Author: AIN Author

ಬೆಂಗಳೂರು:- ಬನ್ನೇರುಘಟ್ಟದಲ್ಲಿ ದೇಶದ ಅತಿದೊಡ್ಡ ಚಿರತೆ ಸಫಾರಿ ಶೀಘ್ರ ಆರಂಭವಾಗಲಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಸಿಂಹ ಮತ್ತು ಹುಲಿ ಸಫಾರಿ ಮಾದರಿಯಲ್ಲಿ ಚಿರತೆ ಸಫಾರಿಯನ್ನು ಶೀಘ್ರ ಆರಂಭಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆ ಮತ್ತು ಮೃಗಾಲಯ ನಿರ್ವಹಣಾ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಚಿರತೆ ಸಫಾರಿ ಶೀಘ್ರ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ. ಯಾವಾಗಿನಿಂದ ಆರಂಭ? ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಒಂದೂವರೆ ತಿಂಗಳಲ್ಲಿ ಸಫಾರಿಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿಸಬಹುದು. ಆದರೆ, ಲೋಕಸಭೆ ಚುನಾವಣೆಯ ಕಾರಣ ಮಾದರಿ ನೀತಿ ಸಂಹಿತೆ ಜಾರಿಗೆ ಬಂದರೆ ಮೇ ನಂತರವಷ್ಟೇ ಸಫಾರಿಯನ್ನು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿಸಬಹುದು ಎಂದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೇರೆ ಬೇರೆ ಕಡೆಯಿಂದ ತಂದಿರುವ ಚಿರತೆಗಳು ಇರುವ ಕಾರಣ ಸಹಬಾಳ್ವೆ ಬಗ್ಗೆ ಅವುಗಳಿಗೆ ತರಬೇತಿ ನೀಡುವ ಅಗತ್ಯವಿದೆ. ಅವುಗಳ ನಡುವೆ ಹೊಂದಾಣಿಕೆ ಮೂಡಿಸಬೇಕಿದೆ. ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೋ ರಕ್ಷಿತಾರಣ್ಯಕ್ಕೆ ತರಲಾದ ಚಿರತೆಗಳ ವಿಷಯದಲ್ಲಿ ಅವುಗಳು ಸಹಬಾಳ್ವೆ ನಡೆಸದೆ ಸಮಸ್ಯೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು…

Read More

ಬೆಂಗಳೂರು:- ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಫ್ರೀಡಂಪಾರ್ಕ್ ಅನ್ನು ನವೀಕರಿಸಿ ಪ್ರೇಕ್ಷಣೀಯ ಸ್ಥಳ ಹಾಗೂ ಹೆರಿಟೇಜ್ ಹಬ್ ಮಾಡೋದರ ಜೊತೆಗೆ ಇದರಿಂದಲೂ ಬಿಬಿಎಂಪಿ ಆದಾಯ ಬರುವಂತೆ ಮಾಡಿಕೊಳ್ಳಲು ಹೊರಟಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಅಂದರೆ ನೆನಪಾಗೋದು ಪ್ರತಿಭಟನೆ ಹಾಗೂ ಸರ್ಕಾರಿ ಕಾರ್ಯಕ್ರಮಗಳು. 21 ಎಕರೆಯಲ್ಲಿ ನಗರದ ಹೃದಯಭಾಗದಲ್ಲಿ ಇರುವ ಫ್ರೀಡಂ ಪಾರ್ಕ್ ಅನ್ನು ನವೀಕರಣಗೊಳಿಸಲು ಬಿಬಿಎಂಪಿ 5 ಕೋಟಿ ರೂಪಾಯಿ ಮೀಸಲಿಟ್ಟಿದ್ದು ನವೀಕರಣ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಪಾರ್ಕ್ ನ ಅಸ್ತಿತ್ವದಲ್ಲಿರುವ ಹಳೆಯ ಸೆಂಟ್ರಲ್ ಜೈಲ್ ರಚನೆಗಳು, ವಿದ್ಯುತೀಕರಣ ಸೇರಿದಂತೆ ಕಟ್ಟಡಗಳಿಗೆ ಹಾನಿಯಾದ ವಿವಿಧ ಕಾಮಗಾರಿಯೊಂದಿಗೆ ರಾಮಚಂದ್ರ ರಸ್ತೆಯಿಂದ ಫ್ರೀಡಂ ಪಾರ್ಕ್​ಗೆ ಎರಡನೇ ಪ್ರವೇಶ ದ್ವಾರ ನಿರ್ಮಾಣಕ್ಕೆ ಯೋಜನೆ ನಡೆದಿದೆ. ಸಧ್ಯ ಫ್ರೀಡಂ ಪಾರ್ಕ್ ಒಳಗಡೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಪಾರ್ಕ್‌ ನವೀಕರಣ ಮೂಲಕ ವಾಣಿಜ್ಯ ದೃಷ್ಟಿಕೋನಕ್ಕೂ ಪಾಲಿಕೆ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನೂ ಕೋವಿಡ್​ಗೂ ಮುಂಚಿತವಾಗಿಯಷ್ಟೇ ಬಿಬಿಎಂಪಿ 2 ಕೋಟಿಯಲ್ಲಿ ಇದೇ ಫ್ರೀಡಂ ಪಾರ್ಕ್ ಅನ್ನು ನವೀಕರಿಸಿತ್ತು. ಈ ವೇಳೆ…

Read More

ವಿಮಾನ ದುರಂತದಿಂದ ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ & ಮಾರ್ಟಿನ್ ಟೀಂ ಪಾರಾಗಿದ್ದಾರೆ. ಅಂತಿಮ ಚಿತ್ರೀಕರಣದಲ್ಲಿದ್ದ ಮಾರ್ಟಿನ್ ಚಿತ್ರತಂಡವು ಸೋಮವಾರ ಸಂಜೆ ಸಾಂಗ್ ಶೂಟ್‍ಗಾಗಿ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆಗೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೇ ಪೈಲಟ್ ಪರದಾಡಿದ್ದಾರೆ. ಸೀಟ್‍ಗಳು ನಡುಗಿದೆ, ಪ್ರಯಾಣಿಕರು ಗಾಬರಿ ಆಗಿದ್ದಾರೆ. ಕೊನೆಗೆ ಪೈಲಟ್‍ನ ಸಮಯ ಪ್ರಜ್ಞೆಯಿಂದ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಘಟನೆಯ ಬಳಿಕ ಮಾರ್ಟಿನ್ ಚಿತ್ರತಂಡವು ವಿಮಾನ ಇಳಿಯುವ ಸಂದರ್ಭದಲ್ಲಿಯೇ ವೀಡಿಯೋ ಮಾಡಿಕೊಂಡು ವಿಮಾನದಲ್ಲಿ ಎದುರಾಗಿದ್ದ ಕೆಟ್ಟ ಸಂದರ್ಭವನ್ನು ವಿವರಿಸಿ ಮರು ಜನ್ಮ ಸಿಕ್ಕಿದೆ ಎಂದಿದೆ. ನನ್ನ ಜೀವಮಾನದಲ್ಲಿಯೇ ವಿಮಾನದಲ್ಲಿ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವವಾಯಿತು. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಥ್ಯಾಂಕ್ ಗಾಡ್, ಜೈ ಆಂಜನೇಯ ಎಂದು ಧ್ರುವ ಸರ್ಜಾ ಹೇಳಿದ್ದು, ಇದಕ್ಕೆ ಮಾರ್ಟಿನ್‌ ತಂಡವೂ ದನಿಗೂಡಿಸಿದೆ. ಈ ವಿಡಿಯೋದಲ್ಲಿ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್, ನಾಯಕ ನಟಿ…

Read More

ಮಂಗಳೂರು:- ಕೊಲ್ಲೂರು ಮೂಕಾಂಬಿಕೆಯ ಹೆಸರಿನಲ್ಲಿ ನಕಲಿ ಟ್ರಸ್ಟ್ ಶುರುವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕೊಲ್ಲೂರು ಡಿವೋಟಿಸ್ ಟ್ರಸ್ಟ್ ಅನ್ನುವ ನಕಲಿ ಲಿಂಕ್ ಹರಿದಾಡುತ್ತಿದೆ. ದೇಗುಲಕ್ಕೆ ದೇಣಿಗೆ ಹರಕೆ ಸಲ್ಲಿಸುವ ಭಕ್ತರು ಇದರಲ್ಲಿ ದುಡ್ಡನ್ನು ಕಳಿಸಿದ್ದಾರಂತೆ. ಭಕ್ತರೊಬ್ಬರು ಹಣ ಕಳಿಸಿರುವ ಬಗ್ಗೆ ದೇಗುಲಕ್ಕೆ ಇ-ಮೇಲ್ ಮಾಡಿದಾಗ ಈ ಅಕೌಂಟ್‍ಗೂ ದೇವಸ್ಥಾನಕ್ಕೂ ಸಂಬಂಧ ಇಲ್ಲ ಅಂತಾ ಸ್ಪಷ್ಟನೆ ಬಂದಿದೆ. ಹೀಗಾಗಿ ಭಕ್ತರಾಗಿರುವ ರಾಘವೇಂದ್ರ ಹಾಗೂ ಧನಂಜಯ್ ಈ ಟ್ರಸ್ಟ್ ವಿರುದ್ಧ ಈಗ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೇರಳ ಮೂಲದಲ್ಲಿ ಈ ಟ್ರಸ್ಟ್ ನೋಂದಣಿಯಾಗಿರೋದು ಗೊತ್ತಾಗಿದೆ. ದೇಗುಲದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ದೇಗುಲದ ಆಡಳಿತ ಮಂಡಳಿಯ ಗಮನಕ್ಕೆ ಬಾರದೇ ಇದ್ದಿದ್ದು ಅಚ್ಚರಿ ಅನ್ನೋದು ಭಕ್ತರ ಅಸಮಾಧಾನ. ಹೀಗಾಗಿ ಇದರ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಲಾಗಿದೆ 2022ರಿಂದ ಈ ಟ್ರಸ್ಟ್ ಹೆಸರಿನಲ್ಲಿ ಭಕ್ತರಿಗೆ ಮಕ್ಮಲ್ ಟೋಪಿ ಹಾಕುತ್ತಿರೋದು ಗಮನಕ್ಕೆ ಬಂದಿದೆ. ಕೋಟಿ ಕೋಟಿ ದುಡ್ಡನ್ನು ಈ ಟ್ರಸ್ಟ್ ಲಪಟಾಯಿಸಿರುವ ಬಗ್ಗೆಯೂ…

Read More

ದಾವಣಗೆರೆ:- ಜಿಲ್ಲೆಯಲ್ಲಿ ಗಂಗೆ ಉಕ್ಕಿದ್ದಾಳೆ. ಹೌದು ದಾವಣಗೆರೆ ತಾಲೂಕಿನ ಗುಮ್ಮನೂರ ಗ್ರಾಮದಲ್ಲಿ ಬೋರ್ವೆಲ್ ಕೊರೆದಾಗ ‌ನೀರು ಆಕಾಶಕ್ಕೆ ಚಿಮ್ಮಿದೆ. ತೀವ್ರ ಕುಡಿಯುವ ನೀರಿನ‌ ಸಮಸ್ಯೆ ಹಿನ್ನೆಲೆಯಲ್ಲಿ ಗುಮ್ಮನೂರ ಗ್ರಾಮ ಪಂಚಾಯಿತಿ ಬೊರ್​ವೆಲ್ ಕೊರೆಸಿದೆ. 589 ಅಡಿಗೆ 6 ಇಂಚು ನೀರು ಉಕ್ಕಿದೆ. ಇಲ್ಲಿ ಒಂದು ಸಾವಿರ ಅಡಿ ಬೋರ್ವೆಲ್ ಕೊರದರೂ ನೀರು ಸಿಗುವುದಿಲ್ಲ. ಆದರೆ 589 ಅಡಿಗೆ ನೀರು ಸಿಕ್ಕಿದ್ದು, ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿದೆ.

Read More

ಬೆಳಗಾವಿ: ನಾನು ಕೂಡ ರಾಮನ ಭಕ್ತಳು. ರಾಮ ರಾಜ್ಯದ ಪರಿಕಲ್ಪನೆ ಇಟ್ಟುಕೊಂಡು ನಮ್ಮ ಸರ್ಕಾರ ನಡೆಯುತ್ತಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಇದನ್ನು ಪಾಲಿಸುತ್ತಿದೆ. ನಾವು ಈಗಾಗಲೇ ರಸ್ತೆ, ಬ್ರಿಡ್ಜ್, ಶಾಲೆ ಸಾಕಷ್ಟು ನಿರ್ಮಿಸಿದ್ದೇವೆ. ಗ್ಯಾರಂಟಿ ಮೂಲಕ ರಾಮರಾಜ್ಯ ನಿರ್ಮಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿದರು. ನಗರದಲ್ಲಿ ಮಾತನಾಡಿ, ಪ್ರತಿಯೊಬ್ಬ ಪ್ರಜೆ ಸುಖದಿಂದ, ನೆಮ್ಮದಿಯಿಂದ ಜೀವನ ಮಾಡುವುದೇ ರಾಮರಾಜ್ಯ. ನಮ್ಮ ಸರ್ಕಾರ, ಸಿದ್ದರಾಮಯ್ಯನವರ ಮುಖಂಡತ್ವದಲ್ಲಿ ಚಾಚೂ ತಪ್ಪದೇ ರಾಮರಾಜ್ಯದ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದೆ. ಮನೆ, ಮನೆಯಲ್ಲಿ ರಾಮರಾಜ್ಯ ನಿರ್ಮಾಣ ಮಾಡಬೇಕೆನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು. https://ainlivenews.com/do-you-know-the-benefits-of-eating-yogurt-in-the-evening-see-this-story/ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಅವರು ಬಿಜೆಪಿಗೆ ಸೇರುತ್ತಾರೆಂಬ ಚರ್ಚೆ ಬಗ್ಗೆ ಕೇಳಲಾದ ಪ್ರಶ್ನೆಗೆ ಸಚಿವರು, ಲಕ್ಷ್ಮಣ ಸವದಿಯವರು ಬಿಜೆಪಿಗೆ ಹೋಗುತ್ತಾರೆಂಬ ವಿಷಯ ಖಂಡಿತ ತಮ್ಮ ಗಮನಕ್ಕೆ ಬಂದಿಲ್ಲ. ಅವರು ಕಾಂಗ್ರೆಸ್ಸಿಗೆ ಬರುವ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಪಾತ್ರ ನಿರ್ವಹಿಸಿದ್ದೇವು.  ಏನೇ ಹೇಳಿ, ಯಾವುದೇ ಕಾರಣಕ್ಕೂ ಲಕ್ಷ್ಮಣ ಸವದಿಯವರು…

Read More

ಬೆಂಗಳೂರು:- ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸರ್ಕಾರವು ಉಚಿತವಾಗಿ ಪೂರೈಸುವ ಒಟ್ಟು 410 ಅಗತ್ಯ ಔಷಧಿಗಳ ಪೈಕಿ 190 ಅಗತ್ಯ ಔಷಧಿಗಳ ದಾಸ್ತಾನು ಇಲ್ಲ. ಏಪ್ರಿಲ್ ಒಂದರೊಳಗೆ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸುವ ಸಾಧ್ಯತೆಯಿದೆ ಎಂದು ಅವರು ಭರವಸೆ ನೀಡಿದರು. ಸರ್ಕಾರವು “ಪ್ರಾಥಮಿಕ ಜವಾಬ್ದಾರಿಯಲ್ಲಿ ವಿಫಲವಾಗಿದೆ” ಎಂದು ಒಪ್ಪಿಕೊಂಡರು. ಸಾರ್ವಜನಿಕ ಪೂರೈಕೆಗಾಗಿ ಸರ್ಕಾರವು ಒಟ್ಟು ಔಷಧಿಗಳಲ್ಲಿ 410 “ಅಗತ್ಯ ಔಷಧಿಗಳು” ಮತ್ತು 322 “ಅಪೇಕ್ಷಣೀಯ ಔಷಧಿಗಳ” ಅನ್ನು ಖರೀದಿಸುತ್ತದೆ. ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಪೂರೈಕೆಯಲ್ಲಿ ತೊಂದರೆಯಾಗಿದೆ. ಲಭ್ಯವಿರುವ ಸುಮಾರು 222 ಕೋಟಿ ರೂ. ಹಣದಿಂದ ಔಷಧಿಗಳನ್ನು ಖರೀದಿಸಿ ಸಾರ್ವಜನಿಕರಿಗೆ ಪೂರೈಸುತ್ತೇವೆ ಎಂದರು. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವನ್ನು (ಕೆಎಸ್‌ಎಂಎಸ್‌ಸಿ) ಬಲಪಡಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ದೊರೆಯದ ಕಾರಣ ಔಷಧಾಲಯಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ ಎಂದು ತಿಳಿಸಿದರು. ಔಷಧಿಗಳ ಕೊರತೆ ಆಗದಂತೆ ನಿರಂತವಾಗಿ ಪೂರೈಕೆಯಾಗಲು ಎರಡು ವರ್ಷದ ಅವಧಿಗೆ ಟೆಂಡರ್…

Read More

ಭೋಪಾಲ್:- ಅಂತಿಮ ಸಂಸ್ಕಾರಕ್ಕೆ ದುಡ್ಡಿಲ್ಲದ ಹಿನ್ನೆಲೆ ತಾಯಿ ಶವ ಹೂತಿಟ್ಟ ಮಗನ ವಿರುದ್ಧ FIR ದಾಖಲಾಗಿದೆ. ತಾಯಿ ಸಾವನ್ನಪ್ಪಿದ ಬಳಿಕ ಮಗ ಆಕೆಯನ್ನು 300 ಮೀಟರ್ ದೂರದ ಕಾಡಿನಲ್ಲಿ ಹೂತಿಟ್ಟು ಮನೆಗೆ ಬಂದ ಬಳಿಕ ಮತ್ತೆ ಮಲಗಿದ್ದ ಎನ್ನಲಾಗಿದೆ. ಬೆಳಗ್ಗೆ ಅಕ್ಕಪಕ್ಕದವರು ತಾಯಿಯನ್ನು ವಿಚಾರಿಸಿದಾಗ ನಿನ್ನೆ ರಾತ್ರಿ ನಡೆದ ಘಟನೆಯನ್ನು ತಿಳಿಸಿದ್ದಾನೆ. ಇದನ್ನು ಕೇಳಿದ ಜನರು ಈತನ ಮೇಲೆ ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ತಂಡವು ಸಂಪ್ರದಾಯದಂತೆ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದೆ.ಅಂತ್ಯಕ್ರಿಯೆ ಮಾಡಲು ತನ್ನ ಬಳಿ ಹಣವಿಲ್ಲ ಎಂದು ಮಗ ಹೇಳಿದ್ದಾನೆ. ಭೋಪಾಲ್‌ನ ಬೈರಸಿಯಾ ತಹಸಿಲ್‌ನ ಗುಂಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 55 ವರ್ಷದ ಜಗದೀಶ್ ಅಲಿಯಾಸ್ ಜಗ್ಗ ತನ್ನ ತಾಯಿ ತುಳಸಿ ಬಾಯಿ (80 ವರ್ಷ) ಅವರೊಂದಿಗೆ ದಿಲ್ಲೌಡ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ತುಳಸಿ ಬಾಯಿಯ ಆರೋಗ್ಯ ಕೆಲವು ದಿನಗಳಿಂದ ಹದಗೆಟ್ಟಿತ್ತು. ಫೆಬ್ರವರಿ 13 ರ ರಾತ್ರಿ, ತುಳಸಿ ಬಾಯಿ…

Read More

ಅಕ್ಕಿ ತೊಳೆದ ನೀರು ನಿಷ್ಪ್ರಯೋಜಕ ಎಂದು ಕೆಲವರು ಭಾವಿಸುತ್ತಾರೆ. ಇದು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಪ್ರಯೋಜನಕಾರಿಯಾದ ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ೧) ಅಕ್ಕಿ ತೊಳೆದ ನೀರನ್ನು ಹತ್ತಿ ಅಥವಾ ಶುಭ್ರವಾದ ಬಟ್ಟೆಯಿಂದ ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗುತ್ತದೆ. ೨) ಮುಖ ಕೆಂಪಾಗುವುದು, ಚರ್ಮದ ಅಲರ್ಜಿಯಂತಹ ಸಮಸ್ಯೆಗಳಿದ್ದರೆ ಅಕ್ಕಿ ನೀರಿನಿಂದ ಮುಖ ತೊಳೆದರೆ ಫಲಿತಾಂಶ ಸಿಗುತ್ತದೆ ೩) ಅಕ್ಕಿ ತೊಳೆದ ನೀರನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ದಪ್ಪ ಹೆಚ್ಚುತ್ತದೆ. ೪) ಮಹಿಳೆಯರು ಬಿಳಿ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ ನಿತ್ಯವೂ ಈ ಅನ್ನದ ನೀರನ್ನು ಕುಡಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ೫) ಅಕ್ಕಿ ನೀರಿಗೆ ಉಪ್ಪು, ತುಪ್ಪ, ಕರಿಮೆಣಸು ಸೇರಿಸಿ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ೬) ಅಕ್ಕಿ ತೊಳೆದ ನೀರನ್ನು ಸೇವಿಸುವುದರಿಂದ ವಾಂತಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

Read More

ಬೆಂಗಳೂರು: ನಮ್ಮ ಮೆಟ್ರೋ ತನ್ನ ಮಾರ್ಗಗಳನ್ನು ವಿಸ್ತರಿಸುವ ಮೂಲಕ ಪ್ರಯಾಣಿಕರಿಗೆ ಸಂಪರ್ಕವನ್ನು ಸುಧಾರಿಸಲು ಸಾಕಷ್ಟು ಪ್ರಯತ್ನಗಳನ್ನ ನಡೆಸುತ್ತಲೇ ಇದೆ. ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕಿಸುವ ಹೊಸ ನಮ್ಮ ಮೆಟ್ರೋ ಮಾರ್ಗವು ನಮ್ಮ ಮೆಟ್ರೋ ಸಂಪರ್ಕವನ್ನು ರೂಪಿಸುವ ಸಮಗ್ರ ಚಲನಶೀಲ ಯೋಜನೆ (ಸಿಎಂಪಿ) ಯೊಂದಿಗೆ ಅನುಕೂಲಕರ ಪ್ರಯಾಣದ ಆಯ್ಕೆಯನ್ನು ನೀಡುತ್ತದೆ. 16,543 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ, ಈ 37 ಕಿಮೀ ಮಾರ್ಗವನ್ನು ಈ ಹಿಂದೆ ಸಮಗ್ರ ಚಲನಶೀಲ ಯೋಜನೆ-2020 ರಲ್ಲಿ ಉಲ್ಲೇಖಿಸಲಾಗಿತ್ತು. ಟೆಕ್ ವಲಯಗಳು ಮತ್ತು ಪ್ರಯಾಣಿಕರಿಗೆ ಸಹಾಯ ಮಾಡಲು ನಿರೀಕ್ಷಿಸಲಾಗಿದೆ, ಇದು ಸುಗಮ ಪ್ರಯಾಣಗಳಿಗೆ ಭರವಸೆ ನೀಡುತ್ತದೆ. ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಹಣ ಬಂದಿಲ್ಲವೇ: ಈ ಕೂಡಲೇ ಈ ಕೆಲಸ ಮಾಡಿ ನೋಡಿ! ಈಗಾಗಲೇ ಮೆಟ್ರೋ ಕಾರ್ಯಾಚರಣೆಯ ಜಾಲದ ಭಾಗವಾಗಿರುವ ಸರ್ಜಾಪುರ-ಹೆಬ್ಬಾಳ ಮಾರ್ಗವು ನೀಲಿ ಮತ್ತು ಗುಲಾಬಿ ಮಾರ್ಗಗಳೊಂದಿಗೆ ಸಂಪರ್ಕ ಹೊಂದಿದ್ದು, ಪ್ರಯಾಣವನ್ನು ಸುಲಭಗೊಳಿಸುತ್ತದೆ. ಇದು ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.…

Read More