Author: AIN Author

ಬೆಂಗಳೂರು:- ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ತನ್ನ ತಂಗಿಯ ಎಂಗೇಜ್ಮೆಂಟ್​ಗೆ ಬರ್ಲಿಲ್ಲ ಎಂದು ಜಗಳವಾಡುತ್ತಿದ್ದಾಗ ಜಗಳ ವಿಕೋಪಕ್ಕೆ ತಿರುಗಿ ಪತಿ ತನ್ನ ಪತ್ನಿಗೆ ಚಾಕು ಇರಿದ ಘಟನೆ ಜರುಗಿದೆ. ಜಯಪ್ರಕಾಶ್ ತನ್ನ ಪತ್ನಿ‌ ದಿವ್ಯಶ್ರೀ ಗೆ ಚಾಕು ಇರಿದಿದ್ದಾರೆ. ಫೆಬ್ರವರಿ 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕೊಲೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿ ಜಯಪ್ರಕಾಶ್ ಬಂಧಿಸಿ ಜೈಲಿಗಟ್ಟಲಾಗಿದೆ. ಜಯಪ್ರಕಾಶ್ ಹಾಗೂ ದಿವ್ಯಶ್ರೀ ಇಬ್ಬರೂ ಪರಸ್ಪರ ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಪೋಷಕರ ವಿರೋಧ ಹಿನ್ನಲೆ ಬೆಂಗಳೂರಲ್ಲಿ ವಾಸವಾಗಿದ್ದರು. ಗಂಡನಿಗೆ ಅನಾರೋಗ್ಯ ಹಿನ್ನಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ತಿದ್ಳು. ಮೊದಲು ಮೂಡಲಪಾಳ್ಯದಲ್ಲಿ ಮನೆ ಮಾಡಿಕೊಂಡು ವಾಸವಿದ್ದ ದಂಪತಿ, ನಂತರ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಇವರಿಬ್ಬರೂ ಮನೆಯ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರೂ ಇವರ ನಡುವೆ ಗಲಾಟೆ, ಜಗಳ ಸಾಮಾನ್ಯವಾಗಿತ್ತು. ಮದುವೆ ಆದಾಗಿನಿಂದಲೂ ಜಯಪ್ರಕಾಶ್​ಗೆ ತನ್ನ ಪತ್ನಿ ಮೇಲೆ ಅನುಮಾನವಿತ್ತು. ನಿನಗೆ ಅಕ್ರಮ ಸಂಬಂಧ ಇದೆ…

Read More

ಬೆಂಗಳೂರು:- ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಜೈಲಿನಿಂದ ಮಹಿಳೆಯ ಬೆತ್ತಲೆ ಫೋಟೋ ಕಳುಹಿಸಿದ್ದ ರೌಡಿಶೀಟರ್ ಹಾಗೂ ಸಹಚರರನನ್ನು ಅರೆಸ್ಟ್ ಮಾಡಿದ್ದಾರೆ. ಮನೋಜ್ ಅಲಿಯಾಸ್​ ಕೆಂಚ, ಸುಭಾಷ್ ಹಾಗೂ ಯೋಗೆಶ್ ಎಂಬುವವರನ್ನು ಬಂಧಿಸಲಾಗಿದೆ. ರೌಡಿಶೀಟರ್​​​ ಮನೋಜ್ ಕಳೆದ ವರ್ಷ ಅಗಸ್ಟ್​​ನಲ್ಲಿ ಯುವತಿಯ ತಾಯಿಗೆ ಕರೆ ಮಾಡಿ, ನಿನ್ನ ಮಗಳ ಬೆತ್ತಲೆ ಫೋಟೋವನ್ನು ನಿನ್ನ ಅಳಿಯನಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಬೆದರಿದ ಯುವತಿಯ ತಾಯಿ, ರೌಡಿಶೀಟರ್​​​ ಮನೋಜ್​​ಗೆ 40 ಸಾವಿರ ಹಣ ನೀಡಿದ್ದರು. ನಂತರ ಫೆಬ್ರವರಿ 9 ರಂದು ಮನೋಜ್​ ಸಹಚರ ಕಾರ್ತಿಕ್ ಎಂಬಾತ​ ಯುವತಿಯ ತಾಯಿಗೆ ವಾಟ್ಸಪ್ ಮೂಲಕ ಕರೆ ಮಾಡಿ, ನಾನು (ಕಾರ್ತಿಕ್​) ಮನೋಜ್​ ಕಡೆಯ ಹುಡುಗ. ನೀವು 5 ಲಕ್ಷ ರೂ. ಕೊಡದಿದ್ದರೆ ನಿಮ್ಮಗಳ ಮಗಳ ನಗ್ನ ಫೋಟೋವನ್ನು ನಿನ್ನ ಅಳಿಯನಿಗೆ ಕಳಸುತ್ತೇನೆ ಎಂದು ಬ್ಲ್ಯಾಕ್​ಮೇಲ್​ ಮಾಡಿದ್ದಾನೆ. ಇದಾದ ನಂತರ ಫೆಬ್ರವರಿ 12 ರಂದು ಮನೋಜ್​​ ಜೈಲಿನಿಂದಲೇ ಯುವತಿಯ ತಾಯಿ ವಾಟ್ಸಾಪ್ ಹಾಗೂ ಮೆಸೆಂಜರ್ ಮೂಲಕ ಕರೆ…

Read More

ಬೆಂಗಳೂರು:- ಸಿಎಂ ಸಿದ್ದರಾಮಯ್ಯನವರು ಫೆ. 16ರಂದು ಮಂಡಿಸಿದ ಬಜೆಟ್ ಬಗ್ಗೆ ಪೌರ ಕಾರ್ಮಿಕರು ಅಸಮಾಧಾನ ಹೊರ ಹಾಕಿದ್ದಾರೆ. ಪೌರ ಕಾರ್ಮಿಕರನ್ನ ಖಾಯಂ ಮಾಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಆದರೆ ಪೌರ ಕಾರ್ಮಿಕರನ್ನ ಯಾವ ರೀತಿ ಖಾಯಂ ಮಾಡ್ತಾರೆ. ಎಷ್ಟು ಮಂದಿಯನ್ನ ಖಾಯಂ ಆಗಿ ಮಾಡ್ತಾರೆ. ಈ ಹಿಂದೆ ಸರ್ಕಾರ ಆದೇಶ ಮಾಡಿದೆ ಹೇಳ್ತಿದ್ದಾರೆ ಹಾಗಾದರೆ ಯಾವ ಸರ್ಕಾರ ಖಾಯಂ ಮಾಡುವುದಾಗಿ ಹೇಳಿದೆ. ಬಿಜೆಪಿ ಸರ್ಕಾರನ,ಕಾಂಗ್ರೆಸ್ ಸರ್ಕಾರ‌ನ ನಮಗೆ ಗೊಂದಲ ಇದೆ. ಪೌರ ಕಾರ್ಮಿಕರ ಸಮಸ್ಯೆಯನ್ನ ಸರ್ಕಾರ ಸರಿಯಾಗಿ ಆಲಿಸಬೇಕು ಎಂಬ ಕೂಗು ಕೇಳಿ ಬಂದಿದೆ.

Read More

ದೀಕ್ಷಿತ್ ಶೆಟ್ಟಿ ಅಭಿನಯದ ಕೆಟಿಎಂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳ ಪ್ರೀತಿಗೆ ದೀಕ್ಷಿತ್ ಶೆಟ್ಟಿ ಭಾವುಕರಾದರು. ಕೆಟಿಎಂ ಹೌಸ್ ಫುಲ್ ಪ್ರದರ್ಶನ ಹಿನ್ನೆಲೆ ಪ್ರೇಕ್ಷಕಪ್ರಭುವಿಗೆ ದೀಕ್ಷಿತ್ ಧನ್ಯವಾದ ತಿಳಿಸಿದ್ದಾರೆ. ಕೆಟಿಎಂ ಸಿನಿಮಾಗೆ ಎಲ್ಲೆಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕೈ ಮುಗಿದು ಪ್ರೇಕ್ಷಕರಿಗೆ ದೀಕ್ಷಿತ್ ಹಾಗೂ ಚಿತ್ರತಂಡ ಥ್ಯಾಂಕ್ಸ್ ಹೇಳಿದ್ದಾರೆ. ಇಷ್ಟವಾದರೂ ಹಾಗೂ ಇಷ್ಟವಾಗದೇ ಇದ್ರೂ ರಿವ್ಯೂ ಬರೆಯಿರಿ. ನನ್ನದೂ ಇದು ಮೂರು ವರ್ಷದ ಕನಸು. ನಿಮ್ಮ ಪ್ರಾಮಾಣಿಕ ರಿವ್ಯೂ ಬರೆಯಿರಿ. ನಾನು ದಿಯಾ ಹಾಗೂ ದಸರಾದಂತಹ ಸಿನಿಮಾ ಮಾಡಿದರೂ ಫಸ್ಟ್ ಡೇ ಶೋಗಾಗಿ, ಟೈಮ್ ಗಾಗಿ ಹೋರಾಡಬೇಕು. ನಿಮ್ಮ ಸಪೋರ್ಟ್ ನಮಗೆ ಬೇಕು. ಹಾಲಲ್ಲಿಯಾದರೂ ಹಾಕಿ, ನೀರಲ್ಲಿಯಾದರೂ ಹಾಕಿ ಸೈಡ್ ಗೆ ಹಾಕಬೇಡಿ ಎಂದು ದೀಕ್ಷಿತ್ ಮನವಿ ಮಾಡಿದ್ದಾರೆ.

Read More

ಬಳ್ಳಾರಿ: AIN ವರದಿ ಹಿನ್ನೆಲೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರೂರಿನ ಅಂಬೇಡ್ಕರ್ ವಸತಿ ಶಾಲೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಳೆದ ತಿಂಗಳು ಈ ಶಾಲೆಯ ದುಸ್ಥಿತಿಯ ಬಗ್ಗೆ AIN ಸವಿಸ್ತಾರವಾಗಿ ವರದಿ ಮಾಡಿತ್ತು. ಹಲವು ವರ್ಷಗಳಿಂದ ಎಪಿಎಂಸಿ ಗೋದಾಮಿನಲ್ಲಿ ಈ ಶಾಲೆ ಇದ್ದು, ವರದಿಗೆ ಎಚ್ಚೆತ್ತು ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ವಸತಿ ಶಾಲೆಯ ಅವ್ಯವಸ್ಥೆ ಕಂಡು ಆಯೋಗದ ಸದಸ್ಯರು ಬೇಸರ ಹೊರ ಹಾಕಿದ್ದಾರೆ. ಕನಿಷ್ಠ ಮೂಲಭೂತ ಸೌಲಭ್ಯಗಳ ಕುರಿತು ಮಕ್ಕಳಿಂದಲೇ ಮಾಹಿತಿ ಪಡೆದ ಶಶಿಧರ್ ಕೊಸಂಬೆ, ಶೌಚಾಲಯ, ಕುಡಿಯುವ ನೀರು, ಆಹಾರದ ಗುಣಮಟ್ಟ ಪರಿಶೀಲನೆ ಮಾಡಿದ್ದಾರೆ. ಎಪಿಎಂಸಿ ಧೂಳಿನಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಮಕ್ಕಳು ಕಂಪ್ಲೆಂಟ್ ಮಾಡಿದ್ದು, ಮಕ್ಕಳ ಮೇಲೆ ಆರೋಗ್ಯ ಸಮಸ್ಯೆಯಿದ್ರೂ ಕ್ರಮ ಕೈಗೊಳ್ಳದ ವಾರ್ಡನ್ ವಿರುದ್ಧ ಕೊಸಂಬೆ ಅಸಮಾಧಾನ ಹೊರ ಹಾಕಿದ್ದಾರೆ. ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಾಜ…

Read More

ಕಲಬುರ್ಗಿ:- ಕೃಷಿ ಪರಿಕರಗಳನ್ನ ಕಾಳಸಂತೆಯಲ್ಲಿ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅಮಾನತು ಮಾಡಲಾಗಿದೆ. ಟ್ಯ್ಯಾಕ್ಟರ್‌ನಲ್ಲಿ 100 ಎರೆಹುಳು ಗೊಬ್ಬರದ ಚೀಲಗಳು, 30 ಪಿವಿಸಿ ಪೈಪ್‌ಗಳನ್ನ ಅಕ್ರಮವಾಗಿ ಫೆ. 5 ರಂದು ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಗ್ರಾಮದ ಜನರೆಲ್ಲ ಸೇರಿ ಟ್ಯ್ಯಾಕ್ಟರ್​ನ್ನು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಅಕ್ರಮವೆಸಗಿದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

Read More

ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಟರ್​ನ್ಯಾಷನಲ್ ಲೀಗ್ ಟಿ20 ಕ್ರಿಕೆಟ್​ ನಡೆದಿದ್ದು, ದುಬೈ ಕ್ಯಾಪಿಟಲ್ಸ್ ತಂಡವನ್ನು 45 ರನ್​ಗಳಿಂದ ಮಣಿಸಿ ಎಂಐ ಎಮಿರೇಟ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮತ್ತೊಂದು ತಂಡ ಮತ್ತೊಂದು ಕಿರೀಟವನ್ನು ಮುಡಿಗೇರಿಸಿಕೊಂಡಂತಾಗಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ತಂಡಗಳು ಐಪಿಎಲ್​, ಸಿಎಲ್​ಟಿ20, ಡಬ್ಲ್ಯೂಪಿಎಲ್, ಎಂಎಲ್​ಸಿ ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಇಂಟರ್​ನ್ಯಾಷನಲ್ ಲೀಗ್ ಟಿ20 ಯಲ್ಲೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಎಂಐ ಎಮಿರೇಟ್ಸ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ… ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡಕ್ಕೆ 7 ಲಕ್ಷ ಡಾಲರ್ ಬಹುಮಾನ ಮೊತ್ತ ನೀಡಲಾಗುತ್ತದೆ. ಅಂದರಂತೆ ಇದೀಗ ಎಂಐ ಎಮಿರೇಟ್ಸ್ ತಂಡವು ಭಾರತೀಯ ಮೌಲ್ಯ 5,80,91,950 ರೂ. ಬಹುಮಾನ ಮೊತ್ತವಾಗಿ ಪಡೆದುಕೊಂಡಿದೆ. ಇನ್ನು ಈ ಟೂರ್ನಿಯಲ್ಲಿ ರನ್ನರ್ ಅಪ್ ಆಗುವ…

Read More

ಮಂಡ್ಯ:- ಯಾವುದೇ ಕಾರಣಕ್ಕೂ ನಾನು ಈ ಮಣ್ಣನ್ನ ಬಿಡೋದಿಲ್ಲ ಎಂದು ಹೇಳುವ ಮೂಲಕ ಮಂಡ್ಯ ಲೋಕಸಭಾ ಸ್ಪರ್ಧೆ ಬಗ್ಗೆ ಸುಮಲತಾ ಸುಳಿವು ಕೊಟ್ಟಿದ್ದಾರೆ. 2019ರ ಚುನಾವಣೆ ನೆನೆದು ಸುಮಲತಾ ಅವರು ಭಾವುಕರಾದರು. ಕಾರ್ಯಕ್ರಮದಲ್ಲಿ ಮಾತನಾಡುತ್ತ, ಆ ಸಂದರ್ಭದಲ್ಲಿ ದರ್ಶನ್, ಯಶ್ ನನಗೆ ಧೈರ್ಯ ತುಂಬಿದ್ರು. ಕಳೆದ 5 ವರ್ಷ ಮಂಡ್ಯ ಜನರ ಪ್ರೀತಿಗಳಿಸಿದ್ದೇನೆ. ಮಂಡ್ಯದ ಮಣ್ಣಿನ ತಿಲಕವಿಟ್ಟು ಅಂಬರೀಶ್​ಗೆ ಬೀಳ್ಕೊಟ್ಟೆವು. ಯಾವುದೇ ಕಾರಣಕ್ಕೂ ನಾನು ಕೂಡ ಈ ಮಣ್ಣನ್ನ ಬಿಡೋದಿಲ್ಲ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ. ಈ ಚುನಾವಣೆಯಲ್ಲಿಯೂ ದರ್ಶನ್ ತನ್ನ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕವೇ ಸುಳಿವು ಕೊಟ್ಟಿದ್ದಾರೆ. ಚುನಾವಣೆ ಹತ್ತಿರವಾಗ್ತಿದ್ದಂತೆ ಸುಮಲತಾ ಕುತೂಹಲ ಹೆಚ್ಚಿಸಿದ್ದಾರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಅವರ ಸ್ಪರ್ಧೆ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಪಕ್ಷದಿಂದಲೇ ಸುಮಲತಾ ಅವರು ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಒಂದು ಕಡೆ ಕೇಳಿ ಬರುತ್ತಿದ್ದು, ಕಾಂಗ್ರೆಸ್ ಕೂಡ ಸುಮಲತಾ…

Read More

ಬೆಂಗಳೂರು:- ಮೂರು ವರ್ಷದ ಬಳಿಕ ಬನಶಂಕರಿ ದೇವಸ್ಥಾನದಲ್ಲಿ ಅಂಜನೇಯ ದೇಗುಲ ನಿರ್ಮಾಣ ಅಸ್ತು ಎನ್ನಲಾಗಿದೆ. ಬನಶಂಕರಿ ದೇವಸ್ಥಾನದಲ್ಲಿ ಅಮ್ಮನವರ ದೇವಸ್ಥಾನ ಎಷ್ಟು ಪ್ರಸಿದ್ದಿ ಪಡೆದಿದಿಯೋ ಅಷ್ಟೇ ದೇವಸ್ಥಾನದಲ್ಲಿರುವ ಅಂಜನೇಯ ದೇವಸ್ಥಾನವು ಕೂಡ ಅಷ್ಟೇ ಪ್ರಸಿದ್ದಿ ಪಡೆದಿದೆ‌. ಸಧ್ಯ ಅಂಜನೇಯ ದೇವಸ್ಥಾನವನ್ನ ಅಭಿವೃದ್ಧಿ ಪಡಿಸುವ ಸಲುವಾಗಿ ಕಳೆದ 9 ತಿಂಗಳ ಹಿಂದೆ ಅಂಜನೇಯ ದೇವಸ್ಥಾನವನ್ನ ಡೆಮಾಲೀಷನ್ ಮಾಡಲಾಗಿತ್ತು. ಇದೀಗ ಹಲವು ತಿಂಗಳ ಬಳಿಕ ದೇವಸ್ಥಾನದ ಕೆಲಸ ಆರಂಭವಾಗಿದೆ. ಅಂಜನೇಯ ದೇವಸ್ಥಾನವನ್ನ ಕಳೆದ 8 ತಿಂಗಳ ಹಿಂದೆ ಡೆಮಾಲಿಶ್ ಮಾಡಲಾಗಿತ್ತು. ಆದಾದ ಬಳಿಕ ದೇವಸ್ಥಾನ ನಿರ್ಮಾಣಕ್ಕೆ ಮುಜುರಾಯಿ ಇಲಾಖೆಯಿಂದ ಹಣ ಸ್ಯಾಂಕ್ಷನ್​ ಆಗಿರ್ಲಿಲ್ಲ.‌ ಇದೀಗ ದೇವಸ್ಥಾನ ಕಾಮಗಾರಿ ಮುಜುರಾಯಿ ಇಲಾಖೆ ಪರ್ಮಿಷನ್ ನೀಡಿದ್ದು, ಒಟ್ಟು 9 ಕೋಟಿ 96 ಲಕ್ಷದಷ್ಟು ಹಣದಿಂದ ದೇವಸ್ಥಾನ ನಿರ್ಮಾಣದ ಕೆಲಸ ನಡೆಯುತ್ತಿದೆ. ಇನ್ನು ದೇವಸ್ಥಾನವು ದ್ರಾವಿಡ ಶೈಲಿಯಲ್ಲಿ ಮೂಡಿ ಬರುತ್ತಿದ್ದು, ವಿಶೇಷವಾಗಿ 38 ವಿಶೇಷ ಕಂಬಗಳನ್ನ ನಿರ್ಮಿಸಲಾಗುತ್ತಿದೆಯಂತೆ. ಈ ಅಂಜನೇಯ ಪ್ರತಿಮೆಯನ್ನ ಬದಲಿಸಿ ದೊಡ್ಡ ಮಟ್ಟದ ಪ್ರತಿಮೆಯನ್ನ ಕೆತ್ತಿಸಲು…

Read More

ಬೆಂಗಳೂರು:- 24 ಗಂಟೆ ವ್ಯಾಪಾರ ಅನುಮತಿಗೆ ಹೊಟೇಲ್ ಮಾಲೀಕರ ಸಂಘ ಆಗ್ರಹಿಸಿದೆ. ರಾತ್ರಿ 11 ಗಂಟೆ ದಾಟಿದ್ರೆ ಸಾಕು ಊಟ ಎಲ್ಲಿ ಸಿಗುತ್ತೆ ಅಂತಾ ಅಲುದಾಡ್ತಿದ್ದ ಶ್ರಮಿಕರು, ಕಾರ್ಮಿಕರು ಹಾಗೂ ರಾತ್ರಿ ಪಾಳಯದ ಕೆಲಸಗಾರರ ಜೊತೆಗೆ ಹೊಟೇಲ್ ಮಾಲೀಕರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಬಜೆಟ್ ನಲ್ಲಿ ವ್ಯಾಪಾರ, ವಾಣಿಜ್ಯ ಅಭಿವೃದ್ಧಿ ಉದ್ದೇಶದಿಂದ ತಡರಾತ್ರಿ 1 ಗಂಟೆ ತನಕ ಹೊಟೇಲ್ ಓಪನ್ ಗೆ ಅವಕಾಶ ನೀಡಿರೋದಕ್ಕೆ ಹೊಟೇಲ್ ಮಾಲೀಕರು, ಗ್ರಾಹಕರು ಖುಷ್ ಆಗಿದ್ದಾರೆ. ಆದರೆ ಈಗ 24 ಗಂಟೆ ವ್ಯಾಪಾರ ಅನುಮತಿಗೆ ಆಗ್ರಹ ಕೇಳಿ ಬಂದಿದೆ. ರಾಜ್ಯದಲ್ಲಿ ತಡರಾತ್ರಿ 1 ಗಂಟೆ ತನಕ ವ್ಯಾಪಾರ, ವಹಿವಾಟಿಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ವ್ಯಾಪಾರ, ವಾಣಿಜ್ಯ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡಿರೋ ಪ್ಲಾನ್ ಗೆ ಸಿಲಿಕಾನ್ ಸಿಟಿ ಮಂದಿ ಫುಲ್ ಖುಷ್ ಆಗಿದ್ದಾರೆ. ಮೊದಲೆಲ್ಲ ರಾತ್ರಿ 10 ,11 ಗಂಟೆಗೆ ಹೊಟೇಲ್ ಬಂದ್ ಆಗ್ತಿದ್ದರಿಂದ ಪರದಾಡ್ತಿದ್ದ ಜನರು, ಇದೀಗ 1 ಗಂಟೆ ತನಕ ಅವಕಾಶ…

Read More