Author: AIN Author

ಕಣ್ಣುಗಳ ಅಡಿಯಲ್ಲಿ ಊತಕ್ಕೆ ಹಲವು ಕಾರಣಗಳಿರುತ್ತವೆ. ಕಣ್ಣುಗಳ ಕೆಳಗೆ ಕಂಡುಬರುವ ಊತವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಸಮಯ ಕಳೆದಂತೆ ಊತದ ಜೊತೆಗೆ ನೋವು ಹೆಚ್ಚಾಗಬಹುದು ಮತ್ತು ದೃಷ್ಟಿಗೆ ಸಮಸ್ಯೆಯಾಗಬಹುದು. ಕಣ್ಣಿನ ಕೆಳ ಭಾಗದ ಚರ್ಮ ಊದಲು ಕಾರಣವೇನು ಹಾಗೆ ಅದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ. ಕಣ್ಣಿ (Eye) ನ ಕೆಳ ಭಾಗದ ಚರ್ಮ (Skin) ಊದಲು ಕಾರಣಗಳು : ಕಣ್ಣಿನಲ್ಲಿ ಸೋಂಕು (Infection) ಕಾಣಿಸಿಕೊಂಡಿದ್ದರೆ ಕಣ್ಣಿನ ಕೆಳ ಭಾಗದ ಚರ್ಮ ಊದಿಕೊಳ್ಳುತ್ತದೆ. ಈ ಸೋಂಕು ಒಂದು ಕಣ್ಣಿನಿಂದ ಇನ್ನೊಂದಕ್ಕೆ ಹರಡಬಹುದು. ಕಣ್ಣುಗಳ ಸುತ್ತಲೂ ದ್ರವವು ಶೇಖರಣೆಯಾದರೆ, ಇದು ಕಣ್ಣಿನ ಊದುವಿಕೆ ಸಮಸ್ಯೆಗೆ ಕಾರಣವಾಗುತ್ತದೆ. ಹೆಚ್ಚು ಉಪ್ಪನ್ನು ಸೇವಿಸುವುದರಿಂದಲೂ ಕಣ್ಣಿನ ಕೆಳ ಭಾಗ ಊದುತ್ತದೆ ಎಂದು ತಜ್ಞರು ಹೇಳ್ತಾರೆ. ಮಾಲಿನ್ಯ ಅಥವಾ ಧೂಳಿನ ಅಲರ್ಜಿಯಿಂದ ಕಣ್ಣಿನ ಅಡಿಯಲ್ಲಿ ಊತ ಕಾಣಿಸಿಕೊಳ್ಳುವುದಿದೆ. ನಿದ್ರಾಹೀನತೆ ಅಥವಾ ಸರಿಯಾಗಿ ನಿದ್ರೆ ಮಾಡದಿರುವುದು ಕೂಡ ಕಣ್ಣಿನ ಕೆಳ ಭಾಗದ ಊತಕ್ಕೆ ಕಾರಣವಾಗಿರುತ್ತದೆ.ಅತಿಯಾದ ಅಳುವಿನಿಂದಲೂ ಕಣ್ಣುಗಳ ಕೆಳಗೆ ಊತ…

Read More

ಕೊಲಂಬೋ: ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ (Former Sri Lanka Skipper) ಲಾಹಿರು ತಿರಿಮನ್ನೆ (Lahiru Thirimanne) ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಲಾರಿ ಅನುರಾಧಪುರ ಎಂಬಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಅವರನ್ನು ಅನುರಾಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ತಿರಿಮನ್ನೆ ಅವರೊಂದಿಗೆ ಮತ್ತೋರ್ವ ಪ್ರಯಾಣಿಕನಿದ್ದು, ಅವರಿಗೂ ಸಹ ಗಾಯಗಳಾಗಿದ್ದು, ಅವರನ್ನೂ ಸಹ ಚಿಕಿತ್ಸೆಗೆ ದಾಖಲಿಸಲಾಗಿದೆ. ತಿರಿಮನ್ನೆ ಪ್ರಸ್ತುತ ಲೆಜೆಂಡ್ಸ್ ಕ್ರಿಕೆಟ್‍ನಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ಪರ ಆಡುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಫ್ರಾಂಚೈಸಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ತಿರಿಮನ್ನೆ ಮತ್ತು ಅವರ ಕುಟುಂಬ ಧಾರ್ಮಿಕ ಕ್ಷೇತ್ರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಅಪಘಾತದ  (Car Accident) ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.

Read More

ಲೋಕ ಸಭೆ ಗದ್ದುಗೆಯನ್ನ ಮೂರನೇ ಬಾರಿಗೆ ಹಿಡಿಯುವ ಸಂಕಲ್ಪ ಮಾಡಿರುವ ಪ್ರಧಾನಿ ಮೋದಿ ನಾಳೆ ಕರ್ನಾಟಕಕ್ಕೆ ಎಂಟ್ರಿ ಕೊಡಲಿದ್ದಾರೆ.. aicc ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರೂರಿನಿಂದಲೇ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.. ಮಧ್ಯಾನ 2 ಗಂಟೆಗೆ ಆಗಮಿಸುವ ನಮೋ ಎನ್ ವಿ ಮೈದಾನದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುನ್ನ ರಸ್ತೆ ಮೂಲಕ ಪೋಲೀಸ್ ಹೆಲಿಪ್ಯಾಡಿಂದ ಆಗಮಿಸಲಿದ್ದಾರೆ.ಮೋದಿಯವರ ಆಗಮನದಿಂದ ಸಂಸದ ಉಮೇಶ್ ಜಾಧವ್ ಎಲೆಕ್ಷನ್ ಉಸ್ತುವಾರಿ ರಾಜೂಗೌಡ ಮಾಜಿ ಶಾಸಕ ದತ್ತು ಪಾಟೀಲ್ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಶಿವರಾಜ ಪಾಟೀಲ್ ಸೇರಿದಂತೆ ಸಾವಿರಾರು ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಸಿಕ್ಕಂತಾಗಿದೆ.. ಮೋದಿ ಆಗಮನ ಹಿನ್ನಲೆ ಇದೇವೇಳೆ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ..

Read More

ಚಿತ್ರದುರ್ಗ: ಯಡಿಯೂರಪ್ಪ ವಿರುದ್ದ ಫೋಕ್ಸೋ ಕೇಸ್ ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೇ ನೀಡಿದ್ದಾರೆ. ದೂರು ಕೊಟ್ಟ ಬಳಿಕವೇ ಬಂಧಿಸಲು ಆಗಲ್ಲ, ನಮ್ಮ ಜವಬ್ದಾರಿ ಇದೆ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರ ಕೊಟ್ಟ ಹೇಳಿಕೆ ಸರಿಯಾಗಿದೆ ಎಂದರು. ಇನ್ನೂ ಮಾನಸಿಕ ಅಸ್ವಸ್ಥತ ಮಹಿಳೆ , ಇನ್ನೂ ಕೆಲವರ ಮೇಲೆ ದೂರು ಕೊಟ್ಟಿದ್ದಾಳೆ ಎಂದಿದ್ದಾರೆ. ರಾಜಕಾರಣದಲ್ಲಿ ಹೆಸರಿಗೆ ಕಳಂಕ ತರುವ ಎಲ್ಲಾ ಪ್ರಯತ್ನ ಮಾಡುತ್ತಾರೆ. ಈ ಕೇಸ್ ನಲ್ಲಿ ಯಾವುದೇ ಸದುದ್ದೇಶ ಇಲ್ಲ, ತನಿಖೆಯಲ್ಲಿ ಸತ್ಯ ಹೊರ ಬರುತ್ತದೆ. ಚುನಾವಣೆ ವೇಳೆ ಈ ರೀತಿಯ ಬೆಳವಣಿಗೆ ನಡೆಯುತ್ತವೆ. ಸತ್ಯಕ್ಕೆ ತನಿಖೆಯಿಂದ ಜಯ ಸಿಗುತ್ತದೆ. ಎಂದು ಹೇಳಿದರು. ಇನ್ನೂ ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಟಿಕೆಟ್ ಪೈನಲ್ ಆಗುತ್ತದೆ. ನಾಳೆ ಅಥವಾ ನಾಡಿದ್ದು ನಮ್ಮ ಉಳಿದ ಟಿಕೆಟ್ ಪೈನಲ್ ಆಗುತ್ತದೆ. ಶ್ರೀಗಳ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಎಲ್ಲವೂ…

Read More

ರಾಯಚೂರು: “ಗ್ಯಾರಂಟಿ ಯೋಜನೆಯಿಂದ ನೀವೂ ‌ಸಂತೋಷದಿಂದ ಇದ್ದೀರಿ. ನುಡಿದಂತೆ ನಡೆದಿರುವ ಸರ್ಕಾರ ನಮ್ಮದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. “ಗ್ಯಾರಂಟಿ ಯೋಜನೆಯಿಂದ ನೀವೂ ‌ಸಂತೋಷದಿಂದ ಇದ್ದೀರಿ. ನುಡಿದಂತೆ ನಡೆದಿರುವ ಸರ್ಕಾರ ನಮ್ಮದು. ಬಿಜೆಪಿಯವರು ಬೇಕಾದಷ್ಟು ಮಾತು ಕೊಟ್ಟಿದ್ರು, ಜನಧನ್ ಅಕೌಂಟ್ ಓಪನ್ ಮಾಡಿದ್ರೆ 15 ಲಕ್ಷ ಅಂತ ಹೇಳಿದ್ರು, ನಾಲ್ಕು ವರ್ಷ ಬಿಜೆಪಿ ಸರ್ಕಾರ ಇತ್ತು. ಒಂದು ಯೋಜನೆ ‌ಜಾರಿ ಮಾಡಲಿಲ್ಲ. ನೀರು ಕೊಡಲಿಲ್ಲ, ತೆರಿಗೆಯೂ ಕೊಡಲಿಲ್ಲ, ಅನ್ನ ಕೊಡಲಿಲ್ಲ, ಸೂರು ಕೊಡಲಿಲ್ಲ, ಅಚ್ಛೇ ದಿನವೂ ಬರಲಿಲ್ಲ, ಇನ್ನೂ ಏತಕ್ಕೆ ಬರುತ್ತಿದ್ದಾರೋ ನನಗೆ ಗೊತ್ತಿಲ್ಲ” ಎಂದು ಬಿಜೆಪಿಯನ್ನು ಟೀಕಿಸಿದರು. https://ainlivenews.com/wow-i-didnt-know-amazing-health-benefits-hidden-in-these-5-greens/ “ಕಮಲ ಕೆರೆಯಲ್ಲಿ ಇದ್ರೆ ಚೆಂದ, ತೆನೆ ಹೊಲದಲ್ಲಿ ‌ಇದ್ರೆ ಚೆಂದ, ಈ…

Read More

ಮೈಸೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟವಾಗಿದೆ. ಈ ಮೂಲಕ ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಅರಮನೆಯ AC ರೂಂನಲ್ಲಿ ರಾಜನಾಗಿರುವ ಬದಲು, ಪ್ರಜೆಗಳಂತೆ ಬದುಕಲು ಬಂದ್ರೆ ಸ್ವಾಗತಿಸದಿರಲಾಗುತ್ತಾ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ತಿರುಗೇಟು ನೀಡಿರುವ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್​​, ಎಸಿ ರೂಮ್​ನಿಂದ ಜನರ ಮಧ್ಯೆ ಬರುವುದು ಕಷ್ಟವೇನು ಅಲ್ಲ. ನಾನು ಈಗಾಗಲೇ ಜನರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ, ಬಿಜೆಪಿ ಕಾರ್ಯವೈಖರಿ ಗಮನಿಸಿ‌ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದ್ದಾರೆ. https://ainlivenews.com/wow-i-didnt-know-amazing-health-benefits-hidden-in-these-5-greens/ ರಾಜಕಾರಣದ ಮೂಲಕ ಸಾಮಾಜಿಕ ಸಮಸ್ಯೆ ಬಗೆಹರಿಸಲು ಸಾಧ್ಯ. ಇದೇ ಕಾರಣಕ್ಕೆ ನಾನು ರಾಜಕಾರಣಕ್ಕೆ ಬರಲು ತೀರ್ಮಾನಿಸಿದ್ದೇನೆ. ರಾಜಕೀಯದಲ್ಲಿ ಇರುವ ಸವಾಲುಗಳನ್ನು ಅರಿತೇ ಬಂದಿದ್ದೇನೆ. ಕೇವಲ ಅವಕಾಶ ಸಿಕ್ಕಿದೆ ಅಂತಾ ನಾನು ರಾಜಕಾರಣಕ್ಕೆ ಬಂದಿಲ್ಲ. ಪ್ರತಾಪ್ ಸಿಂಹ ಸೇರಿ ಹಲವರು ಉತ್ತಮ ಅಡಿಪಾಯ ಹಾಕಿದ್ದಾರೆ ಎಂದಿದ್ದಾರೆ.

Read More

ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದ್ದು ಈಗ CID ತನಿಖೆಗೆ ವರ್ಗಾವಣೆ ಗೊಳಿಸಿ ಸರ್ಕಾರದ ಆದೇಶ ಹೊರಡಿಸಿದೆ. ಏನಿದು ಘಟನೆ ಕಳೆದ ಫೆಬ್ರವರಿಯಲ್ಲಿ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತೆಯ ತಾಯಿ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ. ಮಾಜಿ ಸಿಎಂ ವಿರುದ್ಧ ಪೋಕ್ಸೊ ಮತ್ತು 354 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಮತ ಸಿಂಗ್ ತಮ್ಮ ಸಂತ್ರಸ್ತ ಮಗಳೊಂದಿಗೆ 2024ರ ಫೆಬ್ರವರಿ 2 ರಂದು ಬಿಎಸ್​ವೈ ಮನೆಗೆ ತೆರಳಿದ್ದಾರೆ. ಅಪ್ರಾಪ್ತೆ ಮೇಲೆ ಈ ಹಿಂದೆ ಅತ್ಯಾಚಾರವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣವನ್ನು ಎಸ್​ಐಟಿಗೆ ನೀಡಿ ನ್ಯಾಯ ಒದಗಿಸುವಂತೆ ಕೋರಿ ಬಿಎಸ್​ವೈ ಅವರನ್ನು ಕೇಳಿಕೊಂಡಿದ್ದಾರೆ. ಈ ವೇಳೆ ನಮ್ಮೊಂದಿಗೆ ಮಾತನಾಡಲು 9 ನಿಮಿಷಗಳ ಕಾಲಾವಕಾಶ ನೀಡಿದ್ದರು. ಬಳಿಕ ನನ್ನ ಮಗಳನ್ನು ರೂಂ ಗೆ ಕರೆದುಕೊಂಡು ಹೋದ ಮಾಜಿ ಸಿಎಂ ಯಡಿಯೂರಪ್ಪ ಅವರು ನನ್ನ ಮಗಳ…

Read More

ಬೆಂಗಳೂರು: ಅರಮನೆಯಲ್ಲಿ ಇದ್ದರೂ ಟೀಕೆ ಕೇಳಬೇಕಾಗುತ್ತದೆ. ರಾಜಕಾರಣದಲ್ಲಿ ಅವೆಲ್ಲ ಸಹಜ. ರಾಜಕೀಯಕ್ಕೆ ಬಂದಾಗ ಜಾಸ್ತಿ ಎದುರಿಸಬೇಕಾಗುತ್ತದೆ ಎಂದು ಮೈಸೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ (Yaduveer Wadiyar) ಹೇಳಿದ್ದಾರೆ. BSY ವಿರುದ್ಧ FIR: ದೂರು ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಎನ್ನುತ್ತಿದ್ದಾರೆ : ಗೃಹ ಸಚಿವ ಪರಮೇಶ್ವರ್! ಡಾಲರ್ಸ್ ಕಾಲೋನಿಯಲ್ಲಿ ಯಡಿಯೂರಪ್ಪ (BS Yediyurappa) ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಚುನಾವಣೆಯಲ್ಲಿ ಮೈಸೂರು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುವ ಜವಾಬ್ದಾರಿ ಇದೆ. 9 ವರ್ಷ ಮೈಸೂರಿನ (Mysuru) ಅರಮನೆ ಜವಾಬ್ದಾರಿ ಹೊತ್ತಿದ್ದೇನೆ. ಎಲ್ಲಾ ಸಾರ್ವಜನಿಕ ಜೀವನದಲ್ಲಿ ಭಾಗಿಯಾಗಿದ್ದೇನೆ. ನಾನು ಒಂದು ವರ್ಷದ ಹಿಂದೆಯೇ ತೀರ್ಮಾನ ಮಾಡಿದ್ದೆ. ವೈಯಕ್ತಿಕವಾಗಿ ಕೂಡ ಅಭಿವೃದ್ಧಿ ಮಾಡಬಹುದು. ಆದರೆ ಉತ್ತಮ ಸರ್ಕಾರ ಇದ್ದರೆ ಮತ್ತಷ್ಟು ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದರು. ಮಹಾರಾಜರು ಎಸಿಯಿಂದ ರೋಡ್‌ಗೆ ಬರಲಿ ಎಂಬ ಸಂಸದ ಪ್ರತಾಪ ಸಿಂಹ (Pratap Simha) ಹೇಳಿಕೆಗೆ ಪ್ರತಿಕ್ರಿಯಿಸಿ, ಎಲ್ಲವನ್ನು ಜೀವನದಲ್ಲಿ ಸ್ವೀಕರಿಸಬೇಕು. ಅರಮನೆಯಲ್ಲಿದ್ದರೆ…

Read More

ಬೆಂಗಳೂರು: ಬಹುನಿರೀಕ್ಷಿತ  ಲೋಕಸಭೆ ಚುನಾವಣಾ ದಿನಾಂಕವನ್ನು ನಾಳೆ ( ಮಾ.16 )   ಘೋಷಣೆ ಮಾಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಚುನಾವಣಾ ಆಯೋಗದ ನೂತನ ಆಯುಕ್ತರು, ನಾಳೆ ಸಂಜೆ 3.00 ಗಂಟೆ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ದೆಹಲಿಯ ವಿಜ್ಞಾನ್ ಭವನದಲ್ಲಿ ನಾಳೆ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಟಿ ನಡೆಸಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ನೇತೃತ್ವದಲ್ಲಿ ದಿನಾಂಕ ಘೋಷಣೆ!

Read More

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮೂರನೇ ಹಂತದ ಮೆಟ್ರೋ (Metro) ಕಾಮಗಾರಿ ಕೈಗೆತ್ತಿಕೊಳ್ಳಲು ಇಂದಿನ ಸಚಿವ ಸಂಪುಟ (Cabinet of Ministers) ಒಪ್ಪಿಗೆ ನೀಡಿದೆ. BSY ವಿರುದ್ಧ FIR: ದೂರು ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಎನ್ನುತ್ತಿದ್ದಾರೆ : ಗೃಹ ಸಚಿವ ಪರಮೇಶ್ವರ್! ಒಟ್ಟು 15,611 ಕೋಟಿ ವೆಚ್ಚದಲ್ಲಿ ಮೂರನೇ ಹಂತದ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. 2028 ರೊಳಗೆ ಮೂರನೆ ಹಂತದ ಕಾಮಗಾರಿ ಮುಗಿಸುವ ಲೆಕ್ಕಾಚಾರದಲ್ಲಿ ಸಂಪುಟ ಒಪ್ಪಿಗೆ ನೀಡಿದೆ. 80-85% ರಾಜ್ಯ ಸರ್ಕಾರ ಹಾಗೂ 15% ಅಂದಾಜು ಕೇಂದ್ರ ಸರ್ಕಾರ ವೆಚ್ಚ ಭರಿಸಲಿದೆ. ಒಟ್ಟು 44.65 ಕಿ.ಮೀನ ಮೂರನೇ ಹಂತದ ಮೆಟ್ರೋ ಕಾಮಗಾರಿ ಇದಾಗಿದೆ. ಹೆಬ್ಬಾಳದಿಂದ (Hebbala) ಶುರುವಾಗಿ ತುಮಕೂರು ರಸ್ತೆ ರಾಜ್‌ಕುಮಾರ್ ಸಮಾಧಿ ಆಸುಪಾಸು ಹಾಗೂ ಅಲ್ಲಿಂದ ಮೈಸೂರು ರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆ ಮೂಲಕ ಜೆಪಿ ನಗರ (JP Nagar) ತಲುಪುವ ಮೆಟ್ರೋ ಕಾಮಗಾರಿ ಇದಾಗಿದೆ ಎನ್ನಲಾಗುತ್ತಿದೆ.

Read More