Author: AIN Author

ಬೆಂಗಳೂರು:- ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL) ಮೊದಲ ಬಾರಿಗೆ RCM ತಂಡ ಟ್ರೋಫಿಯನ್ನು ಗೆದ್ದು, ಅಭಿಮಾನಿಗಳ ಆಸೆ ಈಡೇರಿಸಿದೆ. ಆರ್‌ಸಿಬಿ ಜಯಗಳಿಸುತ್ತಿದ್ದಂತೆ ಬೆಂಗಳೂರಿನ(Bengaluru) ಹಲವೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬೆಂಗಳೂರು ಮಾತ್ರವಲ್ಲ ದೆಹಲಿಯ ಮೆಟ್ರೋದಲ್ಲೂ ಅಭಿಮಾನಿಗಳ ಆರ್‌ಸಿಬಿ ಆರ್‌ಸಿಬಿ ಎಂದು ಹೇಳಿ ಘೋಷಣೆ ಮೊಳಗಿಸುತ್ತಿದ್ದರು. ಈ ಸಂಭ್ರಮಕ್ಕೆ ಕಾರಣವೂ ಇತ್ತು. ವಿರಾಟ್‌ ಕೊಹ್ಲಿ, ಎಬಿಡಿ ವಿಲಿಯರ್ಸ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ರಂತಹ ಘಟಾನುಘಟಿ ಆಟಗಾರರಿದ್ದರೂ ಇಲ್ಲಿಯವರೆಗೆ ಕಪ್‌ ಗೆದ್ದಿರಲಿಲ್ಲ. ಕಳೆದ 16 ಐಪಿಎಲ್‌ (IPL) ಟೂರ್ನಿ ಪೈಕಿ ಪುರುಷರ ತಂಡ 2009, 2011, 2016 ಫೈನಲ್‌ ಪ್ರವೇಶಿಸಿದ್ದರೂ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತ್ತು. ಆದರೆ ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಆರ್‌ಸಿಬಿ ಅಭಿಮಾನಿಗಳ ಬಹು ವರ್ಷದ ಕನಸು ಈಡೇರಿತು.

Read More

ಮೈಸೂರು: “ಚಾಮುಂಡೇಶ್ವರಿ ಕ್ಷೇತ್ರ ಮಡಿಲಿಗೆ ಬಂದಿದ್ದಾರೆ ಯದುವೀರ್ ಒಡೆಯರ್. ಯದುವೀರ್ ಗೆ ವೋಟ್ ಹಾಕಿದ್ರೆ ಚಾಮುಂಡೇಶ್ವರಿಗೆ ಹೂವು ಹಾಕಿದಂತೆ. ಅವರನ್ನು ಗೆಲ್ಲಿಸಬೇಕೆಂದು ಎಚ್ ಡಿ ದೇವೇಗೌಡರು ಮತ್ತು ಎಚ್ ಡಿ ಕುಮಾರಸ್ವಾಮಿ ಸಹ ತಿಳಿಸಿದ್ದಾರೆ. ಹಾಗಾಗಿ ಯದುವೀರ್‌ ಅವರನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿ. ” – ಇದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈಸೂರು ರಾಜವಂಶಸ್ಥರಾದ ಯದುವೀರ್ ಒಡೆಯರ್ ಅವ ಸ್ಪರ್ಧೆಗೆ ಜೆಡಿಎಸ್ ಬೆಂಬಲ ಕುರಿತಾಗಿ ಮಾಜಿ ಸಚಿವ, ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷರಾಗಿರುವ ಜಿಟಿ ದೇವೇಗೌಡ ಅವರ ಮಾತುಗಳು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಶುಕ್ರವಾರ ಶಾಸಕ ಹಾಗೂ ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿ ತಮ್ಮ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು. https://ainlivenews.com/great-job-opportunities-for-puc-passers-salary-%e2%82%b963000-per-month-apply-now/ ಈ ಸಂದರ್ಭದಲ್ಲಿ ಮಾತನಾಡಿದ ಜಿಟಿ ದೇವೇಗೌಡ ಅವರು, ಜೆಡಿಎಸ್‌ ಮತದಾರರು ಬಿಜೆಪಿ ಅಭ್ಯರ್ಥಿ ಯದುವೀರ್‌ ಅವರಿಗೆ ಹಾಕುವ ಪ್ರತಿಯೊಂದು ಮತವೂ ಚಾಮುಂಡೇಶ್ವರಿಗೆ ಹೂ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ 17ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಬೆಳಗಾವಿ, ಬೀದರ್, ಧಾರವಾಡ, ರಾಯಚೂರು, ಕಲಬುರಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಒಣಹವೆ ಮುಂದುವರೆಯಲಿದೆ. ಬಾಗಲಕೋಟೆ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದೆ, ಎಚ್​ಎಎಲ್​ನಲ್ಲಿ 34.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.9 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, ನಗರದಲ್ಲಿ 34.5ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.1 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 34.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 34.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ನಗತರಪೇಟೆಯಲ್ಲಿ ಭಕ್ತಿಗೀತೆ ಹಾಡುಗಳನ್ನ ಹಾಕಿದಕ್ಕೆ ಐದಾರು ಮಂದಿಯ ಗುಂಪು ಮೊಬೈಲ್ ಶಾಪ್ ನಡೆಸುತ್ತಿದ್ದ ಯುವಕನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ ನಡೆಸುತ್ತಿದ್ದ ಮುಕೇಶ್ ಎಂಬುವವರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದು, ದುಷ್ಕರ್ಮಿಗಳ ದಾಂಧಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಂದ ಮುಕೇಶ್, ಹಲಸೂರು ಪೊಲೀಸ್‌ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಾಯಾಳು ಮುಕೇಶ್, ಆರು ಜನ ಬಂದಿದ್ರು, ಯಾರ್ಯಾರು ಎಂದು ಹೆಸರು ಗೊತ್ತಿಲ್ಲ. ನಾನು ಸಂಜೆ ಆರು ಗಂಟೆಗೆ ಭಜನೆ ಹಾಡು ಪ್ಲೇ ಮಾಡ್ತಾ ಇದ್ದೆ. ಆಗ ಅವರು ಬಂದು ನಮಗೆ ತೊಂದರೆ ಆಗ್ತಾ ಇದೆ ಹಾಡು ನಿಲ್ಲಿಸು ಅಂತಾ ಗಲಾಟೆ ಮಾಡಿದ್ರು. ನಂತರ ನನ್ನ ಮೇಲೆ ಹಲ್ಲೆ ಮಾಡಿದ್ರು. ಈ ಮುಂಚೆ ನನಗೆ ಅವರ ಯಾವುದೇ…

Read More

ಕಲಬುರಗಿ : 7ನೇ ವೇತನ ಆಯೋಗದ ಅಂತಿಮ ಶಿಫಾರಸು ಈಡೇರಿಸುವ ಕರ್ತವ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರದ್ದು ಇದೆ. ಆದರೆ, ಬಜೆಟ್‌ನಲ್ಲಿ ಒಂದು ನಯಾಪೈಸೆ ಕೊಟ್ಟಿಲ್ಲ. ಸರ್ಕಾರಿ ನೌಕರರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏಳನೆ ವೇತನ ಆಯೋಗದ ವರದಿ ಜಾರಿ ಮಾಡಬೇಕು. ಚುನಾವಣೆ ಪೂರ್ವದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಸಿಎಂ ಸಿದ್ದರಾಮಯ್ಯ ಬಹಳಷ್ಟು ಭಾಷಣ ಮಾಡುತ್ತಿದ್ದರು. ಈಗ ಅವರು ಅಧಿಕಾರದಲ್ಲಿದ್ದಾರೆ. ನಾವು ಶೇ.17ರಷ್ಟು ಮಧ್ಯಂತರ ಪರಿಹಾರ ಕೊಟ್ಟಿದ್ದೇವು ಎಂದು ಹೇಳಿದರು. https://ainlivenews.com/great-job-opportunities-for-puc-passers-salary-%e2%82%b963000-per-month-apply-now/ ಸಿದ್ದರಾಮಯ್ಯನವರಿಗೆ ಮಾರ್ಚ್ ಏಪ್ರಿಲ್‌ನಲ್ಲಿ 7ನೇ ವೇತನ ಆಯೋಗದ ವರದಿ ಬರುತ್ತದೆ ಅಂತ ಗೊತ್ತಿದ್ದರೂ ಕೂಡಾ ಬಜೆಟ್‌ನಲ್ಲಿ ಯಾವುದೇ ಹಣ ಮೀಸಲಿಡದೇ. ಸರ್ಕಾರಿ ನೌಕರರಿಗೆ ಮೂಗಿಗೆ ತುಪ್ಪ ಒರಿಸುವ ಕೆಲಸ ಮಾಡಿದ್ದಾರೆ. ವರದಿ ಜಾರಿ ಆಗುತ್ತದೆಯೋ ಇಲ್ಲವೋ ಕಾದು ನೋಡಬೇಕು. 7ನೇ ವೇತನ ಆಯೋಗದ ವರದಿ ರೆಡಿಯಾಗಿತ್ತು, ಆದರೂ ಆರು ತಿಂಗಳು ಕಾಲಾವಕಾಶ ನೀಡಿದರು. ಈಗ…

Read More

ಪೀಣ್ಯ ದಾಸರಹಳ್ಳಿ:’ ಯಾರದೋ ಮಾತನ್ನು ಕೇಳಿ ಕಾರಣವಿಲ್ಲದೆ ಬಿಬಿಎಂಪಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಬೇಜವಾಬ್ದಾರಿತನದಿಂದ ಅಧಿಕಾರ ನಡೆಸುತ್ತಿದ್ದಾರೆ’ ಎಂದು ಶಾಸಕ ಎಸ್. ಮುನಿರಾಜು ದೂರಿದರು. ಈ ಸಂಬಂಧ ಮಾತನಾಡಿದ ಅವರು, ಕಮಿಷನರ್ ಗೆ ಯೋಗ್ಯತೆ ಇದ್ದರೆ ನಮ್ಮಲ್ಲಿ ಖಾಲಿ ಇರುವ ಅಧಿಕಾರಿಗಳ ಸ್ಥಾನಗಳನ್ನು ಪೂರ್ಣ ಮಾಡಲಿ, ಈ ಬಗ್ಗೆ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಅವರಿಗೆ ಪತ್ರ ಬರೆದಿದ್ದೇನೆ’ ಇತ್ತೀಚಿಗೆ ನನ್ನ ಕ್ಷೇತ್ರದ ಪಾಲಿಕೆ ಅಧಿಕಾರಿಗಳನ್ನು ಎಂಜಿನಿಯರ್ ಧರ್ಮೇಂದ್ರ ಕುಮಾರ್ ಅವರು ಬಂದು ಮೂರು ತಿಂಗಳಾಗಿಲ್ಲ ಬದಲಿಸಿದ್ದಾರೆ. ಪ್ರಾಜೆಕ್ಟ್ ನ ಒಬ್ಬ ಮಹಿಳಾ ಎಂಜಿನಿಯರ್ ಅವರು ಎರಡು ತಿಂಗಳಾಗಿಲ್ಲ ಬದಲಿಸಿದ್ದಾರೆ. ಇನ್ನೊಬ್ಬ ಅಧಿಕಾರಿ ಎಇಇ ಕೃಷ್ಣಮೂರ್ತಿ ಅವರನ್ನು ಬದಲಿಸಿದ್ದಾರೆ. ನಮಗೆ ನಾಲ್ಕು ಜನ ಎಇಇ ಬೇಕು. ಆದರೆ ಈಗ ಇರುವುದು ಒಬ್ಬರೇ, ಸರಿಯಾದ ಇಇ ಗಳಿಲ್ಲ,ಎಇ ಗಳಿಲ್ಲ, ಆಫೀಸ್ ಸ್ಟಾಫ್ ಗಳು ಇಲ್ಲ, ಕೇಳಿದರೆ ಚುನಾವಣೆ ಅಲ್ಲಿಗೆ ಹೋಗಿದ್ದಾರೆ, ಇಲ್ಲಿಗೆ ಹೋಗಿದ್ದಾರೆ…

Read More

ಚಿಕ್ಕಮಗಳೂರು: ಬಿಜೆಪಿ ಹಿರಿಯ ನಾಯಕ ಈಶ್ವರಪ್ಪನವರ ಜೊತೆ ಹೈ ಕಮಾಂಡ್ ಮಾತನಾಡುತ್ತೆ. ಈಶ್ವರಪ್ಪ ನಿರ್ಧಾರದಿಂದ ಪಕ್ಷಕ್ಕೆ ಮಾರಕ ಆಗಬಾರದು. ಮೂರು ಸಲ ರಾಜ್ಯ ಬಿಜೆಪಿ ಅಧ್ಯಕ್ಷ, ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದವರು. ದೇಶದಲ್ಲಿ ಒಂದೊಂದು ಸೀಟು ಕೂಡ ಅಮೂಲ್ಯವಾದದ್ದು, ನಾವೆಲ್ಲ ಒಂದಾಗಿ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು. ಮಾಧ್ಯಮದವರ ಜೊತೆ ಮಾತನಾಡಿದ ಅವರು,ಈಶ್ವರಪ್ಪ ಅವರಿಗೂ ವಿನಂತಿ ಮಾಡಿಕೊಳ್ಳುತ್ತೇನೆ. ನಿಮ್ಮ ನಿರ್ಣಯ ಪಕ್ಷಕ್ಕೆ ,ದೇಶಕ್ಕೆ ಹಿತವಾಗಿರಬೇಕು. ಅವರ ನಿರ್ಧಾರವನ್ನು ಮರು ಪರಿಶೀಲನೆ ಮಾಡಿಕೊಳ್ಳಬೇಕು. ನಮ್ಮ ಪಕ್ಷದ ವರಿಷ್ಠರು ಈಶ್ವರಪ್ಪ ನವರ ಮನವೊಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. https://ainlivenews.com/great-job-opportunities-for-puc-passers-salary-%e2%82%b963000-per-month-apply-now/ ಈಶ್ವರಪ್ಪ ಅವರ ನಿರ್ಧಾರದಿಂದ ಪಕ್ಷಕ್ಕೆ ಹಾನಿಯಾಗಬಾರದು. ನಾನು ನನ್ನ ಬಗ್ಗೆ ಮಾತ್ರ ಮಾತನಾಡು ತ್ತೇನೆ. ನಾನು 95 ರ ನಂತರ ಪಕ್ಷದಲ್ಲಿ ಏನನ್ನು ಕೇಳಿ ಪಡೆದಿಲ್ಲ. ಅಭ್ಯರ್ಥಿ ಘೋಷಣೆಯಾಗಿದೆ. ನಾನೇ ಅವರು ಅವರೇ ನಾನು ಎಂದು ಕೆಲಸ ಮಾಡುತ್ತೇನೆ. ಪಕ್ಷವನ್ನು ಗೆಲ್ಲಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ. ಯಾರು ಸ್ವಾರ್ಥದ ರಾಜಕಾರಣ ಮಾಡುತ್ತಾರೆ.…

Read More

ಬೆಂಗಳೂರು:- ನಗರದ ಗಾಯತ್ರಿ ಅಸೋಸಿಯೇಟ್ ಗೋದಾಮಿನಲ್ಲಿ ಬೆಳಗ್ಗಿನ ಜಾವ 4 ಗಂಟೆಗೆ ಬೆಂಕಿ ಅವಘಡ ಸಂಭವಿಸಿದೆ. ಬೈರತಿ ಬಳಿಯ ದೊಡ್ಡ ಗುಬ್ಬಿ ಬಳಿ ಘಟನೆ ಜರುಗಿದೆ. ಗೋಡೌನ್ ನಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿ ಆಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ. 8 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ದೌಡಾಯಿಸಿದ್ದು, ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಡಿ ಮಾರ್ಟ್ ಸೇರಿ ಪ್ರತಿಷ್ಟಿತ ಸೂಪರ್ ಮಾರ್ಕೆಟ್ ಗಳಿಗೆ ಸಾಗಿಸುವ ಸಾಮಾಗ್ರಿಗಳನ್ನು ಸಂಗ್ರಹಿಸುವ ಗೋದಾಮು ಎನ್ನಲಾಗಿದೆ.

Read More

ಮಂಡ್ಯ:- ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್​ (JDS) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಎನ್​ಡಿಎ ಒಕ್ಕೂಟದಲ್ಲಿ ಸೇರ್ಪಡೆಯಾಗಿದೆ. ಇದು ಸಂಸದೆ ಸುಮಲತಾ ಅಂಬರೀಶ್​ ಅವರಿಗೆ ಮುಳುವಾಗಿ ಪರಿಣಮಿಸಿದೆ. ಈ ಬಾರಿಯೂ ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತೇನೆಂದು ಪಟ್ಟು ಹಿಡಿದಿರುವ ಸುಮಲತಾ ಅಂಬರೀಶ್​ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೌದು ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್​ ಜೆಡಿಎಸ್​ ಪಾಲಾಗುವ ಸಾಧ್ಯತೆ ಇದೆ. ಇದರಿಂದ ಸಂಸದೆ ಸುಲಮತಾ ಅಂಬರೀಶ್​ ಮುಂದಿನ ನಡೆ ಏನು? ಎನ್ನುವ ಪ್ರಶ್ನೆ ಉದ್ಭವಿಸಿದೆ. ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಸರ್ವೆಗಳೂ ಸಹ ಬಿಜೆಪಿ-ಜೆಡಿಎಸ್ ಕರ್ನಾಟಕದಲ್ಲಿ 23 ಸ್ಥಾನ ಗೆಲ್ಲುತ್ತೆಂಬ ಭವಿಷ್ಯ ನುಡಿತಿವೆ. ಹೀಗಾಗಿ ಹುಮ್ಮಸ್ಸಿನಲ್ಲಿರೋ ದೋಸ್ತಿಗಳು ಸೀಟು ಹಂಚಿಕೆ ಫೈನಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶನಿವಾರ ರಂದು ದೆಹಲಿಗೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಅಮಿತ್ ಶಾ ಭೇಟಿ ಮಾಡಿದ್ದು, ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳು ಬಹುತೇಕ ಜೆಡಿಎಸ್​ ಪಾಲಾಗುವ ಸಾಧ್ಯತೆ ಇದೆ. ಮೂರು ಕ್ಷೇತ್ರಗಳ ಅಭ್ಯರ್ಥಿಯನ್ನ ನೀವೇ…

Read More

ಬೆಂಗಳೂರು:- ಗೋಬಿ ಮಂಚೂರಿಗೆ ಹಾಕುವ ರಾಸಾಯನಿಕ ಕೆಮಿಕಲ್ ನಿಂದ ಕಾನ್ಸರ್ ಹರಡುತ್ತಿದೆ ಎನ್ನುವುದು ಸ್ಪಷ್ಟವಾಗಿರುವ ಹಿನ್ನೆಲೆ ಆಹಾರ ಇಲಾಖೆ ಗೋಬಿ ಮಂಚೂರಿಗೆ ಹಾಕುವ ಕೆಮಿಕಲ್ ಬ್ಯಾನ್ ಮಾಡಿದೆ. ಸಧ್ಯ ಕೆಮಿಕಲ್‌ ಬ್ಯಾನ್ ಮಾಡಿ ಒಂದು ವಾರ ಕಳೆದಿದ್ದು, ಒಂದು ವಾರದಿಂದ ಗೋಬಿ ವ್ಯಾಪಾರಸ್ಥರ ವ್ಯಾಪಾರ ವಹಿವಾಟು 80% ರಷ್ಟು ಕುಸಿತವಾಗಿದೆ. ಗೋಬಿ ತಿನ್ನಲು ಗ್ರಾಹಕರು ಸಹ ಆಸಕ್ತಿ‌ ಕಳೆದು ಕೊಂಡಿದ್ದಾರೆ. ಹೀಗಾಗಿ ಮೆಜೆಸ್ಟಿಕ್, ಮಲ್ಲೇಶ್ವರಂ, ಜೆಪಿ ನಗರ, ರಾಜಾಜಿನಗರ, ವಿಜಯನಗರದ , ವಿಲ್ಸನ್ ಗಾರ್ಡಾನ್ ಸೇರಿದಂತೆ ವಿವಿಧೆಡೆ ಗೋಬಿ ಮಂಚೂರಿ‌ ವ್ಯಾಪಾರ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಪಾನಿಪೂರಿ, ಬೇಲ್‌ಪೂರಿ, ಸೇವ್ ಪೂರಿಗಳತ್ತ ಹೆಚ್ಚು ಜನರು ಮುಖ‌ ಮಾಡ್ತಿದ್ದಾರೆ. ಬಣ್ಣ ವಿಲ್ಲದ ಗೋಬಿಗಳನ್ನ ಮಾಡಿದ್ರು ಗ್ರಾಹಕರು ತೆಗೆದುಕೊಳ್ಳತ್ತಿಲ್ಲ. ವ್ಯಾಪಾರ ಮಾಡಿ ಜೀವನ ನಡೆಸೋದೆ ದೊಡ್ಡ ಸವಾಲಾಗಿ ಹೋಗಿದೆ.‌ ಈ ಹಿಂದೆ ಪ್ರತಿದಿನ 10 ಸಾವಿರದಷ್ಟು ವ್ಯಾಪಾರ ಮಾಡ್ತಿದ್ವಿ.‌ ಆದ್ರೀಗಾ 5 ಸಾವಿರ ರೂ ವ್ಯಾಪಾರ‌ ಮಾಡುವುದು‌ ಕೂಡ ಕಷ್ಟವಾಗಿ ಹೋಗಿದೆ.‌ ಹಾಕಿದ ಬಂಡವಾಳ…

Read More