Author: AIN Author

ಬೀದರ್: ತೀವ್ರವಾದ ತಲೆನೋವಿನಿಂದ ಬೇಸತ್ತು ಗರ್ಭಿಣಿಯೊಬ್ಬರು (Pregnant) ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್‌ ಜಿಲ್ಲೆಯಲ್ಲಿ ನಡೆದಿದೆ. ಮೃತಳನ್ನು ಕಿರ್ತಿ ರಾಮು (22) ಎಂದು ಗುರುತಿಸಲಾಗಿದೆ. ಈಕೆ ಸದ್ಯ 7 ತಿಂಗಳ ಗರ್ಭಿಣಿ. ಈ ಘಟನೆ ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮಾಣಿಕ್ ನಗರದಲ್ಲಿ ನಡೆದಿದೆ. https://ainlivenews.com/is-coconut-sugar-better-for-health-than-white-sugar-here-is-the-answer/ ಕೀರ್ತಿರಾಮು ಅವರು ಹಲವು ತಿಂಗಳುಗಳಿಂದ ತೀವ್ರವಾದ ತಲೆನೋವಿನಿಂದ ಬಳಲುತ್ತಿದ್ದರು. ಎಷ್ಟೇ ಚಿಕಿತ್ಸೆ ಮಾಡಿದರೂ ಗುಣವಾಗುತ್ತಿರಲಿಲ್ಲ. ಇದರಿಂದ ಬೇಸತ್ತು ಕೀರ್ತಿರಾಮು ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾವಿಗೆ ಬಿದ್ದ ಗರ್ಭಿಣಿಯ ಮೃತದೇಹವನ್ನು ಪೊಲೀಸರು ಮೇಲೆಕ್ಕಿತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಾಂಚಿ: JMM ಶಾಸಕಿ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರ ಸೊಸೆ ಸೀತಾ ಸೊರೇನ್‌ (Sita Soren) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸೀತಾ ಸೊರೇನ್‌ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಜಾರ್ಖಂಡ್ ಚುನಾವಣಾ ಉಸ್ತುವಾರಿ ಲಕ್ಷ್ಮೀಕಾಂತ್ ಬಾಜಪೇಯ್ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಸೇರುವ ಕೆಲವೇ ಗಂಟೆಗಳ ಮೊದಲು ಸೀತಾ ಸೊರೇನ್‌, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಗೆ ರಾಜೀನಾಮೆ ನೀಡಿದರು. https://ainlivenews.com/is-coconut-sugar-better-for-health-than-white-sugar-here-is-the-answer/ ರಾಜೀನಾಮೆ ನೀಡಿದ್ದು ಏಕೆ?: ತಮ್ಮ ಪತಿ ದುರ್ಗಾ ಸೊರೇನ್‌ ಅವರ ಸಾವಿನ ನಂತರ, ಜೆಎಂಎಂ ತನಗೆ ಮತ್ತು ಅವರ ಕುಟುಂಬಕ್ಕೆ ಸೂಕ್ತ ಬೆಂಬಲವನ್ನು ನೀಡಲು ವಿಫಲವಾಗಿದೆ ಎಂದು ಹೇಳಿದ್ದಾರೆ. ರಾಜ್ಯದ ಆಡಳಿತ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಮತ್ತು ಪ್ರತ್ಯೇಕಿಸಲಾಗಿದೆ ಎಂದು ಈ ವೇಳೆ ಆರೋಪಿಸಿದ ಅವರು, ಇಷ್ಟವಿಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ . ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಪಿತೂರಿ ನಡೆಸುತ್ತಿರುವ ಬಗ್ಗೆ ನನಗೆ…

Read More

ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ ಭಾರೀ ವಿವಾದ ಸೃಷ್ಟಿಸಿರುವ ‘ಶಕ್ತಿ’ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ರಾಗಾ, ಮೋದಿ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದಾರೆ. ಅವರು ನನ್ನ ಹೇಳಿಕೆಗಳನ್ನು ತಿರುಚಿ, ಅದರ ಅರ್ಥ ಬದಲಾಯಿಸಲು ಪ್ರಯತ್ನಿಸುತ್ತಾರೆ. ಯಾಕೆಂದರೆ ನಾನು ಸತ್ಯವನ್ನೇ ನುಡಿದಿರುತ್ತೇನೆ ಎಂದು ಬರೆದುಕೊಂಡಿದ್ದಾರೆ. ಎಕ್ಸ್‌ನಲ್ಲೇನಿದೆ..?: ಮೋದಿಯವರು ನನ್ನ ಮಾತುಗಳನ್ನು ಇಷ್ಟಪಡುವುದಿಲ್ಲ. ಅವರು ಯಾವಾಗಲೂ ನನ್ನ ಹೇಳಿಕೆಗಳನ್ನು ಯಾವುದೋ ಒಂದು ರೀತಿಯಲ್ಲಿ ತಿರುಚಿ ಅವುಗಳ ಅರ್ಥವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ನಾನು ಗಾಢವಾದ ಸತ್ಯವನ್ನು ಹೇಳಿದ್ದೇನೆ ಎಂದು ಅವರಿಗೆ ಕೂಡ ತಿಳಿದಿದೆ. ನಾನು ಹೇಳಿದ ಶಕ್ತಿ, ನಾವು ಹೋರಾಡುತ್ತಿರುವ ಶಕ್ತಿ, ಆ ಶಕ್ತಿಯ ಮುಖವಾಡ ಮೋದಿಯವರಾಗಿದ್ದಾರೆ. ಅಂತಹ ಶಕ್ತಿಯೇ ಇಂದು ಭಾರತದ ಧ್ವನಿಯನ್ನು ಸೆರೆಹಿಡಿದಿದೆ. https://ainlivenews.com/is-coconut-sugar-better-for-health-than-white-sugar-here-is-the-answer/ ಭಾರತದ ಸಂಸ್ಥೆಗಳು, ಸಿಬಿಐ, ಐಟಿ, ಇಡಿ, ಚುನಾವಣಾ…

Read More

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಪಕ್ಷದ ಹಿರಿಯ ನಾಯಕರು. ಬಂಡಾಯದಂತಹ ಯಾವುದೇ ನಿರ್ಧಾರ ಅವರು ಮಾಡಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಅಧೋಗತಿಗೆ ಹೋಗುವುದು ಶತಸಿದ್ಧ: ಲಕ್ಷ್ಮಣ್‌ ಸವದಿ! ಈಶ್ವರಪ್ಪ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅಂತಹ ಯಾವುದೇ ನಿರ್ಧಾರ ಮಾಡಲ್ಲ. ಒಂದು ವಾರ ಕಾದು ನೋಡಿ ಎಲ್ಲವೂ ಸರಿ ಆಗುತ್ತದೆ. ಈಶ್ವರಪ್ಪ ಪಕ್ಷ ಬಿಡಲ್ಲ. ಯಡಿಯೂರಪ್ಪ-ಈಶ್ವರಪ್ಪ ನಡುವೆ ಏನು ಮಾತುಕತೆ ಆಗಿದೆ ನಮಗೆ ಗೊತ್ತಿಲ್ಲ. ಯಡಿಯೂರಪ್ಪ (BS Yediyurappa) ಏನು ಮಾತು ಕೊಟ್ಟಿದ್ದಾರೋ ಗೊತ್ತಿಲ್ಲ. ಇದನ್ನು ಯಡಿಯೂರಪ್ಪ-ಈಶ್ವರಪ್ಪ ಕೂತು ಮಾತನಾಡಬೇಕು. ಹೈಕಮಾಂಡ್ ನಾಯಕರು ಇದನ್ನು ನೋಡಿಕೊಳ್ಳುತ್ತಾರೆ. ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನ ಸಹಜ. ಹೀಗಾಗಿ ಈಶ್ವರಪ್ಪ ಹೀಗೆ ರಿಯಾಕ್ಟ್ ಮಾಡುತ್ತಾರೆ. ಹೈಕಮಾಂಡ್ ನಾಯಕರು ಅವರ ಜೊತೆ ಮಾತನಾಡುತ್ತಾರೆ. ಅವರು ಪಕ್ಷ ಬಿಡುವುದಿಲ್ಲ, ಎಲ್ಲವೂ ಸರಿ ಆಗುತ್ತದೆ ಎಂದರು. ಸದಾನಂದಗೌಡ (DV Sadananda Gowda) ಅನ್ಯ ಪಕ್ಷ ಸೇರ್ಪಡೆ…

Read More

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ 12 ವಿವಿಧ ಇಲಾಖೆಗಳ ಅಗತ್ಯ ಸೇವೆಗಳ ಗೈರು ಮತದಾರರಿಗೆ(AVES) ಅಂಚೆ ಮತದಾನ(ಪೋಸ್ಟಲ್ ಬ್ಯಾಲೆಟ್)ದ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಆಯಾ ಇಲಾಖೆಗಳಿಂದ ಪಟ್ಟಿ ನೀಡಲು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಸೆಲ್ವಮಣಿ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗವು 12 ವಿವಿಧ ಇಲಾಖೆಗಳನ್ನು ಅಗತ್ಯ ಸೇವೆಗಳೆಂದು ಪರಿಗಣಿಸಿದ್ದು, ಆಯಾ ಇಲಾಖಾವಾರು ನೀಡುವ ಪಟ್ಟಿಯ ಅನುಸಾರ ಅಂಚೆ ಮತದಾನದ ಮೂಲಕ ಮತ ಚಾಯಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಇಲಾಖಾವಾರು ಅಗತ್ಯ ಸೇವೆಗಳ ಗೈರು ಮತದಾರರ ಅರ್ಹ ಮತದಾರರ ಪಟ್ಟಿ ನೀಡಿದ ನಂತರ 12ಡಿ ನಮೂನೆಗಳಲ್ಲಿ ಭರ್ತಿ ಮಾಡಿ, ದಿನಾಂಕ: 22/03/2024ರ ಶುಕ್ರವಾರದೊಳಗಾಗಿ ಸಲ್ಲಿಸಲು ಸೂಚಿಸಲಾಯಿತು. ಅರ್ಹ ಮತದಾರರು ನೋಂದಣಿಯಾಗಿರುವ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾದ ಪೋಸ್ಟಲ್ ವೋಟಿಂಗ್ ಸೆಂಟರ್(ಪಿವಿಸಿ) ನಲ್ಲಿ ಮಾತ್ರ ಈ ಬಾರಿ ಅಂಚೆ ಮತದಾನ…

Read More

ಬೆಂಗಳೂರು: ಬಿಜೆಪಿ ಅಧೋಗತಿಗೆ ಹೋಗುವುದು ಶತಸಿದ್ಧ ಎಂದು ಲಕ್ಷ್ಮಣ್ ಸವದಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಮತ್ತು ಶೆಟ್ಟರ್ ಅವರು ಬಿಜೆಪಿ ಬಿಡುವಾಗ ಮಾಧ್ಯಮಗಳ ಮುಂದೆ ಕೆಲ ಮಾತುಗಳನ್ನು ಹೇಳಿದ್ವಿ ಪಕ್ಷ ಬಿಡಬಾರದಾಗಿತ್ತು.ಪಕ್ಷ ಎಲ್ಲವೂ ಕೊಟ್ಟಿದೆ ಎಂದು ಅವರ ಅಭಿಪ್ರಾಯ ಹೇಳಿದ್ದರು.ನಾನು ಸಹ ಅ ಸಂದರ್ಭದಲ್ಲಿ ಹೇಳಿದ್ದೆ ಈಶ್ವರಪ್ಪ ಅವರು ಹಿರಿಯ ನಾಯಕರು ಲೋಕಸಭೆ ಚುನಾವಣೆ ಘೋಷಣೆ ಆಗಿ, ಅಭ್ಯರ್ಥಿಗಳು ಘೋಷಣೆ ಆದ ಮೇಲೆ ಈಶ್ವರಪ್ಪನವರು ಏನು ಹೇಳುತ್ತಾರೆ ಎನ್ನುವುದರ ಮೇಲೆ ತೀರ್ಮಾನ ಮಾಡೋಣ ಎಂದಿದ್ದೆ‌. ನಾನು ಹೇಳಿದ್ದು ಇವತ್ತು ಸತ್ಯವಾಗಿದೆ ಎಂದರು. ಮೂರು ಮದುವೆಯಾಗಿದ್ದರು ಮುಚ್ಚಿಟ್ಟು 50ನೇ ವಯಸ್ಸಿನಲ್ಲಿ 17 ವರ್ಷದ ನಟಿಯನ್ನು ವರಿಸಿದ ಟೈಗರ್ ಪ್ರಭಾಕರ್ ಬಿಜೆಪಿಯಲ್ಲಿ ಹಿರಿತನ, ಸಂಘಟನೆ ಇರುವವರು, ಪಕ್ಷ ಬಲ ತರುವವರ ಅವಶ್ಯಕತೆ ಅವರಿಗಿಲ್ಲ.ಯಾವ ಆಲೋಚನೆ ಮಾಡ್ತಾ ಇದ್ದಾರೆ ಚರ್ಚೆ ಮಾಡೋದು ಅನಾವಶ್ಯಕ.ಒಟ್ಟಾರೆ ಬಿಜೆಪಿ ಅಧೋಗತಿಗೆ ಹೋಗುವುದು ಶತಸಿದ್ಧ ಎಮದು ಕಿಡಿಕಾರಿದ್ದರು. ಲೋಕಸಭೆ ಚುನಾವಣೆ ಬಳಿಕ ನೋಡಿ ಮೋದಿಯವರು ಪ್ರಧಾನ ಮಂತ್ರಿ…

Read More

ತುಮಕೂರು: ಶಾಲೆಯ ಪಕ್ಕದಲ್ಲಿದ್ದ ದೇವಸ್ಥಾನದಲ್ಲಿ ದೀಪ ಹಚ್ಚಲು ಹೋಗಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮೇಳಕೋಟೆ ಗ್ರಾಮದಲ್ಲಿ ನಡೆದಿದೆ. ಮೇಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯ ಓದುತ್ತಿದ್ದ ದೀಕ್ಷಾ ಮೃತ ವಿದ್ಯಾರ್ಥಿನಿಯಾಗಿದ್ದು, ಮಾ.13ರಂದು ಶಾಲೆಯಲ್ಲಿ ಊಟಕ್ಕೆ ಬಿಟ್ಟ ಸಮಯದಲ್ಲಿ ನಡೆದಿರುವ ದುರ್ಘಟನೆಯಾಗಿದೆ. ಶಾಲೆಯಲ್ಲಿ ಮಧ್ಯಾಹ್ನದ ಊಟದ ವಿರಾಮದ ವೇಳೆ ಆಕೆ ಶಾಲೆಯ ಪಕ್ಕದಲ್ಲೇ ಇರುವ ದೇವಾಲಯದಲ್ಲಿ ದೀಪ ಹಚ್ಚಲು ಹೋಗಿದ್ದಳು. ದೇವರಿಗೆ ದೀಪ ಹಚ್ಚಿದ ಆಕೆಯ ಬಟ್ಟೆಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಬಟ್ಟೆಗೆ ತಗುಲಿ ಮೈಗೆ ಸುಟ್ಟ ಗಾಯಗಳಾಗಿತ್ತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಇದೀಗ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.  

Read More

ಚಿಕ್ಕಮಗಳೂರು: ಕಾಂಗ್ರೆಸ್ ಅನ್ನು ನಾವು ದುರ್ಬಲ ಎಂದು ಪರಿಗಣಿಸಲ್ಲ. ಕಾಂಗ್ರೆಸ್‌ನಲ್ಲಿ ಪ್ರಬಲ ಅಭ್ಯರ್ಥಿಗಳಿಲ್ಲದೆ ಇರಬಹುದು. ಬಿಜೆಪಿ ವಿರೋಧಿ ಮತಗಳು ಕಾಂಗ್ರೆಸ್ಸಿಗೆ ಹೋಗುತ್ತದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುದ್ಧ ಮತ್ತು ಚುನಾವಣೆಯನ್ನು ಹಗುರವಾಗಿ ಪರಿಗಣಿಸಲ್ಲ. ಗಂಭೀರವಾಗಿ ತೆಗೆದುಕೊಂಡು ಗಂಭೀರವಾಗಿ ಎದುರಿಸಬೇಕು. ಮೇಲ್ನೋಟಕ್ಕೆ ಎಲ್ಲಾ ಕಡೆ ಮೋದಿ ಪರ ಅಲೆ ಇರುವುದು ಅರ್ಥವಾಗುತ್ತಿದೆ. ಕಳೆದ ಬಾರಿ ಕಾಂಗ್ರೆಸ್‌ಗೆ ವೋಟ್ ಹಾಕಿದವರು ದೇಶಕ್ಕಾಗಿ ಮೋದಿಗೆ ವೋಟ್ ಹಾಕುತ್ತೇವೆ ಎನ್ನುತ್ತಿದ್ದಾರೆ ಎಂದರು.  ನಾವೇನೂ ದೇಶಭಕ್ತರಲ್ವಾ? ಮೋದಿ ಪ್ರಧಾನಿಯಾಗೋದು ನಮಗೂ ಇಷ್ಟ. ಅಭ್ಯರ್ಥಿ ಬಗ್ಗೆ ಚರ್ಚೆಯಾಗುತ್ತಿರೋದು ಕಡಿಮೆ. ಎಲ್ಲಾ ಕಡೆ ಮೋದಿ ಹವಾ ಇದೆ. https://ainlivenews.com/direct-recruitment-without-exam-just-pass-puc-is-enough-salary-%e2%82%b963000-per-month/ ಕಾಂಗ್ರೆಸ್ಸಿನಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಅನ್ನೋದು ಮುಖ್ಯವಲ್ಲ. ಕಾಂಗ್ರೆಸ್ಸಿಗೆ ಒಂದಿಷ್ಟು ಮತ ಇದೆ ಎನ್ನುವುದನ್ನು ಮರೆಯುವ ಹಾಗಿಲ್ಲ ಎಂದು ಹೇಳಿದರು. ಕೆಎಸ್ ಈಶ್ವರಪ್ಪ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ-ಈಶ್ವರಪ್ಪನವರ ಸಂಬಂಧ 4 ದಶಕ ಮೀರಿದ್ದು. ಒಂದು ಕಾಲದಲ್ಲಿ ಬ್ಯುಸಿನೆಸ್ಸನ್ನೂ ಜಂಟಿಯಾಗಿಯೇ ಮಾಡುತ್ತಿದ್ದರು ಅನ್ನೋದನ್ನ ಕೇಳಿದ್ದೀವಿ.…

Read More

ಬೀದರ್: ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ಶೋಷಿತರ ಸಂರಕ್ಷಣಾ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರದಲ್ಲಿ  ಪ್ರತಿಭಟನೆ ನಡೆಸಿದರು. ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿ ಕೆಲಹೊತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತು ಘೋಷಣೆಗಳನ್ನು ಕೂಗಿದರು ಆನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಸಲ್ಲಿಸಿದರು. https://ainlivenews.com/direct-recruitment-without-exam-just-pass-puc-is-enough-salary-%e2%82%b963000-per-month/ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮೂರ್ತಿಗೆ ಅಪಮಾನ ಮಾಡುವ ಕುಕೃತ್ಯಗಳು ನಡೆಯುತ್ತಿವೆ. ಬಾಬಾ ಸಾಹೇಬರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದನ್ನು ಬರೆದು ಪೋಸ್ಟ್‌ ಮಾಡಲಾಗುತ್ತಿದೆ. ಇನ್ನೊಂದೆಡೆ ಸಂಸದ ಅನಂತಕುಮಾರ ಹೆಗಡೆ ಪುನಃ ಪುನಃ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದರೂ ಸರ್ಕಾರ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಆರೋಪಿಸಿ ಪ್ರತಿಭಟನೆ. ಸಮಿತಿ ಜಿಲ್ಲಾಧ್ಯಕ್ಷ ವಿಷ್ಣುವರ್ಧನ್‌ ವಾಲದೊಡ್ಡಿ, ಕಾರ್ಯಾಧ್ಯಕ್ಷ ವಿನೋದ್‌ ರತ್ನಾಕರ ಗೌರವ ಅಧ್ಯಕ್ಷ ರಾಜಕುಮಾರ ಮೂಲಭಾರತಿ ಸೇರಿದಂತೆ…

Read More

ಬೆಂಗಳೂರು: ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರೋರು ಬರಲಿ, ನಮ್ಮ ತಂತ್ರಗಾರಿಕೆಯನ್ನು ನಾವು ಬಹಿರಂಗಗೊಳಿಸಲ್ಲ ಎಂದು ಡಿ.ಕೆ ಶಿವಕುಮಾರ್​ ಹೇಳಿದ್ದಾರೆ. Loksabha Election: ದೇವೇಗೌಡರ ಅಳಿಯನನ್ನು ಬಿಜೆಪಿಗೆ ಕಳಿಸಿದ್ದೆ ಜೆಡಿಎಸ್‍ಗೆ ಮೊದಲ ಆತ್ಮಹತ್ಯೆ ಯತ್ನದಂತಾಗಿದೆ: ಡಿಕೆಶಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು,ರಾಜಕಾರಣದಲ್ಲಿ ಯಾರಿಗೆ ಟಿಕೆಟ್ ಸಿಗಲಿಲ್ಲವೋ ಆಗ ಇವೆಲ್ಲಾ ಸಾಮಾನ್ಯ ಆಯನೂರು ಮಂಜುನಾಥ್ ಟಿಕೆಟ್ ಸಿಗಲಿಲ್ಲ ನಮ್ಮ ಪಾರ್ಟಿಗೆ ಬಂದರು. ಬಿಜೆಪಿಯಿಂದ ಮೂಡಿಗೆರೆಯಲ್ಲಿ ಕುಮಾರಸ್ವಾಮಿ ಕೊಡಲಿಲ್ಲ.ನಮ್ಮ ಪಾರ್ಟಿಯಿಂದ ಅಖಂಡ ಶ್ರೀನಿವಾಸ್ ಮೂರ್ತಿಗೆ ಕೊಡಲಿಲ್ಲ ಶೆಟ್ಟರ್ ಗೆ ಕೊಡ್ಲಿಲ್ಲ, ನಾವು ಕರ್ಕೊಂಡು ಬಂದು ನಿಲ್ಲಿಸಿದ್ವಿ ಸವದಿಗೆ ಕೊಡಲಿಲ್ಲ ಅವರನ್ನೂ ಕರ್ಕೊಂಡು ಬಂದು ನಿಲ್ಲಿಸಿದ್ವಿ ಇದೆಲ್ಲವೂ ರಾಜಕೀಯದ ಸಂದರ್ಭದಲ್ಲಿ ನಡೆಯುತ್ತೆ ಯಾರ್ಯಾರು ಬರುತ್ತೇವೆ ಅಂತಾರೆ ಅವರೆಲ್ಲಾ ಬರಲಿ ಎಂದರು. ಸಂಸದ ಸದಾನಂದಗೌಡ ರಾಜಕೀಯ ನಡೆಯ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರೋರು ಬರಲಿ ನಮ್ಮ ತಂತ್ರಗಾರಿಕೆಯನ್ನು ನಾವು ಬಹಿರಂಗಗೊಳಿಸಲ್ಲ ಎಂದ ಡಿಕೆ ಶಿವಕುಮಾರ್​ ಹೇಳಿದ್ದಾರೆ

Read More