Author: AIN Author

ರಾಜ್ಯ ಸರ್ಕಾರವು ರೈತರ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದೆ. ರೈತ ವಿದ್ಯಾನಿಧಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ವಿದ್ಯಾನಿಧಿ ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪೋಷಕರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಫೆ.29ರೊಳಗೆ ಸಲ್ಲಿಸಬೇಕು. ಪೋಷಕರ ಆದಾಯವು 2.50 ಲಕ್ಷಕ್ಕಿಂತ ಕಡಿಮೆ ಇರಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ. ಈ ವಿದ್ಯಾರ್ಥಿ ವೇತನವನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದು, ಈ ಯೋಜನೆ ಯಡಿ 2500 ರೂ ಮತ್ತು ಗರಿಷ್ಠ 110000 ರೂ ವಿದ್ಯಾರ್ಥಿವೇತನ ನೀಡಲಾಗುತ್ತದೆ.

Read More

ತುಮಕೂರು:- ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿಗೆ ಗುಡ್ ಬೈ ಹೇಳಿ ಇಂದು ಕೈ ಹಿಡಿಯಲಿದ್ದಾರೆ. ಇಂದು ಸಂಜೆ‌ 4 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಚಿವರಾದ ಜಿ.ಪರಮೇಶ್ವರ್, ಕೆ ಎನ್ ರಾಜಣ್ಣ‌ ಸಮ್ಮುಖದಲ್ಲಿ ಸೇರ್ಪಡೆಗೆ ಸಿದ್ದತೆ ನಡೆಸಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha Election) ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಮುದ್ದಹನುಮೇಗೌಡ ಅವರು ಬಿಜೆಪಿ (BJP) ಸೇರಿದ್ದರು. ಆದರೆ ಬಿಜೆಪಿಯಲ್ಲೂ ವಿಧಾನಸಭಾ ಟಿಕೆಟ್ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ತಮ್ಮ ಮಾತೃಪಕ್ಷದತ್ತ ಮುಖ ಮಾಡಿದ್ದಾರೆ

Read More

ಗರ್ಭಾವಸ್ಥೆಯನ್ನು ಹೊಂದುವುದರ ಬಗ್ಗೆ ಮಹಿಳೆಯರು ಸುಂದರ ಕನಸುಗಳನ್ನು ಹೊಂದಿರುತ್ತಾರೆ. ಈ ಒಂದು ವಿಶೇಷ ಸಮಯವು ಸುಂದರ ಹಾಗೂ ಉತ್ತಮ ಅನುಭವಗಳಿಂದ ಕೂಡಿದ್ದರೆ ಎಲ್ಲವೂ ಸಂತೋಷದಿಂದ ಕೂಡಿರುತ್ತದೆ. ಚೊಚ್ಚಲ ತಾಯ್ತನದ ಬಗ್ಗೆ ಸಾಕಷ್ಟು ಅಂಜಿಕೆ ಹಾಗೂ ಗೊಂದಲಗಳು ಇರುವುದು ಸಾಮಾನ್ಯ ಗರ್ಭಾವಸ್ಥೆಯ ಖಚಿತತೆ ಪಡೆದುಕೊಂಡ ನಂತರ ಮೊದಲು ಯಾವ ವೈದ್ಯರಲ್ಲಿ ತಪಾಸಣೆಯನ್ನು ನಡೆಸಬೇಕು? ಯಾವ ಆಸ್ಪತ್ರೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಚಿಂತಿಸಬೇಕಾಗುವುದು. ವೈದ್ಯರು ಈ ಹಿಂದೆ ಉತ್ತಮ ಚಿಕಿತ್ಸೆ ನೀಡುವುದರ ಮೂಲಕ ಉತ್ತಮ ಹೆಸರು ಪಡೆದಿದ್ದಾರೆಯೇ? ಇಲ್ಲವೇ? ಎನ್ನುವುದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ. ನಂತರ ನಿಮ್ಮ ತಪಾಸಣೆಗೆ ಆ ವೈದ್ಯರನ್ನು ಆಯ್ಕೆ ಮಾಡಿ. ಮೊದಲ ತಪಾಸಣೆಯಲ್ಲಿ ನಿಮಗೆ ವ್ಯದ್ಯರ ಸಲಹೆ ಹಾಗೂ ತಪಾಸಣೆಯಲ್ಲಿ ಅತೃಪ್ತ ಭಾವನೆ ಉಂಟಾಗಿದ್ದರೆ ಎರಡನೇ ತಪಾಸಣೆಗೆ ವೈದ್ಯರನ್ನು ಬದಲಿಸಬಹುದು. ಚೂಯಿಂಗ್ ಗಮ್ ತಿನ್ನುವ ಅಭ್ಯಾಸವಿದೆಯೇ: ಈಗಲೇ ಬಿಟ್ಟುಬಿಡಿ ಇಲ್ಲದಿದ್ರೆ ಅಪಾಯ ಗ್ಯಾರಂಟಿ! ಸಾಕಷ್ಟು ನೀರಿನ ಸೇವನೆಯೊಂದಿಗೆ ಹೈಡ್ರೇಟೆಡ್ ಆಗಿರಿ. ಆಮ್ನಿಯೋಟಿಕ್ ದ್ರವವು ಬೆಳೆಯುತ್ತಿರುವ ಮಗುವನ್ನು ಸುತ್ತುವರೆದಿರುವ…

Read More

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಘಟಕದಲ್ಲಿ ಖಾಲಿ ಇರುವ ಒಟ್ಟು 28 ಜವಾನರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ., ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಮಾರ್ಚ್ 20 ಕೊನೆಯ ದಿನಾಂಕವಾಗಿರುತ್ತದೆ. ಅಧಿಸೂಚನೆಗಾಗಿ ಮತ್ತು ಇತರೆ ಸೂಚನೆಗಳಿಗಾಗಿ ಹಾಗೂ ಆನ್- ಲೈನ್ ಮೂಲಕ ಅರ್ಜಿ ಸಲ್ಲಿಸಲು ನ್ಯಾಯಾಲಯದ ವೆಬ್-ಸೈಟ್ https://bengalururural.dcourts.gov.in/online-recruitment/ ಗೆ ಭೇಟಿ ನೀಡಬಹುದಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಖ್ಯ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಪಾಕ್‌ ತಂಡದ ಮಾಜಿ ನಾಯಕ ಬಾಬರ್‌ ಆಜಂ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಭರ್ಜರಿ ಫಾರ್ಮ್‌ ಕಂಡುಕೊಂಡಿದ್ದಾರೆ. ಈ ಲೀಗ್‌ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 10 ಸಾವಿರ ರನ್‌ ಪೂರೈಸಿದ ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ಕ್ರಿಸ್ ಗೇಲ್ ಹಾಗೂ ವಿರಾಟ್‌ ಕೊಹ್ಲಿ ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕ ಬಾಬರ್ ಆಜಂ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಟಿ20 ಸ್ವರೋಪದಲ್ಲಿ ಅತಿ ವೇಗವಾಗಿ 10 ಸಾವಿರ ರನ್‌ ಪೂರೈಸಿದ ದಾಖಲೆ ಮಾಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪೇಶಾವರ್ ಝಲ್ಮಿ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಬಾಬರ್ 6 ರನ್ ಗಳಿಸುತ್ತಿದ್ದಂತೆ 271 ಪಂದಗಳಲ್ಲೇ 10,000 ರನ್ ಪೂರ್ಣಗೊಳಿಸಿದ್ದಾರೆ. 2017ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆರಂಭಿಕ ಆಟಗಾರ ಕ್ರಿಸ್…

Read More

ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ವಿಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಕೆಲವು ಟಿ20 ಲೀಗ್​ಗಳಲ್ಲಿ ಆಡುತ್ತಿದ್ದಾರೆ. ಇತ್ತೀಚಿಗೆ ಐಎಲ್​ಟಿ ಟಿ20 ಲೀಗ್​ನಲ್ಲಿ ಮುಂಬೈ ಇಂಡಿಯನ್ ಫ್ರಾಂಚೈಸಿ ಎಂಐ ಎಮಿರೇಟ್ಸ್ ಪರ ಆಡಿ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದರು. ಒಂದೇ ಓವರ್​ನಲ್ಲಿ 27 ರನ್ ಚಚ್ಚಿದ ಪೊಲಾರ್ಡ್​ ಅಬ್ಬರಕ್ಕೆ ಬಾಬರ್ ತಂಡಕ್ಕೆ ಹೀನಾಯ ಸೋಲು ಕಂಡಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ 9ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್‌ ನಡೆಯುತ್ತಿದೆ. ಬುಧವಾರ ನಡೆದ ಲೀಗ್​ನ ಆರನೇ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ ತಂಡಗಳು ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೇಶಾವರ ತಂಡ 154 ರನ್ ಕಲೆಹಾಕಿದರೆ, ಗುರಿ ಬೆನ್ನಟ್ಟಿದ ಕರಾಚಿ ಕಿಂಗ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ತಂಡದ ಪರ ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಒಂದೇ ಓವರ್​ನಲ್ಲಿ ಬರೋಬ್ಬರಿ 27 ರನ್ ಕಲೆಹಾಕಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ವಾಸ್ತವವಾಗಿ, ಪೇಶಾವರ್…

Read More

ಬೆಂಗಳೂರು:- ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್​ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವ ಅಂಗವಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿತ್ತು. ಆದರೆ ಘಟಿಕೋತ್ಸವ ದಿನದಂದು ಎಸ್.ಸೋಮನಾಥ್ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬುಧವಾರ ರಾಜಭವನದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಜಿಎಸ್​ಎಲ್​ವಿ ಮಾರ್ಕ್ 3 (GSLV Mk-III) ಲಾಂಚರ್ ರೂಪಿಸುವಲ್ಲಿ ಸೋಮನಾಥ್ ಮುಖ್ಯಪಾತ್ರ ವಹಿಸಿದ್ದರು. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಪಿಎಸ್​ಎಲ್​ವಿ (Polar Satellite Launch Vehicle – PSLV) ಉಡಾವಣಾ ವಾಹನ ರೂಪಿಸುವ ತಂಡದಲ್ಲಿ ಟೀಂ ಲೀಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಮೂರು ವರ್ಷ ಕೆಲಸ ಮಾಡಿದ್ದರು. ಬಾಹ್ಯಾಕಾಶ ಆಯೋಗದಲ್ಲಿ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿದ್ದರು. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಜನವರಿ 22, 2018ರಿಂದ ಕಾರ್ಯನಿರ್ವಹಿಸುತ್ತಿದ್ದರು. 2022ರಲ್ಲಿ ಅವರು ಇಸ್ರೋ ಅಧ್ಯಕ್ಷರಾದರು. ಕೇರಳದ ಕೊಲ್ಲಂನಲ್ಲಿರುವ ಟಿಕೆಂಎ ಎಂಜಿನಿಯರಿಂಗ್ ಕಾಲೇಜಿನಲ್ಲಿ…

Read More

ಕೊನೆ ಸಚಿವ ಸಂಪುಟದಲ್ಲಿ ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಗುಡ್​ ನ್ಯೂಸ್​ ನೀಡಿದೆ. ಪ್ರತಿ ಕ್ವಿಂಟಲ್‌ಗೆ 315 ರೂಪಾಯಿದಿಂದ 340 ರೂ.ಗೆ ಏರಿಕೆ ಮಾಡಿದೆ. ಇದರೊಂದಿಗೆ ಕಬ್ಬಿನ ಎಫ್​ಆರ್​ಪಿ ಪ್ರತಿ ಕ್ವಿಂಟಲ್​ಗೆ 25 ರೂ. ಹೆಚ್ಚಿಸಿದಂತಾಗಿದೆ. ಈ ಬಗ್ಗೆ ಕೇಂದ್ರ ಪ್ರಸಾರ ಮತ್ತು ಕ್ರೀಡಾ ಖಾತೆ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಸಂಪುಟ ಸಭೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಬ್ಬಿನ ದರ ಪ್ರತಿ ಕ್ವಿಂಟಾಲ್​ಗೆ 340 ರೂಪಾಯಿಗೆ ಹೆಚ್ಚಿಳ ಮಾಡಲಾಗಿದೆ. ಇದು ಕಬ್ಬಿನ ಐತಿಹಾಸಿಕ ಬೆಲೆಯಾಗಿದ್ದು, ಇದು ಪ್ರಸಕ್ತ 2023-24 ರ ಹಂಗಾಮಿನ ಕಬ್ಬಿನ ಎಫ್‌ಆರ್‌ಪಿಗಿಂತ ಸುಮಾರು ಶೇ.8ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು

Read More

ಸೂರ್ಯೋದಯ: 06:43, ಸೂರ್ಯಾಸ್ತ : 06:16 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾಘ ಮಾಸ,, ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ತ್ರಯೋದಶಿ, ನಕ್ಷತ್ರ: ಪುಷ್ಮ್ಯ, ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06 :00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: ಬೆ.9:40 ನಿಂದ ಬೆ.11:26 ತನಕ ಅಭಿಜಿತ್ ಮುಹುರ್ತ: ಮ.12:06 ನಿಂದ ಮ.12:52 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ಹಾರ್ಡ್ವೇರ್ ಉದ್ಯಮದಾರರಿಗೆ ಧನ ಲಾಭ, ಗುತ್ತಿಗೆದಾರರಿಗೆ ನಿಂತಿರುವ ಕಾಮಗಾರಿ ಪುನರಾರಂಭ, ಹಳೆಯ ಬಿಲ್ ಮರುಪಾವತಿ, ಆರ್ಥಿಕ ಚೇತರಿಕೆ, ಭೂ ವ್ಯವಹಾರಗಳಲ್ಲಿ ಲಾಭ, ಶತ್ರುಗಳ ಕಿರಿಕಿರಿ ಎದುರಿಸುವಿರಿ, ಪತ್ನಿಯ ಆರೋಗ್ಯದಲ್ಲಿ ಚೇತರಿಕೆ,ಮದುವೆ ವಿಷಯಕ್ಕಾಗಿ ಮಾನಸಿಕವಾಗಿ ಕುಗ್ಗುವಿಕೆ, ಮಕ್ಕಳ…

Read More

ನವದೆಹಲಿ:- ನಿಮ್ಮ ಮಗನನ್ನು ಹುಚ್ಚು ಹುಚ್ಚಾಗಿ ಮಾತಾಡದಂತೆ ನೋಡಿಕೊಳ್ಳಿ ಎಂದು ಸೋನಿಯಾಗೆ ಸ್ಮೃತಿ ಸಲಹೆ ನೀಡಿದ್ದಾರೆ. ಅಮೇಥಿಯಲ್ಲಿ ಮಂಗಳವಾರವೂ ಯಾತ್ರೆ ನಡೆಸಿದ್ದ ರಾಹುಲ್ ಗಾಂಧಿ, ರಾತ್ರಿಹೊತ್ತು ಮದ್ಯ ಸೇವಿಸುವವರಿಂದ ಉತ್ತರಪ್ರದೇಶ ಭವಿಷ್ಯ ನರ್ತನ ಮಾಡ್ತಿದೆ ಅಂತಾ ವಿಮರ್ಶೆ ಮಾಡಿದ್ರು. ಅಷ್ಟೇ ಅಲ್ಲ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಹಾಡಹಗಲೇ ಕುಡಿದುಬಿದ್ದಿದ್ದ ವ್ಯಕ್ತಿಗಳನ್ನು ಕಂಡೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ರು. ಇದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೌಂಟರ್ ನೀಡಿದ್ದಾರೆ. ರಾಹುಲ್ ಮಾತು ಕೇಳಿದ್ರೆ ಅವರ ಮನಸ್ಸಲ್ಲಿ ಎಷ್ಟು ವಿಷ ತುಂಬಿಕೊಂಡಿದೆ ಎನ್ನುವುದು ಗೊತ್ತಾಗ್ತಿದೆ. ತಮ್ಮ ಮಗನನ್ನು ಚೆನ್ನಾಗಿ ಬೆಳೆಸಲಾಗದಿದ್ರೆ ಹೋಯ್ತು.. ಕನಿಷ್ಠ ಹುಚ್ಚು ಹುಚ್ಚಾಗಿ ಮಾತಾಡದಂತೆ ನೋಡಿಕೊಳ್ಳಲಿ ಎಂದು ಸೋನಿಯಾ ಗಾಂಧಿಗೆ ಸ್ಮೃತಿ ಇರಾನಿ ಸಲಹೆ ನೀಡಿದ್ರು. ರಾಹುಲ್ ತಮ್ಮ ಮಾತಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

Read More