Author: AIN Author

ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿ ಸುಲಿಗೆ ಮಾಡಿದ್ದ ಯುವಕ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿರುವ ಬಡಾವಣೆ ಪೊಲೀಸರು ಬಂಧಿತನಿಂದ 70 ಸಾವಿರ ರೂಪಾಯಿ ಮೌಲ್ಯದ ಆಕ್ಟೀವ್ ಹೊಂಡಾ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ದಾವಣಗೆರೆಯ ಪಿಬಿ ರಸ್ತೆಯಲ್ಲಿ ರೇಡಿಯಂ ಸ್ಟೀಿಕ್ಕರ್ ಕೆಲಸ ಮಾಡುತ್ತಿದ್ದ ಸಂಗಮೇಶ್ (20) ಬಂಧಿತ ಆರೋಪಿ. ದೇವರಾಜ್ ಅರಸ್ ಬಡಾವಣೆಯ ಪಿ. ಕೆ. ಆಕಾಶ್ (18) ಎಂಬಾತ ಕಳೆದ ಮಾ. 6ರಂದು ರಾತ್ರಿ ಸಮಯದಲ್ಲಿ ಸಾಯಿ ಇಂಟರ್ ನ್ಯಾಷನಲ್ ಹೊಟೇಲ್‌ನಲ್ಲಿ ಕೆಲಸ ಮುಗಿಸಿಕೊಂಡು ದಾವಣಗೆರೆ ಪಿ.ಬಿ ರಸ್ತೆಯ ಟಿ.ವಿ.ಎಸ್ ಶೂ ರೂಂ ಹಾಗೂ ಭಾರತ್ ಪೇಟ್ರೋಲ್ ಬಂಕ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ದೇವರಾಜ್ ಅರಸ್ ಬಡಾವಣೆಯ ರೂಂಗೆ ಹೋಗುತ್ತಿದ್ದಾಗ ಆಗ ಸಂಗೊಳ್ಳಿ ರಾಯಣ್ಣ ಸರ್ಕಲ್ ಕಡೆಯಿಂದ ಯಾರೋ ಇಬ್ಬರು ಆಪರಿಚಿತ ವ್ಯಕ್ತಿಗಳು ಸ್ಕೂಟಿಯಲ್ಲಿ ಬಂದು ಎಣ್ಣೆ ಅಂಗಡಿ ಎಲ್ಲಿದೆ ಎಂದು ಕೇಳಿದ್ದಾರೆ. ಆಗ ಆಕಾಶ್ ಮುಂದೆ ಇದೇ ಹೋಗಿ ಎಂದಿದ್ದಾರೆ. ನಾವು ಹೊಸಬರು ನೀನು…

Read More

ಕಲಬುರಗಿ: ಕಲಬುರಗಿಯ ಖರ್ಗೆ ಕೋಟೆಗೆ ಇಂದು ಲಗ್ಗೆ ಇಡಲಿದ್ದಾರೆ ನಮೋ.ಹೌದು ಲೋಕ ಅಖಾಡಕ್ಕೆ ಸಜ್ಜಾದ ಕೇಸರಿಪಡೆಗೆ ಪ್ರಧಾನಿ ಮೋದಿ ಬೂಸ್ಟ್ ನೀಡಲು ಇಂದು ಕಲಬುರಗಿಗೆ ಆಗಮಿಸಲಿದ್ದಾರೆ. ಅಖಾಡದಲ್ಲಿ ಕಾಂಗ್ರೆಸ್ ಕಟ್ಟಿಹಾಕಲು ನಮೋ ಕಲಬುರಗಿಯಿಂದ್ಲೇ ರಣಕಹಳೆ ಶುರುಮಾಡಲಿದ್ದು, ಕಾರಣ ಎಐಸಿಸಿ ಅಧ್ಯಕ್ಷರ ತವರೂರು  ಮೊದಲ ಟಾರ್ಗೆಟ್ ಮಾಡಿದೆ ಮೋದಿ ಟೀಂ. ಪ್ರಧಾನಿ ಮೋದಿ ಆಗಮನಕ್ಕೆಇನ್ನೇನು ಕೆಲವೇ ಗಂಟೆಗಳು ಬಾಕಿ  ಇದ್ದು, ಎನ್ ವಿ ಮೈದಾನದಲ್ಲಿ ಮಧ್ಯಾನ 2 ಗಂಟೆಗೆ ನಮೋ ಭಾಷಣ ಮಾಡಲಿದ್ದಾರೆ.

Read More

ಹುಬ್ಬಳ್ಳಿ: ದೃಢ ನಿರ್ಧಾರ, ಸಾಧಿಸುವ ಛಲ ಹಾಗೂ ಸ್ವ ಪ್ರಯತ್ನದಿಂದ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದ್ದಾರೆ. ಹುಬ್ಬಳ್ಳಿ ನಗರ ಸಾರಿಗೆ ಬಸ್ ಘಟಕದಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ಮಹಿಳೆಯರು ಅಡಿಗೆ ಮನೆಗಷ್ಟೇ ಸೀಮಿತವಾಗಿಲ್ಲ. ಸವಾಲುಗಳನ್ನು ಮೆಟ್ಟಿ ಕೌಟುಂಬಿಕ ಹಾಗೂ ವೃತ್ತಿ ಬದುಕು ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸಾರಿಗೆ ಸಂಸ್ಥೆಯಲ್ಲಿ ಹೆಚ್ಚುಕಡಿಮೆ ಎಲ್ಲಾ ಹಂತದ ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಐವರು ಡಿಪೊ ಮ್ಯಾನೇಜರಗಳಲ್ಲಿ ಮೂವರು ಮಹಿಳೆಯರಿದ್ದಾರೆ. ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳಿಗೆ ಕರ್ತವ್ಯ ನಿಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಸಿವಿಲ್ ಕಾಂಟ್ರಾಕ್ಟರ ಉದ್ಯೋಗ ದಲ್ಲಿ ಯಶಸ್ವಿಯಾಗಿ ನಂತರ ಸ್ವಂತ ಗಾರ್ಮೆಂಟ್ ಸ್ಥಾಪಿಸುವ ಮೂಲಕ ನೂರಾರು ಬಡ ಮಹಿಳೆಯರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆದಿರುವ ಮಹಿಳಾ…

Read More

ಕಲಬುರಗಿ: ಕೆ ಎಸ್ ಈಶ್ವರಪ್ಪ ಬಂಡಾಯ ಎದ್ದು ಪಕ್ಷೆತರ ಸ್ಪರ್ಧೆ ವಿಚಾರ ಹಿರಿಯರ ಗಮನಕ್ಕಿದ್ದು ಎಲ್ಲವೂ ಬಗೆಹರಿಯಲಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ .ಕಲಬುರಗಿಯಲ್ಲಿಂದು ಮಾತನಾಡಿದ ವಿಜಯೇಂದ್ರ ಮಾನ್ಯ ಈಶ್ವರಪ್ಪನವರಿಗೆ ಭಗವಂತ ಒಳ್ಳೆಯದನ್ನ ಮಾಡಲಿ ಅಂತಾ ನಾನು ಹಾರೈಸ್ತೆನೆ ವಾಸ್ತವಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು ನಿರ್ಧಾರ ವಾಪಸ್ ಪಡೆಯುತ್ತಾರೆ. ಅನ್ನೋ ನಂಬಿಕೆ ಇದೆ ಅಂದ್ರು. ಈಗಲೂ ನಮ್ಮ ನಾಯಕರು ಈಶ್ವರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ ಎಲ್ಲರೂ ಸೇರಿ ಮನವೋಲಿಸುವ ಪ್ರಯತ್ನ ಮಾಡ್ತಾರೆ. ಕಲಬುರಗಿ ಬೀದರ್ ಇರಲಿ ಯಾವುದೇ ಲೋಕಸಭಾ ಇರಬಹುದು ಎಲ್ಲ ಅಭ್ಯರ್ಥಿ ಗಳನ್ನ ತೀರ್ಮಾನ ಮಾಡಿರೋದು ಹೈಕಮಾಂಡ್ ಅಂತ ಹೇಳಿದ್ರು.

Read More

ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರದ ಸ್ಪರ್ಧೆಗೆ ಜಗದೀಶ್ ಶೆಟ್ಟರ್ ಹೆಸರು ಫೈನಲ್ ಮಾಡುವ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ವಿರೋಧ ವ್ಯಕ್ತವಾಗಿದೆ. ಪ್ರಭಾಕರ್ ಕೋರೆ ಮನೆಯಲ್ಲಿ ರಹಸ್ಯ ಸಭೆ ವಿಚಾರವಾಗಿ ಮಾತನಾಡಿದ ಅಭಯ್ ಪಾಟೀಲ್, ಕೋರ್ ಕಮಿಟಿ ಸಭೆಯಲ್ಲಿ ಅನೇಕ ವಿಷಯಗಳು ಚರ್ಚೆ ಆಗಿವೆ. ಅದನ್ನ ಹಿರಿಯರ ಗಮನಕ್ಕೆ ತರುವ ಕೆಲಸ ಸಾಮೂಹಿಕವಾಗಿ ಮಾಡಲಾಗುತ್ತದೆ. ಒಬ್ಬರೆ ಟಿಕೆಟ್ ಫೈನಲ್ ಮಾಡುವಂತದ್ದು ಅಲ್ಲ, ಪಕ್ಷದ ಎಲ್ಲರೂ ಕೂಡಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಕಳೆದ ಬಾರಿ ಲೀಡ್​ಗಿಂತ 10 ಪಟ್ಟು ಹೆಚ್ಚಿನ ಲೀಡ್ ಪಡೆದುಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇವೆ. ಟಿಕೆಟ್ ವಿಚಾರ ಬಂದಾಗ ಅದನ್ನೂ ಚರ್ಚೆ ಮಾಡುತ್ತೇವೆ ಎಂದರು. ಜಿಲ್ಲೆಯ ಪ್ರತಿಯೊಬ್ಬರು ಅಪೇಕ್ಷಿತರಿದ್ದಾರೆ. https://ainlivenews.com/a-man-who-used-to-sell-coriander-leaves-is-now-a-bollywood-star-actor/ ಈ ಹಿಂದೆ ಬಾಬಾಗೌಡ, ಸುರೇಶ್ ಅಂಗಡಿ ಹಾಗೂ ಮಂಗಲಾ ಅಂಗಡಿಯವರು ನಮ್ಮ ಜಿಲ್ಲೆಯವರಿದ್ದರು. ನಮ್ಮ ಜಿಲ್ಲೆಯವರೇ ಅಭ್ಯರ್ಥಿ ಆಗಬೇಕು ಎಂಬುದು ಎಲ್ಲರ ಅಪೇಕ್ಷೆ ಇದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೊರಗಿನವರಿಗೆ ಟಿಕೆಟ್ ನೀಡದಂತೆ ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

Read More

ನವದೆಹಲಿ: ರೋಚಕ ಪಂದ್ಯದಲ್ಲಿ ಜಿದ್ದಾ-ಜಿದ್ದಿ ಹೋರಾಟ ನಡೆಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಮೊದಲ ಬಾರಿಗೆ ಫೈನಲ್‌ ತಲುಪಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 135 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 130 ರನ್‌ ಗಳಿಸಿ 5 ರನ್‌ಗಳ ಅಂತರದಲ್ಲಿ ಸೋಲನುಭವಿಸಿತು. ಕೊನೇ ಓವರ್‌ನ ರೋಚಕತೆ ಹೇಗಿತ್ತು? ಕೊನೇ 6 ಎಸೆತಗಳಲ್ಲಿ ಮುಂಬೈ ಗೆಲುವಿಗೆ 12 ರನ್‌ಗಳ ಅಗತ್ಯವಿತ್ತು. ಮೊದಲ 2 ಎಸೆತಗಳಲ್ಲಿ 2 ರನ್‌ ಮುಂಬೈ ತಂಡಕ್ಕೆ ಸೇರ್ಪಡೆಯಾಯಿತು. 3ನೇ ಎಸೆತದಲ್ಲಿ 2 ರನ್‌ ತಂದು ಕೊಟ್ಟ ಪೂಜಾ ವಸ್ತ್ರಕಾರ್‌ 4ನೇ ಎಸೆತದಲ್ಲಿ ಸ್ಟಂಪ್‌ ಔಟ್‌ಗೆ ತುತ್ತಾದರು. ಇದರಿಂದ ಪಂದ್ಯ ಮತ್ತಷ್ಟು ರೋಚಕ ಹಂತಕ್ಕೆ ತಲುಪಿತ್ತು. ಅಭಿಮಾನಿಗಳ ಎದೆ ಬಡಿತ ಹೆಚ್ಚಾಗಿತ್ತು, ಪದೇ ಪದೇ ಆರ್‌ಸಿಬಿ ಆರ್‌ಸಿಬಿ…

Read More

ಬೆಂಗಳೂರು: ಲೋಕ ಸಮರದ ಅಖಾಡ ರಂಗೇರಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಡಾಕ್ಟರ್ ಮಂಜುನಾಥ್ ಸಮರ್ಥ ಅಭ್ಯರ್ಥಿ ಆಗಿದ್ರೆ,ಜೆಡಿಎಸ್ ಪಕ್ಷದಿಂದ ನಿಲ್ಲಬೇಕಿತ್ತು ಎಂದು ಡಿ.ಕೆ.ಸುರೇಶ್ ವ್ಯಂಗ್ಯ ಮಾಡಿದ್ರೆ,ನಿಮಗೆ ಹೃದಯ ಬೇಕಾ..? ಬಂಡೆ ಬೇಕಾ ಎಂದು ಜೆಡಿಎಸ್ ಕ್ಯಾಂಪೇನ್ ಶುರು ಮಾಡಿದೆ.  ಯೆಸ್,ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಎಲ್ಲರ ಗಮನ ಸೆಳೆದಿತ್ತು.ಇದೀಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ  ಎಲ್ಲರ ಗಮನ ಸೆಳೆಯುತ್ತಿದೆ. ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ರೆ,ಡಾ.ಸಿ.ಎನ್.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ,ಇಬ್ಬರ ನಡುವೆ ಕುರುಕ್ಷೇತ್ರ ವಾರ್ ಪ್ರಾರಂಭವಾಗಿದೆ.ಬೆಂಗಳೂರು ಗ್ರಾಮಾಂತರದಲ್ಲಿ ಈ ಬಾರಿ ವ್ಯಕ್ತಿ ಆಧಾರಿತ ಚುನಾವಣೆ ನಡೆಯೋದು ಖಚಿತವಾಗಿದೆ. ಡಿ.ಕೆ.ಬ್ರದರ್ಸ್ ಸೋಲಿನ ರುಚಿ ತೋರಿಸಲು ಎನ್ ಡಿ ಎ ಪಾರ್ಟರ್ಸ್ ರಣತಂತ್ರ ನಡೆಸಿದ್ದಾರೆ.ಬಿಜೆಪಿ-ಜೆಡಿಎಸ್ ತಂತ್ರಕ್ಕೆ ಕೌಂಟರ್ ಕೊಡಲು ಡಿಕೆ ಬ್ರದರ್ಸ್ ಕೂಡ ತಮ್ದೇ ಆದಾ ಸ್ಟಾಟ್ರಜಿ ಮಾಡುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಬೆಂಗಳೂರು ಲೋಕಸಭಾ ಕ್ಷೇತ್ರದ ಕೈ ನಾಯಕರ ಜೊತೆ ಡಿ.ಕೆ.ಬ್ರದರ್ಸ್ ಬ್ರೇಕ್ ಪಾಸ್ಟ್ ಮೀಟಿಂಗ್…

Read More

ಬೆಂಗಳೂರು: ಮಂತ್ರಿ ಮಾಲ್‌ʼಗೆ ಬೀಗ ಜಡಿದು ಪರವಾನಗಿ ರದ್ದು ಮಾಡಲಾಗಿದೆ. ಹೌದು ಕೋಟಿ ಕೋಟಿ ರೂಪಾಯಿ ತೆರಿಗೆ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್​ಗೆ ಬೀಗ ಜಡಿದಿದ್ದಾರೆ. ಸುಮಾರು 32 ಕೋಟಿ ವರೆಗೂ ಮಂತ್ರಿ ಮಾಲ್​ ತೆರಿಗೆ ಪಾವತಿ ಉಳಿಸಿಕೊಂಡಿದೆಯಂತೆ. ಈ ಹಿಂದೆಯೂ ಅನೇಕ ಬಾರಿ ತೆರಿಗೆ ವಿಚಾರವಾಗಿ ಮಾಲ್ ಗೆ ಬೀಗ ಹಾಕಲಾಗಿತ್ತು. ಇದೀಗ ಮತ್ತೆ ಇಂದು ಮಾಲ್ ಗೆ ಬೀಗ ಹಾಕಿದ್ದು, ಮುಖ್ಯ ಪ್ರವೇಶ ದ್ವಾರಕ್ಕೆ ಅಧಿಕಾರಿಗಳು ಬೀಗ ಜಡಿದಿರುವುದನ್ನು ಕಂಡು ಎಂದಿನಂತೆ ಕೆಲಸಕ್ಕೆ ಬಂದಿದ್ದ ಸಿಬ್ಬಂದಿ ಶಾಕ್ ಆಗಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಮಾರ್ಷಲ್ ಹಾಗೂ ಪೊಲೀಸರ ಬಿಗಿ ಭದ್ರತೆಯಲ್ಲಿ ಮಾಲ್ ಗೆ ಬೀಗ ಹಾಕಿದ್ದಾರೆ. https://ainlivenews.com/a-man-who-used-to-sell-coriander-leaves-is-now-a-bollywood-star-actor/ ಎಂದಿನಂತೆ ಕೆಲಸಕ್ಕೆ ‌ಬಂದಿರುವ ಬಟ್ಟೆ, ಸೂಪರ್ ಮಾರ್ಕೆಟ್, ಮೇಕ್ ಅಪ್ ಸೇರಿ ಮಾಲ್ ಒಳಗಿರುವ ಹಲವು ಮಳಿಗೆಗಳ ಸಿಬ್ಬಂದಿ ಕಂಗಲಾಗಿ ಹೊರ ಭಾಗದಲ್ಲಿ ಕುಳಿತ್ತಿದ್ದ ದೃಶ್ಯಗಳು ಕಂಡು ಬಂತು. ಈ ಹಿಂದೆಯೂ ಅನೇಕ…

Read More

ಬೆಂಗಳೂರು: ಎಲೆಕ್ಷನ್ ಬಾಂಡ್ ಅಕ್ರಮದ ವಿಚಾರವಾಗಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾ ಕಾವೂಂಗಾ ನಾ ಕಾನೇದೂಂಗಾ ಅಂತ ಹೇಳೊ ಮೋದಿ ತಾವೇ ಅಕ್ರಮದಲ್ಲಿ ತೊಡಗಿದ್ದಾರೆ. ಸುಪ್ರೀಂ ಕೋರ್ಟ್ ಬಿಜೆಪಿ ಚುನಾವಣೆ ಬಾಂಡ್ ಹೆಸರಿನಲ್ಲಿ ಹೇಗೆ ಹಣ ಮಾಡುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ. SBI ನೀಡಿರುವ ಅಂಕಿ ಅಂಶಗಳ ಪ್ರಕಾರ ಶೇ.50ರಷ್ಟು ದೇಣಿಗೆಯನ್ನು ಬಿಜೆಪಿ ಪಡೆದರೆ, ಕಾಂಗ್ರೆಸ್ ಪಕ್ಷ ಕೇವಲ ಶೇ.11ರಷ್ಟು ದೇಣಿಗೆ ಪಡೆದಿದೆ. https://ainlivenews.com/a-man-who-used-to-sell-coriander-leaves-is-now-a-bollywood-star-actor/ ಬಿಜೆಪಿಯವರು ಇಷ್ಟು ದೊಡ್ಡ ಪ್ರಮಾಣದಲ್ಲಿ ದೇಣಿಗೆ ಪಡೆಯಲು ಹೇಗೆ ಸಾಧ್ಯ. ಇದರಲ್ಲಿ ಅನೇಕ ನಕಲಿ ದೇಣಿಗೆದಾರರಿದ್ದಾರೆ ಇವರಲ್ಲಿ ಬಹುತೇಕರು ಇಡಿ, ಆದಾಯ ತೆರಿಗೆ ಹಾಗೂ ಇತರೆ ತನಿಖಾ ಸಂಸ್ಥೆಗಳ ಪ್ರಕರಣ ಎದುರಿಸುತ್ತಿರುವವರು. ಮೊದಲು ಇಡಿ ದಾಳಿ ನಡೆಸಿ ನಂತರ ಮೋದಿ ಹಾಗೂ ಅವರ ಪಕ್ಷ ಹೆಚ್ಚಿನ ದೇಣಿಗೆ ನೀಡಲು ಬೆದರಿಕೆ ಹಾಕುತ್ತಾರೆ.  ಕಾಂಗ್ರೆಸ್ ಪಕ್ಷದ ಖಾತೆಯಲ್ಲಿರುವ 300 ಕೋಟಿ ಹಣವನ್ನು ಸೀಜ್ ಮಾಡಿದ್ದಾರೆ ಆದ್ರೆ…

Read More

ಬೆಂಗಳೂರು: ಬೆಳ್ಳಂಬೆಳಿಗ್ಗೆ ರಾಜ್ಯ ರಾಜಕಾರಣದಲ್ಲೊಂದು ಶಾಕಿಂಗ್ ಸುದ್ದಿ  ಗೃಹಸಚಿವರನ್ನೇ ಅಲರ್ಟ್ ಆಗುವಂತೆ ಮಾಡ್ತು. ಸದಾಶಿವನಗರ ಠಾಣೆಯಲ್ಲಿ ಮಾಜಿ‌ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಫೋಕ್ಸೋ ಕೇಸ್ ದಾಖಲಾಗಿದ್ದು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ವಿಚಾರ ಇದೀಗ CID ಹಂತಕ್ಕೆ ಹೋಗಿದ್ದು ಮಾಜಿ‌ ಸಿಎಂಗೆ ಆತಂಕ ತಂದೊಡ್ಡಿದೆ.‌‌‌‌. ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಇಷ್ಟು ದಿನ ಅಕ್ರಮ ಹಣದ ಆರೋಪಗಳು ಕೇಳಿಬರ್ತಿದ್ದೊ, ಇದೀಗ ಬೆಚ್ಚಿಬೀಳಿಸುವ ಆರೋಪವೊಂದು ಕೇಳಿಬಂದಿದ್ದು ರಾಜ್ಯದ ಜನಕ್ಕೆ ಶಾಕ್ ಕೊಟ್ಟಿದೆ. ಯಡಿಯೂರಪ್ಪ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪೋಕ್ಸೋ ಕೇಸ್ ನಡಿ FIR ದಾಖಲಾಗಿದೆ ಅಷ್ಟಕ್ಕೂ ಏನಿದು ಪ್ರಕರಣ ಅಂತ ನೋಡೋದಾದ್ರೆ.  ಕಳೆದ ಫೆಬ್ರವರಿಯಲ್ಲಿ ತಾಯಿ ಮತ್ತು ಅಪ್ರಾಪ್ತ ಮಗಳು ಇಬ್ಬರು ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ಅಪ್ರಾಪ್ತೆಯ ಮೇಲೆ ಈ ಹಿಂದೆ ಅಗಿದ್ದ ಅತ್ಯಾಚಾರದ ಬಗ್ಗೆ ಸಹಾಯಯಾಚಿಸಲು ಬಂದಿದ್ದಾಗ 9 ನಿಮಿಷಗಳ ಕಾಲ ಮೊದಲು ಮಾತನಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ. https://ainlivenews.com/a-man-who-used-to-sell-coriander-leaves-is-now-a-bollywood-star-actor/…

Read More