Author: AIN Author

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿಗೆ ಜಲಕಂಟಕ ಎದುರಾಗಿರುವುದು ಅಕ್ಷರಶಃ ಸತ್ಯ. ಕುಡಿಯುವ ನೀರಿಗಾಗಿ ರಾಜಧಾನಿ ಬೆಂಗಳೂರು ಮಂದಿ ಪಡುತ್ತಿರುವ ಪಾಡು ದೇವರಿಗೆ ಪ್ರೀತಿ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಸಿದ್ದರಾಮಯ್ಯ, ಹಲವು ಮಾಹಿತಿ ಪಡೆದಿದ್ದಾರೆ. ಬಳಿಕ ಮಾತನಾಡಿ, ಬೆಂಗಳೂರಿಗೆ ಅಗತ್ಯ ಇರುವ ನೀರಿನಲ್ಲಿ 1,450 ಎಂಎಲ್‌ಡಿ ಕಾವೇರಿ ನದಿಯಿಂದ ಮತ್ತು 650 ಎಂಎಲ್‌ಡಿ ನಗರದ ಬೋರ್‌ವೆಲ್‌ಗಳಿಂದ ಪೂರೈಸಲಾಗುತ್ತಿದೆ. 500 ಎಂಎಲ್‌ಡಿ ನೀರಿನ ಕೊರತೆ ಇದೆ ಎಂದು ಅವರು ತಿಳಿಸಿದ್ದಾರೆ. ಭವಿಷ್ಯದಲ್ಲಿ ನೀರಿನ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಸರ್ಕಾರ ತಜ್ಞರ ಸಮಿತಿಯನ್ನು ರಚಿಸಲಿದೆ ಎಂದು ಅವರು ಹೇಳಿದ್ದಾರೆ. ನೀರು ವ್ಯರ್ಥವಾಗುವುದನ್ನು ತಡೆಯಲು ಅಧಿಕಾರಿಗಳು 143 ಕಾರ್ಯಪಡೆ ತಂಡಗಳನ್ನು ನಿಯೋಜಿಸಿದ್ದಾರೆ ಮತ್ತು ಇವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ನಾಗರಿಕರು ನೀರು ಪೋಲು ಮಾಡುವುದಕ್ಕೆ ಸಂಬಂಧಿಸಿದ ದೂರುಗಳನ್ನು ಸಹಾಯವಾಣಿ 1916 ಅಥವಾ ವಾಟ್ಸಾಪ್‌ನಲ್ಲಿ ಸಲ್ಲಿಸಬಹುದು. ಬಂದಿರುವ ದೂರುಗಳನ್ನು ತಕ್ಷಣವೇ ಪರಿಹರಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ನಗರದಲ್ಲಿ 14,000 ಬೋರ್‌ವೆಲ್‌ಗಳ ಪೈಕಿ 6,900 ಬೋರ್‌ವೆಲ್‌ಗಳು…

Read More

 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 400 ಬೌಂಡರಿಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ಐರ್ಲೆಂಡ್ ನ ಹಿರಿಯ ಬ್ಯಾಟ್ಸ್‌ಮನ್‌ ಪಾಲ್ ಸ್ಟರ್ಲಿಂಗ್ ಬರೆದಿದ್ದಾರೆ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಐರ್ಲೆಂಡ್ ಪರ ನಾಯಕನ ಇನಿಂಗ್ಸ್ ಆಡಿದ ಪಾಲ್ ಸ್ಟರ್ಲಿಂಗ್ 27 ಎಸೆತಗಳಲ್ಲಿ 25 ರನ್ ಬಾರಿಸಿ ರಶೀದ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದ ಸ್ಟರ್ಲಿಂಗ್ ಚುಟುಕು ಕ್ರಿಕೆಟ್‌ನಲ್ಲಿ 400 ಬೌಂಡರಿ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಅಫಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20-ಐ ಸರಣಿಯ ಮೊದಲನೇ ಪಂದ್ಯ ಮಾರ್ಚ್‌ 15( ಶುಕ್ರವಾರ) ಶಾರ್ಜಾದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಐರ್ಲೆಂಡ್ ನಾಯಕ ಈ ದಾಖಲೆ ಬರೆದಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದ ಆಟಗಾರರು * 401- ಪಾಲ್ ಸ್ಟರ್ಲಿಂಗ್- ಐರ್ಲೆಂಡ್-135 ಪಂದ್ಯ * 395- ಬಾಬರ್ ಆಝಮ್- ಪಾಕಿಸ್ತಾನ- 109 ಪಂದ್ಯ *…

Read More

ಐಐಟಿ, ಐಐಐಟಿ, ಎನ್ಐಟಿಯಂತಹ ವಿಶೇಷ ಎಂಜಿನಿಯರಿಂಗ್ ಸಂಸ್ಥೆಗಳ ಪ್ರವೇಶಕ್ಕಾಗಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅವಶ್ಯಕ. ಜೆಇಇ ಮುಖ್ಯ ಪರೀಕ್ಷೆಯು ಏಪ್ರಿಲ್ ನಡೆಯಲಿದೆ.  ಈ ವರ್ಷ 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಇಇ ಸೆಷನ್ 1ರ  ಮುಖ್ಯ ಪರೀಕ್ಷೆಯಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜೆಇಇ ಸೆಷನ್ 2ರ  ಮುಖ್ಯ ಪರೀಕ್ಷೆಗೆ  ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ 12 ಲಕ್ಷಕ್ಕಿಂತ ಹೆಚ್ಚು ಎಂದು ಹೇಳಲಾಗುತ್ತದೆ. ಜೆಇಇ ಪರೀಕ್ಷೆಯನ್ನು ಎನ್ ಟಿಎ ಅಂದರೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುತ್ತದೆ. ಜೆಇಇ ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಇತ್ತೀಚಿನ ಅಪ್ಡೇಟ್ ಗಳನ್ನು ಅಧಿಕೃತ ವೆಬ್‌ಸೈಟ್ https://jeemain.nta.ac.in/ ನಲ್ಲಿ ಪರಿಶೀಲಿಸಬಹುದು.  ಎನ್ ಟಿಎ ಶೀಘ್ರದಲ್ಲೇ ಜೆಇಇ ಸೆಷನ್ 2 ಮುಖ್ಯ ಪರೀಕ್ಷೆಯ ಸಿಟಿ ಸ್ಲಿಪ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದರೊಂದಿಗೆ ಅಭ್ಯರ್ಥಿಗಳು ಜೆಇಇ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಜೆಇಇ ಸೆಷನ್ 2 ಮುಖ್ಯ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ. ಇಲ್ಲಿದೆ…

Read More

ಮುಂಬೈ: ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯನ್ನು 8 ಮಂದಿ ದುಷ್ಕರ್ಮಿಗಳ ತಂಡವು ಮಾರಣಾಂತಿ ಕವಾಗಿ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಅವಿನಾಶ್ ಧನ್ವೆ (31) ಎಂದು ಗುರುತಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದಾಪುರ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಹಳೆಯ ದ್ವೇಷದಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಿಸಿಟಿವಿಯಲ್ಲಿ ಏನಿದೆ..?: ಅವಿನಾಶ್ ಧನ್ವೆ ಸಹಿತ ನಾಲ್ವರು ಪುಣೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್ ಜಗದಂಬಾದಲ್ಲಿ ಕುಳಿತಿರುತ್ತಾರೆ. ಧನ್ವೆ ಫೋನಿನಲ್ಲಿ ಮಾತನಾಡುತ್ತಿರುತ್ತಾನೆ. ಈ ವೇಳೆ ಇಬ್ಬರು ಬಂದು ಏಕಾಏಕಿ ಧನ್ವೆ ಮೇಲೆ ಗುಂಡಿನ ಸುರಿಮಳೆಗೈಯುತ್ತಾರೆ. ಇದರಿಂದ ಉಳಿದ ಮೂವರು ಗಾಬರಿಗೊಂಡು ಅಲ್ಲಿಂದ ಎಸ್ಕೇಪ್‌ ಆಗುತ್ತಾರೆ. ಇತ್ತ ಮತ್ತೆ 3-4 ಮಂದಿ ಓಡೋಡಿ ಬಂದು ಮಚ್ಚಿನಿಂದ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಾರೆ. ಪರಿಣಾಮ ಧನ್ವೆ ಸ್ಥಳದಲ್ಲಿಯೇ ಸಾವನ್ನಪ್ಪುತ್ತಾನೆ. https://ainlivenews.com/good-news-for-job-seekers-application-invitation-for-247-pdo-posts/ ಇತ್ತ ಧನ್ವೆ ಸಾವನ್ನಪ್ಪುತ್ತಿದ್ದಂತೆಯೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗುವುದನ್ನು…

Read More

ಬೆಂಗಳೂರು:- ಲೋಕಸಭಾ ಚುನಾವಣೆ 2024 ರ ಹಿನ್ನೆಲೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಇನ್ನೂ ಕಗ್ಗಂಟಾಗಿ ಉಳಿದಿದೆ. ಮೊದಲ ಹಂತದಲ್ಲಿ 95 ಅಭ್ಯರ್ಥಿಗಳನ್ನ ಘೋಷಣೆ ಮಾಡಿರುವ ಕಾಂಗ್ರೆಸ್ ಇದೀಗ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ದೆಹಲಿಯಲ್ಲಿ ಸಭೆಗಳ ಮೇಲೆ ಸಭೆ ನಡೆಸುತ್ತಿದೆ. ಹೀಗಾಗಿ ಅದರಲ್ಲಿ ಭಾಗವಹಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಲಿದ್ದಾರೆ. ದೆಹಲಿಗೆ ತೆರಳುವ ಮುನ್ನ ಸಿಎಂ ಕೋಲಾರ ಅಭ್ಯರ್ಥಿ ಆಯ್ಕೆ ಬಗ್ಗೆ ಸಭೆ ನಡೆಸಿದ್ದಾರೆ. ಈ ವೇಳೆ ದಲಿತ ಬಲಗೈ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸುವಂತೆ ರಮೇಶ್ ಕುಮಾರ್ ಹಾಗೂ ತಂಡ ಅಭಿಪ್ರಾಯ ಇಟ್ಟಿದೆ. ಈ ಮೂಲಕ ದಲಿತ ಎಡಗೈ ಸಮುದಾಯದ ಕೆ.ಹೆಚ್.ಮುನಿಯಪ್ಪ ಮತ್ತವರ ಕುಟುಂಬದವರಿಗೆ ಟಿಕೆಟ್ ನೀಡದಂತೆ ಪರೋಕ್ಷವಾಗಿ ಹೇಳಿದೆ. ಅತ್ತ ಸ್ಪರ್ಧೆಗೆ ನಿರಾಸಕ್ತಿ ತೋರಿರೋ ಮುನಿಯಪ್ಪ, ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್​ ಕೊಡಿಸೋಕೆ ಯತ್ನಿಸ್ತಿದ್ದಾರೆ. ಇದನ್ನ ಅರಿತೇ ರಮೇಶ್​ ಕುಮಾರ್​ ಅಭಿಪ್ರಾಯ ಮಂಡಿಸಿದ್ದಾರೆ. ಅತ್ತ ಕೆ.ಹೆಚ್​.ಮುನಿಯಪ್ಪಗೆ ಕೈ ಹೈಕಮಾಂಡ್ ಬುಲಾವ್ ನೀಡಿದ್ದು, ನಿನ್ನೆಯೇ ದೆಹಲಿಗೆ ತೆರಳಿದ್ದಾರೆ.…

Read More

ಭಾರತದಲ್ಲಿ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಸ್ಟ್ರೋಕ್ (stroke) ಕೂಡ ಒಂದಾಗಿದೆ. ವರ್ಷದಲ್ಲಿ ಬರೋಬ್ಬರಿ1.8 ದಶಲಕ್ಷಕ್ಕೂ ಹೆಚ್ಚು ಜನರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಪ್ರಕರಣಗಳು ಹೆಚ್ಚುತ್ತಲಿವೆ. ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.  ರಕ್ತ ಹೆಪ್ಪುಗಟ್ಟುವಿಕೆ (blood clot)ಅಥವಾ ರಕ್ತಸ್ರಾವದಿಂದಾಗಿ ಮೆದುಳಿಗೆ ರಕ್ತ ಪೂರೈಕೆಗೆ ಅಡ್ಡಿಯಾಗುವ ಸ್ಥಿತಿ ಯನ್ನು ಸ್ಟ್ರೋಕ್  ಎನ್ನಲಾಗುತ್ತೆ. ಇದು ಮೆದುಳಿನ ಹಾನಿಗೆ ಕಾರಣವಾಗುತ್ತದೆ. ಸ್ಟ್ರೋಕ್ ನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ, ಇಸ್ಕೀಮಿಕ್ ಸ್ಟ್ರೋಕ್ ಮತ್ತು ಹೆಮರಾಜಿಕ್ ಸ್ಟ್ರೋಕ್.  ಪಾರ್ಶ್ವ ವಾಯು ವೈದ್ಯಕೀಯ ತುರ್ತುಸ್ಥಿತಿಯಾಗಿದ್ದು, ಜೀವವನ್ನು ಉಳಿಸಲು ತಕ್ಷಣದ ಚಿಕಿತ್ಸೆಯ ಅಗತ್ಯವಿರುತ್ತದೆ. ತ್ವರಿತ ಕ್ರಮವು ರಕ್ತ ಪೂರೈಕೆಯ ಅಡಚಣೆಯಿಂದ ಉಂಟಾಗುವ ಮಿದುಳಿನ ಹಾನಿಯನ್ನು ಕಡಿಮೆ ಮಾಡುತ್ತದೆ. ಇದನ್ನು ಮಾಡಲು, ನೀವು ರೋಗದ ಚಿಹ್ನೆಗಳು ಮತ್ತು ರೋಗಲಕ್ಷಣ (Signs and Symptoms) ಗಳನ್ನು ತಿಳಿದುಕೊಳ್ಳಬೇಕು. ಯುವ ಪೀಳಿಗೆಯಲ್ಲೂ ಇದು ಕಂಡುಬರುತ್ತಿರುವುದು ಆಶ್ಚರ್ಯಕರವಾಗಿ ಕಾಣಿಸಬಹುದು, ಆದರೆ ಡೇಟಾವು ಎಲ್ಲಾ ಸ್ಟ್ರೋಕ್ ಪ್ರಕರಣಗಳಲ್ಲಿ 15 ಪ್ರತಿಶತವು 18 ರಿಂದ…

Read More

ಹಿಂದೆ ಬೆಟ್ಟ ಗುಡ್ಡಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನೆಲ್ಲಿಕಾಯಿ ಮರಗಳು ಇದು ಹೈಬ್ರಿಡ್ ಆಗಿ ಬೆಳೆಯಲಾಗುತ್ತಿದೆ. ನೆಲ್ಲಿಕಾಯಿಯಲ್ಲಿ ಇರುವಂತಹ ಅಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದರಲ್ಲೂ ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡಿದರೆ, ಅದು ಇನ್ನಷ್ಟು ಲಾಭಕಾರಿ. ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ ಹಿಂದಿನಿಂದಲೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ನೆಲ್ಲಿಕಾಯಿ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಆಗುವುದು ಮತ್ತು ಕಾಯಿಲೆಗಳ ವಿರುದ್ಧ ರಕ್ಷಣೆ ಸಿಗುವುದು. ಕೆಮ್ಮು, ಶೀತ ಮತ್ತು ಶ್ವಾಸಕೋಸದ ಸಮಸ್ಯೆಗಳನ್ನು ಇದು ದೂರವಿಡುವುದು. ಕೂದಲು ಉದುರುವಿಕೆ, ಬಿಳಿಯಾಗುವ ಸಮಸ್ಯೆಗೂ ಇದು ಪರಿಣಾಮಕಾರಿ. ಇದರಲ್ಲಿ ಇರುವಂತಹ ಪ್ರಬಲ ಆಂಟಿಆಕ್ಸಿಡೆಂಟ್ ಅಮಶವು ಕೂದಲು ಮತ್ತು ಚರ್ಮವನ್ನು ರಕ್ಷಿಸುವುದು. ಹೊಸ ಅಂಗಾಂಶಗಳು ಬೆಳೆಯಲು ಇದು ಸಹಕಾರಿ ಕೂಡ. ಕೂದಲು ಗಂಟು ಕಟ್ಟುವುದು, ಬಿಸಿಲಿನ ಸುಟ್ಟು ಕಲೆಗಳೂ ಮತ್ತು ಬಿಸಿಲಿನಿಂದ ಆಗಿರುವ ಹಾನಿಯನ್ನು ಇದು ತಡೆಯುವುದು. ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡರೆ ಅದು ಕೂದಲಿನ ರಕ್ಷಣೆ ಮಾಡುವುದು ಮತ್ತು ಕೂದಲಿನ ಬೆಳವಣಿಗೆಗೆ ಇದು ಸಹಕಾರಿ.…

Read More

ಈ ವಾರ ಚಿನ್ನ, ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 60,380 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 65,870 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 60,380 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,600 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 19ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,380 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,870 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 770 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,380 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,870 ರೂ ಬೆಳ್ಳಿ ಬೆಲೆ 10…

Read More

ಭಾರತೀಯ ನಾಗರೀಕರು ಹೊಂದಿರಲೇಬೇಕಾದ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ‘ಮತದಾರರ ಗುರುತಿನ ಚೀಟಿ ಅಥವಾ ವೋಟರ್ ಐಡಿ (Voter ID) ‘ಕೂಡ ಒಂದು. ಮತದಾರರ ಗುರುತಿನ ಚೀಟಿಯು ಕೇವಲ ಮತದಾನ ಮಾಡಲು ಮಾತ್ರವಲ್ಲ, ಇದನ್ನು ದಾಖಲೆಗಳ ರೂಪದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಕೆಲಸವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇಂತಹ ಪ್ರಮುಖ ದಾಖಲೆಯನ್ನು ನೀವು ಕಳೆದುಕೊಂಡಿದ್ದರೆ ಚಿಂತಿಸಬೇಡಿ. ಏಕೆಂದರೆ, ಇದೀಗ ನೀವು ಒಂದೇ ಒಂದು ಕ್ಲಿಕ್‌ನಲ್ಲಿ ಎಲೆಕ್ಟ್ರಾನಿಕ್ ಎಲೆಕ್ಟರಲ್ ಫೋಟೋ ಐಡಿ ಕಾರ್ಡ್ (e-EPIC) ಅನ್ನು ಪಡೆಯಬಹುದು ಆನ್ಲೈನ್ ನಲ್ಲಿ ಇ-ವೋಟರ್ ಐಡಿ ಪಡೆಯುವುದು ಹೇಗೆ? ಹಂತ 1: ಅಧಿಕೃತ ಮತದಾರರ ಸೇವೆಗಳ ಪೋರ್ಟಲ್ ಗೆ ಭೇಟಿ ನೀಡಿ. ಹಂತ 2: ಮುಖಪುಟದ ಮೇಲಿನ ಬಲ ಮೂಲೆಯಲ್ಲಿರುವ ‘ಸೈನ್ ಅಪ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಹಂತ 3: ಅಗತ್ಯ ವಿವರಗಳನ್ನು ನಮೂದಿಸಿ ಮತ್ತು ಪೋರ್ಟಲ್ ನಲ್ಲಿ ನೋಂದಾಯಿಸಿ. ಹಂತ 4: ‘ಲಾಗಿನ್’ ಬಟನ್ ಕ್ಲಿಕ್ ಮಾಡುವ ಮೂಲಕ ಮತ್ತು ಮೊಬೈಲ್ ಸಂಖ್ಯೆ, ಪಾಸ್ವರ್ಡ್,…

Read More

ಚಿಕ್ಕಮಗಳೂರು:- ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದೇವರು ಮನೆ ಬೆಟ್ಟದಲ್ಲಿ ಕಾಡಾನೆ ರಸ್ತೆಗೆ ಅಡ್ಡ ಬಂದಿರುವ ಘಟನೆ ನಡೆದಿದೆ. ಬೈಕ್ ನಲ್ಲಿದ್ದ ಯುವಕ ಯುವತಿ ಕೂದಲೆಳದ ಅಂತರದಿಂದ ಪಾರಾಗಿದ್ದು ಬೈಕ್ ಸಂಪೂರ್ಣ ಜಕಮ್ ಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಮೂಡಿಗೆರೆ ಪಟ್ಟಣದ ನಿವಾಸಿ ಲೋಕೇಶ್ ಮತ್ತು ಅವರ ಸಹೋದರಿ ದೇವರಮನೆ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹಿಂದಿರುವಾಗ ದೇವರಮನೆ ರಸ್ತೆಯಲ್ಲಿ ಕಾಡಾನೆ ಬೈಕಿಗೆ ಅಡ್ಡ ಬಂದು ಅಟ್ಟಿಸಿಕೊಂಡು ಬಂದಿದೆ. ತಕ್ಷಣ ಬೈಕ್ ಸವಾರರು ಓಡಿ ಹೋಗಿದ್ದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಕ್ ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು ಬೈಕ್ ಜಖಂಗೊAಡಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳಾದ ಅಭಿಜಿತ್, ಬಣಕಲ್ ಠಾಣಾ ಪಿಎಸ್‌ಐ ಎನ್.ಕೆ.ಓಮನಾ, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಪ್ರವಾಸಿಗರಿಗೂ ಸಹ ಭಯ ಉಂಟು ಮಾಡುತ್ತಿದೆ ಸದ್ಯ ಈ ಕುರಿತು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ

Read More