Author: AIN Author

ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರನ್ನು 2024ರ ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಗುತ್ತದೆ ಎಂಬ ಸುದ್ದಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಇದು ಸುಳ್ಳು, ಅಭಿಮಾನಿಗಳ ದೃಷ್ಟಿಯಿಂದ ಕ್ರಿಕೆಟ್‌ ಅನ್ನು ವಿಸ್ತರಿಸುವ ದೃಷ್ಟಿಯಿಂದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಅಮೆರಿಕಾದಲ್ಲಿ ಆಯೋಜಿಸಿದೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿಗೆ ವಿಶ್ವದ ಯಾವುದೇ ಆಟಗಾರನಿಗಿಲ್ಲದ ಕ್ರೇಜ್ ಇದೆ. ಟಿ20 ವಿಶ್ವಕಪ್‌ಗೆ ಭಾರತ ತಂಡದಿಂದ ಕೊಹ್ಲಿಯನ್ನು ಖಂಡಿತವಾಗಿಯೂ ಆಯ್ಕೆ ಮಾಡಲಾಗುವುದು,” ಎಂದು ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ. ಈ ವರ್ಷ ಜೂನ್ ಒಂದರಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಆದರೆ, 2013ರಿಂದ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗದ ಭಾರತ ತಂಡ, ಈ ಬಾರಿ ಆಟಗಾರರ ಆಯ್ಕೆಯತ್ತ ಗಮನ ಹರಿಸಿದೆ. ಇದರ ಭಾಗವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿದುಬರುತ್ತಿದೆ. ಇದರೊಂದಿಗೆ ಈ ಟೂರ್ನಿಗೆ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ…

Read More

ಮಹಿಳೆಯರು ಸೌಂದರ್ಯಪ್ರಿಯರು ಟ್ಯಾನಿಂಗ್, ಸನ್ ಬರ್ನ್, ಒಣ ಚರ್ಮದಿಂದ ಮುಕ್ತಿ ಪಡೆದು ಮೃದು ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಜನರು ವಿವಿಧ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿಯೇ ಕೆಲವು ಫೇಸ್ ಪ್ಯಾಕ್ಗಳನ್ನು ತಯಾರಿಸಿ ಮುಖಕ್ಕೆ ಹಚ್ಚಿ ತ್ವಚೆಯನ್ನು ಹೊಳೆಯುವಂತೆ ಮಾಡಬಹುದಾಗಿದೆ. * ಎರಡು ಚಮಚ ಸಾಸಿವೆಯನ್ನು ಮೊದಲಿಗೆ ಪುಡಿ ಮಾಡಿಕೊಳ್ಳಿ. ನಂತರ ಪುಡಿಗೆ ಒಂದು ಚಮಚ ಅಲೋವೆರಾ ಜೆಲ್ ಅನ್ನು ಹಾಕಿ ನಂತರ ಎರಡನ್ನು ಹೊಂದಿಕೊಳ್ಳುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮುಖಕ್ಕೆ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಇಪ್ಪತ್ತು ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. Dry Ginger Benefits: ಮನೆಯಲ್ಲಿ ಒಣ ಶುಂಠಿ ಇದ್ಯಾ.? ಹಾಗಿದ್ರೆ ನಿಮಗೆ ಈ ಆರೋಗ್ಯ ಸಮಸ್ಯೆಗಳೇ ಕಾಡುವುದಿಲ್ಲ.! * ಸಾಸಿವೆ ಪೌಡರ್ ಗೆ 1 ಚಮಚ ಮೊಸರನ್ನು ಮಿಶ್ರಣ ಮಾಡಿ. ನಂತರ ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ…

Read More

ಕೊಡಗು: ಅಪ್ರಾಪ್ತ ಬಾಲಕನೋರ್ವ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡ ಪರಿಣಾಮ ರೆಸಾರ್ಟ್ ವೊಂದರ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ ಹೇರೂರು ಜಂಗಲ್ ರೆಸಾರ್ಟ್ ನ ಸಮೀಪದಲ್ಲಿ ಇಂದು ಸಂಜೆ ಈ ಘಟನೆ ಸಂಭವಿಸಿದೆ. 7ನೇ ಹೊಸಕೋಟೆ ಕಲ್ಲೂರು ಗ್ರಾಮದ ಅಬ್ಬಾಸ್ ಎಂಬುವವರ ಅಪ್ರಾಪ್ತ ಪುತ್ರ ಆಲ್ಟೊ ಕಾರು ಅನ್ನು ಬಾಡಿಗೆಗೆ ಪಡೆದುಕೊಂಡಿದ್ದಾನೆ. ಈತ ಕಾರನ್ನು ಚಲಾಯಿಸಿಕೊಂಡು ಬಸವನಹಳ್ಳಿ ಮಾರ್ಗವಾಗಿ ಅತೀ ವೇಗದಿಂದ ಬಂದಿದ್ದಾನೆ. ಆದರೆ ಅದಾಗಲೇ ನಿಯಂತ್ರಣ ಕಳೆದುಕೊಂಡಿದ್ದ ಕಾರು ರಸ್ತೆಯ ಇನ್ನೊಂದು ಬದಿಯಲ್ಲಿರುವ ರೆಸಾರ್ಟ್ ನ ವಾಹನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿನ ಕಾಂಪೌಂಡ್ ಗೆ ಅಪ್ಪಳಿಸಿ ರಸ್ತೆಯಲ್ಲಿ ಮೂರು ಸಲ ಪಲ್ಟಿ ಹೊಡೆದಿದೆ. ಈ ಸಂದರ್ಭ ರೆಸಾರ್ಟ್ ನ ವಾಹನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಕಾಂಪೌಂಡ್ ಸಮೀಪಕರ್ತವ್ಯ ನಿರತರಾಗಿದ್ದ ಇಬ್ಬರು ಮಹಿಳಾ ಸಿಬ್ಬಂದಿಗಳಿಗೆ ಕೂಡ ಕಾರು ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡು ಚಿಂತಾಜನಕರಾಗಿರುವ ಇವರನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.…

Read More

ಮಂಗಳೂರು:- ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥನಿಗೆ ಜೀವ ಬೆದರಿಕೆ ಹೊಡ್ಡಿದ ಆರೋಪಡದಿ ಶಾಸಕನ ಬೆಂಬಲಿಗರ ವಿರುದ್ಧ FIR ದಾಖಲಾಗಿದೆ. ಜಿಲ್ಲೆಯ ಪುತ್ತೂರು ತಾಲೂಕಿನ ತಾರಿಗುಡ್ಡೆಯಲ್ಲಿರುವ ಜಯಾನಂದ ಮನೆಗೆ ರೌಡಿಶೀಟರ್ ಪ್ರಜ್ವಲ್ ರೈ ಮತ್ತು ಕಾಂಗ್ರೆಸ್ ಬೆಂಬಲಿಗರು ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ. ಘಟನೆ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ‌ ದಾಖಲಾಗಿದೆ ಅನುದಾನ ಹಂಚಿಕೆ ವಿಚಾರದಲ್ಲಿ ಕಿರಿಕ್ ನಡೆದಿದ್ದು ಪುತ್ತೂರು ಶಾಸಕರು ಅತೀ ಹೆಚ್ಚು ಅನುದಾನ ತಂದಿದ್ದಾರೆ ಅನ್ನೋ ಕುರಿತು ಸ್ಪಷ್ಟನೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಪೋಸ್ಟ್ ಹಾಕಿದ್ದರು. ಇದೇ ವಿಚಾರಕ್ಕೆ ಶಾಸಕ ಅಶೋಕ್ ರೈ ಬೆಂಬಲಿಗರೆನ್ನಲಾದ ತಂಡವೊಂದು ಮನೆಗೆ ನುಗ್ಗಿ ದಾಂಧಲೆ ಮಾಡಿದೆ. ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ವಾರ್ ಶುರುವಾಗಿದೆ. ಚೆಂಡೆ ವಾಳಗದ ಮೂಲಕ ಕಾಂಗ್ರೆಸ್ ನ ಅನುದಾನದ ಬ್ಯಾನರ್ ಹಿಡಿದು ಬಿಜೆಪಿಯ ಜಯಾನಂದ ಅವರ ಮನೆಗೆ ನುಗ್ಗಿ ಪುಂಡಾಟ ಮೆರೆಯಲಾಗಿದೆ ಎಂದು ಹೇಳಲಾಗಿದೆ.

Read More

ತಮ್ಮ 29ನೇ ವಯಸ್ಸಿಗೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಪಂಜಾಬಿ ಗಾಯಕ ನಟ ಸಿಧು ಮೂಸೆವಾಲಾ ಅವರ ತಾಯಿ ಚರಣ ಸಿಂಗ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪಂಜಾಬ್ ಸಂಗೀತ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿದ್ದ ಸಿಧು ಮೂಸೆವಾಲಾ ಹತ್ಯೆಯಿಂದ ಮಗನನ್ನು ಕಳೆದುಕೊಂಡ ಅವರ ತಂದೆ ತಾಯಿ ಅಕ್ಷರಶಃ ಆಕಾಶವೇ ಕಳಚಿ ಬಿದ್ದವರಂತಾಗಿದ್ದರು. ಇದೀಗ ಎರಡು ವರ್ಷದ ನಂತರ ಗಾಯಕನ ಪೋಷಕರು ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ತನ್ನ ಪತ್ನಿ, ಸಿಧು ಮೂಸೆವಾಲಾ ತಾಯಿ ಚರಣ್ ಕೌರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ತಮ್ಮ ಪುಟ್ಟ ಮಗನ ಫೋಟೋವನ್ನು ಹಂಚಿಕೊಂಡಿರುವ ಸಿದು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್, ‘ಶುಭದೀಪ್ ಅವರನ್ನು ಪ್ರೀತಿಸುವ ಲಕ್ಷಾಂತರ ಮನಸ್ಸುಗಳ ಆಶೀರ್ವಾದದಿಂದ ಆ ದೇವರು ಶುಭ್ ಅವರ…

Read More

ದಕ್ಷಿಣ ಕನ್ನಡ:- ಲೋಕಸಭಾ ಚುನಾವಣೆ ಮುಗಿದ ಮೇಲೆ ‘ಮೇ’ ನಲ್ಲಿ ವಿಧಾನಸಭಾ ಚುನಾವಣೆ ಬರುತ್ತದೆ ತಯರಾಗಿ ಎಂದು ಪದಾಧಿಕಾರಿಗಳ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರಿಗೆ ಸೂಚನೆ‌ ನೀಡಿದ್ದಾರೆ. ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಟೀಲ್, ‘ಲೋಕಸಭೆ ಚುನಾವಣೆ ಮುಗಿದ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರುತ್ತದೆ. ಈ ಬಗ್ಗೆ ನಮಗೆ ಅತ್ಯಂತ ಸ್ಪಷ್ಟ ವಿಶ್ವಾಸವಿದೆ ಎಂದಿದ್ದಾರೆ. ಇನ್ನು ಇದೇ ವೇಳೆ ಶಿವಮೊಗ್ಗದಿಂದ ಕೆ.ಎಸ್​​.ಈಶ್ವರಪ್ಪ ಸ್ವತಂತ್ರ ಸ್ಪರ್ಧೆ ವಿಚಾರ , ‘ಈಶ್ವರಪ್ಪ ಜೊತೆ ಮಾತುಕತೆ ಮಾಡುತ್ತಿದ್ದು, ಎಲ್ಲವೂ ಸರಿಹೋಗುತ್ತದೆ. ಜಿಲ್ಲೆಯಲ್ಲಿ ಒಂದು ರಾಜಕೀಯ ಪಾರ್ಟಿಗಳಲ್ಲಿ ಇರುವ ಸಮಸ್ಯೆ ಇದೆ. ವಿಧಾನಸಭಾ ಕ್ಷೇತ್ರದಲ್ಲಿ ಹತ್ತಕ್ಕೂ ಹೆಚ್ಚು ಸಮರ್ಥ ನಾಯಕರಿದ್ದಾರೆ. ಆದ್ದರಿಂದ ನಮ್ಮಲ್ಲಿ ನಾಯಕತ್ವದ ಗೊಂದಲ ಇದೆ. ಭಾರತಮಾತೆ ಹಾಗೂ ಮೋದಿಗಾಗಿ ಈ ಗೊಂದಲವೆಲ್ಲವನ್ನು ಬದಿಗಿಟ್ಟು ಕೆಲಸ ಮಾಡುತ್ತಾರೆ. ನನಗೆ ಕೇರಳದ ಚುನಾವಣೆ ಕೂಡ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಆದರೆ, ನನ್ನ ಕ್ಷೇತ್ರಕ್ಕೆ ನಾನು ಹೆಚ್ಚು ಸಮಯ ನೀಡುತ್ತೇನೆ ಎಂದು ಹೇಳಿದರು.

Read More

ODI ಫಾರ್ಮ್ಯಾಟ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂಕಿಅಂಶಗಳನ್ನು ಹತ್ತಿರದಿಂದ ನೋಡಲು ಇದು ಒಳ್ಳೆಯ ಅವಕಾಶವೆಂದೇ ಹೇಳಬಹುದು! ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಅಗ್ರ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಐತಿಹಾಸಿಕ ದಾಖಲೆಯನ್ನು ಸಹ ನೋಡಬಹುದು. ಸಚಿನ್ ಒಟ್ಟು 971 ರನ್ ಗಳಿಸಿದ್ದಾರೆ, ತಮ್ಮ 22 ವರ್ಷಗಳ ಏಷ್ಯಾ ಕಪ್ ವೃತ್ತಿಜೀವನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಹೊಂದಿದ್ದಾರೆ. ಭಾರತದ ನಾಯಕ ಶರ್ಮಾ 745 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದರೆ, ಕೊಹ್ಲಿ 613 ಸ್ಕೋರ್‌ನೊಂದಿಗೆ 12 ನೇ ಸ್ಥಾನದಲ್ಲಿ ಸ್ವಲ್ಪ ಮುಂದೆ ನಿಂತಿದ್ದಾರೆ. ನಾಯಕತ್ವದ ಅಂಕಿಅಂಶಗಳು ಮತ್ತು ಸಂಖ್ಯೆಗಳ ಆಚೆಗೆ, MS ಧೋನಿ ನಂತರ ತನ್ನ ಆಟಗಾರರಲ್ಲಿ ನಿರ್ದಯ ಮನೋಭಾವವನ್ನು ಅಳವಡಿಸಿಕೊಳ್ಳುವ ಮೂಲಕ ಕೊಹ್ಲಿ ತಂಡವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಲು ಸಹಾಯ ಮಾಡಿದರು ಎಂಬುದರ ಬಗ್ಗೆ ಹ್ಯಾಡಿನ್ ಅಪಾರ ಗೌರವವನ್ನು ಸಲ್ಲಿಸಿದರು. ಯೋ-ಯೋ ಟೆಸ್ಟ್‌ನ ಪರಿಚಯ ಮತ್ತು ಮಹಾಕಾವ್ಯ ’60 ಓವರ್‌ಗಳ…

Read More

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದರೂ ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕಾಲಾವಕಾಶ ಇದೆ. ಹೊಸದಾಗಿ ಹೆಸರು ಸೇರ್ಪಡೆ ಮಾಡುವವರು ಅಥವಾ ಹೆಸರು ಬಿಟ್ಟು ಹೋಗಿರುವವರು ಒಮ್ಮೆ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮತ್ತೆ ಅರ್ಜಿ ಸಲ್ಲಿಸಬಹುದು. ಅಂತಹ ಅರ್ಜಿಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಮಾ.31ರೊಳಗೆ 18 ವರ್ಷ ತುಂಬುವ ಯುವ ಮತದಾರರಿಗೂ ಮುಂಗಡವಾಗಿಯೇ ಹೆಸರು ಸೇರ್ಪಡೆ ಮಾಡಬಹುದಾಗಿದೆ. ಅಂತಹ ಯುವಜನತೆ ಇದೀಗ ಅರ್ಜಿ ಸಲ್ಲಿಸಿದರೆ ಅವುಗಳನ್ನು ಏ.1ರ ನಂತರ ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಈಗಾಗಲೇ ಅಂತಹ 50 ಸಾವಿರ ಮಂದಿ ಮುಂಗಡ ಅರ್ಜಿ ಸಲ್ಲಿಸಿದ್ದು, ಅವರ ಹೆಸರು ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ವೋಟರ್ ಐಡಿ ಕಾರ್ಡ್‌ ಯಾರಿಗೆ ಕೊಡ್ತಾರೆ? ಅರ್ಹತೆ ಏನು? ವೋಟರ್ ಐಡಿ ಕಾರ್ಡ್‌ ಪಡೆಯಬೇಕು ಅಂದ್ರೆ, ನಿಮಗೆ 18 ವರ್ಷ ತುಂಬಿರಬೇಕು. ಭಾರತದ ಪ್ರಜೆ ಆಗಿರಬೇಕು. ಇನ್ನು ನೀವು ಕರ್ನಾಟಕದಲ್ಲಿ ಮತ ಚಲಾಯಿಸಬೇಕಾದ ಕಾರಣ, ಕರ್ನಾಟಕದ…

Read More

ಸಾಮಾನ್ಯವಾಗಿ ಎಲ್ಲ ಆಹಾರಕ್ಕೂ ವಿರುದ್ಧ ಆಹಾರಗಳು ಇರುತ್ತವೆ. ಹಾಗೆಯೇ ಮಾವಿನ ಹಣ್ಣಿಗೆ ಕೂಡ ವಿರುದ್ಧ ಆಹಾರವಿದೆ. ಮಾವಿನ ಹಣ್ಣಿನ ಜೊತೆ ಅಂತಹ ಆಹಾರವನ್ನು ಸೇವಿಸಿದಾಗ ಕೆಲವರಿಗೆ ಹೊಟ್ಟೆಯ ತೊಂದರೆ, ವಾಂತಿ, ಅಲರ್ಜಿ, ಚರ್ಮ ದ ತೊಂದರೆ ಅಥವಾ ಹೊಟ್ಟೆನೋವು ಇತ್ಯಾದಿ ಕಾಣಿಸಿಕೊಳ್ಳುತ್ತದೆ. ಅಂತಹ ಆಹಾರಗಳ ಸಂಯೋಜನೆ ಶರೀರಕ್ಕೆ ವಿಷಕಾರಿಯಾಗುತ್ತದೆ. ಆದ್ದರಿಂದ ಮಾವಿನ ಹಣ್ಣಿನ ಜೊತೆ ಅವುಗಳನ್ನು ಸೇವಿಸದೇ ಇರುವುದು ಆರೋಗ್ಯಕ್ಕೆ ಒಳ್ಳೆಯದು. ಮಾವಿನಹಣ್ಣಿಗೆ ವಿರುದ್ಧವಾದ ಅಂತಹ ಆಹಾರಗಳು ಯಾವುದೆನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಮೊಸರು :ಅನೇಕ ಜನರು ಮಾವಿನ ಹಣ್ಣಿನ ಶ್ರೀಖಂಡ ಇಷ್ಟಪಡುತ್ತಾರೆ. ಇನ್ಕೆಲವರು ಮಾವಿನ ಹಣ್ಣಿನ ಲಸ್ಸಿ ಕುಡಿಯುತ್ತಾರೆ. ಈ ಕಾಂಬಿನೇಶನ್ ಎಲ್ಲರ ಆರೋಗ್ಯಕ್ಕೂ ಹೊಂದುವುದಿಲ್ಲ. ಇದರಿಂದ ದೇಹದಲ್ಲಿ ಶಾಖ ಮತ್ತು ಶೀತ ಹೆಚ್ಚುತ್ತದೆ. ಕೆಲವರಿಗೆ ಮಾವಿನಹಣ್ಣು ಮತ್ತು ಮೊಸರಿನ ಮಿಶ್ರಣದಿಂದ ಹೊಟ್ಟೆಯ ಸೆಳೆತ ಆರಂಭವಾಗುತ್ತದೆ. ನೀರು :ಮಾವಿನ ಹಣ್ಣನ್ನು ತಿಂದ ತಕ್ಷಣ ನೀರು ಕೂಡ ಕುಡಿಯಬಾರದು. ಇದು ಶರೀರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆನೋವು, ಆಮ್ಲೀಯತೆ ಮತ್ತು…

Read More

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿದಿದೆ. ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ RCB ಮಹಿಳಾ ಪಡೆ ಕಪ್ ಗೆದ್ದಿದೆ. ಇನ್ನು ಈ ಸೀಸನ್​ನಲ್ಲಿ ವಿವಿದ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ ಆಟಗಾರ್ತಿಯರು ಯಾರ್ಯಾರು? ಅವರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು ಎಂಬುದನ್ನು ನೋಡುವುದಾದರೆ… ಕಳೆದ ಬಾರಿಯಂತೆ ಈ ಬಾರಿಯೂ ಚಾಂಪಿಯನ್ ತಂಡಕ್ಕೆ 6 ಕೋಟಿ ರೂಪಾಯಿಗಳನ್ನು ಬಹುಮಾನವನ್ನಾಗಿ ನೀಡಲಾಗಿದೆ. ಅಂದರೆ ಚಾಂಪಿಯನ್ ಆರ್​ಸಿಬಿ ಟ್ರೋಫಿಯೊಂದಿಗೆ 6 ಕೋಟಿ ರೂಗಳನ್ನು ತನ್ನ ಖಾತೆಗೆ ಹಾಕಿಕೊಂಡು ಲೀಗ್​ಗೆ ವಿದಾಯ ಹೇಳಿದೆ. ಫೈನಲ್ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಮುಗ್ಗರಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟದಿಂದ ವಂಚಿತವಾದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಬಾರಿಯಂತೆ ಈ ಬಾರಿಯೂ ರನ್ನರ್​ಅಪ್​ಗೆ ತೃಪ್ತಿಪಟ್ಟಿದ್ದು, 3 ಕೋಟಿ ರೂಗಳನ್ನು ತನ್ನ ಖಾತೆಗೆ ಹಾಕಿಕೊಂಡಿದೆ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದ ಮುಂಬೈ ಇಂಡಿಯನ್ಸ್ ತಂಡಕ್ಕೆ 1 ಕೋಟಿ ರೂಗಳನ್ನು ಬಹುಮಾನವನ್ನಾಗಿ ಪಡೆದಿದೆ. ಫೈನಲ್​ಗೂ…

Read More