Author: AIN Author

ಬೆಂಗಳೂರು: ರಾಜ್ಯ ಸರ್ಕಾರದ ೫ ಗ್ಯಾರಂಟಿಯಲ್ಲಿ ಅನ್ನ ಭಾಗ್ಯ ಕೂಡ ಒಂದು.. ಆದ್ರೆ ಇದನ್ನು ಕಂಡು ಕೇಂದ್ರ ಸರ್ಕಾರ ಭಾರತ್ ಅಕ್ಕಿಯನ್ನು ಜಾರಿ ಮಾಡಿ ಕೇವಲ ಒಂದು ವಾರವಷ್ಟೇ ಕಳೆದಿದೆ. ಈ ಒಂದು ವಾರದಲ್ಲಿ ಮೊದಲನೇ ದಿನ ಮಾತ್ರ ಸ್ಟಾಕ್ ಬಂದಿದ್ದು ಈಗ ಔಟ್ ಆಫ್ ಸ್ಟಾಕ್ ಆಗಿದೆ.. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.. ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಧವಸ ಧಾನ್ಯಗಳನ್ನು ಒದಗಿಸುವ ಕೇಂದ್ರ ಸರ್ಕಾರದ ಯೋಜನೆ ಆರಂಭದಲ್ಲಿಯೇ ಎಡವಿ ಬಿದ್ದಿದೆ. 60 ರೂ. ಗಳಿಗೆ ಭಾರತ್ ತೊಗರಿ ಬೇಳೆ ಹಾಗೂ 29 ರೂ. ಗಳಿಗೆ ಭಾರತ್ ಅಕ್ಕಿ ಪ್ರತಿ ಕೆಜಿಗೆ ದೊರೆಯುವುದೆಂದು ಕಾದಿದ್ದ ಗ್ರಾಹಕರಿಗೆ ಪೂರೈಕೆಯ ಅಭಾವದ ನಿರಾಸೆ ಉಂಟು ಮಾಡಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಯೋಜನೆ ಉದ್ಘಾಟನಗೊಂಡ ದಿನ ಸಾಂಕೇತಿಕವಾಗಿ ನೀಡಲು 100 ಚೀಲಗಳನ್ನು ಪೂರೈಸಲಾಗಿತ್ತು. ಬಳಿಕ ಎಲ್ಲೂ ಸಹ ಭಾರತ್ ಅಕ್ಕಿ ಮತ್ತು ಭಾರತ್‌ ಬೇಳೆ ಕಾಣಿಸಿಕೊಂಡಿಲ್ಲ. ಇದರ ಎಕ್ಲೂಸಿವ್ ದೃಶ್ಯ ನಮ್ಮ…

Read More

ಬೆಂಗಳೂರು: “ಬೆಂಗಳೂರಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಧ್ಯದಲ್ಲೇ ಪಾಲಿಕೆ ಬಜೆಟ್ ಮಂಡನೆಯಾಗಲಿದೆ” ಎಂದು ಸನ್ಮಾನ್ಯ ಬೆಂಗಳೂರು ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್ ರವರು ತಿಳಿಸಿದರು. ಬೆಂಗಳೂರು ವಿವಿಯ ಜ್ಞಾನಭಾರತಿ ಬಿಪೆಡ್ ಮೈದಾನದಲ್ಲಿ ಭಾನುವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು; “ಬೆಂಗಳೂರಿನ ಹೊಸ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಿಸಲು ನಮ್ಮದೇ ಆದ ಯೋಜನೆಗಳಿವೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಮೆಟ್ರೋ ಹೋಗುವ ಮಾರ್ಗದಲ್ಲಿ ಫ್ಲೈಓವರ್ ನಿರ್ಮಾಣಕ್ಕೂ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಯಶವಂತಪುರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಟನಲ್ ರಸ್ತೆ ಮಾಡಲು ಫೀಸಿಬಲ್ ವರದಿ ಸಿದ್ಧಪಡಿಸಲಾಗುತ್ತಿದೆ. ಸುಮ್ಮನಹಳ್ಳಿ, ಗೊರಗೊಂಟೆ ಪಾಳ್ಯ ಸೇರಿದಂತೆ ಇತರ ಕಡೆಗಳಲ್ಲಿ ಈ ಯೋಜನೆ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ. https://ainlivenews.com/do-not-close-the-washing-machine-immediately-after-washing-clothes/ ಇದುವರೆಗೂ 12…

Read More

ದಾವಣಗೆರೆ: ಕೇಂದ್ರ ಸರ್ಕಾರದ  ಮಧ್ಯಂತರ ಬಜೆಟ್‌ ವಿರುದ್ಧ ಅಸಮಾಧಾನ ಹೊರಹಾಕುವ ವೇಳೆ ಸಂಸದ ಡಿ.ಕೆ ಸುರೇಶ್‌ ಪ್ರತ್ಯೇಕ ರಾಷ್ಟ್ರದ ಬಗ್ಗೆ ದನಿ ಎತ್ತಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ದಾವಣಗೆರೆ ಜಿಲ್ಲಾ ಬಿಜೆಪಿ ಯುವಮೋರ್ಚಾ ಘಟಕ ದೂರು ನೀಡಿದೆ. https://ainlivenews.com/do-not-close-the-washing-machine-immediately-after-washing-clothes/ ಸಂಸದ ಡಿ.ಕೆ ಸುರೇಶ್‌ ಅವರ ಹೇಳಿಕೆಯಿಂದ ದೇಶದ ಗೌರವಕ್ಕೆ ಮತ್ತು ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಇದು ಅಸಾಂವಿಧಾನಿಕ ಹೇಳಿಕೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮೂಲಕ ಎಸ್ಪಿ ಅವರಿಗೆ ಬಿಜೆಪಿ ಘಟಕ ದೂರು ನೀಡಿದೆ. ಮಹಾನಗರ ಪಾಲಿಕೆಯ ಸದಸ್ಯ ಶಿವಪ್ರಕಾಶ ನೇತೃತ್ವದಲ್ಲಿ ದೂರು ನೀಡಲಾಗಿದೆ. ಡಿ.ಕೆ ಸುರೇಶ್‌ ಹೇಳಿದ್ದೇನು? ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ. ಹೀಗೆ ಅನ್ಯಾಯ ಆದ್ರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಸಂಸದ ಡಿಕೆ ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಕೇಂದ್ರದವರು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನು…

Read More

ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ನ ನಿಮಿತ್ತ ಸ್ಟಾರ್ ಸ್ಪೋರ್ಟ್ಸ್ ಜೊತೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಗೌತಮ್ ಗಂಭೀರ್, ಬಹಳಷ್ಟು ಸಮಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ವಿಕೆಟ್ ಪಡೆಯಲು ಚಿಂತಿಸುತ್ತಿದ್ದೆ ಎಂದು ಹೇಳಿದ್ದಾರೆ. “ಕೇವಲ ಒಬ್ಬ ಆಟಗಾರ ಮಾತ್ರ ನನ್ನ ನಿದ್ದೆಗೆಡಿಸುತ್ತಿದ್ದ. ಐಪಿಎಲ್ ಸಮಯದಲ್ಲಿ ಕ್ರಿಸ್ ಗೇಲ್ ಅಥವಾ ಎಬಿಡಿ ವಿಲಿಯರ್ಸ್ ಗಿಂತ ರೋಹಿತ್ ಶರ್ಮಾ ನನ್ನ ನಿದ್ದೆಯನ್ನು ಹಾಳು ಮಾಡುವಂತಹ ಆಟಗಾರನಾಗಿದ್ದ. ರೋಹಿತ್ ಶರ್ಮಾ ವಿಕೆಟ್ ಪಡೆಯಲು ಪ್ಲ್ಯಾನ್ ಎ ಮತ್ತು ಪ್ಲ್ಯಾನ್ ಬಿ ಇನ್ನೂ ಕೆಲವೊಮ್ಮೆ ಪ್ಲ್ಯಾನ್ ಸಿ ಕೂಡ ರೂಪಿಸುತ್ತಿದ್ದೆವು. ಏಕೆಂದರೆ ರೋಹಿತ್ ಶರ್ಮಾ ಮೈದಾನದಲ್ಲಿ ನಿಂತರೆ ಆತನನ್ನು ಯಾರಾದರೂ ನಿಯಂತ್ರಿಸುತ್ತಾರೆ ಎಂದು ನಾನು ಯೋಚಿಸುತ್ತಿರಲಿಲ್ಲ,” ಎಂದು ಕೆಕೆಆರ್ ಮೆಂಟರ್ ಹೇಳಿದ್ದಾರೆ. https://ainlivenews.com/do-not-close-the-washing-machine-immediately-after-washing-clothes/ ರೋಹಿತ್ ಶರ್ಮಾಗೆ ಮಾತ್ರ ನಾನು ಎ, ಬಿ ಮತ್ತು ಸಿ ಪ್ಲ್ಯಾನ್ ಗಳನ್ನು ರೂಪಿಸುತ್ತಿದ್ದೆ. ಏಕೆಂದರೆ ಇವುಗಳಲ್ಲಿ ಯಾವುದಾದರೂ ಒಂದು ರೂಪದಿಂದ ಆತನ ವಿಕೆಟ್ ಪಡೆಯಲು ಬಯಸಿದ್ದೆ. ತಮ್ಮ…

Read More

ರಾಜ್‍ಕೋಟ್: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ (Team India) ಇಂಗ್ಲೆಂಡ್‍ಗೆ 557 ರನ್‍ಗಳ ಬೃಹತ್ ಗುರಿ ನೀಡಿದೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಎರಡನೇ ದ್ವಿಶತಕ ಹಾಗೂ ಶುಭಮನ್ ಗಿಲ್ ಮತ್ತು ಸರ್ಫರಾಜ್ ಖಾನ್ ಅರ್ಧಶತಕದ ನೆರವಿನಿಂದ ಭಾರತ ಈ ಮೊತ್ತ ಕಲೆಹಾಕಿದೆ. ಮೂರನೇ ದಿನದ ಆಟದ ವೇಳೆ ಗಾಯಗೊಂಡು ಹೊರಹೋಗಿದ್ದ ಜೈಸ್ವಾಲ್, ಇಂದು ಮತ್ತೆ ಕ್ರೀಸ್‍ಗೆ ಆಗಮಿಸಿ ತಮ್ಮ ಶತಕವನ್ನು ದ್ವಿಶತಕ್ಕೆ ಏರಿಸಿದರು. 236 ಎಸೆತಗಳಲ್ಲಿ 214 ರನ್ ಗಳಿಸಿದ ಅವರು ಇನ್ನಿಂಗ್ಸ್‍ನಲ್ಲಿ 12 ಸಿಕ್ಸರ್ ಹಾಗೂ 14 ಬೌಂಡರಿಗಳನ್ನು ಸಿಡಿಸಿದರು. https://ainlivenews.com/do-not-close-the-washing-machine-immediately-after-washing-clothes/ 91 ರನ್ ಗಳಿಸಿ ಗಿಲ್ ಶತಕ ವಂಚಿತರಾದರು. ಎರಡನೇ ಇನ್ನಿಂಗ್ಸ್‍ನಲ್ಲೂ ಸರಾಗವಾಗಿ ಬ್ಯಾಟ್ ಬೀಸಿದ ಸರ್ಫರಾಜ್ ಖಾನ್ 72 ಎಸೆತಗಳಲ್ಲಿ 68 ರನ್ ದಾಖಲಿಸಿದರು. ತಂಡದ ಮೊತ್ತ 430 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು. ಇಂಗ್ಲೆಂಡ್ ಪರ ಜೋ…

Read More

ರಾಜ್‌ಕೋಟ್‌: ಪ್ರವಾಸಿ ಇಂಗ್ಲೆಂಡ್‌ ಎದುರು ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನು ಆಡುತ್ತಿರುವ ಟೀಮ್ ಇಂಡಿಯಾಗೆ ಮೂರನೇ ಟೆಸ್ಟ್‌ ಪಂದ್ಯದ ಮಧ್ಯದಲ್ಲಿ ಆಘಾತ ಎದುರಾಗಿತ್ತು. ತಂಡದ ಪ್ರಮುಖ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ತಮ್ಮ ತಾಯಿಯ ಅನಾರೋಗ್ಯ ಕಾರಣ ಪಂದ್ಯ ಮಧ್ಯದಲ್ಲೇ ತಂಡ ತೊರೆದು ಮನೆಗೆ ಹಿಂದಿರುಗಿದ್ದರು. ಹೀಗಾಗಿ ಮೂರನೇ ದಿನ ಅಶ್ವಿನ್‌ ಅಂಗಣದಿಂದ ಸಂಪೂರ್ಣ ಹೊರಗುಳಿದಿದ್ದರು. ಅಷ್ಟೇ ಅಲ್ಲದೆ ಪಂದ್ಯಕ್ಕೆ ಪೂರ್ಣ ಅಲಭ್ಯರಾಗುವ ಸಾಧ್ಯತೆ ಇತ್ತು. ಆದರೆ, ಪಂದ್ಯದ ನಾಲ್ಕನೇ ದಿನ ಆರ್‌ ಅಶ್ವಿನ್‌ ತಂಡ ಮರಳಿ ಸೇರಿಕೊಂಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಓಪನರ್‌ ಝ್ಯಾಕ್‌ ಕ್ರಾವ್ಲಿ ವಿಕೆಟ್‌ ಪಡೆದು ಟೆಸ್ಟ್‌ ಕ್ರಿಕೆಟ್‌ ಕೆರಿಯರ್‌ನ 500ನೇ ವಿಕೆಟ್‌ ಪಡೆದುದಾಖಲೆ ಬೆರೆದಿದ್ದ ಆರ್‌ ಅಶ್ವಿನ್‌, ರಾಜ್‌ಕೋಟ್‌ ಟೆಸ್ಟ್‌ ಪಂದ್ಯದ 4ನೇ ಮತ್ತು 5ನೇ ದಿನದಾಟಕ್ಕೆ ಹಾಜರಾಗಲು ಮನೆಯಿಂದ ಹಿಂದಿರುಗಿದ್ದಾರೆ. ಅಶ್ವಿನ್‌ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಅದರ ಫೋಟೊಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡಿದವು. https://ainlivenews.com/do-not-close-the-washing-machine-immediately-after-washing-clothes/ ಇನ್ನು ನಾಲ್ಕನೇ ದಿನದಾಟದ ಆರಂಭಕ್ಕೂ ಮುನ್ನ ಮಾತನಾಡಿದ್ದ ಟೀಮ್ ಇಂಡಿಯಾದ ನೈಟ್‌ವಾಚ್‌ಮನ್‌…

Read More

ಬೆಂಗಳೂರು: ಸಿಲಿಕಾನ್ ಸಿಟಿ ಕ್ಯಾನ್ಸರ್ ಹಬ್ ಆಗಿ ಬದಲಾಗುತ್ತಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಗಣನೀಯ ಹೆಚ್ಚಳವಾಗಿದೆ.ಕಿದ್ವಾಯಿ ಆಸ್ಪತ್ರೆಯಲ್ಲಿ ದಿನನಿತ್ಯ ಐದಾರು ಮಕ್ಕಳು ದಾಖಲಾಗುತ್ತಿದ್ರು.ತಜ್ಞ ವೈದ್ಯರ ಕೊರತೆ ಕಾಡುತ್ತಿದೆ ಈ ಕುರಿತಾ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.. ಪೀಡಿಯಾಟ್ರಿಕ್ ಆಂಕೊಲಾಜಿ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಕ್ರಮೇಣವಾಗಿ ಹೆಚ್ಚಳವಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲೂ ಕ್ಯಾನ್ಸ್ರ್ ಮಹಾಮಾರಿ ಮಕ್ಕಳನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಆದರೆ ಸರ್ಕಾರಿ  ಆಸ್ಪತ್ರೆಗಳಲ್ಲಿ  ಮಕ್ಕಳ ಆಂಕೊಲಾಜಿ ತಜ್ಞರ ಕೊರತೆಯಿದೆ ಎಂಬುವುದು ಖೇದರದ ಸಂಗತಿಯಾಗಿದ್ದು.  ಕ್ಯಾನ್ಸರ್ ಹತೋಟಿಗೆ ಪಡೆಯುವುದು ಹೇಗೆ ಎಂಬ ಆತಂಕ ಮನೆ ಮಾಡಲು ಆರಂಭಿಸಿದೆ.ಇನ್ನೂ  ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹೆಚ್ಚಿನ ಮಕ್ಕಳು ಕ್ಯಾನ್ಸರ್  ರೋಗ ಕಾಡುತ್ತಿದ್ದು. 2022-23ರಲ್ಲಿ ರಾಜ್ಯದಲ್ಲಿ 87,000 ಹೊಸ ಪ್ರಕರಣಗಳು ಪತ್ತೆಯಾಗಿವೆ. https://ainlivenews.com/do-not-close-the-washing-machine-immediately-after-washing-clothes/ ಹೆಚ್ಚಾಗಿ 0-14 ವರ್ಷದೊಳಗಿನ ಮಕ್ಕಳಿಗೆ ಕಾನ್ಸರ್ ಭಾದಿಸುತ್ತಿದ್ದು ವೈದ್ಯಲೋಕವನ್ನು ಬೆಚ್ಚಿ ಬೀಳಿಸಿದೆ. ಇನ್ನೂ ಕಿದ್ವಾಯಿ ಆಸ್ಪತ್ರೆಯಲ್ಲಿ ತಜ್ಞ ಪೀಡಿಯಾಟ್ರಿಕ್ ಆಂಕೊಲಾಜಿ ವೈದ್ಯರ ಕೊರತೆ ಕಾಡಲು ಆರಂಭಿಸಿದೆ. ಸದ್ಯ ಕಿದ್ವಾಯಿ ಮಕ್ಕಳ…

Read More

ಬೆಂಗಳೂರು: ರಾಷ್ಟ್ರ ರಾಜಧಾನಿ ನಂತ್ರ  ರಾಜ್ಯದಲ್ಲೂ ವಿವಿಧ ಬೇಡಿಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ರು. ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರೈತರು ಪರವಾಗಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಕೃಷಿ ಸಚಿವರ ಕಾರಿಗೆ ಹಾಗೂ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದ್ರು. ಒಂದ್ಕಡೆ ಬೇಕೆ ಬೇಕು ನ್ಯಾಯ ಬೇಕೆಂದು ರೈತರು ಕೂಗಾಟ.  ಮತ್ತೊಂದು ಕಡೆ ಕೃಷಿ ಸಚಿವ ಮುಂದೆ ರೈತ ಮಹಿಳೆ ಕಣ್ಣೀರು. ಇನ್ನೊಂದು ಕಡೆ ಕೃಷಿ ಸಚಿವರ ಕಾರಿಗೆ ಹಾಗೂ ಸಿಎಂ ಮನೆಗೆ ಮುತ್ತಿಗೆ ಈ ಎಲ್ಲಾ ದೃಶ್ಯಕಂಡು ಬಂದಿದ್ದು, ನಗರ ಪ್ರೀಡಂ ಪಾಕ್೯ನಲ್ಲಿ.. https://ainlivenews.com/do-not-close-the-washing-machine-immediately-after-washing-clothes/ ಹೌದು ಮುಖ್ಯಮಂತ್ರಿ ಮಂಡಿಸಿದ ಬಜೆಟ್ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ತಿರಸ್ಕರಿಸಿದೆ‌. ರೈತರು ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ರೈತರ ಪರವಾಗಿ ಬಜೆಟ್ ಮಂಡನೆ ಮಾಡಿಲ್ಲ. ರೈತ ಸಂಘಟನೆಗಳು ಹೋಗಿ ಹಲವಾರು ಬೇಡಿಕೆಗಳನ್ನ ಮನವಿ ಕೊಟ್ರು ಮುಖ್ಯಮಂತ್ರಿಗಳು ಬಜೆಟ್ ಲನಲ್ಲಿ ಸ್ಪಂದಿಸಿಲ್ಲ ಎಂದು ನಗರದ ಪ್ರೀಡಂ ಪಾಕ್೯ನಲ್ಲಿ ವಿಭಿನ್ನ ನಾಟಕ ಮಾಡುವ ಮುಖಾಂತರ…

Read More

ಹಾಸನ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಆದರೆ ಇನ್ನೂ ಯಾವ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದರೆ ಹಾಲಿ ಸಂಸದರು ಹಾಗೂ ಟಿಕೆಟ್ ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ. ಅತ್ತ ಹಾಸನದಲ್ಲಿ ಇನ್ನೂ ಯಾರು ಅಭ್ಯರ್ಥಿ ಎಂಬುದೇ ಘೋಷಣೆ ಆಗಿಲ್ಲ. ಸ್ಥಳೀಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ಜೆಡಿಎಸ್‍ನ ಏಕೈಕ ಸಂಸದ ಪ್ರಜ್ವಲ್ ರೇವಣ್ಣ ಫುಲ್ ಆಕ್ಟೀವ್ ಆಗಿದ್ದಾರೆ. ಹಾಸನ ಹಾಗೂ ಮಂಡ್ಯ (Hassan- Mandya) ಎರಡೂ ಲೋಕಸಭಾ ಕ್ಷೇತ್ರಗಳು ಬಿಜೆಪಿಗೆ ಬೇಕೇಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ (Preetham Gowda) ಪದೇಪದೇ ಒತ್ತಾಯಿಸುವ ಮೂಲಕ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಟಿಕೆಟ್ ನೀಡದಂತೆ ಪರೋಕ್ಷವಾಗಿ ವಿರೋಧಿಸುತ್ತಿದ್ದಾರೆ. ಇದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು (HD Devegowda) ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ.  https://ainlivenews.com/do-not-close-the-washing-machine-immediately-after-washing-clothes/…

Read More

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಅವರ ಸ್ಪರ್ಧೆ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಪಕ್ಷದಿಂದಲೇ ಸುಮಲತಾ ಅವರು ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಒಂದು ಕಡೆ ಕೇಳಿ ಬರುತ್ತಿದ್ದು, ಕಾಂಗ್ರೆಸ್ ಕೂಡ ಸುಮಲತಾ ಅವರನ್ನು ತಮ್ಮನ್ನ ಸೆಳೆದುಕೊಳ್ಳಲು ನಾನಾ ಸರ್ಕಸ್ ಮಾಡುತ್ತಿದೆ ಎಂಬ ಮಾತು ಕೂಡ ಮತ್ತೊಂದೆಡೆ ಕೇಳಿ ಬಂದಿತ್ತು. ಇದೆಲ್ಲದರ  ನಡುವೆ ಮಂಡ್ಯ ಮಣ್ಣು ಬಿಡಲ್ಲ ಎನ್ನುತ್ತಲೇ ಎದುರಾಳಿಗಳಿಗೆ ಸಂದೇಶ ರವಾನಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೂ ಕಣ್ಣಕ್ಕಿಳಿಯುವ ಸೂಚನೆ ನೀಡಿದ್ದಾರೆ. 2019ರ ಚುನಾವಣೆ ನೆನೆದು ಸುಮಲತಾ ಅವರು ಭಾವುಕರಾದರು. ಕಾರ್ಯಕ್ರಮದಲ್ಲಿ ಮಾತನಾಡುತ್ತ, ಆ ಸಂದರ್ಭದಲ್ಲಿ ದರ್ಶನ್, ಯಶ್ ನನಗೆ ಧೈರ್ಯ ತುಂಬಿದ್ರು. https://ainlivenews.com/do-not-close-the-washing-machine-immediately-after-washing-clothes/ ಕಳೆದ 5 ವರ್ಷ ಮಂಡ್ಯ ಜನರ ಪ್ರೀತಿಗಳಿಸಿದ್ದೇನೆ. ಮಂಡ್ಯದ ಮಣ್ಣಿನ ತಿಲಕವಿಟ್ಟು ಅಂಬರೀಶ್​ಗೆ ಬೀಳ್ಕೊಟ್ಟೆವು. ಯಾವುದೇ ಕಾರಣಕ್ಕೂ ನಾನು ಕೂಡ ಈ ಮಣ್ಣನ್ನ ಬಿಡೋದಿಲ್ಲ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ. ಈ ಚುನಾವಣೆಯಲ್ಲಿಯೂ ದರ್ಶನ್ ತನ್ನ ಜೊತೆ ನಿಲ್ಲುತ್ತಾರೆ…

Read More