Author: AIN Author

ಬೆಂಗಳೂರು:- ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ಟ್ಯಾಕ್ಸಿ ಸಿಗದೇ ಪ್ರಯಾಣಿಕರು ಪರದಾಟ ನಡೆಸಿರುವ ಘಟನೆ ಜರುಗಿದೆ. https://ainlivenews.com/former-home-minister-anil-deshmukhs-car-pelted-with-stones/ ಏರ್​ಪೋರ್ಟ್​​ನಿಂದ ನಿತ್ಯ ಸಾವಿರಾರು ಜನ ಕ್ಯಾಬ್​​ಗಳ ಮೂಲಕವೇ ಸಂಚರಿಸುತ್ತಿದ್ದು, ಕಡಿಮೆ ಬೆಲೆಗೆ ಸಿಗುವ ಆ್ಯಪ್ ಆಧಾರಿತ ಕ್ಯಾಬ್​​ಳಿಗೆ ಹೆಚ್ಚಿನ ಬೇಡಿಕೆ ಇದೆ. ಜೊತೆಗೆ ಮೊದಲೆಲ್ಲ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಕ್ಯಾಬ್​ಗಳು ಏರ್ಪೋರ್ಟ್​ಗೆ ಬರುತ್ತಿದ್ದವು. ಆದರೆ, ಕಳೆದ ಒಂದು ತಿಂಗಳಿಂದ ಮಾತ್ರ ಕ್ಯಾಬ್​​ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಹೀಗಾಗಿ ನಿತ್ಯ ದೇಶ-ವಿದೇಶಗಳಿಂದ ಬರುವ ಸಾವಿರಾರು ಜನ ಪ್ರಯಾಣಿಕರು ಎರ್​ಪೋರ್ಟ್​ನಿಂದ ಸಿಲಿಕಾನ್ ಸಿಟಿಗೆ ತೆರಳಲು ಪರದಾಡುವಂತಾಗಿದೆ. ಭಾನುವಾರ ಮತ್ತು ಸೋಮವಾರ ಇತರೆ ರಾಜ್ಯಗಳಿಗೆ ತೆರಳಿದ್ದ ಪ್ರಯಾಣಿಕರು ರಾತ್ರಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಕ್ಯಾಬ್​​ಗಳಿಲ್ಲದೆ ಗಂಟ್ಟೆಗಟ್ಟಲೆ ಸರದಿಯಲ್ಲಿ ನಿಂತು ಪರದಾಡಿದರು. ಟ್ಯಾಕ್ಸಿ ಬುಕ್ ಮಾಡೋಣ ಅಂದರೆ, ಬುಕ್ಕಿಂಗ್ ಸಹ ಆಗುತ್ತಿರಲಿಲ್ಲ. ಟ್ಯಾಕ್ಸಿ ನಂಬಿಕೊಂಡು ಬಂದಾಗ ಈ ರೀತಿಯಾದರೆ ಏನು ಮಾಡುವುದು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಟ್ಯಾಕ್ಸಿಗಳ…

Read More

ಮಹಾರಾಷ್ಟ್ರ:-ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. https://ainlivenews.com/rain-news-chance-of-heavy-rain-today-in-these-districts-of-karnataka/ ಕಟೋಲ್‌ನಲ್ಲಿ ಶರದ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. ಅನಿಲ್ ದೇಶಮುಖ್ ಗಾಯಗೊಂಡಿದ್ದಾರೆ. ದೇಶಮುಖ್ ಅವರ ತಲೆಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಘಟನೆ ನಡೆದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಳಿ ನಡೆಸಿದವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಸೋಮವಾರ ಮಹಾರಾಷ್ಟ್ರ ಚುನಾವಣಾ ಪ್ರಚಾರದ ಕೊನೆಯ ದಿನವಾಗಿತ್ತು. ಸಂಜೆ ಐದು ಗಂಟೆಗೆ ಪ್ರಚಾರ ಕೊನೆಗೊಂಡಿತು. ದೇಶ್‌ಮುಖ್ ಅವರು ಕಟೋಲ್‌ನಿಂದ ನಾಗ್ಪುರ ನಗರಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಅವರ ಬೆಂಗಾವಲು ವಾಹನದ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ. ಮಾಜಿ ಗೃಹ ಸಚಿವರು ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಅವರ ಕಾರಿನ ಕಿಟಕಿ ತೆರೆದಿತ್ತು ಎಂದು ಹೇಳಲಾಗುತ್ತಿದೆ. ದೇಶಮುಖ್ ಅವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎನ್​ಸಿಪಿ ಎಕ್ಸ್​ ಖಾತೆಯಲ್ಲಿ ವಿಡಿಯೋವನ್ನು…

Read More

ಬೆಂಗಳೂರು:- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainlivenews.com/follow-these-simple-tricks-to-prevent-coriander-leaves-from-spoiling-quickly/ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ. ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಒಣಹವೆ ಮುಂದುವರೆಯಲಿದೆ. ಉಪ್ಪಿನಂಗಡಿ, ಹಾರಂಗಿ, ಪಣಂಬೂರಿನಲ್ಲಿ ಮಳೆಯಾಗಿದೆ, ಬೆಂಗಳೂರಿನ ಎಚ್​ಎಎಲ್​ನಲ್ಲಿ 27.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 27.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ

Read More

ಕೊತ್ತಂಬರಿ ಸೊಪ್ಪನ್ನು ಆಹಾರಕ್ಕೆ ಸೇರಿಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ನಾವು ಕೊತ್ತಂಬರಿ ಸೊಪ್ಪನ್ನು ಆಹಾರವನ್ನು ಕೊನೆಗೆ ಅಲಂಕರಿಸಲು ಬಳಸುತ್ತೇವೆ. ಕೊತ್ತಂಬರಿ ಸೊಪ್ಪು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾಗಿ ದಿನನಿತ್ಯದ ಆಹಾರದಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸುವುದು ಒಳ್ಳೆಯದು. https://ainlivenews.com/udupi-naxal-leader-vikram-gowda-was-killed-in-an-encounter/ ಮನೆಗೆ ತಂದ ಕೊತ್ತಂಬರಿ ಸೊಪ್ಪು ಬಹಳ ದಿನಗಳವರೆಗೆ ತಾಜಾವಾಗಿ, ಕೊಳೆಯದಂತೆ ಇರಬೇಕು ಅಂದ್ರೆ ನೀವು ಈ ಕೆಲವು ಸಿಂಪಲ್ ಟಿಪ್ಸ್‌ಗಳನ್ನು ಪಾಲಿಸಬೇಕು. ಇಲ್ಲಿ ಫ್ರಿಜ್‌ನಲ್ಲಿ ಇಟ್ಟಾಗ ಬಾಡದಂತೆ ಕೊಳೆಯದಂತೆ ನೋಡಿಕೊಳ್ಳುವುದು ಹೇಗೆ, ಫ್ರಿಜ್‌ ಇಲ್ಲದಾಗ ಕೆಡದಂತೆ ನೋಡಿಕೊಳ್ಳುವುದು ಹೇಗೆ ಎಂಬ ವಿವರ ಇದೆ. ಫ್ರಿಜ್‌ನಲ್ಲಿ ಇಡುವಾಗ ಕೊತ್ತಂಬರಿ ಸೊಪ್ಪನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದು ಸಾಮಾನ್ಯಕ್ಕಿಂತ ಹೆಚ್ಚು ಕಾಲ ತಾಜಾವಾಗಿರುತ್ತದೆ. ಆದರೆ ಫ್ರಿಜ್‌ನಲ್ಲಿ ಇಡಲು ಒಂದಿಷ್ಟು ಟಿಪ್ಸ್ ಪಾಲಿಸಿದರೆ ಕೊತ್ತಂಬರಿ ಸೊಪ್ಪು ಹೆಚ್ಚು ಕಾಲ ಫ್ರೆಶ್ ಆಗಿರುತ್ತದೆ. ತೊಳೆದು, ಒರೆಸಿ: ಕೊತ್ತಂಬರಿ ಸೊಪ್ಪನ್ನು ತಂದಿರುವಂತೆ ಫ್ರಿಜ್‌ನಲ್ಲಿಡಬೇಡಿ. ಮೊದಲು ಚೆನ್ನಾಗಿ ನೀರಿನಿಂದ ತೊಳೆಯಿರಿ. ನಂತರ ಬಟ್ಟೆಯಿಂದ ಚೆನ್ನಾಗಿ ಒರೆಸಿ, ನೀರಲ್ಲದಂತೆ…

Read More

ಉಡುಪಿ:- ನಕ್ಸಲ್ ನಿಗ್ರಹ ಪಡೆ ಎನ್​ಕೌಂಟರ್​ಗೆ ನಕ್ಸಲ್ ನಾಯಕ‌ ವಿಕ್ರಂ ಗೌಡ ಬಲಿ ಆಗಿದ್ದಾರೆ. https://ainlivenews.com/big-shock-for-bpl-beneficiaries-over-60000-cards-suddenly-shift-to-apl/ ಜಿಲ್ಲೆಯಲ್ಲಿ ಗುಂಡಿನ ಮೊರೆತ ಕೇಳಿದೆ. ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್​ಕೌಂಟರ್​ನಲ್ಲಿ ನಕ್ಸಲ್ ನಾಯಕ‌ ವಿಕ್ರಂ ಗೌಡ ಹತನಾಗಿದ್ದಾನೆ. ನಕ್ಸಲ್ ನಾಯಕ ವಿಕ್ರಂ ಗೌಡ ಕಬ್ಬಿನಾಲೆ ಮೂಲದವನಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ಹೀಗಾಗಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಆರಂಭಿಸಿತ್ತು. ಕಬ್ಬಿನಾಲೆ ಅರಣ್ಯದಲ್ಲಿ ನಡೆದ ಎನ್​ಕೌಂಟರ್​ನೊಂದಿಗೆ ಉಡುಪಿ ಭಾಗದಲ್ಲಿ 13 ವರ್ಷಗಳ ನಂತರ ಗುಂಡಿನ ಮೊರತೆ ಕೇಳಿದಂತಾಗಿದೆ. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಅಷ್ಟರಲ್ಲಿ ನಕ್ಸಲರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್​ಕೌಂಟರ್​​ನಲ್ಲಿ ವಿಕ್ರಂ ಗೌಡ ಹತನಾದರೆ, ಉಳಿದ ನಕ್ಸಲರು ಪರಾರಿಯಾಗಿದ್ದಾರೆ. ನಕ್ಸಲರ ನೇತ್ರಾವತಿ…

Read More

ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಹೊರಬರಲಾರದೆ ಖಿನ್ನತೆಗೆ ಒಳಗಾಗುತ್ತಾರೆ, ಖಿನ್ನತೆ ಎಂಬುದು ನಿಮ್ಮ ಮನಸ್ಸನ್ನು ಹಲವು ರೀತಿಯಲ್ಲಿ ಬದಲಾಯಿಸುತ್ತದೆ, ವಾಸ್ತವಕ್ಕೆ ದೂರವಿರುವಂತಹ ವಿಚಾರಗಳನ್ನೇ ಸತ್ಯ ಎಂದು ನಂಬಿರುತ್ತಾರೆ. ಖಿನ್ನತೆಗೆ ಒಳಗಾದ ಮನಸ್ಸು ನಿರಂತರವಾಗಿ ನಿರಾಶಾವಾದಿ ಮೋಡ್‌ನಲ್ಲಿದೆ ಮತ್ತು ಪುನರಾವರ್ತಿತ ನಕಾರಾತ್ಮಕ ಆಲೋಚನೆಗಳನ್ನು ಹೊರಹಾಕುತ್ತದೆ ಮತ್ತು ನಿಮ್ಮ ಅಸ್ತಿತ್ವವನ್ನು ಪ್ರಶ್ನಿಸುವಂತೆ ಮಾಡುತ್ತದೆ, ದೈನಂದಿನ ಕೆಲಸಗಳನ್ನು ಮಾಡುವ ಶಕ್ತಿಯನ್ನು ನೀವು ಕಳೆದುಕೊಳ್ಳಬಹುದು. ಜೀವನದ ಸಾಮಾನ್ಯ ಆದರೆ ಸುಂದರವಾದ ಸಂಗತಿಗಳಿಂದ ಸಂತೋಷವನ್ನು ಅನುಭವಿಸದಂತೆ ಮಾಡುತ್ತದೆ. ಆತ್ಮಹತ್ಯಾ ಅಥವಾ ಸ್ವಯಂ-ಹಾನಿಕಾರಕ ಆಲೋಚನೆಗಳು ಖಿನ್ನತೆಯಲ್ಲಿ ಅತಿರೇಕವಾಗಿದ್ದು, ವ್ಯಕ್ತಿಯು ತನ್ನ ಬಗ್ಗೆ ಆಲೋಚನೆ ಂಆಡುವುದಾಗಲಿ ಭವಿಷ್ಯದ ಕನಸನ್ನು ಕಾಣುವುದನ್ನೇ ಮರೆತುಬಿಡುತ್ತಾರೆ. ಮಾನಸಿಕ ಖಿನ್ನತೆಯಿಂದ ಹೊರಬರಲು ಆಹಾರ, ಮನೆಮದ್ದುಗಳೂ ಸಹಾಯ ಮಾಡುತ್ತವೆ. ನೀವು ಮಾನಸಿಕವಾಗಿ ಕುಗ್ಗುತ್ತಿದ್ದರೆ ನಿಮ್ಮ ಆಹಾರ ಶೈಲಿಯನ್ನು ಬದಲಿಸಿಕೊಳ್ಳಿ. ಇದರಿಂದ ದೇಹ ಚೈತನ್ಯಪೂರ್ಣವಾಗಿರುತ್ತದೆ. ಅಲ್ಲದೆ ಮಾನಸಿಕವಾಗಿಯೂ ಖುಷಿಯಾಗಿರುವಂತೆ ಮಾಡುತ್ತದೆ. ಚಿಯಾ ಬೀಜಗಳು ದೈಹಿಕ ಆರೋಗ್ಯದಂತೆಯೇ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೋಷಕಾಂಶಗಳ ಅಗತ್ಯವಿದೆ. ಮಾನಸಿಕ ಆರೋಗ್ಯವನ್ನು ಸುಧಾರಿಸಲು, ನೀವು ಚಿಯಾ ಬೀಜಗಳನ್ನು ಸೇವಿಸಬೇಕು.…

Read More

ಬೆಂಗಳೂರು:-ಕರ್ನಾಟಕದ ಜನರೇ, ಇಲ್ಲಿ ನೋಡಿ. ಈ ಸುದ್ದಿ ನೀವು ಪೂರ್ತಿ ಓದಲೇಬೇಕು. ಬಿಪಿಎಲ್​ ಕಾರ್ಡ್​ ಫಲಾನುಭವಿಗಳೇ ಎಚ್ಚರ! ನೀವು ಬಿಪಿಎಲ್​ಗೆ ಅರ್ಹರೇ ಅಂತ ಈಗಲೇ ಪರಿಶೀಲನೆ ಮಾಡಿಕೊಳ್ಳಿ. ಜಿಎಸ್​ಟಿ, ಐಟಿ ಕಟ್ಟೋ ಯಾರಾದ್ರೂ ಬಿಪಿಎಲ್ ಕಾರ್ಡ್​​ ಬಳಸಿದ್ರೆ ಕಂಟಕ ಎದುರಾಗೋದು ಗ್ಯಾರಂಟಿ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಅನುಕೂಲಕ್ಕಾಗಿ ಇರೋ ಕಾರ್ಡ್ ಬಿಪಿಎಲ್​​. ಇದನ್ನ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರೋ ಕಾರಣ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ. ಬಿಪಿಎಲ್ ಫಲಾನುಭವಿಗಳಿಗೆ ಶಾಕ್ ನೀಡಿದೆ. ಏಕಾಏಕಿ 60 ಸಾವಿರಕ್ಕೂ ಹೆಚ್ಚು ಬಿಪಿಎಲ್ ಪಡಿತರದಾರರನ್ನು ಎಪಿಎಲ್‌ಗೆ ಶಿಫ್ಟ್ ಮಾಡಿದೆ. https://ainlivenews.com/did-you-know-this-oil-lovers-why-is-beer-bottle-green-and-brown/ ಪರಿಷ್ಕರಣೆಯ ವೇಳೆ ಅಧಿಕಾರಿಗಳು ಸರಿಯಾದ ಮಾನದಂಡಗಳನ್ನು ಬಳಸಿಲ್ಲ. ಪರಿಣಾಮ ಅರ್ಹ ಫಲಾನುಭವಿಗಳು ಕೂಡ ಈಗ ಬಿಪಿಎಲ್ ಸೌಲಭ್ಯಗಳಿಂದ ವಂಚಿತರಾಗ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಲ ಪಡೆಯಲು ITR ಫೈಲ್ ಮಾಡಿದ್ದ ಬಡ ಕಾರ್ಮಿಕರ ಬಿಪಿಎಲ್ ಕಾರ್ಡ್‌ಗಳೂ ರದ್ದಾಗಿದ್ದು, ಅವರು ತಿಂಗಳ ಅಕ್ಕಿ ಸಿಗದೇ ಒದ್ದಾಡ್ತಿದ್ದಾರೆ. ಆರೋಗ್ಯ ಸೌಲಭ್ಯ ಸಿಗದೇ ಪರದಾಡ್ತಿದ್ದಾರೆ. ಬಿಪಿಎಲ್ ಕಾರ್ಡ್…

Read More

ದೇಶಾದ್ಯಂತ ಬಿಯರ್ ಮಾರಾಟ ಗಣನೀಯ ಹೆಚ್ಚಳವಾಗಿದೆ. ಬಿಯರ್ ಟೇಸ್ಟ್ ಹೇಗಿದೆ, ಕಿಕ್ ಹೇಗಿದೆ ಅನ್ನೋದನ್ನು ಕೂಲಂಕುಷವಾಗಿ ಗಮನಿಸುತ್ತಾರೆ. ಆದರೆ ಬಿಯರ್ ಕುಡಿಯುವಾಗ ಬಿಯರ್ ಬಾಟಲ್ ಕಡು ಕಂದು ಹಾಗೂ ಗ್ರೀನ್ ಬಣ್ಣದಲ್ಲಿ ಯಾಕಿದೆ ಅನ್ನೋ ಮಾಹಿತಿ ಹಲವರಿಗೆ ಗೊತ್ತಿಲ್ಲ. ಇದರ ಹಿಂದೆ ಮಹತ್ವದ ರಹಸ್ಯವೊಂದು ಅಡಗಿದೆ. https://ainlivenews.com/6-bangla-infiltrators-found-in-chitradurga/ ಚುಮು-ಚುಮು ಚಳಿ ಮಧ್ಯೆ ಬಿಯರ್ ಕುಡಿಯುವುದರಿಂದ ಸಿಗುವ ಮಜವೇ ಬೇರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಂತೂ ಭಾರತದಲ್ಲಿ ಬಿಯರ್ ಕುಡಿಯುವುದು ಜನರಿಗೆ ಟ್ರೆಂಡ್ ಆಗಿದೆ. ವಿಶೇಷವೆಣದರೆ ಬಿಯರ್​ನಲ್ಲಿ ನಾನಾ ವೆರೈಟಿಗಳು ಸಹ ಇದೆ. ಪ್ರಸ್ತುತ ಭಾರತದಲ್ಲಿ 100ಕ್ಕೂ ಹೆಚ್ಚು ಬಗೆಯ ಬಿಯರ್‌ಗಳ ಉತ್ಪಾದನೆ ಆಗುತ್ತಿದೆ ಆದರೆ ಈ ಬಿಯರ್ ಬಾಟಲಿಗಳು ಏಕೆ ಬೇರೆ-ಬೇರೆ ಬಣ್ಣಗಳಲ್ಲಿ ಬರುವುದಿಲ್ಲ ಅಂತ ಎಂದಾದರೂ ನೀವು ಯೋಚಿಸಿದ್ದೀರಾ? ಸಾಮಾನ್ಯವಾಗಿ ಬಿಯರ್ ಬಾಟಲಿಗಳು ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ. ಈ ಬಣ್ಣಗಳು ಸೂರ್ಯನ ಬೆಳಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬಿಯರ್ ಬಾಟಲಿಗಳ ಲುಕ್ ಚೆನ್ನಾಗಿ ಕಾಣಲು ಮಾತ್ರವಲ್ಲ, ಈ ಬಣ್ಣಗಳು…

Read More

ಚಿತ್ರದುರ್ಗ:- ಚಿತ್ರದುರ್ಗದಲ್ಲಿ 6 ಮಂದಿ ಬಾಂಗ್ಲಾ ನುಸುಳುಕೋರರನ್ನು ಪತ್ತೆ ಹಚ್ಚಲಾಗಿದೆ. https://ainlivenews.com/the-appointment-of-the-head-of-the-sit-is-on-the-shoulders-of-the-home-minister/ ನಗರದಲ್ಲಿ ಖಾಸಗಿ ಗಾರ್ಮೆಂಟ್ಸ್‌ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ 6 ಮಂದಿ ಬಾಂಗ್ಲಾ ನುಸುಳುಕೋರರು ಪತ್ತೆಯಾಗಿದ್ದು, ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾಸಗಿ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದು, ವಶಕ್ಕೆ ಪಡೆದವರನ್ನು ಪೊಲೀಸರು ಚಿತ್ರದುರ್ಗದ ಕೋಟೆ, ಗ್ರಾಮಾಂತರ ಠಾಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಂಜಿತ್ ಬಂಡಾರು ನೇತೃತ್ವದಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಬಹುತೇಕರ ಬಳಿ ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್​ಗಳು ಪತ್ತೆಯಾಗಿವೆ. ಡಿವೈಎಸ್​ಪಿ ದಿನಕರ್ ನೇತೃತ್ವದಲ್ಲಿ ಸಿಪಿಐ ಗುಡ್ಡಪ್ಪ ಮತ್ತು ವೆಂಕಟೇಶ್​ ಅವರು ಇಂದು ನಗರದಲ್ಲಿ ಗಾರ್ಮೆಂಟ್ಸ್​​​ಗಳ ಮೇಲೆ ದಾಳಿ ಮಾಡಿದರು. ಈ ವೇಳೆ ವಿದೇಶಿ ಪ್ರಜೆಗಳನ್ನು ಅರೆಸ್ಟ್ ಮಾಡಿದ್ದಾರೆ.

Read More

ಬೆಂಗಳೂರು:- ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಮುಖ್ಯಸ್ಥರ ನೇಮಕ ಅಧಿಕಾರ ಸಚಿವ ಪರಮೇಶ್ವರ್ ಹೆಗಲಿಗೆ ಕೊಡಲಾಗಿದೆ. https://ainlivenews.com/city-people-heading-towards-bangalore-after-the-weekend-full-traffic-jam/ ಹಿರಿಯ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸಿದ್ದಾರೆ. ಸಭೆಯಲ್ಲಿ ರೇಷನ್ ಕಾರ್ಡ್ ಗೊಂದಲ ನಿವಾರಣೆ ಮಾಡುವಂತೆ ಸಚಿವ ಮುನಿಯಪ್ಪಗೆ ಸಿಎಂ ಸೂಚನೆ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ವಿಪಕ್ಷಗಳು ವಿವಾದ ಮಾಡುತ್ತಿವೆ. ಇದಕ್ಕೆ ಅಂಕಿಅಂಶಗಳ ಸಮೇತ ಉತ್ತರ ಕೊಡಬೇಕು ಎಂದು ಸಿಎಂ ಸೂಚಿಸಿದ್ದಾರೆ. ಕೋವಿಡ್ ಅಕ್ರಮ ಎಸ್‍ಐಟಿ ರಚನೆ ಬಗ್ಗೆ ಯಾರ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು ಎಂಬುದು ಸಭೆಯಲ್ಲಿ ಚರ್ಚೆಯಾಗಿದೆ. ಎಸ್‍ಐಟಿ ಮುಖ್ಯಸ್ಥರ ನೇಮಕವನ್ನ ಪರಮೇಶ್ವರ್‌ಗೆ ಬಿಡಲಾಗಿದೆ. ಕೋವಿಡ್ ಹಗರಣವನ್ನು ದೊಡ್ಡದಾಗಿ ಬಿಂಬಿಸಬೇಕು. ಯಾವುದೇ ಕಾರಣಕ್ಕೂ ಇದನ್ನ ಕೈ ಬಿಡೋದು ಬೇಡ. ಬಿಜೆಪಿ ವಿರುದ್ಧ ಕೋವಿಡ್ ಹಗರಣದ ವಿರುದ್ಧ ಮತ್ತಷ್ಟು ತೀವ್ರವಾಗಿ ಮಾತನಾಡಲು ಸಿಎಂ ಸಭೆಯಲ್ಲಿ ಸಚಿವರಿಗೆ ಸೂಚನೆ ನೀಡಿದ್ದಾರೆ.

Read More