Author: AIN Author

ಬೆಂಗಳೂರು: ಲೋಕಸಭಾ ಚುನಾವಣೆ ಇನ್ನೇನು ಹತ್ತಿರ ಬರುತ್ತಿದೆ.ಸ್ಯಾಂಡಲ್‌ವುಡ್‌ನಲ್ಲಿ ‘ನಟ ರಾಕ್ಷಸ’ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ್. ನಟ, ನಿರ್ಮಾಪಕನಾಗಿ ಜನ ಮೆಚ್ಚುಗೆ ಪಡೆದಿರುವ ಡಾಲಿ ಧನಂಜಯ್‌ ಇದೀಗ ರಾಜಕೀಯಕ್ಕೆ ಧುಮುಕಲಿದ್ದಾರಂತೆ ಎಂಬ ಅಂತೆ ಕಂತೆ ಕೇಳಿಬರುತ್ತಿದೆ. ಚುನಾವಣಾ ರಣತಂತ್ರಗಳನ್ನ ಹೆಣೆಯುವಲ್ಲಿ ರಾಜಕೀಯ ಪಕ್ಷಗಳು ತೊಡಗಿವೆ. ಮತಗಳನ್ನು ಸೆಳೆಯುವ ಸ್ಟ್ರಾಟೆಜಿಗಳತ್ತ ರಾಜಕೀಯ ಪಕ್ಷಗಳು ಗಮನ ಹರಿಸುತ್ತಿವೆ. ಹೀಗಿರುವಾಗಲೇ, ಕನ್ನಡ ನಟ ಧನಂಜಯ್‌ ಹೆಸರು ರಾಜಕೀಯ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ. ಧನಂಜಯ್‌ ಅವರನ್ನ ಸಂಪರ್ಕ ಮಾಡಿದ್ಯಾ ಕಾಂಗ್ರೆಸ್‌? ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ನಟ ಧನಂಜಯ್ ರಾಜಕೀಯಕ್ಕೆ ಧುಮುಕಲಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಧನಂಜಯ್ ಅವರನ್ನ ಕಾಂಗ್ರೆಸ್ ಮುಖಂಡರು ಸಂಪರ್ಕ ಮಾಡಿದ್ದಾರಂತೆ. ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಧನಂಜಯ್ ಅವರ ಜೊತೆಗೆ ಕಾಂಗ್ರೆಸ್‌ ಮುಖಂಡರು ಚರ್ಚೆ ನಡೆಸಿದ್ದಾರಂತೆ. ಪ್ರತಾಪ್ ಸಿಂಹಗೆ ಎದುರಾಳಿ? ಧನಂಜಯ್‌ ಅವರ ಜೊತೆಗೆ ಕಾಂಗ್ರೆಸ್ ಮುಖಂಡರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಯೋಚಿಸಿ, ನಿರ್ಧಾರ ತೆಗೆದುಕೊಳ್ಳುವುದಾಗಿ ಕಾಂಗ್ರೆಸ್‌ ಮುಖಂಡರಿಗೆ…

Read More

ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾನೆ ಆದಾಗಿಂದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಇಂದು ಕೂಡ ಅಯೋಧ್ಯೆಯಲ್ಲಿ ಜನಸಾಗರವೇ ನೆರೆದಿದೆ. ಕಳೆದ ವೀಕೆಂಡ್‌ನಲ್ಲಿಯೂ ಜನಸಂದಣಿ ದಟ್ಟವಾಗಿಯೇ ಇತ್ತು. ಅಂತೆಯೇ ಈ ಭಾನುವಾರವೂ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಮುಂಜಾನೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಬೆಳಗ್ಗೆಯಾಗುತ್ತಿದ್ದಂತೆಯೇ ಅಯೋಧ್ಯೆಯಲ್ಲಿ ಜನಸಂದಣಿ ಹೆಚ್ಚಾಗಿದ್ದು, ರಾಮಲಲ್ಲಾನ ದರ್ಶನ ಪಡೆಯಲೆಂದು ಭಕ್ತರು ಓಡೋಡಿ ಬರುತ್ತಿದ್ದಾರೆ. ಕಳೆದ ವಾರ ವೀಕೆಂಡ್‌ ಹಾಗೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಭಕ್ತ ಸಾಗರವೇ ಹರಿದುಬಂದಿತ್ತು. ಫೆ.10ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದರು. ಸಾವಿರಾರು ಮಂದಿ ಭಕ್ತರು ಪ್ರಯಾಗ್ ರಾಜ್ ನಲ್ಲಿ ಪುಣ್ಯಸ್ನಾನ ಮಾಡಿ ರಾಮ ಮಂದಿರದತ್ತ ದೌಡಾಯಿಸುತ್ತಿರುವ ವೀಡಿಯೋ ಕೂಡ ವೈರಲ್‌ ಆಗಿತ್ತು. https://ainlivenews.com/do-not-close-the-washing-machine-immediately-after-washing-clothes/ ಭಕ್ತರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ವಿಐಪಿ ಗೇಟ್ ಕೂಡ ತೆರೆಯಲಾಗಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಇನ್ನೊಂದೆಡೆ ಭಕ್ತರಿಗೆ ಲಾಕರ್ ವ್ಯವಸ್ಥೆ ಸಿಗದಿದ್ದರಿಂದ…

Read More

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪಳದಲ್ಲಿ ಬ್ಯಾಗ್ʼ​​​​​ನಲ್ಲಿದ್ದ ವಸ್ತು ಸ್ಫೋಟಗೊಂಡು ಹಲವರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಬೆಡ್​​ಶೀಟ್​ ಮಾರಲು ಬಂದಿದ್ದ ಆಂಥೋಣಿ ಎಂಬಾತ ಸೇರಿದಂತೆ ಇತರೆ ಬೆಡ್​​ಶೀಟ್​ ವ್ಯಾಪಾರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. https://ainlivenews.com/do-not-close-the-washing-machine-immediately-after-washing-clothes/ ಗಾಯಾಳುಗಳಿಗೆ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉಮೇಶ್​ ಎಂಬಾತ ಆಂಥೋಣಿ ಬಳಿ ಬ್ಯಾಗ್ ಇಟ್ಟು ಹೋಗಿದ್ದ. ಈ ವೇಳೆ ಬ್ಯಾಗ್​​​​ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಡ್ ಶೀಟ್ ಮಾರಾಟಕ್ಕೆ ಬಂದಿದ್ದ ಅಂಥೋನಿ ಬಳಿ ಪರಿಚಯಸ್ಥರು ಬ್ಯಾಗ್ ಇಟ್ಟು ಹೋಗಿದ್ದರು. ಇದೇ ಬ್ಯಾಗ್ ಆಕಸ್ಮಿಕವಾಗಿ ಸ್ಪೋಟಗೊಂಡಿದೆ. ಉಮೇಶ್ ಎನ್ನುವ ವ್ಯಕ್ತಿ ಬ್ಯಾಗ್ ಇಟ್ಟು ಹೋಗಿದ್ದು ಎನ್ನಲಾಗುತ್ತಿದ್ದು, ಆತನ ಬಗ್ಗೆ ಪೋಲಿಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೆಲ ಹೊತ್ತು ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Read More

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರ ಅಹವಾಲು/ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್ ರವರು ರಾಜರಾಜೇಶ್ವರಿ ನಗರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಜ್ಞಾನಭಾರತಿ BP Ed ಮೈದಾನದಲ್ಲಿ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಕಲ ಚೇತನರು ಹಾಗೂ ಹಿರಿಯ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಈ ವೇಳೆ ಸ್ಥಳೀಯ ಶಾಸಕರಾದ ಶ್ರೀ ಮುನಿರತ್ನ, ಶ್ರೀ ಎಸ್.ಟಿ ಸೋಮಶೇಖರ್, ಸಂಸದರಾದ ಶ್ರೀ ಡಿ.ಕೆ ಸುರೇಶ್, ಮಾಜಿ ರಾಜ್ಯಸಭಾ ಸದಸ್ಯರಾದ ರಾಜೀವ್ ಗೌಡ, ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್, ಬಿಡಿಎ ಆಯುಕ್ತರಾದ ಜಯರಾಮ್, ಜಲಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ರಾಮ್ ಪ್ರಸಾತ್ ಮನೋಹರ್, ವಲಯ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಚಿವರು ಹಿಂದೇಟು ಹಾಕ್ತಿದ್ದಾರೆ.ಕಾಂಗ್ರೆಸ್ ಡಬಲ್ ಡಿಜೆಟ್ ದಾಟಬೇಕಾದರೆ,ಸಚಿವರ ಸ್ಪರ್ಧೆ ಅನಿವಾರ್ಯ ಎಂದು ಕೆಪಿಸಿಸಿ ನಡೆಸಿದ ಸರ್ವೇಯಲ್ಲಿ ಬಹಿರಂಗವಾಗಿತ್ತು.ಕೆಪಿಸಿಸಿ ಅಧ್ಯಕ್ಷರ ಕೂಡ ಸಮಯ ಬಂದಾಗ ಸಚಿವರು ಸ್ಪರ್ಧೆ ಮಾಡಬೇಕೆಂದು ಹೇಳಿದ್ರು.ಆದ್ರೆ,ಕೆಲ ಸಚಿವರು ಲೋಕ ಅಖಾಡಕ್ಕೆ ಧುಮುಕಲು ಹಿಂದೇಟು ಹಾಕ್ತಿದ್ದಾರೆ. ಯೆಸ್, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರ ಹಿಡಿಯಲು ಎಐಸಿಸಿ ಎಲ್ಲ ಸಿದ್ಧತೆ  ನಡೆಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರೋದ್ರಿಂದ ಟಾರ್ಗೆಟ್ 20 ನೀಡಿದೆ.28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬರುವಂತೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ದೊರೆಗಳು ಕಟಾಜ್ಞೆ ಮಾಡಿದ್ದಾರೆ.28 ಲೋಕಸಭಾ ಕ್ಷೇತ್ರಗಳ ಪೈಕಿ  ಸುಮಾರು 10 ರಿಂದ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಪ್ರಬಲವಾದ ಕಟ್ಟಾಳುಗಳು ಸಿಗುತ್ತಿಲ್ಲ.ಇದು ಕೆಪಿಸಿಸಿಗೆ ದೊಡ್ಡ ತಲೆನೋವಾಗಿತ್ತು.ಹೀಗಾಗಿಯೇ,ಕೆಲ ಸಚಿವರಿಗೆ ಲೋಕ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿದೆ. https://ainlivenews.com/do-not-close-the-washing-machine-immediately-after-washing-clothes/ ಆದ್ರೆ, ಕೆಲ ಸಚಿವರು ಲೋಕ ಅಖಾಡಕ್ಕೆ ಧುಮುಕಲು ಹಿಂದೇಟು ಹಾಕಿದ್ದಾರೆ.ಇಂದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ…

Read More

ಮಂಡ್ಯ: ಲೋಕಸಭಾ ಚುನಾವಣೆಗೆ ತಯಾರಿ ಮಾಡ್ತಾ ಇದೀವಿ.. ಈ ಬಾರಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಡ್ಯದಲ್ಲಿ ಮಾತನಾಡಿದ ಅವರು, ನಾವು ಗ್ಯಾರಂಟಿ ಮಾತ್ರ ತಂದಿಲ್ಲ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ನಮಗೆ ಕೇಂದ್ರದಿಂದ 1 ಲಕ್ಷದ 87 ಸಾವಿರ ಕೋಟಿ ನಷ್ಟ ಆಗಿದೆ. ಅದು ಬಂದರೆ ಇನ್ನೂ ಹೆಚ್ಚು ಅಭಿವೃದ್ಧಿ ಮಾಡಬಹುದು. ಇನ್ನು ರಾಜ್ಯದಲ್ಲಿ ವಿರೋಧ ಪಕ್ಷ ಇರುವುದು ಒಂದೇ. ಬಿಜೆಪಿ ಜೊತೆ ಜೆಡಿಎಸ್ ಅವರು ಮರ್ಜ್ ಆಗಿದ್ದಾರೆ. ಇದರಿಂದ ಜೆಡಿಎಸ್ ಅವರು ಜೆಡಿಎಸ್‌ ರೀತಿಯಲ್ಲಿ ಕೆಲಸ ಮಾಡದೇ, ಬಿಜೆಪಿ ಅವರ ರೀತಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪ್ರತ್ಯೇಕ ಪಕ್ಷವಾಗಿ ಜೆಡಿಎಸ್ ಇಲ್ಲ ಎಂದು ಹೇಳಿದರು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮಕ್ಕೆ ಆಗಮಿಸಿದ ಸಿಎಂಗೆ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ವಾಗತ ಕೋರಿದರು. https://ainlivenews.com/do-not-close-the-washing-machine-immediately-after-washing-clothes/ ಬಳಿಕ ಮಂಚನಹಳ್ಳಿಯಲ್ಲಿ ಕನಕದಾಸರ ಪುತ್ಥಳಿ ಉದ್ಘಾಟಿಸಿದ ಅವರು,…

Read More

ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶವಾಗಿತ್ತು. ನಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೌದು  ನ್ಯಾಶನಲ್ ಕ್ರಶ್ಖ್ಯಾತಿಯ ರಶ್ಮಿಕಾ ಮಂದಣ್ಣ ಸಂಚರಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ರಶ್ಮಿಕಾ ಜತೆ ಈ ವೇಳೆ ನಟಿ ಶ್ರದ್ಧಾ ದಾಸ್ ಕೂಡ ಇದ್ದರು. ಘಟನೆ ಬಗ್ಗೆ ನಟಿ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ “ಇಂದು ನಾವು ಸಾವಿನಿಂದ ಪಾರಾಗಿದ್ದೇವೆ” ಎಂದು ಬರೆದುಕೊಂಡಿದ್ದು, ಈ ಸ್ಟೋರಿ ಭಾರಿ ವೈರಲ್ ಆಗಿದೆ.  ಇನ್ನು ಇದನ್ನು ನೋಡಿದ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ರಶ್ಮಿಕಾ ಇತ್ತೀಚೆಗಷ್ಟೇ ಮುಂಬೈಗೆ ತೆರಳಿದ್ದರು. https://ainlivenews.com/do-not-close-the-washing-machine-immediately-after-washing-clothes/ ಬಳಿಕ ತಮ್ಮ ಚಿತ್ರೀಕರಣ ಪೂರ್ಣಗೊಳಿಸಿ ಶನಿವಾರ (ಫೆ.17) ಹೈದರಾಬಾದ್ಗೆ ವಾಪಸ್ಸಾಗಲು ರಶ್ಮಿಕಾ ಏರ್ ವಿಸ್ತಾರ ವಿಮಾನ ಹತ್ತಿದ್ದು, ಈ ವಿಮಾನ ತಾಂತ್ರಿಕ ಸಮಸ್ಯೆ ಹಿನ್ನೆಲೆ ಮುಂಬೈ ವಿಮಾನ ನಿಲ್ದಾಣದಲ್ಲೇ ತುರ್ತು ಭೂಸ್ಪರ್ಶ ಮಾಡಿದೆ. ತುರ್ತು ಭೂಸ್ಪರ್ಷದ ವೇಳೆ ವಿಮಾನ ಸಿಬ್ಬಂದಿ ನೀಡಿದ ಸೂಚನೆಯಂತೆ, ರಶ್ಮಿಕಾ ಹಾಗೂ…

Read More

ಬೆಂಗಳೂರು/ತಿರುವನಂತಪುರಂ: ಕಾಂಗ್ರೆಸ್ ನಾಯಕ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಅವರು ಕೇರಳ ಮೂಲದ ಜೈಹಿಂದ್ ಖಾಸಗಿ ವಾಹಿನಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಹೌದು ʻಜೈಹಿಂದ್ ಟಿವಿ’ಯ ಮಾತೃಸಂಸ್ಥೆಯಾದ ಭಾರತ್ ಬ್ರಾಡ್ ಕಾಸ್ಟಿಂಗ್ ಕಂಪನಿಯಿಂದ ಬಾಕಿ ಇರುವ ತೆರಿಗೆ ಮೊತ್ತವನ್ನು ವಸೂಲಿ ಮಾಡುವಂತೆ ಎರಡು ಪ್ರಮುಖ ಖಾಸಗಿ ಬ್ಯಾಂಕುಗಳಿಗೆ ಇಲ್ಲಿನ ಕೇಂದ್ರ GST ಮತ್ತು ಅಬಕಾರಿ ಕಚೇರಿಯ ಸಹಾಯಕ ಆಯುಕ್ತರು ಇತ್ತೀಚೆಗೆ ನೋಟಿಸ್ ನೀಡಿದ್ದರು. https://ainlivenews.com/do-not-close-the-washing-machine-immediately-after-washing-clothes/ ಇದರ ಬೆನ್ನಲ್ಲೇ ಈಗ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ. ಸಂಸ್ಥೆಯ ಖಾತೆಗಳನ್ನು ಸ್ಥಗಿತಗೊಳಿಸಿ ಕೈಗೊಂಡಿರುವ ಕ್ರಮಕ್ಕೂ, 7 ವರ್ಷಗಳ ಹಿಂದಿನ ಸೇವಾ ತೆರಿಗೆ ಬಾಕಿಗೆ ಸಂಬಂಧಿಸಿದ ಇದೇ ಸಂಸ್ಥೆಗೆ ಸಂಬಂಧಿಸಿದ ಪ್ರಕರಣಕ್ಕೂ ನಂಟಿದೆ. ಸೇವಾ ತೆರಿಗೆ ಬಾಕಿ ಕುರಿತ ಪ್ರಕರಣದ ವಿಚಾರಣೆ ಸದ್ಯ ಕೇರಳ ಹೈಕೋರ್ಟ್‌ನಲ್ಲಿ  ನಡೆಯುತ್ತಿದೆ. ಈ ನಡುವೆ ಇಲಾಖೆ ಕೈಗೊಂಡಿರುವ ಈ ದಿಢೀರ್ ಕ್ರಮ ದುರದೃಷ್ಟಕರ…

Read More

ಬೆಂಗಳೂರು: ಜಾತ್ಯಾತೀತತೆ, ಸಮಾನತೆ, ಭ್ರಾತೃತ್ವ ತತ್ವಗಳೇ ಸಂವಿಧಾನದ ತಳಹದಿ. ಇದಕ್ಕೆ ತರುವ ಪ್ರಯತ್ನಗಳನ್ನು ವಿಫಲಗೊಳಿಸಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇದಕ್ಕೆ ಯಾವ ಪಕ್ಷ, ಗುಂಪು ಇಲ್ಲ. ಸಂವಿಧಾನ ಈ ದೇಶದ ಎಲ್ಲಾ ಜನರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಭಾರತದ ಸಂವಿಧಾನ ಜಾರಿಗೆ ಬಂದು 75 ನೇ ವರ್ಷಕ್ಕೆ ಕಾಲಿಟ್ಟಿದೆ. 75 ನೇ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ಕರ್ನಾಟಕದಾದ್ಯಂತ 31 ಜಿಲ್ಲೆಗಳಲ್ಲಿ ಸಂವಿಧಾನ ಜಾಥಾ ಜನವರಿ 26 ರಿಂದ ಫೆ. 23ರವರೆಗೆ ಹಮ್ಮಿಕೊಳ್ಳಲಾಗಿದೆ. ಫೆ. 24-25 ಎರಡು ದಿಗಳು ರಾಷ್ಟ್ರೀಯ ಏಕತಾ ಸಮಾವೇಶ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. https://ainlivenews.com/do-not-close-the-washing-machine-immediately-after-washing-clothes/ ಹೆಸರಾಂತ ಭಾಷಣಕಾರರು, ಖ್ಯಾತ ಚಿಂತಕರಾದ ಪ್ರೊ: ಅಸುತೋಶ್ ವರ್ಶನಿ ಹಾಗೂ ಡಾ: ಗಣೇಶ್ ದೇವಿ, ಪ್ರೊ. ಜಯಂತಿ ಘೋಷ್, ಪ್ರೊ. ಸುಖದೇವ್ ಥೋರಟ್, ಪ್ರೊ, ಕಾಂಚಾ, ಪ್ರಶಾಂತ್ ಭೂಷಣ್, ಬಿಜುವಾಡ ವಿಲ್ಸನ್ , ಮೇಧಾ ಪಾಟ್ಕರ್ ಮುಂತಾದ ಅನೇಕ ಚಿಂತಕರು ಮೇಧಾವಿಗಳು ಈ ಕಾರ್ಯಕ್ರಮದಲ್ಲಿ…

Read More

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಪಾಳಯದಲ್ಲಿ ಒಂದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ದೇಶಿ ಕ್ರಿಕೆಟ್‌ನಲ್ಲಿ ರನ್ ರಾಶಿಯನ್ನೇ ಗುಡ್ಡೆ ಟೀಂ ಇಂಡಿಯಾ ಬಾಗಿಲು ತಟ್ಟುತ್ತಿದ್ದ 26 ವರ್ಷದ ಪ್ರತಿಭಾನ್ವಿತ ಬ್ಯಾಟರ್ ಸರ್ಫರಾಜ್ ಖಾನ್ ಕೊನೆಗೂ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ವಿಕೆಟ್ ಕೀಪರ್ ಬ್ಯಾಟರ್ ಧೃವ್ ಜುರೆಲ್ ಕೂಡಾ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಟಾಸ್‌ಗೂ ಮುನ್ನ ಭಾರತದ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ, ಟೆಸ್ಟ್ ಕ್ಯಾಪ್ ನೀಡಿ ಭಾರತ ಟೆಸ್ಟ್ ತಂಡಕ್ಕೆ ಸ್ವಾಗತಿಸಿದರು.  ಟೆಸ್ಟ್ ಕ್ಯಾಪ್ ನೀಡುವ ಮುನ್ನ ಅನಿಲ್ ಕುಂಬ್ಳೆ, https://ainlivenews.com/do-not-close-the-washing-machine-immediately-after-washing-clothes/ “ಈ ಹಂತಕ್ಕೆ ಬರಲು ನೀವು ಹಾಗೂ ನಿಮ್ಮ ಕುಟುಂಬದ ಪರಿಶ್ರಮ ಅನನ್ಯವಾದದ್ದು, ನಿಮ್ಮ ತಂದೆ ನಿಮ್ಮ ಸಾಧನೆಯ ಬಗ್ಗೆ ಖಂಡಿತವಾಗಿಯೂ ಹೆಮ್ಮೆ ಪಡುತ್ತಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ನೀವು ಸಾಕಷ್ಟು ರನ್…

Read More