Author: AIN Author

ಬೆಂಗಳೂರು:- ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಡೇಟ್ ಫಿಕ್ಸ್ ಆಗಿದ್ದು, ಏಪ್ರಿಲ್ 15 ರಿಂದ ಏಪ್ರಿಲ್ 23ರವರೆಗೆ ನಡೆಯಲಿದೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಜ್ಞಾನೇಂದ್ರ ಅವರು 14ನೇ ಬಾರಿ ಬೆಂಗಳೂರು ಕರಗ ಹೊರುತ್ತಿದ್ದಾರೆ. ನಿನ್ನೆ (ಫೆ.18) ನಡೆದ ಸಭೆಯಲ್ಲಿ ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆ ಎ.ಜ್ಞಾನೇಂದ್ರ ಸ್ವಾಮಿ ಅವರನ್ನು ಕರಗ ಹೊರಲು ಆಯ್ಕೆ ಮಾಡಿದೆ. ಕಳೆದ ವರ್ಷ ಕರಗ ಶಕ್ತ್ಯೋತ್ಸವ ನಡೆಯುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕರಗದ ಪೂಜಾರಿ ಎ. ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿ ಕರಗಕ್ಕೆ ಅಡ್ಡಿಪಡಿಸಲು ಮುಂದಾಗಿದ್ರು, ಆದರೂ ಕರಗದ ಪೂಜಾರಿ ಎ.ಜ್ಞಾನೇಂದ್ರ ಅವರು ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿ ಉತ್ಸವ ಮುಗಿಸಿ ಧರ್ಮರಾಯ ಸ್ವಾಮಿ ದೇವಾಲಯ ತಲುಪಿಸಿದ್ದರು. ಕರಗ ಎಂಬ ಹೆಸರು ಹೂವಿನ ದಿಂಡು ಮತ್ತು ದೇವಿಯ ವಿಗ್ರಹವನ್ನು ಹೊಂದಿರುವ ಕಲಶದ ಅನುರೂಪ. ಕರಗವನ್ನು ಮುಟ್ಟದೆ ಅಂದರೆ ಹೂವಿನ ದಿಂಡಿನಿಂದ ಅಲಂಕೃತಗೊಂಡ ಮಣ್ಣಿನ ಮಡಿಕೆ…

Read More

ಉತ್ತರ ಪ್ರದೇಶ:- ಇಲ್ಲಿನ ಗಾಜಿಯಾಬಾದ್​ನಲ್ಲಿ ಪೊಲೀಸ್​ ವಾಹನವನ್ನು ಬಳಕೆ ಮಾಡಿಕೊಂಡು ರೀಲ್ಸ್​ ಮಾಡಿದ ಯುವಕನನ್ನು ಅರೆಸ್ಟ್ ಮಾಡಲಾಗಿದೆ. ಇಂದಿರಾಪುರಂ ಪ್ರದೇಶದಲ್ಲಿ ಅಧಿಕಾರಿಗಳು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾಗ ಮೊಯಿನ್ ಖಾನ್ ಪೊಲೀಸ್ ವಾಹನ ಬಳಸಿ ವಿಡಿಯೋ ಮಾಡಿದ್ದಾರೆ. ಯುವಕ ವಾಹನದ ಚಾಲಕನ ಸೀಟಿನಿಂದ ಹೊರಬರುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಹಿನ್ನೆಲೆಯಲ್ಲಿ ಸಂಗೀತವು ಪ್ಲೇ ಆಗುತ್ತಿರುತ್ತದೆ. ಫೆಬ್ರವರಿ 15 ರಂದು ಪೋಸ್ಟ್ ಮಾಡಲಾದ ವೈರಲ್ ರೀಲ್‌ನ ಎರಡನೇ ಭಾಗವು ಕೈಯಲ್ಲಿ ತಂಪು ಪಾನೀಯದೊಂದಿಗೆ ಮಹೀಂದ್ರಾ ಬೊಲೆರೊದ ಪಕ್ಕದ ಮೆಟ್ಟಿಲಿನಿಂದ ಕೆಳಗೆ ಬರುತ್ತಿರುವುದನ್ನು ಕಾಣಬಹುದು. ಅಧಿಕಾರಿಗಳ ಪ್ರಕಾರ, ಇಂದಿರಾಪುರಂನ ಕಣವಾಣಿ ಸೇತುವೆಯ ಬಳಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ತೊಡಗಿದ್ದಾಗ, ಖಾಲಿ ಪೊಲೀಸ್ ವಾಹನವನ್ನು ಗಮನಿಸಿದ ಯುವಕರು ಅದನ್ನು ಬಳಸಿ ರೀಲ್ ಮಾಡಲು ನಿರ್ಧರಿಸಿದರು. ವಿಡಿಯೋ ವ್ಯಾಪಕ ಗಮನ ಸೆಳೆದ ನಂತರ ಅಧಿಕಾರಿಗಳು ಕ್ರಮ ಕೈಗೊಂಡು ವ್ಯಕ್ತಿಯನ್ನು ಬಂಧಿಸಿದ್ದಾರೆ.

Read More

ಯಶಸ್ವಿ ಜೈಸ್ವಾಲ್ ಅವರು ಕಿಂಗ್ ಕೊಹ್ಲಿಯ ದಾಖಲೆಯನ್ನೇ ಸರಿಗಟ್ಟಿದ್ದಾರೆ. ರಾಜ್​ಕೋಟ್​ನಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ರಾಜನಾಗಿ ಮೆರೆದಿದ್ದಾರೆ. ನಿರಂಜನ್ ಶಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 3ನೇ ಟೆಸ್ಟ್​ನಲ್ಲಿ ಯಶಸ್ವಿ ಡಬಲ್ ಸೆಂಚುರಿ ಸಿಡಿಸುವ ಮೂಲಕ ಜೈಸ್ವಾಲ್ ಅಪರೂಪದ ದಾಖಲೆಯನ್ನೂ ಕೂಡ ಬರೆದಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಬಹು ಅಪರೂಪದ ರೆಕಾರ್ಡ್​ ಅನ್ನು ಸರಿಗಟ್ಟುವ ಮೂಲಕ ಎಂಬುದೇ ವಿಶೇಷ. ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಯಶಸ್ವಿ ಜೈಸ್ವಾಲ್ 236 ಎಸೆತಗಳಲ್ಲಿ 12 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ ಅಜೇಯ 214 ರನ್​ ಬಾರಿಸಿದರು. ಇದರೊಂದಿಗೆ ಟೆಸ್ಟ್ ಸರಣಿಯೊಂದರಲ್ಲಿ ಟೀಮ್ ಇಂಡಿಯಾ ಪರ ಬ್ಯಾಕ್ ಟು ಬ್ಯಾಕ್ ಡಬಲ್ ಸೆಂಚುರಿ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡರು. ಈ ಮೂಲಕ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟಿದರು. ಕಿಂಗ್ ಕೊಹ್ಲಿ 2017 ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ…

Read More

ಮೈಸೂರು:- ಸರ್ಕಾರಿ ದಾಖಲೆಗಳನ್ನು ತಿದ್ದಿ ಅಕ್ರಮ ಎಸಗಿದ ಹಿನ್ನೆಲೆ, ಪೌರಾಯುಕ್ತ, ಕಂದಾಯ ಸಿಬ್ಬಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಸರ್ಕಾರಿ ದಾಖಲೆಗಳನ್ನು ) ತಿದ್ದಿ ಕೆಲವು ಕಡತಗಳನ್ನು ನಾಪತ್ತೆ ಮಾಡಲಾಗಿದೆ. ನಿವೇಶನಗಳ ಖಾತೆ ಮಾಡುವ ವೇಳೆ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಲಾಗಿದೆ. ಈ ಹಿನ್ನೆಲೆ ಇಬ್ಬರು ಅಧಿಕಾರಿಗಳ ವಿರುದ್ದ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಹಾಲಿ ಪೌರಾಯುಕ್ತ ನಂಜುಂಡಸ್ವಾಮಿ ದೂರು ಹಿನ್ನೆಲೆ ನಗರಸಭೆ ಹಿಂದಿನ ಪೌರಾಯುಕ್ತ ಎಂ.ರಾಜಣ್ಣ ಹಾಗೂ ವಿಷಯ ನಿರ್ವಾಹಕ ಡಿ.ಎನ್.ನರಸಿಂಹಮೂರ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಂಜನಗೂಡು ತಾಲೂಕು ದೇಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭಾರೀ ಅಕ್ರಮ ನಡೆದಿದೆ. ದೇವೀರಮ್ಮನಹಳ್ಳಿ ಸರ್ವೆ ನಂ 58,59 ರ ವಿಸ್ತೀರ್ಣ 3.16 ಬಿ.ಬಸಪ್ಪ ಎಂಬುವರಿಗೆ ಸೇರಿದೆ. ಕೈಗಾರಿಕಾ ಉದ್ದೇಶಕ್ಕಾಗಿ ಉಪವಿಭಾಗಾಧಿಕಾರಿಗಳು ಅನ್ಯಕ್ರಾಂತ ಮಂಜೂರು ಮಾಡಿದ್ದಾರೆ. ನಂತರ ವಸತಿ ಬಡಾವಣೆ ನಿರ್ಮಿಸಲು ಬದಲಾವಣೆ ಸಹ ಆದೇಶ ಮಾಡಿದ್ದಾರೆ. ವಸತಿ ಮನೆ ನಿರ್ಮಿಸಬೇಕಿದ್ದಲ್ಲಿ ಮೈಸೂರು-ನಂಜನಗೂಡು ಯೋಜನಾ ಪ್ರಾಧಿಕಾರದಿಂದ ಅಧಿಕೃತ ಬಡಾವಣೆ…

Read More

ಬೆಂಗಳೂರು:- ಕೆ.ಆರ್.ಪುರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಪ್ರತಿಷ್ಠಿತ ಹೋಟೆಲ್​​ಗಳಲ್ಲಿ ಹಣ ಕದಿಯುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಆರ್ಥಿಕ ಸಂಕಷ್ಟದ ನೆಪವೊಡ್ಡಿ ಸಿಂಪತಿ ಗಿಟ್ಟಿಸಿ ಹೋಟೆಲ್​ನಲ್ಲಿ ಕೆಲಸ ಪಡೆಯುತ್ತಿದ್ದ. ಬಳಿಕ ಹೋಟೆಲ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಲೇ ಹೊಂಚುಹಾಕಿ ಹಣ ಎಗರಿಸ್ತಿದ್ದ. ರವಿಕುಮಾರ್ ಬಂಧಿತ ಆರೋಪಿ, ಕಳೆದ ವರ್ಷ ಫೆ.19ರಂದು ಕೆ.ಆರ್.ಪುರದ ಭಟ್ಟರಹಳ್ಳಿಯ ಹೋಟೆಲ್​​​​​​ನಲ್ಲಿ ಹಣ ಕಳವು ಮಾಡಿದ್ದ. ಹೋಟೆಲ್​​​​​​​​ನ ಕ್ಯಾಷ್​​​ಕೌಂಟರ್​​​​ನಲ್ಲಿದ್ದ 1 ಲಕ್ಷ ಹಣ ಕದ್ದಿದ್ದ. ಸತೀಶ್​ ಶೆಟ್ಟಿ ಎಂಬುವರ ಹೋಟೆಲ್​​ನಲ್ಲಿ ಹಣ ಕದ್ದು ಪರಾರಿಯಾಗಿದ್ದ. ಇದಾದ ಬಳಿಕ ಇತ್ತೀಚೆಗೆ ದೇವನಹಳ್ಳಿ ಬಳಿ ಹೋಟೆಲ್​ನಲ್ಲಿ ಕೆಲಸ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ​​ಹಣ ಕಳೆದುಕೊಂಡಿದ್ದ ಮಾಲೀಕ ಸತೀಶ್ ಶೆಟ್ಟಿಯಿಂದಲೇ ಆರೋಪಿ ಲಾಕ್ ಆಗಿದ್ದಾನೆ. ಸತೀಶ್ ಶೆಟ್ಟಿ ಅವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು. ಪ್ರತಿಷ್ಠಿತ ಹೋಟೆಲ್​​ ಗುರಿಯಾಗಿಸಿಕೊಂಡು ಹಣ ಎಗರಿಸುತ್ತಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ಇನ್ನು ಆರೋಪಿ ಹಣ ಎಗರಿಸುವ ದೃಶ್ಯ ಸಿಸಿ…

Read More

ಮಂಗಳೂರು: ನರೇಂದ್ರ ಮೋದಿ ಪ್ರಧಾನಿಯಾದರೆ ದೇಶಬಿಟ್ಟು ಹೋಗುತ್ತೇನೆ ಎಂದು ದೇವೇಗೌಡರು ಹೇಳಿದ್ದರು ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದೇಕೆ? ಎಂದು ಪ್ರಶ್ನಿಸಿದರು. ಈ ಹಿಂದೆ ದೇವೇಗೌಡರು, ಮೋದಿ ಪ್ರಧಾನಮಂತ್ರಿಯಾದರೆ ದೇಶಬಿಟ್ಟು ಹೋಗುತ್ತೇವೆ ಎಂದಿದ್ದರು. ಅದಕ್ಕೆ ಮೋದಿ ಅವರು ನಮ್ಮ ಮನೆಗೆ ಬನ್ನಿ ಜಾಗ ಕೊಡುತ್ತೇನೆ ಎಂದಿದ್ದರು. ಆದರೆ ಇಂದು ದೇವೇಗೌಡರು, ನಾನೇ ನನ್ನ ಮಗನನ್ನು ಬಿಜೆಪಿ ಜತೆ ಹೋಗಲು ಹೇಳಿದ್ದೇನೆ ಎನ್ನುತ್ತಿದ್ದಾರೆ ಎಂದರು. https://ainlivenews.com/do-not-close-the-washing-machine-immediately-after-washing-clothes/ ರಾಜಕಾರಣದಲ್ಲಿ ಯಾರು ಯಾವುದೇ ನಿರ್ಧಾರ ಮಾಡಿಕೊಳ್ಳಲಿ. ಯಾರೇ ಒಂದಾಗಲಿ, ನಾವು ಚಿಂತೆ ಮಾಡುವುದು ಬೇಡ. ನಮ್ಮ ಸಿದ್ಧಾಂತ, ನಂಬಿಕೆ, ತತ್ವ, ನೀತಿ ಮೇಲೆ ಕೆಲಸ ಮಾಡೋಣ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಎಲ್ಲಾ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕಾಂಗ್ರೆಸ್ ಸಿದ್ಧಾಂತ ನಾವು ಉಳಿಸಿಕೊಳ್ಳಬೇಕು ಎಂದು ಹೇಳಿದರು.

Read More

ಧರ್ಮಸ್ಥಳ:- ಒಂದೇ ದಿನ ಮೂರು ಬೈಕ್ ಕಳ್ಳತನ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಮೊದಲ ಘಟನೆಯಲ್ಲಿ ಧರ್ಮಸ್ಥಳ ಗ್ರಾಮದ ನಿವಾಸಿ ಬೇಬಿ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಬೇಬಿ ಅವರು ಬೆಳಗ್ಗೆ ಎದ್ದು ನೋಡಿದಾಗ ಬೈಕ್ ನಿಲ್ಲಿಸಿದ್ದ ಸ್ಥಳದಿಂದ ಬೈಕ್ ಕಾಣೆಯಾಗಿತ್ತು. ಎರಡನೇ ಘಟನೆಯಲ್ಲಿ, ಸುಳ್ಯದ ನಿವಾಸಿ ಅಖಿಲೇಶ್ ಎಂಬುವರು ಬೈಕ್ ಕಳೆದುಕೊಂಡಿದ್ದಾರೆ. ಧರ್ಮಸ್ಥಳದ ಗಡಿಭಾಗದ ಕಲ್ಮಂಜ ಗ್ರಾಮದ ಮದ್ಮಾಳ್​ ಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಸಂಬಂಧಿಕರ ಮನೆ ಬಳಿ ಬೈಕ್ ನಿಲ್ಲಿಸಿದ್ದರು. ಆದರೆ, ಬೆಳಗ್ಗೆ ಪರಿಶೀಲಿಸಿದಾಗ ಕಾಣೆಯಾಗಿದೆ. ಬೈಕಿನ ಮೌಲ್ಯ 65,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಮತ್ತೊಂದು ಘಟನೆಯಲ್ಲಿ ಕೊಪ್ಪಳದಿಂದ ಧರ್ಮಸ್ಥಳಕ್ಕೆ ಆಗಮಿಸಿದ್ದ ಯಾತ್ರಾರ್ಥಿ ಬಸವರಾಜ್ ಎಂಬುವರು ಬೈಕ್ ಕಳೆದುಕೊಂಡಿದ್ದಾರೆ. ಧರ್ಮಸ್ಥಳದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕಿಯೋಸ್ಕ್ ಬಳಿ ಬೈಕ್ ನಿಲ್ಲಿಸಿ ಪಕ್ಕದಲ್ಲೇ ಮಲಗಿದ್ದರು. ಆದರೆ, ಬೆಳಗ್ಗೆ ಎದ್ದು ನೋಡಿದಾಗ ಬೈಕ್ ಕಳ್ಳತನವಾಗಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ.…

Read More

ಬೆಂಗಳೂರು :- ಹೆಬ್ಬಾಳ ಬಳಿಕ ಯಶವಂತಪುರ, ಗೊರಗುಂಟೆಪಾಳ್ಯದಲ್ಲಿ ಸುರಂಗ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗ್ತಾ ಇದೆ. ಟ್ರಾಫಿಕ್ ಕಡಿಮೆ ಮಾಡಲು ಸರ್ಕಾರ ನಾನಾ ಯೋಜನೆ, ಕಾಮಗಾರಿಗಳನ್ನ ಮಾಡ್ತಾ ಇದೆ. ಅದರಲ್ಲೂ ಇತ್ತಿಚೆಗೆ ಚರ್ಚೆಗೆ ಇರುವ ವಿಚಾರ ಅಂದರೆ ಅದು ಹೆಬ್ಬಾಳದ ಬಳಿ ಎರಡೂವರೆ ಸಾವಿರ ಕೋಟಿ ವೆಚ್ಚದಲ್ಲಿ ಟನಲ್ ನಿರ್ಮಾಣ. ಅದರ ಜೊತೆಗೆ ಈಗ ಯಶವಂತಪುರ, ಗೊರುಗುಂಟೆ ಪಾಳ್ಯದಲ್ಲಿ ಟನಲ್ ನಿರ್ಮಿಸಲು ಪೀಸಿಬಲ್ ವರದಿ ಸಿದ್ದಪಡಿಸಲಾಗ್ತಿದ್ಯಂತೆ. ಗೊರಗುಂಟೆ ಪಾಳ್ಯದ ಬಳಿ ಮೆಟ್ರೋ ಹಾದು ಹೊಗಿರುವ ಕಾರಣ ಟನಲ್ ನಿರ್ಮಾಣ ಮಾಡಬೇಕಾ ಅಥವಾ ಫ್ಲೈಓವರ್ ಮಾಡಬೇಕಾ ಎಂಬ ಚರ್ಚೆ ನಡೀತಿದೆ. ಸುಮನಹಳ್ಳಿ ವರೆಗೂ ಕೂಡ ಡಬಲ್ ರಸ್ತೆ ಸೇರಿದಂತೆ ನಾನಾ ರೀತಿಯಲ್ಲಿ ಆಲೋಚನೆ ನಡೆಯುತ್ತಾ ಇದೆ. ಆದರೆ ಯಶವಂತಪುರ ಮತ್ತು ಗೊರಗುಂಟೆ ಪಾಳ್ಯದಲ್ಲಿ ಟ್ರಾಫಿಕ್ ಜಾಸ್ತಿ ಆಗ್ತಿದ್ದು ಟ್ರಾಫಿಕ್ ಮುಕ್ತಿಗೆ ಬೇರೆ ಮಾರ್ಗ ಕಂಡುಕೊಳ್ಳಬೇಕಿದೆ. ಗೊರಗುಂಟೆ ಪಾಳ್ಯ ಮತ್ತು ಯಶವಂತಪುರದಲ್ಲಿ ಟನಲ್ ನಿರ್ಮಾಣ ಚರ್ಚಾ ಹಂತದಲ್ಲಿದ್ದು, ಎಷ್ಟು…

Read More

ಹಾವೇರಿ:- ರೈತರ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಎಂದು ಹೇಳಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಕೊಡುವುದು ಸಮಸ್ಯೆಯಾಗುತ್ತಿದೆ ಎಂದು ರೈತರು ಅರ್ಜಿ ಸಲ್ಲಿಸಿದ್ದಾರೆ. ಎಫ್‍ಐಆರ್ ಮೇಲೆ ಪರಿಹಾರ ಕೊಡುವ ವ್ಯವಸ್ಥೆ ಮಾಡುವಂತೆ ರೈತ ಸಂಘ ಮನವಿ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮೂರು ತಿಂಗಳಲ್ಲೇ ದಾಖಲೆ ಒದಗಿಸಿ ಕೊಡಲು ಆಗಲ್ಲ, ಪೊಲೀಸರಿಗೆ ಈ ಬಗ್ಗೆ ಹೇಳುತ್ತೇನೆ. ನಾನು ರೈತ, ರೈತರ ಪರವಾಗಿ ಇದ್ದವನು. ರೈತ ಸಂಘದಲ್ಲಿ ಇದ್ದವನು. ರೈತರ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಎಂದು ಹೇಳಲು ಆಗಲ್ಲ. ಬಜೆಟ್ ಮೇಲೆ ರೈತರ ಪರವಾಗಿ ಏನು ಮಾಡಬೇಕೋ ಮಾಡುತ್ತೇನೆ. ಹೊಸ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕೊಡಲು ಅಧಿಕಾರಿಗಳಿಗೆ ಹೇಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇನ್ನೂ ನಮ್ಮ ವಿರೋಧಿಗಳು ಐದು ಗ್ಯಾರಂಟಿ ಘೋಷಣೆ ಮಾಡಿದಾಗ ರಾಜ್ಯ ದಿವಾಳಿ ಆಗುತ್ತದೆ ಎಂದಿದ್ದರು. ಈಗ ರಾಜ್ಯ ಸುಭದ್ರವಾಗಿದೆ. ಕಳೆದ ಭಾರಿ ಬಜೆಟ್‍ಗಿಂತ…

Read More

ಮಲಗುವ ಮುನ್ನ ಲವಂಗ ಹಾಕಿ ಕಾಯಿಸಿದ ನೀರನ್ನ ಕುಡಿಯುವುದರಿಂದ ಎಷ್ಟೆಲ್ಲ ಆರೋಗ್ಯಕರ ಲಾಭಗಳು ಅಂತ ನೋಡಿ . ಲವಂಗದಲ್ಲಿ ಹೆಚ್ಚು anti inflammatoŗy anti bactirial ಗುಣಗಳು ಹಾಗೂ ಮಿನರಲ್ಸ್‌ ಇರೋದ್ರಿಂದ ದೇಹಕ್ಕೆ ತಂಪನ್ನು ಶುಚಿಯಾಗಿ ಇಡುತ್ತದೆ. ಗಮನಿಸಿ: ಗೃಹಲಕ್ಷ್ಮಿಯೋಜನೆಯಫಲಾನುಭವಿಗಳಿಗೆಇನ್ನೂಹಣಬಂದಿಲ್ಲವೇ: ಈಕೂಡಲೇಈಕೆಲಸಮಾಡಿನೋಡಿ! ಹಾಗಾದ್ರೆ ಇಲ್ಲಿದೆ ನೋಡಿ ದೇಹಕ್ಕೆ ಆಗುವ ಪ್ರಯೋಜನಗಳು 1. ವೇಟ್ ಲಾಸ್ ಅಥವಾ ಬೆಲ್ಲಿ ಫ್ಯಾಟ್ ಲಾಸ್ಟ್ ಮಾಡೋಕೆ ಸಹಾಯ ಮಾಡುತ್ತೆ 2.ಜೀರ್ಣಕ್ರಿಯೆಗೆ ಒಳ್ಳೆಯದು , ಹಾಗೆ ಲಿವರ್ ಹೆಲ್ತ್ ಗೂ ಒಳ್ಳೆಯದು 3.ಬ್ಲಡ್ ಶುಗರ್ ಲೆವೆಲ್ ರೆಗ್ಯುಲೇಟ್ ಮಾಡುತ್ತೆ 4.ಮಲಬದ್ಧತೆ ಆಮ್ಲಿಯತೆ ,ಉರಿಮೂತ್ರ, ಗ್ಯಾಸ್ಟ್ರಿಕ್ ಇತರ ಹೊಟ್ಟೆಯ ಸಮಸ್ಯೆಗಳು ನಿವಾರಿಸಲು ಸಹಾಯ ಮಾಡುತ್ತದೆ 5.ದೇಹಕ್ಕೆ ಹಾನಿ ಉಂಟು ಮಾಡುವ ಫ್ರೀ ರಾಡಿಕಲ್ ಜೊತೆ ಹೋರಾಡಿ ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ ಮಾಡುತ್ತದೆ. 6.ಬಾಯಿಯ ದುರ್ವಾಸನೆ ಬರಲು ಕಾರಣವಾಗುವ ಬ್ಯಾಕ್ಟೀರಿಯಗಳು ನಾಶವಾಗುತ್ತವೆ ಇದರೊಂದಿಗೆ ನಾಲಿಗೆ ಮತ್ತು ಗಂಟಲಿನ ಮೇಲ್ಭಾಗ ಬ್ಯಾಕ್ಟೀರಿಯಾ ಸ್ವಚ್ಛಗೊಳಿಸಲು ಸಹಾಯ ಮಾಡುತ್ತ 7.ಲವಂಗ ನೀರು ಕುಡಿಯುವುದರಿಂದ ಹಲ್ಲು…

Read More