Author: AIN Author

ರಾಮನಗರ:- ಪರ್ಫ್ಯೂಮ್ ಕೆಮಿಕಲ್‌ ಸ್ಫೋಟಗೊಂಡು ಮೂವರು ಕಾರ್ಮಿಕರು ಸಜೀವ ದಹನವಾದ ಘಟನೆ ಬೆಂಗಳೂರಿನಲ್ಲಿ ಜರುಗಿದೆ. ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿ ದುರಂತ ಸಂಭವಿಸಿದೆ. ಬೆಂಕಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಜೀವದಹನವಾಗಿದ್ದು, ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪರ್ಫ್ಯೂಮ್ ಕೆಮಿಕಲ್‌ ಸ್ಫೋಟಗೊಂಡ ಪರಿಣಾಮ ಆಕಸ್ಮಿಕ ಬೆಂಕಿಯಿಂದ ಪರ್ಫ್ಯೂಮ್ ಫ್ಯಾಕ್ಟರಿ ಹೊತ್ತಿ ಉರಿಯುತ್ತಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ

Read More

ಕೇಂದ್ರ ಲೋಕಸೇವಾ ಆಯೋಗ (UPSC) ದಲ್ಲಿ ಒಟ್ಟು 1206 ಇಂಡಿಯನ್ ಫಾರೆಸ್ಟ್ ಸರ್ವೀಸ್, ಸಿವಿಲ್​ ಸರ್ವೀಸ್ ಪರೀಕ್ಷೆ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮುಂದಿನ ಮಾರ್ಚ್​ 5ರೊಳಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ಆಯೋಗ ತಿಳಿಸಿದೆ ಪ್ರಕ್ರಿಯೆ ಪೂರ್ಣ ಮಾಹಿತಿಸಂಸ್ಥೆ ಹೆಸರು: ಕೇಂದ್ರ ಲೋಕಸೇವಾ ಆಯೋಗ (UPSC)ಹುದ್ದೆ ಹೆಸರು: ಇಂಡಿಯನ್ ಫಾರೆಸ್ಟ್ ಸರ್ವೀಸ್, ಸಿವಿಲ್​ ಸರ್ವೀಸ್ ಪರೀಕ್ಷೆ ಹುದ್ದೆಖಾಲಿ ಹುದ್ದೆ ಸಂಖ್ಯೆ: 1206ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆ- 150ಸಿವಿಲ್​ ಸರ್ವೀಸ್ ಪರೀಕ್ಷೆ -1056ಪೋಸ್ಟಿಂಗ್: ಭಾರತದಲ್ಲಿ ಎಲ್ಲಿ ಬೇಕಾದರೂಅರ್ಜಿ ಸಲ್ಲಿಕೆ ಕೊನೆ ದಿನಾಂಕ: 2024 ಮಾರ್ಚ್​ 5ಶೈಕ್ಷಣಿಕ ಅರ್ಹತೆಸಿವಿಲ್​ ಸರ್ವೀಸ್ ಪರೀಕ್ಷೆ ಹುದ್ದೆ ಹಾಗೂ ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆಗೆ ಬರೆಯುವವರು ಪದವಿ ಪೂರ್ಣಗೊಳಿಸಿರಬೇಕು ಎಂದು ಕೆಪಿಎಸ್‌ಸಿ ಅಧಿಸೂಚನೆ ಮಾಹಿತಿ ನೀಡಿದೆ.ವಯಸ್ಸಿನ ಮಿತಿ ವಿವರಕೇಂದ್ರ ಸರ್ಕಾರಿ ವ್ಯಾಪ್ತಿಯ ಈ ಮೇಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳ ವಯಸ್ಸು ಆಗಸ್ಟ್ 1, 2024ಕ್ಕೆ ಕನಿಷ್ಠ 21…

Read More

ಹಾವೇರಿ:- ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರೋತ್ಸಾಹ ಕಾಂಗ್ರೆಸ್ ನೀಡುತ್ತದೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷದವರು ಹೆಚ್ಚಿನ ಪ್ರೋತ್ಸಾಹ ಕೊಡುತ್ತೇವೆ. ಅನೇಕ ಜನರು ಈ ದೇಶದ ಮೂಲ ನಿವಾಸಿಗಳ ಬಗ್ಗೆ ಮಾತನಾಡಿದ್ದಾರೆ. ದಲಿತರು, ಹಿಂದುಳಿದವರು, ಮೂಲ‌ನಿವಾಸಿಗಳು ಅಂತಾ ವ್ಯಾಖ್ಯಾನಿಸಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದೆ ಇರುವವರು ಹಿಂದುಳಿದವರು. ದೇಶದಲ್ಲಿ 16% ರಿಂದ 18% ಅಲ್ಪಸಂಖ್ಯಾತರಿದ್ದಾರೆ, ಅವರು ಹಿಂದುಳಿದವರು ಎಂದರು. ಅಲ್ಲದೆ, ಸಂವಿಧಾನದ ಆಶಯಗಳಂತೆ ಅವಕಾಶ ಸಿಗಬೇಕೆಂಬುದು ಕಾಂಗ್ರೆಸ್​ನ ನೀತಿಯಾಗಿದೆ. 1885ರಲ್ಲಿ ರಚಿಸಿರುವ ನಮ್ಮ ನೀತಿಗಳು ಇನ್ನೂ ಬದಲಾಗಿಲ್ಲ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷದವರು ಹೆಚ್ಚಿನ ಪ್ರೋತ್ಸಾಹ ಕೊಡುತ್ತೇವೆ. ಆ ಸಮುದಾಯಗಳಿಗೆ ಹೆಚ್ಚು ಪ್ರೋತ್ಸಾಹ ಕೊಡುತ್ತೇವೆ ಎಂದರು. ಸುಪ್ರೀಂಕೋರ್ಟ್ ಸೂಚಿಸಿದ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಲ್ಲ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಸಂತೋಷ್ ಲಾಡ್ ಹೇಳಿಕೆಯನ್ನು ಆರೋಪ ಅಂತಾ ಯಾಕೆ ಅಂತೀರಿ? ಸಚಿವ ಸಂತೋಷ್ ಲಾಡ್ ವಸ್ತುಸ್ಥಿತಿ ಹೇಳಿದ್ದಾರೆ. ಹೀಗಾಗಿ…

Read More

ನವದೆಹಲಿ:- ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ಕೂಡ ಬಿಜೆಪಿಗೆ ಓಟು ಹಾಕುತ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸುಪ್ರೀಂ’ ಸೂಚಿಸಿದ ಸ್ಥಳದಲ್ಲಿ ರಾಮಮಂದಿರ ಕಟ್ಟಿಲ್ಲವೆಂಬ ಸಂತೋಷ್ ಲಾಡ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 140 ಕೋಟಿ ಜನರನ್ನು ಒಗ್ಗೂಡಿಸುವ ಮಂದಿರ ಅದು. ಇದೊಂದು ರಾಷ್ಟ್ರೀಯ ಮಂದಿರ ಎಂದು ಹೇಳಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತ ಮೂರು ವರ್ಗಕ್ಕೆ ನ್ಯಾಯ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ಕೂಡ ಬಿಜೆಪಿಗೆ ಓಟು ಹಾಕುತ್ತಾರೆ ಎಂದಿದ್ದಾರೆ. ಇದೊಂದು ಐತಿಹಾಸಿಕ ಬಿಜೆಪಿ ಅಧಿವೇಶನ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರ ಭಾಷಣ ಕಾರ್ಯಕರ್ತರಿಗೆ ಪ್ರೇರಣೆ ಕೊಟ್ಟಿದೆ. 10 ವರ್ಷದಲ್ಲಿ ಸಂಘಟನೆ ಅಭಿವೃದ್ಧಿ, ಬಿಜೆಪಿ ಗೆಲುವು, ಕೇಂದ್ರ ಸರ್ಕಾರದ ಕೆಲಸಗಳು ಅವರ ಭಾಷಣಗಳಲ್ಲಿ ಇತ್ತು. ಈ ಬಾರಿ ಕರ್ನಾಟಕ 28ಕ್ಕೆ 28 ಸ್ಥಾನ ಗೆಲ್ಲಲು ನಮಗೆ ಸ್ಪೂತಿ ಕೊಟ್ಟಿದೆ…

Read More

ಹುಬ್ಬಳ್ಳಿ:- ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಅದೂ ಶೇ.40 ರಷ್ಟು ಮಾತ್ರ ನಿರ್ಮಾಣ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಸುಪ್ರೀಂಕೋರ್ಟ್​ ಸೂಚಿಸಿದ ಜಾಗದಲ್ಲಿ ಮಂದಿರ ಕಟ್ಟಿಲ್ಲ ಎಂದರು. ದೇಶದಲ್ಲಿ ಹತ್ತು ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ ಎಂದು ಹೇಳಿದ ಸಂತೋಷ್ ಲಾಡ್, ರಾಮ ಮಂದಿರದ ಹೆಸರಿನಲ್ಲಿ ಯಾಕೆ ಮತ ಕೇಳುತ್ತೀರಿ ಎಂದು ಪ್ರಶ್ನಿಸಿದರು. ಅಲ್ಲದೆ, ಕಳೆದ 10 ವರ್ಷದಲ್ಲಿ ಮೋದಿ ಸರ್ಕಾರ ಏನು ಕೆಲಸ ಮಾಡಿದೆ? ಪೆಟ್ರೋಲ್​​, ಡೀಸೆಲ್, ಅಗತ್ಯ ವಸ್ತುಗಳ ದರ ಕಡಿಮೆ ಆಗಿದೆಯಾ? ಬಡವರಿಗೆ ಅನುಕೂಲವಾಗುವ ಒಂದು ಕಾರ್ಯಕ್ರಮ ಮಾಡಿಲ್ಲ. ದೇಶ ಹಳ್ಳ ಹಿಡಿದು ಹೋಗಿದೆ ಎಂದರು. ಅಧಿಕಾರ ಇದೆ ಎಂದು ದುರುಪಯೋಗ ಮಾಡಬಾರದು. ನೀವ ಪ್ರಭಾವಿಯಾಗಿದ್ದರೆ ಟಿವಿ ಆಫ್ ಮಾಡಿ ಬನ್ನಿ. ರಾಮ ರಹೀಮ್, ಪಾಕಿಸ್ತಾನ…

Read More

ಮನೆಯಲ್ಲಿ ಕೆಲ ವಸ್ತುಗಳಿದ್ದರೆ, ಅದನ್ನು ಬಿಸಾಕಿಬಿಡಿ. ಹಾಗಾದ್ರೆ ಯಾವ ವಸ್ತುಗಳನ್ನು ಮನೆಯಿಂದ ಆಚೆ ಎಸೆಯಬೇಕು ಅಂತಾ ತಿಳಿಯೋಣ ಬನ್ನಿ.. ಹರಿದಿರುವ ಚಪ್ಪಲಿ. ನಿಮ್ಮ ಮನೆಯಲ್ಲಿ ಹರಿದಿರುವ ಚಪ್ಪಲಿ ಇದ್ದರೆ, ಅದನ್ನು ನೀವು ಬಳಸದೇ ಇದ್ದರೆ, ಅಂಥ ಚಪ್ಪಲಿಯನ್ನು ಬಿಸಾಕಿಬಿಡಿ. ಇಂಥ ವಸ್ತು ಮನೆಯಲ್ಲಿದ್ದರೆ, ಆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿರುವುದಿಲ್ಲ. ಹಳೆಯ ಕ್ಯಾಲೆಂಡರ್. ಹಳೆಯ ಕ್ಯಾಲೆಂಡರ್‌ಗಳು ಮನೆಯಲ್ಲಿರುವುದು ಅಷ್ಟು ಉಚಿತವಲ್ಲ. ಇದರೊಂದಿಗೆ ರದ್ದಿ ಪೇಪರ್ ಇದ್ದರೂ ಕೂಡ ಅದನ್ನ ಆಚೆ ಹಾಕಿ. ಇಂಥವುಗಳಿಗೆ ಧೂಳು ಹಿಡಿದಿರುತ್ತದೆ. ಇದೇ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಕ್ಕೆ ಕಾರಣವಾಗುತ್ತದೆ. ಒಡೆದ ಗಡಿಯಾರ. ಒಡೆದ ಗಡಿಯಾರ ಅಥವಾ ಎಂದಿಗೂ ಸರಿಯಾಗದೇ ಇರುವ ಗಡಿಯಾರ, ವಾಚ್ ಇದ್ದರೆ, ಅದನ್ನು ಮೊದಲು ಮನೆಯಿಂದ ಆಚೆ ಬಿಸಾಕಿ. ಇಂಥ ವಸ್ತುಗಳು ನಿಮ್ಮ ಸಮಯವನ್ನು ಹಾಳು ಮಾಡುತ್ತದೆ. ನಿಮಗೆ ಉತ್ತಮ ಸಮಯ ಬಂದಾಗ, ವಾಚುಗಳು ಹಾಳಾಗುತ್ತದೆ. ಗಡಿಯಾರಗಳು ಮುರಿದು ಹೋಗುತ್ತದೆ. ಆದರೂ ನೀವು ಅದೇ ವಾಚ್ ಬೇಕೆಂದು ಬಳಸಿದರೆ,…

Read More

ರಾಜ್‌ಕೋಟ್‌: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಅಮೋಘ ದ್ವಿಶತಕ ಮತ್ತು ಜಡೇಜಾ ಸ್ಪಿನ್‌ ದಾಳಿ (5 ವಿಕೆಟ್‌ ನೆರವಿನಿಂದ ಭಾರತ ತಂಡ 434 ರನ್‌ಗಳಿಂದ ಗೆದ್ದು ಬೀಗಿದೆ. ಆ ಮೂಲಕ 5 ಟೆಸ್ಟ್‌ ಸರಣಿಯ ಕೈವಶ ಮಾಡಿಕೊಳ್ಳಲು ಇನ್ನೊಂದು ಹೆಜ್ಜೆ ಬಾಕಿ ಇದೆ. ಟೀಂ ಇಂಡಿಯಾ ನೀಡಿದ್ದ 557 ರನ್‌ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 122ಕ್ಕೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲನುಭವಿಸಿತು. 5 ಟೆಸ್ಟ್‌ ಸರಣಿಯಲ್ಲಿ ಈಗ ಭಾರತ 2 ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್‌ ಒಂದು ಪಂದ್ಯ ಗೆದ್ದಿದೆ. 557 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ಗೆ ಆಧಾರವಾಗಿ ಯಾರೂ ನಿಲ್ಲಲೇ ಇಲ್ಲ. ತಂಡದ ಮೊತ್ತ 28 ರನ್ ಆದಾಗ ಇಂಗ್ಲೆಂಡ್ ಆಗಲೇ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 153 ರನ್‌ಗಳ ಸ್ಫೋಟಕ ಆಟವಾಡಿದ್ದ ಆರಂಭಿಕ ಆಟಗಾರ ಬೆನ್ ಡಕೆಟ್ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 4 ರನ್ ಗಳಿಸಿ ಔಟಾದರು. https://ainlivenews.com/if-you-ask-for-profit-from-papaya-fruit-seed-you-dont-throw-it-away/…

Read More

ಬೆಂಗಳೂರು: ಅವ್ರಿಬ್ರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದವ್ರು.ಸುಖ ಸಂಸಾರದಲ್ಲಿ ಅನುಮಾನವೆಂಬ ಭೂತ ವಕ್ಕರಿಸಿತ್ತು.ಅಲ್ಲಿಂದ ಸಂಸಾರ ಹಳಿ ತಪ್ಪಿತ್ತು.ಅನಾರೋಗ್ಯದಿಂದ ಬಳಲ್ತಿದ್ದ ಗಂಡನಿಗೆ ಹೆಂಡತಿ‌ ಮೇಲೆ ಸದಾ ಅನುಮಾನ.ಅದೇ ಈಗ ಜೈಲು ಪಾಲಾಗುವಂತೆ ಮಾಡಿದೆ..ತಂಗಿಯ ಎಂಗೆಜ್ಮೆಂಟ್ ಗೆ ಬರ್ಲಿಲ್ಲ ಅಂತಾ ಪತಿ ಪತ್ನಿಯನ್ನ ಏನು ಮಾಡಿದಾ ಗೊತ್ತಾ? ಅದನ್ನೇ ತೋರಿಸ್ತೀವಿ ನೋಡಿ. ಈ ಫೋಟೊದಲ್ಲಿ ಕಾಣ್ತಿರೊ ಆಸಾಮಿ ಹೆಸರು ಜಯಪ್ರಕಾಶ್.ಅನಾರೋಗ್ಯದಿಂದ ಬಳಲ್ತಿರೊ ಈತ ಕೆಲಸ ಕಾರ್ಯ ಇಲ್ಲದೆ ಮನೆಯಲ್ಲೆ ಕೂತಿದ್ದ.ಪ್ರೀತಿಸಿ ಮದುವೆ ಆದ ಕಾರಣಕ್ಕೆ ಇಡೀ ಸಂಸಾರದ ಹೊಣೆಯನ್ನ ಪತ್ನಿಯೇ ಹೊತ್ತಿದ್ದಳು.ಇಷ್ಟಾಕ್ಕಾದ್ರು ಕೃತಜ್ಙನೆಯಿಂದ ಇರದ ಈತ ತಾಳಿ ಕಟ್ಟಿದ ಪತ್ನಿಯನ್ನೆ ಚಾಕುವಿನಿಂದ ಇರಿದಿದ್ದಾನೆ ಹೌದು…32 ವರ್ಷದ ಜಯಪ್ರಕಾಶ್ ಹಾಗೂ 26 ವರ್ಷದ ದಿವ್ಯಶ್ರೀ ಪರಸ್ಪರ ಪ್ರೀತಿಸಿ 2019 ರಲ್ಲಿ ದಾವಣಗೆರೆಯ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ರು. ಇವ್ರ ಮದುವೆಗೆ ಕುಟುಂಬಸ್ಥರ ವಿರೋಧವಿತ್ತು ಹಾಗಾಗಿ ಒಳ್ಳೆ ಜೀವನ ಮಾಡಿ ಬದುಕಲ್ಲಿ ಏನನ್ನಾದರು ಸಾಧಿಸಬೇಕು ಅಂತಾ ಕ್ಯಾಟರಿಂಗ್ ಬ್ಯುಸಿನೆಸ್ ಶುರು ಮಾಡಿದ್ರು..ಆದ್ರೆ ವಿಧಿಯಾಟ ಬೇರೆ ಆಗಿತ್ತು.ಜಯಪ್ರಕಾಶ್ ಕಳೆದ ಮೂರು ವರ್ಷದಿಂದ…

Read More

ಉಪೇಂದ್ರ ಅಭಿಮಾನಿಯೊಬ್ಬ ನಟಿಸುತ್ತಿರುವ ಹಾಸ್ಯಪ್ರಧಾನ ಕಥಾಹಂದರ ಹೊಂದಿರುವ ಚಿತ್ರ “ನಾನೇ ಹೀರೋ”. ಆರ್.ಕೆ.ಗಾಂಧಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಬೃಂದ ವಿದ್ಯಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಹಗದೂರು ಅಶೋಕ್ ರೆಡ್ಡಿ, ಮುತ್ಸಂದ್ರ ವೆಂಕಟರಾಮಯ್ಯ, ಸತ್ಯವಾನಾಗೇಶ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಚಿಂತಾಮಣಿ ತಾಲ್ಲೂಕಿನ ನಲ್ಲಗುಟ್ಲಪಲ್ಲಿ ಸಪ್ತಮಾತೃಕೆಯರ ಸನ್ನಿಧಾನದಲ್ಲಿ ಇತ್ತೀಚೆಗೆ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಹಿರಿಯ ನಿರ್ಮಾಪಕ ಚಿಂತಾಮಣಿಯ ಬಿ. ಎನ್. ಎಸ್ .ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಚೌಡದೇವನಹಳ್ಳಿಯ ಲಕ್ಷ್ಮಿನಾರಾಯಣ ರೆಡ್ಡಿ ಅವರು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಉಪ್ಪಿ ಅಭಿಮಾನಿಯೊಬ್ಬ ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಹೊರಟು, ಅದಕ್ಕಾಗಿ ಆತ ಏನೇನೆಲ್ಲಾ ಸಾಹಸ ಮಾಡುತ್ತಾನೆ ಎಂಬ ಕಥಾಹಂದರ ಈ ಚಿತ್ರದಲ್ಲಿದೆ. ನಿಮಗೇನ್ ಪ್ರಾಬ್ಲಮ್ಮು ಅನ್ನೋ ಟ್ಯಾಗ್ ಲೈನ್ ಇದಕ್ಕಿದೆ. ಸಿನಿಮಾ ಇಂಡಸ್ಟ್ರಿ ಅಂದರೆ ಕೆಲವರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಆ ಭಯಕ್ಕೆ ಕಾರಣಗಳೇನು ಎಂಬುದನ್ನು ಈ ಚಿತ್ರದ ಮೂಲಕ ನಿರ್ದೇಶಕ ಆರ್.ಕೆ. ಗಾಂಧಿ ಅವರು ಹೇಳುತ್ತಿದ್ದಾರೆ. ಈ.…

Read More

ಬೆಂಗಳೂರು: ರಾಜರಾಜೇಶ್ವರಿ ನಗರದ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ನ ಜನಸ್ಪಂದನ  ಕಾರ್ಯಕ್ರಮವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌  ಮತ್ತು ಬಿಜೆಪಿ  ಶಾಸಕ ಮುನಿರತ್ನ  ನಡುವಿನ ಇರಿಸುಮುರಿಸಿಗೂ ಸಹ ವೇದಿಕೆಯಾಯಿತು. ಇಬ್ಬರೂ ವೇದಿಕೆ ಹಂಚಿಕೊಂಡಿದ್ದರೂ ಸಹ, ಮುನಿರತ್ನ ಮಾತನಾಡಲು ಯತ್ನಿಸಿದರೂ ಸಹ ಡಿಕೆಶಿ ಮುಖ ತಿರುಗಿಸಿಕೊಂಡು ಕುಳಿತಿದ್ದು ಕಾರ್ಯಕ್ರಮವಿಡೀ ಸಾಮಾನ್ಯ ದೃಶ್ಯವಾಗಿತ್ತು. ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೆಲ ತಿಂಗಳ ಹಿಂದಷ್ಟೇ ಮುನಿರತ್ನ ಅವರು ಡಿಕೆಶಿ ಅವರನ್ನು ಭೇಟಿಯಾಗಿ ಕಾಲಿಗೆ ಬಿದ್ದಿದ್ದರು. ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರುವ ಮೂಲಕ ಮೈತ್ರಿ ಸರ್ಕಾರದ ಅಂತ್ಯಕ್ಕೆ ಕಾರಣವಾಗಿದ್ದ ಶಾಸಕರ ಪೈಕಿ ಮುನಿರತ್ನ ಮುಂಚೂಣಿಯಲ್ಲಿದ್ದರು. ಇದೇ ಕಾರಣಕ್ಕಾಗಿ ಇಬ್ಬರ ನಡುವೆ ಶೀತಲ ಸಮರವೂ ನಡೆಯುತ್ತಿತ್ತು. https://ainlivenews.com/if-you-ask-for-profit-from-papaya-fruit-seed-you-dont-throw-it-away/ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಭದ್ರ ಮತಕ್ಷೇತ್ರ ಆರ್‌ಆರ್‌ ನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಎದುರು ಪ್ರಯಾಸದ ಗೆಲುವು ಸಾಧಿಸಿದ್ದರು. ಕ್ಷೇತ್ರದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ 200 ಕೋಟಿ ರೂ. ಗಳಿಗೂ ಹೆಚ್ಚು ಅವ್ಯವಹಾರ ನಡೆದಿದೆಯೆಂಬ…

Read More