Author: AIN Author

ಗದಗ: ಆದೇಶಕ್ಕೆ ಪೂರ್ವದಲ್ಲಿಯೇ 144 ಸೆಕ್ಷನ್ ಜಾರಿ ಮಾಡಿದ ಪೊಲೀಸ್ ಇಲಾಖೆ ಸಂಪೂರ್ಣ ಮಾರಾಟವಾಗಿದೆ ಎಂದು ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀ ಆರೋಪ ಮಾಡಿದರು. ಸ್ಥಳೀಯ ಫಕೀರೇಶ್ವರ ಮಠದಲ್ಲಿ ಸುದ್ದಿಗೋಷ್ಠಿ ಅಯೋಜಿಸಿ ಮಾತನಾಡಿದ ಅವರು, ಮಠದ ಭಕ್ತರನ್ನು ಒಳಗೆ ಬಿಡದೆ ಪೊಲೀಸ್ ಸರ್ಪಗಾವಲು ಇಟ್ಟಿದ್ದು, ಅವರಿಗೆ ರಾತ್ರೋ ರಾತ್ರಿ ನೋಟಿಸ್ ನೀಡಿದ್ದು ನೋವಿನ ಸಂಗತಿ. ನಮ್ಮ ಇತಿಹಾಸದಲ್ಲಿ ಶಾಂತಿ ಕದಡುವ ಹೋರಾಟ ಮಾಡಿಲ್ಲ. ನಾವು ಹೋರಾಟ ಕೈಗೊಂಡಿದ್ದು ಗದಗದಲ್ಲಿ 144 ಸೆಕ್ಷನ್ ಜಾರಿ ಮಾಡುವುದನ್ನು ಬಿಟ್ಟು ಶಿರಹಟ್ಟಿಯಲ್ಲಿ ಮಾಡಿದ್ದು ಅಕ್ಷಮ್ಯ. ಈ ಮೂಲಕ ಇಲಾಖೆ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡದೆ ಮಲತಾಯಿ ಧೋರಣೆ ಅನುಸರಿದೆ ಎಂದು ಹರಿಹಾಯ್ದರು. ಭಾವೈಕ್ಯತೆ ಅರ್ಹರಿರುವವರು ಮಾತ್ರ ಆ ಪದ ಬಳಕೆ ಮಾಡಬೇಕೆಂಬುದು ನಮ್ಮ ತಾತ್ವಿಕ ವಿಚಾರ. ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಒಂದು ತಜ್ಞರ ಸಮಿತಿ ರಚನೆ ಮಾಡಿ ಎರಡು ಮಠದ ಪರಂಪರೆ ಹಾಗೂ ಶ್ರೀಗಳ ಸಮಗ್ರ ಅಧ್ಯಯನ ಮಾಡಬೇಕಿತ್ತು. ಯಾವುದೋ ಪ್ರಭಾವಕ್ಕೆ…

Read More

ಕಲಬುರಗಿ: ದೇಶದಲ್ಲಿರೋ 543 ಸೀಟ್ ನಾವೇ ಗೆಲ್ತೇವೆ ಅಂತಾರೆ ಇದು ಅಡ್ವಟೈಸಮೆಂಟ್ ಸರ್ಕಾರ ಅಂತ ಪ್ರಧಾನಿ ಮೋದಿ ವಿರುದ್ಧ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ದಾರೆ.. ಕಲಬುರಗಿ ಯಲ್ಲಿಂದು ಮಾತನಾಡಿದ ಖರ್ಗೆ,  ಅಬ್ ಕಿ ಬಾರ್ ಚಾರ್ ಸೌ ಪಾರ್ ಪಾನ್ ಸೌ ಪಾರ್ ಅಂತ ಮೋದಿ ಹೇಳ್ತಾರೆ ಮೋದಿಯವರ ತರ ನಮಗೆ ಸುಳ್ಳು ಹೇಳೋಕೆ ಬರಲ್ಲ.ಹೀಗಾಗಿ ಈ ಚುನಾವಣೆಯಲ್ಲಿ ನಾವು ಈ ಕೇಂದ್ರ ಸರ್ಕಾರದ ವೈಫಲ್ಯಗಳನ್ನ ಜನರಿಗೆ ಹೇಳ್ತೇವೆ.ಮೋದಿ ಡಿಕ್ಟೇಟರ್ ಶಿಪ್ ಮಾಡೋಕೆ ಹೋಗ್ತಿದ್ದಾರೆ ಅಂತ ಕಿಡಿಕಾರಿದ್ರು..

Read More

ದಿನಾಂಕ 20-2-2024ರಂದು ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅತಿ ವಿಜೃಂಭಣೆಯಿಂದ ಜರುಗಿತು, ಪಟ್ಟಣದ ಪ್ರಮುಖ ಬಿದಿಗಳಲ್ಲಿ ಸ್ತಬ್ದಚಿತ್ರ ಮೆರವಣಿಗೆಯಲ್ಲಿ ಬಾರಿ ಸಂಖ್ಯೆಯ ವಿದ್ಯಾರ್ಥಿಗಳು ಜಯಘೋಷಣೆ ಕೊಗುತ್ತಾ ಸಂವಿದಾನ ಜಾಗೃತಿಯಲ್ಲಿ ವಿಶೇಷ ಪಾತ್ರ ವಹಿಸಿದರು, ಪಟ್ಟಣದ ಅನೇಕ ಸಂಘಟನೆಗಳು, ಅನೇಕ ಮಹಾನ ಪುರುಷರ ಛದ್ಮವೇಶದಲ್ಲಿ ಮಿಂಚುತ್ತ ಸಬಿಕರನ್ನು ಮಂತ್ರಾಮುಗ್ದರನ್ನಗಿಸಿದವು ಪುರಸಭೆ ಸಿಬ್ಬಂದಿ ಹಾಗೂ ಜನಪ್ರತಿನಿದಿಗಳು ಭಾಗವಸಿಸಿದ್ದರು, ಪಟ್ಟಣದ ಅನೇಕ ಇಲಾಖೆಗಳ ಅಧಿಕಾರಿಗಳು ಮುಖ್ಯವಾಗಿ ಶಿಕ್ಷಣ ಇಲಾಖೆ ಮಹತ್ವದ ಪಾತ್ರ ವಹಿಸಿದ್ದರು. ಕಾರ್ಯಕ್ರಮ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದುವದರ ಮೂಲಕ ಪ್ರಾರಂಭವಾಯಿತು, ಕಾರ್ಯಕ್ರಮದ ಕುರಿತು ಪ್ರಸ್ತವಿಕವಾಗಿ ಚಿಂತಕ ಹಾಗೂ ಪುರಸಭೆ ಸದಸ್ಯ ಬಸವರಾಜ್ ಅರಕೇರಿ ಮಾತನಾಡಿ ಬ್ರಾತೃತ್ವ ಸಮಾನತೆಗೆ ಸಂವಿದಾನವೆ ಕಾರಣ ಎಂದು ಹೇಳಿದರು, ನಂತರ ಮಾತನಾಡಿದ ಸಿ. ಆರ್. ಪಿ ಮಹಾಂತೇಶ್ ಮುಗಳಖೊಡ ಮಾತನಾಡಿ ಸಂವಿದಾನದ ರಚನೆ ಕುರಿತು ಬಹಳ ಅದ್ಬುತವಾಗಿ ಮಾತನಾಡಿದರು, ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಪರಿಣಾಮಗಳ ಕುರಿತು ಪ್ರಲ್ಹಾದ ಕಾಂಬಳೆ ಮಾತನಾಡಿದರು ಶಾಲಾ ಮಕ್ಕಳು ಪ್ರಾರ್ಥಿಸಿದರು ವರದಿ : ಎಂ.…

Read More

ತುಮಕೂರು: ಹಿಂದುಳಿದ ವರ್ಗಗಳ ಹಾಸ್ಟೆಲ್‌ ಗಳಿಗೆ ಅಕ್ಕಿ ಪೂರೈಸಲು ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ ಪಡೆದಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ತುಮಕೂರು ಜಿಲ್ಲೆ ತಾಲೂಕು ಹಿಂದುಳಿದ ವರ್ಗಗಳ ಸಮಾಜ ಕಲ್ಯಾಣಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಗೀತಮ್ಮ ಅಮಾನತಾದ ಅಧಿಕಾರಿಯಾಗಿದ್ದು, ಕರ್ತವ್ಯ ಲೋಪದ ಆರೋಪದಡಿಯಲ್ಲಿ ಇಲಾಖೆ ಆಯುಕ್ತ ಕೆ.ಎ.ದಯಾನಂದ ಈ ಆದೇಶ ಹೊರಡಿಸಿದ್ದಾರೆ. ಮೂರು ದಿನಗಳ ಹಿಂದಷ್ಟೇ ಮಠದಿಂದ ಅಕ್ಕಿ ಸಾಲ ಪಡೆದಿರುವ ಬಗ್ಗೆ ಸಿದ್ದಗಂಗಾ ಮಠದ ಆಡಳಿತಾ ಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಈ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಗ್ಯಾರೆಂಟಿ ಯೋಜನೆಗಳಿಂದ ಸರ್ಕಾರ ಬಡವಾಗಿದೆಯೇ ಎಂಬ ಟೀಕೆಯೂ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. https://ainlivenews.com/here-is-a-super-home-remedy-to-keep-sugar-disease-under-control/ ಕೂಡಲೇ ಎಚ್ಚೆತ್ತ ಸರ್ಕಾರ ಗೀತಮ್ಮ ಅವರನ್ನು ಅಮಾನತುಗೊಳಿಸ ಕೈತೊಳೆದುಕೊಂಡಿದೆ. ನಾಗರಿಕ ಸರಬರಾಜು ಇಲಾಖೆಯಿಂದ ಅಗತ್ಯವಾಗಿರುವಷ್ಟು ಅಕ್ಕಿ ಪೂರೈಸಲಾಗಿದೆ. ಆದರೆ ಹಾಸ್ಟೆಲ್‌ ಗಳಿಂದ ಅಕ್ಕಿ ಎತ್ತುವಳೀ ಮಾಡಲು ಹಿಂದೇಟು ಹಾಕಿ ಈ ರೀತಿ ಸಾಲ ಪಡೆಯಲಾಗಿದೆ ಎಂದು ಗೀತಮ್ಮ ವಿರುದ್ದ ಆರೋಪಿಸಲಾಗಿದೆ.

Read More

ಬೆಂಗಳೂರು:  2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ  ಬರೆಯುವ ಬೆಂಗಳೂರಿನ ವಿದ್ಯಾರ್ಥಿಗಳಿಗೆ ಬಿಬಿಎಂಟಿಸಿ ಗುಡ್​ನ್ಯೂಸ್  ಕೊಟ್ಟಿದ್ದು  ಪರೀಕ್ಷೆ ಬರೆಯಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಉಚಿತ ಸೇವೆ ನೀಡಲಿದೆ. ವಾಹನ ಸವಾರರೇ ಇಲ್ಲಿ ಕೇಳಿ – ಆ್ಯಂಬುಲೆನ್ಸ್​ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಗಾಡಿ ಓಡಿಸಿದ್ರೆ ಬೀಳುತ್ತೆ ದಂಡ! ಮಾರ್ಚ್ 1 ರಿಂದ ಮಾರ್ಚ್ 22ರವರೆಗೆ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಬಿಎಂಟಿಸಿ ವೋಲ್ವೋ ಬಸ್ ಹೊರತುಪಡಿಸಿ ಇನ್ನುಳಿದ ಎಲ್ಲಾ ಬಿಎಂಟಿಸಿ ಬಸ್ ನಲ್ಲಿ ಮನೆಯಿಂದ ಪರೀಕ್ಷಾ ಕೊಠಡಿವರೆಗೆ ಉಚಿತವಾಗಿ ಪ್ರಯಾಣಿಸಬಹದು.

Read More

ಹುಬ್ಬಳ್ಳಿ: ರಾಮ ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ ಎಂಬ ಸಚಿವ ಸಂತೋಷ್​​ ಲಾಡ್​​ ಹೇಳಿಕೆಗೆ ಜಗದೀಶ್​ ಶೆಟ್ಟರ್​ ಪ್ರತಿಕ್ರಿಯೆ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣ ಮಾಡುಗುವವುದಕ್ಕೆ ಕಾಂಗ್ರೆಸ್​ಗೆ ಸಾಧ್ಯ ಆಗಲಿಲ್ಲ. ಪ್ರಣಾಳಿಕೆಯಲ್ಲಿ ರಾಮ ಮಂದಿರ ಕಟ್ಟತೀವಿ ಎನ್ನುವುದು ಇತ್ತು. ಇದೀಗ ರಾಮ ಮಂದಿರ ಆಗಿದೆ ಎಂದರು. ಇದೇ ವೇಳೆ ರಾಮ ಮಂದಿರ ಕಟ್ಟಡ ನಿರ್ಮಾಣ ಆಗುವ ಜಾಗದಲ್ಲಿ ಆಗಿಲ್ಲ ಎಂಬ ಹೇಳಿಕೆ, ‘ಜಾಗ ಸರಿ ಇಲ್ಲ ಅಂದ್ರೆ ನೀವು ಕೋರ್ಟ್​ಗೆ ಹೋಗಬೇಕಿತ್ತು. ಕಟ್ಟಡ ನಿರ್ಮಾಣವಾ ಸಮಯದಲ್ಲಿ ಏನ್​ ಮಾಡ್ತಿದ್ರು. ಸಂತೋಷ್ ಲಾಡ್​ಗೆ ಇದೆಲ್ಲ ಅರ್ಥ ಆಗಬೇಕು ಎಂದು ಹೇಳಿದರು. https://ainlivenews.com/here-is-a-super-home-remedy-to-keep-sugar-disease-under-control/ ರಾಮ ಮಂದಿರ ಬಗ್ಗೆ ಮಾತಾಡಿದ್ರೆ ನಿಮಗೆ ಕಳೆದ ಬಾರಿ ಬಂದಿರುವ ಸೀಟು ಬರಲ್ಲ ಎಂದ ಶೆಟ್ಟರ್, ಚೀನಾ ಅಕ್ರಮಣ ಮಾಡಿದ್ರು, ನಮಗೆ ಹೇಳೋರ ಕೇಳೋರ ಯಾರೂ ಇರಲ್ಲ. ಇವತ್ತು ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲಸಿದೆ. ಮೋದಿ ಅವರು ದೇಶದ ಭದ್ರತೆಗೆ ಮಹತ್ವ ಕೊಟ್ಟಿದ್ದಾರೆ. ಇದನ್ನೆಲ್ಲ ಸಂತೋಷ್ ಲಾಡ್ ಯಾಕೆ ಚರ್ಚೆ…

Read More

ಧಾರವಾಡ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ಮಧ್ಯೆ ಮಾರಾಮಾರಿ ನಡೆದಿದ್ದು, ಹಿರಿಯ ಸಹೋದರನ ಹೊಡೆತಕ್ಕೆ ಕಿರಿಯ ಸಹೋದರ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ತಲವಾಯಿ ಗ್ರಾಮದಲ್ಲಿ ನಡೆದಿದೆ. ಫಕ್ಕೀರಪ್ಪ ಕಮ್ಮಾರ ಹಾಗೂ ಅಶೋಕ ಕಮ್ಮಾರ ಎಂಬುವ ಸಹೋದರರ ಕುಟುಂಬಗಳ ಮಧ್ಯೆ ಈ ಮಾರಾಮಾರಿ ನಡೆದಿದೆ. ಮನೆ ಹಾಗೂ ಹೊಲದ ವಿಚಾರಕ್ಕೆ ಸಂಬಂಧಿಸಿದಂತೆ ಈ ಮಾರಾಮಾರಿ ನಡೆದಿದೆ. ಕಲ್ಲು, ಬಡಿಗೆಗಳಿಂದ ಈ ಎರಡೂ ಕುಟುಂಬದ ಸದಸ್ಯರು ಬಡಿದಾಡಿಕೊಂಡಿದ್ದು, ಅಶೋಕ ಕಮ್ಮಾರ (50) ಹಾಗೂ ಫಕ್ಕೀರಪ್ಪ ಕಮ್ಮಾರ (55) ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದರು. ಈ ವೇಳೆ ಅಶೋಕಗೆ ಹೆಚ್ಚಿನ ಗಾಯಗೊಂಡಿದ್ದರಿಂದ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿದ್ದರು. https://ainlivenews.com/here-is-a-super-home-remedy-to-keep-sugar-disease-under-control/ ಆದರೆ ಚಿಕಿತ್ಸೆ ಫಲಿಸದೇ ಅಶೋಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.  ಫಕ್ಕೀರಪ್ಪನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಜೊತೆಗೆ ಇನ್ನೂ ಹಲವರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Read More

ಬೆಂಗಳೂರು: ಕಾಡುಗೋಡಿ ಪೊಲೀಸರ ಭರ್ಜರಿ ಕಾರ್ಯಚರಣೆ ನಡೆದಿದ್ದು  ವನ್ಯ ಜೀವಿ ಅವಶೇಷ ಮಾರಾಟ ಮಾಡಲು ಮುಂದಾಗಿದ್ದ ಆರೋಪಿಗಳನ್ನ ಪೊಲೀಸರು ಖೆಡ್ಡಾಕ್ಕೆ ತಳ್ಳಿದ್ದಾರೆ ಇಬ್ಬರು ಅಂತರಾಜ್ಯ ಸ್ಮಗ್ಲರ್ ವಶಕ್ಕೆ ಪಡೆದಿದ್ದು   ಫಣಿಂದರ್ ಮತ್ತು ರೆಹಮತುಲ್ಲಾ ಬಂಧಿತ ಆರೋಪಿಗಳಾಗಿದ್ದು ಆಂಧ್ರದಿಂದ ತಂದು ಮೈಸೂರಿನಲ್ಲಿ ಮಾರಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳು ಖಾಸಾಗಿ ಬಸ್ಸ್ ನಲ್ಲಿ ತಂದಿದ್ದ ಆರೋಪಿಗಳು ಬಂಧಿತರಿಂದ 33 ಜಿಂಕೆ ಕೊಂಬು 6 ತಲೆ ಪೊಲೀಸರ ವಶಕ್ಕೆ

Read More

ಬೆಂಗಳೂರು: ಹಿರಿಯ ಬಿಜೆಪಿ ಮುಖಂಡರು, ರಾಜ್ಯಸಭಾ ಸದಸ್ಯರು ಹಾಗು, ಲೋಕಸಭಾ ಚುನಾವಣಾ ರಾಜ್ಯ ಬಿಜೆಪಿ ಉಸ್ತುವಾರಿಯಾದ  ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ದೇವೇಗೌಡರನ್ನು ಭೇಟಿಯಾದರು. ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ಭೇಟಿ ಕೊಟ್ಟು ಮಾಜಿ ಪ್ರಧಾನಮಂತ್ರಿಗಳು ಹಾಗು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಹೆಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.

Read More

ಬೆಂಗಳೂರು : ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದರು. ವಿಧಾನ‌ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುವಾಗ, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ವಿವರಿಸುವಾಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಬಿಸಿ ಬಿಸಿ ವಾಗ್ವಾದ ನಡೆಯಿತು. ವಾಹನ ಸವಾರರೇ ಇಲ್ಲಿ ಕೇಳಿ – ಆ್ಯಂಬುಲೆನ್ಸ್​ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಗಾಡಿ ಓಡಿಸಿದ್ರೆ ಬೀಳುತ್ತೆ ದಂಡ! ಕೇಂದ್ರದಲ್ಲಿ UPA ಸರ್ಕಾರ ಇದ್ದಾಗ ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ  ಮುಖ್ಯಮಂತ್ರಿ ಆಗಿದ್ದ ಮೋದಿಯವರು, ಯುಪಿಎ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಎಂದು ಹೇಳಿದ್ದ ಮಾತನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು. ಮೋದಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ, ರಾಜ್ಯಗಳು ಕೇಂದ್ರದ ಮುಂದೆ ಭಿಕ್ಷುಕರಲ್ಲ. ಗುಜರಾತ್ ರಾಜ್ಯದಿಂದ ಸಂಗ್ರಹ ಆಗುವ ತೆರಿಗೆಯಲ್ಲಿ ಶೇ50 ರಷ್ಟು ವಾಪಾಸ್ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ಗುಜರಾತ್ ರಾಜ್ಯದ ತೆರಿಗೆಯನ್ನು ನಾವು ಕೇಂದ್ರಕ್ಕೆ ಕೊಡುವುದಿಲ್ಲ ಎನ್ನುವ ಮಾತನ್ನೂ ಮೋದಿ…

Read More