Author: AIN Author

ಬೆಂಗಳೂರು:- ಕಳೆದ 14 ದಿನದಲ್ಲಿ ಬಿಯರ್ ಮಾರಾಟದ ಲೆಕ್ಕಚಾರ ತಲೆಕೆಳಗಾಗಿದೆ. ಕಳೆದ ವರ್ಷ ಫೆಬ್ರವರಿ ಒಂದರಿಂದ 14ರ ವರೆಗೆ 14.35 ಲಕ್ಷ ಕೇಸ್ ಬಿಯರ್ ಸೇಲ್ ಆಗಿತ್ತು. ಆದರೆ ಈ ವರ್ಷ ಕೇವಲ 13.34 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ. ದರ ಏರಿಕೆಯಿಂದ ಬರೊಬ್ಬರಿ 1 ಲಕ್ಷ ಕೇಸ್ ಮಾರಾಟ ಕುಸಿತವಾಗಿದೆ. ಜನವರಿಯಲ್ಲಿ 14 ದಿನಕ್ಕೆ 17 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜನವರಿಯಲ್ಲಿ 15 ಪರ್ಸೆಂಟ್ ಏರಿಕೆಯಾಗಿತ್ತು. ಈ ತಿಂಗಳು ಕೂಡ ಭರ್ಜರಿ ಮಾರಾಟದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಮದ್ಯಪ್ರಿಯರು ಶಾಕ್ ನೀಡಿದ್ದಾರೆ. ಆದರೆ ಕಳೆದ 14 ದಿನದಲ್ಲಿ ಮಾರಾಟ ಕಮ್ಮಿಯಾದ್ರೂ ಆದಾಯದಲ್ಲಿ ಮಾತ್ರ ಏರಿಕೆ ಆಗಿದೆ. ಕಳೆದ ವರ್ಷ 14 ದಿನದಲ್ಲಿ 1200 ಕೋಟಿ ಆದಾಯ ಬಂದ್ರೆ. ಈ ವರ್ಷ 1400 ಕೋಟಿ ಆದಾಯ ಸಂಗ್ರವಾಗಿ, 200 ಕೋಟಿ ಅಧಿಕವಾಗಿದೆ. ದರ ಏರಿಕೆಯಿಂದ ಮಾತ್ರ ಹೆಚ್ಚುವರಿ ಆದಾಯ ಸಂಗ್ರಹವಾಗಿದೆ ಮಾರಾಟದಿಂದಲ್ಲ ಎಂದು ಬೆಂಗಳೂರು ಮದ್ಯ…

Read More

ಇತ್ತೀಚೆಗೆ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದ ಅಧಿಕ ರಕ್ತದೊತ್ತಡದಿಂದ (ಬಿಪಿ) ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯುವ ಜನತೆ ಕೂಡ ಬಿಪಿಯಿಂದ ಬಳಲುತ್ತಿದ್ದಾರೆ. ಆದರೆ ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಜೀವನಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು. ವಿಶೇಷವಾಗಿ ಬಿಪಿ ಇರುವವರು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಲು ಸಲಹೆ ನೀಡಲಾಗುತ್ತದೆ. ವಿಶೇಷವಾಗಿ ಮುಂಬರುವ ಬೇಸಿಗೆ ಕಾಲದಲ್ಲಿ ನಿಮ್ಮ ದೇಹದಲ್ಲಿ ಸಾಕಷ್ಟು ನೀರನ್ನು ಕಾಪಾಡಿಕೊಳ್ಳಲು ಜಾಗರೂಕರಾಗಿರಿ ಎಂದು ಸಲಹೆ ನೀಡುತ್ತಾರೆ. ಆದರೆ ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೆಂಗಿನ ನೀರನ್ನು ದಿವ್ಯ ಔಷಧಿ ಎನ್ನುತ್ತಾರೆ. ಈ ಅನೇಕ ನೈಸರ್ಗಿಕ ಗುಣಗಳು ದೇಹಕ್ಕೆ ಪ್ರಯೋಜನಕಾರಿ. ಬಿಪಿಯನ್ನು ನಿಯಂತ್ರಣದಲ್ಲಿಡಲು ಉಪಯುಕ್ತ. ಈಗ ಬಿಪಿಯಿಂದ ಬಳಲುತ್ತಿರುವವರು ತೆಂಗಿನ ನೀರನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ. * ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಸಾಮಾನ್ಯವಾಗಿ ನಾವು ಸೇವಿಸುವ ಆಹಾರದಿಂದ ಪೊಟ್ಯಾಸಿಯಮ್ ಸಿಗುತ್ತದೆ. ಈ ಸಮಯದಲ್ಲಿ ತೆಂಗಿನ ನೀರನ್ನು ಕುಡಿಯಿರಿ. ಏಕೆಂದರೆ ಪೊಟ್ಯಾಸಿಯಮ್…

Read More

ಕೆಲವರು ಬಾಯಿ ತೆರೆದರೆ ಕೆಟ್ಟ ವಾಸನೆ ಬರುತ್ತದೆ. ಇದು ಅನೇಕರನ್ನು ಕಾಡುವ ಸಮಸ್ಯೆ. ಇದು ಅವರಿಗಷ್ಟೇ ಅಲ್ಲ, ಇತರರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ಬಾಯಿ ತೆರೆದು ಮಾತನಾಡಲು ಸಹ ಅವರು ಹಿಂಜರಿಯುತ್ತಾರೆ. ಅಷ್ಟೇ ಅಲ್ಲ ಮುಜುಗರಕ್ಕೊಳಗಾಗುವುದು ಬೇಡವೆಂದು ಜನರ ಮಧ್ಯದಿಂದ ದೂರವಿರಲು ಬಯಸುತ್ತಾರೆ. ಆದರೆ ಹೆಚ್ಚಿನವರಿಗೆ ತಮ್ಮ ಬಾಯಿಂದ ದುರ್ವಾಸನೆ ಬರುವುದೇ ತಿಳಿದಿರುವುದಿಲ್ಲ. ಇದಕ್ಕೆ ದಂತಕುಳಿ, ಒಣಬಾಯಿ, ಒಸಡಿನ ಸಮಸ್ಯೆ, ಈರುಳ್ಳಿ-ಬೆಳ್ಳುಳ್ಳಿ ಸೇವನೆ, ಆಹಾರ ಅಜೀರ್ಣವಾಗಿ ಹುಳಿತೇಗು ಬರುವುದು ಇತ್ಯಾದಿಗಳು ಇದಕ್ಕೆ ಕಾರಣವಿರಬಹುದು. ಅಷ್ಟೇ ಅಲ್ಲ ನೀರನ್ನು ಕಡಿಮೆ ಕುಡಿಯುವುದು ಸಹ ಬಾಯಿ ವಾಸನೆಗೆ ಕಾರಣವಾಗಬಹುದು. ಅನೇಕರಿಗೆ ತಮ್ಮ ಬಾಯಿಯ ದುರ್ವಾಸನೆ ಗೊತ್ತೇ ಆಗುವುದಿಲ್ಲ. ಇದಕ್ಕೆ ತಮ್ಮ ಕೈಯನ್ನೇ ನೆಕ್ಕಿ ಒಂದೆರಡು ನಿಮಿಷ ಬಿಟ್ಟು ವಾಸನೆ ನೋಡಿಕೊಂಡು ಪರೀಕ್ಷಿಸಬಹುದು. ನಿವಾರಣೆ ದಿನಕ್ಕೆರಡು ಬಾರಿ ಹಲ್ಲುಜ್ಜುವುದು, ನಾಲಿಗೆಯನ್ನೂ ಸ್ವಚ್ಛಗೊಳಿಸುವುದು, ಮೌತ್‌ವಾಶ್‌ಗಳನ್ನು ಬಳಸಿ ಬಾಯಿ ಮುಕ್ಕಳಿಸುವುದರ ಮೂಲಕ ಇದನ್ನು ನಿವಾರಿಸಿಕೊಳ್ಳಬಹುದು. ಇದಲ್ಲದೆ ದಂತವೈದ್ಯರ ಬಳಿ ಹೋಗಿ ದಂತಕುಳಿ ನಿವಾರಿಸಿಕೊಳ್ಳಿ. ಹೆಚ್ಚು ನೀರು ಕುಡಿಯಿರಿ. ಏಲಕ್ಕಿ…

Read More

ಬೆಂಗಳೂರು:- ನಗರದಲ್ಲಿ ಮೀಟರ್ ಬಡ್ಡಿ ದಂಧೆ ಬೆಳಕಿಗೆ ಬಂದಿದ್ದು, ಸೈಕಲ್ ರವಿ ಸಹಚರರನ್ನು ಬಂಧಿಸಲಾಗಿದೆ. ಉಮೇಶ್, ಸುರೇಶ್, ಮಂಜುನಾಥ್​ ಬಂಧಿತ ಆರೋಪಿಗಳಾಗಿದ್ದು, ಆರ್​ಆರ್​ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಗೆ ಆರೋಪಿ ಮಂಜುನಾಥ್ ಸಾಲ ನೀಡಿದ್ದ. ಈ ಸಾಲದ ವಸೂಲಿ ಮಾಡಿಕೊಡಲು ಸೈಕಲ್ ರವಿ ಸಹಚರನಾದ ಉಮೇಶ್​ಗೆ ಮಂಜುನಾಥ್ ಹೇಳಿದ್ದ. ಉಮೇಶ್ ತನ್ನ ಸಹಚರನಾದ ಸುರೇಶ್ ಜೊತೆ ಮೀಟರ್ ಬಡ್ಡಿ ವಸೂಲಿಗೆ ಮುಂದಾಗಿದ್ದ. ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಉಮೇಶ್, ಸುರೇಶ್ ಹಾಗೂ ಮಂಜುನಾಥ್​​ ಅವರನ್ನು ಬಂಧಿಸಿದ್ದಾರೆ. ಟ್ರಾವೆಲ್ಸ್ ವ್ಯವಹಾರಕ್ಕಾಗಿ ರಂಗನಾಥ್ ಎಂಬವರು ಮಂಜುನಾಥ್ ಬಳಿ 23 ಲಕ್ಷ ಹಣವನ್ನ ಬಡ್ಡಿಗೆ ಸಾಲ ಪಡೆದಿದ್ದರು. 23 ಲಕ್ಷ ಹಣವನ್ನ ಬಡ್ಡಿ ಸಮೇತ ರಂಗನಾಥ್ ಹಿಂದಿರುಗಿಸಿದ್ದರು. ಆದರೆ ಮಂಜುನಾಥ್ ನಾನು ಮೀಟರ್ ಬಡ್ಡಿಗೆ ಹಣವನ್ನ ಕೊಟ್ಟಿರುವುದು. ಇನ್ನೂ 5 ಲಕ್ಷ ಹಣವನ್ನ ನೀನು ಕೊಡಬೇಕು ಎಂದು ಪಟ್ಟು ಹಿಡಿದಿದ್ದ. ಐದು ಲಕ್ಷ ಹಣವನ್ನ ರಂಗನಾಥ್ ಕೊಡಲು…

Read More

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕ್ಯಾನ್ಸರ್ (Cancer) ರೋಗಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತಿ ಜಿಲ್ಲೆಯಲ್ಲೂ ಡೇ-ಕೇರ್ ಕಿಮೋಥೆರಪಿ (Day Care Chemotherapy) ಕೇಂದ್ರ ಸ್ಥಾಪಿಸುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಬಜೆಟ್‌ನಲ್ಲಿ ಘೋಷಿಸಿದ್ದಾರೆ. Siddaramaiah Budget: ಬಜೆಟ್‌ʼನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು ? ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ! ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಿಮೋಥೆರಪಿ ಕೇಂದ್ರಗಳು ಇಲ್ಲ. ಇದರಿಂದ ಕ್ಯಾನ್ಸರ್ ಪೀಡಿತರಿಗೆ ಕಿಮೋಥೆರಪಿ ಮಾಡುವುದು ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 20 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಒಂದು ಡೇ-ಕೇರ್ ಕಿಮೋಥೆರಪಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸರ್ಕಾರ ಸಜ್ಜಾಗುತ್ತಿದೆ. ಇದಕ್ಕಾಗಿ 20 ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ಮಾಮೋಗ್ರಫಿ (Digital Mammography) ಯಂತ್ರಗಳನ್ನು ಖರೀದಿಸಲು ನಿರ್ಧರಿಸಿದೆ

Read More

ಸಂಶೋಧಕರು ಮಧುಮೇಹವನ್ನು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ. ಇದರೊಂದಿಗೆ ಈ ಕಾಯಿಲೆಗೆ ಸಂಬಂಧಿಸಿದಂತೆ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಜರ್ಮನಿಯ ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನವೊಂದು ಹಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಈ ಅಧ್ಯಯನವು ಕಡಿಮೆ ಎತ್ತರ ಇರುವವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎಂದು ತೋರಿಸಿದೆ. ಹೆಚ್ಚು ಎತ್ತರದವರಿಗೆ ಹೋಲಿಸಿದರೆ ಕುಳ್ಳಗಿರುವವರು ಮಧುಮೇಹದಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಹೇಳಿದ್ದಾರೆ. ಕಡಿಮೆ ವಯಸ್ಸಿನ ಪುರುಷರಲ್ಲಿ ಮಧುಮೇಹ ಬರುವ ಅಪಾಯವು 41 ಪ್ರತಿಶತದಷ್ಟು ಹೆಚ್ಚಿದೆ ಎಂದು ಅಧ್ಯಯನ ಬಹಿರಂಗಪಡಿಸಿದೆ. ಕಡಿಮೆ ಎತ್ತರ ಅಂದರೆ ಕುಳ್ಳಗೆ ಇರುವ ಜನರಲ್ಲಿ, ಯಕೃತ್ತು ಹೆಚ್ಚು ಕೊಬ್ಬನ್ನು ಸಂಗ್ರಹಿಸುತ್ತದೆ. ಇದರಿಂದ ಹೃದ್ರೋಗ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ದೇಹದಲ್ಲಿ ಊತ ಮತ್ತು ಚಯಾಪಚಯ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. ಇವೆಲ್ಲವೂ ಮಧುಮೇಹಕ್ಕೆ ಸಂಬಂಧಿಸಿದೆ. ಪಿತ್ತಜನಕಾಂಗದಲ್ಲಿ ಕೊಬ್ಬು ಹೆಚ್ಚಾದಂತೆ, ಮಧುಮೇಹದ ಅಪಾಯವು ಹೆಚ್ಚಾಗುತ್ತದೆ. ಈ ಕಾರಣದಿಂದಲೇ ಎತ್ತರ ಕಡಿಮೆ ಇರುವವರಿಗೆ…

Read More

ಚಿಕ್ಕಮಗಳೂರು:- ಕ್ಯಾಬ್ ಚಾಲಕನನ್ನು ಬರ್ಬರವಾಗಿ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಹುಲಿಗೊಂದಿ ಹೊಸೂರು ಗ್ರಾಮದ ಬಳಿ ಜರುಗಿದೆ. 21 ವರ್ಷದ ದರ್ಶನ್ ಮೃತ ರ್ದುದೈವಿ. ಇನ್ನು ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಕೆಲಸ ಮಾಡುತ್ತಿದ್ದ ದರ್ಶನ್, ಹಾಫ್ ಮರ್ಡರ್ ಕೇಸಿನಲ್ಲಿ ಜೈಲು ಸೇರಿದ್ದ. ಇತ್ತೀಚೆಗೆ ಬೇಲ್ ಪಡೆದು ಇಬ್ಬರು ಸ್ನೇಹಿತರ ಜೊತೆ ಕಡೂರಿನ ಮಾಡಾಳು ಗ್ರಾಮದ ತಾತನ ಮನೆಗೆ ಬಂದಿದ್ದ. ವಾರದ ಹಿಂದೆ ಬೆಂಗಳೂರಿಗೆ ವಾಪಸ್ ಹೋಗಿದ್ದ ಮೃತ ದರ್ಶನ್ ಸ್ನೇಹಿತರು, ನಿನ್ನೆ(ಫೆ.15) ರಾತ್ರಿ ಪುನಃ ಬಂದಿದ್ದಾರೆ. ಈ ಹಿನ್ನಲೆ ಕಾರಿನಲ್ಲಿ ಬಂದ ಸ್ನೇಹಿತರ ಜೊತೆ ದರ್ಶನ್ ಹೋಗಿದ್ದನಂತೆ. ತಾತನಿಗೆ ಫ್ರೆಂಡ್ಸ್ ಬಂದಿದ್ದಾರೆ, ಹೊಲದ ಶೆಡ್​ನಲ್ಲಿ ಮಲಗುತ್ತೇನೆ ಎಂದು ಹೇಳಿ ಹೋಗಿದ್ದಾನೆ. ದರ್ಶನ್ ಕಾರಿನಲ್ಲಿ ಹೋಗಿದ್ದನ್ನ ದರ್ಶನ್ ತಾತ ಕೂಡ ನೋಡಿದ್ದರು. ರಾತ್ರಿ ಹೊಲಕ್ಕೆ ಹೋಗಿ ನೋಡಿದಾಗ ಶೆಡ್​ನಲ್ಲಿ ದರ್ಶನ್ ಇರಲಿಲ್ಲ. ಸ್ನೇಹಿತರ ಜೊತೆ ಎಲ್ಲೋ ಹೋಗಿರಬಹುದು ಎಂದು ತಾತ ಮನೆಗೆ ಬಂದಿದ್ದರು. ಬೆಳಗ್ಗೆ ಮಾಡಾಳು ಗ್ರಾಮದ…

Read More

ಬೆಂಗಳೂರು:- ಬೆಂಗಳೂರು ಅಭಿವೃದ್ಧಿಗೆ ಪೂರಕ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ಹೇಳಿದ್ದಾರೆ. ದಾಖಲೆಯ 15ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ್ದ ಐತಿಹಾಸಿಕ 15ನೇ ಬಜೆಟ್ ಕುರಿತಂತೆ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಕ್ಷೇತ್ರಕ್ಕೆ ಕುಡಿಯುವ ನೀರು, ಘನತ್ಯಾಜ್ಯ ಸಮಸ್ಯೆ ಬಹೆಹರಿಸಿದ್ದಾರೆ. 110 ಹಳ್ಳಿಗಳಿಗೆ ಇದರಿಂದ ಅನುಕೂಲ ಆಗಲಿದೆ, ನಾನು ಶಾಸಕನಾಗಿ ನನ್ನ‌ ಕ್ಷೇತ್ರದ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ. ಬೇರೆ ಶಾಸಕರ ಹೇಳಿಕೆಗಳು ನನಗೆ ಬೇಕಿಲ್ಲ. ಬೆಂಗಳೂರು ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್​ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಬೆಂಗಳೂರಿಗೆ ಸಂಬಂಧಿಸಿ ಬಗ್ಗೆ ಮಾತ್ರ ಮಾತನಾಡುತ್ತೇನೆ. ಕುಡಿಯುವ ನೀರು, ಕಸ ವಿಲೇವಾರ, ಟ್ರಾಫಿಕ್, ವೈಟ್ ಟ್ಯಾಪಿಂಗ್, ಫ್ಲೈ ಓವರ್ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ ಇನ್ನು ಪೂರ್ಣ ಪ್ರಮಾಣದ ಬಜೆಟ್ ನೋಡಿಲ್ಲ. ಬಜೆಟ್ ವಿರೋಧ ಮಾಡುವವರಿಗೆ ನಾನು ಏನೂ ಹೇಳುವುದಿಲ್ಲ. ಟೀಕೆ ಮಾಡುವುದು…

Read More

ಶನಿವಾರ ರಾಶಿ ಭವಿಷ್ಯ -ಫೆಬ್ರವರಿ-17,2024 ಸೂರ್ಯೋದಯ: 06:45, ಸೂರ್ಯಾಸ್ತ : 06:14 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾಘ ಮಾಸ, ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ಅಷ್ಟಮಿ, ನಕ್ಷತ್ರ: ಕೃತಿಕಾ, ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ:01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ:ಇಲ್ಲ ಅಭಿಜಿತ್ ಮುಹುರ್ತ: ಮ.12:07 ನಿಂದ ಮ.12:53 ತನಕ ಮೇಷ ರಾಶಿ ಕುರಿ ಕೋಳಿ ಸಾಕಾಣಿಕೆ ಉದ್ಯಮದವರಿಗೆ ಆರ್ಥಿಕ ಚೇತರಿಕೆ,ಗಂಡು ಸಂತಾನ ಜನನ ಮನೆಯಲ್ಲಿ ಸಂತಸ ವಾತಾವರಣ, ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ, ವಾಹನ ಚಾಲನೆ ಜಾಗೃತಿ ವಹಿಸಿ,ಮೊದಲನೇ ಬಾರಿ ಗರ್ಭಿಣಿಯಾದ ಹೆಣ್ಣುಮಕ್ಕಳು ಎಚ್ಚರದಿಂದಿರಬೇಕು, ಇವರಿಗೆ ಕುಟುಂಬ ವರ್ಗದಿಂದ ಕಾಳಜಿ ಮಾಡುವುದು ಉತ್ತಮ, ವಿಶ್ರಾಂತಿ ಅವಶ್ಯಕವಾಗಿದೆ, ವಿಚ್ಛೇದನ ಪಡೆದ ಮತ್ತು ವಿಧವಾ ಎರಡನೇ ಮದುವೆ ಚರ್ಚೆ ನಡೆಯಲಿದೆ, ಕೆಲವರಿಗೆ ಅತ್ತೆ ಮತ್ತು ಸೊಸೆ ಮಧ್ಯೆ ಇಲ್ಲಸಲ್ಲದ ಆರೋಪಗಳು ಬರುವವು, ಸಾಲ…

Read More

ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 15 ನೇ ಬಜೆಟ್ ವಿರುದ್ಧ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಸಿದ್ದರಾಮಯ್ಯನವರು ಕಳಪೆ ಬಜೆಟ್​ ಮಂಡಿಸಿದ್ದಾರೆ. ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್​ ನೋಡಿಲ್ಲ. ಹದಿನಾಲ್ಕು ಬಜೆಟ್​ಗಳನ್ನು ಮಂಡಿಸಿರುವ ಸಿದ್ದರಾಮಯ್ಯರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.​ ಈ ಬಾರಿ ಬಜೆಟ್​ನ ಬಹುತೇಕ ಅಂಶ ಕೇಂದ್ರ ಸರ್ಕಾರವನ್ನು ದೂರಲು ಮೀಸಲಿಡಲಾಗಿದೆ. ದೆಹಲಿ ಪ್ರತಿಭಟನೆಯ ಮುಂದುವರೆದ ಭಾಗವಾಗಿರುವ ಈ ಆಯವ್ಯಯ ಮಾಡಲಾಗಿದೆ. ವಾಸ್ತವಿಕ ಅಂಕಿ ಸಂಖ್ಯೆ ನೀಡದೇ ಕಾಲ್ಪನಿಕ ಅಂಕಿ ಸಂಖ್ಯೆ ನೀಡಿದ್ದು, ಈ ಬಜೆಟ್ ರಾಜ್ಯದ ಜನರಿಗೆ ಮಾಡಿರುವ ಮೋಸದಂತಿದೆ. ಜಲಸಂಪನ್ಮೂಲ ಖಾತೆಗೆ ಯಾವುದೇ ಅನುದಾನ ನೀಡದೇ, ಡಿ.ಕೆ. ಶಿವಕುಮಾರ್ ಅವರಿಗೂ ಮೋಸ ಮಾಡಲಾಗಿದೆ. ಅವರು ಮೇಕೆ ದಾಟು ಪಾದಯಾತ್ರೆ ಮಾಡಿದ್ದೇ ಸಾಧನೆಯಾಗಿದೆ. ಅದರಂತೆ ಕೃಷ್ಣಾ ಕೊಳ್ಳ, ಮಹದಾಯಿ, ನವಿಲೆ ಯೋಜನೆಗೆ ಅನುದಾನ ನಿಗದಿಪಡಿಸಿಲ್ಲ. ಬೆಂಗಳೂರು ಅಭಿವೃದ್ಧಿಗೆ ಯಾವುದೇ ಅನುದಾನ ನಿಗದಿಯಿಲ್ಲ. ಏಳನೇ ವೇತನ ಆಯೋಗದ…

Read More