Author: AIN Author

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸಂವಿಧಾನ ತಜ್ಞ ಹಾಗೂ ಸುಪ್ರೀಂ ನ ಹಿರಿಯ ವಕೀಲ ಫಾಲಿ ನಾರಿಮನ್ ನಿಧನ ಹೊಂದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಅವರು ಮಂಗಳವಾರ ರಾತ್ರಿ ದೆಹಲಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು 1971 ರಿಂದ ಸುಪ್ರೀಂ ಕೋರ್ಟ್ ವಕೀಲರಾಗಿದ್ದಾರೆ. ಅವರು 1972-75ರ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದರು. ದೇಶವು ಅವರಿಗೆ 1991 ರಲ್ಲಿ ಪದ್ಮಭೂಷಣ ಮತ್ತು 2007ರಲ್ಲಿ ಪದ್ಮ ವಿಭೂಷಣ ನೀಡಿ ಗೌರವಿಸಿತು. ಅವರು 1999-2005ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಭಾರತೀಯ ವಕೀಲರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ನಾರಿಮನ್ ಜನವರಿ 10, 1929 ರಂದು ಮ್ಯಾನ್ಮಾರ್‌ನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು . ಅವರು ಬಾಂಬೆ ಹೈಕೋರ್ಟ್‌ನಲ್ಲಿ ತಮ್ಮ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದರು. ಅವರ ಪುತ್ರ ರೋಹಿಂಟನ್ ನಾರಿಮನ್ ಕೂಡ ಹಿರಿಯ ವಕೀಲರಾಗಿದ್ದು ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಯಾಗಿದ್ದಾರೆ. ನಾರಿಮನ್ ನವೆಂಬರ್ 1950ರಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಅವರು…

Read More

ಬಿಹಾರ:- ಇಲ್ಲಿನ ಲಖಿಸರಾಯ್ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದ್ದು,ಅಪರಿಚಿತ ವಾಹನವೊಂದು ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಮೃತಪಟ್ಟಿದ್ದು, ಆರು ಜನರು ಗಾಯಗೊಂಡಿರುವ ಘಟನೆ ಜರುಗಿದೆ ಲಖಿಸರಾಯ್-ಸಿಕಂದ್ರ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಆಟೋ ಲಖಿಸರಾಯ್‌ನಿಂದ ಸಿಕಂದ್ರ ಕಡೆಗೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ವೇಳೆ ಆಟೋರಿಕ್ಷಾದಲ್ಲಿ 15 ಮಂದಿ ಇದ್ದರು. ಅಪಘಾತದ ರಭಸಕ್ಕೆ ಆಟೊರಿಕ್ಷಾ ಜಖಂಗೊಂಡಿತ್ತು. ಮೃತ ಒಂಬತ್ತು ಮಂದಿಯಲ್ಲಿ ಒಬ್ಬನನ್ನು ಚಾಲಕ ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಅಪಘಾತದ ಮಾಹಿತಿ ಪಡೆದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ಮೊದಲು ಕಳುಹಿಸಲಾಯಿತು, ಆದರೆ ಅವರ ಸ್ಥಿತಿ ಗಂಭೀರವಾದ ಕಾರಣ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದ ಎಂಟು ಮಂದಿ ಬಲಿಪಶುಗಳು ಮತ್ತು ಗಾಯಗೊಂಡವರ ಗುರುತು ಪತ್ತೆ ಹಚ್ಚಲಾಗುತ್ತಿದೆ. ಅಪರಿಚಿತ ವಾಹನ ಪತ್ತೆಗೆ ತನಿಖೆ ಮುಂದುವರೆದಿದೆ.

Read More

ಬೆಂಗಳೂರು:-  ಸರ್ಕಾರಿ‌ ಕೆಲಸ ಕೊಡಿಸೋದಾಗಿ ಹಣ ಪಡೆದು ಯುವಕರಿಗೆ ವಂಚನೆ ಮಾಡುತ್ತಿದ್ದ ಖತರ್ನಾಕ್ ದಂಪತಿಯನ್ನು ಅರೆಸ್ಟ್ ಮಾಡಲಾಗಿದೆ. ಪ್ರಕಾಶ್ ಹಾಗೂ ಮಧು ಪ್ರಕಾಶ್ ಬಂಧಿತ ಆರೋಪಿಗಳು. ಪ್ರಕಾಶ್ ಹಾಗೂ ಮಧು ಜೋಡಿ, ಕೆಲಸಕ್ಕಾಗಿ ಅಲೆಯುವ ಯುವಕರನ್ನು ಹುಡುಕಿ ಸರ್ಕಾರಿ ನೌಕರಿ ಕೊಡಿಸೋದಾಗಿ ಕಲರ್ ಕಲರ್ ಕಾಗೆ ಹಾರಿಸುತ್ತಿದ್ದರು. ನಮಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯ ಇದೆ. ಅಲ್ಲದೆ ವಿವಿಧ‌ ಇಲಾಖೆಯ ಮುಖ್ಯಸ್ಥರು ಪರಿಚಯ ಇದ್ದಾರೆ. ಖಾಲಿ‌ ಇರುವ ಸರ್ಕಾರಿ‌ ಕೆಲಸ ಕೊಡಿಸೋದಾಗಿ‌ ಹೇಳಿ ಯುವಕರಿಂದ ಹಣ ವಸೂಲಿ ಮಾಡುತ್ತಿದ್ದರು. 6 ಲಕ್ಷ ಹಣ ಪಡೆದು ಕೆಲಸ ಕೊಡಿಸದೇ ಕಳ್ಳಾಟ ಆಡ್ತಿದ್ದರು. ಸದ್ಯ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ವಿದ್ಯಾರಣ್ಯಪುರ ಠಾಣೆಯಲ್ಲೇ ಆರೋಪಿಗಳ ವಿರುದ್ಧ 3 ಪ್ರಕರಣ ದಾಖಲಿರೋದು ಪತ್ತೆಯಾಗಿದೆ. ನಗರದ ಹಲವು ಠಾಣೆಗಳಲ್ಲೂ ದಂಪತಿ ವಿರುದ್ಧ ಕೇಸ್ ದಾಖಲಾಗಿವೆ. ಬಂಧಿತರಿಂದ 2 ಲಕ್ಷ ನಗದು ಹಣ, 4 ಫೋನ್, ಒಂದು‌‌ ದ್ವಿಚಕ್ರ ವಾಹನ, 6 ಬ್ಯಾಂಕ್ ಅಕೌಂಟ್ ಗೆ ಸೇರಿದಂತೆ…

Read More

ಬೆಂಗಳೂರು:- ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸಲು ಸರ್ಕಾರದ ಆದೇಶ ಮಾಡಿದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ತಡೆ ನೀಡಿದೆ. ಆದೇಶ ಪ್ರಶ್ನಿಸಿ ರಂಜಿ ಪೂಣಚ್ಚ, ಕುಟ್ಟಪ್ಪ ಅರ್ಜಿ ಸಲ್ಲಿಸಿದ್ದರು. ಕೊಡಗಿನಲ್ಲಿ ಜನರಿಗೆ ಸಿಐಡಿ ನೋಟಿಸ್ ನೀಡುತ್ತಿದ್ದು, ನೂರಾರು ವರ್ಷಗಳ ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸುವಂತೆ ನೋಟಿಸ್ ನೀಡಲಾಗಿದೆ. ನೋಟಿಸ್‌ನಿಂದ‌ ಕೊಡಗು ನಿವಾಸಿಗಳ ಮೂಲಭೂತ ಹಕ್ಕಿಗೆ ಧಕ್ಕೆ ಎಂದು ವಾದ ಮಾಡಿದ್ದರಿಂದಾಗಿ ರಾಜ್ಯ ಸರ್ಕಾರದ ಆದೇಶಕ್ಕೆ‌ ಹೈಕೋರ್ಟ್ ಮಧ್ಯಂತರ ತಡೆ‌ ನೀಡಿದೆ.

Read More

ಮೈಸೂರು:- ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿ ಆಯ್ಕೆಗಾಗಿ ಹುಡುಕಾಟ ನಡೆಸುತ್ತಿದೆ. ಒಂದೆಡೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ ಲೋಕಸಭಾ ವ್ಯಾಪ್ತಿಯ ಅಭ್ಯರ್ಥಿ ಹುಡುಕಾಟವೇ ಕಾಂಗ್ರೆಸ್​​ಗೆ ಸವಾಲಾಗಿದೆ. ಮೈಸೂರು ಹಾಗೂ ಕೊಡಗು ಜಿಲ್ಲೆಗಳು ಮೇಲ್ನೋಟಕ್ಕೆ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿದ್ದರೂ, ಲೋಕಸಭಾ ಚುನಾವಣೆ ವಿಚಾರದಲ್ಲಿ ಮಾತ್ರ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಪಕ್ಷದ ಈ ಹಿನ್ನಡೆಗೆ ಬಹುಮುಖ್ಯ ಕಾರಣ ಅಭ್ಯರ್ಥಿ ಆಯ್ಕೆಯಲ್ಲಿನ ಎಡವಟ್ಟು. ಕಾಂಗ್ರೆಸ್ ನಾಯಕರ ಈ ತಪ್ಪು ಕಳೆದೆರಡು ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದೆ. ಈ ಕಾರಣದಿಂದಲೇ 2024ರ ಚುನಾವಣೆಗೆ ಬಲಿಷ್ಠ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸಿರುವ ಕಾಂಗ್ರೆಸ್‌ ನಾಯಕರು ಆ ಮೂಲಕ ಬಿಜೆಪಿ ಭದ್ರಕೋಟೆಗೆ ಲಗ್ಗೆಯಿಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಸೂಕ್ತ ಬಲಿಷ್ಠ ಅಭ್ಯರ್ಥಿಯ ಹುಡುಕಾಟದಲ್ಲಿರುವ ಕಾಂಗ್ರೆಸ್ ಗೆ ಇನ್ನು ಪ್ರಬಲ ಅಭ್ಯರ್ಥಿಯೇ ಸಿಕ್ಕಿಲ್ಲ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಹಿಡಿತದಲ್ಲಿತ್ತು. ಆದರೆ 2014ರಲ್ಲಿ ದೇಶಾದ್ಯಂತ ಎದುರಾದ ನರೇಂದ್ರ ಮೋದಿ ಅವರ…

Read More

ಭೋಪಾಲ್‌: ಸಂಧಾನ ಮಾಡಲು ತೆರಳಿದ್ದ ಗರ್ಭಿಣಿಯ (Pregnant Women) ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿದ ಭೀಕರ ಘಟನೆ ಮಧ್ಯಪ್ರದೇಶದ (Madhya Pradesh) ಮೊರೇನಾ ಜಿಲ್ಲೆಯಲ್ಲಿ ನಡೆದಿದೆ. 38 ವರ್ಷದ ಸಂತ್ರಸ್ಥೆಯು ತನ್ನ ಪತಿ ಮಾಡಿದ ಅತ್ಯಾಚಾರಕ್ಕೆ ಮಾತನಾಡಿ ಸಂಧಾನ ನಡೆಸಲು ಆರೋಪಿಗಳ ಮನೆಗೆ ತೆರಳಿದ್ದರು. ಈ ವೇಳೆ ಅಲ್ಲಿನ ಮೂವರು ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ. ಬಳಿಕ ಸಂತ್ರಸ್ಥ ಮಹಿಳೆ ಪತಿಯ ಮೇಲೆ ಮೇಲೆ ಆತ್ಯಾಚಾರದ ಆರೋಪದ ಮಾಡಿದ್ದ ಮಹಿಳೆ, ಗರ್ಭಿಣಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾಳೆ. ಮಹಿಳೆಗೆ ಶೇ.80 ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಸಂತ್ರಸ್ತೆಯ ಪತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಮ್ಯಾಜಿಸ್ಟ್ರೇಟ್‌ ಬಳಿ ಸಂಸ್ತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಪೊಲೀಸರು ಈವರೆಗೆ ಹೇಳಿಕೆ ದಾಖಲಿಸಿಲ್ಲ, ಆದ್ರೆ ತನಿಖೆ ಮುಂದುವರಿಸುತ್ತಿರುವುದಾತಿ ತಿಳಿಸಿದ್ದಾರೆ. https://ainlivenews.com/do-you-know-why-you-should-not-cut-your-nails-at-night-here-is-the-real-reason/ ಮಾಹಿತಿ ಪ್ರಕಾರ, ಸಂತ್ರಸ್ತೆಯ ಪತಿ ಸುರೇಶ್‌ ಸಂಖ್ವಾರ್‌ ಮೊರೆನಾ ಜಿಲ್ಲೆಯ…

Read More

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮತದಾನದ ಕುರಿತು ಜಾಗೃತಿ ಮೂಡಿಸಲು ಮತ್ತು ಮತದಾನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಚುನಾವಣಾ ಅಧಿಕಾರಿಗಳು ಸೆಲೆಬ್ರಿಟಿಗಳ ಹಿಂದೆ ಬಿದ್ದಿದ್ದಾರೆ. ಪಂಜಾಬ್​ ರಾಜ್ಯವು ತಮ್ಮ ರಾಜ್ಯದಲ್ಲಿ ಮತದಾರರನ್ನು ಆಕರ್ಶಿಸಲು ಟೀಂ ಇಂಡಿಯಾದ ಆಟಗಾರರಾರರೊಬ್ಬರನ್ನು ಸ್ಟೇಟ್​ ಐಕಾನ್ ಎಂದು ಘೋಷಿಸಿದೆ. ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್​ ಶುಭ್ಮನ್​ ಗಿಲ್​ ಅವರನ್ನು ಪಂಜಾಬ್​ ರಾಜ್ಯವು ತಮ್ಮ ಸ್ಟೇಟ್ ಐಕಾನ್ ಎಂದು ಫೆ.19 ರಂದು ಘೋಷಣೆ ಮಾಡಿದೆ. ಪಂಜಾಬ್​ ಮೂಲದ ಗಿಲ್ ರ ಆಟಕ್ಕೆ ಪಂಜಾಬ್ ಸೇರಿದಂತೆ ಭಾರತದ ಯುವಪೀಳಿಗೆ ಹೆಚ್ಚ ಇಷ್ಟ ಪಡುತ್ತದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮತದಾರರನ್ನು ಉತ್ತೇಜಿಸುವ ಮೂಲಕ ಶುಭ್ಮನ್ ಗಿಲ್ ಪಂಜಾಬ್ ರಾಜ್ಯವು ಶೇ.70ಕ್ಕಿಂತ ಹೆಚ್ಚು ಮತದಾನದ ಪ್ರಮಾಣವನ್ನು ತಲುಪಲು ಸಹಾಯ ಮಾಡುತ್ತದೆ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

Read More

ಬೆಂಗಳೂರು:- ನಗರದಲ್ಲಿ ಶೂ ಕಳ್ಳನೋರ್ವ ಆ್ಯಕ್ಟಿವ್ ಆಗಿದ್ದಾನೆ. ಈತ ಮಹಿಳೆಯರಂತೆ ನೈಟಿ ಹಾಕಿಕೊಂಡು ಬಂದು ಅಪಾರ್ಟ್​ಮೆಂಟ್​​ಗೆ ನುಗ್ಗಿ ಶೂ ಕದಿಯುತ್ತಾನೆ. ಸದ್ಯ ಖತರ್ನಾಕ್ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅನಿಲ್ ಎಂಬುವವರು ಎಕ್ಸ್​ನಲ್ಲಿ ಸಿಸಿಟಿವಿ ದೃಶ್ಯ ಸಮೇತ ಪೋಸ್ಟ್ ಮಾಡಿ ವಿಚಿತ್ರ ಕಳ್ಳರಿದ್ದಾರೆ ಎಚ್ಚರವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ತನ್ನ ಗುರುತು ಸಿಗಬಾರದು ಎಂದು ಮಹಿಳೆಯರಂತೆ ನೈಟಿ ಧರಿಸಿ ಕಳ್ಳತನಕ್ಕೆ ಇಳಿಯುವ ಖತರ್ನಾಕ್ ಕಳ್ಳ, ಬೆಂಗಳೂರಿನ ಅಪಾರ್ಟ್​ಮೆಂಟ್​​ಗೆ ನುಗ್ಗಿ ಶೂ ಕದಿಯುತ್ತಾನೆ. ಬೆಳೆಬಾಳುವ ಶೂಗಳನ್ನು ಕದ್ದು ಕಾಂಪೌಂಡ್ ಹಾರಿ ಕಳ್ಳ ಪರಾರಿಯಾಗುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅನಿಲ್ ಕುಮಾರ್ ಎಂಬಾತ ಕಳ್ಳನ ಕೃತ್ಯದ ಬಗ್ಗೆ ಪೋಸ್ಟ್​​ ಮಾಡಿದ್ದಾರೆ. ಟ್ವೀಟ್​​ನಲ್ಲಿ ಇಂತಹ ವಿಚಿತ್ರ ಕಳ್ಳರಿದ್ದಾರೆ ಎಚ್ಚರವಹಿಸಿ ಎಂದು ಪೋಸ್ಟ್​​ ಮಾಡಿದ್ದಾ

Read More

 ಇಂಗ್ಲೆಂಡ್‌ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿರುವ ಭಾರತ ತಂಡದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್‌ ಅವರನ್ನು ಆಂಗ್ಲರ ಮಾಜಿ ನಾಯಕ ಅಲ್‌ಸ್ಟೈರ್‌ ಕುಕ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ ಬಾರಿಸಿದ್ದ ಸಿಕ್ಸರ್‌ಗಳನ್ನು ಯಶಸ್ವಿ ಜೈಸ್ವಾಲ್ ಅವರು ಒಂದೇ ಇನಿಂಗ್ಸ್‌ನಲ್ಲಿ ಬಾರಿಸಿದ್ದಾರೆಂದು ಹೇಳಿದ್ದಾರೆ. ರಾಜ್‌ಕೋಟ್‌ನಲ್ಲಿ ಭಾನುವಾರ ಅಂತ್ಯವಾಗಿದ್ದ ಮೂರನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಜೈಸ್ವಾಲ್‌ ಬರೋಬ್ಬರಿ 12 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಸತತ ಎರಡನೇ ದ್ವಿಶತಕವನ್ನು ಬಾರಿಸಿದ್ದರು. ರಾಜ್‌ಕೋಟ್‌ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಯಶಸ್ವಿ ಜೈಸ್ವಾಲ್‌ ಅವರು ಸಿಕ್ಸರ್‌ಗಳ ಮೇಲೆ ಸಿಕ್ಸರ್‌ಗಳನ್ನು ಸಿಡಿಸಿದ್ದರು. ಅತ್ಯುತ್ತಮ ಬ್ಯಾಟ್‌ ಮಾಡಿದ್ದ ಇವರು 14 ಬೌಂಡರಿಗಳು ಹಾಗೂ 12 ಸಿಕ್ಸರ್‌ಗಳ ಮೂಲಕ 214 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಸತತ ಎರಡನೇ ದ್ವಿಶತಕವನ್ನು ಬಾರಿಸಿದ್ದರು. ಮಾಜಿ ಬ್ಯಾಟ್ಸ್‌ಮನ್‌ ವಿನೋದ್‌ ಕಾಂಬ್ಳಿ ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ…

Read More

ನಿರಂತರ ಕ್ರಿಕೆಟ್‌ನಿಂದಾಗಿ ಆಟಗಾರರಿಗೆ ವಿಶ್ರಾಂತಿ ಪಡೆಯಲು ಕಡಿಮೆ ಸಮಯ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಮ್ಯಾನೇಜ್‌ಮೆಂಟ್ ತನ್ನ ಆಟಗಾರರಿಗೆ ಕಾಲಕಾಲಕ್ಕೆ ಬ್ರೇಕ್ ನೀಡುತ್ತಲೇ ಬರುತ್ತಿದೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್‌ಗಳ ಸರಣಿಯ ನಾಲ್ಕನೇ ಪಂದ್ಯದಲ್ಲಿಯೂ ಟೀಮ್‌ ಮ್ಯಾನೇಜ್‌ಮೆಂಟ್‌ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಸೂತ್ರವನ್ನು ಅನುಸರಿಸಲಿದೆ. ವರದಿಗಳ ಪ್ರಕಾರ, ಜಸ್‌ಪ್ರೀತ್‌ ಬುಮ್ರಾ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆಯಬಹುದು. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಂತರ ಎಲ್ಲಾ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್‌ಗೂ ವಿಶ್ರಾಂತಿ ನೀಡಲಾಗಿತ್ತು. HSRP ನಂಬರ್ ಪ್ಲೇಟ್ ವಿಸ್ತರಣೆ ಬೆನ್ನಲ್ಲೆ ವಾಹನ ಸವಾರರಿಗೆ ಮತ್ತೊಂದು ಸಂಕಷ್ಟ! ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಹಿನ್ನೆಲೆಯಲ್ಲಿ ಆಟಗಾರರು ಕಾಲಕಾಲಕ್ಕೆ ವಿರಾಮಗಳನ್ನು ಪಡೆಯಬೇಕೆಂದು ಮಂಡಳಿಯು ಬಯಸುತ್ತದೆ. ಇದರಿಂದ ಅವರು ರಾಷ್ಟ್ರೀಯ ತಂಡ ಮತ್ತು ಫ್ರಾಂಚೈಸಿ ಕ್ರಿಕೆಟ್‌ಗಾಗಿ ತಮ್ಮನ್ನು ತಾವು ಸಿದ್ದವಾಗಿಟ್ಟುಕೊಳ್ಳಬಹುದು. ಹಾಗಾಗಿ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಕೊನೆಯ ಪಂದ್ಯಗಳಿಂದ…

Read More