Author: AIN Author

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಹಂಚಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದೆಹಲಿಯಿಂದ ವಾಪಸ್‌ ಆದ ಬಳಿಕ ಹೆಚ್‌ಡಿಕೆ, ಬಿಜೆಪಿ ನಾಯಕರ ಭೇಟಿ ಮಾಡಿದ್ದೇವೆ. ಮೂರು ಸೀಟು ಕೇಳಿದ್ದೇವೆ, ತೆಗೆದುಕೊಳ್ತೀವಿ. ಚುನಾವಣೆಗೆ ಎಲ್ಲಾ ರೆಡಿಯಾಗಿದ್ದೀವಿ. ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.  ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಅದನ್ನು 25ರ ನಂತರ ಹೇಳ್ತೀನಿ. ನನಗೆ ಆರೋಗ್ಯ ಸಮಸ್ಯೆ ಇದೆ. https://ainlivenews.com/great-job-opportunities-for-puc-passers-salary-%e2%82%b963000-per-month-apply-now/ ಚಿಕಿತ್ಸೆ ನಂತರ ಮಾತಾಡ್ತೀನಿ ಎಂದು ಮಾತನಾಡಿದ್ದಾರೆ. ಹೆಚ್‌.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಶನಿವಾರ ಭೇಟಿಯಾಗಿದ್ದರು. ಮೈತ್ರಿ ಟಿಕೆಟ್‌ ಅಂತಿಮಗೊಳಿಸುವ ವಿಚಾರವಾಗಿ ಭೇಟಿ ಮಾಡಿದ್ದರು ಎನ್ನಲಾಗಿತ್ತು. ಹೆಚ್‌ಡಿಕೆಗೆ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್‌ ಸಾಥ್‌ ನೀಡಿದ್ದರು.

Read More

ಸ್ಯಾಂಡಲ್ ವುಡ್ ಅಂಗಳದ ಇಬ್ಬರು ಪ್ರತಿಭಾನ್ವಿತ ನಟರಾದ ಸಲಾರ್ ಪ್ರಮೋದ್ ಹಾಗೂ ದಿಯಾ ಪೃಥ್ವಿ ಅಂಬಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಭುವನಂ ಗಗನಂ. ಈ ಚಿತ್ರದ ನಿರ್ಮಾಪಕ ಎಂ. ಮುನೇಗೌಡ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ. ಬೆಂಗಳೂರಿನ ಡಾ.ರಾಜಕುಮಾರ ಇಂಡೋರ್ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಟ ನೆನಪಿರಲಿ ಪ್ರೇಮ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವರು ಉಪಸ್ಥಿತಿದ್ದರು. ಟೀಸರ್ ರಿಲೀಸ್ ಬಳಿಕ ಧ್ರುವ ಸರ್ಜಾ ಮಾತನಾಡಿ, ಚಿತ್ರದ ಟೈಟಲ್ ಕೇಳಿದ ತಕ್ಷಣ ನನಗೆ ನೆನಪಾಗಿದ್ದು, ಭುವನಂ ಗಗನಂ ಸಾಂಗ್. ವಂಶಿ ಚಿತ್ರದ್ದು. ಪುನೀತ್ ಸರ್ ನೆನಪಾದರು. ಅಪ್ಪು ಸರ್ ಗೆ ಬರ್ತ್ ಡೇ ವಿಷ್ ಮಾಡ್ತಾ ಮಾತನಾಡಲು ಶುರು ಮಾಡುತ್ತೇನೆ. ನಾನು ಇವತ್ತು ಇಲ್ಲಿಗೆ ಬರಲು ಮುಖ್ಯ ಕಾರಣ ಈ ಚಿತ್ರದ ಟೆಕ್ನಿಷಿಯನ್ಸ್. ನಮ್ಮ ಅಣ್ಣ ಹಾಗೂ…

Read More

ಮುಂಬೈ: ಈ ಬಾರಿ ಲೋಕಸಭಾ ಚುನಾವಣೆ ಹೊರತಾಗಿಯೂ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸುವುದಿಲ್ಲ. ಸಂಪೂರ್ಣ ಲೀಗ್‌ ಭಾರತದಲ್ಲೇ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ಸ್ಪಷ್ಟನೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳು ಭಾರತದಲ್ಲಿ ನಡೆಯಲಿದ್ದು, ಉಳಿದ ಪಂದ್ಯಗಳು ದುಬೈಗೆ ಸ್ಥಳಾಂತರಿಸಲಾಗುತ್ತದೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು. ಈ ಬೆನ್ನಲ್ಲೇ ಜಯ್‌ ಶಾ ಸ್ಪಷ್ಟನೆ ನೀಡಿದ್ದಾರೆ. https://ainlivenews.com/great-job-opportunities-for-puc-passers-salary-%e2%82%b963000-per-month-apply-now/ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಈ ಹಿಂದೆ ಮಾಡಿದಂತೆ ಟೂರ್ನಿಯನ್ನು ಸ್ಥಳಾಂತರಿಸುವುದಿಲ್ಲ. ಈ ಬಾರಿ ಸಂಪೂರ್ಣ ಐಪಿಎಲ್‌ ಭಾರತದಲ್ಲೇ ನಡೆಯಲಿದೆ. ಯಾವುದೇ ಕಾರಣಕ್ಕೂ ಸ್ಥಳಾಂತರಿಸುವುದಿಲ್ಲ. ಚುನಾವಣೆಗೂ ಸಮಸ್ಯೆಯಾಗದಂತೆ ಉಳಿದ ವೇಳಾಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿ ಬಿಸಿಸಿಐ ಮಂಡಳಿ ತೊಡಗಿದೆ. ಶೀಘ್ರವೇ ಅದನ್ನು ಸಾರ್ವಜನಿಕಗೊಳಿಸಲಿದೆ ಎಂದು ತಿಳಿಸಿದ್ದಾರೆ. ಐಪಿಎಲ್‌ ಆರಂಭ ಯಾವಾಗ? ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಇದೇ ಮಾರ್ಚ್‌ 22 ರಿಂದ ಆರಂಭವಾಗಲಿದೆ. ಲೋಕಸಭಾ ಚುನಾವಣೆ (Lok Sabha…

Read More

ಬೆಂಗಳೂರು: ನಾವು ಆಪರೇಷನ್‌ಗೆ ಸಿದ್ದರಿದ್ದೆವು, ಒಳ್ಳೆಯ ಹುಲಿಗಳು ಇದ್ದವು. ಆದರೆ ನಮ್ಮವರೇ ಕೆಲವರು ಕರೆತರಲು ಒಪ್ಪಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, 20 ಸೀಟಿಗಿಂತ ಹೆಚ್ಚು ಗೆದ್ದೇ ಗೆಲ್ಲುತ್ತೇವೆ. ಅಷ್ಟು ಆತ್ಮವಿಶ್ವಾಸ ನಮಗಿದೆ. ಬಿಜೆಪಿಯವರ (BJP) ಗೊಂದಲ ನೀವು ನೋಡುತ್ತಿದ್ದೀರಿ. ನಮ್ಮ ಟಿಕೆಟ್‌ ಘೋಷಣೆ ಆದಮೇಲೆ ಯಾವುದು ಗೊಂದಲ ಆಗಲ್ಲ ಎಂದರು.  https://ainlivenews.com/great-job-opportunities-for-puc-passers-salary-%e2%82%b963000-per-month-apply-now/ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಸಂತೋಷದಿಂದ ಆತ್ಮವಿಶ್ವಾಸದಿಂದ ಎದುರಿಸುತ್ತೇವೆ. ನಮ್ಮ ಕಾರ್ಯಕರ್ತರು ಮತದಾರರು ಎಲ್ಲರ ಜೊತಗೂ ನಾವು ಏಳೆಂಟು ತಿಂಗಳಿನಿಂದ ತಯಾರಿ ಮಾಡಿದ್ದೇವೆ. ನುಡಿದಂತೆ ನಡೆದು ತೋರಿಸಿದ್ದರಿಂದ ಬಹಳ ಆತ್ಮವಿಶ್ವಾಸದಿಂದ ನಾವು ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದರು. ಮಾರ್ಚ್‌ 19ರ ರಾತ್ರಿ ಅಥವಾ 20 ರ ಬೆಳಿಗ್ಗೆ ನಮ್ಮ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತೇವೆ. ಆಡಳಿತರೂಡ ಪಕ್ಷದವರು ತಮಗೆ ಅನುಕೂಲಕ್ಕೆ ತಕ್ಕಂತೆ ದಿನಾಂಕ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.

Read More

ಬೆಂಗಳೂರು: ಚಿನ್ನದ ಅಂಗಡಿ ಮಾಲೀಕರೇ ಹುಷಾರ್..ಹುಷಾರ್..! ಇದೊಂದು ಖತರ್ನಾಕ್ ಜೋಡಿ ನಿಮ್ಮ ಅಂಗಡಿಗೆ ಎಂಟ್ರಿ ಕೊಟ್ರೆ ಮುಗಿತು. ಹೌದು  ಚಿನ್ನಾಭರಣ ಖರೀದಿಸಿ ಯುಪಿಐ ಪಾವತಿಯ ಸೋಗಿನಲ್ಲಿ ವಂಚಿಸುತ್ತಿದ್ದ ಜೋಡಿಯೊಂದನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಂದನ್ ಹಾಗೂ ಕಲ್ಪಿತಾ ಬಂಧಿತರು. ಹದಿನೈದು ದಿನಗಳ ಹಿಂದೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿಯ ಪರಮೇಶ್ ಜ್ಯುವೆಲ್ಲರಿ ಅಂಗಡಿಗೆ ಹೋಗಿದ್ದ ಆರೋಪಿಗಳು, 1.65 ಲಕ್ಷ ರೂ ಮೌಲ್ಯದ 36 ಗ್ರಾಂ ಚಿನ್ನಾಭರಣ ಖರೀದಿಸಿದ್ದರು. ಹಣ ಪಾವತಿಸುವಾಗ ಯುಪಿಐ ಪೇಮೆಂಟ್ ಆ್ಯಪ್​ ಬಳಸಿಕೊಂಡು ನಕಲಿ ಹಣ ಪಾವತಿಸಿರುವಂತೆ ತೋರಿಸಿದ್ದರು. ಅಂಗಡಿ ಮಾಲೀಕರು ನಂತರ ಪರಿಶೀಲನೆ ನಡೆಸಿದಾಗ ಹಣ ಖಾತೆಗೆ ಜಮೆ ಆಗದಿರುವುದು ಪತ್ತೆಯಾಗಿತ್ತು. ‌ https://ainlivenews.com/great-job-opportunities-for-puc-passers-salary-%e2%82%b963000-per-month-apply-now/ ತಕ್ಷಣ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಜೋಡಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಗಳು ತಾವು ವಂಚಿಸಿದ ಚಿನ್ನವನ್ನು ಬೇರೊಂದು ಕಡೆ 1.30 ಲಕ್ಷ ರೂ.ಗೆ ಅಡಮಾನ ಇಟ್ಟಿದ್ದರು. ಇದೇ ಮಾದರಿಯಲ್ಲಿ ಹಲವು ಅಂಗಡಿಗಳಲ್ಲಿ ನಕಲಿ…

Read More

8,470 ಕೋಟಿ ರೂ. ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನೋಟುಗಳು ಇನ್ನೂ ಜನರ ಬಳಿಯಲ್ಲೇ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್‌ಬಿಐ ನಿರ್ಧಾರ ಮಾಡಿದ ಬಳಿಕ ಇವರೆಗೂ ಒಟ್ಟು ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಶೇ. 97.62ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. 2023ರ ಮೇ 19 ರಂದು ಭಾರತೀಯ ರಿಸರ್ವ್ ಬ್ಯಾಂಕ್ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯಲು ನಿರ್ಧಾರ ಮಾಡಿತ್ತು. ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿದ್ದ ಆರ್‌ಬಿಐ, ಜನರು ತಮ್ಮ ಬಳಿ ಇರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹೇಗೆ ಪರಿವರ್ತನೆ ಮಾಡಿಕೊಳ್ಳಬಹುದು ಎಂದು ವಿವರಿಸಿತ್ತು. 2023ರ ಮೇ 19 ರಿಂದ 2023ರ ಅಕ್ಟೋಬರ್ 9ರವರೆಗೂ 2 ಸಾವಿರ ರೂಪಾಯಿ ನೋಟುಗಳನ್ನು ಸಾರ್ವಜನಿಕರಿಂದ ಹಿಂಪಡೆಯಲು ಆರ್‌ಬಿಐ ಕಚೇರಿಯಲ್ಲಿ ಅವಕಾಶ ಮಾಡಿಕೊಟ್ಟಿತ್ತು. ಜನರು ತಾವು…

Read More

ಬೆಳಗಾವಿ: ಬೆಳಗಾವಿ ಲೋಕಸಭೆ ಟಿಕೆಟ್ ಜಗದೀಶ್ ಶೆಟ್ಟರ್ ಅವರಿಗೆ ನೀಡದಂತೆ ಬೆಳಗಾವಿ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೌದು ಯಾವುದೇ ಕಾರಣಕ್ಕೂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದಂತೆ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು, ಕೆಲ ಮುಖಂಡರ ಪಟ್ಟು ಹಿಡಿದಿದ್ದಾರೆ. ಇಷ್ಟೇ ಅಲ್ಲದೆ ಟಿಕೆಟ್ ನೀಡುವುದನ್ನು ವಿರೋಧಿಸಿ ದೆಹಲಿಗೆ ಹೋಗಲು ಮುಖಂಡರ ಪ್ಲ್ಯಾನ್ ಮಾಡಿದ್ದಾರೆ. ಈ ವಿಚಾರವಾಗಿ ಪ್ರಭಾಕರ್ ಕೋರೆ ಮನೆಯಲ್ಲಿ ಶಾಸಕ ಅಭಯ್ ಪಾಟೀಲ್, ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ, ಮಹಾಂತೇಶ ಕವಟಗಿಮಠ, ಎಂ‌.ಬಿ.ಜಿರಲೆ ಸಭೆ ಸೇರಿದ್ದರು. ಸಭೆಯಲ್ಲಿ ರಾಜ್ಯಸಭಾ ಸದಸ್ಯ ಕಡಾಡಿ ನೇತೃತ್ವದಲ್ಲಿ ದೆಹಲಿಗೆ ಹೋಗಲು ಪ್ಲ್ಯಾನ್ ಮಾಡಿದ್ದಾರೆ. ಇನ್ನೇರಡು ದಿನಗಳಲ್ಲಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡು ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. https://ainlivenews.com/great-job-opportunities-for-puc-passers-salary-%e2%82%b963000-per-month-apply-now/ ಆದ್ರೆ, ಇತ್ತೀಚೆಗೆ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ವಾಪಸ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರ್ಪಡೆಗೂ ಮುನ್ನವೇ ಅವರು ಬೆಳಗಾವಿ…

Read More

ಪಾಟ್ನಾ: ಬಿಹಾರದ 10ನೇ ತರಗತಿಯ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನನ್ನು ಪಾಸ್ ಮಾಡಿ ಇಲ್ಲದಿದ್ದರೆ, ನನ್ನ ತಂದೆ ಮದುವೆ ಮಾಡ್ತಾರೆ ಎಂದು ಬರೆದಿದ್ದಾಳೆ. ಇದೀಗ ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿನಿ (Student) ಉತ್ತರ ಪತ್ರಿಕೆಯಲ್ಲಿ, ನಾನು ಬಡ ಕುಟುಂಬದಿಂದ ಬಂದಿದ್ದು, ತನ್ನನ್ನು ಪಾಸ್ ಮಾಡುವಂತೆ ಮನವಿ ಮಾಡಿದ್ದಾಳೆ. ಅಲ್ಲದೇ ಪಾಸ್ ಮಾಡದಿದ್ದರೆ ತನ್ನನ್ನು ಮದುವೆ ಮಾಡುತ್ತಾರೆ. ಈಗ ಮದುವೆಯಾಗಲು ಇಷ್ಟವಿಲ್ಲ ಎಂದು ಆಕೆ ಬರೆದುಕೊಂಡಿದ್ದಾಳೆ. ಇನ್ನೂ ಕೆಲವರು ಉತ್ತರ ಪತ್ರಿಕೆಯಲ್ಲಿ ಸಿನಿಮಾ ಹಾಡುಗಳು ಹಾಗೂ ದೇವರ ನಾಮಗಳನ್ನು ಬರೆದಿದ್ದಾರೆ. https://ainlivenews.com/great-job-opportunities-for-puc-passers-salary-%e2%82%b963000-per-month-apply-now/ ವಿದ್ಯಾರ್ಥಿಯೊಬ್ಬ ಸಲ್ಮಾನ್ ಖಾನ್ ನಟನೆಯ ಸಾಜನ್ ಚಿತ್ರದ ಹಾಡನ್ನು ಉತ್ತರ ಪತ್ರಕಿಯಲ್ಲಿ ಬರೆದಿದ್ದಾನೆ. ಇದೀಗ ಈ ಎಲ್ಲಾ ಉತ್ತರ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಕರೊಬ್ಬರು, ಉತ್ತರ ಸರಿಯಾಗಿದ್ದರೆ ಅಂಕಗಳನ್ನು ನೀಡುತ್ತೇವೆ. ಇಂತಹ ಅನಗತ್ಯ ಬರವಣಿಗೆಗೆ ಅಂಕ ನೀಡಲಾಗುವುದಿಲ್ಲ ಎಂದಿದ್ದಾರೆ.

Read More

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ 2ನೇ ಹಂತದಲ್ಲಿ ನಡೆಯಲಿದೆ. ತಕ್ಷಣದಿಂದಲೇ ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ.  ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಘೋಷಣೆ ಹಾಗೂ ಮಾದರಿ ನೀತಿ ಸಂಹಿತೆ ಜಾರಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಇದರಂತೆ ಇದೇ ಮಾರ್ಚ್ 28 ಗುರುವಾರದಂದು ಅಧಿಸೂಚನೆ ಹೊರಡಿಸಲಾಗುವುದು. ಏಪ್ರಿಲ್ 04 ರಂದು  ಗುರುವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಏಪ್ರಿಲ್ 05 ರಂದು ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಸಲಾಗುವುದು. ಏಪ್ರಿಲ್ 08 ರಂದು ಸೋಮವಾರ ನಾಮಪತ್ರ ಹಿಂಪಡೆಯುಲು ಕೊನೆಯ ದಿನ. ಏಪ್ರಿಲ್ 26 ರಂದು  ಶುಕ್ರವಾರ ಮತದಾನ ನಡೆಯಲಿದೆ.…

Read More

ಬೆಂಗಳೂರು, ಮಾರ್ಚ್, 17: ಲೋಕಸಭಾ ಚುನಾವಣೆಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ, ಮತದಾನ ಕುರಿತು ಜಾಗೃತಿ ಮೂಡಿಸಲು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಬಿಬಿಎಂಪಿ ಮತ್ತು ನಗರದ ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ವಿಶೇಷ ವಾಕಾಥಾನ್‌ನಲ್ಲಿ ಸಾವಿರಾರು ಹೆಣ್ಣುಮಕ್ಕಳು, ನಾಗರಿಕರು ಅತ್ಯುತ್ಸಾಹದಿಂದ ಭಾಗವಹಿಸಿದರು. ಮಾರತಹಳ್ಳಿಯಲ್ಲಿರುವ ಕಾವೇರಿ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಬೆಳಗ್ಗೆ 6:30ಕ್ಕೆ ಖ್ಯಾತ ನಟಿ ಪ್ರಣಿತ ಸುಭಾಷ್ ಅವರು ವಾಕಾಥಾನ್, ಬೈಕ್ ರ‌್ಯಾಲಿ ಮತ್ತು ಬೈಸಿಕಲ್ ರ‌್ಯಾಲಿಗೆ ಚಾಲನೆ ನೀಡಿದರು. ಸುಮಾರು 500 ಬೈಕುಗಳು 1200 ಸೈಕಲ್ ಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದರು. ಮಾರತಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ವಾಕಾಥಾನ್ ವೇಳೆ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು. ಈ ವೇಳೆ ಮಾತನಾಡಿದ ನಟಿ ಪ್ರಣಿತ ಸುಭಾಷ್, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಪ್ರಜಾಪ್ರಭುತ್ವದ ಅತಿ ದೊಡ್ಡ ಉತ್ಸವವಾಗಿರುವ ಲೋಕಸಭಾ ಚುನಾವಣೆಯಲ್ಲಿ ನಾವು ಮತದಾನ ಮಾಡುವ ಮೂಲಕ ಭಾಗವಹಿಸಬೇಕು. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು…

Read More