Author: AIN Author

ಬೆಂಗಳೂರು:- ರಾಜ್ಯಾದ್ಯಂತ ಪೊಲೀಸ್​ ಸಿಬ್ಬಂದಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ADGP ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಮೋಟಾರು ವಾಹನ ಕಾಯ್ದೆ ಕಲಂ 129(ಎ) ಮತ್ತು (ಬಿ) ಅಡಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದ್ವಿಚಕ್ರವಾಹನ ಸಂಚಾರದ ವೇಳೆ ಹೆಲ್ಮೆಟ್ ನಿರ್ದಿಷ್ಟತೆಯ ಪಾಲನೆ ಮಾಡುವಂತೆ ಅಲೋಕ್​ ಕುಮಾರ್ ಸೂಚನೆ ನೀಡಿದ್ದಾರೆ. ರಾಜ್ಯದ ವಿವಿಧ ಘಟಕಗಳಲ್ಲಿ ಅಪಘಾತ ಘಟನೆಗಳು ವರದಿಯಾಗುತ್ತಿವೆ. ಅದರಲ್ಲಿಯೂ ಹೆಲ್ಮೆಟ್ ಇಲ್ಲದೇ ಅಧಿಕಾರಿ ಮತ್ತು ಸಿಬ್ಬಂದಿ ರಸ್ತೆ ಅಪಘಾತ‌‌ದಲ್ಲಿ ಕೆಲವರಿಗೆ ಗಾಯಗಳಾದರೆ ಇನ್ನೂ ಕೆಲವರು ಮೃತಪಟ್ಟಿದ್ದಾರೆ. ಹೀಗಾಗಿ ಮತ್ತೆ ಈ ರೀತಿಯ ಅಪಘಾತಗಳು ಮರು ಕಳುಹಿಸದಂತೆ ಕ್ರಮಕೈಗೊಂಡಿದ್ದು, ರಾಜ್ಯಾದ್ಯಂತ ಎಲ್ಲ ಪೊಲೀಸ್​ ಸಿಬ್ಬಂದಿಗೆ ಕಡ್ಡಾಯ ಹೆಲ್ಮೆಟ್ ಆದೇಶ ಹೊರಡಿಸಲಾಗಿದೆ

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಇರುವ ಕಾರ್ ಕ್ರೇಜ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ನಟ ದರ್ಶನ್‌ ಬಳಿ ಲ್ಯಾಂಬೋರ್ಘಿನಿ, ಜಾಗ್ವಾರ್, ಫೋರ್ಡ್ ಮಸ್ಟಾಂಗ್, ಪೋರ್ಷೆ ಮುಂತಾದ ಐಷಾರಾಮಿ ಕಾರುಗಳಿವೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಆಡಿ ಹಾಗೂ ಬಿಎಂಡಬ್ಲ್ಯೂ ಕಾರುಗಳಿಗೆ ಒಡತಿ. ಇದೀಗ ವಿಜಯಲಕ್ಷ್ಮೀ ಹೊಸ ಕಾರು ಖರೀದಿಸಿದ್ದಾರೆ. ಐಷಾರಾಮಿ ಕಾರಿಗೆ ವಿಜಯಲಕ್ಷ್ಮೀ ಮಾಲೀಕರಾಗಿದ್ದಾರೆ. ಹೌದು..  ವಿಜಯಲಕ್ಷ್ಮೀ ಈಗ ಹೊಸ ಕಾರು ಕೊಂಡುಕೊಂಡಿದ್ದಾರೆ. ಹೊಸ ರೇಂಜ್ ರೋವರ್ ಇವೊಕ್ ಕಾರನ್ನ ಖರೀದಿ ಮಾಡಿದ್ದಾರೆ. ಹೊಸ ಕಾರಿಗೆ ಓನರ್ ಆಗಿರುವ ವಿಜಯಲಕ್ಷ್ಮೀ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯಲಕ್ಷ್ಮೀ ಅವರಿಗೆ ಅಭಿಮಾನಿಗಳು ಕಂಗ್ರ್ಯಾಟ್ಸ್ ಎನ್ನುತ್ತಿದ್ದಾರೆ. ಈ ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಬೆಲೆಯ ಬಗ್ಗೆ ಎಂಜಿನ್ ಮಾಹಿತಿ ಇಲ್ಲಿದೆ. ವಿನ್ಯಾಸ: JLR ನ ಟೆರೈನ್ ರೆಸ್ಪಾನ್ಸ್ ಸಿಸ್ಟಂನೊಂದಿಗೆ ಆಲ್ – ವೀಲ್ ಡ್ರೈವ್ ಸ್ಟ್ಯಾಂಡರ್ಡ್ ಆಗಿದೆ. ಬಾಹ್ಯ ನವೀಕರಣಗಳು ತೀರಾ ಕಡಿಮೆಯಿದ್ದು – ದೊಡ್ಡ ರೇಂಜ್ ರೋವರ್‌ಗಳಂತೆಯೇ ವಿವರವಾಗಿ…

Read More

ಹುಬ್ಬಳ್ಳಿ:- ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್‌ ಕಾರ್ಡ್ ಕುಟುಂಬದ ಮಹಿಳೆಯರಿಗೆ 3 ಸಾವಿರ ಜಮಾ ಮಾಡಲಾಗುವುದು ಎಂಬ ವದಂತಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ. PM ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬೊಬ್ಬರಿಗೆ 3,000 ರೂ. ಕೊಡ್ತಾರೆ ಎಂಬ ವದಂತಿ ನಂಬಿ ಮಹಿಳೆಯರು ಅಂಚೆ ಕಚೇರಿಗೆ ದೌಡಾಯಿಸಿದ್ದಾರೆ. ಬೆಳಗ್ಗೆ 8 ರಿಂದ ನಗರದ ವಿವಿಧ ಅಂಚೆ ಕಚೇರಿಗಳ ಎದುರು ಮಹಿಳೆಯರು ಸಾಲುಗಟ್ಟಿ ನಿಂತಿದ್ದು ಕಂಡು ಬಂದಿತು. ಸ್ಟೇಷನ್‌ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿ ಎದುರು ರಾತ್ರಿ 8 ರವರೆಗೆ ಸರದಿ ಸಾಲಿನಲ್ಲಿ ನಿಂತುಕೊಂಡಿರುವ ದೃಶ್ಯ ಗಳು ಕಂಡು ಬಂದಿತು. ಹಳೇಹುಬ್ಬಳ್ಳಿ, ಗಿರಣಿಚಾಳ, ಉದ್ಯಮನಗರ, ನವಗರ, ಟ್ರಾಫಿಕ್‌ ಐಲ್ಯಾಂಡ್‌ ಉಪ ಅಂಚೆ ಕಚೇರಿಗಳ ಎದುರು ಸಹ ಇದೇ ವಾತಾವರಣ ಕಂಡು ಬಂದಿತು. ಪ್ರಧಾನ ಅಂಚೆ ಕಚೇರಿಯ ಹಿರಿಯ ಪೋಸ್ಟ್‌ಮಾಸ್ಟರ್ ಎಂ. ಕುಮಾರಸ್ವಾಮಿ ಮಾತನಾಡಿ, ಅಂಚೆ ಕಚೇರಿಯಲ್ಲಿ ಮಹಿಳೆಯರು ಮೋದಿ ಖಾತೆ ತೆರೆದರೆ ಮೂರು ತಿಂಗಳಿಗೊಮ್ಮೆ 3…

Read More

ಬೇಸಿಗೆ ಆರಂಭವಾಗಿದ್ದು ಜನರು ಈ ರಣ ಬಿಸಿಲಿಗೆ ಸುಸ್ತಾಗಿ ಹೋಗಿದ್ದಾರೆ.  ವಾತಾವರಣದಲ್ಲಿ ಉಷ್ಣದ ತೀವ್ರತೆ ಹೆಚ್ಚಾಗಿ, ಅದು ಹಲವು ದಿನಗಳ ಕಾಲ ಹಾಗೇ ಇರುವುದನ್ನು ಶಾಖದ ತರಂಗ ಅಥವಾ ಉಷ್ಣ ತರಂಗ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ವಾತಾವರಣದಲ್ಲಿ ಉಷ್ಣತೆ ಜಾಸ್ತಿಯಾದಾಗ ದೇಹ ನಿರ್ಜಲೀಕರಣಗೊಳ್ಳುತ್ತದೆ.ಹಾಗಾದರೆ ಬೇಸಿಗೆಯಲ್ಲಿ ದೇಹವನ್ನು ಕೂಲ್​ ಆಗಿಟ್ಟುಕೊಳ್ಳಲು ಎಂತಹ ಅಹಾರಗಳನ್ನು ಸೇವಿಸಬೇಕು ಎನನ್ಉವ ಮಾಹಿತಿ ಇಲ್ಲಿದೆ ನೋಡಿ ನಿಮ್ಮ ದೇಹದಲ್ಲಿ ಈ ಲಕ್ಷಣ ಕಂಡು ಬರ್ತಿದ್ಯಾ!?, ಎಚ್ಚರ! ಇದು ಕ್ಯಾನ್ಸರ್ ಆಗಿರಬಹುದು! ಲಘು ಆಹಾರ ಸೇವಿಸಿ: ಬೇಸಿಗೆಯಲ್ಲಿ ನೀರು ಹೆಚ್ಚು ಕುಡಿಯುವುದರಿಂದ ಆಹಾರ ಸೇವಿಸುವ ಪ್ರಮಾಣ ಕಡಿಮೆ ಇರುತ್ತದೆ. ಆದರೆ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ಸೇವಿಸಿ. ಬೇಸಿಗೆಯಲ್ಲಿ ಕುಂಬಳಕಾಯಿ, ಸೌತೆ, ಸೊಪ್ಪು ಈ ರೀತಿಯ ಆಹಾರ ಸೇವಿಸಿ. ತಣ್ಣೀರಿನಲ್ಲಿ ಸ್ನಾನ ಮಾಡಿ: ಬೇಸಿಗೆಯಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ದೇಹವನ್ನು ತಂಪಾಗಿ ಇಡಬಹುದು. ಅಲ್ಲದೆ ಮಲಗುವ ಮುಂಚೆ ತಣ್ಣೀರಿನಲ್ಲಿ ಕೈ-ಕಾಲು ಮುಖ ತೊಳೆದು ಮಲಗಿ.…

Read More

ಗೋಲ್ಡ್ ಪ್ರಿಯರಿಗೆ ಶಾಕ್ ಎದುರಾಗಿದ್ದು, ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 60,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,730 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 60,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,590 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 20ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,800 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,330 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 773 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,800 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,300 ರೂ ಬೆಳ್ಳಿ…

Read More

ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತವಾಗಿದೆ. ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು, ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ ಹೋಳಿ ಹಬ್ಬವನ್ನು ಪ್ರತೀ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಹೋಳಿ ಹಬ್ಬವು ವಸಂತ ಋತುವಿನ ಆಗಮನವನ್ನು ಸೂಚಿಸುತ್ತದೆ. ಈ ಬಾರಿ ಹೋಳಿಯನ್ನು ಮಾರ್ಚ್‌ 25 ರಂದು ಆಚರಿಸಲಾಗುತ್ತದೆ. ಹುಣ್ಣಿಮೆ ತಿಥಿಯು ಮಾ. 24 ರಂದು ಬೆಳಿಗ್ಗೆ 09:54ಕ್ಕೆ ಆರಂಭವಾಗಿ, ಮಾ. 25 ರಂದು ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ. Lemon peel Uses : ನಿಂಬೆಹಣ್ಣನ್ನು ಉಪಯೋಗಿಸಿ ಸಿಪ್ಪೆ ಬಿಸಾಡುತ್ತಿರ? ಅದರ ಮುನ್ನ ಇದನ್ನ ಓದಿ ! ಹೋಳಿ ಹಬ್ಬದ ಮಹತ್ವ ಹಿಂದೂಗಳಲ್ಲಿ ಹೋಳಿ ಹಬ್ಬವು ತನ್ನದೇ ಆದ…

Read More

ಟೀಮ್ ಇಂಡಿಯಾದ ಯುವ ಸ್ಟಾರ್ ಆಟಗಾರರಾದ ಸರ್ಫರಾಝ್ ಖಾನ್ ಹಾಗೂ ಧ್ರುವ್ ಜುರೆಲ್ ಅವರು ಅಧಿಕೃತವಾಗಿ ಬಿಸಿಸಿಐನ ಕೇಂದ್ರ ವಾರ್ಷಿಕ ಒಪ್ಪಂದವನ್ನು ಪಡೆದುಕೊಂಡಿದ್ದಾರೆ. ಮಾರ್ಚ್ 18( ಸೋಮವಾರ)ರಂದು ನಡೆದ ಬಿಸಿಸಿಐನ ಮಹತ್ತರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಯುವ ತಾರೆಗಳಾದ ಸರ್ಫರಾಝ್ ಖಾನ್ ಹಾಗೂ ಧ್ರುವ್ ಜುರೆಲ್ ಅವರು ಸಿ ಕೆಟಗರಿಯಲ್ಲಿ ಒಪ್ಪಂದ ಪಡೆದುಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಫೆಬ್ರವರಿ 28 ರಂದು ಬಿಸಿಸಿಐ ಕೇಂದ್ರ ಒಪ್ಪಂದವನ್ನು ಪ್ರಕಟಿಸಿದ್ದು, ಒಟ್ಟು 30 ಆಟಗಾರರು ಸ್ಥಾನ ಪಡೆದಿದ್ದರು. ಸಿ ಕೆಟಗರಿಯಲ್ಲಿ 15 ಆಟಗಾರರು ಸ್ಥಾನ ಪಡೆದಿದ್ದು, ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಐದನೇ ಹಾಗೂ ಅಂತಿಮ ಪಂದ್ಯದ ನಂತರ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಧ್ರುವ್ ಜುರೆಲ್ ಹಾಗೂ ಸರ್ಫರಾಝ್ ಖಾನ್ ಅವರಿಗೂ ಕೇಂದ್ರದ ಒಪ್ಪಂದವನ್ನು ನೀಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಸಿ ಕೆಟಗರಿಯಲ್ಲಿ ಗುರುತಿಸಿಕೊಂಡಿರುವ ಈ ಆಟಗಾರರು ವಾರ್ಷಿಕ ಒಂದು ಕೋಟಿ ಸಂಭಾವನೆ ಪಡೆಯಲಿದ್ದಾರೆ. ಟೆಸ್ಟ್ ಕ್ರಿಕೆಟ್ ಆಡಬೇಕೆಂಬ ತಮ್ಮ…

Read More

ಇದು RCBಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಹೇಳಿದ ಕೊಹ್ಲಿಯ ಮಾತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ಅನ್​ಬಾಕ್ಸ್ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತನಾಡುವ ಮೂಲಕ ವಿರಾಟ್ ಕೊಹ್ಲಿ ಕನ್ನಡಿಗರ ಮನಸೊರೆಗೊಂಡರು. ಅಲ್ಲದೆ ಗ್ಯಾಲರಿಯಲ್ಲಿ ನೆರೆದಿದ್ದ ಕನ್ನಡಿಗರನ್ನು ಚಕಿತಗೊಳಿಸಿದರು. ರಂಗು ರಂಗಿನಿಂದ ಕೂಡಿದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಕಿಂಗ್ ಕೊಹ್ಲಿ, ಇದು ಆರ್​ಸಿಬಿ ತಂಡದ ಹೊಸ ಅಧ್ಯಾಯ ಎನ್ನುವ ಮೂಲಕ, ಈ ಬಾರಿಯ ಐಪಿಎಲ್​ನಲ್ಲಿ ಹೊಸ ಭಾಷ್ಯಕ್ಕೆ ಮುನ್ನಡಿ ಬರೆಯುವ ಸೂಚನೆ ನೀಡಿದರು. ಏಕೆಂದರೆ ಈಗಾಗಲೇ ಆರ್​ಸಿಬಿ ಮಹಿಳಾ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಹೆಸರಿನ ಬದಲಿಗೆ ಈ ಬಾರಿ ಆರ್​ಸಿಬಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನಲ್ಲಿ ಕಣಕ್ಕಿಳಿಯಲಿದೆ. ಹೆಸರಿನ ಬದಲಾವಣೆಯೊಂದಿಗೆ ಆರ್​ಸಿಬಿ ತಂಡದ ಜೆರ್ಸಿ ಬಣ್ಣ ಕೂಡ ಬದಲಾಗಿದೆ. ಈ ಹಿಂದೆಯಿದ್ದ ಕಪ್ಪು-ಕೆಂಪು ಬಣ್ಣಗಳ ಬದಲಿಗೆ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ನೀಲಿ-ಕೆಂಪು ಬಣ್ಣಗಳ…

Read More

ಕಡೂರು :-ವಿದ್ಯುತ್ ತಂತಿ ತುಂಡಾಗಿ ಮನೆ ಮೇಲೆ ಬಿದ್ದು ಮನೆ ಹೊತ್ತಿ ಉರಿದ ಘಟನೆ ಕಡೂರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಜರುಗಿದೆ. ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಬೆಂಕಿ ಗಾಹುತಿಯಾಗಿದೆ. ಮಂಜಮ್ಮ ಚಂದ್ರಪ್ಪ ಎಂಬವರ ಮನೆ ಬೆಂಕಿಯಿಂದ ಸಂಪೂರ್ಣ ಹಾನಿಯಾಗಿದ್ದು ಅದೃಷ್ಟ ವಶಾತ್ ಯಾವುದೇ ರೀತಿ ಪ್ರಾಣಹಾನಿ ಸಂಭವಿಸಿಲ್ಲ, ಮನೆಯವರು ತೋಟಕ್ಕೆ ಹೋಗಿದ್ದಾಗ ದುರ್ಘಟನೆ ನಡೆದಿದ್ದು ಸ್ಥಳೀಯರು ಹಾಗೂ ಅಗ್ನಿಶಾಮಕ ತಂಡ ಬೆಂಕಿ ನಂದಿಸಿದ್ದಾರೆ. ಈ ಕುರಿತು ಕಡೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಖಿನ್ನತೆ ಹೋಗಲಾಡಿಸುವಲ್ಲಿ ಯೋಗ ಪರಿಣಾಮಕಾರಿ. ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಮಾನಸಿಕ ಆರೋಗ್ಯ ಮಾತ್ರವಲ್ಲ, ದೈಹಿಕ ಆರೋಗ್ಯ ಹಾಳಾಗುವುದು. ಈ ಆಸನಗಳನ್ನು ಮಾಡಿದರೆ ಮಾನಸಿಕ ಒತ್ತಡ ದೂರವಾಗುವುದು, ದೇಹವು ಶಕ್ತಿಯನ್ನು ಪಡೆಯುವುದು. ಯೋಗ, ಜಾಗಿಂಗ್​ ಅಥವಾ ಸೈಕೋಥೆರಪಿ ಮತ್ತು ಔಷಧಗಳ ಮೂಲಕ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಖಿನ್ನತೆ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಸೈಕೋಥೆರಪಿ ಮತ್ತು ಔಷಧಗಳ ಜೊತೆಗೆ ವ್ಯಾಯಾಮಗಳನ್ನು ಶಿಫಾರಸು ಮಾಡಲಾಗುತ್ತದೆ. ಆದರೆ, ಚಿಕಿತ್ಸೆಯ ಮಾರ್ಗಸೂಚಿಗಳು ಮತ್ತು ಹಿಂದಿನ ಪುರಾವೆಗಳ ವಿಮರ್ಶೆಗಳು ಖಿನ್ನತೆ ನಿರ್ವಹಣೆಗೆ ವ್ಯಾಯಾಮ ಉತ್ತಮ ಎಂಬುದನ್ನು ಹೇಗೆ ಶಿಫಾರಸು ಮಾಡಬೇಕು ಎಂದು ಒಪ್ಪುವುದಿಲ್ಲ. ಈ ಅಧ್ಯಯನಕ್ಕಾಗಿ 218 ಪ್ರಯೋಗಗಳನ್ನು ನಡೆಸಿದ್ದು, ಖಿನ್ನತೆ ಹೊಂದಿರುವ 14,170 ಮಂದಿ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ. ಈ ಅಧ್ಯಯನವನ್ನು ಬಿಎಂಜೆಯಲ್ಲಿ ಪ್ರಕಟಿಸಲಾಗಿದೆ. ಅಧ್ಯಯನವೂ ಚಟುವಟಿಕೆಗಳ ಮೂಲಕ ಹೆಚ್ಚು ಸಕ್ರಿಯವಾಗಿರುವುದರಿಂದ ಪ್ರಯೋಜನವನ್ನು ಪಡೆಯಬಹುದು ಎಂಬುದನ್ನು ಸೂಚಿಸಿದೆ. https://ainlivenews.com/is-coconut-sugar-better-for-health-than-white-sugar-here-is-the-answer/ ಸ್ಪೇನ್​, ಡೆನ್ಮಾರ್ಕ್​, ಆಸ್ಟ್ರೇಲಿಯಾ ಮತ್ತು ಫಿನ್​ಲ್ಯಾಂಡ್​ನಲ್ಲಿ ಖಿನ್ನತೆ ಚಿಕಿತ್ಸೆಗೆ ಸೈಕೋಥೆರಪಿ ಮತ್ತು ಔಷಧಗಳ ಜೊತೆಗೆ…

Read More