Author: AIN Author

ಮಂಡ್ಯ:- ಲೋಕಸಭಾ ಸಾರ್ವತ್ರಿಕ ಚುನಾವಣೆ- 2024 ರ ಚುನಾವಣಾ ವೇಳಪಟ್ಟಿ ಪ್ರಕಟವಾದ ತಕ್ಷಣ ಚೆಕ್ ಪೋಸ್ಟ್ ಗಳ ಕಾರ್ಯನಿರ್ವಹಣೆ ಪ್ರಾರಂಭವಾಗಬೇಕಿದ್ದು, ಚೆಕ್ ಪೋಸ್ಟ್ ನಿರ್ಮಾಣ ಕೆಲಸ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು. ಅವರು ಇಂದು ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪೂರ್ವಸಿದ್ಧತಾ ಸಭೆ ನಡೆಸಿ ಮಾತನಾಡಿದರು‌. ಮದ್ದೂರು-4, ಮಳವಳ್ಳಿ-5, ಶ್ರೀರಂಗಪಟ್ಟಣ- 5, ನಾಗಮಂಗಲ -4 ಹಾಗೂ ಕೆ.ಆರ್.ಪೇಟೆ‌- 3 ಒಟ್ಟು 21 ಚೆಕ್ ಪೋಸ್ಟ್ ನಿರ್ಮಿಸಲು ಯೋಜಿಸಲಾಗಿದೆ ಎಂದರು. ಚೆಕ್ ಪೋಸ್ಟ್ ಗಳು ವಾಹನ ಸಂಚಾರಕ್ಕೆ ಅಡೆ ತಡೆ ಉಂಟುಮಾಡದಂತೆ ನಿರ್ಮಾಣವಾಗಬೇಕು. ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಬಿಸಿಲು ಹೆಚ್ಚಿರುವುದರಿಂದ ಉತ್ತಮ ಫ್ಯಾನ್ ವ್ಯವಸ್ಥೆ ಮಾಡಿ ಎಂದರು. ಚೆಕ್ ಪೋಸ್ಟ್‌ ಟೆಂಟ್ ಗಳ ಮೇಲೆ ಚೆಕ್ ಪೋಸ್ಟ್ ಹೆಸರು, ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮೊಬೈಲ್ ಸಂಖ್ಯೆ, ಆದಾಯ ತೆರಿಗೆ ಹಾಗೂ ವಾಣಿಜ್ಯ ತೆರಿಗೆ ನೋಡಲ್ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಎಂದರು. ಚೆಕ್ ಪೋಸ್ಟ್ ನಿರ್ಮಾಣ ಸಂದರ್ಭದಲ್ಲಿ…

Read More

ದಾವಣಗೆರೆ :- ಲೋಕಸಭಾ ಟಿಕೆಟ್ ಮಿಸ್ ಆಗಿರುವ ಹಿನ್ನೆಲೆ ರೇಣುಕಾಚಾರ್ಯ ಬೇಸರ ಹೊರ ಹಾಕಿದ್ದು, ಯಡಿಯೂರಪ್ಪ ಜೊತೆಗಿನ ಮುನಿಸಿನ ಬಗ್ಗೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ತನ್ನ ಮತ್ತು ಸಿದ್ದೇಶ್ವರ ಪರ ನಡೆದ ಎರಡು ಸರ್ವೇಗಳನ್ನು ವರಿಷ್ಠರು ನೋಡಿದ್ದಾರೆ, ರೇಣುಕಾಚಾರ್ಯನೇ ಪರ್ಯಾಯ ಅಭ್ಯರ್ಥಿ ಎಂದು ಖುದ್ದು ಸಿದ್ದೇಶ್ವರ್ ಹೇಳಿದ್ದಾರೆ, ನಂತರ ರಾಷ್ಟ್ರೀಯ ನಾಯಕರಿಗೆ ತಪ್ಪು ಮಾಹಿತಿ ನೀಡಿ ತನ್ನ ಪತ್ನಿಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು. ಆರ್ಥಿಕವಾಗಿ ಸದೃಢರಾಗಿರುವ ಕಾರಣ ಅವರ ದರ್ಬಾರು ನಡೆಯಬೇಕೇ? ಪತ್ರಿಕಾ ಗೋಷ್ಟಿಯನ್ನು ನಡೆಸಿ ಪಕ್ಷದ ಕಾರ್ಯಕರ್ತನನ್ನು ಮಂಗ್ಯಾ ಅನ್ನುತ್ತಾರೆ ಮತ್ತು ತನ್ನನ್ನು ಹಲ್ಕಟ್ ಅಂತಾರೆ, ಇಂಥ ಗೂಂಡಾಗಿರಿಯೆಲ್ಲ ತಮ್ಮ ಮೇಲೆ ನಡೆಯಲ್ಲ, ತಮಗೂ ಅದು ಮಾಡೋದು ಗೊತ್ತು ಎಂದು ಹೇಳಿದ ರೇಣುಕಾಚಾರ್ಯ ಚಿಕ್ಕಂದಿನಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದೇವೆ ಮತ್ತು ಬೆವರು ಹರಿಸಿದ್ದೇವೆ ಎಂದು ಹೇಳಿದರು. ಯಡಿಯೂರಪ್ಪನವರ ಜೊತೆ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳಿದ್ದಿದ್ದು ನಿಜ, ಅದನ್ನು ಬಗೆ ಹರಿಸಿಕೊಂಡಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದರು.

Read More

ಬಳ್ಳಾರಿ:- ನನ್ನ ಬಗ್ಗೆ ಯಾರೆ ಮಾತಾಡಿದರೂ ಕಾಮೆಂಟ್ ಮಾಡಲ್ಲ ಎಂದು ಸಚಿವ ಬಿ ಶ್ರೀ ರಾಮುಲು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಮಾಡುವುದಕ್ಕೋಸ್ಕರ ಎಂದ ಶ್ರೀರಾಮುಲು, ಯಾರೇನೇ ಟೀಕೆ ಮಾಡಿದರೂ, ತನ್ನ ವಿರುದ್ಧ ಯಾರೆಷ್ಟೇ ದ್ವೇಷ ಕಾರಿದಾಗ್ಯೂ ಈ ಚುನಾವಣೆಯಲ್ಲಿ ಗೆದ್ದರೆ ಅದೇ ಅವರಿಗೆ ತಕ್ಕ ಉತ್ತರ ಕೊಟ್ಟಂತೆ ಎಂದು ಹೇಳಿದರು. ವಿರೋಧಿಗಳು ಮಾತ್ರ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಾರೆ, ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ್ಯಾರೂ ಮಾಡಲಾರರು. ಆದರೆ ಜನ ಅಥವಾ ಮತದಾರರು ತಮ್ಮ ಪರವಾಗಿ ನಿಂತಾಗ ಅದರ ಮುಂದೆ ಷಡ್ಯಂತ್ರ, ಕುತಂತ್ರಗಳೆಲ್ಲ ಕೊಚ್ಚಿಕೊಂಡು ಹೋಗುತ್ತವೆ ಎಂದು ಶ್ರೀರಾಮುಲು ಹೇಳಿದರು.

Read More

ಬೆಂಗಳೂರು:- ಶೋಭಾಗೆ ಟಿಕೆಟ್ ಕೊಡ್ಸಿದ್ದಕ್ಕೆ ಬಿಎಸ್​​ವೈ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇಡೀ ರಾಜ್ಯದಲ್ಲಿ ಚಿಕ್ಕಮಗಳೂರಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಆದಷ್ಟು ಗೋ ಬ್ಯಾಕ್ ಬೇರೆ ಎಲ್ಲಿಯೂ ಆಗಿಲ್ಲ.ಅಂತಹ ಶೋಭಾಗೆ ಚಿಕ್ಕಮಗಳೂರಿನಿಂದ ಕರೆದುಕೊಂಡು ಬಂದು ಸದಾನಂದ ಗೌಡಗೆ ಟಿಕೆಟ್ ತಪ್ಪಿಸಿದ್ದಾರೆ. ಶೋಭಾನ ಯಾಕೆ ಕರೆದುಕೊಂಡು ಬಂದು ಹಾಕಿದ್ರು? ಎಂದು ಪ್ರಶ್ನಿಸಿದರು. ಜನರಿಗೆ ಬೇಡವಾದವರು, ತನಗೆ ಬೇಕಾದವರನ್ನು ಹಾಕಿಕೊಳ್ಳೋಕೆ ಶಕ್ತಿ ಇದೆ. ನಾನು 40 ವರ್ಷಗಳ ಕಾಲ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ನಾನು ಎಂದೆಂದಿಗೂ ಸಂಘಟನೆ ವಿರುದ್ಧ ಕೆಲಸ ಮಾಡಿಲ್ಲ. ರಾಯಣ್ಣ ಬ್ರಿಗೇಡ್ ಮಾಡಿ ಲಕ್ಷಾಂತರ ಜನರ ಸಂಘಟನೆ ಮಾಡುವ ಕೆಲಸ ಆಗಿತ್ತು. ಅದಕ್ಕೆ ಇವರಿಗೆ ಯಾಕೆ ಕಣ್ಣು ಉರಿ ಆಯ್ತೋ ಗೊತ್ತಿಲ್ಲ.ಯಡಿಯೂರಪ್ಪನವರು ಅಮಿತ್ ಶಾ ಬಳಿ ಹೋಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸೋಕೆ ಹೇಳಿ ಎಂದು ಒತ್ತಾಯ ಮಾಡಿದ್ದರು. ಆ ನಂತರ ನಾನು ದೊಡ್ಡವರ ಮಾತು ಕೇಳಿ ಸುಮ್ಮನೆ ಆದೆ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಅದು…

Read More

ಕಿಡ್ನಿ ಕಾಯಿಲೆ ಸಾಮಾಜಿಕ ಆರ್ಥಿಕ ವರ್ಗಗಳ ಜನರ ಮೇಲೆ ಪರಿಣಾಮ ಬೀರುತ್ತದೆ, ಆದರೆ ಆರ್ಥಿಕವಾಗಿ ಹಿಂದುಳಿದಿರುವ ಕೆಳ ಮಟ್ಟದ ಮತ್ತು ಮಧ್ಯಮ-ಆದಾಯದ ದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ದೀರ್ಘ ಸಮಯದ ಕಿಡ್ನಿ ಸಮಸ್ಯೆಗೆ ಕಾರಣವೇನು? ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಮತ್ತು ಇತರ ಕಾರ್ಡಿಯೋ ವಾಸ್ಕ್ಯುಲರ್ ಕಾಯಿಲೆ (CVD) ಗಳಂತಹ ಅಪಾಯಕಾರಿ ಅಂಶಗಳ ಹೆಚ್ಚಾಗುತ್ತಿರುವ ಸಂಖ್ಯೆಯು CKD ಯ ಜಾಗತಿಕ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ಗುರುತಿಸಲಾಗಿದೆ. ಇದಲ್ಲದೆ, CKD ರೋಗಿಗಳಲ್ಲಿ ಕೋ-ಮಾರ್ಬಿಡ್ ಆಗಿರುವ ಅಧಿಕ ರಕ್ತದೊತ್ತಡ ಅಥವಾ ಮಧುಮೇಹವು ಮುನ್ನರಿವನ್ನು ಇನ್ನಷ್ಟು ಹದಗೆಡಿಸಬಹುದು ಮತ್ತು ಹೆಚ್ಚಿನ ಪ್ರಮಾಣದ ಮರಣ ಮತ್ತು ಹೃದಯರಕ್ತನಾಳದ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಆದರೆ ಭಾರತದ ಕೆಲವು ಪ್ರದೇಶಗಳಲ್ಲಿ, ಪರಿಸರದಲ್ಲಿರುವ ವಿಷಕಾರಿ ಅಂಶಗಳು (ಭಾರೀ ಲೋಹಗಳು, ಕೀಟನಾಶಕಗಳು) ಮತ್ತು ಹೆಚ್ಚಿನ ಫ್ಲೋರೈಡ್ ಮಟ್ಟವನ್ನು ಹೊಂದಿರುವ ಅಂತರ್ಜಲ (ನೆಲದಡಿಯ ನೀರು) ಸೇರಿದಂತೆ ಇತರ ಕಾರಣಗಳು CKD ಯ ಹೆಚ್ಚಳಕ್ಕೆ ಕಾರಣವಾಗಿವೆ. CKDಯಿಂದ ಜನ ಸಾವನ್ನಪ್ಪಲು ಕಾರಣವೇನು? ಭಾರತದಲ್ಲಿ ಮೂತ್ರಪಿಂಡದ ಬದಲಿ…

Read More

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಅಭ್ಯರ್ಥಿಯಾಗಿರುವ ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆ ಕೀಳಾಗಿ ಟೀಕೆ ಮಾಡಿರುವ ಸಂಸದ ಡಿ.ಕೆ.ಸುರೇಶ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತ್ಯತೀತ ಜನತಾದಳ ಪಕ್ಷದ ರಾಜ್ಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಅವರು. ಡಾ.ಮಂಜುನಾಥ್ ಅವರ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಆದರೆ, ಈ ವ್ಯಕ್ತಿ ನಾಲಿಗೆ ಜಾರಿಬಿಟ್ಟಿದ್ದಾರೆ. ಈ ವ್ಯಕ್ತಿ ಮಂಜುನಾಥ್ ಅವರ ಉಂಗುಷ್ಟಕ್ಕೂ ಸಮನಲ್ಲ ಎಂದು ಕಿಡಿಕಾರಿದರು. ಅವರು ಚುನಾವಣೆಗಳಲ್ಲಿ ಗೆದ್ದಿರಬಹುದು. ಆದರೆ, ಮಂಜುನಾಥ್ ಅವರ ಸಾಧನೆ ಏನು? ಅದನ್ನು ಮೊದಲು ಅರಿತುಕೊಳ್ಳಲಿ. ಇಂದು ಬೆಳಗ್ಗೆ ಆ ವ್ಯಕ್ತಿ ಮಂಜುನಾಥ್ ಅವರ ಬಗ್ಗೆ ಕೊಟ್ಟಿರುವ ಹೇಳಿಕೆ ನನಗೆ ಬಹಳ ನೋವುಂಟು ಮಾಡಿದೆ. ಬೇಕಾದರೆ ನಮ್ಮ ಬಗ್ಗೆ ಮಾತನಾಡಲಿ, ರಾಜಕೀಯವಾಗಿ ಎದುರಿಸುತ್ತೇವೆ. ಉತ್ತರ ಕೊಡುತ್ತೇವೆ. Lok Sabha Elections: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಟಿಕೆಟ್ ವಂಚಿತರಿಂದ ಅಸಮಾಧಾನ ಸ್ಫೋಟ: ಯಾರೆಲ್ಲಾ ಗೊತ್ತಾ? ಮಂಜುನಾಥ್ ಅವರ…

Read More

ದಾವಣಗೆರೆ: ಎಂ ಪಿ ರೇಣುಕಾಚಾರ್ಯ ಬೆಂಬಲಿಗ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಗಳೂರು ಕ್ಷೇತ್ರದ ಕಾರ್ಯಕರ್ತ ಉಮೇಶ್ ಬಳ್ಳಾರಿ ಮೈ ಮೇಲೆ‌‌ ಡಿಸೆಲ್ ಸುರಿದುಕೊಂಡು ಬೆಂಕಿ ಹಚ್ಚಿ ಕೊಳ್ಳಲು ಯತ್ನಸಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ‌ ಜಿ.ಎಂ.ಸಿದ್ದೇಶ್ವರ ಅವರ, https://youtu.be/bnjCo8Tko_g ಪತ್ನಿ ಗಾಯತ್ರಿ ಹೆಸರು ಪ್ರಕಟಿಸಿರುವುದನ್ನು ಖಂಡಿಸಿ ಶಿರಮಗೊಂಡನ ಹಳ್ಳಿಯಲ್ಲಿರುವ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಅವರ ನಿವಾಸದಲ್ಲಿ ಸಿದ್ದೇಶ್ವರ ವಿರೋಧಿ ಬಣ ಸಭೆ ನಡೆಸಿದೆ. ಸಿದ್ದೇಶ್ ಹಠಾವೋ ದಾವಣಗೆರೆ ಬಚಾವೋ ಘೋಷಣೆ ಕೂಗಿದ ವಿರೋಧಿ ಬಣದ ಕಾರ್ಯಕರ್ತರು, ಗೋ‌ ಬ್ಯಾಕ್ ಸಿದ್ದೇಶ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಪಕ್ಷದ ಹೈ ಕಮಾಂಡ್‌ಗೆ ಆಗ್ರಹ ಮಾಡಿದ್ದಾರೆ.

Read More

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ ಸ್ವಾಮಿ ಗಡ್ಡದೇವರಮಠ ಆನಂದ್ ಸ್ವಾಮಿ ಪತ್ನಿ ದೀಪಾ ಗಡ್ಡದೇವರಮಠ ಮತಬೇಟೆ ಆರಂಬಿಸಿದ್ದಾರೆ.ಹಾವೇರಿ ಮತಕ್ಷೇತ್ರದ ಹುಕ್ಕೇರಿಮಠದ ಲಲಿತ ಸಹಸ್ರನಾಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರಿಗೆ ಉಡಿ ತುಂಬುವ ಮೂಲಕ ಮತಯಾಚನೆ ಮಾಡಿದ ಅವರು.ನಂತರ ಮಾತನಾಡಿ ಆನಂದ ಸ್ವಾಮಿ ಗಡ್ಡದೇವರಮಠಗೆ ಕಾಂಗ್ರೆಸ್ ಟಿಕೆಟ್ ಸಿಗಲಿ ಎಂದು ಪೂಜೆಗಳನ್ನ ಕೈಗೊಳ್ಳಲಾಗಿತ್ತು, ಪೂಜೆಯ ಫಲವಾಗಿ ಅವರಿಗೆ ಟಿಕೆಟ್ ಸಿಕ್ಕಿರಬಹುದು.  ಲಿಂಗಯ್ಯ ಟ್ರಸ್ಟ್ ನಿಂದ ಹಾವೇರಿ ಜಿಲ್ಲೆಯ ವಿವಿದೆಡೆ ಲಲಿತ ಸಹಸ್ರನಾಮ ಪೂಜೆ ಆಯೋಜಿಸಲಾಗಿದೆ.ಆನಂದಸ್ವಾಮಿ ಗಡ್ಡದೇವರಮಠ ಗೆಲುವಿಗೆ ಶ್ರಮಿಸುವುದಾಗಿ ಪತ್ನಿ ದೀಪಾ ಗಡ್ಡದೇವರಮಠ ತಿಳಿಸಿದರು.ಹಾವೇರಿ ಕ್ಷೇತ್ರದ ವಿವಿಧ ತಾಲೂಕುಗಳಿಗೆ ಓಡಾಡಿ ಪತಿಯ ಪರ ಮತಯಾಚನೆ ಮಾಡುವುದಾಗಿ ತಿಳಿಸಿದರು.

Read More

ಕಲಬುರಗಿ: ದೇವರೇ ನನಗೆ ಪಿಯು ರ2nd year ಪಾಸು ಮಾಡಿಸು. ಹೀಗಂತ ಬರೆದಿದ್ದ 20 ರೂಪಾಯಿ ನೋಟು ದೇವರ ಹುಂಡಿಯಲ್ಲಿ ಪತ್ತೆಯಾಗಿದೆ.. ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿರುವ ಪ್ರಸಿದ್ಧ ನಾಗಾವಿ ಯಲ್ಲಮ್ಮ ದೇಗುಲದಲ್ಲಿ ಪತ್ತೆಯಾಗಿದೆ.. ದೇಗುಲದ ಹುಂಡಿ ಎಣಿಕೆ ಕಾರ್ಯ ಮಾಡುವ ವೇಳೆ ನೋಟು ಪತ್ತೆಯಾಗಿದ್ದು ಯಾರೋ ವಿದ್ಯಾರ್ಥಿನಿ ಈ ಪತ್ರ ಬರೆದಿರಬಹುದು ಎನ್ನಲಾಗಿದೆ

Read More

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಜ್ಯಸಭೆಗೆ  ನಾಮನಿರ್ದೇಶನಗೊಂಡಿದ್ದ ಇನ್ಫೋಸಿಸ್  ಮುಖ್ಯಸ್ಥ ನಾರಾಯಣ ಮೂರ್ತಿ ಪತ್ನಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ  ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭೆ ಅಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನಕರ್  ಅವರಿಗೆ ಪ್ರಮಾಣ ವಚನ ಭೋಧಿಸಿದರು. https://ainlivenews.com/shooting-attack-on-the-owner-of-the-gold-shop-the-condition-of-both-is-critical/ ಜಗದೀಪ್ ಧನಕರ್ ಅವರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಧಾಮೂರ್ತಿ ಅವರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಷನ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಕೂಡಾ ಭಾಗಿಯಾಗಿದ್ದು ವಿಶೇಷವಾಗಿತ್ತು. ಕೇಂದ್ರ ಸಚಿವ ಪಿಯೂಷ್ ಗೋಯಲ್, ನಂದನ್ ನೀಲಕೇಣಿ ಈ ವೇಳೆ ಉಪಸ್ಥಿತರಿದ್ದರು.

Read More