Author: AIN Author

ಬೆಂಗಳೂರು:- ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಆದೇಶ ಹಿನ್ನೆಲೆ ಸರ್ಕಾರದ ಸುತ್ತೋಲೆ ಪಾಲಿಸದ ಸಂಸ್ಥೆಗಳನ್ನು ಮುಚ್ಚಬಾರದು ಎಂದು ಹೈಕೋರ್ಟ್ ಹೇಳಿದೆ. ವಾಣಿಜ್ಯ ಸಂಸ್ಥೆಗಳ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ವ್ಯಾಪಾರ ಮಾಡುವಾಗ ಕನ್ನಡ ನಾಮಫಲಕವಿರಬೇಕು ಎಂದು ಹೈಕೋರ್ಟ್ ಹೇಳಿದೆ. ಶೇಕಡಾ 60ರಷ್ಟು ಕನ್ನಡ ನಾಮಫಲಕ ಹಾಕಿದರೆ ಸಮಸ್ಯೆ ಏನು ಮಳಿಗೆಗಳ ಸಂಘದ ಪರ ವಕೀಲರಿಗೆ ನ್ಯಾ.ಎಂ.ನಾಗಪ್ರಸನ್ನ ಪ್ರಶ್ನೆ ಮಾಡಿದ್ದು, ‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022’ ಜಾರಿ ಸಮರ್ಪಕವಾಗಿಲ್ಲ. ಜಾರಿಯ ದಿನಾಂಕದ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿಲ್ಲ. ಡಿಜಿಟಲ್ ನಾಮಫಲಕಗಳನ್ನು ಬದಲಿಸಲು ಕಾಲಾವಕಾಶ ಬೇಕು. ನಾಮಫಲಕದಲ್ಲಿ ಶೇ.60ರಷ್ಟು ಕನ್ನಡವಿಲ್ಲದಿದ್ದರೆ ಮುಚ್ಚಲಾಗುತ್ತಿದೆ ಎಂದು ಸರ್ಕಾರದ ಸುತ್ತೋಲೆ ಪ್ರಶ್ನಿಸಿ ವ್ಯಾಪಾರಿಗಳ ಸಂಘದಿಂದ ವಾದ ಮಾಡಲಾಗಿದೆ.‘ ಕಾಯ್ದೆ ಜಾರಿ ಬಗ್ಗೆ ಗೆಜೆಟ್ ಆಧಿಸೂಚನೆ ವಿವರ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಸೂಚನೆ ನೀಡಿದೆ.

Read More

ಹೊಸಕೋಟೆ:- ನಗರದಲ್ಲಿ ಬೈಕ್ ಕಳ್ಳರ ಹಾವಳಿ ವಿಪರೀತವಿದೆ.. ಎಲ್ಲಿ ನಿಲ್ಲಿಸಿದ್ರು ಸಹ ಕಳ್ಳರು ಮಾತ್ರ ಕ್ಷಣಾರ್ಧದಲ್ಲಿ ಅದನ್ನು ಎಸ್ಕೇಪ್ ಮಾಡ್ತಾರೆ.. ಇದ್ರಿಂದ ಬೈಕ್ ಸವಾರರು ತಮ್ಮ ಗಾಡಿಗಳ ರಕ್ಷಣೆಗಾಗಿ ಅಂತ ಪೇ ಆ್ಯಂಡ್ ಪಾರ್ಕ್ ಮಾಡ್ತಾರೆ.. ಒಂದಿಷ್ಟು ಹಣ ಹೋದರು ಪರವಾಗಿಲ್ಲ., ನಮ್ಮ ಗಾಡಿ ಸೇಫ್ ಇದ್ದರೆ ಸಾಕು ಅಂತ.. ಆದ್ರೆ ಇಲ್ಲಿ ಪೇ ಮಾಡಿ ಪಾರ್ಕ್ ಮಾಡಿದ್ರು ಸಹ ಕಳ್ಳರು ಬೈಕ್ ಒಂದನ್ನು ಕಳ್ಳತನ ಮಾಡ್ಕೊಂಡಪ ಹೋಗಿದ್ದಾರೆ.. ಹೌದು.. ಅಮ್ಮ ಶಕ್ತಿ ಪೀಠ ಶ್ರೀಕಾಟೇರಮ್ಮ ಟೆಂಪಲ್ ಹೊಸಕೋಟೆ ಟೆಂಡರ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಬೈಕ್ ಕಳ್ಳತನ ಮಾಡಲಾಗಿದೆ..ದೇವಸ್ಥಾನಕ್ಕೆ ಬಂದಿದ್ದ ವೇಳೆ ಘಟನೆ ನಡೆದಿದ್ದು ಭಕ್ತಾದಿಯೊಬ್ಬರು ಇದ್ರಿಂದ ಕಂಗಾಲಾಗಿದ್ದಾರೆ..   ತಾಲ್ಲೂಕಿನ ಕಂಬಳಿಪುರ ಕಾಟೇರಮ್ಮ ದೇವಸ್ಥಾನದ ಬಳಿಯಲ್ಲಿರುವ ಪಾರ್ಕಿಂಗ್ ಏಜೆನ್ಸಿ ಅವರಿಗೆ ಕೇಳಿದರೆ ನಾವು ಏನು ಮಾಡೋದು ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ..ಚಿಕ್ಕಸಂದ್ರದ ನಿವಾಸಿಯಾದ ಶಶಿಕಾಂತ್ ಎಂಬುವವರು ದೇವಸ್ಥಾನ ದರ್ಶನಕ್ಕೆಂದು ಅವರ ಸ್ಪ್ಲೆಂಡರ್ ಬೈಕ್ KA 04KA2856 ನಲ್ಲಿ…

Read More

ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ಆ ರಾತ್ರಿ ನಡೆದಿತ್ತು ಫಾರಿನ್ ಲೇಡಿಯ ಮರ್ಡರ್. ಬ್ಯೂಸಿನೆಸ್ ವಿಚಾರಕ್ಕೆ ಬೆಂಗಳೂರಿಗೆ ಬಂದಿದ್ದ ಆಕೆ ಆಕೆ ಬಂದಿದ್ದ ಹೋಟೆಲ್‌ನಲ್ಲೇ ಆವತ್ತು ಬರ್ಬರವಾಗಿ ಕೊಲೆಯಾಗಿ ಹೋಗಿದ್ದಳು. ಹೊಟೆಲ್ ಸಿಬ್ಬಂದಿ ರೂಮ್ ಒಳಗೆ ಎಂಟ್ರಿ ಕೊಟ್ಟಾಗ ಅವಳ ಡೆಡ್ ಬಾಡಿ ಪತ್ತೆಯಾಗಿತ್ತು.. ಇನ್ನೂ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದು 24 ಗಂಟೆಗಳಲ್ಲೆ ಬಂಧಿಸಿದ್ದರು. ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿಯುತ್ತಾರೆ. ಎಲ್ಲಾ ಸಿಸಿ ಕ್ಯಾಮರಾ ದೃಶ್ಯಗಳನ್ನ ಪರಿಶೀಲಿಸುತ್ತಾರೆ. ಆದ್ರೆ ಯಾವುದೇ ಸಾಕ್ಷ್ಯ ಸಿಗೋದಿಲ್ಲ. ಹಾಗಾದ್ರೆ ಆ ವಿದೇಶಿ ಮಹಿಳೆಯನ್ನ ಯಾರು ಕೊಂದರು ಅಂತ ತಲೆಕೆಡಸಿಕೊಳ್ತಿರುವಾಗ್ಲೆ ಪೊಲೀಸರಿಗೆ ಒಂದು ಅನುಮಾನ ಮೂಡುತ್ತೆ. ಅದೇ ಅನುಮಾನ ಹಂತಕರನ್ನ 24 ಗಂಟೆಗಳಲ್ಲಿ ಬಂಧಿಸಲು ನೆರವಾಗುವಂತೆ ಮಾಡುತ್ತೆ. ಇತ್ತೀಚೆಗಷ್ಟೇ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ರು. ಆದ್ರೆ ಕೆಲಸ ಮಾಡೋದಕ್ಕಿಂತ ಹೆಚ್ಚಾಗಿ ಬರುವ ಗ್ರಾಹಕರ ಮೇಲೆನೇ ಕಣ್ಣಿಡ್ತಿದ್ರು. ಅವರು ಬಳಸೋ ಮೊಬೈಲ್ ,ಪರ್ಸ್ ಮೇಲೆಯೇ ಕಣ್ಣಿಡ್ತಿದ್ರು. ಆದ್ರೆ ಆವತ್ತು ನಲ್ಲಿ ರಿಪೇರಿ ಅಂತಾ ಆ ಕಿರಾತಕರು ಜರೀನಾ…

Read More

ಬೆಂಗಳೂರು:- ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಗಲೇ ಅಪಸ್ವರ ಎದ್ದಿದ್ದು, ಬಿಜೆಪಿ ಧೋರಣೆ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಬೇಸರ ಹೊರ ಹಾಕಿದ್ದಾರೆ. ಕೋಲಾರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟಿಕೊಡಲು ಬಿಜೆಪಿ ವರಿಷ್ಠರು ಹಿಂದೇಟು ಹಾಕುತ್ತಿದ್ದಾರೆ. ಸೀಟು ಹೊಂದಾಣಿಕೆ ಬಗ್ಗೆ ಮಾತುಕತೆಗೆ ಕೂತಾಗ ತಾವು ಬೇಡಿಕೆ ಇಟ್ಟಿದ್ದು ಕೇವಲ 3-4 ಸೀಟುಗಳಿಗೆ ಮಾತ್ರ. ತಮ್ಮ ಸಾಮರ್ಥ್ಯದ ಬಗ್ಗೆ ಸಂಪೂರ್ಣ ಅರಿವಿದೆ ಮತ್ತು ಬಿಜೆಪಿಗೂ ಅದು ಗೊತ್ತಿದೆ. ಹಾಸನ ಮತ್ತು ಮಂಡ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಿದರೂ ಗೆಲ್ಲುತ್ತದೆ. ಕೇವಲ ಎರಡು ಸೀಟುಗಳಿಗಾಗಿ ತಾನು ಇಷ್ಟೆಲ್ಲ ಪ್ರಯತ್ನ, ಹೋರಾಟ ಮಾಡಬೇಕಿತ್ತೇ? ಎಂದು ಕುಮಾರಸ್ವಾಮಿ ಬೇಸರದಲ್ಲಿ ಪ್ರಶ್ನಿಸಿದರು. ಕರ್ನಾಟಕದ ರಾಜಕಾರಣವೇ ಬೇರೆ ಭಾರತದ ಉಳಿದ ಭಾಗಗಳಲ್ಲಿನ ರಾಜಕೀಯ ಚಿತ್ರಣವೇ ಬೇರೆ, ರಾಜ್ಯದ 18 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಕಾರ್ಯಕರ್ತರ ಶ್ರಮವೇ ಬಿಜೆಪಿಗೆ ನೆರವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.

Read More

ನಿಮಗೆ ರಕ್ತದ ಕ್ಯಾನ್ಸರ್ ಉಂಟಾಗಿದೆ ಎಂಬುದರ ಕೆಲವು ಲಕ್ಷಣಗಳಿವು. ರೋಗಿಯ ವಯಸ್ಸು, ಕ್ಯಾನ್ಸರ್ ಎಷ್ಟು ವೇಗವಾಗಿ ಹರಡಿದೆ ಮತ್ತು ಎಲ್ಲಿ ಹರಡಿದೆ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. *ರಕ್ತಹೀನತೆ, ಸಾಕಷ್ಟು ಕೆಂಪು ರಕ್ತ ಕಣಗಳಿಂದ ಗುಣಲಕ್ಷಣಗಳನ್ನು ಹೊಂದಿರುವ ಸ್ಥಿತಿ, ನಿರಂತರ ಆಯಾಸ, ಉಸಿರಾಟ ಮತ್ತು ರಕ್ತ ತೆಳುವಾಗುವಿಕೆ, ಹಾಗೆಯೇ ಮೂರ್ಛೆ ಮತ್ತು ತಲೆನೋವುಗಳಿಗೆ ಕಾರಣವಾಗಬಹುದು. * ಗಾಯದ ನಂತರ ಕಡಿಮೆ ಪ್ಲೇಟ್ಲೆಟ್​ಗಳನ್ನು ಸೂಚಿಸಬಹುದು. ಅವುಗಳು ಗಾಢವಾಗಿ ಅಥವಾ ವಿಭಿನ್ನ ಬಣ್ಣದಲ್ಲಿ ಕಂಡುಬರುತ್ತವೆ ಮತ್ತು ಸ್ಪರ್ಶದ ಸೆನ್ಸಿಟಿವಿಟಿಯನ್ನು ಅನುಭವಿಸಬಹುದು. * ಸೋಂಕುಗಳು ಜ್ವರ ತರಹದ ಲಕ್ಷಣಗಳನ್ನು ಉಂಟುಮಾಡಬಹುದು. ಉದಾಹರಣೆಗೆ ಶೀತ, ನಡುಕ, ಕೆಮ್ಮುವಿಕೆ, ಅಥವಾ ಗಂಟಲು ನೋವು. ಇವು ಸ್ಪಷ್ಟ ಲಕ್ಷಣಗಳಲ್ಲದಿದ್ದರೂ ನಿರಂತರ ಅಥವಾ ತೀವ್ರವಾಗಿರಬಹುದು. * ಅಸಹಜ ಬಿಳಿ ರಕ್ತ ಕಣಗಳು ದುಗ್ಧರಸ ಗ್ರಂಥಿಗಳಲ್ಲಿ ನಿರ್ಮಿಸುತ್ತವೆ. ಕುತ್ತಿಗೆ, ಆರ್ಮ್ಪಿಟ್ ಅಥವಾ ತೊಡೆಸಂದಿಗಳಲ್ಲಿ ಉಂಡೆಗಳನ್ನೂ, ಊತವನ್ನೂ ಉಂಟುಮಾಡುತ್ತವೆ. ನೋವುರಹಿತ, ಶ್ವಾಸಕೋಶದಂತಹ ಅಂಗಗಳ ಮೇಲೆ ಪರಿಣಾಮ ಬೀರುವುದರಿಂದ ಅಸ್ವಸ್ಥತೆ ಅಥವಾ ಉಸಿರಾಟದ ತೊಂದರೆ…

Read More

ಆಂಧ್ರಪ್ರದೇಶ:- ಎಲೆಕ್ಷನ್​​​ ಟಿಕೆಟ್‌ಗಾಗಿ ನಡೆದ ಬೆಟ್ಟಿಂಗ್​​ ನಲ್ಲಿ ಅರ್ಧ ತಲೆಕೂದಲು ಮೀಸೆ ಬೋಳಿಸಿದ ವ್ಯಕ್ತಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಲ್ಲೆಯ ಪುಟ್ಟಪರ್ತಿಯ ವೈಸಿಪಿ ಟಿಕೆಟ್ ಶ್ರೀಧರ್ ರೆಡ್ಡಿಗೆ ಸಿಗುವುದಿಲ್ಲ ಎಂದು ವ್ಯಕ್ತಯೊಬ್ಬರು ಬೆಟ್ಟಿಂಗ್​​ ಹಾಕಿದ್ದರು. ಇದಲ್ಲದೇ ಶ್ರೀಧರ್ ರೆಡ್ಡಿಗೆ ವೈಸಿಪಿ ಟಿಕೆಟ್ ಕೊಟ್ಟರೆ ,ಅರ್ಧ ತಲೆಕೂದಲು ಮತ್ತು ಅರ್ಧ ಮೀಸೆತೆಗೆಸುತ್ತೇನೆ ಎಂದು ಪಣತೊಟ್ಟಿದ್ದರು. ಅಂತಿಮವಾಗಿ ಪುಟ್ಟಪರ್ತಿ ವೈಸಿಪಿ ಟಿಕೆಟ್‌ಗೆ ಶ್ರೀಧರ್ ರೆಡ್ಡಿ ಹೆಸರನ್ನು ವೈಸಿಪಿ ಘೋಷಿಸಿದೆ. ಶ್ರೀಧರ್ ರೆಡ್ಡಿಗೆ ಟಿಕೆಟ್ ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆ ಮಹೇಶ್ವರ್ ರೆಡ್ಡಿ ಎಂಬ ವ್ಯಕ್ತಿ ತನ್ನ ಅರ್ಧ ತಲೆಕೂದಲು ಮತ್ತು ಅರ್ಧ ಮೀಸೆ ಬೋಳಿಸಿದ್ದಾನೆ. ಶ್ರೀಧರ್ ರೆಡ್ಡಿಗೆ ಪುಟ್ಟಪರ್ತಿ ಟಿಕೆಟ್ ನೀಡಿರುವುದನ್ನು ಮಹೇಶ್ವರರೆಡ್ಡಿ ಈ ರೀತಿಯಾಗಿ ಪ್ರತಿಭಟಿಸಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ಪುಟ್ಟಪರ್ತಿಯ ಸತ್ಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಮಹೇಶ್ವರರೆಡ್ಡಿ ಅರ್ಧ ಮೀಸೆ ಬೋಳಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಶ್ರೀಧರ್ ರೆಡ್ಡಿಗೆ ಟಿಕೆಟ್ ಸಿಗಬಾರದು ಎಂದು ಪಣತೊಟ್ಟಿರುವ ಮಹೇಶ್ವರ್ ರೆಡ್ಡಿ ಈ…

Read More

ಗದಗ: ಕೆ ಎಸ್ ಈಶ್ವರಪ್ಪ ಅವರು ಬಿಜೆಪಿ ಪಕ್ಷವನ್ನು ಕಟ್ಟಲು ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ಈಶ್ವರಪ್ಪ ಅವರ ಮಗನಿಗೆ ಟಿಕೇಟ್ ಸಿಗದಿದಕ್ಕೆ ಬೇಜಾರಾಗಿ ಕೆಲವು ನಿರ್ಧಾರ ಮಾಡಿದ್ದಾರೆ ಅಷ್ಟೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಗದಗ ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ಅವರ ಜೊತೆಗೆ ಮಾತನಾಡುತ್ತಿದ್ದಾರೆ. ಇನ್ನೂ ಸಮಯ ಇದೆ, ಖಂಡಿತವಾಗಿ ಮನವಲಿಸುವ ವಿಶ್ವಾಸಯಿದೆ. ಹಾವೇರಿ ಕ್ಷೇತ್ರದ ಸರ್ವೆಯನ್ನು ನೋಡಿ ನನ್ನನ್ನು ಪಕ್ಷವೇ ನಿರ್ಧಾರ ಮಾಡಿದೆ ಆದ್ದರಿಂದ ನನಗೆ ಇಲ್ಲಿ ಸ್ಪರ್ಧೆ ಮಾಡೋದು ಮನಸಿನ ವಿಷಯವಲ್ಲ, ಕರ್ತವ್ಯವೇದ ಪ್ರಶ್ನೆಯಾಗಿದ್ದು, ವರಿಷ್ಠರು ಕರೆಯನ್ನು ಕೊಟ್ಟಾಗ,  ಆ ಕರ್ತವ್ಯವನ್ನು ನಿಭಾಯಿಸಬೇಕು ಎಂದರು. ಇನ್ನೂ ಗದಗ ಜಿಲ್ಲೆಯಲ್ಲಿ ಮುಖಂಡರಲ್ಲಿ ಸಮನ್ವಯ ಕೊರತೆ ವಿಚಾರಕ್ಕೆ ಎಲ್ಲಿ ಪಕ್ಷ ಜಯ ಸಾಧಿಸುತ್ತದೆ, ಅಲ್ಲಿ, ಪೈಪೋಟಿ ಇರುತ್ತೇ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೇಳೋವವರೆ ಇಲ್ಲಾ, ಹೀಗಾಗಿ ಅಲ್ಲಿ ಬಂಡಾಯದ ಪ್ರಶ್ನೇ ಇಲ್ಲಾ, ಲೋಕಸಭಾ ಚುನಾವಣೆಯಾದ ಮೇಲೆ ಕಾಂಗ್ರೆಸ್ ಪಕ್ಷದ ದಯನಿಯ ಸ್ಥಿತಿ ಇಡೀ ದೇಶದಲ್ಲಿ…

Read More

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಲೋಕಸಭಾ ಟಿಕೆಟ್ ತಪ್ಪಿಸುವ ಕುತಂತ್ರ ನಡೆದಿದೆ. ಒಂದು ವೇಳೆ ಬೆಳಗಾವಿ ಕ್ಷೇತ್ರದ ಟಿಕೆಟ್ ತಪ್ಪಿದ್ದೇ ಆದರೇ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಚ್ಚರಿಕೆ ನೀಡಿದೆ. ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಮಹಾಸಭಾದ ಉಪಾಧ್ಯಕ್ಷ ಪ್ರೋ ವಿ.ಸಿ.ಸವಡಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಕ್ಷವನ್ನ ಕಟ್ಟಿ ಬೆಳೆಸಿದ್ದಾರೆ. ಈ ಹಿಂದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸುವ ಹುನ್ನಾರ ನಡೆಯಿತು. ಧಾರವಾಡ, ಹಾವೇರಿ ಲೋಕಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಎರಡೂ ಕ್ಷೇತ್ರಗಳಲ್ಲೂ ಅವರಿಗೆ ಟಿಕೆಟ್ ನೀಡಲಿಲ್ಲ ಎಂದರು. ಈಗ ಅವರ ಹೆಸರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಆದ್ರೆ ಶೆಟ್ಟರ್‌ಗೆ ಆಗದ ಕೆಲವರು ಕುತಂತ್ರ ಮಾಡಿ ವ್ಯವಸ್ಥಿತವಾಗಿ ಅವರಿಗೆ ಟಿಕೆಟ್ ತಪ್ಪಿಸುವ ಹುನ್ನಾರ ನಡೆದಿದೆ. ಬಿಜೆಪಿ ವರಿಷ್ಠರು ಅವರ ಕುತಂತ್ರಕ್ಕೆ ಒಳಗಾದಗೆ ಶೆಟ್ಟರ್‌ಗೆ ಟಿಕೆಟ್ ನೀಡಬೇಕು. ಟಿಕೆಟ್ ನೀಡದೆ ಹೋದ್ರೆ ಬೀದಿಗಿಳಿದು ಉಗ್ರವಾದ ಹೋರಾಟ ಮಾಡಿ, ಚುನಾವಣೆಯಲ್ಲಿ…

Read More

ಹುಬ್ಬಳ್ಳಿ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀಮತಿ ಪ್ರಿಯಾಂಗಾ ರವರು ಅಧಿಕಾರ ವಹಿಸಿಕೊಂಡರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಭರತ್.ಎಸ್.ಭಾ.ಆ.ಸೇ ರವರು ಸರಕಾರದ ಆದೇಶದನ್ವಯ ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ , ವರ್ಗಾವಣೆ ಹೊಂದಿದ ಪ್ರಯುಕ್ತ ಶ್ರೀಮತಿ ಪ್ರಿಯಾಂಗಾ.ಎಂ. ಭಾ.ಆ.ಸೇ, ರವರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಕಾರ್ಯಾಭಾರವನ್ನು ವಹಿಸಿಕೊಂಡಿರುತ್ತಾರೆ. ಪ್ರಿಯಾಂಗ್ ಅವರು 2017 ನೇಯ ಬ್ಯಾಚಿನ ಕರ್ನಾಟಕ ಕೆಡರ್ ನ ಅಧಿಕಾರಿಯಾಗಿದ್ದು, ಈ ಹಿಂದೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.

Read More

ಗದಗ: ಬಿಜೆಪಿ ಕಾರ್ಯಕರ್ತರು ಬೊಮ್ಮಾಯಿ ಎದುರೇ ಗಲಾಟೆ ಮಾಡಿಕೊಂಡಿರುವ ಘಟನೆ ಗದಗ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನಡೆದಿದೆ. ಹಾವೇರಿ-ಗದಗ ಲೋಕಸಭಾ ಅಬ್ಯರ್ಥಿ ಬಸವರಾಜ ಬೊಮ್ಮಾಯಿಗೆ ತೀವ್ರ ಮುಜುಗರ ಉಂಟಾಗಿದೆ. ಮುಂಡರಗಿ ಮಂಡಳ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಬದಲಾಯಿಸಲು ಒತ್ತಾಯ ಮಾಡಿ ಹೇಮಗಿರೀಶ ಹಾವಿನಾಳ ದುರಾಡಳಿತ ನಡೆಸ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಸಿದ್ದಾರೆ. ಕಾರ್ಯಕರ್ತರ ಗಲಾಟೆ ಹೆಚ್ಚಾಗ್ತಿದ್ದಂತೆ ಮದ್ಯ ಪ್ರವೇಶಿಸಿ ಮುಂಡರಗಿಗೆ ಬಂದು ಸಮಸ್ಯೆ ಬಗೆಹರಿಸ್ತೀನಿ ಎಂದು  ಸಿ ಸಿ ಪಾಟೀಲ್ ಭರವಸೆ ನೀಡಿದರು. ಅಷ್ಟಾದ್ರೂ ಕೇಳದ ಬಿಜೆಪಿ ಕಾರ್ಯಕರ್ತರು ಸಭೆಯಿಂದ ಹೊರನಡೆದರು. ಬಸವರಾಜ ಬೊಮ್ಮಾಯಿ ಏನೂ ತೋಚದಂತೆ ಇದೆಲ್ಲಾ ಕಣ್ಮುಂದೆ ನಡೀತಿರೋದನ್ನ ನೋಡಿ ಸುಮ್ಮನೆ ಕುಳಿತಿದ್ದರು. ಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಿದ್ದರು.

Read More