Author: AIN Author

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಮೊದಲು ನಾಂದಿ ಹಾಡಿದ ನಾಡಾದ ಕಂಪ್ಲಿಯ ಇತಿಹಾಸವನ್ನು ರಾಜ್ಯದೆಲ್ಲೆಡೆ ಪಸರಿಸಲು ತಾಲೂಕಿನ ಜನರ ಬೇಡಿಕೆಯಂತೆ 2023ರಲ್ಲಿ ಕಂಪ್ಲಿ ಕಲಾರತಿ ಎಂಬ ಹೆಸರಿನಲ್ಲಿ ಉತ್ಸವ ಜರುಗಿದ್ದು ಈ ಬಾರಿ ಉತ್ಸವ ಜರುಗಲಿದೆಯೋ ಇಲ್ಲವೋ ಎಂಬ ಪ್ರಶ್ನೆಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿವೆ. ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಂಪ್ಲಿ. ಕ್ರಿಶ 8ನೇ ಶತಮಾನದಿಂದ ಐತಿಹಾಸಿಕ ಶ್ರೀಮಂತಿಕೆ ಹೊಂದಿದೆ ಹಾಗೂ 1017 ರಿಂದ 1076ರವರೆಗೆ ರಾಜಧಾನಿಯಾಗಿ ಮೆರೆದಿದೆ. ಈ ಭೂಮಿಯ ಇತಿಹಾಸ ಹಾಗೂ ಕಂಪಿಲರಾಯ ಮತ್ತು ಗಂಡುಗಲಿಕುಮಾರರಾಮರ ಶೌರ್ಯ ಪರಾಕ್ರಮವನ್ನು ರಾಜ್ಯದ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಹಂಪಿ, ಆನೆಗುಂದಿ, ಬಳ್ಳಾರಿ, ಕನಕಗಿರಿ ಉತ್ಸವದ ರೀತಿಯಲ್ಲಿ ಕಂಪ್ಲಿ ಉತ್ಸವವನ್ನು ಆಚರಿಸಬೇಕೆಂಬುದು ತಾಲೂಕಿನ ಜನತೆಯ ಬಹು ವರ್ಷಗಳ ಕನಸಾಗಿತ್ತು. ಅಲ್ಲದೇ ಈ ಕುರಿತು ಕಂಪ್ಲಿ ಯುವ ಶಕ್ತಿ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು 2018ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಂದ ಹಿಡಿದು ಅನೇಕ ಸಚಿವರು, ಜನಪ್ರತಿನಿಧಿಗಳು…

Read More

ಬೆಂಗಳೂರು: ರಾಜ್ಯ ರಾಜಾಧಾನಿಯಲ್ಲಿ ಬಿಸಿಲಾ ಬೇಗೆ ಜಾಸ್ತಿಯಾಗಿದೆ.‌. ಸೀಸನ್ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯ ತುಂಬೆಲ್ಲಾ ದ್ರಾಕ್ಷಿ ಹಣ್ಣುಗಳದ್ದೇ ಕಾರುಬಾರು ಜೋರಾಗಿಯೇ ಇರುತ್ತದೆ. ಹೀಗಾಗಿ ಹಸಿರು, ಕೆಂಪು, ಕಪ್ಪು, ಹಾಗೂ ಗುಲಾಬಿ ಹೀಗೆ ನಾನಾ ಬಣ್ಣ ಬಣ್ಣದ ದ್ರಾಕ್ಷಿಗಳು ದ್ರಾಕ್ಷಿ ಪ್ರಿಯರ ಗಮನ ಸೆಳೆಯುತ್ತದೆ. ಯಾವ್ ಕಡೆ ನೋಡಿದ್ರೂ ದ್ರಾಕ್ಷಿಯೇ.. ಯಾವ್ದನ್ನ ತಿನ್ನೋದು.. ಯಾವ್ದನ್ನ ಬಿಡೋದು.. ಯಾವ್ದನ್ನ ಕೊಳ್ಳೋದು.. ಇಲ್ನೋಡಿ ವೆರೈಟಿ ವೆರೈಟಿ ಕಲ್ಲಗಂಡಿ..ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳಾ ಹಣ್ಣಿನ ಸೀಸನ್ ಮುಗಿಯುವರೆಗೂ ನಡೆಲಿಯಲಿದ್ದು, ಗ್ರಾಹಕರಿಗೆ 10% ರಿಯಾಯಿತಿ ದರರಲ್ಲಿ ಮಾರಾಟ ಮಾಡಲಾಗುತ್ತಿದೆ. Bigg News: SSLC & 2nd PU ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಡಿಟೇಲ್ಸ್! ದ್ರಾಕ್ಷಿ ಮೇಳದಲ್ಲಿ 13 ರಿಂದ 14 ಬಗೆಯ ತಳಿಗಳು ಇರಲಿದ್ದು, ಅವುಗಳನ್ನ ಬಾಗಲಕೋಟೆ, ಕೊಪ್ಪಳ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಂತರ, ಕೋಲಾರ ಜಿಲ್ಲೆಗಳಿಂದ ತರಿಸಲಾಗಿದೆ. ದ್ರಾಕ್ಷಿ ಮೇಳದಲ್ಲಿ ಬೆಂಗಳೂರು ನೀಲಿ, ಶರದ್ ಸೀಡ್ ಲೆಸ್, ಕೃಷ್ಣ ಶರದ್, ಥಾಮ್ಸನ್ ಸೀಡ್ ಲೆಸ್,…

Read More

ಬೆಂಗಳೂರು : ಸಿದ್ದರಾಮಯ್ಯ ಅಂದ್ರೆ ಸುಳ್ಳು.. ಸುಳ್ಳು ಅಂದರೆ ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕ ಆರ್. ಅಶೋಕ್‌ ಟೀಕಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣಕ್ಕೆ ಉತ್ತರ‌ ನೀಡಿದ್ದಾರೆ. ಆದರೆ, ಅವರ‌ ಬಳಿ‌ ನಾವು‌ ಕೇಳುವ ಪ್ರಶ್ನೆಗಳಿಗೆ ಉತ್ತರ‌ ಇಲ್ಲ ಎಂದು ಹೇಳಿದರು. Bigg News: SSLC & 2nd PU ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಡಿಟೇಲ್ಸ್! ವಿದ್ಯಾನಿಧಿ,‌ ಕಿಸಾನ್ ಸಮ್ಮಾನ್ ಯಾಕೆ ರದ್ದು‌ ಮಾಡಿದ್ರಿ ಅಂತ‌ ಕೇಳಿದ್ರೆ ಉತ್ತರವಿಲ್ಲ. ಕಳೆದ‌ ಬಾರಿ ನೀರಾವರಿ ಇಲಾಖೆಯಿಂದ 15% ಕಡಿಮೆ ಮಾಡಿದ್ದಾರೆ. ರೈತರಿಗೆ‌ ಎಷ್ಟು ಸಬ್ಸಿಡಿ ಕಡಿಮೆ ಮಾಡಿದ್ದೀರಿ ಅಂದ್ರೆ ಹೇಳಲ್ಲ. ಇದು ಸಿದ್ದು ಎಕನಾಮಿಕ್ ಬಜೆಟ್. ಎಲ್ಲಾ ಸುಳ್ಳು ಎಂದು ಕುಟುಕಿದರು. ಬಸವರಾಜ ಬೊಮ್ಮಾಯಿ‌ ಅವರ ಅವಧಿಯಲ್ಲಿ ಸರ್ಪ್ಲಸ್ ಬಜೆಟ್,‌‌ ಈಗ ಓಪ್ಲಸ್ ಬಜೆಟ್. ಈಗ 90% ಸಾಲ ಮಾಡಿದವರು ಕಾಂಗ್ರೆಸ್​ನವರು. ಒಂದೇ‌ ವರ್ಷದಲ್ಲಿ 1 ಲಕ್ಷ ಕೋಟಿ ಸಾಲ ಮಾಡಿದಾರೆ. ರಾಜ್ಯಪಾಲರ ಭಾಷಣದಲ್ಲಿ ದೂರದೃಷ್ಟಿ…

Read More

ಬೆಂಗಳೂರು: ಬೇಸಿಗೆ ಆರಂಭದಲ್ಲಿಯೇ ರಾಜ್ಯ ರಾಜಧಾನಿಗೆ ಎದುರಾದ ಜಲಕಂಟಕ ನೀರಿಗೆ ಹಾಹಾಕಾರ…ಸಿಲಿಕನ್‌ ಸಿಟಿ ಮಂದಿಗೆ ಟ್ಯಾಂಕರ್ ನೀರೇ ಆಧಾರ …ಟ್ಯಾಂಕರ್ ನೀರಿನ ಮೊರೆ ಹೋದವರಿಗೆ ದರ ಏರಿಕೆಯ ಶಾಕ್ ಕೊಟ್ಟಿದೆ.. ಬೆಸಿಗೆ ಆರಂಭಕ್ಕೆ ಮುನ್ನವೇ ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಿದೆ. ಹಾಗಿದ್ದರೆ ಕಾರಣ ಏನು ಅಂತ ಈ ಸ್ಟೋರಿ ನೋಡಿ.. ಯೆಸ್.. ಟ್ಯಾಂಕರ್‌ ನೀರೂ ಸಹ ದಿನೇ ದಿನೇ ದುಬಾರಿಯಾಗುತ್ತಾ ಸಾಗುತ್ತಿದ್ದರೂ ಜನರು ನೀರು ಪೋಲು ಮಾಡುತ್ತಿರುವುದು ನಗರಕ್ಕೆ ನುಂಗಲಾರದ ತುತ್ತಾಗಿದೆ.ಈ ನಡುವೆ ಟ್ಯಾಂಕರ್‌ ನೀರು ಪೂರೈಕೆ ಮಾಫಿಯಾ ತಡೆಗಟ್ಟಲು ಜಲಮಂಡಳಿ ಏಕರೂಪ ದರ ನಿಗದಿಗೆ ಮುಂದಾಗಿದೆ. Bigg News: SSLC & 2nd PU ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಡಿಟೇಲ್ಸ್! ಬೆಂಗಳೂರಿನಲ್ಲಿ ಐದು ಹಂತಗಳಲ್ಲಿ ಕಾವೇರಿ ನೀರು ಪೂರೈಸಲಾಗುತ್ತಿದ್ದು ಪ್ರತಿದಿನ ನಗರವಾಸಿಗಳ ಬಳಕಗೆ ಎರಡು ಟಿಎಂಸಿ ನೀರು ಮೀಸಲಿಡಲಾಗಿದೆ. ಆದರೆ ಯಥೇಚ್ಛವಾಗಿ ನೀರು ಸಿಗುವ ಬಡಾವಣೆಗಳಲ್ಲಿ ರಸ್ತೆ ತೊಳೆಯಲು ಹಾಗೂ ಕಾರ್‌ ಸ್ವಚ್ಛಗೊಳಿಸಲು ಕಾವೇರಿ ನೀರು ಬಳಸುತ್ತಿದ್ದರೆ,…

Read More

ಬೆಂಗಳೂರು: ಸೆಟಲ್​ಮೆಂಟ್​​ ಮಾಡುವ ಸಂಸ್ಕ್ರತಿ ನಮ್ಮದಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. HSRP ನಂಬರ್ ಪ್ಲೇಟ್ ವಿಸ್ತರಣೆ ಬೆನ್ನಲ್ಲೆ ವಾಹನ ಸವಾರರಿಗೆ ಮತ್ತೊಂದು ಸಂಕಷ್ಟ! ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸೆಟಲ್​ಮೆಂಟ್​​ ಮಾಡುವ ಸಂಸ್ಕ್ರತಿ ನಮ್ಮದಲ್ಲ. ಸಿಕ್ಕ ಸಿಕ್ಕ ಜಾಗದಲ್ಲಿ ತಂತಿ ಬೇಲಿ ಹಾಕೋರು ಯಾರು..?. ನಾವು ಆತ್ಮಸಾಕ್ಷಿಯಿಂದ ಮತ ಕೇಳ್ತೀವಿ. ನಾವು ಕಾಂಗ್ರೆಸ್‌ ಶಾಸಕರ ಜೊತೆ ಮಾತನಾಡಿದ್ರೆ ಅಪರಾಧ.ಇವರು ಮೊನ್ನೆ ಬಿಜೆಪಿ ಶಾಸಕರನ್ನ ಕೂರಿಸಿಕೊಂಡು ಮಾತನಾಡಿದ್ದು ಅದು ಅಪರಾಧವಲ್ವಾ. ಆಗಾದ್ರೆ ನೀವು ಮಾಡ್ತಿರೋದು ಏನು. ಸೆಟಲ್​ಮೆಂಟ್ ರಾಜಕೀಯ ಮಾಡ್ತಿರೋದು ನೀವು ನಾವಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ. ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗ: ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಇಂತಿವೆ ಕುಪೇಂದ್ರ ರೆಡ್ಡಿಗೆ ಮತ ಹಾಕುವಂತೆ ಪಕ್ಷೇತರ ಶಾಸಕರಿಗೆ ಧಮ್ಕಿ ಆರೋಪಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಇದೀಗ ಹೆಚ್‌ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Read More

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ದಿನಗಣನೆಯಷ್ಟೇ ಬಾಕಿ ಉಳಿದಿದೆ. ಇದೇ ತಿಂಗಳ 23ರಿಂದ ತಾರೆಯರು ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯುತ್ತಿದ್ದಾರೆ. ಸ್ಯಾಂಡಲ್ ವುಡ್ ಟು ಬಾಲಿವುಡ್ ತನಕ ಎಲ್ಲಾ ಇಂಡಸ್ಟ್ರೀಯ ಸ್ಟಾರ್ ಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್ 10 ಸೀಸನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆಷ್ಟೇ ದುಬೈನಲ್ಲಿ ಅದ್ಧೂರಿಯಾಗಿ ಸಿಸಿಎಲ್ ಗೆ ಚಾಲನೆ ಕೊಡಲಾಗಿತ್ತು. ಇದೀಗ ತಂಡಗಳು ಕ್ರಿಕೆಟ್ ಅಭ್ಯಾಸಕ್ಕಿಳಿದಿದ್ದಾರೆ. ಅದರಂತೆ ಕರ್ನಾಟಕ ಬುಲ್ಡೋಜರ್ಸ್ ತಂಡ ಅಭ್ಯಾಸಕ್ಕೂ ಮುನ್ನ ಮಾಧ್ಯಮದರೊಟ್ಟಿಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದೆ. ಇತ್ತೀಚೆಗಷ್ಟೇ ಖಾಸಗಿ ಹೋಟೆಲ್ ನಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಮಾಲೀಕ ಅಶೋಕ್ ಖೇಣಿ, ಸಿಸಿಎಲ್ ಸಂಸ್ಥಾಪಕ ವಿಷ್ಣು ಇಂದೋರಿ ಹಾಗೂ ಕ್ಯಾಪ್ಟನ್ ಪ್ರದೀಪ್ ಸೇರಿದಂತೆ ಇತತರು ಭಾಗಿಯಾಗಿದ್ದರು. ಅನಾರೋಗ್ಯದ ಕಾರಣದಿಂದ ಕಿಚ್ಚ ಸುದೀಪ್ ಅವರು ಭಾಗಿಯಾಗಲಿರಲಿಲ್ಲ. ಇದೇ ಸಂದರ್ಭದಲ್ಲಿ ಸಿಸಿಎಲ್ ಜರ್ನಿ ವಿಡಿಯೋ ಬಿಡುಗಡೆ ಮಾಡಲಾಯಿತು. ಬಳಿಕ ಮಾತನಾಡಿದ ಕರ್ನಾಟಕ ಬುಲ್ಡೋಜರ್ಸ್ ಕ್ಯಾಪ್ಟನ್ ಪ್ರದೀಪ್, 12 ವರ್ಷದ…

Read More

ಬೆಂಗಳೂರು: ಮುಂದಿನ ಎರಡು ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಹೊಸದಾಗಿ ರಚಿಸಲಾದ ಎಲ್ಲಾ 49 ತಾಲ್ಲೂಕುಗಳಲ್ಲಿ ಆಡಳಿತ ಕಟ್ಟಡಗಳ (ಮಿನಿ ವಿಧಾನಸೌಧ) ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಘೋಷಿಸಿದರು. ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೈಲಹೊಂಗಲ ಶಾಸಕ ಕೌಜಲಗಿ ಮಹಾಂತೇಶ ಶಿವಾನಂದ್ ಅವರು ತಾಲ್ಲೂಕಿನ ಆಡಳಿತ ಕಟ್ಟಡಗಳ ದುರಸ್ತಿ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. HSRP ನಂಬರ್ ಪ್ಲೇಟ್ ವಿಸ್ತರಣೆ ಬೆನ್ನಲ್ಲೆ ವಾಹನ ಸವಾರರಿಗೆ ಮತ್ತೊಂದು ಸಂಕಷ್ಟ! 2018ರಲ್ಲಿ 63 ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿತ್ತು. ಆದರೆ, ಹಿಂದಿನ ಸರ್ಕಾರ 14 ತಾಲ್ಲೂಕುಗಳಲ್ಲಿ ಮಾತ್ರ ಆಡಳಿತ ಭವನ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಉಳಿದ 49 ತಾಲ್ಲೂಕುಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಮುಂದಿನ ಮೂರು ವರ್ಷಗಳಲ್ಲಿ ಈ ಎಲ್ಲ ತಾಲ್ಲೂಕುಗಳಿಗೂ ನೂತನ ಆಡಳಿತ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಭರವಸೆ ನೀಡಿದರು. ಹೊಸ ತಾಲ್ಲೂಕುಗಳ ಜತೆಗೆ ಹೆಚ್ಚುವರಿಯಾಗಿ 80 ರಿಂದ 100 ತಾಲ್ಲೂಕುಗಳ ಆಡಳಿತ…

Read More

ಹುಬ್ಬಳ್ಳಿ: ನಗರದ ಕ್ಷಮತಾ ಸಂಸ್ಥೆ ಹಾಗೂ ಜಿ.ಬಿ‌.ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಫೆ.೨೩ ರಿಂದ ೨೫ ರವರೆಗೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ 3 ದಿನಗಳವರೆಗೆ ಪಂ.ಕುಮಾರ ಗಂಧರ್ವರ ಜನ್ಮಶತಾಬ್ಧಿ ಸಂಗೀತೋತ್ಸವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಕ್ಷಮತಾ ಸಂಸ್ಥೆ ಅಧ್ಯಕ್ಷ ಗೋವಿಂದ್ ಜೋಶಿ ಹೇಳಿದರು‌. ನಗರದಲ್ಲಿಂದು ಮಾತನಾಡಿದ ಅವರು, ಫೆ.೨೩ರಂದು ಸಂಜೆ ೫.೩೦ ಕ್ಕೆ ಸಂಗೀತೋತ್ಸವ ಉದ್ಘಾಟನೆ ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಜೀವವಿಮಾ ನಿಗಮದ ದಕ್ಷಿಣ ಮಧ್ಯ ವಿಭಾಗದ ವಲಯ ಪ್ರಬಂಧಕ ಎಲ್. ಕೆ.ಶ್ಯಾಮಸುಂದರ ಹಾಗೂ ಪದ್ಮಶ್ರೀ ಪುರಸ್ಕೃತರಾದ ನೇತ್ರತಜ್ಞ ಡಾ. ಎಂ.ಎಂ.ಜೋಶಿ ಆಗಮಿಸಲಿದ್ದಾರೆಂದ ಅವರು ಅಂದು ಸಂಜೆ.೬.೩೦ ಕ್ಕೆ ಜೈಪುರ-ಅತ್ರೌಲಿ ಘರಾಣೆಯ ಪ್ರತಿಭಾವಂತ ಗಾಯಕಿ ಪುಣೆಯ ಯಶಸ್ವಿ ಸರಪೋತದಾರ ಅವರ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದೆ ಎಂದರು. ಫೆ. ೨೪ ರಂದು ಸಂಜೆ.೫.೩೦ ಕಿರಾನಾ ಘರಾಣೆಯ ಪ್ರತಿಭೆ ಕೊಲ್ಕತ್ತಾದ ವಿದುಷಿ ಮನಾಲಿ ಬೋಸ್ ಅವರ ಸುಮಧುರ ಕಂಠದಿಂದ ಸಪ್ತಸ್ವರಗಳು ರಿಂಗಣಿಸಲಿವೆ. ಫೆ.೨೫ ರಂದು ಸಂಜೆ ೫.೩೦ ಕ್ಕೆ…

Read More

ಬೆಂಗಳೂರು: ಜಪ್ತಿಯಾದ ಜಯಲಲಿತಾ (Jayalalitha) ಒಡವೆಯನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಕರ್ನಾಟಕ ಹೈಕೋರ್ಟ್‌ (Karnataka High Court) ದಿನಾಂಕ ನಿಗದಿ ಮಾಡಿದೆ. HSRP ನಂಬರ್ ಪ್ಲೇಟ್ ವಿಸ್ತರಣೆ ಬೆನ್ನಲ್ಲೆ ವಾಹನ ಸವಾರರಿಗೆ ಮತ್ತೊಂದು ಸಂಕಷ್ಟ! ತಮಿಳುನಾಡು (Tamil Nadu) ಮಾಜಿ ಸಿಎಂ ದಿ. ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ. ಮಾರ್ಚ್ 6 ಮತ್ತು 7 ರಂದು ಒಡವೆಯನ್ನು ತಮಿಳುನಾಡು ಸರ್ಕಾರಕ್ಕೆ‌ ಹಸ್ತಾಂತರಿಸಬೇಕು ಎಂದು ನ್ಯಾ. ಮೋಹನ್‌ ಸೂಚಿಸಿದ್ದಾರೆ. ಒಡವೆ ಸ್ವೀಕರಿಸಲು ತಮಿಳುನಾಡಿನಿಂದ ಇಬ್ಬರು ಅಧಿಕಾರಿಗಳ ನೇಮಕವಾಗಬೇಕು. ತಮಿಳುನಾಡು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಐಜಿಪಿ ವಿಜಿಲೆನ್ಸ್ ಹಾಜರಿರಬೇಕು ಎಂದು ಹೈಕೋರ್ಟ್‌ ಸೂಚಿಸಿದೆ.‌

Read More

ಬೆಂಗಳೂರು : ರಾಜ್ಯದಲ್ಲಿ 2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಹಾಗು ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ. ಇಂದು ವಿಕಾಸಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪರೀಕ್ಷಾ ದಿನಾಂಕ ಹಾಗೂ ಪರೀಕ್ಷೆಗಳಿಗೆ ಸಂಬಂಧಪಟ್ಟ ಇತರ ಮಾಹಿತಿಗಳನ್ನು ನೀಡಿದರು. HSRP ನಂಬರ್ ಪ್ಲೇಟ್ ವಿಸ್ತರಣೆ ಬೆನ್ನಲ್ಲೆ ವಾಹನ ಸವಾರರಿಗೆ ಮತ್ತೊಂದು ಸಂಕಷ್ಟ! ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್​ 01 ರಿಂದ 22ರ ವರೆಗೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮಾರ್ಚ್​​ 25 ರಿಂದ ಏಪ್ರಿಲ್ 06ರವರೆಗೆ ನಡೆಯಲಿವೆ ಎಂದು ತಿಳಿಸಿದರು. ಈ ಶೈಕ್ಷಣಿಕ ವರ್ಷದ ಸಾಲಿನಲ್ಲಿ ರಾಜ್ಯದಲ್ಲಿ 8,96,271 ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯತ್ತಿದ್ದಾರೆ. 2,741 ಪರೀಕ್ಷಾ ಕೇಂದ್ರಗಳಿವೆ. ಇನ್ನು 6,98, 624 ಮಕ್ಕಳು ದ್ವೀತಿಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಇನ್ನು, ಕಳೆದ ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ.…

Read More