Author: AIN Author

ಬೆಂಗಳೂರು: ಮೇಘನಾ ಫುಡ್ಸ್ ಗ್ರೂಪ್ (Meghana Foods Groups) ಮೇಲೆ ಆದಾಯ ತೆರಿಗೆ (Income Tax) ಅಧಿಕಾರಿಗಳು ದಾಳಿ ನಡೆಸಿದ್ದಾರೆ.ನಗರದ ಕೋರಮಂಗಲದಲ್ಲಿರುವ ಕಛೇರಿ, ಇಂದಿರಾನಗರ, ಜಯನಗರ ಸೇರಿ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. Bigg News: ಬೆಂಗಳೂರಿನ ಶಾಲೆಯೊಂದರ ಮುಂಭಾಗ ಸ್ಫೋಟಕ ವಸ್ತುಗಳು ಪತ್ತೆ: ಆತಂಕ ಸೃಷ್ಟಿ ಮೇಘನಾ ಫುಡ್ಸ್ ಹೆಸರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮ ನಡೆಸುತ್ತಿರುವ ಕಂಪನಿಯ ಆದಾಯ ತೆರಿಗೆ ಪಾವತಿಯಲ್ಲಿ ಭಾರೀ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಕರ್ನಾಟಕ ಮತ್ತು ಗೋವಾ ವಿಭಾಗದ ಐಟಿ ಅಧಿಕಾರಿಗಳ ತಂಡ ನಗರದಲ್ಲಿರುವ 10ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದೆ.

Read More

ಹಾಸನ: ಮದುವೆಗೆ ಪೋಷಕರು ವಿರೋಧಿಸಿದ್ದಕ್ಕೆ ಹೊಳೆನರಸೀಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳಲ್ಲಿ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವಿಗೀಡಾಗಿದ್ದಾನೆ. ಮೃತ ಯುವಕನನ್ನು ನಗರನಹಳ್ಳಿ ಗ್ರಾಮದ ರಾಜು (24) ಎಂದು ಗುರುತಿಸಲಾಗಿದೆ. ಮೃತ ಯುವಕ ಡಿಗ್ರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಅಪ್ರಾಪ್ತೆ ಎನ್ನುವ ಕಾರಣಕ್ಕೆ ಮದುವೆಗೆ ನಿರಾಕರಿಸಿ ಪೋಷಕರು, ಬುದ್ಧಿವಾದ ಹೇಳಿದ್ದರು. ಇದರಿಂದ ನೊಂದ ಪ್ರೇಮಿಗಳು (Lovers) ವಿಷ ಸೇವಿಸಿ, ಹೊಳೆನರಸೀಪುರ ಪಟ್ಟಣದ ಹೇಮಾವತಿ ನದಿ ಸೇತುವೆ ಬಳಿಯ ರೈಲ್ವೇ ಹಳಿ ಮೇಲೆ ಮಲಗಿದ್ದರು. ಹಳಿ ಮೇಲೆ ಒದ್ದಾಡುತ್ತಿದ್ದ ಇಬ್ಬರನ್ನು ನೋಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.  https://ainlivenews.com/direct-recruitment-without-exam-just-pass-puc-is-enough-salary-%e2%82%b963000-per-month/ ಸ್ಥಳಕ್ಕೆ ಬಂದ ಪೊಲೀಸರು ಜೀಪ್‍ನಲ್ಲೇ ಇಬ್ಬರನ್ನು ನಗರದ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನದ (Hassan) ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಯುವಕ ಮೃತಪಟ್ಟಿದ್ದು, ಅಪ್ರಾಪ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಯುವಕ ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು…

Read More

ಮಹಿಳಾ ಪ್ರೀಮಿಯರ್‌ ಲೀಗ್‌ನ (Women’s Premier League) ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. 16 ವರ್ಷಗಳ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡುವ ಜೊತೆಗೆ ಕೋಟಿ ಕೋಟಿ ಬಹುಮಾನವನ್ನು ಆರ್‌ಸಿಬಿ ಮಹಿಳಾ ತಂಡ (RCB Womens Team) ಬಾಚಿಕೊಂಡಿತು. ಅರುಣ್ ಜೆಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ, ಸೋಫಿ ಮೊಲಿನೆಕ್ಸ್‌, ಶ್ರೇಯಾಂಕ ಪಾಟೀಲ್ ಅವರ ಸ್ಪಿನ್‌ ಮೋಡಿಗೆ ನಲುಗಿ 113 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬೌಲಿಂಗ್‌ನಲ್ಲಿ ವಿಕೆಟ್‌ ಪಡೆಯದಿದ್ದರೂ ಕೊನೇ ಓವರ್‌ವರೆಗೂ ಹೋರಾಟ ನಡೆಸಿದ ಡೆಲ್ಲಿ ತಂಡ 8 ವಿಕೆಟ್‌ಗಳಿಂದ ಸೋಲನುಭವಿಸಿತು. ನಂತರ ವಿಜೇತ ತಂಡ ಹಾಗೂ ರನ್ನರ್‌ ಅಪ್‌ ತಂಡಕ್ಕೆ ನಗದು ಬಹುಮಾನ ನೀಡಲಾಯಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಫೈನಲ್‌ ಹಣಾಹಣಿಯಲ್ಲಿ 8 ವಿಕೆಟ್‌ಗಳಿಂದ ಗೆದ್ದು ಚಾಂಪಿಯನ್‌ ಆದ ಆರ್‌ಸಿಬಿ…

Read More

ಬೆಂಗಳೂರು:  ನಗರತ್​ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ  ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಇಂದು  ಶಕ್ತಿ ಪ್ರದರ್ಶನಕ್ಕೆ ಮುಂದಾದ ಹಿಂದೂಸಂಘಟನೆಗಳು ಹೀಗಾಗಿ  ಇಂದು ಮಧ್ಯಾಹ್ನ 12.00 ಘಂಟೆಗೆ ಸಮಸ್ತ ಹಿಂದೂ ಬಾಂಧವರೆಲ್ಲರೂ ಸೇರಿ, ಮುಖೇಶ್ ಅಂಗಡಿಯಿಂದ ಭಾಗವಧ್ವಜದೊಂದಿಗೆ ಹನುಮಾನ್ ಚಾಲೀಸ ಪಠಣ ಮಾಡಿಕೊಂಡು ಶಾಂತಿಯುತ ಮೆರವಣಿಗೆಯಲ್ಲಿ ಪಾಲ್ಗೊಳೋಣ ಎಂದು ಕರೆ ನೀಡಿದರು. ದೇಶದ ಅಭಿವೃದ್ಧಿಗೆ ನಾವು ಹೆಚ್ಚು ಸ್ಥಾನ ಗೆಲ್ಲಿಸಿ, ಕರ್ನಾಟಕದಿಂದ ಗಿಫ್ಟ್ ಕೊಡಬೇಕು: ನಿಖಿಲ್‌ ಕುಮಾರಸ್ವಾಮಿ! ಜೆ. ಎಂ ರೋಡ್ ನಿಂದ ನಗರತ್ ಪೇಟೆ ವರೆಗಿನ ಎಲ್ಲ ರಸ್ತೆಗಳಲ್ಲಿ, ಹನುಮಾನ್ ಚಾಲೀಸಾ & ಹನುಮ ಭಜನೆಯೊಂದಿಗೆ, ಹಿಂದೂಗಳ ಆತ್ಮಸ್ಥೈರ್ಯ ಗಟ್ಟಿ ಮಾಡುವ ನಿಟ್ಟಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ತಾವುಗಳು ಬಂದು ಭಾಗವಹಿಸಿ. ಈ ಮೆರವಣಿಗೆಯನ್ನು ಯಶಸ್ವಿಗೊಳಿಸೋಣ. ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಶ್ರೀ ಸಿ ಕೆ ರಾಮಮೂರ್ತಿ, ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವಿ ಸೂರ್ಯ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರ ಶ್ರೀ ಎಸ್ ಹರೀಶ್, ಬಿಜೆಪಿ ಬೆಂಗಳೂರು…

Read More

ತುಮಕೂರು: ಲೋಕಸಭಾ ಚುನಾವಣೆಯ ಟಿಕೆಟ್‌ ಹಂಚಿಕೆಯ ಭಿನ್ನಮತ ಬಿಜೆಪಿಯನ್ನು ಸುಡುತ್ತಿದೆ. ಹಲವು ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ಬಂಡಾಯದ ಬಾವುಟ ಹಾರಿಸಿದ್ದು, ಕೆಲವರು ಪಕ್ಷ ತೊರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ತುಮಕೂರಲ್ಲಿ ವಿ ಸೋಮಣ್ಣ ಅವರಿಗೆ ಟಿಕೆಟ್‌ ನೀಡಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಬಿಜೆಪಿ ನಾಯಕ, ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೌದು ಮಾಧುಸ್ವಾಮಿ ಅಸಮಧಾನವನ್ನೇ ಕಾಂಗ್ರೆಸ್ ನಾಯಕರು  ಬಂಡವಾಳ ಮಾಡಿಕೊಂಡಿದ್ದಾರೆ. https://ainlivenews.com/direct-recruitment-without-exam-just-pass-puc-is-enough-salary-%e2%82%b963000-per-month/ ಆದ್ದರಿಂದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ತುರುವೇಕೆರೆ ಮಸಾಲೆ ಜಯರಾಮ್ ತೋಟದ ಮನೆಯಲ್ಲಿ ಸಭೆ ನಡೆಸಲಾಯಿತು. ಆರ್.ಗೋಪಾಲಯ್ಯ,  ಕುಣಿಗಲ್‌ ಡಿ.ಕೃಷ್ಣಕುಮಾರ್ ಸೇರಿದಂತೆ ಹಲವು ಮುಖಂಡರ ಸಮ್ಮುಖದಲ್ಲಿ ನಡೆದಿದ್ದು, ಮಾಧುಸ್ವಾಮಿ ಮನವೊಲಿಕೆಗೆ ಅವಿರತ ಪ್ರಯತ್ನ ಮಾಡಿದ್ದಾರೆ. ಇನ್ನೂ ಬೆಂಬಲಿಗರ ಸಭೆ ಕರೆದು ತೀರ್ಮಾನ ಮಾಡುವುದಾಗಿ ಮಾಧುಸ್ವಾಮಿ‌ ನಿರ್ಧಾರ ಮಾಡಿದ್ದು, ಸಭೆಯ ನಿರ್ಧಾರದ ಬಳಿಕ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡಲಿದ್ದಾರೆ.

Read More

ದೆಹಲಿ: ಪ್ರತಿ ಬಾರಿಯೂ ʻಈ ಸಲ ಕಪ್‌ ನಮ್ದೆ, ಈ ಸಲ ಕಪ್‌ ನಮ್ದೆʼ (ESCN) ಎನ್ನುತ್ತಿದ್ದ ಆರ್‌ಸಿಬಿ ಅಭಿಮಾನಿಗಳ (RCB Fans) ಕನಸು 16 ವರ್ಷಗಳ ಬಳಿಕ ನನಸಾಗಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ನ 2ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿದ RCB ಮಹಿಳಾ ತಂಡ, ಹೆಣ್ಮಕ್ಕಳೆ ಸ್ಟ್ರಾಂಗು ಗುರು ಅನ್ನೋ ಮಾತನ್ನ ಮತ್ತೊಮ್ಮೆ ಸಾಬೀತು ಮಾಡಿದೆ. ಆರ್‌ಸಿಬಿ ಜಯಗಳಿಸುತ್ತಿದ್ದಂತೆ ಸೋಶಿಯಲ್‌ ಮೀಡಿಯಾಗಳಲ್ಲಿ ರಾತ್ರಿಯಿಡಿ #RCB, #CongratulationsRCB ಟ್ರೆಂಡ್‌ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರಿನ ಅಭಿಮಾನಿಗಳು ಪಟಾಕಿ ಸಿಡಿಸಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿದರು. ಬೆಂಗಳೂರು ಮಾತ್ರವಲ್ಲ ಇಡೀ ದೇಶಾದ್ಯಂತ‌ ಆರ್‌ಸಿಬಿ ಅಭಿಮಾನಿಗಳು ವನಿತೆಯರ ಗೆಲುವನ್ನು ಹಬ್ಬದಂತೆ ಸಂಭ್ರಮಿಸಿದರು. ಸದ್ಯ ಆರ್‌ಸಿಬಿ ಅಭಿಮಾನಿಗಳಿಗೆ ಮಹಿಳಾ ತಂಡ ಕಪ್‌ ಟ್ರೋಫಿ ಬಾಚಿಕೊಂಡಿತು ಎಂಬುದಷ್ಟೇ ನೆನಪಿದೆ. ನಂತರ ಕೊನೆಯ ಕ್ಷಣಗಳು ಹೇಗಿತ್ತು? 16 ವರ್ಷಗಳ ಸಂಭ್ರಮವನ್ನು ಹೇಗೆ ಕೊಂಡಾಡಿದರು ಅನ್ನೋದನ್ನ ನೀವು ಕಣ್ತುಂಬಿಕೊಳ್ಳಲೇಬೇಕು. ಅದಕ್ಕಾಗಿಯೇ ಆರ್‌ಸಬಿ ಮಿಸ್ಟರ್‌ ನಾಗ್ಸ್‌ ಅವರ ಸ್ಪೆಷಲ್‌ ವೀಡಿಯೋವೊಂದನ್ನ ರಿಲೀಸ್‌ ಮಾಡಿದೆ. ಆರ್‌ಸಿಬಿ ಅಭಿಮಾನಿಗಳಿಗಂತೂ…

Read More

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಐಕಾನಿಕ್ 10 ನೇ ಸೀಸನ್ ಮಾರ್ಚ್ 17 ರಂದು ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ವಿರುದ್ಧ ಉಗುರು ಕಚ್ಚುವ ಫೈನಲ್‌ನಲ್ಲಿ ಬೆಂಗಾಲ್ ಟೈಗರ್ಸ್ (Bengal Tigers) ಜಯಗಳಿಸುವ ಮೂಲಕ ಭವ್ಯವಾದ ಅಂತಿಮ ಪಂದ್ಯದೊಂದಿಗೆ ಕೊನೆಗೊಂಡಿತು. ಅಂತಿಮ ಪಂದ್ಯವು ಇಡೀ ಋತುವಿನಂತೆಯೇ ಕಟ್-ಥ್ರೋಟ್ ಯುದ್ಧವೆಂದು ಸಾಬೀತಾಯಿತು ಮತ್ತು ಬೆಂಗಾಲ್ ಟೈಗರ್ಸ್ ಕೇವಲ 13 ರನ್‌ಗಳ ಅಂತರದಿಂದ ಗೆದ್ದಿತು. ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಉತ್ಸಾಹವು ಈ ಋತುವಿನಲ್ಲಿ ಉತ್ತುಂಗದಲ್ಲಿದೆ, ಪಂದ್ಯಗಳನ್ನು ಲೈವ್ ಆಗಿ ಪ್ರಸಾರ ಮಾಡಲಾಗುತ್ತದೆ JioCinema. ಈ ಐಕಾನಿಕ್ ಋತುವಿನಲ್ಲಿ ಅಭಿಮಾನಿಗಳು ವಿಸ್ಮಯದಿಂದ ಹಂಚಿಕೊಂಡಿದ್ದಾರೆ ಮತ್ತು ಮರುಹಂಚಿಕೊಳ್ಳುತ್ತಿರುವ ನಟರ ಸೀದಾ ವೀಡಿಯೋಗಳು ವೈರಲ್ ಆಗುವುದರೊಂದಿಗೆ ಅದ್ಭುತವಾದ ಮನರಂಜನೆಗೆ ಸಾಕ್ಷಿಯಾಯಿತು. ಸಲ್ಮಾನ್ ಖಾನ್ ಅವರ ತಾಯಿಯೊಂದಿಗೆ ಹೃದಯಸ್ಪರ್ಶಿ ಸಂವಾದದಿಂದ ಹಿಡಿದು ಸ್ಟೇಡಿಯಂನಲ್ಲಿ ಜೆನಿಲಿಯಾ ಡಿಸೋಜಾ ಅವರ ವೈರಲ್ ವೀಡಿಯೊದವರೆಗೆ, ಈ ಸೀಸನ್ ನಿಜವಾಗಿಯೂ ಭಾವನೆಗಳ ರೋಲರ್ ಕೋಸ್ಟರ್ ಆಗಿದೆ. ಸ್ಟ್ಯಾಂಡ್‌ಗಳು ಸಹ ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸುವ ಭಾರತೀಯ ಮನರಂಜನಾ…

Read More

ವಿಜಯಪುರ: ಜಗದೀಶ್ ಶೆಟ್ಟರ್​​ಗೆ ಟಿಕೆಟ್‌ ನೀಡುವುದನ್ನು ಪಕ್ಷ ತೀರ್ಮಾನ ಮಾಡಿದ್ರೆ ಅದನ್ನು ನಾಯಕರು ಸ್ವಾಗತಿಸಬೇಕು ಎಂದು ಶೆಟ್ಟರ್ ಪರ ಬೆಳಗಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಶಂಕರಗೌಡ ಪಾಟೀಲ ಅವರು ಬ್ಯಾಟಿಂಗ್ ಮಾಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿ, ಜಗದೀಶ್ ಶೆಟ್ಟರ್​​ಗೆ ಟಿಕೆಟ್‌ ನೀಡುವುದನ್ನು ಪಕ್ಷ ತೀರ್ಮಾನ ಮಾಡಿದ್ರೆ ಅದನ್ನು ನಾಯಕರು ಸ್ವಾಗತಿಸಬೇಕು. ಪಕ್ಷವೇ ತೀರ್ಮಾನ ಮಾಡಿದಾಗ ವಿರೋಧ ಮಾಡೋದಕ್ಕೆ ಆಗಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಭೆಗೆ ಜಿಲ್ಲೆಯ ಸ್ಥಳೀಯ ನಾಯಕರು ನನಗೆ ಆಹ್ವಾನಿಸಿಲ್ಲ. ಪಕ್ಷದ ತೀರ್ಮಾನವನ್ನು ನಾನು ಸ್ವಾಗತಿ ಸುತ್ತೇನೆ. ಬೆಳಗಾವಿ ಲೋಕಸಭಾ ಚುನಾವಣೆಗೆ ನಾನು ಆಕಾಂಕ್ಷಿಯಾಗಿದ್ದೇನು. ನಾನು ಬಿಜೆಪಿ ಟಿಕೆಟ್​ಗಾಗಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರಿಗೆ ಮನವಿ ಮಾಡಿದ್ದೆನು. ಈಗ ಜಗದೀಶ್ ಶೆಟ್ಟರ್ ಬೆಳಗಾವಿಗೆ ಬಂದು ಸ್ಪರ್ಧಿಸ್ತಾರೆ ಎಂಬ ವದಂತಿ ಇದೆ. ಪಕ್ಷದ ತೀರ್ಮಾನಕ್ಕೆ ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. https://ainlivenews.com/direct-recruitment-without-exam-just-pass-puc-is-enough-salary-%e2%82%b963000-per-month/ ಪಕ್ಷದ ಹಿರಿಯರು ಎಲ್ಲವೂ ವಿಚಾರ ಮಾಡಿಯೇ ತೀರ್ಮಾನ ತಗೊಂಡಿರಬೇಕು ಎಂದು ತಿಳಿಸಿದರು. ಈಗ ಇನ್ನೂ ಕಾಲ ಮಿಂಚಿಲ್ಲ.…

Read More

ಚಿಕ್ಕೋಡಿ: ರಮೇಶ್ ಕತ್ತಿ ಅವರೊಂದಿಗೆ ಈವರೆಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಮಾತುಕತೆ ಆಗಿಲ್ಲ ಎಂದು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಮೇಶ್ ಕತ್ತಿ ಕಾಂಗ್ರೆಸ್ ಪಕ್ಷಕ್ಕೆ ಬಂದ್ರೆ ಸ್ವಾಗತ ಮಾಡುತ್ತೇವೆ ಹಾಗೂ ಅವರ ಆಗಮನದ ಬಗ್ಗೆ ಕಾರ್ಯಕರ್ತರ ಸಭೆ ನಡೆಸುತ್ತಿದ್ದೇವೆ ಎಂದು ಹೇಳಿದರು. https://ainlivenews.com/assault-case-for-wearing-hanuman-chalisa-five-arrested/ ಈ ಭಾಗದ ಸೂಕ್ತ ಅಭ್ಯರ್ಥಿಗಳ ಬಗ್ಗೆ ಅಥಣಿ ಶಾಸಕ ಲಕ್ಷ್ಮಣ ಸವದಿ, ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಕಾಗವಾಡ ಶಾಸಕ ರಾಜು ಕಾಗೆ ಸೇರಿದಂತೆ ಚಿಕ್ಕೋಡಿ ಭಾಗದ ನಾಯಕರ ಅಭಿಪ್ರಾಯ ಪಡೆಯಲು ಸಭೆ ನಡೆಸುತ್ತಿದ್ದೇವೆ. ರಮೇಶ್ ಕತ್ತಿ ಅವರೊಂದಿಗೆ ಈವರೆಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಮಾತುಕತೆ ಆಗಿಲ್ಲ. ರಮೇಶ್ ಕತ್ತಿ ಜೊತೆಗೆ ಯಾರೇ ಪಕ್ಷಕ್ಕೆ ಬಂದ್ರು ನಾನು ಸ್ವಾಗತ ಮಾಡುತ್ತೇವೆ, ನಮ್ಮ ನಡೆ ಗೆಲ್ಲುವ ಕಡೆ ಇದೆ ಎಂದು ತಿಳಿಸಿದರು. ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ ಪೈನಲ್ ಆಗಿಲ್ಲ: ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ ಲೋಕಸಭೆಗೆ…

Read More

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನ ಶಾಲೆಯೊಂದರ ಮುಂಭಾಗಸ್ಫೋಟಕ ವಸ್ತುಗಳು ಪತ್ತೆ ಹಾಗೆ ನಗರದ ಬೆಳ್ಳಂದೂರಿನ  ಪ್ರಕ್ರಿಯಾ ಶಾಲೆ ಮುಂಭಾಗದ ಖಾಲಿ ಜಮೀನಿನಲ್ಲಿ ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ದೇಶದ ಅಭಿವೃದ್ಧಿಗೆ ನಾವು ಹೆಚ್ಚು ಸ್ಥಾನ ಗೆಲ್ಲಿಸಿ, ಕರ್ನಾಟಕದಿಂದ ಗಿಫ್ಟ್ ಕೊಡಬೇಕು: ನಿಖಿಲ್‌ ಕುಮಾರಸ್ವಾಮಿ! ಜಿಲೆಟಿನ್ ಕಡ್ಡಿ, ಡಿಟೋನೇಟರ್​​ ಹಾಗೂ ಇತರ ಕೆಲವು ಸ್ಫೋಟಕಗಳು ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ಬಂಡೆಗಳ ಸ್ಫೋಟಿಸಲು ಸ್ಫೋಟಕಗಳನ್ನು ತಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಅಕ್ರಮವಾಗಿ ಸ್ಫೋಟಕ ವಸ್ತು ಸಂಗ್ರಹಿಸಲಾಗಿದೆ. ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹ ಮಾಡಿದ್ದಾರೆ ಎಂದು ಪೊಲೀಸರು ಸ್ವಯಂಪ್ರೇರಿತರಾಗಿ ಕೇಸ್ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸದ್ಯ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ

Read More