Author: AIN Author

ರಾಯಚೂರು:- ಶಾಸಕಿ ಕರೆಮ್ಮಾ ನಾಯಕ್ ಪುತ್ರ ಮತ್ತು ಶಾಸಕಿ PA ರಿಂದ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಘಟನೆ ನಡೆದು ಆರು ದಿನವಾದ್ರೂ ಎಂಎಲ್​ಎ ಪುತ್ರನ ಬಂಧನವಿಲ್ಲ. ಅಕ್ರಮ ಮರಳುಗಾರಿಕೆ ಟ್ರಾಕ್ಟರ್ ವಶಕ್ಕೆ ಪಡೆದ ವಿಚಾರವಾಗಿ ಶಾಸಕಿ ಪುತ್ರ ಹಲ್ಲೆ ನಡೆಸಿರುವುದಾಗಿ ಕಾನ್ಸ್​ ಟೇಬಲ್ ಹನಮಂತರಾಯ ಆರೋಪಿಸಿದ್ದರು. ಶಾಸಕಿ ಪುತ್ರನ ದರ್ಪದ ವಿರುದ್ಧ ಫೆ 16 ಕಾಂಗ್ರೆಸ್ ಮಹಿಳಾ ಘಟಕ ಕೆರಳಿತ್ತು. ನಿನ್ನೆ ಕನ್ನಡ ಪರ ಸಂಘಟನೆಗಳು ಈ ಘಟನೆಯನ್ನ ಖಂಡಿಸಿದ್ದವು. ಪೊಲೀಸ್ ಕಾನ್ಸ್​ಟೇಬಲ್ ಮೇಲೆ ಹಲ್ಲೆ ನಡೆದು ಆರು ದಿನವಾದ್ರೂ ಈವರೆಗೆ ಶಾಸಕಿ ಪುತ್ರನ ಬಂಧನವಾಗದೇ ಇರೋದಕ್ಕೆ ರಾಜಕೀಯ ಒತ್ತಡ ಎ ಹೇಳಲಾಗುತ್ತಿದೆ. ಶಾಸಕಿ ಪುತ್ರನ ಬಂಧನವಾಗದೇ ಇರುವುದು ಸಾರ್ವಜನಿಕರ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ದೇವದುರ್ಗ ಲಾ ಆಂಡ್ ಆರ್ಡರ್ ಠಾಣೆ ಹಾಗೂ ಟ್ರಾಫಿಕ್ ಠಾಣೆ ಸಿಬ್ಬಂದಿ ಭದ್ರತೆ ಜೊತೆ ಇತರೆ ವಿಷಯಗಳನ್ನ ಪ್ರಸ್ತಾಪಿಸಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ.…

Read More

ಮನೆಯಲ್ಲೇ ಇರುವ ಕೆಲವು ತರಕಾರಿಗಳನ್ನು ಬಳಸಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಬಹುದು. ಹಸಿಶುಂಠಿ ಹಾಗೂ ನಿಂಬೆ ಬೆರೆಸಿ ತಯಾರಿಸಿದ ಚಹಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಕ್ರಮೇಣ ದೇಹ ತೂಕ ಇಳಿಕೆಗೂ ಕಾರಣವಾಗುತ್ತದೆ. ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಒಂದಿಂಚು ಗಾತ್ರದ ಶುಂಠಿಯನ್ನು ಜಜ್ಜಿ ಇಲ್ಲವೇ ತುರಿದು ಸೇರಿಸಿ. ಬಳಿಕ ಸೋಸಿ ನಿಂಬೆರಸ ಬೆರೆಸಿ. ಸಿಹಿ ಬೇಕಿದ್ದರೆ ಜೇನುತುಪ್ಪ ಬೆರೆಸಿ ಕುಡಿಯಬಹುದು. ಬೆಳಿಗ್ಗೆ ಎದ್ದ ತಕ್ಷಣ ಅರ್ಧ ಇಂಚು ಗಾತ್ರದ ಶುಂಠಿ ತುಂಡನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿಯಿರಿ. ಇದರಿಂದಲೂ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಲಿದೆ. ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಪೇಸ್ಟ್ ಮಾಡಿ ಒಂದು ಕಪ್ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಬಿಸಿ ಇರುವಂತೆಯೇ ಕುಡಿಯುವುದರಿಂದಲೂ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದು ರಕ್ತನಾಳಗಳನ್ನು ತೆರೆಯಲು ನೆರವಾಗುತ್ತವೆ.

Read More

ಕಳೆದ ವಾರದಂತೆ ಈ ವಾರವೂ ಬೆಲೆಗಳಲ್ಲಿ ವ್ಯತ್ಯಯವಾಗಿದೆ. ಚಿನ್ನದ ಬೆಲೆ ವಾರಾಂತ್ಯದಲ್ಲಿ ಗ್ರಾಮ್​ಗೆ 20 ರೂನಷ್ಟು ಏರಿಕೆಯಾಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ ಒಂದು ರುಪಾಯಿಯಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಚಿನ್ನದ ಬೆಲೆ ಏರಿಕೆ ಆಗಿದೆ. ಬ್ರಿಟನ್ ಆರ್ಥಿಕ ಹಿಂಜರಿತ, ಜಪಾನ್ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಚಿನ್ನದ ಮೇಲೆ ಹೂಡಿಕೆ ಹೆಚ್ಚುತ್ತಿರುವಂತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,560 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,090 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 18ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,100 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,290…

Read More

ಮಂಗಳೂರು:- ನನ್ನ ಜೀವನದಲ್ಲಿ ಮೋದಿಯಂತಹ ಸುಳ್ಳು ಪ್ರಧಾನಿ ನೋಡಿಲ್ಲ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೋದಿ ಕೊಟ್ಟ ಮಾತಿನಂತೆ ಎಂದೂ ನಡೆಯಲಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ. ಮೋದಿ ನಮ್ಮ ಗ್ಯಾರಂಟಿ ಪದವನ್ನು ಕದ್ದು ಬಿಟ್ಟಿದ್ದಾರೆ. ಈಗ ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ ಎಂದರು. ಮಂಗಳೂರು ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮೊದಲೇ ಪ್ಲ್ಯಾನ್ ಮಾಡಿ ಪ್ಲೆಕಾರ್ಡ್‍ಗಳನ್ನು ಹಿಡಿದು ಸಿದ್ಧವಾಗಿದ್ದರು. ಬಜೆಟ್‍ನ್ನು ಧಿಕ್ಕರಿಸಿ ಹೋಗಲು ನಿರ್ಧರಿಸಿದ್ದರು. ಯಾಕೆಂದರೆ ಅವರಿಗೆ ಸತ್ಯ ಹೇಳಿದರೆ ಮೈ ಎಲ್ಲಾ ಉರಿಯುತ್ತದೆ ಎಂದಿದ್ದಾರೆ. ಲೋಕಸಭಾ ಚುನಾವಣೆಗಿಂತ ಮುಂಚಿತವಾಗಿ ಇದು ಮೊದಲ ಸಭೆಯಾಗಿದ್ದು, ಮಂಗಳೂರಿನಿಂದಲೇ ಆರಂಭ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದರು. ಈ ಬಾರಿ ಮಂಗಳೂರು ಹಾಗೂ ಉಡುಪಿ ಲೋಕಸಭಾ ಸ್ಥಾನ ಗೆಲ್ಲಲೇ ಬೇಕು. ಮಂಗಳೂರಿನ ಜನರಿಗೆ ದೇಶದ ರಾಜ್ಯದ ರಾಜಕಾರಣ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಕೈ ಮುಗಿದು ಕೇಳುತ್ತೇವೆ ಬಿಜೆಪಿಯನ್ನು…

Read More

ಶಿವಮೊಗ್ಗ:- ನಗರದ ಶಂಕರ ಮಠದ ರಸ್ತೆಯ ರಾಹುಲ್ ಹುಂಡೈ ಕಾರ್ ಶೋ ರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನೋಡು ನೋಡುತ್ತಿದ್ದಂತೆ ಶೋಂ ನಲ್ಲಿ ಗ್ರಾಹಕರಗೆ ನೋಡಲು ಇಟ್ಟಿದ್ದ ಒಳಗೆ ಎರಡು ಕಾರ್​ಗಳು ಬೆಂಕಿಗೆ ಆಹುತಿಯಾಗಿವೆ. ಇನ್ನೂ ಪಕ್ಕದಲ್ಲಿ ಟಾಟಾ ಕಾರ್ ಶೋ ರೂಂ ಇದೆ. ಹುಂಡೈ ಶೋರೂಂ ಹತ್ತಿದ ಬೆಂಕಿಯು ಪಕ್ಕದ ಟಾಟಾ ಶೋ ಆವರಣದಲ್ಲಿ ನಿಲ್ಲಿಸಿದ್ದ ಸುಮಾರು ನಾಲ್ಕು ಕಾರ್ ಗಳು ಸುಟ್ಟು ಹೋಗಿವೆ. ಶೋ ರೂಂ ನಲ್ಲಿದ್ದ ಕಾರ್​ಗೆ ಸಂಬಂಧಿಸಿದ ಬಿಡಿ ಭಾಗ ಮತ್ತು ಇತರೆ ವಸ್ತುಗಳು ಸೇರಿದಂತೆ ಒಟ್ಟು ಎರಡು ಕೋಟಿಗೂ ಅಧಿಕ ನಷ್ಟವಾಗಿದೆ. ಸುಮಾರು ಮೂರು ಘಂಟೆಗೂ ಅಧಿಕಕಾಲ ಆಗ್ನಿಶಾಮಕ ಸಿಬ್ಬಂದಿ ಮತ್ತು ಅಧಿಕಾರಿಗಳು ಮೂರು ನಾಲ್ಕು ಅಗ್ನಿಶಾಮಕ ನಿರಂತರವಾಗಿ ಬಳಕೆ ಮಾಡಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಹುಂಡೈ ಶೋರೂಂ ನಲ್ಲಿದ್ದ ಕಾರ್ ಮತ್ತು ಬಿಡಿ ಭಾಗಗಳು ಸುಟ್ಟು ಭಸ್ಮವಾಗಿವೆ. ಅಕ್ಕಪಕ್ಕದಲ್ಲಿ ಬಡಾವಣೆ ಮತ್ತು ಪೆಟ್ರೋಲ್ ಬಂಕ್ ಇದ್ದ ಹಿನ್ನಲೆಯಲ್ಲಿ ಸಾವಿರಾರು ಜನರು ಆತಂಕಗೊಂಡು…

Read More

ತುಮಕೂರು:- ನಿಂತಿದ್ದ ಟ್ರ್ಯಾಕ್ಟ​ರ್​ಗೆ ಟವೆರಾ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ-ಮಧುಗಿರಿ ರಸ್ತೆಯ ಉಲ್ಲಾಸ್ ತೋಪು ಬಳಿ ಜರುಗಿದೆ. ಟವೇರಾ ಕಾರಿನಲ್ಲಿದ್ದ ರೇಖಾ ಹಾಗೂ ಚಾಲಕ ಮನು ಎಂಬುವವರು ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಕಮಲಮ್ಮ, ಸಾಗರ ಮತ್ತು ಸರಸ್ವತಮ್ಮ ಸೇರಿ ನಾಲ್ವರಿಗೆ ಗಾಯವಾಗಿದ್ದು, ಶಿರಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಿಮೆಂಟ್ ಇಟ್ಟಿಗೆ ತುಂಬಿ‌ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟ​ರ್​ಗೆ ಕಾರು ಡಿಕ್ಕಿಯಾಗಿದೆ. ಮೃತರು, ಗಾಯಾಳುಗಳು ಶಿರಾ ತಾಲ್ಲೂಕಿನ ಯಲಿಯೂರು, ಹೆಗ್ಗನಹಳ್ಳಿ ಮೂಲದವರಾಗಿದ್ದು, ಕುನಳ್ಳಿಯ ಶನಿಮಹಾತ್ಮ ದೇವಾಲಯದಲ್ಲಿ ಪೂಜೆ‌ಮುಗಿಸಿ ವಾಪಸ್ಸಾಗ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪತಿ ಭಾನುಪ್ರಕಾಶ್ ಶಬರಿಮಲೆಗೆ ತೆರಳಿದ ಬಳಿಕ ಶನಿಮಹಾತ್ಮ ದೇವಾಲಯಕ್ಕೆ ತೆರಳಿದ್ದರು. ಈ ಕುರಿತು ಶಿರಾ ಪೊಲೀಸ್ ಟಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ದಾವಣಗೆರೆ:- ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ‌BJP ಯುವ ಘಟಕದಿಂದ ಡಿಕೆ ಸುರೇಶ್ ವಿರುದ್ಧ ದೂರು ನೀಡಲಾಗಿದೆ. ಪಾಲಿಕೆ ಸದಸ್ಯ ಶಿವಪ್ರಕಾಶ್ ನೇತೃತ್ವದಲ್ಲಿ ನಗರ ಡಿವೈಎಸ್​ ಮಲ್ಲೇಶ್ ದೊಡ್ಡಮನಿ ಮೂಲಕ ಎಸ್​ಪಿಗೆ ದೂರು ನೀಡಲಾಗಿದೆ. ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕಾನೂನು ಕ್ರಮ‌ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಇನ್ನೂ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಸುರೇಶ್‌, ತಮ್ಮ ಹೇಳಿಕೆಗೆ ಬದ್ಧರಾಗಿರುವ ಡಿ.ಕೆ.ಸುರೇಶ್ ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳೋ ಪ್ರಶ್ನೆಯೇ ಇಲ್ಲ ಅಂತ ಖಡಕ್ ಆಗಿಯೇ ಹೇಳಿದ್ದಾರೆ. ನನ್ನ ಹೇಳಿಕೆಯನ್ನು ಪ್ರತಿ ಹಂತದಲ್ಲೂ ಬಿಜೆಪಿಯವರು ನನ್ನ ಮಾತನ್ನು ತಿರುಚುತ್ತಿದ್ದಾರೆ. ಅನಿವಾರ್ಯ ಎಂಬುದನ್ನು ದೇಶ ವಿಭಜನೆ ಅಂದರೆ ಏನೂ ಮಾಡುವುದಕ್ಕೆ ಆಗಲ್ಲ ಅಂತ ಟಕ್ಕರ್ ಕೊಟ್ಟಿದ್ದಾರೆ

Read More

ಬೆಂಗಳೂರು:- ಸಿಐಡಿ ಅಧಿಕಾರಿಗಳು ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಮೂವರನ್ನು ಅರೆಸ್ಟ್ ಮಾಡಿದೆ. ಚಂದ್ರಕಾಂತ್, ಬಸವರಾಜ್, ಶಶಿಧರ್ ಬಂಧಿತರು. ಈ ಮೂವರು ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳಿಕೊಟ್ಟಿದ್ದರು ಎಂದು ತಿಳಿದುಬಂದಿದೆ. ಇನ್ನು ಈ ಪಿಎಸ್​ಐ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಸಿದಂತೆ ಕಲಬುರಗಿಯ ಅಶೋಕ್ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ರಾಜ್ಯದಲ್ಲಿ ನಡೆದ 545 ಪಿಎಸ್​ಐ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣ ಸಂಬಂಧ ತನಿಖೆಗೆ ಸರ್ಕಾರವು ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅದರಂತೆ ತನಿಖೆ ನಡೆಸಿರುವ ಸಮಿತಿಯು ಜ.22 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನಿಖಾ ವರದಿಯನ್ನು ನೀಡಿದೆ. 545 ಪಿಎಸ್​ಐ ಹುದ್ದೆಗಳ ಭರ್ತಿಗಾಗಿ ಕಳೆದ ವರ್ಷದ ಅಕ್ಟೋಬರ್ 3 ರಂದು ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿನ 93 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹುದ್ದೆಗಳನ್ನು ಅಕ್ರಮವಾಗಿ ಗಿಟ್ಟಿಸಿಕೊಳ್ಳಲು ಹಣ ನೀಡಿದ್ದಾರೆ…

Read More

ಸೂರ್ಯೋದಯ: 06:45, ಸೂರ್ಯಾಸ್ತ : 06:14 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾಘಮಾಸ, ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ನವಮಿ, ನಕ್ಷತ್ರ: ರೋಹಿಣಿ, ರಾಹು ಕಾಲ: 04:30 ನಿಂದ 06:00 ತನಕ ಯಮಗಂಡ: 12:00 ನಿಂದ 01:30 ತನಕ ಗುಳಿಕ ಕಾಲ: 03:00 ನಿಂದ 04:30 ತನಕ ಅಮೃತಕಾಲ: రా.1:19 ನಿಂದ రా.3:00 ತನಕ ಅಭಿಜಿತ್ ಮುಹುರ್ತ: ಮ.12:07 ನಿಂದ ಮ.12:53 ತನಕ ಮೇಷ ರಾಶಿ: ಸಂಗಾತಿಯ ಪ್ರೇಮದ ಶಕ್ತಿಯಿಂದನಿಮ್ಮ ಕೆಲಸವನ್ನು ನೀವು ಪೂರ್ಣ ಉತ್ಸಾಹದಿಂದ ಮಾಡುತ್ತೀರಿ. ಸಂಗಾತಿಯ ಮಾರ್ಗದರ್ಶನದಲ್ಲಿ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಸಮಯವು ಅನುಕೂಲಕರವಾಗಿರುತ್ತದೆ. ಸಂಗಾತಿಯ ಸರಸ-ಸಲ್ಲಾಪ ಗಳಿಂದ ನಿಮಗೆ ಸಂತೋಷವಾಗುತ್ತದೆ. ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುವ ಮೂಲಕ, ನೀವು ಉತ್ತಮ ಮಾರ್ಗವನ್ನು ತಲುಪುತ್ತೀರಿ. ಮಾಜಿ ಸಂಗಾತಿಯ ವೈವಾಹಿಕ ಜೀವನವು ಸಂತೋಷವಾಗಿರುವುದನ್ನು ನೋಡಿ ತಾವು ಕೂಡ ಖುಷಿ ಪಡೆಯುವಿರಿ. ಮನೆಯ ದಾಯಾದಿಗಳ ಜೊತೆ ಮನಸ್ತಾಪ. ಕೆಲವೊಮ್ಮೆ ಜೀವನ ಸಂಗಾತಿಯ ಕೋಪವು ನಿಮಗೆ ತೊಂದರೆ…

Read More

ಮಂಗಳೂರು:- ಗ್ಯಾರಂಟಿ ಯೋಜನೆ ಜನರಿಗೆ ಶಕ್ತಿ ನೀಡಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜನರು ನಮಗೆ ಅಧಿಕಾರ ಕೊಟ್ಟ ನಂತರ ನಾವು ನುಡಿದಂತೆ ನಡೆದಿದ್ದೇವೆ. ಕೊಟ್ಟ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಆ ಮೂಲಕ ಜನತೆಗೆ ಶಕ್ತಿ ನೀಡಿದ್ದೇವೆ ಎಂದರು. ದೇಶದಲ್ಲಿ ಯಾವುದೇ ಸರ್ಕಾರ ಈ ರೀತಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿಂದೆ ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಕಪ್ಪು ಹಣ ತಂದು 15 ಲಕ್ಷ ನೀಡುವುದಾಗಿ ಹೇಳಿದ್ದರು. ಎಲ್ಲಾ ರೈತರ ಆದಾಯ ಡಬಲ್ ಮಾಡುತ್ತೇವೆ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಅವರು ಹೇಳಿದ್ದನ್ನು ಮಾಡಲಿಲ್ಲ. ಆದರೆ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಹೇಳಿದರು. ಮಂಗಳೂರು ಐತಿಹಾಸಿಕ ಭೂಮಿ. ಕೋಟಿ ಚೆನ್ನಯನವರಿಂದ, ವೀರ ಅಬ್ಬಕ್ಕ ದೇವಿ, ನಾರಾಯಣ ಗುರುಗಳ ಭೂಮಿ ಇದು. ಈ ಭೂಮಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಇತಿಹಾಸವಿದೆ. ಆಸ್ಕರ್ ಫರ್ನಾಂಡೀಸ್ ಹಾಗೂ…

Read More