Author: AIN Author

ಬೆಂಗಳೂರು : ರಾಮನ‌ ಹೆಸರಲ್ಲಿ ಮತ್ತು ಮೊದಿ ಹೆಸರಲ್ಲಿ ಚುನಾವಣೆ ಎದುರಿಸ್ತೇವೆ ಎಂಬ ಬಿಜೆಪಿಗರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಏನು ಅವರೊಬ್ಬರ ಆಸ್ತಿನಾ? ಸೀತಾ ರಾಮ್ ನಮಗೂ ದೇವರೇ ಎಂದು ಹೇಳಿದರು. Loksabha Election: ದೇವೇಗೌಡರ ಅಳಿಯನನ್ನು ಬಿಜೆಪಿಗೆ ಕಳಿಸಿದ್ದೆ ಜೆಡಿಎಸ್‍ಗೆ ಮೊದಲ ಆತ್ಮಹತ್ಯೆ ಯತ್ನದಂತಾಗಿದೆ: ಡಿಕೆಶಿ ಪ್ರಧಾನಿ ನರೇಂದ್ರ ಮೋದಿ‌ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ರಾಜ್ಯಕ್ಕೆ ಬಂದಿದ್ರು. ಆಗ ಏನಾಯ್ತು ? ನಾವು 136 ಸೀಟು ಗೆದ್ದೆವು. ಪ್ರಧಾನಿ ಮೋದಿ ಎಲ್ಲಿ ಕ್ಯಾಂಪೇನ್ ಮಾಡಿದ್ರೋ, ಅಲ್ಲಿ ಹೆಚ್ಚಿನ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಕುಟುಕಿದರು. ಕಾನೂನು ಸುವ್ಯವ್ಯಸ್ಥೆ ಎಲ್ಲಿ ಹದಗೆಟ್ಟಿದೆ? ಇದು ಚೆನ್ನಾಗಿ ಇರೋದಕ್ಕೆನೇ ಜನ ಸುಭಿಕ್ಷವಾಗಿ ಇರೋದು. ಹಣ ಇಲ್ಲದೆ ಒಂದು ಲಕ್ಷ ಬಜೆಟ್ ಮಂಡಣೆ ಮಾಡಿರೋದಾ..? ಬರಗಾಲದಲ್ಲಿ ಬರಲಿಲ್ಲ ಇವರು, ಈಗ ಬಂದಿದ್ದಾರೆ. ಐದು ತಿಂಗಳಾದ್ರೂ ಒಂದು ರೂಪಾಯಿ ಕೊಟ್ರಾ? ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಿ,…

Read More

ಬೆಂಗಳೂರು: ದೇವೇಗೌಡರು ಅಳಿಯ ಡಾ.ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸುತ್ತಿರುವುದು ಜೆಡಿಎಸ್‍ಗೆ ಮೊದಲ ಆತ್ಮಹತ್ಯೆ ಯತ್ನದಂತಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಮೈತ್ರಿ ಬಗ್ಗೆ ಕುಮಾರಸ್ವಾಮಿ (HD Kumaraswamy) ಅಸಮಾಧಾನದ ಕುರಿತು ಮಾತನಾಡಿದ ಅವರು, ಮಾಜಿ ಪ್ರಧಾನಿ ಜೆಚ್.ಡಿ ದೇವೇಗೌಡರ ಅಳಿಯ ಡಾ. ಸಿ.ಎನ್ ಮಂಜುನಾಥ್ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ನಮಗೆ ಮೊದಲಿಂದಲೇ ಇದು ಗೊತ್ತಿರುವ ವಿಚಾರ. ಯಾವಾಗ ದೇವೆಗೌಡರು (HD Devegowda) ಯಾಕೆ ಅವರ ಅಳಿಯನನ್ನ ಬಿಜೆಪಿ ಚಿಹ್ನೆಯಿಂದ ನಿಲ್ಲಿಸಿದರೋ ಅದು ಫಸ್ಟ್ ಸುಸೈಡ್ ಅಟೆಂಪ್ಟ್ ಆಫ್ ಜೆಡಿಎಸ್ ಎಂದು ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್ ನಮ್ಮನ್ನು ತುಂಬಾ ಗೌರವಯುತವಾಗಿ ನೋಡಿಕೊಂಡಿದೆ: HD ಕುಮಾರಸ್ವಾಮಿ ನಾನು ನಿರೀಕ್ಷಿಸರಲಿಲ್ಲ. ಅಲಯನ್ಸ್ ಅಂದರೆ ಎಲ್ಲರೂ ವೋಟ್ ಹಾಕಬೇಕು. ಅವರ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಅವರದ್ದೇ ಆದ ಸ್ಟ್ರೆಂತ್ ಇತ್ತು. ಕೆಲವು ಕಡೆ ಒಂದು ಎರಡು ಶಾಸಕರಿದ್ದರು, ಸಂಸದರಿದ್ದರು. ಬಿಜೆಪಿ ಸ್ಟೈಲೇ ಅದು ಇದೊಂದೇ ರಾಜ್ಯ ಅಲ್ಲ, ಬೇರೆ…

Read More

ತುಮಕೂರು: ಭಿನ್ನಮತ ಶಮನಕ್ಕೆ  ಮಾಜಿ ಸಚಿವ ವಿ.ಸೋಮಣ್ಣ ಕಸರತ್ತು ಮುಂದುವರಿದಿದೆ. ತುಮಕೂರು ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿರೋ ವಿ.ಸೋಮಣ್ಣ ಎಸ್‌.ಪಿ.ಚಿದಾನಂದ್ ಮನೆಗೆ ಬೆಳ್ಳಂಬೆಳಗ್ಗೆ ಧಿಢೀರ್ ಭೇಟಿ ನೀಡಿದ್ದಾರೆ. ಎಸ್.ಪಿ.ಚಿದಾನಂದ್ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಬೆಳಗಿನ ಉಪಹಾರಕ್ಕೆ ಚಿದಾನಂದ್ ಮನೆಗೆ ಭೇಟಿ ನೀಡಿದ್ದು, ಚಿದಾನಂದ್ ಜೊತೆ ತಿಂಡಿ ತಿಂದು ಮಾತುಕತೆ ನಡೆಸಿದರು. ತಮ್ಮ ಪರ ಪ್ರಚಾರಕ್ಕೆ ಚಿದಾನಂದ್‌ ಗೆ ಮಾಜಿ ಸಚಿವ ವಿ.ಸೋಮಣ್ಣ ಆಹ್ವಾನ ನೀಡಿದರು.

Read More

ಚಿತ್ರದುರ್ಗ: ದೇಶದ ನೂರು ವರ್ಷಗಳ ಭವಿಷ್ಯವನ್ನು ತೋರಿಸಿಕೊಟ್ಟವರು ಪ್ರಧಾನ‌ ಮೋದಿಯವರು ಎಂದು ಮಾಜಿ ಸಚಿವ. ಸೋಮಣ್ಣ ಹೇಳಿದರು. ಅವರು ಚಿತ್ರದುರ್ಗದಲ್ಲಿ‌ ಮಾಧ್ಯಮಗಳೊಂದಿಗೆ ಮಾತಾಡಿದರು. ನಾನು ಏಳು ಬಾರಿ ಶಾಸಕನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಮಂತ್ರಿಯಾಗಿ‌ ಕೆಲಸ ಮಾಡಿದ್ದೇನೆ.  ಒಂದು‌ದೇಶವನ್ನು ಹೇಗೆ ಆಡಳಿತ ಮಾಡಬೇಕು ಎಂದು ತೋರಿಸಿದ ಮೋದಿಯವರನ್ನು ಇಡೀ ವಿಶ್ವವೇ ಮೆಚ್ಚಿದೆ. ಕರ್ನಾಟಕದ ಜನರು ಮೆಚ್ಚಿದ್ದು, ಮೂರನೇ ಬಾರಿ ಮೋದಿ‌ ಪ್ರಧಾನಿಯಾಗಲು ಎಲ್ಲರೂ ಅವಕಾಶ ನೀಡುತ್ತಾರೆ ಎಂಬುದು ನನ್ನ ಅಚಲ ವಿಶ್ವಾವಾಗಿದೆ ಎಂದರು. ಟಿಕೆಟ್ ವಂಚಿತರು ಯಾವ ಪಕ್ಷದ ಕಡೆ ಮುಖ‌ ಮಾಡಲಿ‌ ಅದು  ಗೌಣ, ಇದು ದೇಶದ ಪ್ರಶ್ನೆ,ಟಿಕೆಟ್ ಕೊಡುವಾಗ 28 ಸ್ಥಾನಗಳಿಗೆ 29 ಕೊಡಲು ಸಾಧ್ಯವಿಲ್ಲ, ಅದನ್ನು ಹೇಗ ಕೊಡಬೇಕು ಎಂದು‌ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ತುಮಕೂರಿಗೆ ಬರಲು ಕಾರಣವಿದೆ. ನನಗೂ ತುಮಕೂರಿಗೂ ಅವಿನಾಭಾವ ಸಂಬಂಧವಿದೆ. ನಾನು ಅನೇಕ ಬಾರಿ ತುಮಕೂರಿನ ಬಗ್ಗೆ ಬೆಳಕನ್ನು ಚೆಲ್ಲಿದ್ದೇನೆ. ನಾನು ಮೂರು ಬಾರಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ,…

Read More

ವಿಜಯಪುರ: ಟವರ್ ಏರಿ ಯುವಕನ ಹುಚ್ಚಾಟ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ನಡೆದಿದೆ. ಜಿಯೋ ಟವರ್ ಏರಿದ ಆಸಾಮಿ ಹುಚ್ಚಾಟ ಮೆರೆದಿದ್ದಾನೆ. ಯುವಕ ಟವರ್‌ನ ತುದಿ ಏರಿ ನಿಂತಿದ್ದಾನೆ. ಆತನ ಹುಚ್ಚಾಟ ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ. ಯುವಕನ ಹೆಸರು ಮಾಹಿತಿ ತಿಳಿದು ಬಂದಿಲ್ಲ. ಕಳೆದ 6 ತಿಂಗಳ ಹಿಂದೆ ಸಿಂದಗಿ ತಾಲೂಕಿನಲ್ಲಿ ಎರಡು ಬಾರಿ ಟವರ್ ಹತ್ತಿ ಹುಚ್ಚಾಟ ಮಾಡಿದ್ದ ಕುಡುಕ. ಆತನೇ ಮತ್ತೆ ಟವರ್​ ಏರಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ‌ ಸಿಬ್ಬಂದಿ ದೌಡಾಯಿಸಿ ಯುವಕನನ್ನ ಕೆಳಗೆ ಇಳಿಸೋಕೆ ಹರಸಾಹಸ ಪಡುತ್ತಿದ್ದಾರೆ.

Read More

ದಾವಣಗೆರೆ: ಇಸ್ಪೀಟ್ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 11 ಜನರನ್ನು ವಶಕ್ಕೆ ಪಡೆದು 1.43 ಲಕ್ಷ ವಶಪಡಿಸಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಮಲಾಪುರ ಹೊಳೆಸಿರಿ ಗೆರೆ ಬಳಿ ನಡೆದಿದೆ. ಸಾರ್ವಜನಿಕರ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ, ಜೂಜು ಕೋರೆ ರನ್ನು ಸಿಇಎನ್ ಪೊಲೀಸರ ತಂಡದಿಂದ ದಾಳಿ, ನಡೆಸಿ ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಘಟನೆ ಸಂಬಂಧ ಆರೋಪಿಗಳ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಕೊಪ್ಪಳ: ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ವೇಳೆ ಪೊಲೀಸರು ಮತ್ತು ತಹಶಿಲ್ದಾರ್ ಕಾರ್ಯಚರಣೆ ನಡೆಸಿ ಬರೋಬ್ಬರಿ 32 ಲಕ್ಷ ರೂ ಹಣ ವಶಕ್ಕೆ ಪಡೆದಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಡೆ ಬಾಗಿಲು ಚೆಕ್ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಡುವಿ ಗ್ರಾಮದಿಂದ ಹೊಸಪೇಟೆಗೆ ಸಾಗಿಸುತ್ತಿದ್ದಾಗ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಗಂಗಾವತಿ ತಹಶಿಲ್ದಾರ್ ಯು ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಪೀರಸಾಬ ಎನ್ನುವರು ಕಾರಿನಲ್ಲಿ ಹಣ ಸಾಗಿಸುತ್ತಿದ್ದು, ಪರಿಶೀಲನೆ ವೇಳೆ ಸಿಕ್ಕಿ ಬಿದ್ದಿದ್ದಾರೆ. ಹಣ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Read More

ದಾವಣಗೆರೆ: ಇಸ್ಪೀಟ್ ಜೂಜು ಅಡ್ಡೆ ಮೇಲೆ ಪೊಲೀಸ್ರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದು 1.29 ಲಕ್ಷ ವಶಪಡಿಸಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೆಬ್ಬಳಗಿರಿ ಗ್ರಾಮದಲ್ಲಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದೆ ಜೂಜು ಕೊರಾಗಿದ್ದು, ಚೆನ್ನಗಿರಿ ಪೊಲೀಸ್ ತಂಡದಿಂದ ದಾಳಿ ನಡೆಸಲಾಗಿದೆ. ಆರೋಪಿಗಳ ವಿರುದ್ಧ ಚೆನ್ನಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಬೆಂಗಳೂರು: ಮೊಬೈಲ್ ಶಾಪ್ ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್ ಗೆ ಸಂಬಧಪಟ್ಟಂತೆ ಐವರನ್ನು ಹಲಸೂರುಗೇಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಗರತ್​ಪೇಟೆಯಲ್ಲಿರುವ ಮೊಬೈಲ್ ಶಾಪ್​ನಲ್ಲಿ ಯುವಕ ಹುನುಮಾನ್​ ಚಾಲಿಸಾ ಅನ್ನು ಜೋರು ಸೌಂಡ್​ ಇಟ್ಟು ಹಚ್ಚಿದ್ದರು. ಹನುಮಾನ್‌ ಚಾಲೀಸಾ ಕೇಸ್‌: ಶೋಭಾ ಕರಂದ್ಲಾಜೆ ಸೇರಿದಂತೆ ಹಿಂದೂ ಕಾರ್ಯಕರ್ತರು ವಶಕ್ಕೆ! ಈ ವೇಳೆ ಅಂಗಡಿಗೆ ಬಂದ ಆರು ಜನ ಯುವಕರು ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ಜೋರು ಸೌಂಡ್ ಇಟ್ಟು ಹಾಡು ಹಾಕಬೇಡ ಎಂದಿದ್ದರು. ಇದೇ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ನಂತರ ಆರು ಜನ ಯುವಕರು ಅಂಗಡಿಯಲ್ಲಿದ್ದ ಯುವಕ ಮುಖೇಶ್​ ಅವರ ಕೊರಳ ಪಟ್ಟಿ ಹಿಡಿದು, ಅಂಗಡಿಯಿಂದ ಹೊರಗೆ ಎಳೆದೊಯ್ದು ಹಲ್ಲೆ ಮಾಡಿದ್ದರು. ಗ್ಯಾಂಗ್​ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇನ್ನು ಗಾಯಗೊಂಡ ಮುಖೇಶ್​ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ​ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಪೊಲೀಸ್​ ಕಸ್ಟಡಿಯಲ್ಲಿದ್ದು, ಐವರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

Read More

ಗದಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಗದಗ ಜಿಲ್ಲೆಯಾದ್ಯಂತ 12 ಚೆಕ್ ಪೋಸ್ಟ್ ಮೂಲಕ ಕಣ್ಣಗಾವಲು ಇರಿಸಿದ್ದು, ಗದಗ ತಾಲೂಕಿನ ದುಂದೂರು ಚೆಕ್ ಪೋಸ್ಟ್ ಕೆ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿಯೊಂದು ವಾಹನಗಳನ್ನು  ತಪಾಸಣೆ ಮಾಡಿಯೇ ಪೊಲೀಸರು ಬಿಡುತ್ತಿದ್ದಾರೆ. ಅಕ್ರಮ ಹಣ ಮದ್ಯ ಸೇರಿದಂತೆ ಗಿಫ್ಟ್ ವಸ್ತುಗಳ ಮೇಲೆ ನಿಗಾ ಇಡಲಾಗಿದ್ದು, ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಸಿ ಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಹಗಲು ರಾತ್ರಿ ವಾಹನಗಳ ಮೇಲೆ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ.

Read More