Author: AIN Author

ದಾವಣಗೆರೆ:- ನಗರದ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಲೋಕಿಕೆರೆ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ 3.89 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಎಸ್ ಎಸ್ ಟಿ ತಂಡದ ಮುಖ್ಯಸ್ಥ ಮಲ್ಲಿಕಾರ್ಜುನ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾವಣಗೆರೆ ಕಡೆಯಿಂದ ಲೋಕಿಕೆರೆ ಮಾರ್ಗವಾಗಿ ತೆರಳುತ್ತಿದ್ದ ಕಾರ್ ನಲ್ಲಿ ಪತ್ತೆಯಾಗಿದೆ. ಈ ವೇಳೆ ನಗದು ಹಣವನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹಣ ವಶಕ್ಕೆ ಪಡೆದು ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ.

Read More

ಹೊಸಪೇಟೆ: ಸಾರಿಗೆ ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಚಕ್ರದಡಿ ಸಿಲುಕಿ ಮೂರೂವರೆ ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಹೊಸಪೇಟೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಬಸ್‌ ಹಿಮ್ಮುಖವಾಗಿ ಚಲಿಸುವಾಗ ಪ್ಲಾಟ್ ಫಾರಂ ಬಳಿ ನಿಂತಿದ್ದ ಬಾಲಕನ ಮೇಲೆ ಹರಿದು ಬಾಲಕ ಕೊನೆಯುಸಿರೆಳೆದಿದ್ದಾನೆ. ಹೊಸಪೇಟೆ ತಾಲೂಕಿನ ನಾಗಲಾಪುರ ಗ್ರಾಮದ ರಾಚಪ್ಪ, ಮಲ್ಲಮ್ಮ ದಂಪತಿ ಪುತ್ರ ಕೇಸರಿ ನಂದನ್ ಮೃತ ಬಾಲಕ. ಗಂಗಾವತಿಗೆ ಹೋಗುವ ಪ್ಲಾಟ್ ಫಾರಂನಲ್ಲಿ ಪೋಷಕರೊಂದಿಗೆ ಬಾಲಕ ನಿಂತಿದ್ದ. ಬಸ್ ಹಿಂದೆ ಮಗು ನಿಂತಿದ್ದನ್ನು ನೋಡದೇ ಡ್ರೈವರ್ ರಿವರ್ಸ್ ತೆಗೆದುಕೊಂಡಿದ್ದಾನೆ. ಈ ವೇಳೆ ಬಸ್ ಹರಿದಿದ್ದರಿಂದ ಕೇಸರಿ ನಂದನ್ ಮೃತಪಟ್ಟಿದ್ದಾನೆ. ಮಲ್ಲಮ್ಮನ ತವರು ಮನೆ ಕೊಪ್ಪಳಕ್ಕೆ ಹೋಗಿ ವಾಪಸ್ ನಾಗಲಾಪುರಕ್ಕೆ ದಂಪತಿ ತೆರಳುತ್ತಿದ್ದರು. ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹೊಸಪೇಟೆ ಡಿವೈಎಸ್ಪಿ ಶರಣಬಸವೇಶ್ವರ ಮತ್ತು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಮಂಡ್ಯ :- ಜಿಲ್ಲೆಯ ಗಡಿಭಾಗದ ಮದ್ದೂರು ತಾಲೂಕಿನ ಕೊಂಗಬೋರನದೊಡ್ಡಿ ಬಳಿಯಲ್ಲಿ ಕಾರಿನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ ಅಂದಾಜು 1 ಕೋಟಿ ಹಣವನ್ನು ಚುನಾವಣಾ ಸಿಬ್ಬಂದಿ ಮತ್ತು ಮದ್ದೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕಡೆಗೆ ಸಾಗುತ್ತಿದ್ದಂತ ಕ್ರೇಟಾ ಕಾರೊಂದನ್ನು ತಡೆದಂತ ಚುನಾವಣಾ ಚೆಕ್ ಪೋಸ್ಟ್ ಅಧಿಕಾರಿಗಳು, ಕಾರನ್ನು ತಪಾಸಣೆ ನಡೆಸಿದಂತ ವೇಳೆಯಲ್ಲಿ ಅಂದಾಜು ಒಂದು ಕೋಟಿ ರೂಪಾಯಿ ಪತ್ತೆಯಾಗಿದೆ. ಗಿರೀಶ್ ಎಂಬುವವರು ಬೆಂಗಳೂರಿನಿಂದ ಹ್ಯೂಂಡಾಯ್ ಕ್ರೇಟಾ ಕೆಎ – 54 – ಎಂ – 4030 ಕಾರಿನಲ್ಲಿ ಕೆ.ಆರ್.ಪೇಟೆ ಕಡೆಗೆ ಪ್ರಯಾಣ ಮಾಡುತ್ತಿದ್ದಾಗ ಮದ್ದೂರು ತಾಲೂಕಿನ ಗಡಿಭಾಗ ಕೊಂಗಬೋರನದೊಡ್ಡಿ ಗ್ರಾಮದ ಬಳಿ ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ತಹಶೀಲ್ದಾರ್ ಕೆ.ಎಸ್.ಸೋಮಶೇಖರ್, ಮದ್ದೂರು ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಆರ್.ಪ್ರಸಾದ್ ಹಾಗೂ ಚುನಾವಣಾಧಿಕಾರಿ ಲೋಕನಾಥ್ ಹಾಗೂ ಪೋಲೀಸ್ ಸಿಬ್ಬಂದಿ ಕಾರನ್ನು ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಹಣವನ್ನು ತುಂಬಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ಈ ಬಗ್ಗೆ…

Read More

ಸಕ್ಕರೆ ಹೆಚ್ಚಾಗಿ ತಿಂದರೆ ಮಧುಮೇಹ ಬರಬಹುದು ಎನ್ನುವ ಭಯ ಪ್ರತಿಯೊಬ್ಬರಿಗೂ ಇರುತ್ತದೆ. ಏಕೆಂದರೆ ಈಗಿನ ಆಧುನಿಕ ಜೀವನಶೈಲಿ ಅದಕ್ಕೆ ಅನುವು ಮಾಡಿಕೊಡುತ್ತದೆ. ಹಾಗಾಗಿ ಜನರು ಇದಕ್ಕೆ ಪರ್ಯಾಯವಾಗಿ ಬೇರೆ ಯಾವುದಾದರೂ ಮಾರ್ಗ ಇದೆಯೇ ಎಂಬುದನ್ನು ಸದಾ ಹುಡುಕುತ್ತಲೇ ಇರುತ್ತಾರೆ. ನಮ್ಮನ್ನು ಕೇಳಿದರೆ ಹಲವಾರು ರಾಸಾಯನಿಕ ಪ್ರಕ್ರಿಯೆಗೆ ಒಳಪಡುವ ಸಕ್ಕರೆಯ ಬದಲಾಗಿ ಬೆಲ್ಲವನ್ನು ಉಪಯೋಗಿಸಬಹುದು ಅಥವಾ ತೆಂಗಿನ ಮರದ ಸಕ್ಕರೆಯನ್ನು ಬಳಕೆ ಮಾಡಬಹುದು ಎಂದು ಹೇಳಬಹುದು. ತೆಂಗಿನಮರದಿಂದ ಸಕ್ಕರೆ ಮಾಡುತ್ತಾರೆಯೇ ಎಂಬ ಆಶ್ಚರ್ಯ ಈಗ ನಿಮಗೆ ಉಂಟಾಗಿದೆ ನಿಜ. ಈ ಲೇಖನದಲ್ಲಿ ನಿಮ್ಮ ಗೊಂದಲವನ್ನು ಪರಿಹಾರ ಮಾಡುವ ಜೊತೆಗೆ ಕೋಕನಟ್ ಶುಗರ್ ಅಥವಾ ತೆಂಗಿನಕಾಯಿ ಸಕ್ಕರೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಒದಗಿಸಿ ಕೊಡಲಾಗಿದೆ. ​ತೆಂಗಿನಕಾಯಿ ಸಕ್ಕರೆ ಹೇಗೆ ತಯಾರು ಮಾಡುತ್ತಾರೆ ಗೊತ್ತಾ? ತೆಂಗಿನ ಮರದ ಹೂವಿನ ಗೊನೆಯಿಂದ ಸಕ್ಕರೆ ತಯಾರು ಮಾಡುವ ವಿಷಯ ನಮಗೆ ನಮಗೆ ಕೇಳಲು ಹೊಸದು ಎನಿಸಿದರೂ ಸಹ ಈ ಪ್ರಕ್ರಿಯೆ ಬಹಳ ವರ್ಷಗಳಿಂದ ನಡೆಯುತ್ತ ಬಂದಿದೆ. ತೆಂಗಿನ ಹೂವು…

Read More

ಬೆಂಗಳೂರು:ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಗಾಗಿ ರಾಜ್ಯ ಸರ್ಕಾರವು ಆದಿಶೋಧನೆಯನ್ನು ಪ್ರಕಟಿಸಿದ್ದು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹು ದಾಗಿದೆ. ಅದರಂತೆ ಈ ಹುದ್ದೆಗಳಿಗೆ ನಿಗದಿಪಡಿಸಿರುವ ದಿನಾಂಕ ಹಾಗೂ ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀವ ನೀವು ತಿಳಿದುಕೊಳ್ಳಬಹುದು. ವಿಜಯನಗರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 22 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತಿದೆ. ಹುದ್ದೆಯ ಹೆಸರು ಗ್ರಂಥಾಲಯ ಮೇಲ್ವಿಚಾರಕ ಹುದ್ದೆಯಾಗಿದ್ದು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಹುದ್ದೆಯನ್ನು ಪಡೆದುಕೊಳ್ಳಬಹುದಾಗಿದೆ. ಶೈಕ್ಷಣಿಕವಿದ್ಯಾರ್ಹತೆ : ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ ಹನ್ನೆರಡನೇ ತರಗತಿ ಹಾಗೂ ಸರ್ಟಿಫಿಕೇಟ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಅನ್ನು ವಿಜಯನಗರ ಗ್ರಾಮ ಪಂಚಾಯಿತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಪೂರ್ಣಗೊಳಿಸಿರಬೇಕಾಗುತ್ತದೆ. ವೇತನ ಈ ಹುದ್ದೆಗಳಿಗೆ ಆಯ್ಕೆ ಆದರೆ ನಿಮಗೆ ₹19,000 ದಿಂದ ₹63,000 ದವರೆಗೆ ವೇತನವನ್ನು ನೀಡುತ್ತಾರೆ ಎಂದು ತಿಳಿಸಲಾಗಿದೆ. ವಯಸ್ಸಿನಮಿತಿ : ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ…

Read More

ಶ್ರೀ ಸೋಮಶೇಖರ ಗುರೂಜಿB.Sc ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ. Mob.9353488403 ಜಾತಕದ ಕುಂಡಲಿಯಲ್ಲಿ ರಾಹು-ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಅಂದರೆ ರವಿ ಚಂದ್ರ ಕುಜ ಬುಧ ಗುರು ಶುಕ್ರ ಶನಿ ಗ್ರಹಗಳು ಇದ್ದರೆ ಅದು ಕಾಳಸರ್ಪದೋಷ ಎನಿಸುತ್ತದೆ. ರಾಹು-ಕೇತು ಗ್ರಹಗಳ ಸದಾ ವಕ್ರಗತಿಯಲ್ಲಿ ಹೊಂದಿದೆ .ರಾಹು-ಕೇತು ಗ್ರಹಗಳ ನ್ನು ಬಿಟ್ಟು ಉಳಿದ ಗ್ರಹಗಳು ತಾವಿರುವ ಮನೆಯಿಂದ ಮುಂದೆ ಚಲಿಸಿದರೆ ರಾಹು ಕೇತು ಗ್ರಹಗಳು ಹಿಂದಕ್ಕೆ ಚಲಿಸುತ್ತವೆ. ಅದರಿಂದ ಕಾಳಸರ್ಪದೋಷ ದಲ್ಲಿ ರಾಹು-ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಬಂಧಿಯಾದಂತೆ ಇರಬೇಕೇ ವಿನಹ:ಉಳಿದ ಗ್ರಹಗಳು ಮಧ್ಯದಲ್ಲಿ ರಾಹು ಕೇತು ಇದ್ದರೆ ಅಲ್ಲ,. ಸರ್ಪ ದೋಷದ ಪ್ರಕಾರಗಳು 1. ಅನಂತ ಕಾಲ ಸರ್ಪ ದೋಷ 2. ಕುಳಿಕ ಕಾಳಸರ್ಪದೋಷ 3. ವಾಸುಕಿ ಕಾಲಸರ್ಪ ದೋಷ 4,. ಶಂಕಪಾಲ ಕಾಲಸರ್ಪ ದೋಷ ,5. ಪದ್ಮ ಕಾಲಸರ್ಪ ದೋಷ 6. ಮಹಾಪದ್ಮ ಕಾಲಸರ್ಪ ದೋಷ 7. ತಕ್ಷಕ ಕಾಲಸರ್ಪ ದೋಷ 8. ಕಾರ್ಕೋಟಕ ಕಾಲಸರ್ಪ ದೋಷ…

Read More

“ತಮ್ಮ ಜನ್ಮ ಜಾತಕದಲ್ಲಿ( ಕುಂಡಲಿ) ಸಂತಾನಯೋಗ ಫಲ ಮತ್ತು ಪರಿಹಾರ” ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಜೀವನದಲ್ಲಿ ಒಂದೇ ಒಂದು ಸಾರಿ ಮದುವೆ ಆಗುತ್ತದೆ. ಮದುವೆ ಕ್ಷಣದಿಂದ ತುಂಬಾ ಉಲ್ಲಾಸ ಜೀವನ ಮಾಡುತ್ತೀರಿ, ನಂತರ ಎರಡು ವರ್ಷ ,ಮೂರು ವರ್ಷ ಕಳೆದು ಹೋಗುತ್ತದೆ. ನಂತರ ನಿಮಗೆ ಮಕ್ಕಳಿಲ್ಲದ ಸಂಕಟ ಪ್ರಾರಂಭವಾಗುತ್ತದೆ. ಆಗ ನೀವು ಆ ದೇವರು ದರ್ಶನ, ವೈದ್ಯರ ಭೇಟಿ ಮಾಡಲು ಪ್ರಾರಂಭಿಸುತ್ತೀರಿ. ವೈದ್ಯರು ಕೆಲವು ವೈದ್ಯಕೀಯ ಪರೀಕ್ಷೆಗಳು ನಡೆಸುತ್ತಾರೆ . ಅದರಲ್ಲಿ ಯಾವುದೇ ತರಹದ ನ್ಯೂನ್ಯತೆ ಕಾಣುವುದಿಲ್ಲ . ಎಲ್ಲ ನಿಮ್ಮ ಆರೋಗ್ಯ ಚೆನ್ನಾಗಿದೆ ಹೌಷಧಿ ತಗೊಳ್ಳಿ ಅಂತ ಸಲಹೆ ನೀಡುತ್ತಾರೆ. ಆದ್ರೂ ನಿರಾಶೆ ಆಗುವ ಸಾಧ್ಯತೆ. ಆಗ ತಮಗೆ ಸಹಾಯಸ್ತ ನೀಡುವುದು ದೈವ ಭಾಗ್ಯ ಅದೇ ಜನ್ಮಜಾತಕ ಅಥವಾ ಜನ್ಮ ಕುಂಡಲಿ. ತಮ್ಮ ಜನ್ಮಕುಂಡಲಿ ಪರೀಕ್ಷಿಸಬೇಕು. ಅದರಲ್ಲಿ ಲಗ್ನದಿಂದ ಪಂಚಮ ಸ್ಥಾನ ನೋಡಿ ಸರಿಯಾಗಿ ಪರೀಕ್ಷಿಸಬೇಕು.ಪಂಚಮ ಸ್ಥಾನಕ್ಕೆ ಯಾರು ಅಧಿಪತಿ ಇದ್ದಾನೆ ,ಶುಭಗ್ರಹಗಳು…

Read More

ಸೂರ್ಯೋದಯ: 06:24, ಸೂರ್ಯಾಸ್ತ : 06:23 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪಾಲ್ಗುಣ ಮಾಸ , ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ದಶಮಿ, ನಕ್ಷತ್ರ : ಪುನರ್ವಸು, ರಾಹು ಕಾಲ:03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಸಂ.5:34 ನಿಂದ రా.7:18 ತನಕ ಅಭಿಜಿತ್ ಮುಹುರ್ತ: ಬೆ.11:59 ನಿಂದ ಮ.12:47 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ:ವಿಧವಾ/ ವಿದುವೆ ಯವರಿಗೆ ಮದುವೆ ಯೋಗ, ಹೊಸ ಮಷೀನರಿ ಉದ್ಯಮ ಪ್ರಾರಂಭ, ತುಂಬಾ ದಿನದ ಪ್ರೀತಿ, ಕೆಲವರು ಪ್ರೀತಿಸಿದವರು ಬೇರೆಯವರ ಜೊತೆ ಮದುವೆ ಇದು ಸಮಂಜಸವಲ್ಲ, ವಿದೇಶದಲ್ಲಿ ಉದ್ಯೋಗ ಹುಡುಕಾಟ ಪ್ರಯತ್ನಿಸಿದವರಿಗೆ ಯಶಸ್ವಿ ,ಹೋಂ ಮೇಡ್…

Read More

ಬೆಂಗಳೂರು:- ಮುಂದಿನ ಎರಡು ದಿನಗಳ ಕಾಲ ರಾಜ್ಯದ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಡಿಕೇರಿ ತಾಲೂಕಿನ ಚೈಯ್ಯಂಡಾಣೆ, ಕುಂಜಿಲಗೇರಿ, ಬೆಳ್ಳುಮಾಡು ವ್ಯಾಪ್ತಿಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಬರದಿಂದ ಕಂಗೆಟ್ಟಿದ್ದ ರೈತರಲ್ಲಿ ಮಂದಹಾಸ ಮೂಡಿದೆ. ಮುಂದಿನ 24 ಗಂಟೆಗಳಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಬಹಳಷ್ಟಿದೆ. ಕರಾವಳಿಯಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳಲ್ಲಿಯೂ ಇದು ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದಾಗ್ಯೂ, ಗುಡುಗು, ಭಾರೀ ಮಳೆ ಇಲ್ಲ ಎಂದು ವರದಿಯಲ್ಲಿ ತಿಳಿಸಿದೆ.

Read More

ಆನೇಕಲ್:- ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಬಾಲ್ಯವಿವಾಹವಾಗಿದ್ದ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜರುಗಿದೆ. ವಿಶಾಲ್ ಕುಮಾರ್ ಸಹಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್​ 13ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನೀಲಂ ಕುಮಾರಿಯನ್ನು 2023ರ ಫೆಬ್ರವರಿ ತಿಂಗಳಲ್ಲಿ ಬಿಹಾರದಲ್ಲಿ ವಿಶಾಲ್ ಕುಮಾರ್ ಸಹಾನಿ ಬಾಲ್ಯವಿವಾಹವಾಗಿದ್ದ. 1 ವರ್ಷದ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದು, ಯಶವಂತಪುರದಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದ. 20 ದಿನಗಳ ಹಿಂದೆ ಬಿಹಾರದಿಂದ ಬಾಲಕಿಯನ್ನು ಕರೆತಂದಿದ್ದ. ಹೆಬ್ಬಗೋಡಿ ಸಮೀಪದ ತಿರುಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬಾಲ್ಯವಿವಾಹವಾಗಿ ಲೈಂಗಿಕವಾಗಿ ಬಳಸಿಕೊಂಡು ಮಾನಸಿಕ ಹಿಂಸೆ ಹಿನ್ನೆಲೆ ಮಾ.13ರಂದು ಮನೆಯಲ್ಲಿ ನೇಣುಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Read More