Author: AIN Author

ಬೆಂಗಳೂರು:- ಧೂಮಪಾನ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್‌ ಕೊಟ್ಟಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್​ ಸೇದುವವವರ ಹಾಗೂ ಶಾಲೆಗಳ 100 ವ್ಯಾಪ್ತಿಯಲ್ಲಿ ಸಿಗರೇಟ್​ ಮಾರಾಟಗಾರರ ವಿರುದ್ಧ ಹಾಕಲಾಗುತ್ತಿದ್ದ ದಂಡದ ಮೊತ್ತ ಹೆಚ್ಚಳವಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡದ ಪ್ರಮಾಣ 100 ರೂ. ರಿಂದ 1000 ರೂ. ಗೆ ಏರಿಕೆ ಮಾಡಲಾಗಿದೆ. ಇನ್ನು ಸಿಗರೇಟು ಮಾರಾಟದ ವಯೋಮಿತಿ 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಯಾವುದೇ ಬಾರ್ ರೆಸ್ಟೋರೆಂಟ್ ಹಾಗೂ ಇತರೆ ಕಡೆಗಳಲ್ಲಿ ಹುಕ್ಕಾ ಬಾರ್​ ನಿಷೇಧಿಸಲಾಗಿದೆ. ಹುಕ್ಕಾ ಬಾರ್ ಅನಧಿಕೃತವಾಗಿ‌ ನಡೆಸಿದರೆ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಹಾಗೂ 3 ವರ್ಷಕ್ಕೆ ವಿಸ್ತರಣೆ ಮಾಡುವ ಜೈಲು ಶಿಕ್ಷೆ ಮತ್ತು 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 2024ರ ಸಿಗರೇಟ್ ಸೇವನೆ ಮತ್ತು ಜಾಹೀರಾತು ನಿಷೇಧ, ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ ಮತ್ತು ಸರಬರಾಜು ತಿದ್ದುಪಡಿ ವಿಧೇಯಕವನ್ನು ಮಂಡನೆ…

Read More

ಕಲಬುರ್ಗಿ:- PM ನರೇಂದ್ರ ಮೋದಿಯಿಂದ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಏನಾದರೂ ಅಧಿಕಾರಕ್ಕೆ ಬಂದರೆ ಇವೆಲ್ಲವೂ ಮೀರಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಿಡಿಕಾರಿದ್ದಾರೆ. ದೇಶದಲ್ಲಿ ಈಗಾಗಲೇ ಮೋದಿ ಸ್ವಾಯತ್ತತೆ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಬಾರಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಬೇರೆಯವರಿಗೆ ಏನೂ ಸಿಗುವುದಿಲ್ಲ. ದೇಶದ 543 ಸ್ಥಾನಗಳನ್ನು ತಾವೇ ಗೆಲ್ಲುವುದಾಗಿ ಹೇಳುತ್ತಿದ್ದು, ಒಂದು ವೇಳೆ ಹೀಗಾದರೆ ದೇಶಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದರು. ಲೋಕಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ (Congress) ಪಕ್ಷ ಎಲ್ಲಾ ಆಯಾಮಗಳಲ್ಲಿ ಸಿದ್ಧತೆಗಳನ್ನು ನಡೆಸಿದೆ. ದಿನಕ್ಕೊಂದು ರಾಜ್ಯದ ಪ್ರಮುಖರ ಸಭೆ ನಡೆಸಿ, ಎಲ್ಲವನ್ನೂ ಪರಾಮರ್ಶೆ ಮಾಡಲಾಗುತ್ತಿದೆ. ಆಯಾ ರಾಜ್ಯಗಳ ಸಭೆ ನಡೆಸುವುದರ ಜೊತೆಜೊತೆಗೆ ಇಂಡಿಯಾ ಒಕ್ಕೂಟದ ಜೊತೆಗೆ ನಿರಂತರವಾಗಿ ಮಾತುಕತೆ ಹಾಗೂ ದಿನದ…

Read More

 ಕಲಬುರಗಿ:- ಪ್ರಧಾನಿ ಮೋದಿ ಕರೆ ಕೊಟ್ಟಿರುವ ಸ್ವಚ್ಛತಾ ಅಭಿಯಾನ ಕಲಬುರಗಿಯಲ್ಲಿ ಇವತ್ತು ಜೋರಾಗಿ ನಡೆಯಿತು. ನಗರದ ಶರಣಬಸವೇಶ್ವರ ಗುಡಿ ಅಂಗಳದಲ್ಲಿ ಸಂಜೆ ಇಡೀ ಕೇಸರಿ ಪಡೆಯ ಘಟಾನುಘಟಿ ನಾಯಕರೆಲ್ಲ ಸೇರಿ ದೇಗುಲದ ಕಸಗೂಡಿಸಿದ್ರು ನೆಲ ಒರೆಸಿದ್ರು.. ಮಾಜಿ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಸಂಸದ ಉಮೇಶ್ ಜಾಧವ್ ಶಾಸಕ ಬಸವರಾಜ ಮತ್ತಿಮೂಡ್ ನಗರಾಧ್ಯಕ್ಷ ಚಂದು ಪಾಟೀಲ್ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ಸೇರಿ ಬಹುತೇಕ ನಾಯಕರು ಹಾಗು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಅಭಿಯಾನದಲ್ಲಿ ಭಾಗಿಯಾಗಿದ್ರು. .

Read More

ಪುರುಷರಲ್ಲಿ ಬೊಕ್ಕತಲೆ ಹೆಚ್ಚಾಗುವುದಕ್ಕೆ ಪರಿಹಾರ ಇಲ್ಲಿದೆ. ಹಲವಾರು ಚರ್ಮಶಾಸ್ತ್ರಜ್ಞರ ಪ್ರಕಾರ, ಸ್ವಲ್ಪ ಕೂದಲು ಉದುರುವುದು ಸಾಮಾನ್ಯವಾದ ಸಂಗತಿಯಾಗಿದೆ. ಆದರೆ ನೀವು ಹೆಚ್ಚು ಕೂದಲು ಉದುರುವಿಕೆಯನ್ನು ತಡೆಯುವ ಕೆಲವು ವಿಧಾನಗಳಿವೆ. ಬೇಸಿಗೆಯಲ್ಲಿ ಬೆವರುವಾಗ ತಣ್ಣನೆಯ ಸ್ನಾನವನ್ನು ಮಾಡಲು ನಾವೆಲ್ಲರೂ ಇಷ್ಟಪಡುವುದಿಲ್ಲವೇ? ಅದೇ ರೀತಿ ನಿಮ್ಮ ಕೂದಲು ಕೂಡ ತುಂಬಾ ಬಿಸಿಯಾಗಿರುವ ನೀರನ್ನು ಇಷ್ಟಪಡುವುದಿಲ್ಲ. ಬೇಸಿಗೆಯಿರಲಿ ಅಥವಾ ಚಳಿಗಾಲದಿರಲಿ, ನೀವು ಸ್ನಾನ ಮಾಡುವಾಗಲೆಲ್ಲಾ ಉಗುರುಬೆಚ್ಚನೆಯ ನೀರು ಅಥವಾ ಸ್ವಲ್ಪ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಬಳಸಿ. ಇದು ನಿಮ್ಮ ನೆತ್ತಿ ಅಥವಾ ನಿಮ್ಮ ಕೂದಲಿಗೆ ಹಾನಿ ಮಾಡುವುದಿಲ್ಲ. ಬಿಯರ್ ಶಾಂಪೂಗಳು, ತೆಂಗಿನಕಾಯಿ ಆಧಾರಿತ ಕಂಡಿಷನರ್‌ಗಳನ್ನು ಬಳಸಿ. ಕೂದಲಿನ ಮೇಲೆ ವಿಪರೀತ ಪ್ರಯೋಗ ಮಾಡಬೇಡಿ. ಬಾಚಣಿಗೆಗಳು ನಿಮ್ಮ ಕೂದಲಿಗೆ ಒಂದು ನಿರ್ದಿಷ್ಟ ಶೈಲಿಯನ್ನು ನೀಡಲು ಉತ್ತಮವಾಗಿದ್ದರೂ, ಅವು ಕೂದಲನ್ನು ಹಾನಿಗೊಳಿಸುತ್ತವೆ. ಹಲವಾರು ಕಾರಣಗಳಿಗಾಗಿ ಬಾಚಣಿಗೆಯ ಬದಲು ಹೇರ್ ಬ್ರಷ್ ಅನ್ನು ಬಳಸುವುದು ಉತ್ತಮ. ಮೊದಲಿಗೆ, ಬಿರುಗೂದಲು ತುದಿಯಲ್ಲಿರುವ ಸಣ್ಣ ಮಣಿಗಳು ನೆತ್ತಿಯನ್ನು ಮೃದುವಾಗಿ ಮಸಾಜ್ ಮಾಡಿ ಮತ್ತು…

Read More

ದೊಡ್ಡಬಳ್ಳಾಪುರ: ಹಾರ್ಮೋನ್, ರಕ್ತನಾಳಗಳಲ್ಲಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ತರಹದ ನಿಖರ ರೋಗ ಪತ್ತೆ ಹಚ್ಚುವ 32 ಸ್ಲೈಸ್ ಸಿಟಿ ಸ್ಕ್ಯಾನ್ ಸೌಲಭ್ಯ ಇನ್ನು ಮುಂದೆ ನಗರದಲ್ಲಿ ಸಿಗಲಿದೆ. ನಗರದ ಡಿ-ಕ್ರಾಸ್ ರಸ್ತೆಯ ಐಸಿಐಸಿಐ ಬ್ಯಾಂಕ್ ಸಮೀಪ ಬುಧವಾರ ನೂತನವಾಗಿ ಪ್ರಾರಂಭವಾದ ಧನ್ವಂತರಿ ಹೆಲ್ತ್ ಸರ್ವೀಸಸ್ ಅಂಗಸಂಸ್ಥೆಯಾದ ಶ್ರೇಷ್ಠ ಡಯಾಗ್ನೋಸ್ಟಿಕ್ ಸಂಸ್ಥೆಯಲ್ಲಿ ಅತ್ಯಾಧುನಿಕ ಸ್ಕ್ಯಾನಿಂಗ್, ಚಿಕಿತ್ಸಾ ವಿಧಾನ ಲಭ್ಯವಾಗಲಿದೆ. ಬಡವರು, ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ 2D, 3D ಹಾಗೂ 4D ಅಲ್ಟ್ರಾ‌ಸೌಂಡ್ ಸ್ಕ್ಯಾನಿಂಗ್‌ ವ್ಯವಸ್ಥೆ, ಕಲರ್ ಡಾಪ್ಲರ್, 2D ಎಕೋ, ಸಿಟಿ‌ಸ್ಕ್ಯಾನ್, ಎಂಆರ್ ಐ, ಯುಎಸ್ ಜಿ, ಸಿಟಿ ಮಾರ್ಗದರ್ಶಿ ಕಾರ್ಯವಿಧಾನ, ಎಕ್ಸ್ ರೇ, ರೇಡಿಯೋಗ್ರಾಫಿ ಹಾಗೂ ಸ್ವಯಂ ಚಾಲಿತ ಪ್ರಯೋಗಾಲಯದ ಸೇವೆ ಸಿಗಲಿದೆ. ಕ್ಲಿಷ್ಟಕರ ರೋಗಪತ್ತೆ ವಿಧಾನಗಳಿಗಾಗಿ ಸಾರ್ವಜನಿಕರು ಬೆಂಗಳೂರಿಗೆ ಅಲೆಯಬೇಕಿತ್ತು, ಆದರೆ, ದೊಡ್ಡಬಳ್ಳಾಪುರದಲ್ಲಿ ಇದೇ ಪ್ರಪ್ರಥಮ ಬಾರಿಗೆ 2D ಅಲ್ಟ್ರಾ ಸೌಂಡ್ ಯಂತ್ರ ಒಳಗೊಂಡ ಡಯಾಗ್ನೋಸ್ಟಿಕ್ ಸೇವೆಯನ್ನು ನಮ್ಮ ಶ್ರೇಷ್ಠ ಡಯಾಗ್ನೋಸ್ಟಿಕ್ ಸಂಸ್ಥೆ ಒದಗಿಸಲಿದೆ. ಇದರ ಜೊತೆಗೆ 32…

Read More

ಧಾರವಾಡ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ಮಧ್ಯೆ ಮಾರಾಮಾರಿ ನಡೆದಿದ್ದು, ಹಿರಿಯ ಸಹೋದರನ ಹೊಡೆತಕ್ಕೆ, ಕಿರಿಯ ಸಹೋದರ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ತಲವಾಯಿ ಗ್ರಾಮದಲ್ಲಿ ನಡೆದಿದೆ. ಫಕ್ಕೀರಪ್ಪ ಕಮ್ಮಾರ ಹಾಗೂ ಅಶೋಕ ಕಮ್ಮಾರ ಎಂಬುವ ಸಹೋದರರ ಕುಟುಂಬಗಳ ಮಧ್ಯೆ ಈ ಮಾರಾಮಾರಿ ನಡೆದಿದೆ. ಮನೆ ಹಾಗೂ ಹೊಲದ ವಿಚಾರಕ್ಕೆ ಸಂಬಂಧಿಸಿದಂತೆ ಈ ಮಾರಾಮಾರಿ ನಡೆದಿದೆ. ಕಲ್ಲು, ಬಡಿಗೆಗಳಿಂದ ಈ ಎರಡೂ ಕುಟುಂಬದ ಸದಸ್ಯರು ಬಡಿದಾಡಿಕೊಂಡಿದ್ದು, ಅಶೋಕ ಕಮ್ಮಾರ (50) ಹಾಗೂ ಫಕ್ಕೀರಪ್ಪ ಕಮ್ಮಾರ (55) ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದರು. ಈ ವೇಳೆ ಅಶೋಕಗೆ ಹೆಚ್ಚಿನ ಗಾಯಗೊಂಡಿದ್ದರಿಂದ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅಶೋಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಫಕ್ಕೀರಪ್ಪನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಜೊತೆಗೆ ಇನ್ನೂ ಹಲವರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Read More

ವಿವಿಧ ಶಾಲೆಗಳ 8ರಿಂದ 18 ವರ್ಷದ ಮಕ್ಕಳಿಗಾಗಿ ನಡೆದಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆಗೊಳಪಟ್ಟಂತಹ ಒಟ್ಟು 172 ಮಕ್ಕಳ ಪೈಕಿ 90 ಮಕ್ಕಳಲ್ಲಿ ತೀವ್ರ ತರಹದ ಹೃದಯ ಕಾಯಿಲೆ ಪತ್ತೆಯಾಗಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಚಿತ್ತಾಪುರ ಆರೋಗ್ಯ ಕೇಂದ್ರದಲ್ಲಿ ನಡೆಸಿದ ಆರ್‌ಬಿಎಸ್‍ಕೆ ಹಾಗೂ ವೈದೇಹಿ ಆಸ್ಪತ್ರೆ ಹೃದಯ, ನರರೋಗ ತಜ್ಞರ ವಿಶೇಷ ತಂಡ ಆರೋಗ್ಯ ತಪಾಸಣೆಯಲ್ಲಿ ಈ ಸಂಗತಿ ಹೊರಬಿದ್ದಿದೆ. ತಪಾಸಣೆಗೊಳಪಟ್ಟ 172 ಮಕ್ಕಳಲ್ಲಿ 90 ಮಕ್ಕಳು ಹೃದಯ ಸಂಬಧಿತ ಕಾಯಿಲೆಯಿಂದ ನರಳುತ್ತಿದ್ದು, 41 ಮಕ್ಕಳಲ್ಲಿ ಹೃದಯ ಕಾಯಿಲೆ ತೀವ್ರವಾಗಿರೋದು ಕಂಡು ಬಂದಿದೆ. ಅವರಿಗೆ ತುರ್ತು ಹೃದಯ ಶಸ್ತ್ರ ಚಿಕಿತ್ಸೆಗೆ ವೈದೇಹಿ ಆಸ್ಪತ್ರೆ ಬೆಂಗಳೂರಿಗೆ ಶಿಫಾರಸ್ಸು ಮಾಡಲಾಗಿದೆ. 5 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಕೊರಗುತ್ತಿದ್ದು, ಇಬ್ಬರು ಮಕ್ಕಳಲ್ಲಿ ನರ ಸಂಬಂಧಿತ ಕಾಯಿಲೆ ಕಾಣಿಸಿಕೊಂಡಿದೆ. 34 ಮಕ್ಕಳು ಸಾಮಾನ್ಯ ಕಾಯಿಲೆಗೆ ತುತ್ತಾಗಿದ್ದಾರೆ. ಇದರಲ್ಲಿ 90 ಹೃದಯ ಸಮಸ್ಯೆಯ ಹಾಗೂ 41 ಮಕ್ಕಳಿಗೆ…

Read More

ಅಮೆರಿಕಾ:- ವಿಚ್ಛೇದನದ ವೇಳೆ ‘ನನ್ನ ಕಿಡ್ನಿಯನ್ನು ನನಗೆ ಮರಳಿಸು’ ಎಂದು ಪತಿಯೊಬ್ಬ ಪತ್ನಿಗೆ ಕೋರ್ಟ್​​ನಲ್ಲಿ ಬೇಡಿಕೆ ಇಟ್ಟಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಇದಲ್ಲದೆ ಕಿಡ್ನಿ ವಾಪಸ್​​ ಕೊಡಲು ಆಗದ್ದಿದ್ದಲ್ಲಿ 1.2 ಮಿಲಿಯನ್ ಪೌಂಡ್(12.56ಕೋಟಿ ರೂ.) ಹಣ ನೀಡಬೇಕಾಗಿ ಬೇಡಿಕೆಯಿಟ್ಟಿದ್ದಾನೆ. ಪತ್ನಿಯ ಎರಡು ಕಿಡ್ನಿಯೂ ವಿಫಲವಾದ್ದುದನ್ನು ತಿಳಿದು ಆಕೆಯನ್ನು ಬದುಕುಳಿಸುವ ಸಲುವಾಗಿ 2001 ರಲ್ಲಿ ಪತಿ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದ. ಆದರೆ ವರ್ಷಗಳ ನಂತರ ಇಬರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದ ಕಾರಣ ವಿಚ್ಛೇದನ ಪಡೆದುಕೊಳ್ಳಲು ಪತ್ನಿ ಕೋರ್ಟ್​​​​ ಮೆಟ್ಟಿಲೇರಿದ್ದಾಳೆ. ಇದರಿಂದ ಕೋಪಗೊಂಡ ಪತಿ ಕಿಡ್ನಿ ವಾಪಸ್ ಕೇಳಿದ್ದಾನೆ. 1990ರಲ್ಲಿ ರಿಚರ್ಡ್ ಬಟಿಸ್ಟಾ(ಪತಿ) ಮತ್ತು ಡೊನ್ನೆಲ್ (ಪತ್ನಿ) ವಿವಾಹವಾಗಿದ್ದರು. ಇವರಿಗೆ ಮೂರು ಮಕ್ಕಳಿದ್ದಾರೆ. ಆದರೆ 2001 ರಲ್ಲಿ, ಡೊನ್ನೆಲ್​​ಗೆ ತೀವ್ರ ಅನಾರೋಗ್ಯ ಕಾಡಿದೆ. ಕಡೆಗೆ ಆಕೆಯ ಎರಡು ಕಿಡ್ನಿಯೂ ವಿಫಲವಾಗಿದೆ ಎಂದು ವೈದ್ಯರು ಘೋಷಿಸಿದ್ದರು. ಈ ವೇಳೆ ತನ್ನ ಪತ್ನಿಯ ಜೀವ ಉಳಿಸಲು ಬಟಿಸ್ಟಾ ಮುಂದಾಗಿದ್ದು, ತನ್ನ ಒಂದು ಕಿಡ್ನಿಯನ್ನು ದಾನ…

Read More

ಬೆಂಗಳೂರು: ಜನರು ನನ್ನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡುತ್ತಾ ಇದ್ದಾರೆ. ನಾನು ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕೆ ಬರಬೇಕಾ, ಲೋಕಸಭೆಗೆ ನಿಲ್ಲಬೇಕು ಎಂದು ನಾನು ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು. ವಾಹನ ಸವಾರರೇ ಇಲ್ಲಿ ಕೇಳಿ – ಆ್ಯಂಬುಲೆನ್ಸ್​ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಗಾಡಿ ಓಡಿಸಿದ್ರೆ ಬೀಳುತ್ತೆ ದಂಡ! ಹಲವು ಕಡೆ ಜನರು ನನ್ನ ಸ್ಪರ್ಧೆ ಬಗ್ಗೆ ಒತ್ತಡ ಹಾಕುತ್ತಾ ಇದ್ದಾರೆ. ರಾಜ್ಯ ಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಕೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಾ. ಇದೇ ರೀತಿ ರಾಷ್ಟ್ರ ಮಟ್ಟದಲ್ಲೂ ಈ ರೀತಿಯ ಸುಧಾರಣೆ ಯಾಕೆ ತರಬಾರದು ಎಂದು ಹೇಳ್ತಾ ಇದ್ದಾರೆ. ಮುಂದೆ ಸ್ಪರ್ಧೆಯ ಬಗ್ಗೆ ತೀರ್ಮಾನ ಮಾಡಿದ್ರೆ ಹೇಳ್ತೀನಿ ಎಂದು ಹೇಳಿದರು. ನಾನು ಈಗಲೂ ಆಲೋಚನೆಯಲ್ಲಿಯೇ ಇದ್ದೀನಿ. ಲೋಕಸಭೆ ಪ್ರವೇಶ ಕೇವಲ ರಾಜಕೀಯ ಮೂಲಕವೇ ಅಲ್ಲ. ಲೋಕಸಭೆನೇ…

Read More

ಬೆಂಗಳೂರು: ಹೈಕೋರ್ಟ್​ನಿಂದ   ಎಸಿಬಿ ರದ್ದು ಹಿನ್ನೆಲೆಯಲ್ಲಿ ಎಸಿಬಿಯಲ್ಲಿದ್ದ ಹುದ್ದೆಗಳನ್ನ ಲೋಕಾಯುಕ್ತ ಸಂಸ್ಥೆ ಮತ್ತು ಪೊಲೀಸ್ ಇಲಾಖೆಗಳಿಗೆ ಸರ್ಕಾರ ವರ್ಗಾವಣೆ ಮಾಡಿದೆ. ಎಸಿಬಿಯಲ್ಲಿದ್ದ ಒಟ್ಟು 524 ಹುದ್ದೆಗಳನ್ನ ವಿಂಗಡಿಸಿ ಎರಡು  ಎರಡು ಇಲಾಖೆಗೆ ವರ್ಗಾಹಿಸಲಾಗಿದೆ. 2022ರ ಆಗಸ್ಟ್​.11 ರಂದು ಎಸಿಬಿ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ಎಸಿಬಿ ರದ್ದು ಹಿನ್ನೆಲೆ ಅಲ್ಲಿ ಇರುವಂತಹ ಹುದ್ದೆಗಳು ಖಾಲಿಯಾಗಿತ್ತು. ಲೋಕಾಯಕ್ತದಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆ ಹಿನ್ನೆಲೆ ಇರುವಂತಹ ಅಧಿಕಾರಿ ಸಿಬ್ಬಂದಿಯಿಂದ ಕೇಸ್ ಗಳನ್ನು ಕ್ಲಿಯರ್ ಮಾಡಲು ಕಷ್ಟ ಆಗ್ತಿತ್ತು ಹೆಚ್ಚುವರಿ ಅಧಿಕಾರಿ, ಸಿಬ್ಬಂದಿ ನೇಮಕಕ್ಕೆ ಮನವಿ ಮಾಡಿದ್ದ ಲೋಕಾಯಕ್ತ ಅಧಿಕಾರಿಗಳು ಹೀಗಾಗಿ ಎಸಿಬಿಯಲ್ಲಿದ್ದ ಹುದ್ದೆಗಳನ್ನ ಲೋಕಾಯಕ್ತಕ್ಕೆ ವರ್ಗಾಯಿಸಿ ಆದೇಶ ಮಾಡಲಾಗಿತ್ತು. ವಾಹನ ಸವಾರರೇ ಇಲ್ಲಿ ಕೇಳಿ – ಆ್ಯಂಬುಲೆನ್ಸ್​ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಗಾಡಿ ಓಡಿಸಿದ್ರೆ ಬೀಳುತ್ತೆ ದಂಡ! 266ಹುದ್ದಗೆಳು ಎಸಿಬಿಯಿಂದ ಲೋಕಾಯಕ್ತಕ್ಕೆ ವರ್ಗಾವಣೆ 258ಹುದ್ದೆಗಳು ಪೊಲೀಸ್ ಇಲಾಖೆಗೆ ವರ್ಗಾವಣೆ ಮಾಡಿ  ಕರ್ನಾಟಕ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

Read More