Author: AIN Author

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಎಂಜಿನಿಯರ್‌ 92, ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್‌ 90 ಸೇರಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್‌ ʼಬಿʼ ವೃಂದದ ಒಟ್ಟು 277 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಏಪ್ರಿಲ್‌ 15 ರಿಂದ ಮೇ 14ರವರೆಗೆ ಅವಕಾಶ ನೀಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯನ್ನು (ಕನ್ನಡ ಭಾಷಾ ಪರೀಕ್ಷೆ ಮತ್ತು ಸಾಮಾನ್ಯ ಜ್ಞಾನ ಪರೀಕ್ಷೆ) ಆಗಸ್ಟ್‌ 11ರಂದು ನಡೆಸಲು ತಾತ್ಕಾಲಿಕವಾಗಿ ದಿನಾಂಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಲೋಕಸಭಾ ಆಯೋಗ ವೆಬ್‌ಸೈಟ್‌ ನೋಡಬಹುದು.

Read More

ಚಿನ್ನ ಮತ್ತು ಬೆಳ್ಳಿ ದರ ತುಸು ದುಬಾರಿ ಆಗಿದೆ. ಈ ವಾರದಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ ಏರಿಕೆ ಕಂಡಿದೆ. ಇವತ್ತು ಚಿನ್ನದ ಬೆಲೆ ಗ್ರಾಮ್​ಗೆ ಬರೋಬ್ಬರಿ 25 ರೂನಷ್ಟು ಹೆಚ್ಚಾಗಿದೆ. ಅಮೆರಿಕದಲ್ಲಿ ಹಣದುಬ್ಬರ ತುಸು ಏರಿದ ಪರಿಣಾಮವಾಗಿ ನಿನ್ನೆ ಬೆಲೆ ಕೊಂಚ ಇಳಿಕೆಯಾಗಿತ್ತು. ಈಗ ಮತ್ತೆ ಏರತೊಡಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 60,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,110 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 60,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,450 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 15ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,600 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,110 ರೂ ಬೆಳ್ಳಿ…

Read More

ನವದೆಹಲಿ:  ಕರ್ನಾಟಕ ಹಾಗೂ ಕೆಲ ರಾಜ್ಯಗಳಲ್ಲಿ ಮಹಿಳೆಯರೂ ಸೇರಿದಂತೆ ವಿವಿಧ ವರ್ಗಗಳಿಗೆ ಪ್ರತಿ ತಿಂಗಳು ಹಣ ನೀಡುವ ‘ಗ್ಯಾರಂಟಿ’ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್‌ ಪಕ್ಷ ಇದೀಗ ಕೇಂದ್ರದಲ್ಲೂ ಇದೇ ಪ್ರಯೋಗಕ್ಕೆ ದೊಡ್ಡ ಮಟ್ಟದಲ್ಲಿ ಕೈಹಾಕಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ಕಡು ಬಡ ಕುಟುಂಬದ ತಲಾ ಒಬ್ಬ ಮಹಿಳೆಗೆ ‘ಮಹಾಲಕ್ಷ್ಮೀ ಗ್ಯಾರಂಟಿ’ ಯೋಜನೆಯಡಿ ಪ್ರತಿ ವರ್ಷ 1 ಲಕ್ಷ ರು. ನಗದು ನೀಡುವುದಾಗಿ ಪಕ್ಷದ ನಾಯಕ ರಾಹುಲ್‌ ಗಾಂಧಿ ಘೋಷಿಸಿದ್ದಾರೆ. ಇದರ ಜೊತೆಗೆ, ಕೇಂದ್ರ ಸರ್ಕಾರದ ನೌಕರಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವುದು, ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟದ ನೌಕರರಿಗೆ ನೀಡುವ ಕೇಂದ್ರ ಸರ್ಕಾರದ ವೇತನವನ್ನು ದುಪ್ಪಟ್ಟು ಮಾಡುವುದು, ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಹಾಸ್ಟೆಲ್‌ ತೆರೆಯುವುದು ಹಾಗೂ ಎಲ್ಲಾ ಪಂಚಾಯ್ತಿಗಳಲ್ಲೂ ಅರೆ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನೇಮಿಸಿ ಮಹಿಳೆಯರಿಗೆ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ನೆರವಾಗುವ ಒಟ್ಟು ಐದು…

Read More

ಸೂರ್ಯೋದಯ: 06:27, ಸೂರ್ಯಾಸ್ತ : 06:22 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪಾಲ್ಗುಣ ಮಾಸ , ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ:ಷಷ್ಟಿ, ನಕ್ಷತ್ರ: ಕೃತಿಕಾ, ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ಮ.1:49 ನಿಂದ ಮ.3:22 ತನಕ ಅಭಿಜಿತ್ ಮುಹುರ್ತ: ಮ.12:01 ನಿಂದ ಮ.12:48 ತನಕ “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ; ಐಶ್ವರ್ಯಕ್ಕಿಂತ ಆರೋಗ್ಯ ಮೇಲು ಹಾಗಾಗಿ ಆರೋಗ್ಯ ಕಡೆ ಗಮನವಿರಲಿ,ಅಸಹನೆ ಮತ್ತು ಕೋಪ ನಿಮಗೆ ಸಲ್ಲದು, ವಾಹನ ಅಪಘಾತ ಸಂಭವ ಜಾಗ್ರತೆಯಿಂದ ಸಂಚರಿಸಿ ,ಕುಟುಂಬದಲ್ಲಿ ಅಶಾಂತಿ, ಕಾಯಿಲೆಗಾಗಿ ಆಸ್ಪತ್ರೆಗಳ ಅಲೆದಾಟ, ಸಂಜೆಯೊಳಗೆ ಅಶುಭ ಸಮಾಚಾರ,ಗರ್ಭಿಣಿಗೆ ಗರ್ಭಪಾತ ಸಂಭವ, ಪ್ರೇಮ ಪ್ರಕರಣಗಳು ಹೆಚ್ಚಾಗಲಿವೆ, ಪ್ರೇಮದಲ್ಲಿ ಮೋಸ ಸಂಭವ,…

Read More

ಬೆಂಗಳೂರು:- ವಿಧಾನಸೌಧದಲ್ಲಿ ಪಾಕ್​ ಪರ ಘೋಷಣೆ ಕೇಸ್​ ಗೆ ಸಂಬಧಪಟ್ಟಂತೆ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. 39ನೇ ಎಸಿಎಂಎಂ ಕೋರ್ಟ್​ನಿಂದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಪಡೆದು ಮೊಹಮದ್ ಶಫಿ ನಾಶಿಪುಡಿ, ಮುಜಾಮಿಲ್ ಮತ್ತು ಇಲ್ತಾಜ್​​ಗೆ ಜಾಮೀನು ನೀಡಲಾಗಿದೆ. ಫೆಬ್ರವರಿ 27 ರಂದು ಆರೋಪಿಗಳು ಪಾಕ್ ಪರ ಘೋಷಣೆ ಕೂಗಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ನಾಸಿರ್ ಹುಸೇನ್ ಗೆಲುವಿನ ಬಳಿಕ ಆರೋಪಿಗಳು ಘೋಷಣೆ ಕೂಗಿದ್ದರು. ಎಫ್​ಎಸ್​ಎಲ್ ವರದಿಯಲ್ಲಿ ಘೋಷಣೆ ಕೂಗಿದ್ದು ಸಾಬೀತಾಗಿತ್ತು. ಬಳಿಕ ಮೂವರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದರು.

Read More

ಬೆಂಗಳೂರು:- ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀ ಶ್ರೀ 1008 ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರಿಗೆ ಭವ್ಯ ಸ್ವಾಗತ ಹಾಗೂ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಪರಿಷತ್ ಸದಸ್ಯ ಟಿಎ ಶರವಣ ಅವರು ಭಾಗಿಯಾಗಿದರು. ಇದೇ ವೇಳೆ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರಿಗೆ ಟಿಎ ಶರವಣ ಅವರು ಅಭಿನಂದನೆ ಸಲ್ಲಿಸಿದರು. ಅಯೋಧ್ಯೆಯಲ್ಲಿ ಐತಿಹಾಸಿಕ ಬಾಲರಾಮ ಪ್ರತಿಷ್ಠಾಪನಾ ಕಾರ್ಯ ಹಾಗೂ ಮಂಡಲೋತ್ಸವಗಳನ್ನು ವೈಭವದಿಂದ ನೆರವೇರಿಸಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರಿಗೆಗಾಗಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಸಮಾರಂಭದಲ್ಲಿ ಭಾಗಿಯಾದ ಪರಿಷತ್ ಸದಸ್ಯ ಟಿಎ ಶರವಣ ಅವರು, ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು. ಹಾಗೂ ಸಮಾರಂಭ ಕುರಿತು ಕೆಲವು ಸಮಯ ಮಾತನಾಡಿದರು. ಸಮಾರಂಭದಲ್ಲಿ ಸಾಕಷ್ಟು ಗಣ್ಯರು ಭಾಗಿಯಾಗಿದ್ದರು.

Read More

ಬೆಂಗಳೂರು:- ಈಶ್ವರಪ್ಪ ಮಗನನ್ನು MLC ಮಾಡುವ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಈಶ್ವರಪ್ಪ ಅವರ ಮಗ ಕಾಂತೇಶ್‍ಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರ ಮಾಡಿಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರ ಮಗನಿಗೆ ಎಂಎಲ್‍ಸಿ ಮಾಡುವ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ನಾನು ಮಾತನಾಡುತ್ತೇನೆ ಎಂದಿದ್ದಾರೆ ಯದುವೀರ್ ಸ್ಪರ್ಧೆ ವಿಚಾರವಾಗಿ, ಅವರು ಸ್ಪರ್ಧೆಯಿಂದ ಸುತ್ತಮುತ್ತಲ ಕ್ಷೇತ್ರಗಳಲ್ಲಿ ಅನುಕೂಲವಾಗಲಿದೆ. ಅವರು ಕೂಡಾ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಓಡಾಡಲು ಒಪ್ಪಿಕೊಂಡಿದ್ದಾರೆ. ಅವರ ಸ್ಪರ್ಧೆಯಿಂದ ದೊಡ್ಡ ಬಲ ಬಂದಿದೆ ಎಂದಿದ್ದಾರೆ. ಇದೇ ವೇಳೆ ಪ್ರತಾಪಸಿಂಹಗೆ ಟಿಕೆಟ್ ಕೈತಪ್ಪಿದ ವಿಚಾರವಾಗಿ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಪತ್ರಕರ್ತರಲ್ಲಿ, ಯಾವುದೇ ಪ್ರಶ್ನೆ ಕೇಳಬೇಡಿ, ಎಲ್ಲರೂ ಸಮಾಧಾನಗೊಂಡಿದ್ದಾರೆ. ಎಲ್ಲರೂ ಬೆಂಬಲ ನೀಡುತ್ತಾರೆ ಎಂದಿದ್ದಾರೆ

Read More

ಬೆಂಗಳೂರು:- ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಲಂಚ ಸ್ವೀಕರಿಸುವಾಗ ಕೆಆರ್ ಪುರಂ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ನನ್ನು ಅರೆಸ್ಟ್ ಮಾಡಿದ್ದಾರೆ. ಇನ್ಸ್ಪೆಕ್ಟರ್ ವಜ್ರಮುನಿ ಹಾಗೂ ಸಬ್ ಇನ್ಸ್ಪೆಕ್ಟರ್ ರಮ್ಯ, ವಂಚನೆ ಪ್ರಕರಣದಲ್ಲಿ ಆರೋಪಿಯೊಬ್ಬನನ್ನ ವಶಕ್ಕೆ ಪಡೆದಿದ್ದರು. ಈ ಹಿನ್ನಲೆ ವಶದಿಂದ ಬಿಡಲು ಐದು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ಜೊತೆಗೆ ಐವತ್ತು ಸಾವಿರ ಹಣವನ್ನ ಮೊದಲೇ ಪಡೆದಿದ್ದರು. ಇಂದು(ಮಾ.14) ಒಂದು ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಇದೇ ಮಾ.12 ರಂದು ಜಿ.ಎಸ್.ಟಿ ಹಣ ಕಡಿತಗೊಳಿಸಲು ತುಮಕೂರಿನ ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ಮಂಜುನಾಥ್ ವಿ.ಕೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 40 ಸಾವಿರ ಹಣ ತೆಗೆದುಕೊಳ್ಳುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು. ಇವರು ಮಂಜುನಾಥ್ ರೆಡ್ಡಿ ಎಂಬುವವರು ತಮ್ಮ ಬಳಿ 50 ಸಾವಿರ ಲಂಚಕ್ಕೆ ಹಣಕ್ಕೆ ಬೇಡಿಕೆಯಿಟ್ಟಿದ್ದ‌ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದರು.…

Read More

ರಾಮನಗರ:- ಹತ್ತು ವರ್ಷಗಳ ಕಾಲ ನಮ್ಮ ಸರ್ಕಾರ ಇದ್ದೇ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಯಾರೂ ಬಿಜೆಪಿ, ದಳ ಅಂತ ಯೋಚನೆ ಮಾಡುತ್ತಿದ್ದೀರೋ ಅದನ್ನು ಮರೆತುಬಿಡಿ. ವಯಸ್ಸು ಮುಗಿದು ಹೋಗುತ್ತದೆ, ಅವಕಾಶ ಸಿಕ್ಕಿದೆ. ನೀವೆಲ್ಲಾ ಸಹಾಯ ಮಾಡಬೇಕು ಎಂದರು ಮರ ಹೊಸ ಚಿಗುರಿಗೆ ಕಾಯುತ್ತಿರುತ್ತದೆ. ನೀವು ಕೂಡ ಮುಂದಿನ ದಿನಗಳಲ್ಲಿ ಕಾದು ನೋಡಿ. ಸರ್ಕಾರ ಗಟ್ಟಿಯಾಗಿದೆ. ಸರ್ಕಾರ ನಿಮ್ಮ ಸೇವೆ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಯಾರಿಗೇ ಕೊಟ್ಟರೂ ನೀವು ಅವರನ್ನು ಗೆಲ್ಲಿಸಬೇಕು. ಕೈ ಬಲಪಡಿಸಬೇಕು ಎಂದು ಸಮಾವೇಶದಲ್ಲಿ ಮತಯಾಚನೆ ಮಾಡಿದರು ಎಣ್ಣೆ ಬೆಲೆ ಜಾಸ್ತಿ ಆಗಿದೆ ಎಂದು ಜನರ ಸಹಾಯಕ್ಕೆ ಮುಂದಾದೆವು. ನಾನು, ಸಿದ್ದರಾಮಯ್ಯ ಸಹಿ ಹಾಕಿ ನಿಮ್ಮ ಮನೆಗೆ ಗ್ಯಾರಂಟಿ ಚೆಕ್ ತಲುಪಿಸಿದ್ದೆವು. ಆ ಪೈಕಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಹೇಳಿದರು ಅಂಬೇಡ್ಕರ್ ಯಾವ ರೀತಿ ಸಂವಿಧಾನ ಕೊಟ್ಟಿದ್ದಾರೋ ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕಕ್ಕೆ…

Read More

ತಿರುವನಂತಪುರಂ:- ಕೇರಳದಲ್ಲಿ ಸಿಎಎ ಅನುಷ್ಠಾನ ಮಾಡಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಿಪಿಎಂ ಇಂಡಿಯಾ ಮೈತ್ರಿಕೂಟದಲ್ಲಿ ಮಿತ್ರ ಪಕ್ಷವಾಗಿದೆ. ಆದರೆ ಈ ವಿಷಯದ ಬಗ್ಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇನ್ನೂ ಮಾತನಾಡದ ಕಾರಣ ಸಿಎಎ ಅಧಿಸೂಚನೆಯ ನಂತರ ಕಾಂಗ್ರೆಸ್ ತೆಗೆದುಕೊಂಡ ನಿಲುವನ್ನು ವಿಜಯನ್ ಟೀಕಿಸಿದ್ದಾರೆ. ಸಿಎಎ ಬಗ್ಗೆ ಕೇರಳ ತಲೆಬಾಗುವುದಿಲ್ಲ ಅಥವಾ ಮೌನ ವಹಿಸುವುದಿಲ್ಲ ಎಂದು ವಿಜಯನ್ ಹೇಳಿದ್ದಾರೆ. ಪೌರತ್ವ ಕೇಂದ್ರ ವಿಷಯವಾಗಿರುವುದರಿಂದ ಸಿಎಎ ಅನುಷ್ಠಾನದಲ್ಲಿ ರಾಜ್ಯಗಳಿಗೆ ಯಾವುದೇ ಆಯ್ಕೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ ನಂತರ ಪಿಣರಾಯಿ ವಿಜಯನ್ ಅವರ ಈ ಹೇಳಿಕೆ ಬಂದಿದೆ. ಸಿಎಎ ಭಾರತದಲ್ಲಿ ಎಲ್ಲೆಡೆ ಅನ್ವಯಿಸುತ್ತದೆ. ವಿಜಯನ್ ಅವರು ಭಾರತದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಾಗ್ದಾಳಿ ನಡೆಸಿದೆ. ಸಿಎಎ ಭಾರತದ ಕಲ್ಪನೆಗೆ ಸವಾಲನ್ನು ಒಡ್ಡುತ್ತದೆ ಮತ್ತು ಧಾರ್ಮಿಕ ತಾರತಮ್ಯಕ್ಕೆ ಮಾನ್ಯತೆಯನ್ನು ನೀಡುತ್ತದೆ ಎಂದು ವಿಜಯನ್ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ…

Read More