Author: AIN Author

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮೂರನೇ ಹಂತದ ಮೆಟ್ರೋ (Metro) ಕಾಮಗಾರಿ ಕೈಗೆತ್ತಿಕೊಳ್ಳಲು ಇಂದಿನ ಸಚಿವ ಸಂಪುಟ (Cabinet of Ministers) ಒಪ್ಪಿಗೆ ನೀಡಿದೆ. BSY ವಿರುದ್ಧ FIR: ದೂರು ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಎನ್ನುತ್ತಿದ್ದಾರೆ : ಗೃಹ ಸಚಿವ ಪರಮೇಶ್ವರ್! ಒಟ್ಟು 15,611 ಕೋಟಿ ವೆಚ್ಚದಲ್ಲಿ ಮೂರನೇ ಹಂತದ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. 2028 ರೊಳಗೆ ಮೂರನೆ ಹಂತದ ಕಾಮಗಾರಿ ಮುಗಿಸುವ ಲೆಕ್ಕಾಚಾರದಲ್ಲಿ ಸಂಪುಟ ಒಪ್ಪಿಗೆ ನೀಡಿದೆ. 80-85% ರಾಜ್ಯ ಸರ್ಕಾರ ಹಾಗೂ 15% ಅಂದಾಜು ಕೇಂದ್ರ ಸರ್ಕಾರ ವೆಚ್ಚ ಭರಿಸಲಿದೆ. ಒಟ್ಟು 44.65 ಕಿ.ಮೀನ ಮೂರನೇ ಹಂತದ ಮೆಟ್ರೋ ಕಾಮಗಾರಿ ಇದಾಗಿದೆ. ಹೆಬ್ಬಾಳದಿಂದ (Hebbala) ಶುರುವಾಗಿ ತುಮಕೂರು ರಸ್ತೆ ರಾಜ್‌ಕುಮಾರ್ ಸಮಾಧಿ ಆಸುಪಾಸು ಹಾಗೂ ಅಲ್ಲಿಂದ ಮೈಸೂರು ರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆ ಮೂಲಕ ಜೆಪಿ ನಗರ (JP Nagar) ತಲುಪುವ ಮೆಟ್ರೋ ಕಾಮಗಾರಿ ಇದಾಗಿದೆ ಎನ್ನಲಾಗುತ್ತಿದೆ.

Read More

ನವದೆಹಲಿ: ಅಶ್ಲೀಲ ಮತ್ತು ಅಸಭ್ಯ ಕಂಟೆಂಟ್‌ ಪ್ರಸಾರಕ್ಕಾಗಿ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ (OTT Platform) ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. 19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು (ಗೂಗಲ್ ಪ್ಲೇ ಸ್ಟೋರ್‌ನಲ್ಲಿ 7, ಆ್ಯಪಲ್ ಆಪ್ ಸ್ಟೋರ್‌ನಲ್ಲಿ 3), ಒಟಿಟಿ ಪ್ಲಾಟ್‌ಫಾರ್ಮ್‌ಗಳ 57 ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ರಾಷ್ಟ್ರವ್ಯಾಪಿ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಐಟಿ ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್, ಸೃಜನಶೀಲ ಅಭಿವ್ಯಕ್ತಿಯ ಸೋಗಿನಲ್ಲಿ ಅಶ್ಲೀಲತೆ, ಅಸಭ್ಯತೆ ಮತ್ತು ನಿಂದನೆ ವಿಷಯಗಳನ್ನು ಪ್ರಚಾರ ಮಾಡಬಾರದು ಎಂದು ವೇದಿಕೆಗಳ ಜವಾಬ್ದಾರಿ ಕುರಿತು ಪದೇ ಪದೇ ಒತ್ತಿಹೇಳಿದ್ದಾರೆ. https://ainlivenews.com/allegation-of-sexual-assault-on-minor-girl/ ಸೃಜನಶೀಲ ಅಭಿವ್ಯಕ್ತಿ ಹೆಸರಿನಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಅಶ್ಲೀಲತೆ, ಅಸಭ್ಯ ಕಂಟೆಂಟ್‌ಗಳನ್ನು ಪ್ರಸಾರ ಮಾಡದಂತೆ ನೋಡಿಕೊಳ್ಳುವುದು ಆಯಾ ಪ್ಲಾಟ್‌ಫಾರ್ಮ್‌ ಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಠಾಕೂರ್‌ ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆದಿದ್ದ ಸಭೆಯಲ್ಲಿ, ಯಾವುದೇ…

Read More

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವನ ವಿರುದ್ಧ ದೆಹಲಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸಣ್ಣ ಕೈಗಾರಿಕಾ ಸಚಿವ ಎಂ ಅನ್ಬರಸನ್  ಅವರು ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ, ನಾನು ಸಚಿವನಾಗಿದ್ದರಿಂದ ನಾನು ನನ್ನನ್ನು ನಿಯಂತ್ರಿಸುತ್ತಿದ್ದೇನೆ. ಇಲ್ಲದಿದ್ದರೆ ನಾನು ನಿಮ್ಮನ್ನು ತುಂಡು ಮಾಡುತ್ತೇನೆ ಎಂದು ಮೋದಿ ವಿರುದ್ಧ ಹೇಳಿಕೆ ನೀಡಿದ್ದರು. ಸುಪ್ರೀಂ ಕೋರ್ಟ್ ವಕೀಲ ಸತ್ಯ ರಂಜನ್ ಸ್ವೈನ್ ಅವರ ದೂರಿನ ಆಧಾರದ ಮೇಲೆ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಅನ್ಬರಸನ್ ನೀಡಿರುವ ಬೆದರಿಕೆ ಹೇಳಿಕೆಯು ಆತಂಕಕಾರಿ ಮತ್ತು ನಮ್ಮ ಪ್ರಧಾನಿಯ ಸುರಕ್ಷತೆ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ. https://ainlivenews.com/allegation-of-sexual-assault-on-minor-girl/ ನಮ್ಮ ರಾಷ್ಟ್ರದ ಶಾಂತಿ, ಸ್ಥಿರತೆಯನ್ನು ಕದಡಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಬಹಿರಂಗವಾಗಿ ಬೆದರಿಕೆ ಹಾಕಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಐಪಿಸಿ ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು), 268 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ), 503 (ಅಪರಾಧ ಬೆದರಿಕೆ), 505…

Read More

ಬೆಂಗಳೂರು:   ಪ್ರಪಂಚದಲ್ಲಿ ಯಾವರಾರುವ ಜನ ಇರೋಕ್ಕಿಂತ ಯಾಮಾರಿಸುವವರು ಇದ್ದೇ ಇರುತ್ತಾರೆ ಹಾಗೆ ನಾವು ಸಗವಲ್ಪ ಎಚ್ಚರ ತಪ್ಪಿದ್ರೂ ಸಾಕು ನಮ್ಮಿಂದ ಲಕ್ಷ ಲಕ್ಷ ಲೂಟಿ ಹೊಡೆದು ಬಿಡುತ್ತಾರೆ ಇಆಹೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡು ಜನ ಮೋಸ ಮಾಡುವವರು ಇದ್ದೇ ಇದ್ದಾರೆ. ಎಚ್ಚರ ಎಚ್ಚರ, ಮಾನವೀಯತೆಂದು ಹೋಗಿ ಮೋಸ ಹೋಗಬೇಡಿ ಆನ್ ಲೈನ್‌ನಲ್ಲಿ ತಲೆ ಎತ್ತಿದೆ ಹೊಸ ರೂಪದ ವಂಚನೆ ಬೈಕ್ ಖರೀದಿ ನೆಪದಲ್ಲಿ ವ್ಯಕ್ತಿಯಿಂದ ಡಿಜಿಟಲ್ ಭಿಕ್ಷಾಟನೆ ಹೈ ಫೈ ಬೈಕ್ ಗಾಗಿ ಒಂದು ರೂಪಾಯಿ ಭಿಕ್ಷೆ ನೀಡುವಂತೆ‌ ಮನವಿ ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ನಲ್ಲಿ ಬೈಕ್ ಗಾಗಿ ಭಿಕ್ಷೆ ಹೈಫೈ ಬೈಕ್ ಗಳ‌ ಫೋಟೋ ಅಪ್ಲೋಡ್ ಮಾಡಿ ₹1 ಮನವಿ ಎಮೋಷನಲ್ ಸ್ಕ್ಯಾಮ್ ಇದೀಗ ಡಿಜಿಟಲ್ ದುನಿಯಾದಲ್ಲಿ ಎಮೋಷನಲ್ ಸ್ಕ್ಯಾಮ್ ಬೈಕ್ ಖರೀದಿ ಮಾಡಲು ಹಣವಿಲ್ಲ, ₹1 ಕೊಡುವಂತೆ ಮನವಿ ಸಾವಿರಾರು ಜನರಿಂದ ₹1 ಬದಲು, ₹10,₹100 ಸೆಂಡ್ ಇದನ್ನೇ ಅಡ್ ವೆಂಟೇಜ್ ಆಗಿ…

Read More

ಮಂಗಳೂರು: ಚುನಾವಣೆ ಸ್ಪರ್ಧೆಗೆ ಅವಕಾಶ ಸಿಕ್ಕರೆ ವಿರೋಧ ಇಲ್ಲ. ಹಾಗೆಂದು ಚುನಾವಣೆ ಟಿಕೆಟ್ ಕೇಳಿಕೊಂಡು ಹೋಗುವುದಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ದೊರೆಯುವ ಸಾಧ್ಯತೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವೇಳೆ ಅಂಥ ಅವಕಾಶ ಬಂದರೆ ಸ್ಪರ್ಧಿಸಲು ವಿರೋಧ ಇಲ್ಲ. ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವ ವಿಚಾರ ಸದ್ಯದ ಮಟ್ಟಿಗಂತೂ ವದಂತಿಯಷ್ಟೆ ಎಂದು ಹೇಳಿದ್ದಾರೆ. https://ainlivenews.com/allegation-of-sexual-assault-on-minor-girl/ 2014, 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಇಂತಹ ವದಂತಿ ಹರಡಿತ್ತು. ಈಗ 2024ರಲ್ಲೂ ಅಂಥದ್ದೊಂದು ವದಂತಿ ಹರಡಿದೆ. ರಾಜಕೀಯ ಆಸಕ್ತಿಯ ಪ್ರಶ್ನೆ ಬೇರೆ, ಅದಕ್ಕೆ ನನ್ನ ವಿರೋಧವಿಲ್ಲ. ಆದರೆ ಸೀಟ್ ಕೇಳಿಕೊಂಡು ಹೋಗುವುದಿಲ್ಲ. ಅಂಥ ಅವಕಾಶ ಬಂದರೆ ಯಾವುದೇ ವಿರೋಧ ಇಲ್ಲ. ಹತ್ತು ವರ್ಷಗಳಿಂದ ಕಾಪಾಡಿಕೊಂಡು ಬಂದಿರೋದನ್ನು ಸ್ವಲ್ಪ ಸಡಿಲ ಮಾಡುತ್ತೇನೆ. ಹಾಗೆ ಆಗಬೇಕು ಎಂದು ಏನಾದರೂ ಭಗವಂತನ ಇಚ್ಛೆ ಇದ್ದರೆ ಅದು ಆಗಿಯೇ ಆಗುತ್ತದೆ.…

Read More

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ (B S Yediyurappa) ವಿರುದ್ಧ ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಅಂತಾ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಪ್ರಕರಣದ ಕುರಿತು ತನಿಖೆ ಆಗುವವರೆಗೂ ಯಾವುದೇ ವಿಷಯ ತಿಳಿಸೋಕೆ ಆಗಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ರಾತ್ರಿ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸಿ ಕೇಸ್ ರಿಜಿಸ್ಟರ್ ಮಾಡಿದ್ದಾರೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡ್ತಿದ್ದಾರೆ. ತನಿಖೆ ಆಗುವವರೆಗೂ ಯಾವುದೇ ವಿಷಯ ತಿಳಿಸೋಕೆ ಆಗಲ್ಲ. ಇದು ಒಬ್ಬ ಮಾಜಿ ಸಿಎಂ ವಿಷಯಕ್ಕೆ ಸಂಬಂಧಿಸಿದ್ದು, ಇದು ಬಹಳ ಸೂಕ್ಷ್ಮ ವಿಷಯ ಎಂದಿದ್ದಾರೆ. https://youtu.be/AwR_QRcHxDA ದೂರು ನೀಡಿರುವ ಮಹಿಳೆಗೆ ಮಾನಸಿಕ ಅಸ್ವಸ್ತತೆ ಇದೆ ಎಂದು ಕೆಲವರು ಹೇಳುತ್ತಿದ್ದಾರೆ, ಠಾಣೆಯಲ್ಲಿ ಕೈಬರಹದ ಪ್ರತಿ ಬದಲಿಗೆ ಟೈಪ್​ ಮಾಡಿರುವ ಪ್ರತಿಯನ್ನು ನೀಡಿದ್ದಾರೆ, ಇದು ಮಾಜಿ ಮುಖ್ಯಮಂತ್ರಿಗಳ ವಿರುದ್ದ ನೀಡಿರುವ ಪ್ರಕರಣವಾಗಿದೆ. ಜೊತೆಗೆ ಒಬ್ಬ ಮಹಿಳೆ ದೂರು ನೀಡಿರುವ ಕಾರಣ ಇದೊಂದು ಸೂಕ್ಷ…

Read More

ನವದೆಹಲಿ:ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿದ್ದ 22 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿತಿನ್ ಗಡ್ಕರಿ, ಕರ್ನಾಟಕದ ರಸ್ತೆಗಳ ಚಿತ್ರಣ 2024 ರ ಮುಕ್ತಾಯದ ವೇಳೆಗೆ ಕರ್ನಾಟಕದ ರಸ್ತೆಗಳ ಚಿತ್ರಣ ಬದಲಾಗಲಿದ್ದು, ಅಮೆರಿಕಾದ ರಸ್ತೆಗಳಿಗೆ ಸಮನಾಗಿ ಇರಲಿವೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ನಿತಿನ್ ಗಡ್ಕರಿ ಅವರು ಅನುದಾನ ಬಿಡುಗಡೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಹೌದು  ಕರ್ನಾಟಕದ ರಸ್ತೆ ಯೋಜನೆಗಳಿಗೆ 1385.60 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಯೋಜನೆಗಳು ವಿವಿಧ ಜಿಲ್ಲೆಗಳಲ್ಲಿ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿಯಲ್ಲಿ ಒಟ್ಟು 2055.62 ಕಿ.ಮೀ. ಉದ್ದದ 295 ರಸ್ತೆ ಅಭಿವೃದ್ಧಿ ಯೋಜನೆಗಳ ವರ್ಧನೆ ಮತ್ತು ಬಲವರ್ಧನೆಯನ್ನು ಒಳಗೊಂಡಿವೆ ಎಂದು ಸಚಿವರು ಹೇಳಿದರು. ಈ ಪ್ರಯತ್ನವು ರಾಜ್ಯದಲ್ಲಿ ಮೂಲಸೌಕರ್ಯವನ್ನು ನವೀಕರಿಸುತ್ತದೆ ಮತ್ತು ಇದು ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದರು. https://ainlivenews.com/allegation-of-sexual-assault-on-minor-girl/…

Read More

ಬೆಂಗಳೂರು: ನನ್ನ ಮೇಲೆ ಮಹಿಳೆಯೊಬ್ಬರು ದೂರು ಕೊಟ್ಟಿದ್ದು, ಆದರೆ ಆ ಆರೋಪ ನಿರಾಧಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ. https://youtu.be/AwR_QRcHxDA ತಮ್ಮ ಮೇಲಿನ ಆರೋಪ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಾರೋ ಒಬ್ಬ ಹೆಣ್ಣು ಮಗಳು ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿದ್ದರು. ತಾಯಿ- ಮಗಳು ಅನೇಕ ಬಾರಿ ಬಂದು ಹೋಗುತ್ತಿದ್ದರು. ಹೀಗೆ ಬಂದವರ ಬಳಿ ಏನಾಗಿದೆ ಎಂದು ಕೇಳಿದೆ. ಈ ವೇಳೆ ಅವರು ಅನ್ಯಾಯವಾಗಿದೆ ಎಂದು ಹೇಳಿದರು. ಹೀಗಾಗಿ ನಾನು ಪೊಲೀಸರಿಗೆ ಕರೆ ಮಾಡಿ ನ್ಯಾಯ ಒದಗಿಸುವಂತೆ ಹೇಳಿದೆ. ಆದರೆ ಆ ಸಂದರ್ಭದಲ್ಲಿ ಮಹಿಳೆ ನನ್ನ ಮೇಲೆಯೇ ಏನೇನೋ ಮಾತಾಡೋಕೆ ಶುರು ಮಾಡಿದಳು. ಆದರೆ, ಬಳಿಕ ಮಹಿಳೆ ನನ್ನ ವಿರುದ್ಧವೇ ಮಾತನಾಡಲು ಶುರು ಮಾಡಿದಳು. ಈ ವಿಷಯದ ಬಗ್ಗೆಯೂ ಪೊಲೀಸ್‌ ಆಯುಕ್ತರಿಗೆ ತಿಳಿಸಿದ್ದೆ. ಆದರೆ, ಗುರುವಾರ ಪೊಲೀಸರು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನೋಡೋಣ ಮುಂದೆನಾಗುತ್ತೆ ಅಂತಾ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂದು ನಾನು…

Read More

ಬೆಂಗಳೂರು: ಗ್ರಾಮಂತರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ ಸಿ ಎನ್ ಮಂಜುನಾಥ್ ಸ್ಪರ್ಧೆ ವಿಚಾರ ಸಂಬಂಧಿಸಿದಂತೆ ಡಿಕೆಶಿ ನಿವಾಸದಲ್ಲಿ ಕೈ ನಾಯಕರ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿದೆ. ಸದಾಶಿವ ನಗರ ನಿವಾಸದಲ್ಲಿ ಬೆಂಗಳೂರು ಗ್ರಾಮಂತರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ ಸಿ ಎನ್ ಮಂಜುನಾಥ್ ಸ್ಪರ್ಧೆ ವಿಚಾರಕ್ಕೆ ಸದಾಶಿವ ನಗರ ನಿವಾಸದಲ್ಲಿ ಕೈ ನಾಯಕರ ಬ್ರೇಕ್ ಫಾಸ್ಟ್ ಮೀಟಿಂಗ್ ಡಿಸಿಎಂ ಡಿ ಕೆ ಶಿವಕುಮಾರ್, ಸಂಸದ ಡಿ ಕೆ ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರ ಜತೆ ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಉಪಾಹಾರ ಸಭೆ ನಡೆಸಿದರು. ಶಾಸಕರಾದ ಮಾಗಡಿ ಬಾಲಕೃಷ್ಣ, ಆನೇಕಲ್ ಶಿವಣ್ಣ, ಕುಣಿಗಲ್ ರಂಗನಾಥ್, ಎಂಎಲ್ಸಿಗಳಾದ ಪುಟ್ಟಣ್ಣ, ಎಸ್ ರವಿ, ಮುಖಂಡರಾದ ರಘುನಂದನ್ ರಾಮಣ್ಣ, ಮನೋಹರ್, ಹನುಮಂತರಾಯಪ್ಪ, ಕುಸುಮ ಎಚ್, ಗಂಗಾಧರ್ ಮತ್ತಿತರರು ಭಾಗವಹಿಸಿದ್ದರು.

Read More

ನವದೆಹಲಿ: ದೇಶದಲ್ಲಿ ಅಲ್ಪಸಂಖ್ಯಾತರು ಅಥವಾ ಯಾವುದೇ ವ್ಯಕ್ತಿ ಭಯಪಡುವ ಅಗತ್ಯವಿಲ್ಲ. ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳಲು ಸಿಎಎಯಲ್ಲಿ ಯಾವುದೇ ಅವಕಾಶವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈಗಾಗಲೇ ಅನುಷ್ಠಾನಕ್ಕೆ ಬಂದಿರುವ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾರ್ವಭೌಮ ನಿರ್ಧಾರ. ನಾವು ಅದರಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಿಎಎ ಅನುಷ್ಠಾನ ಮಾಡಲು ರಾಜ್ಯಗಳು ನಿರಾಕರಿಸಲು ಸಾಧ್ಯವಿಲ್ಲ. ಪೌರತ್ವ ನೀಡುವ ಅಧಿಕಾರ ಕೇಂದ್ರ ಸರ್ಕಾರ ಮಾತ್ರ ಇದೆ ಎಂದು ಅವರು ಹೇಳಿದರು. https://ainlivenews.com/allegation-of-sexual-assault-on-minor-girl/ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಬೌದ್ಧರು, ಜೈನರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿ ನಿರಾಶ್ರಿತರಿಗೆ ಹಕ್ಕುಗಳು ಮತ್ತು ಪೌರತ್ವವನ್ನು ನೀಡುವುದು ಮಾತ್ರ ಸಿಎಎ ಉದ್ದೇಶ. ಸಿಎಎ ಮೂಲಕ ಬಿಜೆಪಿ ಹೊಸ ವೋಟ್ ಬ್ಯಾಂಕ್ ಸೃಷ್ಟಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಪ್ರತಿಪಕ್ಷಗಳಿಗೆ…

Read More