ಬೆಂಗಳೂರು:- ಪೇ ಸಿಎಂ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರ ಸ್ಥಿತಿ ಅತಂತ್ರವಾಗಿದೆ. ಪೋಸ್ಟರ್ ಅಂಟಿಸಿದಾಗಿನಿಂದಲೂ ಕಾರ್ಯಕರ್ತರು ಕೋರ್ಟ್ ಅಲೆಯುತ್ತಿದ್ದಾರೆ. https://ainlivenews.com/terrible-accident-the-old-man-died-on-the-spot/ ಪಕ್ಷದ ವಿರುದ್ಧವೇ ಕಾರ್ಯಕರ್ತರು ಅಸಮಧಾನಗೊಂಡಿದ್ದಾರೆ. ಕೋರ್ಟ್ ನಲ್ಲಿರುವ ತಮ್ಮ ಪೊಟೊ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಮಂತ್ರಿಗಳ ಮಕ್ಕಳು ಸಂಸತ್ತಿನಲ್ಲಿ, ಬಡವರ ಮಕ್ಳು ಕೋರ್ಟ್ ನಲ್ಲಿ, ಹೋಡಿರಿ ಚಪ್ಪಾಳೆ ಇದೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಣ್ರೀ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿಟಿ ರವಿ ಕೇಸ್ ವಾಪಸ್ ತಗೊಂಡ ಸರ್ಕಾರ,ನಮ್ಮ ಕೇಸ್ ಗಳು ಕಣ್ಣಿಗೆ ಕಾಣಲಿಲ್ಲವೆ ಎಂದು ಸಂಜಯ್ ,ವಿಶ್ವ ಮೂರ್ತಿ ಆಕ್ರೋಶ ಹೊರ ಹಾಕಿದ್ದಾರೆ.
Author: AIN Author
ನೆಲಮಂಗಲ: ಭೀಕರ ಅಪಘಾತದಲ್ಲಿ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಜರುಗಿದೆ. https://ainlivenews.com/kantara-chapter-1-first-look-teaser-released-rishabh-shetty-shocked/ ರಸ್ತೆಯಲ್ಲಿ ನರಲಾಡಿ ವೃದ್ಧ ವ್ಯಕ್ತಿ ಪ್ರಾಣಬಿಟ್ಟಿದ್ದಾರೆ. ಪಾದಚಾರಿ ವೃದ್ಧನ ಮೇಲೆ ಕಂಟೇನರ್ ಲಾರಿ ಹರಿದಿದೆ. ಕಂಟೇನರ್ ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ನರಲಾಡಿ ವೃದ್ಧ ಸಾವನ್ನಪ್ಪಿದ್ದಾರೆ. ತುಮಕೂರು ಕಡೆಯಿಂದ ದೊಡ್ಡಬಳ್ಳಾಪುರ ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಲಾರಿ ಹಾಗೂ ಚಾಲಕ ಡಾಬಸ್ ಪೇಟೆ ಪೋಲಿಸರ ವಶಕ್ಕೆ ಪಡೆದಿದ್ದಾರೆ. ಅಪಘಾತದಿಂದ ಸ್ಥಳದಲ್ಲಿ ಸಂಚಾರ ಅಸ್ತವ್ಯಸ್ತತೆ ಡಾಬಸ್ ಪೇಟೆ ಪೊಲೀಸರು ಹರಸಾಹಸಪಟ್ಟಿದ್ದಾರೆ. ಕೆಂಪರಂಗಯ್ಯ 75 ಆಗಳಕುಪ್ಪೆ ನಿವಾಸಿ ಮೃತ ಎನ್ನಲಾಗಿದೆ.
ಇಂದಿನ ದಿನಗಳಲ್ಲಿ ಮಂಡಿ ನೋವಿನ ಸಮಸ್ಯೆ ಸಣ್ಣ ವಯಸ್ಸಿನವರಲ್ಲಿಯೇ ಹೆಚ್ಚಾಗಿ ಕಂಡು ಬರುತ್ತಿದೆ. ಯಾಕೆ ಹೀಗೆ ಎಂದು ನೋಡುವುದಾದರೆ, ದೇಹದಲ್ಲಿ ಪ್ರಮುಖವಾಗಿ ಕ್ಯಾಲ್ಸಿಯಂ ವಿಟಮಿನ್ ಡಿ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ, ಅಧಿಕ ದೇಹದ ತೂಕ ಎಂದು ಮೇಲ್ನೋಟಕ್ಕೆ ತಿಳಿದುಕೊಳ್ಳಬಹುದು. ಹಿಂದಿನ ಕಾಲದಲ್ಲಿ ವಯಸ್ಸಾದ ಅಜ್ಜ-ಅಜ್ಜಿಯರು ಮಾತ್ರ ತಮ್ಮ ಮಂಡಿ ನೋವು, ಗಂಟು ನೋವು, ಕೀಲು ನೋವುಗಳ ಬಗ್ಗೆ ಹೇಳುತ್ತಿರುವುದು, ನಾವೆಲ್ಲರೂ ಕೂಡ ಕೇಳಿದ್ದೇವೆ. ಆದರೆ ಈಗ ಕಾಲ ಬದ ಲಾಗಿದೆ. https://ainlivenews.com/naxal-captain-vikram-gowda-encounter-case-what-home-minister-parameshwar-said/ ಮೊಣಕಾಲು ನೋವು ಮತ್ತು ಮೂಳೆ ದೌರ್ಬಲ್ಯವು ಈಗ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ, ಇದು ಯಾವುದೇ ವಯಸ್ಸಿನ ವ್ಯಕ್ತಿಗೆ ಸಂಭವಿಸಬಹುದು. ನೀವೂ ಮಂಡಿ ನೋವಿನಿಂದ ಬಳಲುತ್ತಿದ್ದರೆ ಈ ಕೆಲವು ಟಿಪ್ಸ್ ನಿಮಗಾಗಿ ಹಸಿರು ಎಲೆಗಳ ತರಕಾರಿಗಳು ಮೂಳೆಗಳನ್ನು ಬಲಪಡಿಸುವಲ್ಲಿ ಹಸಿರು ಎಲೆಗಳ ತರಕಾರಿಗಳು ವಿಶೇಷ ಕೊಡುಗೆಯನ್ನು ಹೊಂದಿವೆ. ಇದನ್ನು ಸೇವಿಸುವುದರಿಂದ ನಮ್ಮ ದೇಹವು ಕ್ಯಾಲ್ಸಿಯಂ, ವಿಟಮಿನ್ ಮತ್ತು ಅನೇಕ ಪೋಷಕಾಂಶಗಳನ್ನು ಪಡೆಯುತ್ತದೆ. ಹಾಲು ಮತ್ತು ಡೈರಿ ಉತ್ಪನ್ನ ಹಾಲು…
ಬೆಂಗಳೂರು:- ನಕ್ಸಲ್ ಕ್ಯಾಪ್ಟನ್ ವಿಕ್ರಂ ಗೌಡ ಎನ್‌ಕೌಂಟರ್ ಕೇಸ್ ಗೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainlivenews.com/excessive-air-pollution-even-the-air-you-breathe-is-getting-poisoned/ ಈ ಸಂಬಂಧ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ವಿಕ್ರಂನನ್ನು ಪೊಲೀಸರು ಹುಡುಕುತ್ತಿದ್ದರು. ಆದರೆ ವಿಕ್ರಂ ತಪ್ಪಿಸಿಕೊಂಡು ಓಡಾಡುತ್ತಿದ್ದ. ಅನೇಕ ಎನ್‌ಕೌಂಟರ್‌ಗಳಲ್ಲಿ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ. ಸೋಮವಾರ ಸಂಜೆ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ. ಸೋಮವಾರ ಪೊಲೀಸರ ಮೇಲೆ ವಿಕ್ರಂ ಶೂಟ್ ಮಾಡಿದ್ದ. ಪೊಲೀಸರು ಪ್ರತಿದಾಳಿ ನಡೆಸಿ ಎನ್‌ಕೌಂಟರ್ ಮಾಡಿದ್ದಾರೆ. ವಿಕ್ರಂ ಜೊತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದಾರೆ. ಆ ಭಾಗದಲ್ಲಿ ಕೂಂಬಿಂಗ್ ಮುಂದುವರಿದಿದೆ. ವಿಕ್ರಂ ಗೌಡ ಸಕ್ರಿಯರಾಗಿದ್ದ ಎಂದು ಪೊಲೀಸರು ಆತನನ್ನು ಹುಡುಕುತ್ತಿದ್ದರು ಎಂದರು ವಿಕ್ರಂ ಗೌಡ ಚಲನವಲನಗಳನ್ನು ಪೊಲೀಸರು ಗಮನಿಸುತ್ತಿದ್ದು, ಆತನ ಮೇಲೆ ನಿಗಾ ಇಟ್ಟಿದ್ದರು. ಈಗ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಿದ್ದಾರೆ. ನಾವು ರಾಜ್ಯದಲ್ಲಿ ನಕ್ಸಲ್ ಕಾಲ ಮುಗೀತು ಅಂದುಕೊಂಡಿದ್ದೆವು. ಆದರೆ ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು ಪತ್ತೆ ಆಗಿದ್ದಾರೆ.…
ದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವು ದಾಖಲೆಗಳನ್ನೆಲ್ಲ ಮುರಿದು ನಾಗಾಲೋಟ ಮುಂದುವರಿಸಿದೆ. ವಾಯು ಮಾಲಿನ್ಯದ ಪ್ರಭಾವದಿಂದಾಗಿ ದೆಹಲಿಯ ಇಂಡಿಯಾ ಗೇಟ್ ಕೂಡ ಕಾಣಿಸದಂತಾಗಿದೆ. ಹೌದು ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಹುಲ್ಲು ಸುಡುವಿಕೆಯಿಂದೆ ದೆಹಲಿಯಲ್ಲಿ ಉಂಟಾದ ವಾಯು ಮಾಲಿನ್ಯ ಅಪಾಯದ ಮಟ್ಟ ಮೀರಿದೆ. ಸತತ 6ನೇ ದಿನವೂ ವಾಯುಮಾಲಿನ್ಯ ಮುಂದುವರಿದಿದ್ದು ಉಸಿರಾಡುವ ಗಾಳಿ ವಿಷವಾಗುತ್ತಿದೆ. ಸೋಮವಾರ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 1,500ರ ಗಡಿ ದಾಟಿದೆ. ಸೋಮವಾರ ಬೆಳಗ್ಗೆ ದೆಹಲಿಯ ಮುಂಡ್ಕಾದಲ್ಲಿ ಎಕ್ಯೂಐ 1591 ಎಕ್ಯೂಐ, ದ್ವಾರಕ-8ನೇ ಸೆಕ್ಟಾರ್‌ನಲ್ಲಿ ಎಕ್ಯೂಐ 1,497 ಹಾಗೂ ರೋಹಿಣಿ ಸೆಕ್ಟಾರ್‌ನಲ್ಲಿ 1,427 ಎಕ್ಯೂಐ ದಾಖಲಾಗಿದೆ. ಗೋಚರತೆ ಪ್ರಮಾಣ ಇನ್ನಿಲ್ಲದಂತೆ ಕುಸಿದಿದೆ. ರಸ್ತೆ, ರೈಲು, ವೈಮಾನಿಕ ಸೇವೆಗಳಲ್ಲಿ ತೀವ್ರ ವ್ಯತ್ಯಯವಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಹೆಚ್ಚಿದ ವಾಯು ಮಾಲಿನ್ಯದಿಂದ ದೆಹಲಿ ಜನರಲ್ಲಿ ಉಸಿರಾಟ ಸಮಸ್ಯೆ ತೀವ್ರವಾಗಿದೆ. https://ainlivenews.com/do-you-know-doddapatre-has-the-ability-to-eliminate-the-biggest-health-problem/ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದೆ. ಅಪಾಯದ ಮಟ್ಟ…
ಮೊಹಮ್ಮದ್ ಶಮಿ ಅವರು ಮತ್ತೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವುದು ಮತ್ತಷ್ಟು ವಿಳಂಬವಾಗುವುದು ಖಚಿತವಾಗಿದೆ. ಇನ್ನು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪರಿಗಣಿಸಬಹುದು. ಅದರಂತೆ ಅವರು ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. https://ainlivenews.com/crime-news-a-75-year-old-woman-was-raped-by-a-beggar/ 2023 ರ ಏಕದಿನ ವಿಶ್ವಕಪ್ ವೇಳೆ ಮೊಹಮ್ಮದ್ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ಅಲ್ಲದೆ ವಿಶ್ವಕಪ್ ಬಳಿಕ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಅವರು ಒಂದು ವರ್ಷಗಳ ಕಾಲ ಯಾವುದೇ ಸ್ಪರ್ಧಾತ್ಮಕ ಪಂದ್ಯವಾಡಿರಲಿಲ್ಲ. ಇದೀಗ ರಣಜಿ ಟೂರ್ನಿಯ ಮೂಲಕ ಕಂಬ್ಯಾಕ್ ಮಾಡಿರುವ ಶಮಿ, ಮುಂಬರುವ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ರಣಜಿ ಟೂರ್ನಿ ಪಂದ್ಯದ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿರುವ ಮೊಹಮ್ಮದ್ ಶಮಿ ಸದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಮುಂಬರುವ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಬಂಗಾಳ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಒಂದು ವರ್ಷದಿಂದ…
ಕಲಬುರ್ಗಿ:- ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಗ್ರಾಮದಲ್ಲಿ 75 ವರ್ಷದ ನಿಸ್ಸಹಾಯಕ ವೃದ್ಧೆಯ ಮೇಲೆ ಭಿಕ್ಷಾಟನೆ ಮಾಡುತ್ತಾ ಊರೂರು ಸುತ್ತುತ್ತಿದ್ದ ಯುವಕ ಅತ್ಯಾಚಾರವೆಸಗಿರುವ ಘಟನೆ ಜರುಗಿದೆ. https://ainlivenews.com/motorists-ask-here-from-now-on-this-road-in-bangalore-is-only-allowed-for-one-way-traffic/ ಫಕೀರ ತಯ್ಯಬ್ ಎಂಬ ಯುವಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯೊಳಗೆ ನುಗ್ಗಿ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ತಯ್ಯಬ್ ಭಿಕ್ಷಾಟನೆ ಮಾಡುತ್ತಾ ಊರೂರು ಸುತ್ತುತ್ತಿದ್ದ. ಸದ್ಯ ಪರಾರಿಯಾಗಿರುವ ತಯ್ಯಬ್‌ನನ್ನು ಪತ್ತೆಹಚ್ಚುವ ಸಲುವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೀವ್ರ ಅಸ್ವಸ್ಥಗೊಂಡ ವೃದ್ಧೆಯನ್ನು ಬೀದರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಅಂತಾರಾಷ್ಟ್ರೀಯ ಪುರುಷರ ದಿನ. ಪ್ರತಿ ವರ್ಷ ನವೆಂಬರ್ 19ರಂದು ವಿಶ್ವ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಪುರುಷರು ವಹಿಸುವ ಪ್ರಮುಖ ಪಾತ್ರಗಳನ್ನು, ನಿರ್ವಹಿಸುವ ಜವಾಬ್ದಾರಿಯನ್ನು, ತೋರಿಸುವ ಪ್ರೀತಿಯನ್ನು ಗುರುತಿಸುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತದೆ. . ಪುರುಷರು ಈ ಸಮಾಜದ ಪ್ರಮುಖ ಸ್ತಂಭಗಳು. ಆದರೆ ಯಾರೂ ಕೂಡಾ ಪುರುಷರ ಬಗ್ಗೆ, ಪುರುಷರ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ, https://ainlivenews.com/do-you-know-doddapatre-has-the-ability-to-eliminate-the-biggest-health-problem/ ಅವರು ವಹಿಸುವ ಪ್ರತಿಯೊಂದು ಪಾತ್ರದಲ್ಲೂ ಅವರ ಕೊಡುಗೆ ಮತ್ತು ಸಮರ್ಪಣೆಯಿರುತ್ತದೆ. ಅದು ತಂದೆ ಯಾಗಿರಲಿ, ಸಂಗಾತಿ ಯಾಗಿರಲಿ ಅಥವಾ ಮಗನಾಗಿರಲಿ. ತ್ಯಾಗ, ಸಮರ್ಪಣೆ, ಜವಾಬ್ದಾರಿ, ಕಾಳಜಿ ಮತ್ತು ಪ್ರೀತಿ. ಈ ಮೌಲ್ಯಗಳನ್ನು ಆಚರಿಸಲು ಮತ್ತು ಪುರುಷತ್ವದ ಸಕಾರಾತ್ಮಕ ಅನಿಸಿಕೆಗಳನ್ನು ಉತ್ತೇಜಿಸಲು, ಅಂತರರಾಷ್ಟ್ರೀಯ ಪುರುಷರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಪುರುಷರ ದಿನಾಚರಣೆಯ ಇತಿಹಾಸ: ಅಂತರಾಷ್ಟ್ರೀಯ ಪುರುಷರ ದಿನಾಚರಣೆಯನ್ನು ಮೊದಲ ಬಾರಿಗೆ 1992 ರಲ್ಲಿ ಥಾಮಸ್ ಓಸ್ಟರ್ ಎಂಬವರು ಆಚರಿಸಿದರು ಎಂದು ಹೇಳಲಾಗುತ್ತದೆ. ಸಮಾಜದಲ್ಲಿ ಪುರುಷರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ…
ಬೆಂಗಳೂರು:- ವಾಹನ ಸವಾರರೇ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ನಗರದ ಹಳೆ ಮದ್ರಾಸ್ ರಸ್ತೆಯಿಂದ ಕೆಆರ್ಪುರ ಹೊಸ ಪೊಲೀಸ್ ಠಾಣೆವರಗಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಇಂದಿನಿಂದ ರಿಂದ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. https://ainlivenews.com/no-taxi-available-at-night-passengers-panic-at-kempegowda-airport/ ಹಳೆ ಮದ್ರಾಸ್ ರಸ್ತೆಯ ಬಿಬಿಎಂಪಿ ಜಂಕ್ಷನ್‌ನಿಂದ ಕೆಆರ್ಪುರ ಹೊಸ ಪೊಲೀಸ್ ಠಾಣೆ ಪಶು ಆಸ್ಪತ್ರೆವರೆಗಿನ ರಸ್ತೆಯನ್ನು ಪ್ರಾಯೋಗಿಕವಾಗಿ ಏಕಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ. ಹಳೆ ಮದ್ರಾಸ್ ರಸ್ತೆಯ ಬಿಬಿಎಂಪಿಜಂಕ್ಷನ್ ಯು ಟರ್ನ್ ಅನ್ನು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಂಬಂಧ ಪ್ರಾಯೋಗಿಕವಾಗಿ ಮುಚ್ಚಲಾಗಿದೆ. ಮಾರ್ಗ ಬದಲಾವಣೆ ಹಳೆ ಮದ್ರಾಸ್ ರಸ್ತೆಯಿಂದ ಕೆಆರ್ಪುರ ಹೊಸ ಪೊಲೀಸ್ ಠಾಣೆ ಮಾರ್ಗವಾಗಿ ಕೆಆರ್ಪುರ ಗ್ರಾಮ ಮತ್ತು ಟಿ.ಸಿ ಪಾಳ್ಯ, ಆನಂದಪುರ ಕಡೆಗೆ ಸಂಚರಿಸುವ ವಾಹನ ಸವಾರರು ಫ್ರೀ ಲೆಪ್ಸ್ ಟರ್ನ್ ಪಡೆದು ಮುಂದೆ ಸಂಚರಿಸಬಹುದಾಗಿದೆ. ಐಟಿಐ ಗೇಟ್ ಕಡೆಯಿಂದ ಹೊಸಕೋಟೆ ಕಡೆಗೆ ಹೋಗುವ ಬಿಎಂಟಿಸಿ ಬಸ್‌ಗಳು…
ಉಡುಪಿ: ಕರ್ನಾಟಕದ ಪಶ್ಚಿಮ ಘಟ್ಟ ತಪ್ಪಲಿನ ಅರಣ್ಯದಂಚಿನ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡಿದ್ದುನಕ್ಸಲ್ ನಿಗ್ರಹ ಪಡೆ ಎನ್ಕೌಂಟರ್ಗೆ ನಕ್ಸಲ್ ನಾಯಕ ವಿಕ್ರಂ ಗೌಡ ಬಲಿ ಆಗಿದ್ದಾರೆ. ಜಿಲ್ಲೆಯಲ್ಲಿ ಗುಂಡಿನ ಮೊರೆತ ಕೇಳಿದೆ. ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ದಾನೆ. https://ainlivenews.com/do-you-know-doddapatre-has-the-ability-to-eliminate-the-biggest-health-problem/ ಉಡುಪಿಯ ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ (Kabbinale Forest) ನಕ್ಸಲ್ ನಿಗ್ರಹ ಪಡೆ (ANF) ಎನ್‌ಕೌಂಟರ್ ಮಾಡಿ ವಿಕ್ರಂ ಗೌಡನನ್ನು ಹತ್ಯೆ ಮಾಡಿದೆ. ಮಂಗಳವಾರ ನಸುಕಿನ ಜಾವ ನಡೆದ ಗುಂಡಿನ ಕಾಳಗದಲ್ಲಿ ಎರಡು, ಮೂರು ನಕ್ಸಲರು ಗಾಯಗೊಂಡಿದ್ದು ಅವರಿಗೆ ಅರಣ್ಯದಲ್ಲಿ (Forest) ಶೋಧ ಕಾರ್ಯ ನಡೆಯುತ್ತಿದೆ. ಯಾರು ಈ ವಿಕ್ರಂ ಗೌಡ? ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿರುವ ವಿಕ್ರಂ ಗೌಡನ ಮೂಲ ಉಡುಪಿ ಹೆಬ್ರಿ ತಾಲೂಕಿನ ಕೂಡ್ಲು ನಾಡ್ವಾಲು ಗ್ರಾಮ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯ ನಾಯಕತ್ವ…