Author: AIN Author

ಬೆಂಗಳೂರು:- ಐವರು ಐಎಎಸ್​​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. 5 ಐಎಎಸ್ ಅಧಿಕಾರಿಗಳ ವರ್ಗಾವಣೆ ಡಾ. ಅಜಯ್ ನಾಗಭೂಷಣ್ ಎಂ.ಎನ್: ಕಾರ್ಯದರ್ಶಿ, ಪಶುಸಂಗೋಪನಾ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಹುದ್ದೆ ಹೆಚ್ಚುವರಿ ಹೊಣೆ ತುಳಸ ಮದ್ದಿನೇನಿ: ಕಾರ್ಯದರ್ಶಿ, ಡಿಪಿಎಆರ್ ಅರ್ಚನಾ ಎಂ.ಎಸ್: ಮುಖ್ಯ ಸಂಪಾದಕಿ, ಕರ್ನಾಟಕ ಗೆಜೆಟಿಯರ್ ಇಲಾಖೆ ಪ್ರಿಯಾಂಗ ಎಂ: ಎಂಡಿ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಭರತ್ ಎಸ್: ಸಿಇಒ, ಜಿ.ಪಂ. ಗದಗ ವರ್ಗಾವಣೆ ಮಾಡಲಾಗಿದೆ.

Read More

ಕೊಲ್ಕತ್ತಾ:- ಮಮತಾ ಬ್ಯಾನರ್ಜಿ ಹಣೆಗೆ ಪೆಟ್ಟಾಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹಣೆಗೆ ಗಾಯವಾಗಿ ರಕ್ತಬರುತ್ತಿರುವ ಫೋಟೊವೊಂದನ್ನು ಟಿಎಂಸಿ ಎಕ್ಸ್ ನಲ್ಲಿ ಹಂಚಿಕೊಂಡಿದೆ. ನಮ್ಮ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯಗಳಾಗಿವೆ. ನಿಮ್ಮ ಪ್ರಾರ್ಥನೆ ಇರಲಿ ಎಂದು ಟಿಎಂಸಿ ಟ್ವೀಟ್ ಮಾಡಿದೆ. ಮೂಲಗಳ ಪ್ರಕಾರ, ಅವರು ಮನೆಯಲ್ಲಿ ಬಿದ್ದಿದ್ದಾರೆ. ಕುಟುಂಬಸ್ಥರು, ಪಕ್ಷದ ಮುಖಂಡರು ಆಸ್ಪತ್ರೆಗೆ ಬರುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿ, ಕೋಲ್ಕತ್ತಾ ಮೇಯರ್ ಆಗಮಿಸಿದ್ದಾರೆ. ಮಮತಾ ಬ್ಯಾನರ್ಜಿ ಈ ದಿನ ನಬಣ್ಣಗೆ ಹೋಗಿದ್ದರು. ಅಲ್ಲಿಂದ ಎಕ್ಡಾಲಿಯಾಗೆ ಹೋಗಿ ದಿವಂಗತ ಸುಬ್ರತಾ ಮುಖೋಪಾಧ್ಯಾಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

Read More

IPL ನಲ್ಲಿ ಕಿಂಗ್ ಕೊಹ್ಲಿಗೆ ಈ ಎರಡು ತಂಡಗಳ ಎದುರು ಬ್ಯಾಟ್ ಬೀಸುವುದು ಬಲು ಅಚ್ಚು ಮೆಚ್ಚು ಎಂಬುದು ಈ ಅಂಕಿ ಅಂಶಗಳಿಂದ ಜಗಜ್ಜಾಹೀರಾಗಿದೆ. ಐಪಿಎಲ್‌ನಲ್ಲಿ ರಿಷಬ್ ಪಂತ್ ನಾಯಕತ್ವದ ತಂಡ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ ಅತ್ಯಧಿಕ ರನ್ ಕಲೆಹಾಕಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅವರು ಗಳಿಸಿದ ಒಟ್ಟು ರನ್‌ಗಳಲ್ಲಿ ವಿರಾಟ್ ಕೊಹ್ಲಿ ಈ ಎರಡು ತಂಡಗಳ ವಿರುದ್ಧ ಹೆಚ್ಚು ರನ್ ಬಾರಿಸಿರುವುದು ಗಮನಾರ್ಹ. ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇದುವರೆಗೆ ಆಡಿದ 27 ಇನ್ನಿಂಗ್ಸ್‌ಗಳಲ್ಲಿ ವಿರಾಟ್ 51.5 ಸರಾಸರಿ ಮತ್ತು 133.8 ಸ್ಟ್ರೈಕ್ ರೇಟ್‌ನಲ್ಲಿ 1030 ರನ್ ಗಳಿಸಿದ್ದಾರೆ. ಇದು ಐಪಿಎಲ್ ಪಿಚ್‌ನಲ್ಲಿ ಯಾವುದೇ ಒಂದು ತಂಡದ ವಿರುದ್ಧ ವಿರಾಟ್ ಗಳಿಸಿದ ಗರಿಷ್ಠ ರನ್ ಆಗಿದೆ. ಇದಲ್ಲದೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1000 ಪ್ಲಸ್ ರನ್ ಗಳಿಸಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಎಂಎಸ್ ಧೋನಿ ನೇತೃತ್ವದ ಚೆನ್ನೈ…

Read More

ಕಲಬುರ್ಗಿ:- ಮಾ.18 ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರ BJP ಉಸ್ತುವಾರಿ ರಾಜುಗೌಡ ಅವರು ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜುಗೌಡ, ‘ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಆಯೋಜನೆ ಮಾಡಿದ್ದೆವೆ. ಕಲಬುರಗಿಯಿಂದಲೇ ಪ್ರಧಾನಿ ಮೋದಿ ಚುನಾವಣೆ ಪ್ರಚಾರ ಆರಂಭಿಸುತ್ತಿದ್ದಾರೆ. ತೆಲಂಗಾಣದಿಂದ ನೇರವಾಗಿ ಕಲಬುರಗಿ ಏರ್​ಪೋರ್ಟ್​​ ಆಗಮಿಸಲಿರುವ ಮೋದಿ, ಪೊಲೀಸ್ ಮೈದಾನದಿಂದ 10 ರಿಂದ 12 ನಿಮಿಷ ರೋಡ್​ಶೋ ಮಾಡಲಿದ್ದಾರೆ. ಬಳಿಕ 40 ನಿಮಿಷ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಕಲಬುರಗಿ ಹಾಗೂ ಬೀದರ್ ಕ್ಷೇತ್ರದ ಜನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು. ಇನ್ನು ನಿನ್ನೆ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಅಸಮಧಾನ ಭುಗಿಲೆದ್ದಿದೆ. ಕೆಎಸ್ ಈಶ್ವರಪ್ಪ, ಕರಡಿ ಸಂಗಣ್ಣ, ಜಗದೀಶ್​ ಶೆಟ್ಟರ್, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವಾರು ಬಂಡಾಯದ ಕಹಳೆ ಊದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬೇಟಿ ನೀಡುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಇದರಿಂದ ಬಂಡಾಯದ…

Read More

ಹುಬ್ಬಳ್ಳಿ : 15 ವರ್ಷದ ನಂತರ ಕಾನೂನು ವಿಶ್ವವಿದ್ಯಾಲಯಕ್ಕೆ ಮುಖ್ಯ ಕಟ್ಟಡದ ಭಾಗ್ಯ ದೊರೆತಿದೆ. 2025 ರ ಆಗಸ್ಟ್ ನಲ್ಲಿ ಆಡಳಿತ ಭವನ ಕಟ್ಟಡವನ್ನು ಉದ್ಘಾಟಿಸಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ನ ಪಾಟೀಲ ಹೇಳಿದರು. ಇಂದು ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಟ್ಟಡದ ಶಂಕು ಸ್ಥಾಪನೆ, ಕಾನೂನು ಶಾಲೆಯ ಸಭಾಂಗಣ, ಕಲ್ಪಿತ ನ್ಯಾಯಾಲಯ ಸಭಾಂಗಣ ಹಾಗೂ ಪರೀಕ್ಷಾ ಭವನದ ಎರಡನೇ ಮಹಡಿಯ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನು ವಿಶ್ವವಿದ್ಯಾಲಯದಲ್ಲಿ ಮೊದಲು 180 ವಿದ್ಯಾರ್ಥಿಗಳನ್ನು ಮಾತ್ರ ದಾಖಲಾತಿ ಮಾಡಿಕೊಳ್ಳಲು ಅವಕಾಶವಿತ್ತು. ತದನಂತರದಲ್ಲಿ 300 ವಿದ್ಯಾರ್ಥಿಗಳನ್ನು ಹೆಚ್ಚುವರಿಯಾಗಿ ದಾಖಲಾತಿ ಮಾಡಿಕೊಳ್ಳಲಾಯಿತು. ಆ ಮೂಲಕ 480 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಯಿತು. ತಮ್ಮದೇ ಹಣದಿಂದ ಸ್ವಾವಲಂಬಿಯಾಗಿ ವಿಶ್ವವಿದ್ಯಾಲಯ ಸ್ಥಾಪಿಸಿದ ಕೀರ್ತೀ ಕಾನೂನು ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಕಾನೂನು ವಿಶ್ವವಿದ್ಯಾಲಯದಲ್ಲಿ…

Read More

ಗದಗ: ಆಸ್ತಿ ವಿವಾದದಿಂದ ತಂದೆಯನ್ನೇ ಮಕ್ಕಳು ರಾಡ್ ನಿಂದ ಹೊಡೆದು ಕೊಂದಿರುವ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜರುಗಿದೆ. ವಿವೇಕಾನಂದ ಕರಿಯಲ್ಲಪ್ಪನವರ (52) ಕೊಲೆಯಾದ ವ್ಯಕ್ತಿ. ಮೊದಲನೇ ಹೆಂಡತಿ ಮೃತ ಕಸ್ತೂರೆಮ್ಮ ಪುತ್ರರಿಂದ ಕೊಲೆ ಮಾಡಲಾಗಿದೆ. ಪ್ರಕಾಶ, ಮಲ್ಲೇಶ ತಂದೆ ಕೊಲೆ ಮಾಡಿದ‌ ಮಕ್ಕಳು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ವಿವೇಕಾನಂದನನ್ನ ಆಸ್ಪತ್ರೆಗೆ ಸಾಗಾಟ ಮಾಡುವ ಮಾರ್ಗಮಧ್ಯದಲ್ಲಿ ವಿವೇಕಾನಂದ ಸಾವನ್ನಪ್ಪಿದ್ದಾರೆ. 6 ಎಕರೆ ಜಮೀನಿನಲ್ಲಿ ಮೂರು ಎಕರೆ ಮಾರಾಟ ಮಾಡಿದ್ದ. ಮಾರಾಟ ಮಾಡಿದ 1.30 ಲಕ್ಷ ಹಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಎರಡನೇ ಪತ್ನಿ ರೇಖಾ ಹೇಳಿಕೆ ನೀಡಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಮಂಡ್ಯ:- ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಸಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಕಾರೊಂದು ಹಳ್ಳಕ್ಕೆ ಬಿದ್ದ ಘಟನೆ ಜರುಗಿದೆ. ಕಾರಿನಲ್ಲಿದ್ದ ಐವರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ವೇಗ‌ವಾಗಿ ಬರುತ್ತಿದ್ದರಿಂದ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ. ಇನ್ನು ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಶ್ರೀರಂಗಪಟ್ಟಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More

ಬೆಂಗಳೂರು:- ಯಡಿಯೂರಪ್ಪರಿಂದ ನನಗೆ ಬರೀ ಮೋಸವಾಗಿದೆ, ಇನ್ನು ಅವರನ್ನು ನಂಬಲಾಗಲ್ಲ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ತನ್ನ ಮಗನಿಗೆ ಹಾವೇರಿ ಕ್ಷೇತ್ರದ ಟಿಕೆಟ್ ಕೊಡಿಸುವ ಭರವಸೆ ಯಡಿಯೂರಪ್ಪ ನೀಡಿದ ಬಳಿಕ ಕಾಂತೇಶ್ ಅಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಾ ಜನರ ಅನುರಾಗ ಗಳಿಸಿದ್ದ. ಇನ್ನೇನು ಟಿಕೆಟ್ ಸಿಗುತ್ತದೆ ಅಂದುಕೊಳ್ಳುವಾಗಲೇ ಮೋಸ ಮಾಡಿಬಿಟ್ಟರು. ಕಾಂತೇಶ್ ನನ್ನು ಎಂಎಲ್ ಸಿ ಮಾಡ್ತೀನಿ ಅಂತ ಈಗ ಹೇಳುತ್ತಾ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ತನಗೆ ಕೋರ್ಟ್ ಕ್ಲೀನ್ ಕೊಟ್ಟ ತಕ್ಷಣ ಪುನಃ ಮಂತ್ರಿ ಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ಆಗಲೂ ಮೋಸಮಾಡಿದರು, 40 ವರ್ಷಗಳ ಪಕ್ಷದ ಸಂಘಟನೆ ಮಾಡಿದ ತನ್ನಂಥವನಿಗೆ ಇಷ್ಟು ದೊಡ್ಡ ಮೋಸಗಳನ್ನು ಮಾಡಿದರೆ ಅವರನ್ನು ನಂಬೋದಾದರೂ ಹೇಗೆ ಎಂದು ಈಶ್ವರಪ್ಪ ಕೇಳಿದರು. ತಾನು ರಾಯಣ್ಣ ಬ್ರಿಗೇಡ್ ಮಾಡಿದಾಗಲೂ ಅಮಿತ್ ಶಾ ಅವರಿಗೆ ಹೇಳಿ ಅದಕ್ಕೆ ಅಡ್ಡಗಾಲು ಹಾಕಿ ನಿಲ್ಲಿಸಿಬಿಟ್ಟರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಗೋ…

Read More

ಬೆಂಗಳೂರು:- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕನ್ನಡ ನಾಮಫಲಕ ಹಾಕದವರ ಟ್ರೇಡ್ ಲೈಸೆನ್ಸ್​ ರದ್ದು ಮಾಡುವ ಮೂಲಕ ಕನ್ನಡ ನಾಮಫಲಕ ಹಾಕದವರಿಗೆ ಶಾಕ್ ಕೊಟ್ಟಿದೆ. ಕಾಲಾವಕಾಶ ನೀಡಿದರೂ ಉದ್ದಿಮೆದಾರರು ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಿಗೆ ಪಾಲಿಕೆ ಬಿಸಿ ಮುಟ್ಟಿಸಿದೆ. ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಅಂತ ನೀಡಿದ್ದ 2 ತಿಂಗಳ ಗಡುವು ಮುಗಿದು ಹೋಗಿದೆ. ಶೇ.60ರಷ್ಟು ಕನ್ನಡರಷ್ಟು ಕನ್ನಡವಿರದ ನಾಮಫಲಕಗಳನ್ನ ಹಾಕಿದವರ ವಿರುದ್ಧ ಇತ್ತೀಚೆಗೆ ರಾಜ್ಯಾದ್ಯಂತ ಎಲ್ಲ ನಗರಗಳಲ್ಲೂ ಕ್ರಮಕೈಗೊಳ್ಳಬೇಕಿತ್ತು. ಇದಕ್ಕಾಗಿ ಬೆಂಗಳೂರು ಸೇರಿ ಎಲ್ಲ ನಗರಗಳಲ್ಲೂ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಅಲ್ಲದೇ ಕನ್ನಡ ಪರ ಸಂಘಟನೆಗಳು ಪ್ರತಿಭಟಿಸಲು ಸಿದ್ಧತೆ ನಡೆಸಿದ್ದವು. ಆದರೆ, ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಮತ್ತೆ 2 ವಾರಗಳ ಗಡುವು ನೀಡಿ ಟ್ವೀಟ್‌ ಮಾಡಿದ್ದರು. ಇದೀಗ ಅದರಂತೆ ಕನ್ನಡ ನಾಮಫಲಕ ಹಾಕದವರ ಟ್ರೇಡ್ ಲೈಸೆನ್ಸ್​ ರದ್ದು ಮಾಡುವ ಮೂಲಕ ಕನ್ನಡ ನಾಮಫಲಕ ಹಾಕದವರಿಗೆ ಬಿಬಿಎಂಪಿ ಶಾಕ್​ ನೀಡಿದೆ. ನೋಟಿಸ್ ನೀಡಿರುವ ಬೃಹತ್ ಬೆಂಗಳೂರು…

Read More

ಬೆಂಗಳೂರು:- ಬಿಗ್​ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್​ ಅವರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹೊನ್ನೇನಹಳ್ಳಿ ಬಳಿಕ ತುಕಾಲಿ ಸಂತೋಷ್​ ಕಾರಿಗೆ ಆಟೋ ಡಿಕ್ಕಿಯಾಗಿತ್ತು. ಈ ವೇಳೆ ಆಟೋ ಡ್ರೈವರ್​ ಜಗದೀಶ್​ ಅವರಿಗೆ ಗಂಭೀರ ಗಾಯಗಳಾಗಿದ್ದವು. ಜಗದೀಶ್​ ಅವರನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಇನ್ನೂ ಮೃತ ಜಗದೀಶ್ ಮದ್ಯ ಸೇವಿಸಿ ಆಟೋ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ನಡೆದದ್ದು ಹೇಗೆ? ಕುಣಿಗಲ್ ಹೈವೆಯಲ್ಲಿ ತುಕಾಲಿ ಸಂತೋಷ್ ಕಾರು ಅಪಘಾತ ನಡೆದಿದೆ. ತುಕಾಲಿ ಸಂತೋಷ್ ಕಾರಿಗೆ ಆಟೋ ಚಾಲಕನೇ ಬಂದು ಗುದ್ದಿದ್ದಾನೆ. ತುಮಕೂರಿನಲ್ಲಿ ಶೂಟಿಂಗ್ ಮುಗಿಸಿ ಮಂಡ್ಯಕ್ಕೆ ತೆರಳೋ ವೇಳೆ ಈ ಅಪಘಾತ ನಡೆದಿದೆ. ರಾತ್ರಿ ಏಳು ಗಂಟೆ ವೇಳೆಯಲ್ಲಿ ಅಪಘಾತ ಆಗಿದೆ. ತುಕಾಲಿ ಸಂತೋಷ್ ಹೇಳಿದ್ದೇನು? ಆಟೋ ಡ್ರೈವರ್ ಏಕಾಏಕಿ ಬಂದು ನಮ್ಮ ಕಾರಿಗೆ ಡಿಕ್ಕಿ ಹೊಡೆದರು. ನಾವೇ…

Read More