Author: AIN Author

ಚಿಕ್ಕಬಳ್ಳಾಪುರ:- ಅತ್ತಿಗೆ ಬೆಡ್ ರೂಮ್ ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಮೈದುನ ಶರಣಾದ ಘಟನೆ ಚಿಕ್ಕಬಳ್ಳಾಪುರದ ಇಂದಿರಾ ನಗರದಲ್ಲಿ ಜರುಗಿದೆ. 35 ವರ್ಷದ ಆಂಜಿನಪ್ಪ ಮೃತ ರ್ದುದೈವಿ. ಗೃಹಿಣಿ ಆಶಾ ಎಂಬುವವರು ಒಂಟಿಯಾಗಿದ್ದ ವೇಳೆ ಆಂಜಿನಪ್ಪ ಬೆಡ್​ರೂಮ್​ಗೆ ನುಗ್ಗಿದ್ದಾನೆ. ಕೂಡಲೇ ಎಚ್ಚೆತ್ತ ಮಹಿಳೆ ಮೈದುನನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನೆಗೆ ಬಂದ ಮೈದುನ ರಾಘವೇಂದ್ರ ಎಂಬಾತ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿ ಆಂಜಿನಪ್ಪನನ್ನು ಹತ್ಯೆ ಮಾಡಿದ್ದಾನೆ. ಬಳಿಕ ತಾನೇ ಹೋಗಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ರಾಯಚೂರು:- ರಾಯಚೂರು ತಾಲೂಕಿನ ಮಿಟ್ಟಿಮಲಕಾಪುರ ಬಳಿ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ವ್ಯಕ್ತಿಗಳು ಸಾವನ್ನಪ್ಪಿದ ಘಟನೆ ಜರುಗಿದೆ. ಯರಗೇರಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ರಾಯಚೂರಿನಿಂದ ಮಂತ್ರಾಲಯ ಮಾರ್ಗವಾಗಿ ಬಸ್ ಹೊರಟಿದ್ದು, ರಾಯಚೂರು ಮಾರ್ಗವಾಗಿ ಬೈಕ್​ನಲ್ಲಿ ಸವಾರರು ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಮೂವರ ಶವಗಳು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

Read More

ಬೆಂಗಳೂರು:- ನ್ಯಾಯಾಲಯದಿಂದ ಎಸಿಬಿ ರದ್ದು ಹಿನ್ನೆಲೆ ಎಸಿಬಿಯಲ್ಲಿದ್ದ ಹುದ್ದೆಗಳು ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಲೋಕಾಯಕ್ತ ಮತ್ತು ಪೊಲೀಸ್ ಇಲಾಖೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಎಸಿಬಿಯಲ್ಲಿದ್ದ ಬರೊಬ್ಬರಿ 524 ಹುದ್ದೆಗಳನ್ನ ವಿಂಗಡಿಸಿ, ಎರಡು ಇಲಾಖೆಗೆ ವರ್ಗಾಹಿಸಲಾಗಿದೆ. 2022ರ ಆಗಸ್ಟ್​.11 ರಂದು ಎಸಿಬಿ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ಎಸಿಬಿ ರದ್ದು ಹಿನ್ನೆಲೆ ಅಲ್ಲಿ ಇರುವಂತಹ ಹುದ್ದೆಗಳು ಖಾಲಿಯಾಗಿತ್ತು. ಇದೀಗ ಲೋಕಾಯುಕ್ತ ಸಂಸ್ಥೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಕೊರತೆ ಹಿನ್ನೆಲೆ ಅಧಿಕಾರಿ, ಸಿಬ್ಬಂದಿಯಿಂದ ಕೇಸ್​ ಕ್ಲಿಯರ್ ಮಾಡಲು ಕಷ್ಟ ಆಗುತ್ತಿದ್ದು, ಹೆಚ್ಚುವರಿ ಅಧಿಕಾರಿ, ಸಿಬ್ಬಂದಿ ನೇಮಕಕ್ಕೆ ಲೋಕಾಯಕ್ತರು ಮನವಿ ಮಾಡಿದ್ದರು. ಹೀಗಾಗಿ ಎಸಿಬಿಯಲ್ಲಿದ್ದ ಹುದ್ದೆಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿ ಆದೇಶಿಸಲಾಗಿದೆ. ಅದರಂತೆ ಭ್ರಷ್ಟಾಚಾರ ನಿಗ್ರಹ ದಳದಿಂದ ಲೋಕಾಯುಕ್ತಕ್ಕೆ 266 ಹುದ್ದೆಗಳು ಹಾಗೂ ಪೊಲೀಸ್ ಇಲಾಖೆಗೆ 258 ಹುದ್ದೆಗಳನ್ನು ವರ್ಗಾವಣೆ ಮಾಡಲಾಗಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸಿಬಿ ಸಂಸ್ಥೆಯನ್ನು ರದ್ದುಗೊಳಿಸಿ, ಆದೇಶ ಹೊರಡಿಸಿತ್ತು. ಜೊತೆಗೆ ಲೋಕಾಯುಕ್ಕೆ ಸಂಪೂರ್ಣ ಅಧಿಕಾರ ನೀಡಿತ್ತು. ಉಚ್ಚ ನ್ಯಾಯಾಲಯ ನೀಡಿದ್ದ…

Read More

ರಾಮನಗರ:- HD ಕುಮಾರಸ್ವಾಮಿಯಂತೆ ನನಗೂ ಏಕವಚನದಲ್ಲಿ ಮಾತಾಡಲು ಬರುತ್ತದೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ (ಮತ್ತು ಡಿಕೆ ಸಹೋದರರ ನಡುವಿನ ವೈಷಮ್ಯ ದಿನಗಳೆದಂತೆ ಉಲ್ಬಣಿಸುತ್ತಿದೆ. ರಾಮನಗರದಲ್ಲಿ ವಕೀಲರು ಮಾಡುತ್ತಿದ್ದ ಪ್ರತಿಭಟನೆ ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ ನಿನ್ನೆ ರಾತ್ರಿ ಸಮಯ ಹೋಗಿ ಬೆಂಬಲ ಸೂಚಿಸಿದ್ದು, ಧರಣಿಯಲ್ಲಿ ಕೂತಿದ್ದು ರಾಜಕೀಯವಲ್ಲದೆ ಮತ್ತೇನೂ ಅಲ್ಲ. ಗೃಹ ಸಚಿವ ಜಿ ಪರಮೇಶ್ವರ್ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದರೂ ಅಶೋಕ ಹಾಗೂ ಕುಮಾರಸ್ವಾಮಿ ರಾಮನಗರಕ್ಕೆ ಬಂದಿದ್ದರು. ಮಾಧ್ಯಮಗಳಿಗೆ ಹೇಳಿಕ ನೀಡುವಾಗ ಕುಮಾರಸ್ವಾಮಿ, ಡಿಕೆ ಸುರೇಶ್ ಬಗ್ಗೆ ಮಾತಾಡುತ್ತಾ ‘ಅವನ್ಯಾವ್ನೋ ಎಂಪಿ ಎಲ್ಲೊಂದ್ಲೋ ಫೋನ್ ಮಾಡ್ತಾನೆ’ ಅಂತ ಏಕವಚನದಲ್ಲಿ ಜರಿದಿದ್ದರು ಅದನ್ನು ಸುರೇಶ್ ಗಮನಕ್ಕೆ ತಂದಾಗ, ವಕೀಲರ ಪ್ರತಿಭಟನೆ ರಾಜಕೀಯಕ್ಕೆ ಬಳಸಿಕೊಳ್ಳುವ ಕುತಂತ್ರ ಕುಮಾರಸ್ವಾಮಿ ಮತ್ತು ಅಶೋಕ ಮಾಡಿದ್ದಾರೆ, ಕುಮಾರಸ್ವಾಮಿಯಂತೆ ತನಗೂ ಏಕವಚನದಲ್ಲಿ ಮಾತಾಡಲು ಬರುತ್ತದೆ, ಸಮಯ ಬಂದಾಗ ಹಾಗೆ ಮಾತಾಡ್ತೀನಿ ಹೋಗಿ…

Read More

ಬೆಂಗಳೂರು: MP ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿಲ್ಲ ಎಂದು ಡಾ. ಮಂಜುನಾಥ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿಲ್ಲ, ಆಲೋಚನೆಯಲ್ಲಿ ಇದ್ದೇನೆ ಎಂದು ಅವರು ಹೇಳಿದ್ದಾರೆ. ಮಂಡ್ಯದಲ್ಲಿ ನಡೆದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ಜನರು ನನ್ನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತಾಡುತ್ತಾ ಇದ್ದಾರೆ. ನಾನು ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ. ರಾಜಕೀಯಕ್ಕೆ ಬರಬೇಕಾ, ಲೋಕಸಭೆಗೆ ನಿಲ್ಲಬೇಕಾ ಎಂದು ನಿರ್ಧಾರ ಮಾಡಿಲ್ಲ ಎಂದು ಹೇಳಿದರು. ʻʻಹಲವು ಕಡೆ ಜನರು ಒತ್ತಡ ಹಾಕುತ್ತಾ ಇದ್ದಾರೆ. ರಾಜ್ಯ ಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಕೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಾ. ಇದೇ ರೀತಿ ರಾಷ್ಟ್ರ ಮಟ್ಟದಲ್ಲೂ ಈ ರೀತಿಯ ಸುಧಾರಣೆ ಯಾಕೆ ತರಬಾರದು ಎಂದು ಹೇಳ್ತಾ ಇದ್ದಾರೆ. ಆದರೆ, ನಾನು ಇನ್ನೂ ನಿರ್ಧಾರ ಮಾಡಿಲ್ಲ. ಮುಂದೆ ಸ್ಪರ್ಧೆಯ ಬಗ್ಗೆ ತೀರ್ಮಾನ ಮಾಡಿದ್ರೆ ಹೇಳ್ತೀನಿʼʼ ಎಂದು ಅವರು…

Read More

ಬೆಂಗಳೂರು:- ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆ ಮರು ಜಾರಿಗೊಳಿಸಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ರಾಜ್ಯ ಮಳೆಯಾಶ್ರಿತ ಕೃಷಿ ನೀತಿ, 2014ರ ಅನ್ವಯ 100 ಕೋಟಿ ರೂ.ಗಳ ಅನುದಾನದಲ್ಲಿ ಸದರಿ ಯೋಜನೆಯನ್ನು 2023-24ನೇ ಸಾಲಿನಲ್ಲಿ ಪ್ಯಾಕೇಜ್ ಮಾದರಿಯಲ್ಲಿ (ಕ್ಷೇತ್ರ ಬದು, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ತಂತಿಬೇಲಿ, ಪಂಪ್ ಸೆಟ್, ಸೂಕ್ಷ್ಮ ನೀರಾವರಿ ಘಟಕಗಳು) ಮಾರ್ಗಸೂಚಿ ಹಾಗೂ ಕ್ರಿಯಾ ಯೋಜನೆಯನ್ವಯ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮುಂಗಾರು 2023ನೇ ಸಾಲಿನ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳು ಸೇರ್ಪಡೆಯಾಗಿದ್ದರೂ ಸಹ 2023-24ನೇ ಸಾಲಿನಲ್ಲಿ ರಾಜ್ಯ ಮಳೆಯಾಶ್ರಿತ ಕೃಷಿ ನೀತಿ, 2014ರ ಅನ್ವಯ ಕೃಷಿ ಭಾಗ್ಯ ಯೋಜನೆ ರಾಜ್ಯದ ಒಣ ಕೃಷಿ ಹವಾಮಾನ ವಲಯಗಳಲ್ಲಿ ಇರುವ ತಾಲೂಕುಗಳಲ್ಲಿ ಮಾತ್ರ ಅನುಷ್ಠಾನ ಮಾಡಲಾಗುತ್ತಿದೆ. ಹಾಗಾಗಿ ಗದಗ ಜಿಲ್ಲೆಯ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳು ಒಣ ಕೃಷಿ ಹವಾಮಾನ ವಲಯದಲ್ಲಿ ಇಲ್ಲದಿರುವ…

Read More

ಬೆಂಗಳೂರು:- ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿಗೆ ಗುಡ್ ಬೈ ಹೇಳಿ ಕೈ ಹಿಡಿಯಲಿದ್ದಾರೆ. ನಾಳೆ ಸಂಜೆ‌ 4 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಚಿವರಾದ ಜಿ.ಪರಮೇಶ್ವರ್, ಕೆ ಎನ್ ರಾಜಣ್ಣ‌ ಸಮ್ಮುಖದಲ್ಲಿ ಸೇರ್ಪಡೆಗೆ ಸಿದ್ದತೆ ನಡೆಸಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಮುದ್ದಹನುಮೇಗೌಡ ಅವರು ಬಿಜೆಪಿ ಸೇರಿದ್ದರು. ಆದರೆ ಬಿಜೆಪಿಯಲ್ಲೂ ವಿಧಾನಸಭಾ ಟಿಕೆಟ್ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ತಮ್ಮ ಮಾತೃಪಕ್ಷದತ್ತ ಮುಖ ಮಾಡಿದ್ದಾರೆ.

Read More

ನೀಡುತ್ತದೆ. ಬೇವಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು ,ಲಿಮೋನಾಯ್ಡ್​ಗಳು, ವಿಟಮಿನ್ ಇ, ಟ್ರೈಗ್ಲಿಸರೈಡ್​ಗಳು, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ ಅಂಶಗಳಿವೆ. ಬೇವಿನ ಎಣ್ಣೆಯನ್ನು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಬಳಸಲಾಗುತ್ತದೆ. ಬೇವಿನ ಎಣ್ಣೆ ಶುಷ್ಕ ಚರ್ಮ ಮತ್ತು ಸುಕ್ಕುಗಳಿಗೆ ಚಿಕಿತ್ಸೆ ನೀಡುತ್ತದೆ. ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಗಾಯಗಳನ್ನು ಸರಿಪಡಿಸಿ, ಮೊಡವೆಗೆ ಚಿಕಿತ್ಸೆ ನೀಡುತ್ತದೆ. ಬೇವಿನ ಎಣ್ಣೆಯನ್ನು ಸೋರಿಯಾಸಿಸ್, ಎಸ್ಜಿಮಾ ಮತ್ತು ಚರ್ಮದ ಇತರ ಅಸ್ವಸ್ಥತೆಗಳ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು. ಎಣ್ಣೆಯಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಸಂಯುಕ್ತಗಳಲ್ಲಿ ಅಜಾಡಿರಾಕ್ಟಿನ್, ನಿಂಬಿನ್ ಮತ್ತು ನಿಂಬಿಡಿನ್ ಸೇರಿವೆ. ಹೊಟ್ಟೆಯ ಗುಂಡಿಗೆ ಹಚ್ಚುವ ಬೇವಿನ ಎಣ್ಣೆಯು ಸೂಕ್ಷ್ಮಾಣು ಜೀವಿಗಳನ್ನು ನಿರ್ಮೂಲನೆ ಮಾಡುವ ಮತ್ತು ಹೊಟ್ಟೆಯ ಕಾಯಿಲೆಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಬೇವಿನ ಎಣ್ಣೆಯು ಆ್ಯಂಟಿಫಂಗಲ್ ಗುಣಗಳನ್ನು ಹೊಂದಿದ್ದು, ಅದು ಉಗುರು ಶಿಲೀಂಧ್ರ ಮುಂತಾದ ಶಿಲೀಂಧ್ರ ರೋಗಗಳ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಕಿಬ್ಬೊಟ್ಟೆಯ ಪ್ರದೇಶದಲ್ಲಿನ ಶಿಲೀಂಧ್ರಗಳ ಸೋಂಕಿಗೆ ಹೊಕ್ಕಳಿಗೆ ಬೇವಿನ ಎಣ್ಣೆಯನ್ನು ಹಚ್ಚುವ ಮೂಲಕ ಚಿಕಿತ್ಸೆ…

Read More

ಬೆಂಗಳೂರು:- ಹಿರಿಯ ಐಪಿಎಸ್​​ ಅಧಿಕಾರಿ ಸಂದೀಪ್ ಪಾಟೀಲ್ ರನ್ನು ಬಿಟ್​ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಅಧಿಕಾರಿಗೆ ಬುಲಾವ್​ ಹಿನ್ನೆಲೆ ಇಂದು ಮಧ್ಯಾಹ್ನ 3.30ರ ಸುಮಾರಿಗೆ ವಿಚಾರಣೆಗಾಗಿ ಸಿಐಡಿ ಕಚೇರಿಗೆ ಹಾಜರಾಗಿದ್ದ ಸಂದೀಪ್ ಪಾಟೀಲ್​, ಬಿಟ್​ ಕಾಯಿನ್ ಹಗರಣ ಕೇಸ್ ಸಂಬಂಧ ಮಾಹಿತಿ ನೀಡಿ ವಾಪಸ್​ ತೆರಳಿದ್ದಾರೆ. ಸಂದೀಪ್ ಪಾಟೀಲ್ ಸಿಸಿಬಿ ಜಂಟಿ ಆಯುಕ್ತರಾಗಿದ್ದಾಗ ಕೇಸ್ ದಾಖಲಾಗಿತ್ತು. ಬಿಟ್ ಕಾಯಿನ್ ಪ್ರಕರಣದ ಹೆಚ್ಚಿನ ತನಿಖೆಯನ್ನು ಸಿಐಡಿ ಎಸ್​​ಐಟಿ ನಡೆಸುತ್ತಿದ್ದು, ತನಿಖೆಯ ಭಾಗವಾಗಿ ಸಂದೀಪ್ ಪಾಟೀಲ್ ವಿಚಾರಣೆಯನ್ನು ಇಂದು ಮಾಡಲಾಗಿದೆ. ಬಿಟ್​ ಕಾಯಿನ್​ ಹಗರಣದ ಸಮಯದಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಸಂದೀಪ್ ಪಾಟೀಲ್​ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಕೆಲ ಮಾಹಿತಿ ವಿನಿಮಯಕ್ಕೆ SIT ಅಧಿಕಾರಿಗಳು ಕರೆದಿದ್ದರು. ಸದ್ಯ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.​ 2023ರ ಜುಲೈನಲ್ಲಿ ಕಾಂಗ್ರೆಸ್ ಸರ್ಕಾರ, SIT ರಚನೆ ಮಾಡಿತ್ತು. ಆಗ ಕಾಟನ್ ಪೇಟೆ ಠಾಣೆಯಲ್ಲಿ ಒಂದು ಕೇಸ್ ದಾಖಲು ಮಾಡಿದ್ದರು.

Read More

ಬೆಂಗಳೂರು:- ನಗರದಲ್ಲಿ ಬೈಕ್​ಗಳನ್ನು ಕದ್ದು ಗ್ರಾಮೀಣ ಭಾಗದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಕಾಡುಗೋಡಿ ಪೊಲೀಸರು (Kadugodi Police) ಬಂಧಿಸಿದ್ದಾರೆ. ಶರತ್​ಬಾಬು ಬಂಧಿತ ಆರೋಪಿ. ಇತನಿಂದ 20 ಲಕ್ಷ ಮೌಲ್ಯದ 19 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಅಸಾಮಿ ಬೆಂಗಳೂರಿನಲ್ಲಿ ಸ್ಪ್ಲೆಂಡರ್ ಬೈಕ್​ಗಳನ್ನೇ ಮಾತ್ರ ಕಳ್ಳತನ ಮಾಡಿ, ಅದನ್ನು ಹಳ್ಳಿಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದ. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಇತನನ್ನು ಬಂಧಿಸಿದ್ದಾರೆ

Read More