Author: AIN Author

ಕಲಬುರಗಿ: ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತಿದ್ದಾರೆ. ಇವರ ಸರ್ಕಾರ ಅಧಿಕಾರಿಗಳಿಗೆ ಸ್ಯಾಲರಿ ಕೊಡೊಕೆ ಆಗ್ತಿಲ್ಲ ಬರೀ ಸಾಲ ಸಾಲ ಹೀಗೆ ಸಾಲ ಮಾಡಿ ತುಪ್ಪ ತಿಂದ್ರೆ ಸಾಲ ತೀರಿಸೋದು ಹೇಗೆ ಅಂತ ಬಿಜೆಪಿ ವಕ್ತಾರ ಪಿ.ರಾಜೀವ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ರಾಜೀವ್, ಗ್ಯಾರಂಟಿ ಯೋಜನೆಗಳಿಗೆ ಫುಲ್ ಫೀಲ್ ಮಾಡೊಕೆ ಇವರಿಂದ ಸಾಧ್ಯವಾಗುತ್ತಿಲ್ಲ ಅಂದ್ರು. ನೋಡ್ತಿರಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ‌ಅತಿ ಹೆಚ್ಚು ಸಿಟ್ ಬಿಜೆಪಿ ಪಾಲಾಗೊದು ಪಕ್ಕಾ ಕಾಂಗ್ರೆಸ್ ನವರ ಆಟ ಮುಂದೆ ನಡೆಯೊದಿಲ್ಲ ಅಂತ ಕಾಂಗ್ರೆಸ್ ನಾಯಕರಿಗೆ ಗುದ್ದು ಕೊಟ್ರು..

Read More

ಕೋಲಾರ: ರಾಜ್ಯದಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆ ಬೆಳೆಯಾಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ಹೇಳಿದ್ದಾರೆ ಕೋಲಾರ ಜಿಲ್ಲೆ ಮಾಲೂರಿನ ಅಗ್ರಹಾರ ಬೀದಿಯಲ್ಲಿ ಪುರಾತನ ದಕ್ಷಿಣಾಮುಖಿ ಸಾಹಸಾಂಜನೇಯ ಸ್ವಾಮಿ ದೇವಾಲಯ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಯುಗಾದಿ ಹಬ್ಬದವರೆಗೆ ಯಾವುದೇ ರಾಜಕೀಯ ಬದಲಾವಣೆ ಸಾಧ್ಯವಿಲ್ಲ. ಜಾಗತಿಕ ಮಟ್ಟದಲ್ಲಿ ಹೆಚ್ಚಿನ ತೊಂದರೆ ಇದೆ. ಬೆಂಕಿ ದುರಂತ, ಜಲ ದುರಂತ, ಯುದ್ಧಗಳು ಸಂಭವಿಸಿ ಅನೇಕ ಸಾವು ನೋವು ಉಂಟಾಗಲಿದೆ. ಕೋಮುವಾದ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.ಯುಗಾದಿ ನಂತರ ಅನೇಕ ವಲಯದಲ್ಲಿ ಬದಲಾವಣೆಯಾಗಲಿದ್ದು, ಮೋಡ ಕವಿಯುತ್ತದೆ. ಆಕಾಶ ಮಳೆ ಸುರಿಸುತ್ತದೆ. ಭೂಮಿ ಉತ್ತಮ ಬೆಳೆ ನೀಡಲಿದ್ದು, ರೈತರು ಬೆಳೆಗೆ ಹಾಕಿದ ಬಂಡವಾಳಕ್ಕೆ ಮೋಸ ಇಲ್ಲ. ಜಗತ್ತಿನ ಒಬ್ಬ ಧಾರ್ಮಿಕ ಮುಖಂಡನ ಸಾವು ಸಂಭವಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

Read More

ಬೆಂಗಳೂರು: ಕರ್ನಾಟಕದ (Karnataka) ಆನೆಯ ದಾಳಿಯಿಂದ ಕೇರಳದಲ್ಲಿ (Kerala) ವಯನಾಡು ಜಿಲ್ಲೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೆರವಾಗುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಲಹೆ ಮೇರೆಗೆ ಕರ್ನಾಟಕ ಸರ್ಕಾರ, ರಾಜ್ಯದ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಸಂಪೂರ್ಣವಾಗಿ ಅವಮಾನಕರ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದ್ದಾರೆ HSRP ನಂಬರ್ ಪ್ಲೇಟ್ ವಿಸ್ತರಣೆ ಬೆನ್ನಲ್ಲೆ ವಾಹನ ಸವಾರರಿಗೆ ಮತ್ತೊಂದು ಸಂಕಷ್ಟ! ಈ ಕುರಿತು ತಮ್ಮ ಎಕ್ಸ್‌  ಖಾತೆಯಲ್ಲಿ ಹೇಳಿಕೆ ನೀಡಿರುವ ಅವರು ರಾಹುಲ್ ಗಾಂಧಿಯವರ ವಯನಾಡು ಕ್ಷೇತ್ರದಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿಗೆ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ 15 ಲಕ್ಷ ರೂ.ಗಳನ್ನು ಅಕ್ರಮವಾಗಿ ಮಂಜೂರು ಮಾಡಿರುವುದು ರಾಜ್ಯದ ಜನರಿಗೆ ಮಾಡಿದ ದ್ರೋಹವಲ್ಲವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಕರ್ನಾಟಕದಾದ್ಯಂತ ಬರಗಾಲ ಮತ್ತು ನೂರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ, ಸ್ವಲ್ಪವೂ ನಾಚಿಕೆಯಿಲ್ಲದೆ ರಾಜ್ಯದ ತುರ್ತು ಅಗತ್ಯಗಳತ್ತ ಗಮನಹರಿಸುವ ಬದಲು ರಾಹುಲ್ ಗಾಂಧಿಯವರನ್ನು ಸಂತೋಷಪಡಿಸಲು ಆದ್ಯತೆ ನೀಡುತ್ತಿರುವುದು…

Read More

ಬೆಂಗಳೂರು:  ಪತಿಯಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರುವ ಘಟನೆ  ಜೀವನ್ ಭೀಮಾ ನಗರದ ವಿಂಡ್ ಟನಲ್ ರಸ್ತೆಯಲ್ಲಿ ನಡೆದಿದೆ. ́ ತನ್ನ ಪತ್ನಿ  ಪ್ರಿಯಕರನ ಜೊತೆಗೆ ಹೋಗ್ತಿದ್ದ ವೇಳೆ ನೋಡಿದ್ದ ಪತಿ ಈ ವೇಳೆ ಮಚ್ಚಿನಿಂದ ಪತ್ನಿಗೆ ಹಲ್ಲೆ ಮಾಡಿರುವ ಆರೋಪಿ , ಈ ದೃಶ್ಯ ಸ್ಥಳೀಯರ ಮೊಬೈಲ್‌ ನಲ್ಲಿ ಸೆರೆಯಾಗಿದ್ದಯ ಈಗ ಎಲ್ಲೆಡೆ ವೈರಲ್‌ ಆಘಿದೆ. ಸೋಮವಾರ ಸಂಜೆ ಏಳು ಘಂಟೆ ಸುಮಾರಿಗೆ ನಡೆದಿದ್ದು  ನೈಗರ್ ಎಂಬಾಕೆಗೆ ಗಂಭೀರ ಗಾಯ,ಆಸ್ಪತ್ರೆಗೆ ದಾಖಲು ಸದ್ಯ ಆರೋಪಿ ಶೇಖ್ ಮುಜಿಬ್ ನನ್ನು ಬಂಧಿಸಿ ವಿಚಾರಣೆ ನಡೆಸಿರುವ ಜೆಬಿ ನಗರ ಪೊಲೀಸರು

Read More

ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಒಳ-ಹೊರಗಿನ ಗುದ್ದಾಟ ಹೆಚ್ಚಾಗಿದೆ. ಟಿಕೆಟ್‌ಗಾಗಿ ಸ್ಥಳೀಯ V/S ಹೊರಗಿನ ಆಕಾಂಕ್ಷಿಗಳ ನಡುವೆ ಕಾದಾಟ ಶುರುವಾಗಿದೆ. ಬಿಜೆಪಿ ಟಿಕೆಟ್‌ಗಾಗಿ ಸ್ಥಳೀಯರ ಕಸರತ್ತು‌ ಮುಂದುವರೆದಿದೆ. ವಿ. ಸೋಮಣ್ಣಗೆಟಾಂಗ್ ಕೊಡಲು ಸ್ಥಳೀಯ ಅಭ್ಯರ್ಥಿ ಕೂಗು ಕೇಳಿಬರುತ್ತಿದೆ. ಜಿಲ್ಲಾ ಖಜಾಂಜಿ ಪರಮೇಶ್ ಆಯ್ತು, ಇದೀಗ ದೊಡ್ಡಮನೆ ಗೋಪಾಲಗೌಡ ಸರದಿಯಾಗಿದೆ. https://ainlivenews.com/do-you-know-why-you-should-not-cut-your-nails-at-night-here-is-the-real-reason/  ನಾನು ಟಿಕೆಟ್ ಆಕಾಂಕ್ಷಿ ಎಂದ ಹಿರಿಯ ನ್ಯಾಯವಾದಿ ಗೋಪಾಲಗೌಡ ಹೇಳಿದ್ದಾರೆ. ಗೋಪಾಲಗೌಡ ಬೆಂಬಲಿಗರು ಹಾಗೂ ವಕೀಲರಿಂದ ಬಿಜೆಪಿ ನಾಯಕರಿಗೆ ಪತ್ರ ಬರೆಯಲಾಗಿದ್ದು, ಒಕ್ಕಲಿಗ ಸಮುದಾಯದ ಮಠಾಧೀಶರ ಮೂಲಕ ವರಿಷ್ಠರಿಗೆ ಒತ್ತಡ ಹೇರಲಾಗುತ್ತಿದೆ. ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ಮುಂದುವರೆದಿದೆ. ತಾನೂ ತುಮಕೂರು ಆಕಾಂಕ್ಷಿ ಎನ್ನುತ್ತಿರುವ ವಿನಯ್ ಬಿದರೆ. ದೆಹಲಿ ಮಟ್ಟದ ನಾಯಕರಲ್ಲಿಯೂ ವಿನಯ್ ಬಿದರೆ ಬಗ್ಗೆ ಮಾತುಕತೆ ನಡೆಯುತ್ತಿದೆ. 

Read More

ಚಂಡೀಗಢ: ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ, ವಂಚನೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿಚಾರಣೆಗೆ ಕೈಗೆತ್ತುಕೊಂಡ ಸಂದರ್ಭದಲ್ಲಿ ಹೊಸದಾಗಿ ಆಯ್ಕೆಯಾಗಿ ಚಂಡೀಗಢ ಮೇಯರ್‌  ಮನೋಜ್‌ ಸೋಂಕರ್‌ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೇಯರ್ ಚುನಾವಣೆ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಪಂಜಾಬ್ ಬಿಜೆಪಿ ಅಧ್ಯಕ್ಷ ಜಿತೇಂದ್ರ ಮಲ್ಹೋತ್ರಾ ಹೇಳಿದ್ದಾರೆ. https://ainlivenews.com/do-you-know-why-you-should-not-cut-your-nails-at-night-here-is-the-real-reason/ ಮೂರು ವಿರೋಧ ಪಕ್ಷದ ಎಂಸಿಗಳು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಗುಸುಗುಸು ಇರುವಾಗಲೇ ರಾಜೀನಾಮೆ ನೀಡಲಾಗಿದೆ. ಚಂಡೀಗಢದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಬಹುದು ಎಂದು ಈ ಹಿಂದೆ ವರದಿಗಳು ಬಂದಿದ್ದವು. ಎಎಪಿಯ ಮೂವರು ಕೌನ್ಸಿಲರ್‌ಗಳು ಬಿಜೆಪಿ ಸೇರಬಹುದು. ಬಿಜೆಪಿ ಸೇರುವ ಸಾಧ್ಯತೆಯಿರುವವರಲ್ಲಿ ಪೂನಂ, ನೇಹಾ ಮುಸಾವತ್ ಮತ್ತು ಗುರುಚರಣ್ ಸಿಂಗ್ ಕಾಲಾ ಹೆಸರುಗಳ ಬಗ್ಗೆ ತೀವ್ರ ಚರ್ಚೆ ನಡೆದಿತ್ತು. ವಿವಾದ ಏನು? ಚಂಡೀಗಢ ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಮೇಯರ್‌, ಹಿರಿಯ ಉಪಮೇಯರ್‌ ಮತ್ತು ಉಪ ಮೇಯರ್‌ ಸ್ಥಾನಗಳನ್ನು…

Read More

ನೆಲಮಂಗಲ: ಹಣಕ್ಕೆ ಬೇಡಿಕೆ ನಕಲಿ ಪತ್ರಕರ್ತರ ವಿರುದ್ದ FIR ದಾಖಲು ಕಾರಣವೇನೆಂದರೆ ಲಿಂಗೇನಹಳ್ಳಿ ಕಲ್ಲು ಕ್ವಾರಿಯಲ್ಲಿ ದೇವಸ್ಥಾನಕ್ಕೆ ಕಲ್ಲು ತೆಗೆಯುತ್ತಿದ್ದ ಗ್ರಾಮಸ್ಥರ ಬಳಿ ಹಣ ವಸೂಲಿಗೆ ಇಳಿದಿದ್ದಾರೆ HSRP ನಂಬರ್ ಪ್ಲೇಟ್ ವಿಸ್ತರಣೆ ಬೆನ್ನಲ್ಲೆ ವಾಹನ ಸವಾರರಿಗೆ ಮತ್ತೊಂದು ಸಂಕಷ್ಟ! 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು 1 ಲಕ್ಷ ಹಣ ಪಡೆದಿದ್ದ ನಕಲಿ ಗ್ಯಾಂಗ್ ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ ಪೊಲೀಸ್ ಠಾಣೆಗೆ ದೂರು ಹಣ ಕೊಡದಿದ್ದರೆ ಸುದ್ದಿ ಮಾಡಿ ಮಾನಹಾನಿ ಮಾಡುತ್ತೇವೆ ಎಂದು ಬೆದರಿಸಿದ್ದ ಹಿನ್ನೆಲೆ‌ಹಣ ನೀಡಿರುವ ವ್ಯಕ್ತಿ ಲಿಂಗೇನಹಳ್ಳಿ ವಾಸಿ ಶ್ರೀನಿವಾಸ್ ಅವರಿಂದ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮೋಹನ A1 ನಮ್ಮ ವಿಜಯ ನ್ಯೂಸ್ ವರದಿಗಾರ, ಆತ್ಮಾನಂದ A2 AK ನ್ಯೂಸ್ , ರಾಜೇಶ್ A3 ರಾಜಧಾನಿ ನ್ಯೂಸ್, ರೇಣುಕಾ ಪ್ರಸಾದ್A4 CEO ನಮ್ಮ ವಿಜಯ ನ್ಯೂಸ್, ಗೌತಮ್ A5 MD ನಮ್ಮ ವಿಜಯ ನ್ಯೂಸ್,ವಿರುದ್ದ ಪ್ರಕರಣ ದಾಖಲು ಪ್ರಕರಣ ದಾಖಲಾಗುತ್ತಿದ್ದಂತೆ…

Read More

ಲಕ್ನೋ: ಇತ್ತೀಚೆಗೆ ಉತ್ತರ ಪ್ರದೇಶದ (Uttar Pradesh) ಮುಜಾಫರ್ ನಗರದಲ್ಲಿ ಪತ್ತೆಯಾದ ಟೈಂ ಬಾಂಬ್ ಪ್ರಕರಣದಲ್ಲಿ, ಬಾಂಬ್ ಸಿದ್ಧಪಡಿಸುವಂತೆ ಬಂಧಿತ ಆರೋಪಿ ಜಾವೇದ್‍ಗೆ 10,000 ರೂ. ಮುಂಗಡ ಹಣ ನೀಡಿದ ಮಹಿಳೆಯನ್ನು ವಿಶೇಷ ಪೊಲೀಸ್ ಪಡೆ (ಎಸ್‍ಟಿಎಫ್) ಬಂಧಿಸಿದೆ. ಬಂಧಿತ ಮಹಿಳೆಯನ್ನು ಇಮ್ರಾನ ಎಂದು ಗುರುತಿಸಲಾಗಿದೆ. ಕಬ್ಬಿಣದ ಗುಂಡುಗಳಿಂದ ತುಂಬಿದ ಗಾಜಿನ ಬಾಟಲಿಗಳನ್ನು ಬಳಸಿ ಟೈಮ್ ಬಾಂಬ್‍ಗಳನ್ನು ತಯಾರಿಸಿದ ಆರೋಪದ ಮೇಲೆ ಇತ್ತೀಚೆಗೆ ಜಾವೇದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ವಿಚಾರಣೆಯಲ್ಲಿ ಮಹಿಳೆ ಬಾಂಬ್ ತಯಾರಿಸುವಂತೆ ಹೇಳಿದ್ದಾಗಿ ತಿಳಿದು ಬಂದಿತ್ತು. ಇದೀಗ ಪೊಲೀಸರು ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. https://ainlivenews.com/do-you-know-why-you-should-not-cut-your-nails-at-night-here-is-the-real-reason/ 2013ರಲ್ಲಿ ಮುಜಾಫರ್ ನಗರದಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಸಹ ಇಂತಹ ಬಾಂಬ್‍ಗಳನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದೆ ಎಂದು ಇಮ್ರಾನಾ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೇ ಬಾಂಬ್ ತಯಾರಿಸಿ ಕೊಟ್ಟ ಬಳಿಕ 40,000 ರೂ. ನೀಡುವುದಾಗಿ ಮಹಿಳೆ ಹೇಳಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಜಾವೇದ್, ಪಟಾಕಿ ತಯಾರಕನಾದ ತನ್ನ ಚಿಕ್ಕಪ್ಪ ಮನೆಯಲ್ಲಿದ್ದುಕೊಂಡು ಬಾಂಬ್‍ಗಳನ್ನು…

Read More

ಬೆಂಗಳೂರು: ಕೇರಳದಲ್ಲಿ ಆನೆ ದಾಳಿಗೆ (Elephant Attack in Kerala) ಬಲಿಯಾದ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ ನೀಡುವ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. HSRP ನಂಬರ್ ಪ್ಲೇಟ್ ವಿಸ್ತರಣೆ ಬೆನ್ನಲ್ಲೆ ವಾಹನ ಸವಾರರಿಗೆ ಮತ್ತೊಂದು ಸಂಕಷ್ಟ! ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಸಿದ್ದರಾಮಯ್ಯ ಅವರ ಸಲಹೆಗಾರರು ಹೇಳಿದಂತೆ ಮಹಾನುಭಾವರು ಕೇರಳದ ಮೃತ ವ್ಯಕ್ತಿಗೆ 15 ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದಾರೆ. ಅದೇ ಇಲ್ಲಿ ಏನಾದರೂ ಆನೆ ತುಳಿದು ವ್ಯಕ್ತಿ ಮೃತಪಟ್ಟರೆ ಕೇವಲ 5 ಲಕ್ಷ ಕೊಡ್ತೀರಿ. ಅದಕ್ಕೂ ಕಚೇರಿಗೆ ಅಲೆಯಬೇಕು ಎಂದು ಕಿಡಿಕಾರಿದ್ದಾರೆ. ವಯನಾಡಿನ ಸಂಸದರು ಹೇಳಿದರು ಅಂತ ಸಿದ್ದರಾಮಯ್ಯನನವರು (Siddaramaiah) ನಮ್ಮ ತೆರಿಗೆ ನಮ್ಮ ಹಕ್ಕಿನ 15 ಲಕ್ಷ ರೂ. ಕೊಟ್ಟಿದ್ದಾರೆ. ನಮ್ಮ ತೆರಿಗೆಯಲ್ಲಿ ತೆಲಂಗಾಣದಲ್ಲಿ ಜಾಹೀರಾತು ಕೊಟ್ಟಿದ್ದರು. ನಮ್ಮ ತೆರಿಗೆ ನಮ್ಮ ಹಕ್ಕು ಅಂತ ದೆಹಲಿಗೆ ಹೋದವರು…

Read More

ಬೆಂಗಳೂರು: ನಮ್ಮ ಮೆಟ್ರೋ ಯೆಲ್ಲೋ ಮಾರ್ಗದ (Namma Metro Yellow Line) ಮೊದಲ ಡ್ರೈವರ್ ಲೆಸ್ ಮೆಟ್ರೋದ ಮೊದಲ ಫೋಟೋ ರಿವೀಲ್‌ ಆಗಿದೆ. ಹೆಬ್ಬಗೋಡಿ ಡಿಪೋದಲ್ಲಿರುವ ಮೆಟ್ರೋದ ಮೊದಲ ಫೋಟೋವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ದ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. https://x.com/OfficialBMRCL/status/1759829628477415869?s=20 ಚೀನಾ ತಯಾರಿಸಿರುವ ಈ ಮೆಟ್ರೋದ ಬೋಗಿಗಳನ್ನು ಫೆಬ್ರವರಿ 6 ರಂದು ಸಮುದ್ರ ಮಾರ್ಗವಾಗಿ ಚೆನ್ನೈಗೆ ಬಂದರು ಮೂಲಕ ಲಾರಿಗಳಲ್ಲಿ ಬೆಂಗಳೂರಿಗೆ ತರಲಾಗಿತ್ತು. ಸದ್ಯ ರಾಜ್ಯದ ಮೊದಲ ಡ್ರೈವರ್ ಲೆಸ್‌ ಮೆಟ್ರೋ ರೈಲು ಸಂಚಾರಕ್ಕೆ ಸಜ್ಜಾಗಿದೆ. ಆರಂಭಿಕವಾಗಿ ಹಳದಿ ಮಾರ್ಗದಲ್ಲಿ ಪ್ರಾರಂಭ ಮಾಡಿ ನೀಲಿ ಮಾರ್ಗಕ್ಕೆ ವಿಸ್ತರಣೆ ಬಳಿಕ ನೇರಳೆ, ಹಸಿರು ಮಾರ್ಗಕ್ಕೂ ಈ ವ್ಯವಸ್ಥೆ ಅಳವಡಿಸಲು ಚಿಂತನೆಯನ್ನು BMRCL ಅಧಿಕಾರಿಗಳು ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Read More