Author: AIN Author

ಸೂರ್ಯೋದಯ: 06:23, ಸೂರ್ಯಾಸ್ತ : 06:23 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪಾಲ್ಗುಣ ಮಾಸ , ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ಏಕಾದಶಿ, ನಕ್ಷತ್ರ: ಪುಷ್ಯ, ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಅಮೃತಕಾಲ: ಮ.3:34 ನಿಂದ ಸಂ.5:20 ತನಕ ಅಭಿಜಿತ್ ಮುಹುರ್ತ:ಇಲ್ಲ ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಎಲೆಕ್ಟ್ರಾನಿಕ್ ಉಪಕರಣಗಳ ವ್ಯಾಪಾರಸ್ಥರಿಗೆ ಧನಲಾಭ,ಅನಾವಶ್ಯಕವಾಗಿ ವ್ಯವಹಾರಗಳಲ್ಲಿ ಕೈ ಹಾಕಬಾರದು. ಗೆಳತಿಯೊಬ್ಬಳ ಸಹವಾಸದಿಂದ ನಿಮ್ಮಆಸಕ್ತಿಗಳ ಬದಲಾಗುತ್ತದೆ. ಹೊಸ ಯೋಜನೆ ನಿರೂಪಣೆ.ಮಾತೃ ವರ್ಗದವರಿಂದ ಸಹಾಯ. ಸದ್ಯದಲ್ಲಿರುವ ಕೆಲಸವನ್ನು ಬಿಡುವುದು ಸೂಕ್ತವಲ್ಲ. ಪೋಷಕರನ್ನು ಕಡೆಗಾಣಿಸುತ್ತಿದ್ದೀರಿ ಇದರಿಂದ ಪಾಪ ಪ್ರಜ್ಙೆ ಕಾಡಿಸುತ್ತಿದೆ,…

Read More

ಬೆಂಗಳೂರು:- ಕರ್ನಾಟಕದಲ್ಲಿ ಸೂಪರ್ ಸಿಎಂ, ಸ್ಯಾಡೋ ಸಿಎಂ, ವೈಟಿಂಗ್ ಸಿಎಂ ಇದ್ದಾರೆ ಎಂಬ PM ನರೇಂದ್ರ ಮೋದಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರೇ, ಕಾಂಗ್ರೆಸ್ ಪಕ್ಷದಲ್ಲಿ ಸೂಪರ್ ಸಿಎಂ, ಶ್ಯಾಡೋ ಸಿಎಂ ಗಳಿದ್ದಾರೆ ಎಂದು ಶಿವಮೊಗ್ಗದ ನಿಮ್ಮ ಪಕ್ಷದ ಸಭೆಯಲ್ಲಿ ನೀವು ಗೇಲಿ ಮಾಡಿದ್ದೀರಿ! ನಮ್ಮಲ್ಲಿ ಸೂಪರ್ರೂ ಇಲ್ಲ, ಶ್ಯಾಡೋನೂ ಇಲ್ಲ, ಇರುವುದು ಒಬ್ಬರೇ ಸಿಎಂ ಅದು ‘‘ಸ್ಟ್ರಾಂಗ್ ಸಿಎಂ’’, ನಿಮ್ಮ ಹಾಗೆ ನಾನು ‘‘ವೀಕ್ ಪಿಎಂ’’ ಅಲ್ಲ. ಮೋದಿಯವರೇ ನಿಮ್ಮನ್ನು ನೀವು 56 ಇಂಚಿನ ಎದೆಯುಳ್ಳವನು ಎಂದು ಬಣ್ಣಿಸಿಕೊಳ್ಳುತ್ತೀರಿ, ನಿಮ್ಮ ಅಭಿಮಾನಿಗಳು ನಿಮ್ಮನ್ನು ವಿಶ್ವಗುರು ಎಂದು ಕೊಂಡಾಡುತ್ತಾರೆ. ಆದರೆ ನೀವೊಬ್ಬ ‘‘ವೀಕ್ ಪಿಎಂ’’ ಎಂದು ಮತ್ತೆ ಮತ್ತೆ ತೋರಿಸಿಕೊಡುತ್ತಿದ್ದೀರಿ. ಬಿ.ಎಸ್ ಯಡಿಯೂರಪ್ಪನವರು ಒಂದು ಕಾಲದಲ್ಲಿ ನಿಮ್ಮ ನಾಯಕತ್ವದ ವಿರುದ್ಧವೇ ಬಂಡಾಯ ಎದ್ದವರು, ನಿಮ್ಮನ್ನು ಹೀನಾಯವಾಗಿ ನಿಂದಿಸಿದವರು. ಅಂತಹವರ ಕಾಲಿಗೆ ಬಿದ್ದು ಮತ್ತೆ ಪಕ್ಷಕ್ಕೆ…

Read More

ಶ್ರೀವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳಚಗುಡ್ಡ ಕಥೆ ಬರೆದು ನಿರ್ಮಿಸಿರುವ, ನಾಗಿರೆಡ್ಡಿ ಭಡ ನಿರ್ದೇಶನದ ಹಾಗೂ “ಲವ್ 360” ಖ್ಯಾತಿಯ ಪ್ರವೀಣ್ ಕುಮಾರ್ ನಾಯಕನಾಗಿ ನಟಿಸಿರುವ “ದೇಸಾಯಿ” ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು. ಮಾಜಿ ಉಪ ಮುಖ್ಯಮಂತ್ರಿಗಳಾದ ಹಾಗೂ ಶಾಸಕ ಶ್ರೀ ಲಕ್ಷ್ಮಣ್ ಸವದಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಮಲ್ಲಿಕಾರ್ಜುನ ಲೋನಿ, ವಿಜಯಕುಮಾರ್ ಪಿ.ಜಿ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಸಿನಿಮಾ ನಿರ್ಮಾಣ ನನ್ನ ಕನಸು. ಆ ಕನಸು ನನಸ್ಸಾಗಲು ಚಿತ್ರತಂಡದ ಸಹಕಾರವೇ ಕಾರಣ. ನನ್ನ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿ, ಇಂದು ಟೀಸರ್ ಬಿಡುಗಡೆ ಮಾಡಿಕೊಟ್ಟ ಲಕ್ಷ್ಮಣ್ ಸವದಿ ಅವರಿಗೆ ಧನ್ಯವಾದ. “ದೇಸಾಯಿ” ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ಹೆಚ್ಚಿನ ಚಿತ್ರೀಕರಣ ಬಾಗಲಕೋಟೆಯಲ್ಲಿ ನಡೆದಿದೆ. ಅಲ್ಲಿನ ಜನರ ಸಹಕಾರವನ್ನು ಸ್ಮರಿಸಿಕೊಳ್ಳುತ್ತೇನೆ. ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ಮಹಂತೇಶ ವಿ ಚೋಳಚಗುಡ್ಡ. ಅಂದುಕೊಂಡ ಹಾಗೆ…

Read More

ರಾಮನಗರ:- ನಾವು ಯಾರಿಗೂ ವಿಷ ಹಾಕುವವರಲ್ಲ ಎಂದು ಹೇಳುವ ಮೂಲಕ ಹೆಚ್‍ಡಿಕೆಗೆ ಡಿಕೆ ಸುರೇಶ್ ತಿರುಗೇಟು ಕೊಟ್ಟಿದ್ದಾರೆ. ದೇವೇಗೌಡರ ಬದುಕಿಗೆ ವಿಷ ಹಾಕಿದ್ದೇ ಡಿ.ಕೆ.ಬ್ರದರ್ಸ್ ಎಂಬ ಮಾಜಿ ಸಿಎಂ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಯಾರಿಗೂ ವಿಷ ಹಾಕುವವರಲ್ಲ. ನಾನು ಎಲ್ಲರಿಗೂ ಒಳ್ಳೆಯದನ್ನ ಬಯಸುವವರು. ಅವರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಅವರ ಆರೋಗ್ಯ ಚೆನ್ನಾಗಿಲ್ಲ ಅಂತ ಆಸ್ಪತ್ರೆಗೆ ಹೋಗ್ತಿದ್ದಾರೆ. ಆದಷ್ಟು ಬೇಗ ಆಸ್ಪತ್ರೆಯಿಂದ ಗುಣಮುಖರಾಗಿ ಬರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ ಎಂದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗಿಫ್ಟ್ ಹಂಚಿಕೆ ಆರೋಪದ ಕುರಿತು ಮಾತನಾಡಿ, ಈ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಕುಮಾರಸ್ವಾಮಿ ಏನೇನ್ ಹೇಳ್ತಾರೋ ಗೊತ್ತಿಲ್ಲ. ಅವರಿಗೆ ಆಪರೇಷನ್ ಆಗಬೇಕು ಅಂತ ಆಸ್ಪತ್ರೆಗೆ ಹೋಗ್ತಿದ್ದಾರೆ, ಒಳ್ಳೆದಾಗ್ಲಿ ಎಂದರು

Read More

ಬೆಂಗಳೂರು:- ಈಶ್ವರಪ್ಪ ಬಂಡಾಯದಂತಹ ಯಾವುದೇ ನಿರ್ಧಾರ ಅವರು ಮಾಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈಶ್ವರಪ್ಪ ಅಂತಹ ಯಾವುದೇ ನಿರ್ಧಾರ ಮಾಡಲ್ಲ. ಒಂದು ವಾರ ಕಾದು ನೋಡಿ ಎಲ್ಲವೂ ಸರಿ ಆಗುತ್ತದೆ. ಈಶ್ವರಪ್ಪ ಪಕ್ಷ ಬಿಡಲ್ಲ. ಯಡಿಯೂರಪ್ಪ-ಈಶ್ವರಪ್ಪ ನಡುವೆ ಏನು ಮಾತುಕತೆ ಆಗಿದೆ ನಮಗೆ ಗೊತ್ತಿಲ್ಲ. ಯಡಿಯೂರಪ್ಪ ಏನು ಮಾತು ಕೊಟ್ಟಿದ್ದಾರೋ ಗೊತ್ತಿಲ್ಲ. ಇದನ್ನು ಯಡಿಯೂರಪ್ಪ-ಈಶ್ವರಪ್ಪ ಕೂತು ಮಾತನಾಡಬೇಕು. ಹೈಕಮಾಂಡ್ ನಾಯಕರು ಇದನ್ನು ನೋಡಿಕೊಳ್ಳುತ್ತಾರೆ. ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನ ಸಹಜ. ಹೀಗಾಗಿ ಈಶ್ವರಪ್ಪ ಹೀಗೆ ರಿಯಾಕ್ಟ್ ಮಾಡುತ್ತಾರೆ. ಹೈಕಮಾಂಡ್ ನಾಯಕರು ಅವರ ಜೊತೆ ಮಾತನಾಡುತ್ತಾರೆ. ಅವರು ಪಕ್ಷ ಬಿಡುವುದಿಲ್ಲ, ಎಲ್ಲವೂ ಸರಿ ಆಗುತ್ತದೆ ಎಂದರು. ಸದಾನಂದಗೌಡ ಅನ್ಯ ಪಕ್ಷ ಸೇರ್ಪಡೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸದಾನಂದಗೌಡ ಅವರ ಜೊತೆ ಮಾತನಾಡಿದ್ದೇನೆ. ಅವರು ಆತುರದ ನಿರ್ಧಾರ ಮಾಡಲ್ಲ. ನಾವೆಲ್ಲರು ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಆದರೆ…

Read More

ಬಳ್ಳಾರಿ:- ಇಲ್ಲಿನ ಆರಾಧ್ಯ ದೇವತೆ ಕನಕ ದುರ್ಗಮ್ಮ ಸಿಡಿ‌ಬಂಡಿ ರಥೋತ್ಸವ ಬಹಳ ಸಂಭ್ರಮ ಸಡಗರದಿಂದ ಜರುಗಿದೆ. ಸಾಮಾನ್ಯವಾಗಿ ರಥೋತ್ಸವ ಅಂದ್ರೇ ತೇರನ್ನು ಎಳೆಯುತ್ತಾರೆ, ಬಳ್ಳಾರಿ ದುರ್ಗಮ್ಮ ಸಿಡಿಗೆ ಬಂಡಿ ಕಟ್ಟಿ ರಥೋತ್ಸವ ಮಾಡಲಾಗ್ತದೆ. ಎತ್ತಿಗೆ ದೊಡ್ಡದಾದ ಮರದ ದಿಮ್ಮೆಯನ್ನು ಕಟ್ಟಿ ಅದಕ್ಕೊಂದು ದೇವರ ಗೊಂಬೆಯನ್ನು ನೇತುಹಾಕಿ ಎಳೆಯಲಾಗ್ತದೆ, ಹೂವು ಹಣ್ಣು ಎಸೆಯೋದ್ರ ಜೊತೆಗೆ ಕೋಳಿಯನ್ನು ಎಸೆಯುವ ವಾಡಿಕೆ ಇದೆ. ಅಲಂಕೃತ ಸಿಡಿಬಂಡಿ ಕೌಲ್ ಬಜಾರ್ ಪ್ರದೇಶದಿಂದ ಗಾಣಿಗ ಸಮಾಜ ಮೆರವಣಿಗೆ ಮೂಲಕ ಆಗಮಿಸಿದ್ದು, ಮೂರು ಜೊತೆ ಎತ್ತುಗಳ ಮೂಲಕ ಸಿಡಿಬಂಡಿ ಉತ್ಸವಕ್ಕೆ ಚಾಲನೆ ದೊರೆತಿದೆ. ಮೂರು ಸುತ್ತು ದೇವಸ್ಥಾನದ ಸುತ್ತಲೂ ಪ್ರದಕ್ಷಿಣಿ ಮೂಲಕ ಸಿಡಿಬಂಡಿ ಕಾರ್ಯ ನಡೆದಿದ್ದು, ಸಿಡಿಬಂಡಿ ಉತ್ಸವದ ಹಿನ್ನಲೆ ದುರ್ಗಮ್ಮಗೆ ವಿಶೇಷ ಅಭಿಷೇಕ, ಸ್ವರ್ಣ ಮುಖವಾಡದ ಅಲಂಕಾರ ಮಾಡಲಾಗಿದ್ದು, ರಥೋತ್ಸವದ ವೇಳೆ ಸಾವಿರಾರು ಜನರು ಬಂದು ಕುಂಕುಮಾರ್ಚಮೆ ಮಾಡಿಸೋದು ವಾಡಿಕೆ. ತಮಟೆ, ಕಂಚಿ, ಮೇಳ, ಡೊಳ್ಳು, ಚಂಡೆ ಮದ್ದಳೆ ಮೇಳ, ನಂದಿ ಕೋಲು, ಸಮಾಳ, ಮಹಿಳಾ ಡೊಳ್ಳು ಕಲಾ ತಂಡಗಳ‌ ಪ್ರದರ್ಶನ ಜರುಗಿದೆ.…

Read More

ಚಾಮರಾಜನಗರ:- 2024 ರ ಲೋಕಸಭಾ ಚುನಾವಣೆ ಪ್ರಯುಕ್ತ ಕಾರ್ಯಪ್ರವೃತ್ತರಾದ ಚುನಾವಣಾ ಅಧಿಕಾರಿಗಳು, ದಾಖಲೆ‌ ಇಲ್ಲದ ಒಂದು ಲಕ್ಷ ಹಣ ಸೀಜ್ ಮಾಡಿದ್ದಾರೆ. ಕೊಳ್ಳೇಗಾಲದ ತಾಲೂಕಿನ ದಾಸನಪುರ ಚೆಕ್ ಪೋಸ್ಟ್ ನಲ್ಲಿ ಹಣ ವಶಕ್ಕೆ ಪಡೆಯಲಾಗಿದ್ದು, ಬೆಂಗಳೂರಿನ ಮೂಲದ ಪ್ರಮೋದ ಎಂಬುವವರ ಕಾರಿನಲ್ಲಿ ದಾಖಲೆ ಇಲ್ಲದ ಹಣ ಸೀಜ್ ಮಾಡಿದ್ದಾರೆ. ಹಣದ ಮೂಲದ ಬಗ್ಗೆ ಸ್ಪಷ್ಟ ಉತ್ತರ ಸಿಗದ ಕಾರಣ ಹಣ ವಶಕ್ಕೆ ಪಡೆಯಲಾಗಿದೆ. ಚೆಕ್ ಪೋಸ್್ಟ ನಲ್ಲಿ ತಪಾಸಣಾ ವೇಳೆ ಹಣ ಸಿಕ್ಕಿದ್ದು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕಂಪ್ಲಿ:- ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿ 3 ದಿನಗಳು ಕಳೆದರೂ ಸಹ ತಾಲೂಕಿನಲ್ಲಿನ ವಿವಿಧ ಕಾಮಗಾರಿಗಳ ನಾಮಫಲಕಗಳ ಮೇಲಿನ ಜನ ಪ್ರತಿನಿಧಿಗಳ ಹೆಸರು ಗೋಚರಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಮಾ.17ರಂದು ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಎರಡನೇ ಹಂತದಲ್ಲಿ ಮೇ 7ರಂದು ಬಳ್ಳಾರಿಯಲ್ಲಿ ಚುನಾವಣೆ ಜರುಗಲಿವೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತೆರೆಮರೆಯಲ್ಲಿ ಕಸರತ್ತನ್ನು ಆರಂಭಿಸಿದ್ದಾರೆ. ಚುನಾವಣಾ ಆಯೋಗದ ಆದೇಶದ ಮೇರೆಗೆ ತಾಲೂಕಿನಲ್ಲಿನ ಚುನಾವಣಾ ಪ್ರಚಾರದ ಬ್ಯಾನರ್ ಗಳ ಅಳವಡಿಕೆ, ಪ್ಲೇಕ್ಸ್ ಗಳ ಅಂಟಿಸುವುದಕ್ಕೆ ಅಧಿಕಾರಿಗಳು ನಿರ್ಬಂಧ ಹೇರಿದ್ದಾರಲ್ಲದೆ, ಬ್ಯಾನರ್ ಗಳು, ಫ್ಲಕ್ಸ್ ಗಳನ್ನು ತೆರವುಗೊಳಿಸಿದ್ದು, ಕಾಮಗಾರಿಗಳ ಫಲಕಗಳು ಹಾಗೂ ಶಿಲಾ ಶಾಸನಗಳ ಮೇಲೆ ಕಾಲಿ ಕಾಗದವನ್ನು ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಆದರೂ ಅದು ಪರಿಪೂರ್ಣವಾಗಿ ಜರುಗಿಲ್ಲ. ಈ ರೀತಿ ಅಧಿಕಾರಿಗಳೇ ಚುನಾವಣಾ ನೀತಿ ಸಂಹಿತೆಯ ಕಟ್ಟುಪಾಡುಗಳನ್ನು ಸರಿಯಾಗಿ ಪಾಲಿಸದಿದ್ದರೆ ಚುನಾವಣೆ ಸುಸೂತ್ರವಾಗಿ ಜರಗುವುದಾದರೂ ಹೇಗೆ ಎನ್ನುವುದು…

Read More

ದೆಹಲಿ:- ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಸಮನ್ಸ್‌ ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಆಮ್ ಆದ್ಮಿ ಪಕ್ಷದ ಸಂಚಾಲಕರ ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಲಿದೆ. ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಗುರುವಾರ, ಅಂದರೆ ಮಾರ್ಚ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಭಾನುವಾರ ಕೇಂದ್ರ ಸಂಸ್ಥೆ ಒಂಬತ್ತನೇ ಸಮನ್ಸ್ ಜಾರಿ ಮಾಡಿತ್ತು. ಪ್ರಕರಣದಲ್ಲಿ ಹಿಂದಿನ ಎಂಟು ಸಮನ್ಸ್‌ಗಳಲ್ಲಿ 6ಕ್ಕೆ ಕೇಜ್ರಿವಾಲ್ ಗೈರಾಗಿದ್ದು, ಇಡಿ ಅವರ ವಿರುದ್ಧ ಸಲ್ಲಿಸಿದ ಎರಡು ದೂರುಗಳ ಮೇಲೆ ದೆಹಲಿ ನ್ಯಾಯಾಲಯವು ದೆಹಲಿ ಸಿಎಂಗೆ ಜಾಮೀನು ನೀಡಿದ ಒಂದು ದಿನದ ನಂತರ ಸಮನ್ಸ್ ಜಾರಿಗೊಳಿಸಲಾಗಿದೆ. ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ನೀಡಲಾದ ಸಮನ್ಸ್‌ಗೆ ಹಾಜರಾಗದ ಕಾರಣ ಅವರ ವಿಚಾರಣೆಗೆ ಕೋರಿ ಇಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಸಲ್ಲಿಸಿದ ಚಾರ್ಜ್ ಶೀಟ್‌ಗಳಲ್ಲಿ ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಹೆಸರನ್ನು ಹಲವು…

Read More

ಬೆಂಗಳೂರು:- ನಗರತ್​ಪೇಟೆ ಹಲ್ಲೆ ಪ್ರಕರಣವನ್ನು ಬಿಜೆಪಿ ಸ್ವಾರ್ಥಕ್ಕೆ ಬಳಸುತ್ತಿದೆ ಎಂದು ಸಚಿವ ದಿನೇಶ್ ಗೂಂಡೂರಾವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಯುವಕನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದು ತಪ್ಪು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಅಲ್ಲದೆ, ಪ್ರಕರಣವನ್ನು ಬಿಜೆಪಿ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಬಿಜೆಪಿಯವರಿಗೆ ಭಾವನಾತ್ಮಕ ವಿಚಾರಗಳೇ ಬೇಕು. ಇಂತಹ ಘಟನೆಗಳ ನಡೆಯಲಿ ಅಂತ ಕಾಯುತ್ತಿರುತ್ತಾರೆ. ಉರಿಯುವ ಬೆಂಕಿಗೆ ತುಪ್ಪ ಸುರಿಯೋದು ಇವರ ಉದ್ದೇಶ ಎಂದರು. ಪ್ರಕರಣ ಸಂಬಂಧ ದೂರಿನಲ್ಲಿ ಎಲ್ಲಿ ಕೂಡ ಹನುಮಾನ್ ಚಾಲೀಸಾ ಮತ್ತು ಆಜಾನ್ ಬಗ್ಗೆ ಪ್ರಸ್ತಾಪ ಇಲ್ಲ. ಸಂಸದ ತೇಜಸ್ವಿ ಸೂರ್ಯ ಅವರು ದ್ವೇಷದ ವಾತಾವರಣ ಸೃಷ್ಟಿಸಲು ವರ್ತಿಸಿರುವುದು ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಗೆ ನಡೆದುಕೊಳ್ಳಬೇಕು ಎಂದು ತಿಳಿದುಕೊಳ್ಳಬೇಕು. ಅನಾವಶ್ಯಕವಾಗಿ ಭಯ ಹುಟ್ಟಿಸಲಾಗುತ್ತಿದೆ. ಚುನಾವಣೆ ಇದೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಪ್ರಕರಣ ಸಂಬಂಧ ದೂರಿನಲ್ಲಿ ಎಲ್ಲಿ ಕೂಡ ಹನುಮಾನ್ ಚಾಲೀಸಾ ಮತ್ತು ಆಜಾನ್ ಬಗ್ಗೆ ಪ್ರಸ್ತಾಪ ಇಲ್ಲ.…

Read More