Author: AIN Author

ನವದೆಹಲಿ:- ಯುಪಿಎಸ್​ಸಿ ಪರೀಕ್ಷೆ ಅಷ್ಟು ಸುಲಭದ್ದಾಗಿಲ್ಲ. ಈ ಪರೀಕ್ಷೆಯನ್ನು ಪಾಸ್ ಮಾಡಲು ಅನೇಕ ವರ್ಷಗಳ ಸಮರ್ಪಿತ ಸಿದ್ಧತೆಯ ಅಗತ್ಯವಿರುತ್ತದೆ. ಪ್ರತಿ ವರ್ಷ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಇದರಲ್ಲಿ ಕೆಲವರು ಮಾತ್ರ ಈ ಕಠಿಣವಾದ ಪರೀಕ್ಷೆಯನ್ನು ಯಶಸ್ವಿಯಾಗಿ ಪಾಸ್ ಮಾಡುತ್ತಾರೆ. https://twitter.com/SmitaSabharwal/status/1755931103909515628?ref_src=twsrc%5Etfw%7Ctwcamp%5Etweetembed%7Ctwterm%5E1755931103909515628%7Ctwgr%5E7c81363931835ce1d32a7434574dde375432a32f%7Ctwcon%5Es1_c10&ref_url=http%3A%2F%2Fapi-news.dailyhunt.in%2F ಎಷ್ಟೋ ಜನ ಪ್ರತಿಭಾವಂತ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಒಂದೆರಡು ಪ್ರಯತ್ನಗಳಲ್ಲಿಯೇ ಪಾಸ್ ಮಾಡುತ್ತಾರೆ. ಹೀಗೆ ಒಬ್ಬ ಪ್ರತಿಭಾವಂತ ಐಎಎಸ್ ಅಧಿಕಾರಿಯೊಬ್ಬರ 12ನೇ ತರಗತಿಯ ಅಂಕಪಟ್ಟಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದ್ದು, ಈಗ ವೈರಲ್ ಸಹ ಆಗಿದೆ. ಇದನ್ನ ನೋಡಿದವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕಿರಿಯ ಐಎಎಸ್​ ಅಧಿಕಾರಿ ನಿವೃತ್ತ ಸೇನಾ ಕರ್ನಲ್ ಅವರ ಪುತ್ರಿ ಸ್ಮಿತಾ ಸಬರ್ವಾಲ್ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನವರು. ಸ್ಮಿತಾ ಐಎಎಸ್ ಪ್ರಿಲಿಮಿನರಿ ಪರೀಕ್ಷೆಯಲ್ಲೂ ತಮ್ಮ ಮೊದಲ ಪ್ರಯತ್ನದಲ್ಲಿ ಪಾಸ್​ ಮಾಡಲಾಗಿರಲಿಲ್ಲ. ಆದರೆ 2000ನೇ ಇಸವಿಯಲ್ಲಿ ಅವರ ಎರಡನೇ ಪ್ರಯತ್ನದಲ್ಲಿ, ಅವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲದೆ, 4ನೇ ಶ್ರೇಯಾಂಕ ಪಡೆದರು. ಆಗ…

Read More

ಸಾಂಪ್ರದಾಯಿಕವಾಗಿ ವಿವಾಹಗಳಲ್ಲಿ ವಧುವು ವರನ ಕಾಲಿಗೆ ಬಿದ್ದು ಆಶೀರ್ವಾದ ಪಡೆವ ಆಚರಣೆ ಇದೆ. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಮೊದಲೆಲ್ಲ ಪತಿಯು ಪತ್ನಿಗಿಂತ 10ಕ್ಕಿಂತ ಹೆಚ್ಚು ವರ್ಷ ದೊಡ್ಡವನಾಗಿರುತ್ತಿದ್ದನು. ಅಲ್ಲದೆ, ಪತ್ನಿಯ ಸಂಪೂರ್ಣ ಜವಾಬ್ದಾರಿ ಹೊರುತ್ತಿದ್ದನು. ಆರ್ಥಿಕವಾಗಿ ಆಕೆ ಸಂಪೂರ್ಣವಾಗಿ ಪತಿಯ ಮೇಲೆ ಅವಲಂಬಿತಳಾಗಿರುತ್ತಿದ್ದಳು. ಸಾಮಾನ್ಯವಾಗಿ ಗಂಡು ಹೆಚ್ಚು ಓದಿರುತ್ತಿದ್ದನು. ಅಂದರೆ, ಅವನ ತಿಳಿವಳಿಕೆ ಮಟ್ಟ ಹೆಚ್ಚಿರುತ್ತಿತ್ತು. ಈ ಎಲ್ಲ ಕಾರಣದಿಂದಾಗಿ ಗುರುವೂ ಹೌದು, ಹಿರಿಯನೂ ಹೌದು, ಸಲಹುವವನೂ ಹೌದು ಎಂಬ ಕಾರಣಕ್ಕಾಗಿ ಗಂಡಿನ ಕಾಲಿಗೆ ಹೆಣ್ಣು ನಮಸ್ಕರಿಸಿ ಆಶೀರ್ವಾದ ಬೇಡುತ್ತಿದ್ದಳು. ಆದರೆ ಕಾಲ ಬದಲಾಗಿದೆ. ಈಗ ಲಿಂಗ ಸಮಾನತೆ ಸೃಷ್ಟಿಯಾಗಿದೆ. ವಿವಾಹವಾಗುವ ಜೋಡಿಯಲ್ಲಿ ಹೆಣ್ಣಿನ ವಯಸ್ಸೇ ಹೆಚ್ಚಿದ್ದರೂ ಅದು ಅಚ್ಚರಿಯ ವಿಷಯವಾಗಿಲ್ಲ. ಸಾಮಾನ್ಯವಾಗಿ ಈಗಿನ ತಲೆಮಾರಿನವರು ಸಮಾನ ವಯಸ್ಕರನ್ನು ಮದುವೆಯಾಗಲು ಬಯಸುತ್ತಾರೆ. ಯೋಚನೆಗಳೂ ಸಮಾನವಾಗಿರುತ್ತವೆ ಎಂಬ ಕಾರಣಕ್ಕೆ. ಇನ್ನು ಶಿಕ್ಷಣದಲ್ಲಿ ಹೆಣ್ಣುಮಕ್ಕಳೂ ಹಿಂದೆ ಬಿದ್ದಿಲ್ಲ. ಪತಿಯಾಗುವವನಷ್ಟೇ ಓದಿರುತ್ತಾಳೆ. ಒಳ್ಳೆಯ ವೃತ್ತಿಯಲ್ಲಿದ್ದು ಒಳ್ಳೆಯ ಸಂಬಳವನ್ನೂ ಪಡೆಯುತ್ತಿರುತ್ತಾಳೆ. ಈ ಎಲ್ಲ ಕಾರಣದಿಂದ ಟ್ರೆಂಡ್…

Read More

ಮನೆಗೆ ಕರೆಯದೇ ಬರುವ ಅತಿಥಿಗಳು ಎಂದರೆ ಜಿರಳೆ ಹಾಗೂ ಸೊಳ್ಳೆಗಳು! ಯಾಕೆಂದ್ರೆ ಇವುಗಳು ಮನೆಯೊಳಗೆ ಬರದೇ ಇರುವ ಹಾಗೆ, ಎಷ್ಟೇ ಜಾಗರೂಕತೆ ಮಾಡಿದರೂ, ಯಾವುದೇ ಕ್ರಮ ಕೈಗೊಂಡರೂ ಕೂಡ, ಮನೆಗೆ ಎಡೆ ಬಿಡದೇ ಆಗಮಿಸಿಬಿಡುತ್ತವೆ. Health Benefit: ನೀರಿಗೆ ಲವಂಗ ಬೆರೆಸಿ ಕುಡಿಯುವುದರಿಂದ ಸಿಗುವ ಪ್ರಯೋಜನ ಕೇಳಿದ್ರೆ ಅಚ್ಚರಿ! ಕೆಲವೊಮ್ಮೆ ಈ ಜಿರಳೆಗಳನ್ನು ಓಡಿಸಲು, ಅಂಗಡಿಯಿಂದ ಲಕ್ಷ್ಮಣ ರೇಖೆ, ಜಿರಳೆ ಸ್ಪ್ರೇ ಇತ್ಯಾದಿ ರಾಸಾಯನಿಕ ಅಂಶ ಗಳು ಇರುವ ಮದ್ದನ್ನು ತಂದು, ಮನೆಯಲ್ಲಿ ಎಲ್ಲಾ ಕಡೆ ಸ್ಪ್ರೇ ಮಾಡುತ್ತೇವೆ. ಆದರೆ ಆದರೆ ಮಕ್ಕಳಿರುವ ಮನೆಯಲ್ಲಿ ಹೀಗೆ ಮಾಡುವುದು ಸರಿಯಿಲ್ಲ. ಆದರೆ ಇರವುಗಳ ಕಾಟ ತಡೆಯಲು ಕೆಲವೊಂದು ಮನೆಮದ್ದುಗಳು ಸರಿಯಾಗಿ ಕೆಲಸ ಮಾಡಬಲ್ಲವು! ಬೋರಿಕ್ ಆಸಿಡ್ ಜಿರಳೆಗಳನ್ನು ಕೆರಳಿಸಲು ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ. ಬೋರಿಕ್ ಆಸಿಡ್ ಅನ್ನು ಹೆಚ್ಚಿನ ದೈನಂದಿನ ಅಗತ್ಯ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಜಿರಳೆ ಸಂಪರ್ಕಕ್ಕೆ ಬರುವ ಮೂಲೆ ಮತ್ತು ಮೂಲೆಯಲ್ಲಿ ಸ್ವಲ್ಪ ಬೋರಿಕ್ ಆಮ್ಲದ…

Read More

ಮಾರುಕಟ್ಟೆಗೆ ಹೋದಾಗ ಅಥವಾ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಹೋದಾಗ, ಒಂದು ವಾರದ ವಸ್ತುಗಳನ್ನು ತರುತ್ತೀರಿ. ತಾಪಮಾನವು ಕಡಿಮೆಯಾದಾಗ, ಇದು ಹಲವಾರು ದಿನಗಳವರೆಗೆ ಇರುತ್ತದೆ, ಆದರೆ ಬೇಸಿಗೆಯಲ್ಲಿ, ತರಕಾರಿಗಳು ಮತ್ತು ಹಣ್ಣುಗಳನ್ನು ಸಂಗ್ರಹಿಸುವುದು ಕಷ್ಟ. ಏಕೆಂದರೆ ಅವು ಯಾವುದೇ ಸಮಯದಲ್ಲಿ ಕೊಳೆಯಲು ಪ್ರಾರಂಭಿಸುತ್ತದೆ. ಆದ್ದರಿಂದ ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸಿಕೊಳ್ಳುವುದು ಹೇಗೆ ತಿಳಿಯಿರಿ.  ಚೆನ್ನಾಗಿ ತೊಳೆಯಿರಿ ಸೊಪ್ಪುಗಳನ್ನು ತಂದಾಗ, ಅವುಗಳ ಬೇರಿಗೆ ಮಣ್ಣು ಅಂಟಿದ್ದರೆ, ಅದನ್ನು ತೊಳೆದು ಶುಚಿ ಮಾಡಿ. ನಂತರ ಆ ಸೊಪ್ಪಿನ ಕಂತೆ ಬಿಚ್ಚಿ ಅದನ್ನು ಯಥಾವತ್‌ ಒಂದು ಪಾತ್ರೆ ನೀರಿನಲ್ಲಿ, ಬೇರು ಮುಳುಗುವಂತೆ ಇಡಿ. ಎಲೆಗಳಿಗೆ ನೀರು ತಾಗುವುದು ಬೇಡ. ಹೀಗಿಟ್ಟರೆ ಒಂದೆರಡು ದಿನಗಳವರೆಗೂ ಸೊಪ್ಪುಗಳು ಅಗ್ದಿ ತಾಜಾ ಆಗಿರಬಲ್ಲವು. ಬೇರು ಇಲ್ಲದಿದ್ದರೆ, ಅವುಗಳನ್ನು ಸೋಸಿ, ನೀರಿದ್ದರೆ ಆರಿಸಿ, ಫ್ರಿಜ್‌ನಲ್ಲಿ ಇಡಬಹುದು. ಆದರೆ ಈರುಳ್ಳಿ, ಆಲೂಗಡ್ಡೆ, ಗೆಣಸು, ಬೆಳ್ಳುಳ್ಳಿ, ಟೊಮೇಟೊಗಳನ್ನು ಫ್ರಿಜ್‌ನಲ್ಲಿ ಇರಿಸದೆ, ತಂಪಾದ ಸ್ಥಳದಲ್ಲಿ ಶೇಖರಿಸುವುದೇ ಸರಿ. ಮಾವು, ಬಾಳೆ, ಅವಕಾಡೊ, ಕಿವಿ, ಪೇರ್‌, ಪ್ಲಮ್‌ ಮುಂತಾದ ಹಣ್ಣುಗಳು…

Read More

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ (ಸಿಎಲ್​ಟಿ ಪರೀಕ್ಷೆಯಲ್ಲಿ) ಉತ್ತೀರ್ಣರಾಗಬೇಕೆಂದು ಈ ಹಿಂದೆ ಸರ್ಕಾರ ತಿಳಿಸಿತ್ತು. ಇದೀಗ ಮತ್ತೊಂದು ಗುಡ್​ ನ್ಯೂಸ್​ ಕೊಟ್ಟಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನೌಕರರಿಗೆ ತಲಾ ಐದು ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಸರ್ಕಾರ ಮುಂದಾಗಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರ ಮತ್ತು ದಿನಾಂಕವನ್ನು ಪರಿಶೀಲಿಸಿ ಪ್ರೋತ್ಸಾಹ ಧನ ಮಂಜೂರು : ಪ್ರೋತ್ಸಾಹ ಧನದ ಸೌಲಭ್ಯ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗಲಿದೆ. ಸರ್ಕಾರದ ಆದೇಶದಲ್ಲಿ ಕರ್ನಾಟಕ ಸಿವಿಲ್ ಸೇವಾ (( ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ) ನಿಯಮಗಳು 2012 ಜಾರಿಗೆ ಬಂದ ದಿನಾಂಕ :22.03.2012 ರ ಪೂರ್ವದಲ್ಲಿ ನೇಮಕಾತಿ ಹೊಂದಿರುವ ಹಾಗೂ ದಿನಾಂಕ:17.04.2021ರೊಳಗೆ ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರು, ಹಾಜರುಪಡಿಸುವ ಡಿಜಿಟಲ್ ಸಹಿಹೊಂದಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ…

Read More

ಸೂರ್ಯೋದಯ: 06:44, ಸೂರ್ಯಾಸ್ತ : 06:15 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾಘ ಮಾಸ , ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ : ಏಕಾದಶಿ ನಕ್ಷತ್ರ: ಆರಿದ್ರ, ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಇಲ್ಲ ಅಭಿಜಿತ್ ಮುಹುರ್ತ: ಮ.12:06 ನಿಂದ ಮ.12:52 ತನಕ ಮೇಷ ರಾಶಿ: ರಾಜಕಾರಣಿಗಳಿಗೆ ವಿಶೇಷ ಸ್ಥಾನಮಾನ ನಿಮ್ಮ ಚಾಣಕ್ಷತನದಿಂದ ಮಂತ್ರಿಸ್ಥಾನ ಲಭ್ಯ, ಹಿತೈಷಿಗಳ ಸಹಕಾರ, ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆ ಉದ್ಯಮದಾರರ ಮನಸ್ಸಿನಲ್ಲಿ ಒಂದು ಕೆಲಸ ತುಂಬಾ ದಿನದಿಂದ ಕಾಡುತ್ತಿದ್ದು ಇಂದು ಸಕಾಲ ಗೊಳ್ಳಲಿದೆ, ಪ್ರೇಮಿಗಳ ಬಾಂಧವ್ಯ ಉತ್ತಮಗೊಳ್ಳಲಿದೆ, ಆರೋಗ್ಯದಲ್ಲಿ ಸುಧಾರಣೆ, ಆಸ್ತಿ ಲೋಪ ದೋಷ ನಿವಾರಣೆ, ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ, ಕಚೇರಿಯಲ್ಲಿ ವ್ಯವಹರಿಸುವಾಗ ಜಾಗ್ರತೆವಹಿಸಿ, ಸಹೋದ್ಯೋಗಿಗಳ ಜೊತೆ ಹಾಗೂ ಗ್ರಾಹಕರೊಡನೆ ವಾಗ್ವಾದ ಬೇಡ, ಉದ್ಯೋಗ ಬದಲಾವಣೆ…

Read More

ಗದಗ:- ಭಾವೈಕ್ಯತೆಯ ದಿನಾಚರಣೆ ವಿಚಾರಕ್ಕೆ ಗದಗನ ಎರಡು ಮಠಗಳ ಮಧ್ಯೆ ಸಂಘರ್ಷ ವಿಚಾರವಾಗಿ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಶ್ರೀ ಕೌಂಟರ್ ಕೊಟ್ಟಿದ್ದಾರೆ. ಲಿಂಗೈಕ್ಯ ಸಿದ್ದಲಿಂಗ ಶ್ರೀಗಳ ಜಯಂತಿಯನ್ನ ಭಾವೈಕ್ಯತೆ ದಿನವನ್ನಾಗಿ ಆಚರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾವೈಕ್ಯತೆ ದಿನ ಅನ್ನೋದು ಏಕವ್ಯಕ್ತಿಗೆ ಮೀಸಲು ಅಲ್ಲ..ತೋಂಟದಾರ್ಯ ಮಠ ಸರ್ವಜನಾಂಗದ ಶಾಂತಿಯ ತೋಟ..ಜಾತ್ರೆಯ ಕಮೀಟಿಗೆ ಮುಸ್ಲಿಂ ವ್ಯಕ್ತಿಯನ್ನ ಅಧ್ಯಕ್ಷರನ್ನಾಗಿ ಮಾಡಿದ್ದೇವೆ..ಮಸೀದಿಗಳಿಗೆ ಮಠದ ಜಾಗ ಬಿಟ್ಟು ಕೊಟ್ಟಿದ್ದೇವೆ. ಲಿ. ಸಿದ್ಧಲಿಂಗ ಶ್ರೀಗಳು ಎಲ್ಲಾ ಸಮುದಾಯಗಳ ಜೊತೆಗೆ ಭಾವೈಕ್ಯತೆಯಿಂದ ಇದ್ದರು.. ಮಠದಲ್ಲಿ ಅಲ್ಲಾ ನನ್ನ ಮಸೀದಿಯಲ್ಲಿ ಸಿದ್ಧಲಿಂಗನನ್ನ ಕಾಣಬೇಕೆಂದು ಶ್ರೀಗಳು ಹೇಳಿದ್ದರು.. ಇನ್ನೊಬ್ಬರನ್ನ ಟೀಕೆ ಮಾಡಬಾರದು ನಮ್ಮ ಕೆಲಸ ನಾವು ಮಾಡ್ಕೊಂಡು ಹೋಬೇಕು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿದ್ದ ಸಿದ್ದಲಿಂಗ ಶ್ರೀಗಳಿಗೆ ಭಾವೈಕ್ಯತೆ ಪದ ಬಳಕೆ ಬೇಡ ಎಂದಿದ್ದ ದಿಂಗಾಲೇಶ್ವರ ಶ್ರೀ.. ಲಿಂಗಾಯತ ಪ್ರತ್ಯೇಕ ಧರ್ಮವೇ ಅದನ್ನ ಯಾರೂ ಒಡೆಯಬೇಕಿಲ್ಲ.. ವೀರಶೈವ ಅನ್ನೋದು ಲಿಂಗಾಯತ ಧರ್ಮದ ಒಂದು ಭಾಗ. ಈ…

Read More

ಬೆಂಗಳೂರು:- ಕನ್ನಡ ಮಾತನಾಡೋಕೆ ಬರಲ್ಲ ಅಂತಾ ಟೀ ಶಾಪ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆದ ಘಟನೆ ನಗರದ ಹೆಚ್ ಎಸ್ ಆರ್ ಲೇಔಟ್ ನ ಟೀ ಜಾಯಿಂಟ್, ಎಂಬ ಶಾಪ್ ನಲ್ಲಿ ಜರುಗಿದೆ. ಅಂಗಡಿಯವರಿಗೆ ಕನ್ನಡ ಬರುವುದಿಲ್ಲವೆಂದು ಯುವಕರಿಂದ ಹಲ್ಲೆ ನಡೆಸಲಾಗಿದ್ದು, ಕನ್ನಡ ಮಾತನಾಡು ಅಂತಾ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವಿಚಾರಕ್ಕಾಗಿ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಲೀಕ ಅಳಲು ತೋಡಿಕೊಂಡಿದ್ದಾರೆ. ಕನ್ನಡ ಅರ್ಥವಾಗುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಟೀ ಜಾಯಿಂಟ್ ಮಾಲೀಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೆಚ್, ಎಸ್, ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕೊಪ್ಪಳ:- ಲಂಬಾಣಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ. ಲಂಬಾಣಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದಿದ್ದಾರೆ. ಆ ಜನರ ಮುಗ್ದತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮತಾಂತರ ದೇಶಕ್ಕೆ ಅಂಟಿಕೊಂಡ ದೊಡ್ಡ ವೈರಸ್​ ಮತ್ತು ಕ್ಯಾನ್ಸರ್. ಮೂರು ಸಾವಿರ ಚರ್ಚ್​ಗಳು ಕಾನೂನು ಬಾಹಿರ. ಮತಾಂತರ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅನಧಿಕೃತ ಚರ್ಚ್​ಗಳನ್ನು ಬುಲ್ಡೋಜರ್ ಮೂಲಕ ಒಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ವಸತಿ ಶಾಲೆಗಳ ಬರಹ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್​ನವರು ಬಾಬರ್ ಪರವಾಗಿ ನಿಂತರೇ ವಿನಃ ರಾಮನ ಪರ ನಿಲ್ಲಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂಗಳು ಮೇಲೆ ದೌರ್ಜನ್ಯ ಮಾಡುತ್ತಿದೆ. ಕೈ ಮುಗಿದು ಒಳಗೆ ಬಾ ಅಂದರೆ ಕಾಂಗ್ರೆಸ್​ನವರಿಗೆ ಏನು ತೊಂದರೆ ಮಾಡಿತು. ಒಳಗೆ ಬೇಕಾದರೆ ಪ್ರಶ್ನೆ ಮಾಡಲಿ ಎಂದು ಕಿಡಿಕಾರಿದ್ದಾರೆ. ಗಣೇಶ ಹಬ್ಬ ಮಾಡಿದರೆ, ಸರಸ್ವತಿ…

Read More

ಆರ್​ಸಿಬಿಗೆ ಆರಂಭದಲ್ಲೇ ಆಘಾತ ಉಂಟಾಗಿದ್ದು, ಇಡೀ ಆವೃತ್ತಿಯಿಂದ ಸ್ಟಾರ್ ಪ್ಲೇಯರ್ ಔಟ್ ಆಗಿದ್ದಾರೆ. ಇದೇ ಫೆಬ್ರವರಿ 23 ರಿಂದ ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಪ್ರಾರಂಭವಾಗುತ್ತಿದೆ. ಈ ಪಂದ್ಯಾವಳಿಗಾಗಿ ಅನೇಕ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ನಡುವೆ ಡಬ್ಲ್ಯುಪಿಎಲ್​ನ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಕನಿಕಾ ಅಹುಜಾ ಗಾಯದ ಕಾರಣ ಮಹಿಳಾ ಪ್ರೀಮಿಯರ್ ಲೀಗ್ 2024 ರಿಂದ ಹೊರಬಿದ್ದಿದ್ದಾರೆ. ಕೆಳಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್ ಶಕ್ತಿಯಾಗಿದ್ದ ಕನಿಕಾ ಅಲಭ್ಯತೆ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ. ಇದೀಗ ಇಂಜುರಿಯಿಂದಾಗಿ ತಂಡದಿಂದ ಹೊರಬಿದ್ದಿರುವ ಕನಿಕಾ ಅಹುಜಾ ಅವರ ಬದಲಿಯಾಗಿ ಮತ್ತೊಬ್ಬರು ದೇಶೀ ಪ್ರತಿಭೆ ಶ್ರದ್ಧಾ ಪೋಕರ್ಕರ್ ಅವರನ್ನು ಮೂಲ ಬೆಲೆ 10 ಲಕ್ಷ ರೂಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರಿಸಿಕೊಂಡಿದೆ ವಾಸ್ತವವಾಗಿ ಮೊದಲ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಅಷ್ಟು ಉತ್ತಮವಾಗಿರಲಿಲ್ಲ. ತಂಡವು 2023 ರ ಆವೃತ್ತಿಯ ಪಾಯಿಂಟ್…

Read More