಲ್ಲೆಯ‌ ಹಗರಿಬೊಮ್ಮನಹಳ್ಳಿ ಪಟ್ಟಣದ ಜೆಸ್ಕಾಂ ಕಚೇರಿ ಪಕ್ಕದಲ್ಲಿ ಪ್ರೀತಿಯ ಮಡದಿಗೆ ಅವಾಚ್ಯ ಪದಗಳಿಂದ ಬೈದಿದ್ದಾನೆ ಎಂದು ಪ್ರಶ್ನೆ ಮಾಡಲು ಹೋಗಿದ್ದ ಯುವಕನನ್ನು ಹಳೆ ದ್ವೇಷ ಮತ್ತು ಮೃತನ ಕುಟುಂಬದ ಮೇಲಿದ್ದ ಅಸೂಹೆಯಿಂದ ಆರು ಜನ ಸೇರಿ ಚಾಕು ಮತ್ತು ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ಜರುಗಿದೆ. ಬಂಗಾರಿ ಮಂಜುನಾಥ್​ ಮೃತ ರ್ದುದೈವಿ ಎನ್ನಲಾಗಿದೆ. ತನ್ನ ಪ್ರೀತಿಯ ಮಡದಿಗೆ ಅವಾಚ್ಯ ಪದಗಳಿಂದ ಬೈದರೂ ಎಂದು ನೆರೆ ಮನೆಯ ದಾಯಾದಿಗಳನ್ನ ಪ್ರಶ್ನೆ ಮಾಡಲು ಹೋಗಿದ್ದಾನೆ. ಏಕಾಏಕಿ ಮಾತಿಗೆ ಮಾತು ಬೆಳೆದು ಎದರುಗಡೆಯ ದಾಯಾದಿಗಳು ಕೈಯಲ್ಲಿ ಚಾಕು, ರಾಡ್ ಹಿಡಿದು ಭೀಕರವಾಗಿ ಕೊಂದೆ ಬಿಟ್ಟಿದ್ದಾರೆ. ಬಂಗಾರಿ ಮಂಜುನಾಥ್​ ಹಾಗೂ ಅವರ ದಾಯಾದಿ ಬಂಗಾರಿ ಹನುಮಂತ ಕುಟುಂಬಕ್ಕೆ ಈ ಹಿಂದೆ ದ್ವೇಷ ಇತ್ತು. ಆಸ್ತಿ ವಿಚಾರವಾಗಿ, ಮನೆ ಜಾಗದ ವಿಚಾರವಾಗಿ, ಹಣದ ವಿಚಾರವಾಗಿ ಪದೇ ಪದೇ ಎರಡು ಕುಟುಂಬಗಳ ನಡುವೆ ಜಗಳವಾಗುತ್ತಲೇ ಇತ್ತು. ಕೊಲೆಯಾದ ಬಂಗಾರಿ ಮಂಜುನಾಥ ಕೂಡ ಕಟ್ಟುಮಸ್ತಾಗಿದ್ದ ಹೀಗಾಗಿ ಇತನು ಯಾವ…

Read More

ಬೆಂಗಳೂರು:- ಕೋಟ್ಯಾಂತರ ಮೌಲ್ಯದ ಕೊಕೇನ್ ಜಪ್ತಿ ಮಾಡಿದ ಘಟನೆ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ ಜರುಗಿದೆ. ದುಬೈನಿಂದ ಬೆಂಗಳೂರಿಗೆ ಬಂದಿದ್ದ ವೆನೆಜುವೆಲಾದ ಪ್ರಯಾಣಿಕ, ದೇಹದೊಳಗೆ ಕೊಕೇನ್ ಮರೆಮಾಚಿ ಅಕ್ರಮ ಸಾಗಾಟಕ್ಕೆ ಯತ್ನಿಸಿದ್ದ. ಅನುಮಾನಗೊಂಡ ಡಿಆರ್​ಐ ಅಧಿಕಾರಿಗಳು, ಆರೋಪಿಯನ್ನು ಸ್ಕ್ಯಾನಿಂಗ್ ಮಾಡಿಸಿದ್ದರು. ಈ ವೇಳೆ ದೇಹದಲ್ಲಿ ಬರೊಬ್ಬರಿ 9.2 ಕೋಟಿ ಮೌಲ್ಯದ 920 ಗ್ರಾಂ ನಾರ್ಕೋಟಿಕ್ ಕ್ಯಾಪ್ಸುಲ್‌ ಪತ್ತೆಯಾಗಿದ್ದು, ಮರೆಮಾಚಿದ್ದ ಕ್ಯಾಪ್ಸುಲ್‌ಗಳನ್ನು ಅಧಿಕಾರಿಗಳು ಹೊರತೆಗೆಸಿದ್ದಾರೆ. ಈ ಕುರಿತು NDPS ಕಾಯ್ದೆ 1985ರ ಅಡಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇನ್ನು ಜ.05 ರಂದು ಕೆಂಪೇಗೌಡ ಏರ್​ಪೋರ್ಟ್ನಲ್ಲಿ ಬರೊಬ್ಬರಿ 1.29 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಜೊತೆಗೆ ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 12 ಜನ ಪ್ರಯಾಣಿಕರನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇವರಿಂದ 2.86 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದರು.

Read More

ಬೆಂಗಳೂರು: 15 ಬಾರಿ ಬಜೆಟ್ ಮಂಡಿಸಿ 1.5 ಲಕ್ಷ ಕೋಟಿ ಸಾಲ ಮಾಡಿರುವ ದಾಖಲೆ ಸೃಷ್ಟಿಸಿರುವ ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳಿನ ಕಂತೆಯ ರಾಜಕೀಯ ಬಜೆಟ್ ಮಂಡಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಬಜೆಟ್ ಮೇಲೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರವನ್ನು ವಿರೋಧಿಸಲು ಬಜೆಟನ್ನು ಬಳಸಿಕೊಂಡಿದ್ದಾರೆ. ಬಜೆಟ್ ನ ಪಾವಿತ್ರ್ಯತೆಯನ್ನು ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಕೇಂದ್ರ ಸರ್ಕಾರದ ಅನುದಾನ‌ ಪಡೆಯಲು ಅನೇಕ ವೇದಿಕೆಗಳಿವೆ. ಜಿಎಸ್ ಟಿ ಕೌನ್ಸಿಲ್ ಇದೆ. ನೀತಿ ಆಯೋಗ ಇದೆ. ಒಂದು ಬಾರಿಯೂ ನೀತಿ ಆಯೋಗದ ಸಭೆಗೆ ಹಾಜರಾಗದೇ ಆ ಸಂದರ್ಭದಲ್ಲಿ ಮಾತನಾಡದೇ ಬಜೆಟ್ ನಲ್ಲಿ ಕೇಂದ್ರ ಸರ್ಕಾರವನ್ನು ವಿರೋಧಿಸುತ್ತಿರುವುದು ರಾಜಕೀಯ ಕಾರಣಕ್ಕೆ. ರಾಜಕೀಯಕ್ಕಾಗಿ ಬಜೆಟ್ ಬಳಸಿಕೊಂಡಿರುವುದು ಖಂಡನೀಯ ಎಂದು ಹೇಳಿದರು. ಕಳೆದ ವರ್ಷಕ್ಕಿಂತ ಸುಮಾರು 25 ಸಾವಿರ ಕೋಟಿ‌ ರೂ. ಸಾಲ ಮಾಡಿ ಅದರಲ್ಲಿ ಅಭಿವೃದ್ಧಿ ಗೆ ಕೇವಲ ಒಂದು ಸಾವಿರ‌ ಕೋಟಿ ಮಾತ್ರ ಬಳಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಕಳೆದ ವರ್ಷ…

Read More

ಬೆಂಗಳೂರು:- ಸಿದ್ದರಾಮಯ್ಯ ಬಜೆಟ್ ಮಂಡಿಸುವಾಗ ಬಿಜೆಪಿ ನಾಯಕರು ಸದನದಿಂದ ಹೊರನಡೆದಿದ್ದಾರೆ. ಬಜೆಟ್ ಮಂಡನೆ ವೇಳೆ ಬಿಜೆಪಿ ನಾಯಕರು ವಾಕ್‌ಔಟ್ ಮಾಡಿದ್ದಕ್ಕೆ ಕಿಡಿಕಾರಿದ ಸಿಎಂ, 1983 ರಿಂದ ನಾನು ವಿಧಾನಸಭೆಯಲ್ಲಿ ಇದ್ದೇನೆ. ಆಡಳಿತ ಮತ್ತು ವಿರೋಧ ಪಕ್ಷ ಎರಡರಲ್ಲೂ ಇದ್ದೆ. ಬಜೆಟ್ ಮಂಡನೆ ಮಾಡುವಾಗ ಯಾರು ಕೂಡ ವಾಕ್‌ಔಟ್ ಮಾಡಿರಲಿಲ್ಲ ಯಾರು ವಾಕ್ ಔಟ್ ಮಾಡಿರಲಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಗ್ಯಾರಂಟಿ ಕೊಟ್ಟು ಆರ್ಥಿಕವಾಗಿ ದಿವಾಳಿ ಆಗಿದೆ. ಇದು ಬಿಟ್ಟಿ ಗ್ಯಾರಂಟಿ ಅಂತ (ಬಿಜೆಪಿ) ಹೇಳಿದರು. ಅದರೆ ಬಜೆಟ್ ಗಾತ್ರ 13% ಹೆಚ್ಚಳ ಆಗಿದ್ದು, ಆರ್ಥಿಕತೆ ಸುಭದ್ರವಾಗಿದೆ. 36 ಸಾವಿರ ಕೋಟಿ ಗ್ಯಾರಂಟಿ ಕೊಟ್ಟರು. ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಬರ ಬಂದಿದೆ. ಒಟ್ಟು 35 ಸಾವಿರ ಕೋಟಿ ನಷ್ಟ ಆಗಿದೆ. ಕೇಂದ್ರಕ್ಕೆ 18,171 ಕೋಟಿ ಬರ ಪರಿಹಾರ ನಿಯಮದ ಪ್ರಕಾರ, ಎನ್‌ಡಿಆರ್‌ಎಫ್ ಪ್ರಕಾರ ಕೇಳಿದ್ದೇವೆ. ಇದು ನಮ್ಮ ತೆರಿಗೆ ಹಣ ಅದಕ್ಕೆ ಕೇಳ್ತಿದ್ದೇವೆ. ಇದುವರೆಗೂ ಕೇಂದ್ರ ಸರ್ಕಾರ ಒಂದು ರೂಪಾಯಿ ಹಣ…

Read More