Author: AIN Author

ಹುಬ್ಬಳ್ಳಿ: ವಸತಿ ಶಾಲೆಗಳ ಪ್ರವೇಶದ್ವಾರದಲ್ಲಿ ಬರೆದಿರುವ ‘ಜ್ಞಾನ ದೇಗುಲವಿದು ಕೈ ಮುಗಿದು ಬಾ ಒಳಗೆ’ ಎನ್ನುವ ಬರಹವನ್ನು ಬದಲಾಯಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ನಗರದ ಅಂಚಟಗೇರಿಯ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ಮುಂಭಾಗದಲ್ ಪ್ರತಿಭಟನೆ ನಡೆಸಿದರು. ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ‘ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಜ್ಞಾನಪಿಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಪ್ರೇರಣಾದಾಯಕ ನುಡಿಗಳನ್ನು ಬರೆಯಲಾಗಿದೆ. ಸರ್ಕಾರ ಅದನ್ನು ಬದಲಿಸಿ ‘ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎನ್ನುವ ನುಡಿ ಬರೆಸಲು ಮುಂದಾಗಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಇರಬೇಕು, ಜ್ಞಾನಕ್ಕೆ ಶರಣಾಗುವ ಗುಣವಿರಬೇಕು. ಪ್ರಶ್ನಿಸುವ ಮನೋಭಾವ ಹುಟ್ಟಿಕೊಳ್ಳ ಬೇಕಾದದ್ದು ಕಲಿಕೆಯ ನಂತರ. ಆರಂಭದಲ್ಲಿಯೇ ಪ್ರಶ್ನಿಸುವುದು ಎಂದರೆ ಅಸಂಬದ್ಧ. ಸರ್ಕಾರ ಗೊಂದಲ ಸೃಷ್ಟಿಸಲು ಹೀಗೆ ಮಾಡುತ್ತಿದೆ. ಶಿಕ್ಷಣ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹುನ್ನಾರ ಇದಾಗಿದೆ. ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.ಪೃಥ್ವಿಕುಮಾರ, ಮೌನೇಶ…

Read More

ಬೆಂಗಳೂರು: ಸೆಲ್ಫಿ ಫೋಟೋ ತೆಗೆದುಕೊಳ್ಳುವುದಂದ್ರೆ ಯಾರೆಗೇಳಿ ಇಷ್ಟ ಇಲ್ಲ ಒಳ್ಳೆ ಜಾಗ ಒಳ್ಳೆ ಚಿತ್ರಗಳು ಏನಾದರು ಕಂಡರೆ ಸೆಲ್ಫಿ ತೆಗೆದಲೇ ಯಾರೂ ಹೋಗಲ್ಲ ಹೌದು.. ಅದೇ ರೀತಿ ಈಗ  ಸೆಲ್ಫಿ ಪ್ರಿಯರಿಗೆ ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್ ಸಿಕ್ಕಿದ್ದು  ನಮ್ಮ ಮೆಟ್ರೋದಲ್ಲಿ ವಿನೂತನ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಲಾಗಿದ್ದು  ಪ್ರಯಾಣಿಕರಿಗಾಗಿ ರೈಲು ನಿಲ್ದಾಣಗಳಲ್ಲಿ ನೂತನ ಸೆಲ್ಫಿ ಪಾಯಿಂಟ್​ ಓಪನ್‌ ಆಗಿದೆ. ಹಸಿರು ಮಾರ್ಗದ ಬನಶಂಕರಿ & ಕೋಣನಕುಂಟೆ ನಿಲ್ದಾಣಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಸೆಲ್ಫಿ ಪಾಯಿಂಟ್​ಗಳ ನಿರ್ಮಾಣ ಮಾಡಿದ್ದು  ಗೋಡೆಯ ಮೇಲೆ ಹಸಿರು ಹೊದಿಕೆಯಂತೆ ಕಾಣುವ ಬೋರ್ಡ್ ರೀತಿಯ ಪರದೆ ಸೆಲ್ಪಿ ಪಾಯಿಂಟ್ ಸುತ್ತಲೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ ಪ್ರಯಾಣಿಕರು ಮೊಬೈಲ್‌ನಲ್ಲೇ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ನೀಡಲಾಗಿದ್ದು  ಕೋಣಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣದಲ್ಲಿ ಈ ದೃಶ್ಯ ಕಾಣಬಹುದು.  ಸೆಲ್ಫಿ ಪಾಯಿಂಟ್​ಗಾಗಿ ಹೆಚ್ಚು ಸ್ಥಳ ಮೀಸಲು ಮಾಡಿದ್ದು ಹಾಗೆ ಲೈಟಿಂಗ್‌ ನಿಂದ ಕಂಗೊಳಿಸುತ್ತಿರುವ ಸೆಲ್ಫಿ ಪಾಯಿಂಟ್​ ನೋಡಿ ಪ್ರಯಾಣಿಕರು ಫುಲ್‌  ಖುಷ್ ಆಗಿದ್ದಾರೆ.

Read More

ಬೆಂಗಳೂರು: ಸಿಸಿಬಿ ದಾಳಿಯಲ್ಲಿ ಜೈಲು ಸೇರಿದ ಅಮಾಯಕನ ಇಂಟ್ರಸ್ಟಿಂಗ್ ಸ್ಟೋರಿ‌ ಇದು..! ವೈಯಕ್ತಿಕ ದ್ವೇಷಕ್ಕೆ ಡ್ರಗ್ ಕೇಸ್ ನಲ್ಲಿ ಜೈಲು ಸೇರಿದ ವ್ಯಕ್ತಿ ವೈರಿಯನ್ನು ಜೈಲಿಗೆ ಕಳುಹಿಸಲು ಪ್ಲಾನ್ ಮಾಡಿದ್ದು ಪೂನಾರಾಮ್ ಮಸಲತ್ತಿಗೆ ಜೈಲು ಸೇರಿದವನೇ ಈ ಚೋಗಾರಾಮ್..! ಹೌದು… ಚೋಗಾರಾಮ್ ವಾಹನದಲ್ಲಿ ಅಫೀಮು ಇಡಿಸಿದ್ದ ಪೂನಾರಾಮ್ ವಿಷಯವನ್ನ ಬೇರೆಯವರ ಮೂಲಕ ಸಿಸಿಬಿ ಪೊಲೀಸ್ರಿಗೆ ಮುಟ್ಟಿಸಿದ್ದ ಕಿಲಾಡಿ ಮಾಹಿತಿ ಬರ್ತಿದ್ದಂತೆ ಇದೇ ತಿಂಗಳ ಎರಡರಂದು ಪರಿಶೀಲನೆ ನಡೆಸಿ ಚೋಗಾರಾಮ್ ಬಂಧಿಸಿದ್ದ ಸಿಸಿಬಿ HSRP ನಂಬರ್ ಪ್ಲೇಟ್ ವಿಸ್ತರಣೆ ಬೆನ್ನಲ್ಲೆ ವಾಹನ ಸವಾರರಿಗೆ ಮತ್ತೊಂದು ಸಂಕಷ್ಟ! ಈ ಬಗ್ಗೆ ಆರ್ ಆರ್ ನಗರ ಠಾಣೆಯಲ್ಲಿ ಕೇಸ್ ದಾಖಲಿಸಿ ಕೈತೊಳೆದುಕೊಂಡಿದ್ದ ಪೊಲೀಸರು ಚೋಗಾರಾಮ್ ನಾನು ಅಮಾಯಕ ನನಗೇನು ಗೊತ್ತಿಲ್ಲ ಅಂತ ಹೇಳಿದ್ರು ಪೊಲೀಸ್ರು ನಂಬಿರಲಿಲ್ಲ ಚೋಗಾರಾಮ್ ಹಿಸ್ಟರಿ ಚೆಕ್ ಮಾಡಿದಾಗ ಪೊಲೀಸ್ರಿಗೆ ಅಲ್ಪ ನಂಬಿಕೆ ಬಂದಿತ್ತು ಅಷ್ಟರಲ್ಲಾಗಲ್ಲೆ ಕಾನೂನು ಪ್ರಕ್ರಿಯೆ ನಡೆದು ಚೋಗಾರಾಮ್ ಜೈಲು ಸೇರಿದ್ದ ಆದರೆ ತನಿಖೆ ಮುಂದುವರೆಸಿದ್ದ ಪೊಲೀಸರಿಗೆ ಚೋಗಾರಾಮ್ ಮನೆ…

Read More

ಬೆಂಗಳೂರು: HSRP ನಂಬರ್​ ಪ್ಲೇಟ್​​ ಅವಳಡಿಸುವ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಹೌದು..  HSRP ನಂಬರ್ ಪ್ಲೇಟ್ ವಿಸ್ತರಣೆ ಬೆನ್ನಲ್ಲೆ ವಾಹನ ಸವಾರರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ ಎದುರಾಗಿದ್ದು  ನಂಬರ್ ಪ್ಲೇಟ್ ಬದಲಿಸಲು ಇದ್ದಂತ ಸರ್ಕಾರದ ಸರ್ವರ್ ಡೌನ್ ಆಗಿದ್ದು ಇದರಿಂದ  ಸಾಕಷ್ಟು ವಾಹನ ಸವಾರರು ಪರದಾಡುವಂತಾಗಿದೆ ಹಾಗೆ HSRP ನಂಬರ್ ಪ್ಲೇಟ್ ಆನ್ಲೈನ್ ಬುಕ್ ಮಾಡಲು ನಾನಾಕಸರತ್ತು ಸಹ ನಡೆಸಲಾಗುತ್ತಿದೆ. 12 ಸಂಸ್ಥೆಗಳಿಗೆ ಟೆಂಡರ್ ನೀಡಿದ್ದ ಸರ್ಕಾರ ಹೀಗಾಗಿ ಗಡುವನ್ನು ಇನ್ನು 1 ವರ್ಷಗಳ ಕಾಲ ವಿಸ್ತರಿಸಬೇಕೆಂದು ಒತ್ತಾಯ ವಾಹನಗಳ ಮಾಲೀಕರು ಆನ್ಲೈನ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಲು ಸಮಸ್ಯೆ ಆಗ್ತಿದೆ ಸರ್ವರ್ ಡೌನ್ ಇರುವ ಕಾರಣ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಲ್ಲಾ ಅಂಶವನ್ನು ಭರ್ತಿ ಮಾಡಿದರು ಹಲಾವಾರು ತಾಂತ್ರಿಕ ಮರು ಉತ್ತರ ಬರುತ್ತಿದೆ ಕೆಲವು ನೊಂದಾವಣೆ ಸ್ವೀಕೃತವಾಗುತ್ತಿಲ್ಲ ಹೀಗಾಗಿ ಗಡುವನ್ನು ಇನ್ನು ಒಂದು ವರ್ಷಗಳ ಕಾಲ ವಿಸ್ತರಿಸಬೇಕೆಂದು ಒತ್ತಾಯ ಕೇಳಿಬರುತ್ತಿದೆ.

Read More

ಯಾದಗಿರಿ: ನಡುರಸ್ತೆಯಲ್ಲಿ ನೂರಾರು ಕಾಂಡೋಮ್‌ ಬಾಕ್ಸ್‌ʼಗಳು ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಸಮೀಪದಲ್ಲಿ ನಡೆದಿದೆ. ಕೇಂದ್ರ ಸರ್ಕಾರದಿಂದ ಸರ್ಕಾರಿ ಆಸ್ಪತ್ರೆಗಳಿಗೆ ವಿತರಣೆಯಾಗಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೂರಾರು ಕಾಂಡೋಮ್‌ʼಗಳಾಗಿದ್ದು, ನಿರೋಧ್‌ (ಕಾಂಡೋಮ್) ಬಾಕ್ಸ್‌ಗಳು ಖಾನಾಪುರ ಸಮೀಪದ ಇಬ್ರಾಹಿಂಪುರ ಕ್ರಾಸ್ ಮುಖ್ಯರಸ್ತೆಯಲ್ಲಿ ಪತ್ತೆಯಾಗಿದೆ. https://ainlivenews.com/do-you-know-why-you-should-not-cut-your-nails-at-night-here-is-the-real-reason/ ಆರೋಗ್ಯ ಇಲಾಖೆ ಅಧಿಕಾರಿಗಳೇ ಬೇಕಾಬಿಟ್ಟಿಯಾಗಿ ರಸ್ತೆ ಬದಿ ಇಳಿಸಿ ಹೋದ್ರಾ ಅನ್ನೋ ಸಂಶಯವೂ ವ್ಯಕ್ತವಾಗಿದೆ. ಬಾಕ್ಸ್‌ಗಳಲ್ಲಿ ತುಂಬಿದ ಕಾಂಡೋಮ್‌ ಸರ್ಕಾರಿ ಆಸ್ಪತ್ರೆಗೆ ಪೂರೈಕೆ ಆಗಬೇಕಿತ್ತು. 2026ರ ವರೆಗೆ ಅವಧಿ ಇರೋದು ಬಾಕ್ಸ್‌ ಮೇಲೆ ನಮೂದಾಗಿದೆ. ಆದ್ರೆ ಏಕಾಏಕಿ ಇಷ್ಟೊಂದು ಬಾಕ್ಸ್‌ಗಳನ್ನ ರಸ್ತೆ ಮಧ್ಯೆ ಇಳಿಸಿ ಹೋಗಿದ್ದು ಯಾರು ಅನ್ನೋದು ಪತ್ತೆಯಾಗಿಲ್ಲ. ಇಷ್ಟೊಂದು ಬಾಕ್ಸ್‌ಗಳು ಎಲ್ಲಿಂದ ತಂದಿದ್ದು? ಯಾವ ಆಸ್ಪತ್ರೆಗಳಿಗೆ ವಿತರಣೆಯಾಗಬೇಕು ಅನ್ನೋದರ ಬಗ್ಗೆ ಇನ್ನಷ್ಟೇ ತನಿಖೆಯಾಗಬೇಕಿದೆ.

Read More

ಬೆಂಗಳೂರು:- ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕದ ತೆರಿಗೆದಾರರ ಹಣ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಕೇರಳ ವ್ಯಕ್ತಿಯ ಕುಟುಂಬಕ್ಕೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಸಲಹೆ ಆಧರಿಸಿ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ. ಈ ವಿಚಾರವಾಗಿ ಸೋಮವಾರವೇ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಇಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. 15 ಲಕ್ಷ ರೂಪಾಯಿ ಪರಿಹಾರ ನೀಡುವ ಕಾಂಗ್ರೆಸ್ ಸರ್ಕಾರದ ತೀರ್ಮಾನ ಖಂಡನೀಯ ಎಂದು ಅವರು ಹೇಳಿದ್ದಾರೆ. ಕಾಡಾನೆ ದಾಳಿಯಿಂದ ಕೇರಳದ ವಯನಾಡು ಜಿಲ್ಲೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದರು. ಮೃತನ ಕುಟುಂಬಕ್ಕೆ ನೆರವಾಗುವಂತೆ ‘ಕೈ’ ನಾಯಕ ರಾಹುಲ್‌ ಗಾಂಧಿ ಸಲಹೆ ನೀಡಿದ್ದರು. ಅದರ ಮೇರೆಗೆ ಕರ್ನಾಟಕದ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಸಂಪೂರ್ಣವಾಗಿ ಅವಮಾನಕರ. ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಅಕ್ರಮವಾಗಿ ಹಣ ಮಂಜೂರು ಮಾಡಿದ್ದು ರಾಜ್ಯದ ಜನರಿಗೆ ಮಾಡಿದ ದ್ರೋಹವಲ್ಲವೇ ಎಂದು…

Read More

ಲಕ್ನೋ:- ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನವನ್ನೂ ಗೆಲ್ಲಲ್ಲ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ 400 ಸೀಟುಗಳ ಯೋಜನೆ ಸಾಕಾರಗೊಳ್ಳುವುದಿಲ್ಲ. 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವುದಾಗಿ ಬಿಜೆಪಿ ಹೇಳಿಕೊಂಡರೂ 100 ಸ್ಥಾನಗಳನ್ನು ದಾಟಲು ಸಾಧ್ಯವಾಗಲ್ಲ. ಈ ಬಾರಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುವುದು ಎಂದು ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ (Congress) ಅಧಿಕಾರಾವಧಿಯಲ್ಲಿ ಅಮೇಥಿಯಲ್ಲಿ ಕೋಟ್ಯಂತರ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಆದರೆ ಅವುಗಳಲ್ಲಿ ಹೆಚ್ಚಿನವು ಬಾಕಿ ಉಳಿದಿವೆ. ಯೋಜನೆಗಳು ಇನ್ನೂ ಏಕೆ ಅಪೂರ್ಣವಾಗಿವೆ ಎಂದು ನಾನು ಕೇಳಲು ಬಯಸುತ್ತೇನೆ. ಅವರು ಅಮೇಥಿ ಮತ್ತು ರಾಯಬರೇಲಿಯಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ಯಾಕೆಂದರೆ ಅವರು ಯೋಜನೆಗಳನ್ನು ಮುಗಿಸಿದ್ದಾರೆ ಎಂದರು. ಇದು ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ (Rahul Gandhi) ಅವರು ಶ್ರಮಿಸಿದ ನೆಲ. ಅಮೇಥಿಯ ಜನರು ಗಾಂಧಿ ಕುಟುಂಬದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ ಎಂದು ಇದೇ ವೇಳೆ ಖರ್ಗೆ ಹೇಳಿದರು

Read More

ಬೆಂಗಳೂರು:- ತಾಂತ್ರಿಕ ದೋಷ ಹಿನ್ನೆಲೆ ನಮ್ಮ ಮೆಟ್ರೋದ ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಬೈಯಪ್ಪನಹಳ್ಳಿಯಿಂದ ಗರುಡಾಚಾರ್‌ಪಾಳ್ಯ ನಡುವೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದ್ದು ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಜನ ದಟ್ಟಣೆ ಉಂಟಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆಂದ ಬಿಎಂಆರ್​ಸಿಎಲ್ ತಿಳಿಸಿದೆ. ನಮ್ಮ ಮೆಟ್ರೋ ತಾಂತ್ರಿಕ ತೊಂದರೆ ಬಗ್ಗೆ ಎಕ್ಸ್​ ಖಾತೆ ಮೂಲಕ ಟ್ವೀಟ್ ಮಾಡಿರುವ ಬಿಎಂಆರ್​ಸಿಎಲ್, ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್ಪಾಳ್ಯ ನಡುವೆ ನೇರಳೆ ಮಾರ್ಗದ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. ಇದರಿಂದ ರೈಲು ವೇಳಾಪಟ್ಟಿಯಲ್ಲಿ ಅಡಚಣೆಯಾಗುತ್ತದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದ ಟ್ವೀಟ್ ಮಾಡಿದೆ.

Read More

ಕೋಟಾ:- 16 ವರ್ಷದ ವಿದ್ಯಾರ್ಥಿ ಶವ ಅರಣ್ಯದಲ್ಲಿ ಪತ್ತೆಯಾದ ಘಟನೆ ಕೋಟಾದಲ್ಲಿ ಜರುಗಿದೆ. ಜಂಟಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ರಚಿತ್ ಸೋಂಧಿಯಾ ಫೆಬ್ರವರಿ 11 ರಿಂದ ಕೋಚಿಂಗ್ ಸೆಂಟರ್‌ಗೆ ಹಾಸ್ಟೆಲ್‌ನಿಂದ ಹೊರಟು ನಾಪತ್ತೆಯಾಗಿದ್ದರು. ಗಾರ್ಡಿಯಾ ಮಹಾದೇವ ಮಂದಿರದ ಬಳಿಯ ಅರಣ್ಯ ಪ್ರದೇಶಕ್ಕೆ ಅವರು ಪ್ರವೇಶಿಸುತ್ತಿರುವುದು ಸಿಸಿಟಿವಿಯಲ್ಲಿ ಕೊನೆಯದಾಗಿ ಸೆರೆಯಾಗಿದೆ. ಸಿಸಿಟಿವಿ ಫೂಟೇಜ್ ಅವರು ದೇವಾಲಯದ ಪ್ರದೇಶಕ್ಕೆ ಕ್ಯಾಬ್ ತೆಗೆದುಕೊಂಡು ಹೋಗುವುದನ್ನು ತೋರಿಸಿದೆ, ಅಲ್ಲಿಂದ ಅವರು ಕೊನೆಯದಾಗಿ ಅರಣ್ಯ ಪ್ರದೇಶಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ಮೊದಲು ತಿಳಿಸಿದ್ದಾರೆ. ಪೊಲೀಸರು ಸೋಂಧಿಯಾ ಅವರ ಕೊಠಡಿಯಿಂದ ದೇವಸ್ಥಾನಕ್ಕೆ ಹೋಗುವ ಯೋಜನೆಯನ್ನು ಉಲ್ಲೇಖಿಸಿರುವ ಟಿಪ್ಪಣಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ದೇವಸ್ಥಾನದ ಬಳಿ ಸೋಂಧಿಯಾ ಅವರ ಬ್ಯಾಗ್, ಮೊಬೈಲ್ ಫೋನ್, ಕೊಠಡಿಯ ಕೀಗಳು ಮತ್ತು ಇತರ ವಸ್ತುಗಳು ಪೊಲೀಸರಿಗೆ ಪತ್ತೆಯಾಗಿವೆ. ಮೂಲತಃ ಮಧ್ಯಪ್ರದೇಶದ ವಿದ್ಯಾರ್ಥಿಯ ಪತ್ತೆಗಾಗಿ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳಿಂದ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಸೋಂಡಿಯಾ ಒಂದು ವರ್ಷದಿಂದ ಪ್ರವೇಶ ಕೋಚಿಂಗ್…

Read More

ಹಾವೇರಿ:- ಭ್ರಷ್ಟಾಚಾರ ಮುಕ್ತ ಆಡಳಿತ ಅಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಭ್ರಷ್ಟಾಚಾರ ಇಲ್ಲ ಎಂದು ಯಾರು ಹೇಳಿದರು? ಭ್ರಷ್ಟಾಚಾರ ಮುಕ್ತವಾಗುವುದು ಅಸಾಧ್ಯ. ಕಪ್ಪು ಕುರಿಗಳು ಯಾವಾಗಲೂ ಇರುತ್ತವೆ. ಆದರೆ ಭಷ್ಟ್ರಾಚಾರಿಗಳನ್ನು ಗುರುತಿಸಿ ಶಿಕ್ಷಿಸಲಾಗುತ್ತದೆ ಎಂದು ಹೇಳಿದರು. ದೇಶದ 140 ಕೋಟಿ ಜನರು ಈ ಸಂಪನ್ಮೂಲಗಳಲ್ಲಿ ಪಾಲುದಾರರಾಗಿದ್ದಾರೆ. ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ದಲಿತರು ಮಾತ್ರವಲ್ಲ, ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಕ್ಕಿದೆ. ಯಾವುದೇ ಸಮುದಾಯ ಅಥವಾ ಅಲ್ಪಸಂಖ್ಯಾತರು ಮಾತ್ರ ಸಂಪನ್ಮೂಲಗಳ ಮೇಲೆ ಹಕ್ಕುಗಳನ್ನು ಹೊಂದಲು ಸಾಧ್ಯವಿಲ್ಲ ಎಂದರು. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಇತ್ತೀಚೆಗಷ್ಟೇ ಮಂಡಿಸಿದ ಬಜೆಟ್‌ನಲ್ಲಿ ತಮ್ಮ ವರುಣಾ ವಿಧಾನಸಭಾ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಈಗ ಯಾವ ಹುದ್ದೆಯಲ್ಲಿದ್ದಾರೆ?…

Read More