Author: AIN Author

ಬೆಳಗಾವಿ:- ಟಿಳಕವಾಡಿ ಪೊಲೀಸರು ಕಾರ್ಯಚರಣೆ ನಡೆಸಿ ಬೆಳಗಾವಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಿಷೇಧಿತ MDMA ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. ರಿಜ್ವಾನಾಖಾನ್ ಪಠಾಣ್​ ಎಂಬಾತನನ್ನ ಬಂಧಿಸಲಾಗಿದೆ. ಇತ ಸಾರ್ವಜನಿಕವಾಗಿಯೇ ನಿಷೇಧಿತ ಕ್ರಿಸ್ಟಲ್ ಮೆಥಾಂಫೆಟಮೈನ್ ಮಾದಕ ವಸ್ತುವನ್ನ ಮಾರಾಟ ಮಾಡುತ್ತಿದ್ದ. ಇನ್ನು ಬಂಧಿತ ಆರೋಪಿ ಇದನ್ನು ಎಲ್ಲಿಂದ ತಂದು ಮಾರಾಟ ಮಾಡುತ್ತಿದ್ದ ಎನ್ನುವ ಆಯಾಮದಲ್ಲಿ ತನಿಖೆ ಶುರುವಾಗಿದೆ. ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇದೇ ಮೊದಲ ಸಲ ಬೆಳಗಾವಿಯಲ್ಲಿ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More

ಬೆಂಗಳೂರು:- ಕಾಂಗ್ರೆಸ್ ಇರುವ ಕಡೆ ದುಷ್ಕೃತ್ಯಗಳಿಗೆ ಬೆಂಬಲ ಸಿಗುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದೇಶದಲ್ಲಿ ಬಿಜೆಪಿ ಗಟ್ಟಿಯಾಗಿದೆ. 10 ವರ್ಷದಿಂದ ಉಗ್ರರ ದಾಳಿಗೆ ಬಲಿಯಾದವರು ಕಡಿಮೆ ಎಂದರು. ಇವತ್ತು ಬೆಂಗಳೂರಿನ‌ಲ್ಲಿ‌ 70 ಕಿ.ಮೀ. ಮೆಟ್ರೋ ‌ಅಭಿವೃದ್ಧಿ ಆಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ ಬೆಂಗಳೂರು ದಕ್ಷಿಣ ಈ ಬಾರಿ ಇತಿಹಾಸ ನಿರ್ಮಿಸಲಿದೆ. ಕಳೆದ ಬಾರಿ ಬೆಂಗಳೂರಿನ ಇತಿಹಾಸದಲ್ಲಿ ಅತೀ ಹೆಚ್ಚು ಅಂತರದಿಂದ ಗೆದ್ದಿದ್ದೆವು. ಈ ಬಾರಿ ಸುಮಾರು 5 ಲಕ್ಷ ಅಂತರದಿಂದ ಗೆಲ್ಲುತ್ತೇವೆ ಎಂದು ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಭರವಸೆ ನೀಡಿದ್ದಾರೆ. ಬಿ ವೈ ವಿಜಯೇಂದ್ರ ಅವರು ರಾಜ್ಯ ಅಧ್ಯಕ್ಷರಾದ ನಂತರ ಕಾರ್ಯಕರ್ತರಲ್ಲಿ ಸ್ಫೂರ್ತಿ ಮೂಡಿದೆ. ಅದೇ ರೀತಿ ಸಿ.ಕೆ ರಾಮಮೂರ್ತಿ ಅವರು ಜಿಲ್ಲಾಧ್ಯಕ್ಷರಾದ ಬಳಿಕ ಬೆಂಗಳೂರು ದಕ್ಷಿಣದಲ್ಲಿ ಸಂಘಟನೆಯನ್ನು ಗಟ್ಟಿ ಮಾಡುವ ಕೆಲಸವಾಗಿದೆ ಎಂದಿದ್ದಾರೆ. ನನ್ನೆಲ್ಲಾ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ,…

Read More

ಮಹಿಳಾ ಪ್ರೀಮಿಯರ್ ಲೀಗ್ 2024 ರ ಅಂತಿಮ ಪಂದ್ಯ ದೆಹಲಿ ಮತ್ತು ಬೆಂಗಳೂರು ನಡುವೆ ನಡೆಯುತ್ತಿದ್ದು, ಇಲ್ಲಿಯವರೆಗೆ ಈ ಎರಡೂ ತಂಡಗಳು ಐಪಿಎಲ್ ಟ್ರೋಫಿ ಅಥವಾ ಡಬ್ಲ್ಯುಪಿಎಲ್ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಈ ಸೀಸನ್​ನಲ್ಲಿ ಚಾಂಪಿಯನ್ ಆಗುವ ತಂಡಕ್ಕೆ ಇದು ಚೊಚ್ಚಲ ಟ್ರೋಫಿ ಆಗಲಿದೆ.ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು ಟಾಸ್ ಗೆದ್ದ ಡೆಲ್ಲಿ ನಾಯಕಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಎಲಿಮಿನೇಟರ್​ ಪಂಡ್ಯ ಆಡಿದ್ದ ಬೆಂಗಳೂರು ತಂಡ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಈ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ಅಂದರೆ ಆರ್​ಸಿಬಿ ತಂಡ ಡೆಲ್ಲಿ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾದ್ಯವಾಗಿಲ್ಲ.…

Read More

ಕಲಬುರಗಿ:- ಗಾನ ವಿದುಷಿ ಶ್ರೀಮತಿ ಸರೋಜ ಅನಗರಕರ್ ನೆನಪಿನಾರ್ಥ ಸರೋಜ ಸಂಗೀತ ಕಾರ್ಯಕ್ರಮವನ್ನ ಎನ್ ವಿ ಸಂಗೀತ ವಿಭಾಗ ಹಾಗು ಸ್ವರ ಗಂಧರ್ವ ಸಾಂಸ್ಕೃತಿಕ ಸಂಘ ಜಂಟಿಯಾಗಿ ಆಯೋಜಿಸಿತ್ತು. ಸಂಗಮೇಶ್ವರ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಸಂಗೀತ ಕಾರ್ಯಕ್ರಮಕ್ಕೆ ಶ್ರೀಮತಿ ಅನಗರಕರ್ ಶಿಷ್ಯವೃಂದ ಭಾಗಿಯಾಗಿ ಸಂಗೀತದ ಸುಧೆ ಹರಿಸಿತು. ಈ ಕಾರ್ಯಕ್ರಮದಲ್ಲಿ ರಮೇಶ್ ಕುಲಕರ್ಣಿ ಲಕ್ಷ್ಮಿ ಶಂಕರ ಜೋಶಿ ಉಮಾ ಶರ್ಮಾ ಶೃತಿ ಸಗರ ಸೇರಿದಂತೆ 50 ಕ್ಕೂ ಹೆಚ್ಚಿನ ಕಲಾವಿದರು ಗಾಯನದ ರಸದೌತಣ ಉಣಬಡಿಸಿದ್ರು..

Read More

ಬೆಂಗಳೂರು:- ಪಕ್ಷಕ್ಕೆ ಬರಲು ಕೆಲವರು ಒಪ್ಪಿದ್ರು, ಆದ್ರೆ ನಮ್ಮವರೇ ಕೆಲವರು ಒಪ್ಪಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,20 ಸೀಟಿಗಿಂತ ಹೆಚ್ಚು ಗೆದ್ದೇ ಗೆಲ್ಲುತ್ತೇವೆ. ಅಷ್ಟು ಆತ್ಮವಿಶ್ವಾಸ ನಮಗಿದೆ. ಬಿಜೆಪಿಯವರ ಗೊಂದಲ ನೀವು ನೋಡುತ್ತಿದ್ದೀರಿ. ನಮ್ಮ ಟಿಕೆಟ್‌ ಘೋಷಣೆ ಆದಮೇಲೆ ಯಾವುದು ಗೊಂದಲ ಆಗಲ್ಲ ಎಂದರು. ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಸಂತೋಷದಿಂದ ಆತ್ಮವಿಶ್ವಾಸದಿಂದ ಎದುರಿಸುತ್ತೇವೆ. ನಮ್ಮ ಕಾರ್ಯಕರ್ತರು ಮತದಾರರು ಎಲ್ಲರ ಜೊತಗೂ ನಾವು ಏಳೆಂಟು ತಿಂಗಳಿನಿಂದ ತಯಾರಿ ಮಾಡಿದ್ದೇವೆ. ನುಡಿದಂತೆ ನಡೆದು ತೋರಿಸಿದ್ದರಿಂದ ಬಹಳ ಆತ್ಮವಿಶ್ವಾಸದಿಂದ ನಾವು ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದರು. ಮಾರ್ಚ್‌ 19ರ ರಾತ್ರಿ ಅಥವಾ 20 ರ ಬೆಳಿಗ್ಗೆ ನಮ್ಮ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತೇವೆ. ಆಡಳಿತರೂಡ ಪಕ್ಷದವರು ತಮಗೆ ಅನುಕೂಲಕ್ಕೆ ತಕ್ಕಂತೆ ದಿನಾಂಕ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.

Read More

ಇತ್ತೀಚಿನ ದಿನಗಳಲ್ಲಿ ದಂಪತಿಗಳು ಒಂದೇ ಮಗು ಸಾಕು ಎನ್ನುವಲ್ಲಿಗೆ ಬಂದು ತಲುಪಿದ್ದಾರೆ. ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿ ಬಾಲಕಿಯೊಬ್ಬಳು, ‘ನನಗೆ ಆಟ ಆಡಲು ಯಾರು ಇಲ್ಲ, ನಾನು ಒಂಟಿ’ ಎಂದು ತಂದೆ ತಾಯಿಯ ಮುಂದೆ ಕಣ್ಣೀರು ಸುರಿಸುತ್ತಿದ್ದಾಳೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಾಲಕಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದಿನ ಜೀವನ ಶೈಲಿ ಹಾಗೂ ಕುಟುಂಬ ವ್ಯವಸ್ಥೆಯೂ ಸಂಪೂರ್ಣವಾಗಿ ಬದಲಾಗಿದೆ. ನಗರ ಸೇರಿದಂತೆ ಹಳ್ಳಿ ಪ್ರದೇಶಗಳಲ್ಲಿಯೂ ಕೂಡು ಕುಟುಂಬದ ಬದಲಾಗಿ ವಿಭಕ್ತ ಕುಟುಂಬಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಅದಲ್ಲದೇ ಉದ್ಯೋಗದಲ್ಲಿರುವ ದಂಪತಿಗಳು ಒಂದೇ ಒಂದು ಮಗು ಸಾಕು ಎನ್ನುವಲ್ಲಿಗೆ ಬಂದು ತಲುಪಿದ್ದಾರೆ. ಉದ್ಯೋಗದಲ್ಲಿರುವ ದಂಪತಿಗಳಿಗೆ ಮಕ್ಕಳನ್ನು ನೋಡಿಕೊಳ್ಳಲು ಸಮಯವಿಲ್ಲ.ಅದಲ್ಲದೇ, ಒಂದು ಮಗುವನ್ನು ಸಾಕುವುದೇ ಕಷ್ಟವೆನ್ನುವಂತಾಗಿದೆ. ವೆಚ್ಚಗಳು ಹೆಚ್ಚಾಗುತ್ತಿದ್ದಂತೆ ಮಕ್ಕಳಿಗೆ ಯಾವುದೇ ಕೊರತೆಯೂ ಬಾರದಂತೆ ನೋಡಿಕೊಳ್ಳಬೇಕೆನ್ನುವ ಇಚ್ಛೆ ತಂದೆತಾಯಿಯರದ್ದು. ಹೀಗಾಗಿ ಒಂದೇ ಮಗು ಸಾಕು, ಆ ಮಗುವಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿ ಉತ್ತಮ ಜೀವನಕಟ್ಟಿಕೊಡಬೇಕೆಂದು ಕೊಂಡು ಫ್ಯಾಮಿಲಿ ಪ್ಲಾನಿಂಗ್ ನತ್ತ…

Read More

ಉಳಿದ ಅನ್ನ ಸೇವನೆ ಆರೋಗ್ಯದ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದು ನೀವು ತಿಳಿದರೆ ಇಂದಿನಿಂದಲೇ ಈ ಅನ್ನ ಸೇವನೇಯನ್ನೇ ಬಿಟ್ಟುಬಿಡುತ್ತೀರಿ. ಹೌದು ಉಳಿದ ಅನ್ನವನ್ನು ಮಾರನೆ ದಿನ ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲವಂತೆ. ವೈದ್ಯರು ಹೇಳುವಂತೆ ಸರಿಯಾಗಿ ಸಂಗ್ರಹಿಸದ ಉಳಿದ ಅನ್ನವನ್ನು ತಿನ್ನುವುದು ವಾಂತಿ ಮತ್ತು ಭೇದಿಯಂತಹ ತೀವ್ರವಾದ ಜಠರಗರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದಂತೆ. ಇನ್ನೂ ಈ ಕಾಯಿಲೆಗಳಿಗೆ ಫ್ರೈಡ್ ರೈಸ್ ಸಿಂಡ್ರೋಮ್ ಎಂದು ಕರೆಯಲಾಗಿದೆ. ಇದು ಅನ್ನದ ವಿಷಕಾರಿ ಅಂಶಗಳು ದೇಹ ಸೇರಿಕೊಳ್ಳುವ ಪ್ರಕ್ರಿಯೆಯಾಗಿದೆ. ಹಾಗಾದರೆ ಈ ರೀತಿ ಆದಾಗ ನಮ್ಮ ದೇಹದಲ್ಲಿ ಏನಾಗುತ್ತದೆ. ಏನಿದು ಫ್ರೈಡ್ ರೈಸ್ ಸಿಡ್ರೋಮ್? ಏನಿದರ ಲಕ್ಷಣ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಇದು ಆಹಾರ ವಿಷವಾಗಿ ಮಾರ್ಪಡುವ ಒಂದು ರೀತಿಯ ಪ್ರಕ್ರಿಯೆಯಾಗಿದೆ. ಇದು ಬ್ಯಾಸಿಲಸ್ ಸೆರಿಯಸ್ (B. ಸೆರೆಯಸ್) ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಸೂಕ್ಷ್ಮಾಣು ಅಕ್ಕಿ ಮತ್ತು ಪಾಸ್ಟಾದಂತಹ ಪಿಷ್ಟ ಆಹಾರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಹೊರಗಿನಿಂದ ಬಂದು ಸೇರುವುದಿಲ್ಲ. ಬದಲಿಗೆ ಅದೇ…

Read More

ಕಿಡ್ನಿ ವೈಫಲ್ಯದ ಬಗ್ಗೆ ಜನರಲ್ಲಿರುವ 5 ತಪ್ಪುಕಲ್ಪನೆಗಳು ಇಲ್ಲಿವೆ. ಕಿಡ್ನಿ ವೈಫಲ್ಯದ ಬಗ್ಗೆ ಜನರು ಸರಿಯಾದ ತಿಳಿವಳಿಕೆ ಹೊಂದುವುದು ಮುಖ್ಯವಾಗಿದೆ. ಮೂತ್ರಪಿಂಡ ವೈಫಲ್ಯ ಮತ್ತು ಮೂತ್ರಪಿಂಡದ ಕಾಯಿಲೆಗಳು ಹೆಚ್ಚುತ್ತಿರುವಾಗ ಅವುಗಳ ಸುತ್ತ ಸುತ್ತುತ್ತಿರುವ ತಪ್ಪುಗ್ರಹಿಕೆಗಳು ಸಹ ಹೆಚ್ಚಾಗುತ್ತಿವೆ. ಭಾರತ ದೇಶದಲ್ಲಿ ಶೇ.50ಕ್ಕೂ ಹೆಚ್ಚು ಮೂತ್ರಪಿಂಡದ ಕಾಯಿಲೆಗಳು ಮಧುಮೇಹದಿಂದ ಉಂಟಾಗುತ್ತವೆ. ಕನಿಷ್ಠ ಶೇ. 20-25ರಷ್ಟು ರೋಗಿಗಳು ಅಧಿಕ ರಕ್ತದೊತ್ತಡದಿಂದ ಮೂತ್ರಪಿಂಡದ ಕಾಯಿಲೆಯನ್ನು ಅನುಭವಿಸುತ್ತಾರೆ. ಹೆಚ್ಚಿನ ಜನರು ಕಿರಿಯ ವಯಸ್ಸಿನಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಅನುಭವಿಸುತ್ತಿದ್ದಾರೆ. 30ರಿಂದ 45 ವಯಸ್ಸಿನ ಜನರಲ್ಲಿ ಮೂತ್ರಪಿಂಡದ ಕಾಯಿಲೆಯನ್ನು ಹೆಚ್ಚಿಸುವ ಪ್ರವೃತ್ತಿ ಹೆಚ್ಚಾಗಿದೆ. ಮೂತ್ರಪಿಂಡದ ಸಮಸ್ಯೆಗಳ ಸುತ್ತಲಿನ ಕೆಲವು ಸಾಮಾನ್ಯ ತಪ್ಪುಕಲ್ಪನೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಕಿಡ್ನಿ ವೈಫಲ್ಯದ ಕುರಿತಾಗಿರುವ 5 ತಪ್ಪುಕಲ್ಪನೆಗಳಿವು: ಮಿಥ್ಯ: ಮೂತ್ರಪಿಂಡದ ಕಾಯಿಲೆ ಅಪರೂಪ: ಸತ್ಯ: ಮೂತ್ರಪಿಂಡದ ಕಾಯಿಲೆ ಅಪರೂಪದ ಸಮಸ್ಯೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಆದರೆ, ಅಂಕಿಅಂಶಗಳು ಬೇರೆ ರೀತಿಯಲ್ಲಿ ತೋರಿಸುತ್ತವೆ. ಇತ್ತೀಚಿನ ಮಾಹಿತಿಯು ಭಾರತದಲ್ಲಿ ಶೇ. 17ಕ್ಕಿಂತ ಹೆಚ್ಚು ಜನಸಂಖ್ಯೆಯು…

Read More

ಅಮೇರಿಕಾ:- ನನ್ನನ್ನು ಆಯ್ಕೆ ಮಾಡದಿದ್ದರೆ ರಕ್ತಪಾತ ಮಾಡುವುದು ಗ್ಯಾರಂಟಿ ಎಂದು ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ ಡೊನಾಲ್ಡ್ ಟ್ರಂಪ್ ಓಹಿಯೋದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷೀಯ ಚುನಾವಣೆಯು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನಾಂಕವಾಗಿದೆ. ಹಿಂಸಾಕೃತ್ಯಗಳಲ್ಲಿ ಜನ ಸಾಯುವುದು ಖಚಿತ. ನನ್ನನ್ನು ಆಯ್ಕೆ ಮಾಡದಿದ್ದರೆ ರಕ್ತಪಾತ ಮಾಡುವುದಾಗಿ ಬೆದರಿಕೆ ಹಾಕಿದರು. ನಮ್ಮ ದೇಶಕ್ಕೆ ಇತಿಹಾಸ ನಿರ್ಮಿಸಲಿದೆ ಎಂದು ನಾನು ನಂಬುತ್ತೇನೆ. ಚೀನಾ ಮೆಕ್ಸಿಕೊದಲ್ಲಿ ಕಾರು ಉತ್ಪಾದಿಸಿ ಅದನ್ನು ಅಮೆರಿಕಕ್ಕೆ ಮಾರಾಟ ಮಾಡುವ ಯೋಜನೆಯನ್ನು ಟೀಕಿಸಿ, ತಾನು ಮರು ಆಯ್ಕೆಯಾದರೆ ಚೀನಾವು ಅಮೆರಿಕಕ್ಕೆ ಯಾವುದೇ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನಾನು ಗೆಲ್ಲದಿದ್ದರೆ, ಇಡೀ ವ್ಯವಸ್ಥೆಗೇ ಅಪಾಯ ಬರಲಿದೆ. ಅದು ದೇಶಕ್ಕೇ ಸಂಭವಿಸಲಿದೆ ಎಂದರು. ಜೋ ಬಿಡೆನ್ ಮತ್ತು ಡೊನಾಲ್ಡ್ ಟ್ರಂಪ್ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕಾಗಿ ಹೋರಾಡುತ್ತಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸತತ ಗೆಲುವಿನೊಂದಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.…

Read More

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಪಡೆದ ಕೆಲವೇ ಗಂಟೆಗಳ ನಂತರ ಜಾರಿ ನಿರ್ದೇಶನಾಲಯ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಜಲಮಂಡಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾನುವಾರ ಮತ್ತೊಂದು ಸಮನ್ಸ್ ಜಾರಿ ಮಾಡಿದೆ. ಹಿಂದಿನ ಸಮನ್ಸ್‌ಗಳನ್ನು ಕಾನೂನುಬಾಹಿರ ಎಂದು ಕರೆದಿದ್ದ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ ಎರಡು ದೂರುಗಳನ್ನು ನೀಡಿತ್ತು. ಶನಿವಾರ ಇ.ಡಿ ನೀಡಿದ ದೂರಿನ ವಿಚಾರಣೆಗಾಗಿ ಅರವಿಂದ್ ಕೇಜ್ರಿವಾಲ್ ಶನಿವಾರ ರೋಸ್ ಅವೆನ್ಯೂ ಕೋರ್ಟ್‌ಗೆ ಹಾಜರಾಗಿದ್ದರು. https://ainlivenews.com/great-news-for-ksrtc-staff-order-for-payment-of-arrears/ ಈ ಪ್ರಕರಣದಲ್ಲಿ ನ್ಯಾಯಾಲಯ ಕೇಜ್ರಿವಾಲ್ ಅವರಿಗೆ 15,000 ರೂ. ಮೌಲ್ಯದ ಶ್ಯೂರಿಟಿ ಬಾಂಡ್ ಹಾಗೂ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಶನಿವಾರ ಜಾಮೀನು ಮಂಜೂರು ಮಾಡಿತ್ತು. ಒಂಬತ್ತನೇ ಸಮನ್ಸ್‌ನಲ್ಲಿ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 21 ರಂದು ಕೇಜ್ರಿವಾಲ್ ಹಾಜರಾಗುವಂತೆ ತನಿಖಾ ಸಂಸ್ಥೆ ತಿಳಿಸಿದೆ.

Read More