Author: AIN Author

ರಾಮನಗರ:- ಡಿಕೆ ಶಿವಕುಮಾರ್ ಕಂಡ್ರೆ ಸಿದ್ದರಾಮಯ್ಯಗೆ ಭಯ ಶುರುವಾಗಿದೆ ಎಂದು ಸಿಪಿ ಯೋಗೇಶ್ವರ್ ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲೆಯ ವಕೀಲರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ನಿನ್ನೆ ನಾವು ವರದಿ ಮಾಡಿದ ಹಾಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ ಪ್ರತಿಭಟನಾ ಸ್ಥಳಕ್ಕೆ ವಕೀಲರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಇಂದು ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ವಕೀಲರ ಜೊತೆ ಪ್ರತಿಭಟನೆ ಕುಳಿತು ಐಜೂರು ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ನನ್ನು ಕೆಲಸದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಯೋಗೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಹೇಳಿದರು. ಖುದ್ದು ಒಬ್ಬ ವಕೀಲರಾಗಿರುವ ಸಿದ್ದರಾಮಯ್ಯ ಕ್ರಮ ತೆಗೆದುಕೊಳ್ಳಲು ಸಿದ್ಧರಿದ್ದರೂ, ರಾಮನಗರ ಡಿಕೆ ಶಿವಕುಮಾರ ಮತ್ತು ಡಿಕೆ ಸುರೇಶ್ ಕಾರ್ಯಕ್ಷೇತ್ರವಾಗಿರುವುದರಿಂದ ಹಿಂಜರಿಯುತ್ತಿದ್ದಾರೆ ಎಂದು ಹೇಳಿದರು.

Read More

ಬೆಂಗಳೂರು:- ಬಹುಜನ ಸಮಾಜವಾದಿ ಪಾರ್ಟಿ ಮುಖಂಡನಿಂದ ಯುವಕನ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಕೆಲಸದ‌ ನಿಮ್ಮಿತ್ತ ತೆರಳುತ್ತಿದ್ದ ಪುನೀತ್ ಎಂಬಾತನ ಗಾಡಿಗೆ ಹಲಸೂರು ಕೆರೆ ಬಳಿ ಬಿಎಸ್​ಪಿ ಸ್ಟೇಟ್ ಜನರಲ್ ಸೆಕ್ರೆಟರಿ ಬೋರ್ಡ್ ಇರುವ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಕಾರಿನಲ್ಲಿದ್ದವರನ್ನ ಡಿಕ್ಕಿ ಹೊಡೆದ ಬಗ್ಗೆ ಪ್ರಶ್ನೆ ಮಾಡಿದಾಗ, ಕಾರಿನಲ್ಲಿದ್ದ ಮೂವರು ಪುನೀತ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಪುನೀತ್​ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Read More

ಕಾಟೇರ’ ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ನೀಡಿರುವ ಹೇಳಿಕೆಯಿಂದ ಇಬ್ಬರ ನಡುವೆ ವಾಕ್ಸಮರ ಶುರುವಾಗಿದೆ. ದರ್ಶನ್ ಉತ್ತರಕ್ಕೆ ನಿರ್ಮಾಪಕ ಉಮಾಪತಿ ಉತ್ತರ ನೀಡಿದ್ದಾರೆ. ನಮ್ಮ ಜಗಳವನ್ನು ಕುಟುಂಬವು ಕೂಡ ನೋಡುತ್ತದೆ. ಫ್ಯಾಮಿಲಿಗೆ ಯಾವ ರೀತಿ ಎಫೆಕ್ಟ್ ಆಗುತ್ತೆ ಎಂಬುದರ ಬಗ್ಗೆ ಉಮಾಪತಿ ಮಾತನಾಡಿದ್ದಾರೆ. ನಾನು ತಗಡು ವ್ಯಕ್ತಿ ಇರಬಹುದು ಆದರೆ ಅವರ ಲೈಫ್‌ಗೆ ನಾನು ವಾಚ್‌ಮ್ಯಾನ್ ಅಲ್ಲ. ಪದಗಳನ್ನು ಬಳಸುವಾಗ ಗಮನ ಇರಬೇಕು. ಸಾಯುವವರೆಗೂ ಯಾರು ನೋಡದೇ ಇರುವ ಸಕ್ಸಸ್ ಏನಲ್ಲ ಇದು. ಎಲ್ಲರೂ ನಾಳೆಗೆ ಮಣ್ಣಿಗೆ ಹೋಗಬೇಕು ಎಂದರು ಉಮಾಪತಿ. ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂದು ಇರುತ್ತಾರೆ ನೋಡ್ತೀನಿ. ಸಿನಿಮಾ ಅಂತ ಬಂದಾಗ ನನ್ನ ಸಕ್ಸಸ್‌ನಲ್ಲಿ ದರ್ಶನ್, ಶ್ರೀಮುರಳಿ, ಚಿಕ್ಕಣ್ಣ, ಡೈರೆಕ್ಟರ್ ಕೃಷ್ಣ, ತರುಣ್ ಪಾಲಿದೆ. ಒಬ್ಬ ವ್ಯಕ್ತಿಯಿಂದ ಉಮಾಪತಿ ಬೆಳೆದಿಲ್ಲ. ನಾನು ಕಷ್ಟಪಟ್ಟು ಬೆಳೆದಿದ್ದೀನಿ. ಯಾಕೆಂದ್ರೆ ನಾನು ನಮ್ಮನೆ ದುಡ್ಡನ್ನು ಸಿನಿಮಾಗೆ ಹಾಕಿರೋದು. ಕಂಡವರ ದುಡ್ಡು ಹಾಕಿಲ್ಲ. ಗೌರವ ಅನ್ನೋದು ಪರಸ್ಪರ 2 ಕಡೆ ಇರಬೇಕು…

Read More

ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆ ಆಗಿದೆ. ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಹಿಂದಕ್ಕೆ ಪಡೆದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. ದೇಶದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆ ಲಾಸಲ್ ಗಾಂವ್ ಕೃಷಿ ಉತ್ಪಾದನಾ ಮಾರುಕಟ್ಟೆಯಲ್ಲಿ ಈರುಳ್ಳಿ ರಖಂ ಮಾರಾಟ ಬೆಲೆ ಶೇ.40ರಷ್ಟು ಏರಿಕೆ ದಾಖಲಿಸಿದೆ. ಈರುಳ್ಳಿ ಈಗ ಪ್ರತೀ ಕ್ವಿಂಟಾಲ್ ಬೆಲೆ 1,280 ರೂ.ಗಳಿಂದ 1,400 ರೂ.ಗೆ ಏರಿಕೆ ಕಂಡಿದ್ದು, ಕನಿಷ್ಠ ಬೆಲೆ 1 ಸಾವಿರ ರೂ. ಹಾಗೂ ಗರಿಷ್ಠ ಬೆಲೆ ಕ್ವಿಂಟಾಲ್‌ಗೆ 2,100 ರೂ.ಹೆಚ್ಚಳವಾಗಿದೆ. ಬೆಳ್ಳುಳ್ಳಿ ದರ ಏರಿಕೆಯಾಗಿದ್ದ ಬೆನ್ನಲ್ಲೇ ಇದೀಗ ಈರುಳ್ಳಿ ಬೆಲೆಯು ಏರಿಕೆಯಾಗಿರುವುದು ಗ್ರಾಹಕರಿಗೆ ಆತಂಕ ಉಂಟುಮಾಡಿದೆ.

Read More

ಸಂಜೆ ವೇಳೆ ಸ್ನ್ಯಾಕ್ಸ್​ ಆಗಿ ಮನೆಯಲ್ಲಿ ತಯಾರಿಸಲು ಸಾಕಷ್ಟು ತಿಂಡಿಗಳಿವೆ. ಹಾಗಾಗಿ ಜನರು ಕಾಮನ್ ಆಗಿ ಬೋಂಡಾ, ಬಜ್ಜಿ, ಚಿಪ್ಸ್​ನಂತಹ ಪದಾರ್ಥಗಳನ್ನು ಬೇಗ ಮಾಡಬಹುದು ಅಂತ ಮಾಡ್ತಾರೆ. ಆದರೆ ಬೋಂಡಾ, ಪಕೋಡಾ, ಬಜ್ಜಿಯಷ್ಟೇ ಅಲ್ಲ, ಇದಕ್ಕಿಂತಲೂ ಸ್ಪೆಷಲ್ ಆಗಿ ನೀವು ಮನೆಯಲ್ಲಿಯೇ ಉದ್ದಿನಬೇಳೆಯಲ್ಲಿ ವಡೆ ಮಾಡಿ. ಇದು ಸಿಕ್ಕಾಪಟ್ಟೆ ಟೇಸ್ಟಿ ಆಗಿರುತ್ತದೆ. ಇದರೊಂದಿಗೆ ನಿಮಗಿಷ್ಟವಿದ್ದರೆ ಬೋಂಡಾನೂ ಮಾಡಬಹುದು. ಇನ್ನೂ ಮಕ್ಕಳನ್ನು ಬಾಯಿ ಚಪ್ಪಾರಿಸಿಕೊಂಡು ಈ ತಿಂಡಿಯನ್ನು ಬೇಡ ಎಂದು ಹೇಳದೇ ತಿನ್ನುವುದು ಗ್ಯಾರಂಟಿ. ಹಾಗಾದ್ರೆ ಸಂಜೆ ಸ್ನ್ಯಾಕ್ಸ್​ ಆಗಿ ಈ ಬೋಂಡಾ ಮಾಡುವುದು ಹೇಗೆ ಎಂದು ತಿಳಿಯೋಣ. ಉದ್ದಿನಬೇಳೆ ಬೋಂಡಾ ಮಾಡಲು ಬೇಕಾಗುವ ಸಾಮಗ್ರಿಗಳು:- ಉದ್ದಿನಬೇಳೆ – 1 ಕಪ್ ಅಕ್ಕಿಹಿಟ್ಟು – 2 ಟೀ ಸ್ಪೂನ್ ಹಸಿಮೆಣಸಿನಕಾಯಿ – 2 ಮೆಣಸಿನಪುಡಿ – ಅರ್ಧ ಟೀ ಸ್ಪೂನ್ ಈರುಳ್ಳಿ – 2 ಕೊತಂಬರಿ ಸೊಪ್ಪು – ಸ್ವಲ್ಪ ಉಪ್ಪು – ರುಚಿಗೆ ತಕ್ಕಷ್ಟು ಎಣ್ಣೆ – ಕರಿಯಲು ಬೇಕಾಗುವಷ್ಟು ಉದ್ದಿನಬೇಳೆ…

Read More

ಸಣ್ಣ ವಿಚಾರಕ್ಕೆ ದುಃಖವಾದರೂ ಅಳು ಉಮ್ಮಳಿಸಿ ಬರುತ್ತದೆ. ಒಮ್ಮೊಮ್ಮೆ ಖುಷಿಯಲ್ಲೂ ನಮಗೆ ಅಳು ಬರುತ್ತದೆ. ನಿರ್ದಿಷ್ಟ ಸನ್ನಿವೇಶದಲ್ಲಿ ಕೆಲವು ನರವೈಜ್ಞಾನಿಕ ಪರಿಸ್ಥಿತಿಗಳು ನಮ್ಮನ್ನು ನಗುವಂತೆ ಅಥವಾ ಅಳುವಂತೆ ಮಾಡುವ ಕಾರಣ, ಇದೆಲ್ಲಾ ಸಾಧ್ಯ ಎನ್ನುತ್ತದೆ ವಿಜ್ಞಾನ ಲೋಕ. ಸಣ್ಣಪುಟ್ಟ ವಿಚಾರಕ್ಕೂ ಅಳು ಬರುತ್ತದೆ ಒಮ್ಮೊಮ್ಮೆಯಂತೂ ಸಣ್ಣ-ಪುಟ್ಟ ವಿಚಾರಕ್ಕೂ ಕಣ್ತುಂಬಿಕೊಳ್ಳುತ್ತೇವೆ. ಇನ್ನೂ ಕೆಲವು ಸರಿ ಕಾರಣಾನೇ ಇರಲ್ಲ ಆದರೂ ಅಳು ಬರುತ್ತದೆ. ಈ ಅಳುವಿಗೆ ಮನಸ್ಸನ್ನು ಹಾಯಾಗಿಸುವ ಶಕ್ತಿ ಇದೆ ಅನ್ನೋದಂತೂ ಒಪ್ಪಿಕೊಳ್ಳಲೇಬೇಕು. ಯಾವುದೇ ದುಃಖ, ಬೇಸರವನ್ನು ಅತ್ತು ಸಮಾಧಾನ ಮಾಡಿಕೊಳ್ಳಬಹುದಾದ ಶಕ್ತಿ ಇದೆ ಮಾನವರಿಗೆ. ನೀವು ಜೋರಾಗಿ ಅಳುವುದರಿಂದ ನಿಮ್ಮ ಮನಸ್ಸು ಹಗುರವಾಗುತ್ತದೆ, ದುಃಖ ದೂರವಾಗುತ್ತದೆ. ಅಳುವುದರಿಂದ ಕಣ್ಣುಗಳು ಸ್ವಚ್ಛಗೊಳ್ಳುತ್ತವೆ. ಕಣ್ಣೀರು ಕಣ್ಣುಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅನೇಕ ರೀತಿಯ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ ಎನ್ನಲಾಗಿದೆ. ಆದಾಗ್ಯೂ ತುಂಬಾ ಸಿಲ್ಲಿ ವಿಚಾರಕ್ಕೆ ಯಾಕೆ ಅಳು ಬರುತ್ತದೆ ಅನ್ನೋದು ದೊಡ್ಡ ಪ್ರಶ್ನೆ. ಒಂದು ಸಣ್ಣ ಕಪ್‌ ಒಡೆದು ಹೋದರೂ ನಮಗೆ ಅಳು ಬರಬಹುದು. ಆ ಮುರಿದ…

Read More

ದಾವಣಗೆರೆ: ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ವೆಂಕಟೇಶ್ ಎಂ.ವಿ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿ ಹೆರಿಗೆ ವಾರ್ಡ್, ತುರ್ತು ನಿಗಾ ಘಟಕ ಹಾಗೂ ಹೊಸದಾಗಿ ಆರಂಭವಾಗಿರುವ ಡಯಾಲಿಸಿಸ್ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಡಯಾಲಿಸಿಸ್ ಘಟಕದಲ್ಲಿ ರೋಗಿಗಳಿಗೆ ಬೇಕಾದ ಡಯಾಲಿಸಿಸ್ ಕಿಟ್‍ಗಳ ದಾಸ್ತಾನು ಮತ್ತು ಔಷಧ, ಕೆಮಿಕಲ್ಸ್ ದಾಸ್ತಾನಿಟ್ಟುಕೊಂಡು ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ಸೂಚನೆ ನೀಡಿದರು. ಹೆರಿಗೆ ವಾರ್ಡ್‍ಗೆ ಭೇಟಿ ನೀಡಿ ಹೆರಿಗೆ ಪೂರ್ವ ಮತ್ತು ಹೆರಿಗೆ ನಂತರದಲ್ಲಿ ಸರಿಯಾದ ಚಿಕಿತ್ಸೆ ಲಭ್ಯವಾ ಗಬೇಕು, ಇದರಿಂದ ತಾಯಿ ಮಗುವಿನ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಅಗತ್ಯವಿರುವವರಿಗೆ ತೀವ್ರ ನಿಗಾ ಘಟಕದಲ್ಲಿ ಸೂಕ್ತವಾದ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು. ಈ ವೇಳೆ ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ ಉಪಸ್ಥಿತರಿದ್ದರು.

Read More

ಇಂದು ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಗ್ರಾಮೀಣ ಸ್ಥಳೀಯ ಸಮಿತಿ ವತಿಯಿಂದ ಕಂಪ್ಲಿ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ, ಶಿಕ್ಷಣ, ಆರೋಗ್ಯ ಮತ್ತು ವಿದ್ಯುತ್ ಸೇರಿದಂತೆ ಹಲವಾರು ಸಾರ್ವಜನಿಕ ಸಂಸ್ಥೆಗಳ ಖಾಸಗಿಕರಣದಂತಹ ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಸಹಿಗಳನ್ನು ಸಂಗ್ರಹಿಸಲಾಯಿತು.ಎಸ್ ಯು ಸಿ ಐ ಗ್ರಾಮೀಣ ಸ್ಥಳಿಯ ಸಮಿತಿ ಕಾರ್ಯದರ್ಶಿಗಳಾದ ಎ. ದೇವದಾಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ ನಮ್ಮ ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ಸಹ ಇದುವರೆಗೂ ಜನರ ಜೀವನದಲ್ಲಿ ಯಾವುದೇ ಪ್ರಗತಿಯನ್ನು ಕಾಣಲಾಗಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಮಧ್ಯಂತರ ಬಡ್ಜೆಟ್ ನಲ್ಲಿಯೂ ಸಹ ಬಡ ಜನಪರವಾದ ಯಾವುದೇ ಯೋಜನೆಯನ್ನು ನಾವು ಕಾಣಲಾಗಿಲ್ಲ, ಇಂದು ಹಸಿವಿನ ಸೂಚ್ಯಂಕ ದಲ್ಲಿ ಭಾರತ 111 ನೇ ಸ್ಥಾನಕ್ಕೆ ಕುಸಿದಿದೆ,…

Read More

ವಿಜಯಪುರ: ವಿವಿಧ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ವಿಜಯಪುರ ನಗರದ ಖಾಜಾ ನಗರದಲ್ಲಿ ಸ್ಥಳೀಯರಿಂದ ಪ್ರತಿಭಟನೆ ನಡೆಸಲಾಯಿತು. ಕುಡಿಯುವ ನೀರು, ಚರಂಡಿ ವ್ಯವಸ್ಥೆ, ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನೆ ಮಾಡಿದರು. ಟೈಯರ್‌ಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಆಕ್ರೋಶ ಹೊರಹಾಕಿದರು.

Read More

ಚಿತ್ರದುರ್ಗ: ಪ್ರೀತಿಸಿ‌ ಮದುವೆಯಾದ ಯುವ ಪ್ರೇಮಿಗಳಿಗೆ  ಪೋಷಕರೇ ವಿಲನ್ ಆಗಿ ಯುವತಿಯನ್ನು ಬೇರ್ಪಡಿಸಿ ಬಲವಂತವಾಗಿ ಮನೆಗೆ ಕರೆದುಕೊಂಡು ಹೋದ ಘಟನೆ ಮೊಳಕಾಲ್ಮೂರಿನ ಬಿಜಿ ಕೆರೆ ಗ್ರಾಮದಲ್ಲಿ ನಡೆದಿದ್ದು, ಇದರ  ವಿಡಿಯೋ ಸಾಮಾಜಿಕ ವೈರಲ್ ಆಗಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೋಸನಸಾಗರದ ಕುರುಬ ಸಮುದಾಯದ ಪದ್ಮಜಾ ಹಾಗೂ ಬಿಜಿಕೆರೆಯ ನಾಯಕ  ಸಮುದಾಯದ ಪ್ರವೀಣ್, ಇಬ್ಬರು ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಪದ್ಮಜಾ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಇಬ್ಬರು ರಿಜಿಸ್ಟರ್ ಮ್ಯಾರೇಜ್ ಗೆ ರೆಡಿಯಾಗಿ ಹೋಗುತ್ತಿದ್ದ ವೇಳೆ ಯುವತಿಯ ಪೋಷಕರು ದಾರಿಯಲ್ಲಿ ಅಡ್ಡ ಹಾಕಿ ಬಲವಂತದಿಂದ  ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಘಟನೆಯ ಬಳಿಕ ಪ್ರವೀಣ್  ಚಳ್ಳಕೆರೆ ಠಾಣೆಯಲ್ಲಿ ದೂರು ದಾಖಲಿಸಿ ಇಬ್ಬರಿಗೂ ನ್ಯಾಯಕೊಡಿಸಿ ಎಂದು ಮನವಿ ಮಾಡಿದ್ದಾರೆ. https://ainlivenews.com/do-you-know-how-to-keep-vegetables-from-spoiling-in-summer/ ಇತ್ತ ಪ್ರವೀಣ್ ಗೆ ಯುವತಿಯ ಸಹೋದರ ಶ್ರೀನಿವಾಸ್ ಬೆದರಿಕೆ ಕರೆ ಮಾಡಿದ್ದಾನೆ. ಜೊತೆಗೆ ತಂಗಿಗೆ ವಿಷ ಹಾಕಿ ಸಾಯಿಸುತ್ತೇವೆ, ನಿನಗೆ ಕೊಡಲ್ಲ ಎಂದು ವಾಟ್ಸಪ್ ಮೆಸೇಜ್ ಮಾಡಿದ್ದಾನೆ.…

Read More