ಬೆಂಗಳೂರು: ನಿಮ್ಮ ಬಳಿ ಉಪಯೋಗಿಸದ ಹಳೆಯ ಸ್ಮಾರ್ಟ್ಫೋನ್ಗಳಿದ್ದರೆ ಅದನ್ನು ಅನೇಕ ರೀತಿಯಲ್ಲಿ ಉಪಯೋಗಿಸಬಹುದಾಗಿದೆ. ಪ್ರಮುಖವಾಗಿ ಈ ಮೊಬೈಲ್ ಅನ್ನು ನಿಮ್ಮ ಮನೆಯ ಸಿಸಿಟಿವಿ ಕ್ಯಾಮೆರಾ ಆಗಿ ಪರಿವರ್ತಿಸಬಹುದು. ಮನೆ, ಆಫೀಸ್‌ಗಳಿಗೆ ಹೊಸ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಹೆಚ್ಚು ಹಣ ಖರ್ಚಾಗುತ್ತದೆ. ಅಂಗಡಿಯಿಂದ ಹೊಸ ಸಿಸಿಟಿವಿ ಖರೀದಿಸುವ ಬದಲು ಹಳೆ ಸ್ಮಾರ್ಟ್‌ಫೋನ್ ಅನ್ನೇ ಸಿಸಿಟಿವಿ ಕ್ಯಾಮೆರಾ ಆಗಿ ಬಳಸಬಹುದು. ಇದಕ್ಕೆ ಒಂದು ಸಾಫ್ಟ್‌ವೇರ್, ಚಾರ್ಜರ್, ರೆಕಾರ್ಡ್ ಆಗುವ ವಿಡಿಯೋ ಕ್ಲಿಪ್‌ಗಳನ್ನು ನೋಡಲು ನೀವು ಬಳಸುವ ಫೋನ್ ಅನ್ನು ಬಳಕೆ ಮಾಡಿಕೊಳ್ಳಬಹುದು ಅಥವಾ ಕಂಪ್ಯೂಟರ್ ಇದ್ದರೆ ಸಾಕು. ನೀವು ಸಿಸಿಟಿವಿ ಆಗಿ ಬಳಸುವ ಹಳೆಯ ಸ್ಮಾರ್ಟ್‌ಫೋನ್‌ಗೆ ಹಾಗೂ ಈಗಿರುವ ಹೊಸ ಮೊಬೈಲ್ಗೆ ಮೊದಲು “AtHome Video Streamer -Monitor” ಎಂಬ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಈ ಸ್ಮಾರ್ಟ್‌ಫೋನ್ ಸೆಕ್ಯೂರಿಟಿ ಸಿಸಿಟಿವಿ ಕ್ಯಾಮೆರಾ ಆಗಿ ವಿಡಿಯೋ ರೆಕಾರ್ಡ್ ಮಾಡುತ್ತದೆ. ಅಂದಹಾಗೆ ಈ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗೆ ಎರಡಕ್ಕೂ ಬಳಸಬಹುದಾಗಿದೆ. ಎರಡು ಫೋನ್‌ಗಳು ವೈಫೈ…
Author: AIN Author
ಸೂರ್ಯೋದಯ: 06:27, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ಚೌತಿ ನಕ್ಷತ್ರ: ಆರಿದ್ರ ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ:12:00 ನಿಂದ 01:30 ತನಕ ಅಮೃತಕಾಲ: ಇಲ್ಲ ಅಭಿಜಿತ್ ಮುಹುರ್ತ: ಬೆ.11:39 ನಿಂದ ಮ.12:23 ತನಕ ಮೇಷ ರಾಶಿ: ಸ್ಟಾಕ್ ಷೇರಿನ ವ್ಯಾಹಾರದಲ್ಲಿ ಸಾಕಷ್ಟು ಲಾಭ ಗಳಿಸುವಿರಿ,ಜ್ಯೂಸು ಅಂಗಡಿ ಮಾರಾಟಗಾರರಿಗೆ ಲಾಭ, ರಂಗಭೂಮಿ ಕಲಾವಿದರಿಗೆ ಶುಭದಾಯಕ, ಪಾಲುದಾರಿಕೆ ವ್ಯಾಪಾರ ಬೇಡವೇ ಬೇಡ, ರಾಜಕೀಯ ಮುಖಂಡರಿಗೆ ಸೂಕ್ತ ಸಮಯವಲ್ಲ, ಗೃಹ ನಿರ್ಮಾಣ ವೃತ್ತಿ ಹೊಂದಿದವರಿಗೆ ನಷ್ಟವಾಗಬಹುದು,ಗರ್ಭಿಣಿಯರು ಎಚ್ಚರದಿಂದ ಇರಿ, ಮದುವೆ ಅಡತಡೆ ಎದುರಿಸುವ ಸಾಧ್ಯತೆ, ಸ್ತ್ರೀಶಕ್ತಿ ಮತ್ತು ಸಂಘಟನೆಗಳು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ, ಕಛೇರಿಯಲ್ಲಿನ ಮುಖ್ಯ ಕಡತಗಳು ವಸ್ತುಗಳ ಬಗ್ಗೆ ಜಾಗೃತಿ ವಹಿಸಿ, ಅಧಿಕಾರಿಗಳೊಡನೆ ವಾಗ್ವಾದ ಮಾಡಬೇಡಿ, ದಾಂಪತ್ಯದಲ್ಲಿ ಅಸಮಾಧಾನ ಸೃಷ್ಟಿ,…
ಬೆಂಗಳೂರು:- ವೀಕೆಂಡ್ ಮುಗಿಸಿ ಬೆಂಗಳೂರಿನತ್ತ ಜನತೆ ಮುಖ ಮಾಡಿದ್ದು, ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. https://ainlivenews.com/ed-attacks-in-various-states-including-karnataka-do-you-know-how-much-money-was-seized/ ಶನಿವಾರ, ಭಾನುವಾರ ಹಾಗೂ ಇಂದು ಸೋಮವಾರ ಕನಕದಾಸ ಜಯಂತಿ ರಜೆ ಮುಗಿಸಿಕೊಂಡು ಜನ ಇದೀಗ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ನಾಳೆಯಿಂದ ಸರ್ಕಾರಿ ಕಚೇರಿ, ಐಟಿ ಬಿಟಿ ಕಂಪನಿಗಳು ವರ್ಕಿಂಗ್ ಇರುವುದರಿಂದ ಊರಿಗೆ ಹೋಗಿದ್ದವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರು :- ಕರ್ನಾಟಕ ಸೇರಿದಂತೆ 22 ರಾಜ್ಯಗಳಲ್ಲಿ ಇ.ಡಿ ದಾಳಿ ನಡೆಸಿದ್ದು, ಕೋಟಿ ಕೋಟಿ ಹಣ ಸೀಜ್ ಮಾಡಲಾಗಿದೆ. https://ainlivenews.com/kolar-537th-bhakta-kanakadasas-jayanti-celebration/ ಚೆನ್ನೈ ಮೂಲದ ಸ್ಯಾಂಟಿಯಾಗೊ ಮಾರ್ಟಿನ್ ಅವರ ಸಂಸ್ಥೆ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಸಹವರ್ತಿಗಳ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 2002ರ ಪಿಎಂಎಲ್‍ಎ ಕಾಯ್ದೆ ಅಡಿಯಲ್ಲಿ ಇಡಿ ಈ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ. ಕಾರ್ಯಾಚರಣೆಯ ಸಮಯದಲ್ಲಿ, ಮಹತ್ವದ ದಾಖಲೆಗಳು, ಡಿಜಿಟಲ್ ಸಾಧನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 12.41 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ
ಕೋಲಾರ:- ಕೋಲಾರ ನಗರದ ಎಸ್‌ಎನ್‌ಅರ್ ವೃತ್ತದಲ್ಲಿ ೫೩೭ ನೇ ಭಕ್ತ ಕನಕದಾಸರ ಜಯಂತೋತ್ಸವವನ್ನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ ಹಾಗೂ ಜಿಲ್ಲಾ ಕುರುಬರ ಸಂಘದ ಸಹಯೋಗದಲ್ಲಿ ಜಯಂತಿ ಆಚರಣೆಯನ್ನ ಮಾಡಲಾಯಿತು. ಕನಕ ಜಯಂತೋತ್ಸವಕ್ಕೆ ದೀಪ ಬೆಳಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಚಾಲನೆ ನೀಡಿದ್ರು. https://ainlivenews.com/good-news-for-the-devotees-of-thimmappa-darshan-will-be-available-within-two-to-three-hours/ ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್, ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ನಾಯಕರು ಸಿಎಂ ಸಿದ್ದರಾಮಯ್ಯ ಗುಣಗಾನ ಮಾಡಿದ್ರು. ಕುರಿ ಕಾಯುವವರು ರಾಜ್ಯದ ಸಿಎಂ ಆಗಿರೋದು ಹೆಮ್ಮೆಯ ವಿಚಾರ, ಅವರಿಂದಾಗಿಯೇ ಇಂದು ನಾನು ಕೋಲಾರದಲ್ಲಿ ಶಾಸಕನಾಗಿದ್ದೇನೆ ಅವರ ಆಶೀರ್ವಾದದಿಂದಲೆ ಇಂದು ನಾನು ಶಾಸಕನಾಗಿರೋದು ಎಂದು ಸಿದ್ದರಾಮಯ್ಯ ಕುರಿತು ಗುಣಗಾನ ಮಾಡಿದ್ರು. ಕನಕ ಜಯಂತೋತ್ಸವದಲ್ಲಿ ಸಿಎಂ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಸಂಸದ ಮಲ್ಲೇಶ್ ಬಾಬು, ಶಾಸಕ ಕೊತ್ತೂರು ಮಂಜುನಾಥ್, ಪರಿಷತ್ ಸದಸ್ಯರಾದ ಗೋವಿಂದರಾಜು, ಅನಿಲ್ ಕುಮಾರ್, ಮಾಜಿ ಸಂಸದ ಎಸ್ ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಡಿಸಿ ಅಕ್ರಂ ಪಾಷಾ, ಎಸ್ಪಿ ಗಳಾದ…
ಅಮರಾವತಿ:- ತಿಮ್ಮಪ್ಪನ ಭಕ್ತಾದಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇನ್ಮುಂದೆ ಎರಡರಿಂದ ಮೂರು ಗಂಟೆಯಲ್ಲೇ ದರ್ಶನ ಸಿಗಲಿದೆ ಎನ್ನಲಾಗಿದೆ. https://ainlivenews.com/muda-scandal-full-drill-for-cm-siddaramaiahs-relative/ ಕೇವಲ 2ರಿಂದ 3 ಗಂಟೆಯೊಳಗೆ ಸಾಮಾನ್ಯ ಭಕ್ತರು ದೇವರ ದರ್ಶನ ಪಡೆಯುವಂತೆ ಬದಲಾವಣೆ ತರಲು ಎಐ ಮತ್ತು ಆಧುನಿಕ ತಂತ್ರಜ್ಞಾನ ಬಳಸಲು ಕ್ರಮಕೈಗೊಳ್ಳಲಾಗಿದೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರಿಗೆ ತೊಂದರೆ, ಕಿರಿಕಿರಿ ಉಂಟಾಗದಂತೆ ದರ್ಶನ ಲಭ್ಯವಾಗಲು ಈ ಯೋಜನೆ ರೂಪಿಸಲಾಗಿದೆ. ಟಿಟಿಡಿ ಆಡಳಿತ ಮಂಡಳಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಶ್ರೀವಾಣಿ ಟ್ರಸ್ಟ್ ಅನ್ನು ವಜಾಗೊಳಿಸಿದೆ. ಟಿಟಿಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯಧರ್ಮೀಯ ನೌಕರರನ್ನು ವಿಆರ್‌ಎಸ್ ಅಥವಾ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಈ ಕುರಿತು ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಸ್ಪಷ್ಟಪಡಿಸಿದ್ದಾರೆ.
ಮೈಸೂರು:- ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸಂಬಂಧಿಗೆ ಇಡಿ ಡ್ರಿಲ್ ತೆಗೆದುಕೊಂಡಿದೆ. https://ainlivenews.com/how-to-use-geyser-in-winter-if-so-then-follow-these-tips/ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರ ವಿಚಾರಣೆ ನಡೆಸಿದರು. ಮುಡಾ ಹಗರಣದಲ್ಲಿ ಮಲ್ಲಿಕಾರ್ಜುನ ಸ್ವಾಮಿ 3ನೇ ಆರೋಪಿಯಾಗಿದ್ದಾರೆ. ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆ ನಡೆದಿದ್ದು, ಕೆಸರೆ ಗ್ರಾಮದಲ್ಲಿರುವ 3.16 ಎಕರೆ ಜಮೀನಿನ ಕುರಿತು ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಮಾಹಿತಿ ಪಡೆದರು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ. ಲೋಕಾಯುಕ್ತ ಅಧಿಕಾರಿಗಳು ಮುಡಾದ ಹಿಂದಿನ ಆಯುಕ್ತರಾಗಿದ್ದ ನಟೇಶ್ ಅವರಿಗೆ ನೋಟಿಸ್ ನೀಡಿದ್ದಾರೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ನೋಟಿಸ್ ಮೂಲಕ ಹೇಳಿದ್ದಾರೆ.
ಎಲೆಕ್ಟ್ರಿಕ್ ಗೀಸರ್ ಬಳಸುವಾಗ ಕೆಲವು ತಪ್ಪುಗಳು ಆಗುವುದು ಸಾಮಾನ್ಯ. ಆದರೆ ಅವು ಗಂಭೀರ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಅದರ ಕಡೆ ಗಮನ ಹರಿಸದಿದ್ದರೆ ಅಪಘಾತಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಸ್ಫೋಟಗಳು ಸಂಭವಿಸಬಹುದು. ಇನ್ನೇನು ಚಳಿಗಾಲ ಶುರುವಾಗುತ್ತಿದೆ. ಇಂತಹ ಸಮಯದಲ್ಲೇ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತವೆ. ಏಕೆಂದರೆ ತಣ್ಣೀರಿನಿಂದ ಸ್ನಾನ ಮಾಡುವುದು ಚಳಿಗಾಲದಲ್ಲಿ ಸ್ವಲ್ಪ ಕಷ್ಟ. ಅಂತಹ ಪರಿಸ್ಥಿತಿಯಲ್ಲಿ, ನೀವು ಗೀಸರ್ ಖರೀದಿಸಲು ಅಥವಾ ಬಳಸಲು ಯೋಚಿಸುತ್ತಿದ್ದರೆ, ಗೀಸರ್‌ನಿಂದ ಉಂಟಾಗುವ ಅಪಘಾತಗಳನ್ನು ತಡೆಯುವುದು ಹೇಗೆ ಎಂದು ನೀವು ತಿಳಿದಿರಬೇಕು. https://ainlivenews.com/nut-theft-police-arrested-five-people/ ಗೀಸರ್ ಮನೆಯಲ್ಲಿ ಬಳಸುವ ಸಾಮಾನ್ಯ ಗೃಹೋಪಯೋಗಿ ಉಪಕರಣವಾಗಿದೆ. ಇದು ಸ್ನಾನ ಮಾಡುವುದಕ್ಕೆ, ಸ್ವಚ್ಛಗೊಳಿಸುವುದಕ್ಕೆ ಮತ್ತು ವಸ್ತುಗಳನ್ನು ತೊಳೆಯುವುದಕ್ಕೆ ಹೀಗೆ ಮುಂತಾದ ಕೆಲಸಗಳಿಗಾಗಿ ಬಿಸಿನೀರನ್ನು ನೀಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡುವ ಅಭ್ಯಾಸ ಇರುವವರಿಗೆ ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದು ತುಂಬಾ ಕಷ್ಟದ ಕೆಲಸ. ಅದಕ್ಕಾಗಿಯೇ ಜನರು ನೀರನ್ನು ಬಿಸಿ ಮಾಡಲು ಗೀಸರ್ ಅನ್ನು ಬಳಸುತ್ತಾರೆ. ಆದರೆ ಗೀಸರ್ ಬಳಸುವಾಗ ನೀವು ತುಂಬಾ…
ಶಿವಮೊಗ್ಗ:- ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಅಡಿಕೆ ಕಳ್ಳತನ ಮಾಡಿದ್ದ ಐವರು ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ. https://ainlivenews.com/if-the-ration-card-is-cancelled-lets-arrange-for-re-application-muniyappa/ 26 ವರ್ಷದ ಆರ್.ಅನಿಲ್ ಅಲಿಯಾಸ್ ಜಾಕ್, 27 ವರ್ಷದ ಲೋಕೇಶ್ ಅಲಿಯಾಸ್ ವಿಜಯ್, 20 ವರ್ಷದ ಮನೋಜ್ ಅಲಿಯಾಸ್ ಮುರಗೋಡು, 23 ವರ್ಷದ ಪಿ.ನವೀನ್ ಅಲಿಯಾಸ್ ನುಗ್ಗೆ ಹಾಗೂ 20 ವರ್ಷದ ಎಸ್.ಚಂದು ಅಲಿಯಾಸ್ ಸುಣ್ಣ ಎಂದು ಗುರುತಿಸಲಾಗಿದೆ. ಆರೋಪಿಗಳು ಹಾಡೋನಹಳ್ಳಿ ಗ್ರಾಮದ ಗೋಡೌನಲ್ಲಿ ಸಂಗ್ರಹಿಸಿದ್ದ ಒಣ ಅಡಿಕೆಯನ್ನು ಕಳ್ಳತನ ಮಾಡಿದ್ದರು. ಅಲ್ಲದೇ ಪ್ರತ್ಯೇಕ ಮೂರು ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು 7.35 ಲಕ್ಷ ರೂ. ಮೌಲ್ಯದ ಒಣ ಅಡಿಕೆಯನ್ನು ಕಳ್ಳತನ ಮಾಡಿದ್ದರು. ಬಂಧಿತರಿಂದ 7.35 ಲಕ್ಷ ರೂ. ಮೌಲ್ಯದ ಅಡಿಕೆ ಸೇರಿದಂತೆ 10.25 ಲಕ್ಷ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಲಾಗಿದೆ. ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಬೆಂಗಳೂರು :- ರೇಷನ್ ಕಾರ್ಡ್ ರದ್ದಾಗಿದ್ರೆ ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡೋಣ ಎಂದು ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ. https://ainlivenews.com/govt-should-check-ration-card-ineligible-get-bpl-card-actor-chetan/ ಈ ಸಂಬಂಧ ಮಾತನಾಡಿದ ಅವರು, ಅರ್ಹರ ಬಿಪಿಎಲ್, ಎಪಿಎಲ್ ಕಾರ್ಡ್‌ಗಳು ರದ್ದಾಗಿದ್ದರೆ, ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ ಎಂದರು. ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿಂದು ನಡೆದ ಸಭೆಯಲ್ಲಿ ಸಾಕಷ್ಟು ಅಧಿಕಾರಿಗಳು, ಸಚಿವರು ಭಾಗಿಯಾಗಿದರು. ಸಭೆ ಪ್ರಾರಂಭವಾಗುತ್ತಿದ್ದಂತೆ ರೇಷನ್ ಕಾರ್ಡ್ ಗೊಂದಲದ ಬಗ್ಗೆ ಸಿಎಂ ಸಭೆಯಲ್ಲಿ ಚರ್ಚೆ ಶುರು ಮಾಡಿದರು. ಎಪಿಎಲ್-ಬಿಪಿಎಲ್ ಕಾರ್ಡ್‌ಗೆ ಸಂಬಂಧಿಸಿದಂತೆ ಗೊಂದಲ ನಿವಾರಣೆ ಮಾಡುವಂತೆ ಸಚಿವ ಮುನಿಯಪ್ಪಗೆ ಸಿಎಂ ಸೂಚನೆ ನೀಡಿದರು. ಬಿಪಿಎಲ್ ಕಾರ್ಡ್ ರದ್ದಾಗಿದೆ ಅಂತ ವಿಪಕ್ಷಗಳು ವಿವಾದ ಮಾಡ್ತಿವೆ. ಇದಕ್ಕೆ ಅಂಕಿ-ಅಂಶಗಳ ಸಮೇತ ಉತ್ತರ ಕೊಡಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಯಾವುದೂ ರದ್ದಾಗಿಲ್ಲ. ಆದಾಯ ತೆರಿಗೆ ಪಾವತಿ ಮಾಡೋರು ಮತ್ತು ಸರ್ಕಾರಿ ನೌಕರರಿಗೆ ಮಾತ್ರ ಕಡಿತ ಮಾಡಿದ್ದೇವೆ. ಬಿಪಿಎಲ್ ಕಾರ್ಡ್‌ಗೆ ಅರ್ಹತೆ ಇಲ್ಲದೇ…