Author: AIN Author

ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಾಲಾ ವಸೂಲಾತಿ ವಿರುದ್ದ ರೈತರು ಮುಗಿ ಬಿದ್ದಿದ್ದು ಸುಮಾರು 2 ವರ್ಷಗಳಿಂದ ಸಾಲಾ ವಸೂಲಾತಿ ನೀತಿಯನ್ನು ಅನುಸರಿಸುತ್ತಿದ್ದು ಹಾಗೆ ರೈತರನ್ನು ಶತೃಗಳ ರೀತಿ ನೋಡುತ್ತಿರುವುದರಿಂದ ರೈತರು ಅಸಮಾಧಾನದ ಭುಗಿಲೆದ್ದಿದ್ದಾರೆ. ಹೌದು.. ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ನಲ್ಲಿ ರೂತರ ಗೋಳು ಕೇಳೋರಿಲ್ಲದ ಹಾಗೆ ಆಗಿದೆ. ಕೃಷಿ ಸಾಲದ ಅಸಲಿನಲ್ಲಿ ಶೇ. 50 ರಷ್ಟು ಸಾಲದ ಮರುಪಾವರಿ ಅನುಮತಿ ಬೇಡಿಕೆ ಪರಿಗಣಿಸುವಂತೆ ರೈತರು ಮನವಿ ಮಾಡಿದ್ದಾರೆ. ಈ ಗ್ರಾಮೀಣ ಬ್ಯಾಂಕ್‌ ವಿರುದ್ಧ ಹೋರಾಟ ನಡೆಸಲು ಇದೇ ತಿಂಗಳು 28ನೇ ತಾರೀಕಿನಂದು ಹೋರಾಟ ನಡೆಸಲು ರೈತರು ಮುಂದಾಗಿದ್ದು ಈ ಗ್ರಾಮೀಣ ಬ್ಯಾಂಕ್‌ ವಿರುದ್ಧ ಕ್ರಮ ತೆಗದುಕೊಳ್ಳಲು ಮನವಿ ಮಾಡಲಾಗಿದೆ. ಆದರೆ ಇದರ ಬಗ್ಗೆ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳು ತುಟಿಕ್‌ ಪಿಟಿಕ್‌ ಅಂದಿಲ್ಲ ಆದರೆ ರೈತರು ಮಾತ್ರ ರೊಚ್ಚಿಗೆದ್ದಿದ್ದು ಎಲ್ಲರು ಪ್ರತಿಭಟನೆಗೆ ಬರಲೇಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆರು ಮಾದವ ರೆಡ್ಡಿ ಕರೂರು ರಾಜ್ಯ ಅಧ್ಯಕ್ಷರು…

Read More

ವಿಜಯಪುರ: ವಿದ್ಯುತ್‌ಗಾಗಿ ಸ್ಥಳೀಯ ನಿವಾಸಿಗಳಿಂದ ದಿಢೀರ್ ಪ್ರತಿಭಟನೆ ನಡೆಸಲಾಯಿತು. ವಿಜಯಪುರ ನಗರದ ಇಂಡಿ ರಸ್ತೆಯಲ್ಲಿ ಹಲವು ಮನೆಗಳ ವಿದ್ಯುತ್ ಕಟ್ ಮಾಡಿದನ್ನು ಖಂಡಿಸಿ ನಿವಾಸಿಗಳಿಂದ ಪ್ರತಿಭಟನೆ ಮಾಡಿದರು. ಐದು ವರ್ಷಗಳಿಂದ ವಿದ್ಯುತ್ ಉಪಯೋಗ ಮಾಡುತ್ತಿದ್ದರು. ಇದೀಗ್ ಏಕಾಏಕಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಟ್ ಮಾಡಿದ್ದಾರೆ. ಹೆಸ್ಕಾಂ ಅಧಿಕಾರ ವಿರುದ್ಧ ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ ಮಾಡಿದ್ದು, ಮತೆ ವಿದ್ಯುತ್‌ ನೀಡುವಂತೆ ಆಗ್ರಹಿಸಿದ್ದಾರೆ.

Read More

ಬೆಂಗಳೂರು: ನಾವು ಆಪರೇಷನ್‌ಗೆ ಸಿದ್ದರಿದ್ದೆವು, ಒಳ್ಳೆಯ ಹುಲಿಗಳು ಇದ್ದವು. ಆದರೆ ನಮ್ಮವರೇ ಕೆಲವರು ಕರೆತರಲು ಒಪ್ಪಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, 20 ಸೀಟಿಗಿಂತ ಹೆಚ್ಚು ಗೆದ್ದೇ ಗೆಲ್ಲುತ್ತೇವೆ. ಅಷ್ಟು ಆತ್ಮವಿಶ್ವಾಸ ನಮಗಿದೆ. ಬಿಜೆಪಿಯವರ (BJP) ಗೊಂದಲ ನೀವು ನೋಡುತ್ತಿದ್ದೀರಿ. ನಮ್ಮ ಟಿಕೆಟ್‌ ಘೋಷಣೆ ಆದಮೇಲೆ ಯಾವುದು ಗೊಂದಲ ಆಗಲ್ಲ ಎಂದರು. ಪಿಯುಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹63,000 ಸಂಬಳ! ಈಗಲೇ ಅರ್ಜಿ ಸಲ್ಲಿಸಿ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಸಂತೋಷದಿಂದ ಆತ್ಮವಿಶ್ವಾಸದಿಂದ ಎದುರಿಸುತ್ತೇವೆ. ನಮ್ಮ ಕಾರ್ಯಕರ್ತರು ಮತದಾರರು ಎಲ್ಲರ ಜೊತಗೂ ನಾವು ಏಳೆಂಟು ತಿಂಗಳಿನಿಂದ ತಯಾರಿ ಮಾಡಿದ್ದೇವೆ. ನುಡಿದಂತೆ ನಡೆದು ತೋರಿಸಿದ್ದರಿಂದ ಬಹಳ ಆತ್ಮವಿಶ್ವಾಸದಿಂದ ನಾವು ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದರು. ಮಾರ್ಚ್‌ 19ರ ರಾತ್ರಿ ಅಥವಾ 20 ರ ಬೆಳಿಗ್ಗೆ ನಮ್ಮ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತೇವೆ. ಆಡಳಿತರೂಡ ಪಕ್ಷದವರು ತಮಗೆ ಅನುಕೂಲಕ್ಕೆ ತಕ್ಕಂತೆ ದಿನಾಂಕ ಘೋಷಣೆ ಮಾಡಿದ್ದಾರೆ…

Read More

ಬೆಂಗಳೂರು: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಅನ್ನು ವೀಣಾ ಕಾಶಪ್ಪನವರ ಅವರಿಗೆ ಟಿಕೆಟ್‌ ನೀಡಬೇಕು. ಇಲ್ಲವಾದರೆ ನಾವು ಮತದಾನ ಬಹಿಷ್ಕಾರ ಮಾಡುವುದಾಗಿ ನಿರ್ಣಯ ಕೈಗೊಂಡಿದ್ದೇವೆ ಎಂದು ಕಾಶಪ್ಪನವರ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಮುಂದೆ ಬಂದು ಪ್ರತಿಭಟನೆ ಮಾಡಿ ಸವಾಲು ಹಾಕಿದ್ದಾರೆ. BJP ಅಭ್ಯರ್ಥಿ ಇಲ್ಲ ಅಂತಾನೇ ಒಡೆಯರ್ʼನ್ನ ಕಣಕ್ಕಿಳಿಸಿದ್ದಾರೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ! ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆಗೂ ಮುನ್ನ ಟಿಕೆಟ್‌ಗಾಗಿ ಒತ್ತಡ ಹೆಚ್ಚಾಗಿದೆ. ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ವೀಣಾ ಕಾಶಪ್ಪನವರ್ ಗೆ ಲೋಕಸಭೆ ಟಿಕೆಟ್ ನೀಡುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಬಳಿ ಸೋಮವಾರ ಬೆಳಗ್ಗೆ ಜಮಾಯಿಸಿದ ಕಾರ್ಯಕರ್ತರು ವೀಣಾ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.(ಶಾಲಿ) ಸದ್ಯ ಬಾಗಲಕೋಟೆ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂಬುದು ಇನ್ನೂ ಘೋಷಣೆ ಆಗಿಲ್ಲ. ಆದರೆ, ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಹೆಸರು ಕೇಳಿ ಬರುತ್ತಿದೆ. ಹೀಗಾಗಿ, ಸಂಯುಕ್ತ ಪಾಟೀಲ್‌ಗೆ ಯಾವುದೇ ಕಾರಣಕ್ಕೂ ಟಿಕೆಟ್…

Read More

ಬೆಂಗಳೂರು : ಕಾಂಗ್ರೆಸ್​ ಎರಡನೇ ಪಟ್ಟಿ ಯಾವಾಗ ರಿಲೀಸ್ ಆಗುತ್ತೆ ಎಂಬ ಪ್ರಶ್ನೆಗೆ, ನಾಳೆ ನಾನು ದೆಹಲಿಗೆ ಹೋಗ್ತೀನಿ. ದೆಹಲಿಯಲ್ಲಿ ಸಿಇಸಿ ಸಭೆ ಇದೆ. ಅಲ್ಲಿ ಎರಡನೇ ಪಟ್ಟಿ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. KSRTC Tourcher: ಸಾರಿಗೆ ಸಚಿವರೇ ಇತ್ತ ಗಮನಹರಿಸಿ: ನೀವೂ ನೋಡಲೇಬೇಕಾದ ಸ್ಟೋರಿ! ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ರಾಜರು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಯಾರು ರಾಜ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಅಭ್ಯರ್ಥಿ ಇಲ್ಲ ಅಂತಾನೇ ಯದುವೀರ್ ಒಡೆಯರ್ ಅವರನ್ನ ಕಣಕ್ಕಿಳಿಸಿದ್ದಾರೆ ಎಂದು ಕುಟುಕಿದರು. ಮೈಸೂರಿನಲ್ಲಿ ಇರುವ ಅಭ್ಯರ್ಥಿಯನ್ನು ಬದಲಾವಣೆ ಮಾಡಿದ್ದಾರೆ. ಯದುವೀರ್ ಅವರನ್ನ ಈಗ ಸ್ಪರ್ಧೆ ಮಾಡಿಸಿದ್ದಾರೆ. ಅವರ ಹಳೆಯ ಅಭ್ಯರ್ಥಿಯನ್ನೇ ಇಳಿಸಿದ್ದಾರೆ. ಅವರಿಗೆ ಅಭ್ಯರ್ಥಿ ಇಲ್ಲ ಅಂತಾನೇ ಅವರು ಯದುವೀರ್ ಅವರನ್ನ ಕಣಕ್ಕಿಳಿಸದ್ದಾರೆ. ನನಗೆ ಮೈಸೂರು ಮಾತ್ರ ಅಲ್ಲ, ಇಡೀ ರಾಜ್ಯವೇ ಸ್ವಕ್ಷೇತ್ರ. ನಾನು ಓದಿದ್ದು ಮೈಸೂರಿಲ್ಲಿ ಮಾತ್ರ ಎಂದು ಹೇಳಿದರು. ಮಾಜಿ…

Read More

ಮೈಸೂರು: ಟಿಂಬರ್ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ಮೌಲ್ಯದ ಪದಾರ್ಥಗಳು ಸುಟ್ಟು ನಾಶವಾದ ಘಟನೆ ಮೈಸೂರಿನ ಆಂದೋಲನ ವೃತ್ತದ ಬಳಿ ನಡೆದಿದೆ. ಯೂಸ್ರಾ ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಕಿಗೆ ಕಾರಣ ತಿಳಿದು ಬಂದಿಲ್ಲ.ಕುವೆಂಪುನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು: ರಾಜಧಾನಿಯ ಎದುರಾಗಿರುಗ ಭೀಕರ ಜಲಸಂಕಷ್ಟದಿಂದ ಜನ ಪರದಾಡ್ತಿದ್ದಾರೆ.‌ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಮೂಲೆ ಮೂಲೆಯಲ್ಲೂ ಜಲಕ್ಷಾಮ ತಾಂಡವವಾಡ್ತಿದೆ. ಇದೇ ಜಲಕಂಟಕದ ಎಫೆಕ್ಟ್ ಧೋಬಿ ಘಾಟ್ ಗಳ‌ ಮೇಲೆ ತಟ್ಟಿದೆ‌. ಸಾವಿರಾರು ಕಾರ್ಮಿಕರ ದುಡಿಮೆಗೂ ಪೆಟ್ಟು ಬಿದ್ದಿದೆ ಜೀವ ಜಲವಿಲ್ಲದೇ ಇಡೀ ಬೆಂಗಳೂರೇ ಬಾಯಾರಿದೆ. ವಾಟರ್ ಏಟಿಗೆ ಇಡೀ ಸಿಟಿ ತತ್ತರಿಸಿ ಹೋಗ್ತಿದೆ.‌ ಇದರ ನಡುವೆ ಬೇಸಿಗೆ ಆರಂಭವಾಗುತ್ತಿದ್ದಂತೆ ಧೋಬಿಘಾಟ್‌ಗಳಲ್ಲಿ ನೀರಿನ ಕೊರತೆ ಶುರುವಾಗಿದೆ.‌ ಇದರ ಎಫೆಕ್ಟ್ ನಿಂದ ಕಾರ್ಮಿಕರ ದುಡಿಮೆಗೂ ಪೆಟ್ಟು ಬಿದ್ದಿದೆ. ಬೋರ್ ವೆಲ್ ಗಳಲ್ಲಿ ನೀರು ಕಡಿಮೆಯಾಗಿ, ಬಟ್ಟೆ ಒಗೆಯಲು ಸಂಕಷ್ಟ ಎದುರಾಗಿದೆ. ದಿನಕ್ಕೆ ₹1,500ದಿಂದ ₹2,000 ದುಡಿಯುತ್ತಿದ್ದ ಕಾರ್ಮಿಕರು, ಇದೀಗ ₹500ಕ್ಕಿಂತಲೂ ಕಡಿಮೆ‌ ದುಡಿಯುವಂತಾಗಿದೆ ರಾಜಾಜಿನಗರ, ಮಲ್ಲೇಶ್ವರ, ಶ್ರೀನಗರ, ನಾಗರಭಾವಿ, ಲಗ್ಗೆರೆ ಸೇರಿದಂತೆ ಬೆಂಗಳೂರಿನ 30ಕ್ಕೂ ಹೆಚ್ಚು ಕಡೆಗಳಲ್ಲಿ ಧೋಬಿಘಾಟ್‌ಗಳಿವೆ. ಎಲ್ಲ ಕಡೆಯೂ ನೀರಿನ ಕೊರತೆ ಎದುರಾಗಿದೆ. ಪ್ರತಿ ದಿನ ಒಂದೂವರೆ ಲಕ್ಷಕ್ಕೂ ಅಧಿಕ ಬಟ್ಟೆಗಳು ವಾಶ್ ಆಗ್ತಿದ್ದು, ಒಟ್ಟು 15 ಲಕ್ಷಕ್ಕೂ ಅಧಿಕ‌…

Read More

ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದಾರೆ. ಇಂಡಿಯನ್‌ ಏರ್‌ ಫೋರ್ಸ್‌ ನ ವಿಶೇಷ ವಿಮಾನದಲ್ಲಿ ತೆಲಂಗಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನ ಎಸ್‌ಪಿಜಿ ವಿಶೇಷ ಭದ್ರತೆಯೊಂದಿಗೆ ಅಲ್ಲಮಪ್ರಭು ಫ್ರೀಡಂಪಾರ್ಕ್‌ ಮೈದಾನಕ್ಕೆ ಕರೆತಂದಿದ್ದಾರೆ.   ಇನ್ನೂ ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಅವರು, ಶಿವಮೊಗ್ಗದ ಜನತೆ ನನ್ನ ನಮಸ್ಕಾರಗಳು, ಮಾತೆ ಸಿಗಂದೂರು ಚೌಡಶ್ವೇರಿ ದೇವಿಗೆ ನನ್ನ ಭಕ್ತಿ ಪೂರ್ವ ನಮಸ್ಕಾರ ಎಂದು ಕನ್ನಡದಲ್ಲಿಯೇ ತಿಳಿಸಿದರು. ಇವತ್ತು ಇಡೀ ಮೈದಾನ ಉತ್ಸಾಹದಿಂದ ಭರ್ತಿಯಾಗಿದೆ. ಇನ್ನೊಂದು ಕಡೆ ಭಷ್ಟ್ರಾಚಾರ, ತುಷ್ಟಿಕರಣದಲ್ಲಿರುವ ಇಂಡಿಯಾ ಒಕ್ಕೂಟದ ನಿದ್ರೆ ಹಾರಿಹೋಗಿದೆ. ಜನಸಂಘದ ಸಂದರ್ಭದಲ್ಲಿ ನಮ್ಮನ್ನು ಯಾರು ಗುರುತಿಸುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಯಡಿಯೂರಪ್ಪ ಇಲ್ಲಿ ತಮ್ಮ ಯವ್ವನದ ಶ್ರಮವನ್ನು ಇಲ್ಲಿ ಪಕ್ಷಕ್ಕಾಗಿ ಶ್ರಮಿಸುವಂತೆ ಮಾಡಿದ್ದರು. ಶಿವಮೊಗ್ಗ ಅವರ ತಪೋಭೂಮಿ. ಇಲ್ಲಿಯ ಎಲ್ಲಾ 28 ಕ್ಷೇತ್ರಗಳು ಬಿಜೆಪಿಗೆ ನೀಡುವಂತೆ ಪ್ರಾರ್ಥನೆ ಮಾಡುವ ಸಲುವಾಗಿ ನಾನಿಲ್ಲಿಗೆ ಬಂದಿದ್ದೇನೆ. ನಾಲ್ಕು ಜೂನ್‌ನಂದು ನಾನೂರು ಸಂಸದರನ್ನು ಹೊಂದು ಮಷಿನ್‌ನಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ನಾನೂರು ಸೀಟು…

Read More

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ 17ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಬೆಳಗಾವಿ, ಬೀದರ್, ಧಾರವಾಡ, ರಾಯಚೂರು, ಕಲಬುರಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಒಣಹವೆ ಮುಂದುವರೆಯಲಿದೆ. ಬಾಗಲಕೋಟೆ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದೆ, ಎಚ್​ಎಎಲ್​ನಲ್ಲಿ 34.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.9 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, ನಗರದಲ್ಲಿ 34.5ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.1 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 34.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 34.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ…

Read More

ತೆಲಂಗಾಣ ಮತ್ತು ಪುದುಚೇರಿ ರಾಜ್ಯಪಾಲೆಯಾಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳಿಸೈ ಸೌಂದರರಾಜನ್ ಸೋಮವಾರ ಬೆಳಿಗ್ಗೆ ಏಕಾಏಕಿ ಎರಡೂ ರಾಜ್ಯಗಳ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಅವರು ರಾಜ್ಯಪಾಲ ಹುದ್ದೆಯನ್ನು ತೊರೆದಿದ್ದಾರೆ ಎನ್ನಲಾಗಿದೆ. ತೆಲಂಗಾಣ ರಾಜ್ಯಪಾಲರಾಗಿ ನೇಮಕವಾಗುವ ಮೊದಲು ತಮಿಳುಸೈ ಸೌಂದರರಾಜನ್ ಅವರು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆಯಾಗಿದ್ದರು. ಇದೀಗ ಮತ್ತೆ ಅವರು ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. 62 ವರ್ಷದ ತಮಿಳುಸೈ ಸೌಂದರರಾಜನ್‌ ಅವರನ್ನು 2019ರ ನವೆಂಬರ್‌ನಲ್ಲಿ ತೆಲಂಗಾಣದ ಎರಡನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. https://ainlivenews.com/good-news-for-job-seekers-application-invitation-for-247-pdo-posts/ ನಂತರ ಫೆಬ್ರವರಿ 2021ರಲ್ಲಿ ಅವರಿಗೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿತ್ತು. ತಮಿಳುಸೈ ಸೌಂದರರಾಜನ್‌ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಗೊಳ್ಳಬಹುದು ಎನ್ನಲಾಗಿದೆ. ಹಾಗೂ ಅವರು ಪ್ರಸ್ತುತ ಆಡಳಿತಾರೂಢ ಡಿಎಂಕೆಯ ಕನಿಮೋಳಿ ಪ್ರತಿನಿಧಿಸುತ್ತಿರುವ ತೂತುಕುಡಿ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ.…

Read More