Author: AIN Author

ಧಾರವಾಡ: ದೇಶದಲ್ಲಿ ಮೊದಲು ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿದ್ದವು. ಆರ್ಟಿಕಲ್ 370 ( Article 370) ತೆಗೆದು ಉಗ್ರರ ಚಟುವಟಿಕೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ. ನರೇಂದ್ರ ಗ್ರಾಮದಲ್ಲಿ ನಡೆಯುತ್ತಿರುವ ಸಂಸದರ ಕ್ರೀಡೋತ್ಸವದ ಕಬಡ್ಡಿ ಪಂದ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ, ಮೊದಲು ಬೆಂಗಳೂರು, ಹೈದರಾಬಾದ್‍ನಲ್ಲಿ ಬಾಂಬ್ ಹಾರುತ್ತಿದ್ದವು. ಈಗ ಎಲ್ಲವೂ ಬಂದ್ ಆಗಿದೆ. https://ainlivenews.com/do-you-keep-eggs-in-the-fridge-and-eat-them-then-see-this-story/ ಏಕೆಂದರೆ ಆರ್ಟಿಕಲ್ 370 ಕಿತ್ತೆಸೆಯಲಾಗಿದೆ. ಮೊದಲು ದೇಶದೊಳಗೆ ಬಂದು ಬಾಂಬ್ ಹಾಕುತ್ತಿದ್ದರು. ಈಗ ನಾವು ಪಾಕಿಸ್ತಾನದ ಅವರ ಮನೆಗೆ ನುಗ್ಗಿ ಹೊಡೆಯುತ್ತಿದ್ದೇವೆ. ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ. ಈಗ ಎಲ್ಲಿಯಾದರೂ ಬಾಂಬ್ ಹಾರುತ್ತಿವೆಯಾ ಎಂದು ಅವರು ಪ್ರಶ್ನಿಸಿದ್ದಾರೆ.  ಮೋದಿಯವರು ಆರ್ಟಿಕಲ್ 370 ತೆಗೆದಿದ್ದೇ ಇದಕ್ಕೆಲ್ಲ ಕಾರಣ. ಹೀಗಾಗಿ ಬಿಜೆಪಿಯ 370 ಸ್ಥಾನ ತಾವು ಆರಿಸಿ ಕಳುಹಿಸಬೇಕು. ಇದುವೇ ನೀವು ಮೋದಿಯವರಿಗೆ ಕೊಡುವ ಗಿಫ್ಟ್ ಎಂದು ಹೇಳಿದರು.

Read More

ಬೆಂಗಳೂರು: ಖಾಸಗಿ  ಶಾಲೆಗಳಿಗೆ ನಾಡಗೀತೆ ವಿನಾಯ್ತಿ ಆದೇಶ ವಿಚಾರ  ಸಂಬಂಧಿಸಿದಂತೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ   ಸಚಿವ ಶಿವರಾಜ್ ತಂಗಡಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. Bigg Breaking: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ: ಸರ್ಕಾರದಿಂದ ಮತ್ತೊಂದು ವಿವಾದಿತ ಆದೇಶ ಈ ಬಗ್ಗೆ ಮಾತನಾಡಿದ ಅವರು,   ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ ನಮ್ಮಗೆ ಎಲ್ಲಾ ಶಾಲೆಗಳು  ಒಂದೇ  ಆದೇಶ ಮಾಡಬೇಕಾದ್ರೆ ಸರ್ಕಾರಿ ಶಾಲೆ ಅನುದಾನಿತ‌ ಶಾಲೆ ಅಂತಾ ಹಾಕಿದ್ದಾರೆ  ಅದು ಎಲ್ಲಾ ಶಾಲೆಗಳು ಅಂತಾ ಹಾಕಿಸುತ್ತೇವೆ ನಮ್ಮ ಸರ್ಕಾರ ಕನ್ನಡ ಬಗ್ಗೆ ಕಾಳಜಿ ಇಟ್ಟಿದೆ ನಾವು ಬಹಳ ಸ್ಪಷ್ಟವಾಗಿ ಇದ್ದೇವೆ ಆದೇಶ ಪ್ರತಿಯ ಸಾಧಕ ಭಾದಕ ಹೇಳಬೇಕು ಮಾಧ್ಯಮ ಮಿತ್ರರಿಗೆ ಇದರ ಬಗ್ಗೆ ತಿಳಿಸಬೇಕು ಅಂತಾನೇ  ಬಂದ ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆ ಆಗಿದೆ ಎಂದು ಸ್ಟಷ್ಟನೆ ನೀಡಿದರು. ಹಾಗೆ ಶೇಕಡ 60 ಪರ್ಸೆಂಟ್ ಕನ್ನಡ ಫಲಕ ಹಾಕುವ ವಿಚಾರ ವಿಧಾನ ಸಭೆ, ಪರಿಷತ್ ಅಲ್ಲಿ ಚರ್ಚೆ…

Read More

ಬೆಂಗಳೂರು: ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಫಾಲಿ ಎಸ್ ನಾರಿಮನ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಎಂದು ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶದ ಅತ್ಯಂತ ಶ್ರೇಷ್ಠ ನದಿ ನೀರಿನ ವಿವಾದ ತಜ್ಞರಾಗಿದ್ದ ನಾರಿಮನ್ ಅವರು ದಶಕಗಳ ಕಾಲ ಕರ್ನಾಟಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದರು. https://twitter.com/CMofKarnataka/status/1760177604391211293?t=H0iFZZOlMUDEwNB0YZu8_g&s=19 ಕೃಷ್ಞಾ, ಕಾವೇರಿ ನದಿಗಳ ಜಲಹಂಚಿಕೆ ವಿವಾದಗಳಲ್ಲಿ ಕರ್ನಾಟಕದ ರೈತರಿಗೆ ನ್ಯಾಯ ಸಿಕ್ಕಿದ್ದರೆ ಅದರಲ್ಲಿ ನಾರಿಮನ್ ಅವರ ದೊಡ್ಡ ಕೊಡುಗೆ ಇದೆ.ಸುಪ್ರೀಂಕೋರ್ಟ್‌ನ ನ್ಯಾಯಪೀಠದ ಗೌರವಾದರಗಳಿಗೆ ಪಾತ್ರರಾಗಿದ್ದ ನಾರಿಮನ್ ಅವರಂತಹವರು ನ್ಯಾಯವಾದಿಯಾಗಿ ಸಿಕ್ಕಿದ್ದು ಕರ್ನಾಟಕದ ಪಾಲಿನ ಭಾಗ್ಯವಾಗಿತ್ತು. ವಕೀಲಿ ವೃತ್ತಿಯಿಂದ ಬಂದ ನನಗೆ ಅವರ ಬಗ್ಗೆ ವಿಶೇಷವಾದ ಅಭಿಮಾನ ಇತ್ತು. ದೇಶದ ಖ್ಯಾತ ಮತ್ತು ಪ್ರತಿಭಾವಂತ ವಕೀಲರಾಗಿದ್ದ ನಾರಿಮನ್ ಅವರ ಜೊತೆಗೆ ನನ್ನದು ದೀರ್ಘಕಾಲದ ಒಡನಾಟ. ನೀರಾವರಿಗೆ ಸಂಬಂಧಿಸಿದ ಎಂತಹ ಜಟಿಲ ಸಮಸ್ಯೆಗಳು ಎದುರಾದರೂ ಉದ್ವೇಗಗೊಳ್ಳದೆ ಪರಿಹಾರದ ಕ್ರಮಗಳನ್ನು ಸೂಚಿಸುತ್ತಿದ್ದ ಅವರ ಕಸುಬುಗಾರಿಕೆ ಅನನ್ಯವಾದುದು.ಆಂತರಿಕವಾದ ಸಭೆಯಲ್ಲಿ ಅವರು ನೀಡುತ್ತಿದ್ದ ಸಲಹೆಗಳು ಮತ್ತು…

Read More

ಬೆಂಗಳೂರು: ಏರ್ ಇಂಡಿಯಾ ಸಿಬ್ಬಂದಿಗೆ ತಾನೊಬ್ಬ ಟೆರರಿಸ್ಟ್ ಎಂದು ಬೆದರಿಕೆ ಹಾಕಿರುವ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಏರ್ ಇಂಡಿಯಾ ಸಿಬ್ಬಂದಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಗೆ ದೂರು ನೀಡಿದ್ದು ಆದರ್ಶ್ ಕುಮಾರ್ ಸಿಂಗ್ ಎಂಬಾತನ ವಿರುದ್ದ ದೂರು ನೀಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ವಾಹನ ಸವಾರರೇ ಇಲ್ಲಿ ಕೇಳಿ – ಆ್ಯಂಬುಲೆನ್ಸ್​ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಗಾಡಿ ಓಡಿಸಿದ್ರೆ ಬೀಳುತ್ತೆ ದಂಡ! ಫೆಬ್ರವರಿ 17 ರಂದು ಬೆಂಗಳೂರಿನಿಂದ ಲಕ್ನೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಈ ವೇಳೆ ಯಾವುದೇ ಟಿಕೆಟ್ ಇಲ್ಲದೇ ಫ್ಲೈಟ್ ಹತ್ತಲು ಬಂದಿದ್ದ ಆದರ್ಶ್ ಕುಮಾರ್ ಸಿಂಗ್ CISF ತಪಾಸಣೆ ವೇಳೆ ತಾನೊಬ್ಬ ಟೆರರಿಸ್ಟ್ ಎಂದಿದ್ದ ಆದರ್ಶ್ ಕುಮಾರ್ ಸಿಂಗ್ ಆದರ್ಶ್ ಕುಮಾರ್ ಸಿಂಗ್ ಮಾತನ್ನ ಕೇಳಿ ಬೆಚ್ಚಿಬಿದ್ದಿದ್ದ ಏರ್ ಇಂಡಿಯಾ ಸಿಬ್ಬಂದಿ ಕೂಡಲೇ ಏರ್ಪೊರ್ಟ್ ಠಾಣೆ ಸಿಬ್ಬಂದಿಗೆ ಮಾಹಿತಿ ನೀಡಿದ್ದ ಏರ್ ಇಂಡಿಯಾ ಸಿಬ್ಬಂದಿ ಸದ್ಯ ಏರ್ಪೊರ್ಟ್ ಠಾಣೆ ಪೊಲೀಸರಿಂದ ಆದರ್ಶ್ ಕುಮಾರ್ ಸಿಂಗ್…

Read More

ದೊಡ್ಡಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಕುಂಬಾರ ಸಮುದಾಯದಿಂದ ತ್ರಿಪದಿ ಕವಿ ಸರ್ವಜ್ಞನ ಜಯಂತಿ ಆಚರಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ವೆಂಕಟಾಚಲಯ್ಯ ಮಾತನಾಡಿ, ಕುಂಬಾರರ ದೇವರು ಸರ್ವಜ್ಞ ಜಯಂತಿಯನ್ನು ಹಾಡೋ ನಹಳ್ಳಿ ಗ್ರಾಮದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ. ಈ ಮೂಲಕವಾದರೂ ಸಮಾಜ ಸಂಘಟಿತವಾಲಿ. ಎಲ್ಲರೂ ಕವಿ ಸರ್ವಜ್ಞನ ತತ್ವ ಆದರ್ಶ ಗಳನ್ನು ಪಾಲಿಸಿದರೆ ಉತ್ತಮವಾಗಿ ಜೀವನ ಸಾಗಿಸಬಹುದು. ೧೭ ನೆ ಶತಮಾನದಲ್ಲಿಯೇ ಬೀ ದಿ ಬೀದಿ ಅಲೆಯುತ್ತ ಸಮ ಸಮಾಜಕ್ಕೆ ದುಡಿದ ಮಹಾನ್ ವ್ಯಕ್ತಿ ಆಗಿದ್ದಾರೆ. ನಮ್ಮ ಸಮಾಜ ಏಳಿಗೆಗೆ ನಾವೆಲ್ಲ ದುಡಿಯುತ್ತಿದ್ದೇನೆ. ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಇನ್ನಷ್ಟು ಸಾಧಿಸಲು ಸಾಧ್ಯವಾಗುತ್ತದೆ. ಈಗಾಗಲೇ ಸಮಾಜದ ಕಲ್ಯಾಣ. ಮಂಟಪ ಶ್ರೀ ಕ್ಷೇ ತ್ರ ಘಾಟಿ ಯಲ್ಲಿ ನಿರ್ಮಾಣವಾಗಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಅಪ್ಪಯಣ್ಣ ಮಾತನಾಡಿ, ಕುಂಬಾರರ ಸಮುದಾಯ ಅತ್ಯಂತ ಕಷ್ಟದ ಜೀವನ ನಡೆಸುತ್ತಿದೆ. ಈಗೀಗ ಸಮಾಜ ಬೆಳಕಿಗೆ ಬರುತ್ತಿದೆ. ತಾರತಮ್ಯ ಮಾಡದೆ ಸವಲತ್ತು…

Read More

ಗದಗ: ಲಿಂ. ಡಾ. ತೋಂಟದ ಸಿಧ್ಧಲಿಂಗ ಮಹಾಸ್ವಾಮಿಗಳ 75 ನೇ ಜಯಂತಿ ಅಂಗವಾಗಿ ಭಾವೈಕ್ಯತಾ ಯಾತ್ರೆ ಗದಗ ನಗರದ ಭೀಷ್ಮ ಕೆರೆ ಆವರಣದ ಬಸವೇಶ್ವರ ಪುಥ್ಥಳಿ ಆವರಣದಲ್ಲಿ ಡಾ. ತೋಂಟದ ಸಿಧ್ಧರಾಮ ಶ್ರೀಗಳಿಂದ ಭಾವೈಕ್ಯತಾ ಯಾತ್ರೆಗೆ ಚಾಲನೆ ನೀಡಲಾಯಿತು. ಅದಕ್ಕೂ ಮುನ್ನ ಡಾ. ತೋಂಟದ ಸಿಧ್ಧರಾಮ ಶ್ರೀಗಳು ಭೀಷ್ಮ ಕೆರೆ ಆವರಣದ ಬಸವೇಶ್ವರ ಪುಥ್ಥಳಿಗೆ ಮಾಲಾರ್ಪಣೆ ಮಾಡಿದರು. ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತೋಂಟದಾರ್ಯ ಮಠದವರೆಗೂ ಸಾಗಲಿರುವ ಭಾವೈಕ್ಯತಾ ಯಾತ್ರೆಯಾಗಿದ್ದು, ವಿವಿಧ ಧರ್ಮಗಳ ಭಾವಚಿತ್ರಗಳ ಮೆರವಣಿಗೆಯಲ್ಲಿ ನೂರಾರು ಭಕ್ತಾಧಿಗಳು, ವಿದ್ಯಾರ್ಥಿಗಳು ಭಾವೈಕ್ಯತಾ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

Read More

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ (Private School) ಇನ್ನು ಮುಂದೆ ನಾಡಗೀತೆ (Nada Geethe) ಹಾಡುವುದು ಕಡ್ಡಾಯವಲ್ಲ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಖಾಸಗಿ ಶಾಲೆಗಳಿಗೆ ನಾಡಗೀತೆ ಹಾಡುವುದಕ್ಕೆ ವಿನಾಯಿತಿ ನೀಡಿದ ಸರ್ಕಾರ ಸರ್ಕಾರಿ ಶಾಲೆಗಳು (Govt Schools) ಮತ್ತು ಅನುದಾನಿತ ಶಾಲೆಗಳಲ್ಲಿ (Aided school) ಮಾತ್ರ ನಾಡಗೀತೆ ಹಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಾದಿತ ಆದೇಶವನ್ನು ಹೊರಡಿಸಿದೆ ಈ ಹಿಂದೆ ಎಲ್ಲಾ ಶಾಲೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ನಾಡಗೀತೆಯನ್ನು ಹಾಡಬೇಕಿತ್ತು. ಇದಲ್ಲದೆ ಸರ್ಕಾರಿ ಇಲಾಖೆ, ಕಚೇರಿ, ಪ್ರಾಧಿಕಾರಗಳು, ಸರ್ಕಾರದ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮುನ್ನ ನಾಡಗೀತೆ ಹಾಡಬೇಕು ಎಂದು ಆದೇಶಿಸಲಾಗಿತ್ತು ಹಿಂದಿನ ಆದೇಶವನ್ನು ಬದಲಾವಣೆ ಮಾಡಿದ ರಾಜ್ಯ ಸರ್ಕಾರ ಈಗ ಎಲ್ಲಾ ಶಾಲೆಗಳು ಎಂಬುದರ ಬದಲಾಗಿ ಸರ್ಕಾರಿ ಶಾಲೆಗಳು ಎಂದು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

Read More

ನವದೆಹಲಿ: ಕಾಂಗ್ರೆಸ್‌ ಜೊತೆ ಉತ್ತರ ಪ್ರದೇಶದಲ್ಲಿ (Uttar Pradesh) ಮೈತ್ರಿಗೆ ಸಮಾಜವಾದಿ ಪಕ್ಷ (Samajwadi Party) ಷರತ್ತು ವಿಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಒಟ್ಟು 80 ಲೋಕಸಭಾ (Lok Sabha) ಕ್ಷೇತ್ರಗಳ ಪೈಕಿ 15ರಲ್ಲಿ ಮಾತ್ರ ಕಾಂಗ್ರೆಸ್‌ಗೆ (Congress) ಬಿಟ್ಟು ಕೊಡಲು ಮುಂದಾಗಿದೆ.   ಮಾಜಿ ಸಿಎಂ ಅಖಿಲೇಶ್‌ ಯಾದವ್‌ (Akhilesh Yadav) ನೀಡಿರುವ ಆಫರನ್ನು ಕಾಂಗ್ರೆಸ್‌ ಒಪ್ಪಿಕೊಂಡರೆ ಮಾತ್ರ INDIA ಒಕ್ಕೂಟದಲ್ಲಿ ಸಮಾಜವಾದಿ ಪಕ್ಷ ಇರಲಿದೆ. ಈ ಆಫರ್‌ ಒಪ್ಪದೇ ಇದ್ದರೆ ಎಸ್‌ಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. https://ainlivenews.com/do-you-keep-eggs-in-the-fridge-and-eat-them-then-see-this-story/ ಆರಂಭದಲ್ಲಿ ನಿಗದಿಯಾದ ಕಾರ್ಯಕ್ರಮದ ಪ್ರಕಾರ ರಾಹುಲ್‌ ಗಾಂಧಿ (Rahul Gandhi) ಅವರ ಉತ್ತರ ಪ್ರದೇಶ ಯಾತ್ರೆಯಲ್ಲಿ ಅಖಿಲೇಶ್‌ ಯಾದವ್‌ ಭಾಗಿಯಾಗಬೇಕಿತ್ತು. ಆದರೆ ಇನ್ನೂ ಸೀಟ್‌ ಹಂಚಿಕೆಯಾಗದ ಕಾರಣ ಅಖಿಲೇಶ್‌ ಯಾದವ್‌ ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. 2019ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ 62, ಬಿಎಸ್‌ಪಿ 10, ಎಸ್‌ಪಿ 5, ಎಡಿಎಸ್‌ 2, ಕಾಂಗ್ರೆಸ್‌ 1…

Read More

ಮುಂಬೈ: ಸೆಲೆಬ್ರಿಟಿ ಜೋಡಿ ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ ಶರ್ಮಾ (Anushka Sharma) ಅವರ ಮನೆಗೆ ಗಂಡು ಮಗುವಿನ ಆಗಮನವಾಗಿದೆ. ವಿರುಷ್ಕಾ ದಂಪತಿ ಮಗುವಿನ ಹೆಸರು ಕೇಳಿ ಫ್ಯಾನ್ಸ್‌ ತಲೆ ಕೆಡಿಸಿಕೊಂಡಿದ್ದಾರೆ. ಬಾಲಿವುಟ್‌ ನಟಿ ಅನುಷ್ಕಾ ಶರ್ಮಾ ಫೆ.15 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಫೆ.20 ರಂದು ಹಂಚಿಕೊಂಡಿದ್ದಾರೆ. ಮಗುವಿಗೆ ಈಗಾಗಲೇ ಹೆಸರು ಕೂಡ ಇಟ್ಟಿದ್ದಾರೆ. ವಿರುಷ್ಕಾ ದಂಪತಿ ಮಗುವಿನ ಹೆಸರು ‘ಅಕಾಯ್‌ ‘ಅಕಾಯ್’ (Akaay) ಎಂಬ ವಿಶಿಷ್ಟ ಮತ್ತು ವಿಶೇಷ ಹೆಸರಿನ ಸುತ್ತ ಈಗ ಚರ್ಚೆ ನಡೆಯುತ್ತಿದೆ. ಅಕಾಯ್ ಎಂಬುದು ಹಿಂದಿ ಪದ ‘ಕಾಯ’ದಿಂದ ಬಂದಿದೆ. ಇದರ ಅರ್ಥ ‘ದೇಹ’. ಅಕಾಯ್ ಎಂದರೆ, ದೈಹಿಕ ಶಕ್ತಿಗಿಂತ ಮಿಗಿಲಾದವನು. ಟರ್ಕಿಶ್ ಮೂಲದಲ್ಲಿ, ‘ಅಕಾಯ್’ ಪದಕ್ಕೆ ‘ಹೊಳೆಯುವ ಚಂದ್ರ’ ಎಂದರ್ಥ. ಮಗುವಿಗೆ ಹೆಸರಿಡಲು ಯಾವ ಮೂಲದಿಂದ ಈ ಪದವನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ವಿರುಷ್ಕಾ ದಂಪತಿ ಇನ್ನೂ ಖಚಿತಪಡಿಸಿಲ್ಲ. ವಿರಾಟ್‌ ದಂಪತಿ ಮಗುವಿನ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು,…

Read More

ಮುಂಬೈ: ಕ್ರಿಕೆಟ್‌ ಅಭಿಮಾನಿಗಳು ಕುತೂಹಲದಿಂದ ಕಾದಿದ್ದ, ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2024) ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ (Arun Dhumal), ಮಾ.22 ರಂದು ಐಪಿಎಲ್‌ಗೆ ಚಾಲನೆ ನೀಡಲು ಎದುರು ನೋಡುತ್ತಿದ್ದೇವೆ. 15 ದಿನಗಳ ವೇಳಾಪಟ್ಟಿಯನ್ನು ಮೊದಲು ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ ಫೆಬ್ರವರಿ 23 ರಂದು ಮಹಿಳಾ ಪ್ರೀಮಿಯರ್ ಲೀಗ್‌ ಟೂರ್ನಿಗೆ ಚಾಲನೆ: ಪೂರ್ಣ ವೇಳಾಪಟ್ಟಿ ಹೀಗಿದೆ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಐಪಿಎಲ್‌ 17ನೇ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಗೊಂಡಿಲ್ಲ. ಲೋಕಸಭೆ ಚುನಾವಣೆಯ ದಿನಾಂಕವನ್ನು ಮಾರ್ಚ್ ಆರಂಭದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಚುನಾವಣೆಯ ಕಾರಣದಿಂದಾಗಿ ಐಪಿಎಲ್‌ ಪಂದ್ಯಗಳನ್ನು ಸಾಧ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿರುವ ಧುಮಾರ್‌, ಇದು ವಿದೇಶದಲ್ಲಿ ನಡೆಯುವುದಿಲ್ಲ. ಅದಕ್ಕಾಗಿಯೇ ನಾವು ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗಾಗಿ ಕಾಯುತ್ತಿದ್ದೇವೆ. ಅದಕ್ಕೆ ಅನುಗುಣವಾಗಿ ನಾವು ಸ್ಥಳ ನಿಯೋಜನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Read More