Author: AIN Author

ಗೌರಿಬಿದನೂರು: ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಹಳ್ಳಿ ಯಲ್ಲೂ ರಸ್ತೆಗಳ ಅಭಿವೃದ್ಧಿ ಮಾಡಬೇಕು. ಮೂಲ ಸೌಕರ್ಯ ಒದಗಿಸಿಕೊಡಬೇಕು. ಗುಣಮಟ್ಟದ ಕಾಮ ಗಾರಿಗಳನ್ನು ಗುತ್ತಿಗೆದಾರರು ಮಾಡಬೇಕು ಎಂದು ಶಾಸಕ ಕೆ ಎಚ್ ಪುಟ್ಟಸ್ವಾಮಿಗೌಡ ತಿಳಿಸಿದರು. ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಹೋಬಳಿಯ ಮುಟ್ಟಾವಲಹಳ್ಳಿಯಿಂದ ಬಂದ್ರಹಳ್ಳಿ ಹಾಗೂ ನರಸಿಂಹ ರೆಡ್ಡಿ ಹಳ್ಳಿ ಗ್ರಾಮಗಳಿಗೆ 2 ಕೋಟಿ ವೆಚ್ಚದ ಸಿ ಸಿ ರಸ್ತೆ ಹಾಗೂ ತೋಕಲಹಳ್ಳಿ ಗ್ರಾಮದಿಂದ ಹುಲಿಕುಂಟೆ ಸಂಪರ್ಕ ಕಲ್ಪಿಸುವ ರಸ್ತೆಗೆ 1ಕೋಟಿ 40 ಲಕ್ಷ ಹಾಗೂ ಜಿ ಬೊಮ್ಮಸಂದ್ರ ಗ್ರಾಮದಿಂದ ಸಿಂಗಾನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಗೆ 1ಕೋಟಿ 40 ಲಕ್ಷ ವೆಚ್ಚದ ಕಾಮಗಾರಿಗೆ ಹಾಗೂ ವಿವಿಧ ರೀತಿಯ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಶಾಸಕ ಕೆ ಎಚ್ ಪುಟ್ಟಸ್ವಾಮಿ ಗೌಡರು ನೇರವೇರಿಸಿದರು ಎಸ್ ಸಿ ಪಿ ಹಾಗೂ ಟಿ ಎಸ್ ಪಿ ಯೋಜನೆಯಡಿಯಲ್ಲಿ ಸಿ ಸಿ ರಸ್ತೆ, ಚರಂಡಿ ಕಾಮಗಾರಿಗಳು ,ಶಾಲಾ ನೂತನ ಕೊಠಡಿಗಳು,ಸಮಾಜ ಕಲ್ಯಾಣ ಇಲಾಖೆಯ ಆದರ್ಶ ಗ್ರಾಮ ಯೋಜನೆಯ ಕಾಮಗಾರಿಗಳು ಸೇರಿದಂತೆ ಯೋಜನೆಯ ಕಾಮಗಾರಿಗಳು ಸೇರಿದಂತೆ…

Read More

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದ ಆರ್​ಸಿಬಿ ಮಹಿಳಾ ಪ್ರೀಮಿಯರ್ ಲೀಗ್ 2024 ರ ಅಂತಿಮ ಪಂದ್ಯದಲ್ಲಿ ಆರ್​ಸಿಬಿ ಮಹಿಳಾ ಪಡೆ ಚೊಚ್ಚಲ ಟ್ರೋಫಿ ಎತ್ತಿಹಿಡಿದಿದೆ. ಡೆಲ್ಲಿ ನೀಡಿದ 113 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ 2 ವಿಕೆಟ್ ಕಳೆದುಕೊಂಡು 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆದರೆ ಮೊದಲ ವಿಕೆಟ್ ಪತನವಾದ ಬಳಿಕ ಡೆಲ್ಲಿ ಲಯ ಕಳೆದುಕೊಂಡಿತು. ಇದರ ಲಾಭ ಪಡೆದ ಆರ್​ಸಿಬಿ ಬೌಲರ್​ಗಳು ಡೆಲ್ಲಿಯನ್ನು ಅಲ್ಪ ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇನ್ನು ಈ ಪಂದ್ಯದಲ್ಲಿ ಆರ್​ಸಿಬಿ ಪರ ಕನ್ನಡತಿ ಶ್ರೇಯಾಂಕಾ ಪಾಟೀಲ್ ಐತಿಹಾಸಿಕ ಸಾಧನೆ ಕೂಡ ಮಾಡಿದರು. ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ 21 ವರ್ಷದ ಶ್ರೇಯಾಂಕಾ ಪಾಟೀಲ್ ತಮ್ಮ ಖೋಟಾದ 3.3 ಓವರ್​ಗಳಲ್ಲಿ 12 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಇದರೊಂದಿಗೆ ಮಹಿಳಾ…

Read More

ಕಳೆದ ಎರಡು ವಾರದಲ್ಲಿ ಚಿನ್ನದ ಬೆಲೆ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಹಿಂದಿನ ಎರಡು ವಾರದಲ್ಲಿ ಒಂದು ವಾರ ಬಹಳ ದೊಡ್ಡ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ಆಗಿತ್ತು. ಕಳೆದ ವಾರ ಬೆಲೆ ಸ್ವಲ್ಪಮಟ್ಟಿಗೆ ತಹಬದಿಗೆ ಬಂದಿದೆ. ಈ ವಾರ ಚಿನ್ನದ ಬೆಲೆ ಯಾವ ದಿಕ್ಕಿಗೆ ಹೋಗುತ್ತದೆ ನೋಡಬೇಕು. ಅಮೆರಿಕದಲ್ಲಿ ಫೆಡ್ ರಿಸರ್ವ್ ಬಡ್ಡಿದರ ಇದೇ ವಾರ ಘೋಷಿಸಲಿದೆ. ಇದರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲಾಗಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 60,590 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,100 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,730 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 60,590 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,610 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 18ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ:…

Read More

ಬೆಂಗಳೂರು: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಸದಸ್ಯರನ್ನು ನೋಂದಾಯಿಸಲು ಹೊಸ ಸದಸ್ಯರ ನೋಂದಣಿಗಾಗಿ ಮಾರ್ಚ್.31ರವರೆಗೆ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಯಶಸ್ವಿನಿ ಕಾರ್ಡ್ ಮಾಡಿಸದೆ ಇರುವವರು ಈ ಯೋಜನೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಕರ್ನಾಟಕ ಸರ್ಕಾರವು ಈ ಹಿಂದೆ ಇದ್ದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಸಹಕಾರ ಸಂಘದ ಅಡಿಯಲ್ಲಿ ಮರುಜಾರಿಗೊಳಿಸಿದ್ದು 2023-24 ನೇ ಸಾಲಿಗೆ ಈಗಾಗಲೇ ಸದಸ್ಯರ ನೋಂದಣಿಗೆ ಅವಕಾಶ ನೀಡಿದ್ದು, ಸದಸ್ಯರ ನೋಂದಾವಣೆಗೆ ಫೆಬ್ರವರಿ28 ಕೊನೆಯ ದಿನಾಂಕವಾಗಿದ್ದು, ಯೋಜನೆಯನ್ನು ಇನ್ನೂ ಹೆಚ್ಚಿನ ಸದಸ್ಯರನ್ನು ನೋಂದಾಯಿಸಿಕೊಳ್ಳಲು ಅನುವಾಗುವಂತೆ ನೋಂದಣಿ ಅವಧಿಯನ್ನು ದಿ:31-03-2024 ರವರೆಗೆ ವಿಸ್ತರಿಸುವಂತೆ ಕೋರಿರುತ್ತಾರೆ ಎಂದು ತಿಳಿಸಿದ್ದಾರೆ. ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ ಅಡಿಯಲ್ಲಿ ಸುಮಾರು 30ಲಕ್ಷಕ್ಕೂ ಅಧಿಕ ಸದಸ್ಯರ ನೋಂದಾವಣೆ ಗುರಿ ಹೊಂದಿದ್ದು, ಆದರೆ ಸದಸ್ಯರ ನೋಂದಾವಣೆ ನಿರೀಕ್ಷಿಸಿದ ಮಟ್ಟದಲ್ಲಿ ಸಾಧ್ಯವಾಗಿಲ್ಲ ಹಾಗೂ ಈ ಅವಧಿಯಲ್ಲಿ ಎಲ್ಲಾ ಸಂಘದ ಸದಸ್ಯರುಗಳ ನೋಂದಾವಣೆ ಸಾದ್ಯವಾಗುವುದಿಲ್ಲವೆಂದು ಹಾಗೂ ಅನೇಕ ಸಹಕಾರೀ ಸಂಘಗಳು, ಸದಸ್ಯರು ಗಳು, ಶಾಸಕರು, ವಿಧಾನ ಸಭೆ ಹಾಗೂ…

Read More

ಫ್ರಿಜ್ ಬಳಕೆ ಬೇಸಿಗೆ ಇರಲಿ, ಮಳೆಗಾಲವಿರಲಿ ಇಲ್ಲ ಚಳಿಗಾಲವಿರಲಿ ಆರೋಗ್ಯ ಕ್ಕೆ ಒಳ್ಳೆದಲ್ಲ. ತಾಜಾ ಆಹಾರ ಸೇವನೆ ಮಾಡ್ಬೇಕೆಂದು ತಜ್ಞರು ಸಲಹೆ ನೀಡ್ತಾರೆ. ಅದ್ರಲ್ಲೂ ಕೆಲ ಆಹಾರವನ್ನು ಫ್ರಿಜ್ ನಲ್ಲಿ ಇಟ್ಟರೆ ರುಚಿ ಬದಲಾಗುವ ಜೊತೆಗೆ ಆರೋಗ್ಯವೂ ಹಾಳಾಗುತ್ತದೆ. ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡದಂತೆ ಸಲಹೆ ನೀಡಲಾಗುತ್ತದೆ. ಹಣ್ಣುಗಳನ್ನು ತಾಜಾ ಇರುವಾಗ್ಲೇ ಸೇವನೆ ಮಾಡ್ಬೇಕು. ಹಣ್ಣುಗಳನ್ನು ಮಾರುಕಟ್ಟೆಯಿಂದ ತಂದ ನಂತ್ರ ಫ್ರಿಜ್ ನಲ್ಲಿ ಇಡೋರು ನೀವಾಗಿದ್ರೆ ಇಲ್ಲವೆ ಕತ್ತರಿಸಿದ ಹಣ್ಣನ್ನು ಫ್ರಿಜ್ ನಲ್ಲಿ ಇಡುವ ಅಭ್ಯಾಸ ನಿಮಗಿದ್ದರೆ ಇನ್ಮುಂದೆ ಕಲ್ಲಂಗಡಿ ಹಣ್ಣನ್ನು ಅಪ್ಪಿತಪ್ಪಿಯೂ ಫ್ರಿಜ್ ನಲ್ಲಿ ಇಡಬೇಡಿ. ಫ್ರಿಜ್ ನಲ್ಲಿ ಕಲ್ಲಂಗಡಿ ಹಣ್ಣು ಇಡೋದ್ರಿಂದ ಏನೆಲ್ಲ ನಷ್ಟವಾಗುತ್ತೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ. ಕಲ್ಲಂಗಡಿ ಹಣ್ಣನ್ನು ಏಕೆ ಫ್ರಿಜ್ ನಲ್ಲಿ ಇಡಬಾರದು ಗೊತ್ತಾ? :  ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಅದ್ರ ಪೌಷ್ಟಿಕಾಂಶ ನಷ್ಟವಾಗಲು ಶುರುವಾಗುತ್ತದೆ. ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಪ್ರಿಜ್ ನಲ್ಲಿ ಇಟ್ಟರೆ ಫುಡ್ ಪಾಯಿಸನ್ ಆಗುವ ಸಾಧ್ಯತೆಯಿರುತ್ತದೆ. ಸಾಮಾನ್ಯವಾಗಿ ಕತ್ತರಿಸಿದ…

Read More

ಬೆಂಗಳೂರು: ಸುಮಾರು ಏಳು ವರ್ಷಗಳ ನಂತರ ಪಿಡಿಒ ನೇಮಕಾತಿಗೆ ಚಾಲನೆ ದೊರಕಿದ್ದು, ಕಲ್ಯಾಣ ಕರ್ನಾಟಕದ 97 ಹುದ್ದೆಗಳು ಸೇರಿ ಒಟ್ಟು 247 ಪಿಡಿಒ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಂಗೀಕೃತ ವಿಶ್ವವಿದ್ಯಾಲಯಗಳ ಯಾವುದೇ ಪದವೀಧರರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ. ಏ.15ರಿಂದ ಮೇ 15ರ ವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 400ಕ್ಕೂ ಹೆಚ್ಚು ಗ್ರೂಪ್ ಸಿ ಹುದ್ದೆಗಳು: ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಎಂಜಿನಿಯರ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿ, ಪೌರಾಡಳಿತ ನಿರ್ದೇಶನಾಲಯದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಹುದ್ದೆಗಳು ಸೇರಿದಂತೆ 400ಕ್ಕೂ ಹೆಚ್ಚು ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.  ಉಳಿಕೆ ಮೂಲವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಪ್ರತ್ಯೇಕ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಏಪ್ರಿಲ್ 29ರಿಂದ ಮೇ 28ರವರೆಗೆ ಅರ್ಜಿ ಸಲ್ಲಿಸಬಹುದು. ಡಿಪ್ಲೋಮಾ ಎಂಜಿನಿಯರಿಂಗ್, ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್…

Read More

ಸೂರ್ಯೋದಯ: 06:25, ಸೂರ್ಯಾಸ್ತ : 06:23 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪಾಲ್ಗುಣ ಮಾಸ, ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ನವಮಿ, ನಕ್ಷತ್ರ: ಆರಿದ್ರ, ರಾಹು ಕಾಲ: 07:30 ನಿಂದ 09:00 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ: 01:30 ನಿಂದ 03:00 ತನಕ ಅಮೃತಕಾಲ: ಬೆ.7:36 ನಿಂದ ಬೆ.9:17 ತನಕ ಅಭಿಜಿತ್ ಮುಹುರ್ತ: ಮ.12:00 ನಿಂದ ಮ.12:48 ತನಕ ಮೇಷ ರಾಶಿ: ಷರತ್ತುಗಳಿಗೆ ಸಹಿ ಮಾಡಬೇಡಿ, ನೂತನ ಉದ್ಯೋಗ ದೊರೆತು ಸಮಾಧಾನ, ಅಕ್ಕಂದಿರ ಹಾಗೂ ಮಾವಂದಿರ ಆರ್ಥಿಕ ಬೆಂಬಲದಿಂದ ಹೊಸ ವ್ಯವಹಾರ ಪ್ರಾರಂಭ, ಪಾಲುದಾರರಿಗೆ ಸೇರಿಕೊಳ್ಳುವಾಗ ನಿಗ ಇರಲಿ,ಗುತ್ತಿಗೆದಾರರು ತೆಗೆದುಕೊಳ್ಳುವ ಕಾಮಗಾರಿಗಳ ಬಗ್ಗೆ ವಸ್ತುಗಳ ಬೆಲೆ ಹಾಗೂ ಕೂಲಿ ಕಾರ್ಮಿಕರ ವೇತನ ಏರಿಕೆ ನೋಡಿಕೊಂಡು ವ್ಯವಹರಿಸಿ, ಹಳೆಯ ಬಾಕಿ ಒಬ್ಬ ವ್ಯಕ್ತಿಯಿಂದ ತಡೆಹಿಡಿಯಲಾಗುವುದು, ಪಾತ್ರೆ ವ್ಯಾಪಾರಸ್ಥರು ವ್ಯಾಪಾರ ವಹಿವಾಟಗಳಲ್ಲಿ ನಷ್ಟ, ದಂಪತಿಗಳಿಗೆ ಸಂತಾನದ ಯೋಚನೆ,ಮದುವೆ ಕಾರ್ಯಗಳಲ್ಲಿ ಅಡತಡೆ ಸಂಭವ, ವಿದೇಶಕ್ಕೆ…

Read More

16 ವರ್ಷದ ಕನಸು ಕೊನೆಗೂ ನನಸಾಗಿದ್ದು, RCBಗೆ ಕೊನೆಗೂ ಕಪ್ ಸಿಕ್ಕಿದೆ. ಮಹಿಳಾ ಪ್ರೀಮಿಯರ್​ ಲೀಗ್ (WPL 2024)​ 2ನೇ ಸೀಸನ್​ನ ಪೈನಲ್​ ಪಂದ್ಯದಲ್ಲಿ ಆರ್​ಸಿಬಿ ತಂಡವು ಡೆಲ್ಲಿ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಚೊಚ್ಚಲ ಬಾರಿಗೆ ಡಬ್ಲ್ಯೂಪಿಎಲ್​ ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ಮೂಲಕ ಆರ್​ಸಿಬಿ ಅಭಿಮಾನಿಗಳು 16 ವರ್ಷದಿಂದ ಕಾಯುತ್ತಿದ್ದ ಕಪ್​ ಕೊನೆಗೂ ಮಹಿಳಾ ತಂಡ ಗೆಲ್ಲಿಸಿಕೊಟ್ಟಿದೆ. ಈ ಮೂಲಕ ದಶಕದ ಕನಸು ನನಸಾಗಿದೆ. ಇನ್ನು, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಆರಂಬದಲ್ಲಿ ಉತ್ತಮವಾಗಿ ಬ್ಯಾಟಿಂಗ್​ ಮಾಡಿದರೂ ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಅಂತಿಮವಾಗಿ ತಂಡ 18.3 ಓವರ್​ಗೆ 113 ರನ್​ ಗೆ ಆಲೌಟ್ ಆಯಿತು. ಈ ಮೊತ್ತ ಬೆನ್ನಟ್ಟಿದ ಆರ್​ಸಿಬಿ ತಂಡ 19.3 ಓವರ್​ಗೆ 2 ವಿಕೆಟ್ ಕಳೆದುಕೊಂಡು 115 ರನ್​ ಗಳಿಸುವ ಮೂಲಕ 8 ವಿಕೆಟ್​ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಚೊಚ್ಚಲ ಕಪ್​ ಮುಡಿಗೇರಿಸಿದೆ.

Read More

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರದಲ್ಲಿ ಗೆಲ್ಲುವಂತಹ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಘೋಷಣೆ ತಡ ಯಾಕೆ ಅಂತ ನನಗೂ ಗೊತ್ತಾಗುತ್ತಿಲ್ಲ. ಸರ್ವೆ ಅಧಾರದ ಮೇಲೆ ಗೆಲ್ಲುವಂತಹ ಅಭ್ಯರ್ಥಿಗೆ ಟಿಕೆಟ್ ಕೊಡಿ. ಕಾರ್ಯಕರ್ತರಲ್ಲೂ ಆತಂಕ ಗೊಂದಲ ಮನೆ ಮಾಡಿದೆ. ದಿನಕ್ಕೊಂದು ಸುದ್ದಿ ಮೂರನೇ ವ್ಯಕ್ತಿ ಬರುವ ಮಾಹಿತಿ ಇದೆ. ಹಾಗಾಗಿ ವರಿಷ್ಠರಲ್ಲಿ ಹೊರಗಿನವರಿಗೆ ಟಿಕೆಟ್ ಕೊಡಬೇಡಿ ಅಂತ ಮನವಿ ಮಾಡಿದ್ದೇನೆ ಎಂದು ಹೇಳಿದರು. ಎರಡು ದಿನದಲ್ಲಿ ಅಭ್ಯರ್ಥಿ ಘೋಷಣೆ ಆಗಲಿದೆ. ಸೋಮವಾರ ಸಭೆ ಇದೆ ಮೂರನೇ ಪಟ್ಟಿಯಲ್ಲಿ ಘೋಷಣೆ ಆಗಲಿದೆ. ಸ್ಥಳೀಯರಿಗೆ ಟಿಕೆಟ್ ಕೊಡಿ ಹೊರಗಿನವರು ಬೇಡವೇ ಬೇಡ. ಕುಮಾರಸ್ವಾಮಿಗೂ ಸಹ ಆಫರ್ ಕೊಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ನಿಲ್ಲುವ ಹಾಗೆ ಇದ್ರೆ ಅವರು ಪಕ್ಷ ಸಂಘಟನೆ ಮಾಡ್ತಿದ್ರು. ಹಾಗಾಗಿ ನಿಲ್ಲೋದು ಅನುಮಾನ ಎಂದರು. ಒಂದು ವೇಳೆ ಹೈಕಮಾಂಡ್ ಕುಮಾರಸ್ವಾಮಿಯವರಿಗೆ ಕೊಟ್ರೆ ಸಹ ನಾವು ಸಹಕಾರ ಕೊಡ್ತೇವೆ. ಸುಧಾಕರ್…

Read More

ಚಿಕ್ಕಮಗಳೂರು:- ಚಿಕ್ಕಮಗಳೂರು, ಬೀದರ್​​ನಲ್ಲಿ ಜೋರು ಮಳೆ ಆಗಿದ್ದು, ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಐದಳ್ಳಿ, ಕಣತಿ, ಮಾಗೋಡು ಹುಣಸೇಹಳ್ಳಿ, ಕಡಬಗೆರೆ ಸುತ್ತಮುತ್ತ ಮಳೆ ಸುರಿದಿದೆ. ಸಾಧಾರಣಕ್ಕಿಂತ ಜೋರಾಗೇ ಸುರಿದ ಮಳೆಯಿಂದ ಜನರು ಸಂತಸ ಪಟ್ಟಿದ್ದಾರೆ. ಮಧ್ಯಾಹ್ನದ ನಂತರ ಮೋಡ ಕವಿದ ವಾತವರಣವಿತ್ತು. ಬಿಸಿಲ ಧಗೆಗೆ ಕಾಫಿ-ಮೆಣಸು ಉಳಿಸಿಕೊಳ್ಳುವುದು ಸವಾಲಾಗಿತ್ತು. ಮಳೆಯಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

Read More