Author: AIN Author

ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Election) ಕಾಂಗ್ರೆಸ್ (Congress) 2ನೇ ಪಟ್ಟಿ ಸಿದ್ದಗೊಂಡಿದ್ದು ಇಂದು ಸಂಜೆ ಅಧಿಕೃತ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಸಮ್ಮುಖದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮಗೊಂಡಿದ್ದು ಐವರು ಮಹಿಳೆಯರಿಗೂ ಟಿಕೆಟ್‌ ಸಿಗುವ ಸಾಧ್ಯತೆಯಿದೆ. DV Sadananda Gowda: ಸಂಸದ ಡಿವಿ ಸದಾನಂದ ಗೌಡ ನಡೆ ನಿಗೂಢ: ಬೆಂಗಳೂರಿನಿಂದ ಸುಳ್ಯಕ್ಕೆ ತೆರಳಿದ DVS! ಕಾಂಗ್ರೆಸ್ 2ನೇ ಪಟ್ಟಿ ಸಂಭಾವ್ಯರು 1. ಬೀದರ್ – ಸಾಗರ್ ಖಂಡ್ರೆ 2. ಚಿತ್ರದುರ್ಗ – ಚಂದ್ರಪ್ಪ 3. ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್ 4. ಕೊಪ್ಪಳ – ರಾಜಶೇಖರ್ ಹಿಟ್ನಾಳ್ 5. ಬೆಂಗಳೂರು ದಕ್ಷಿಣ – ಸೌಮ್ಯರೆಡ್ಡಿ 6. ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್ 7. ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ 8. ದಕ್ಷಿಣ…

Read More

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಇಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜೆ‌ಪಿ ನಗರದ ಮೂರನೆ ಹಂತದಲ್ಲಿ ನಡೆದಿದೆ. ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮೂರು ಜನ  ಸುಕನ್ಯ (58} ವರ್ಷ ಮೃತ ಮಹಿಳೆಯಾಗಿದ್ದು ತನ್ನಿಬ್ಬರ ಮಕ್ಕಳಾದ  ನಿಕ್ಕಿತ್, ನಿಶ್ಚಿತ್‌ ಗೂ ಬೆಂಕಿ ಹಚ್ಚಿ ಸಾವನ್ನಪ್ಪಿಕೊಂಡಿದ್ದಾರೆ. DV Sadananda  Gowda: ಸಂಸದ ಡಿವಿ ಸದಾನಂದ ಗೌಡ ನಡೆ ನಿಗೂಢ: ಬೆಂಗಳೂರಿನಿಂದ ಸುಳ್ಯಕ್ಕೆ ತೆರಳಿದ DVS! ನಗರದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು  ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮೂರು ಜನ ಜೆ‌ಪಿ ನಗರದ ಮೂರನೆ ಹಂತದಲ್ಲಿ ನಡೆದಿರುವ ಘಟನೆ ಸ್ಥಳಕ್ಕೆ ಜೆ‌ಪಿ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು  ಘಟನೆಗೆ ಇನ್ನು ನಿಖರವಾದ ಕಾರಣ ತಿಳಿದು ಬಂದಿಲ್ಲ ಸದ್ಯ ಸ್ಥಳೀಯರಿಂದ ಹಾಗು ಸಂಬಂಧಿಕರಿಂದ ಮಾಹಿತಿ ಪಡೆಯುತ್ತಿರುವ ಪೊಲೀಸರು

Read More

ಬೆಂಗಳೂರು: ಸಂಸದ ಡಿವಿ ಸದಾನಂದ ಗೌಡರ (DV Sadananda  Gowda) ನಡೆ ಇನ್ನೂ ನಿಗೂಢವಾಗಿದ್ದು ಬೆಂಗಳೂರಿನಿಂದ ಸುಳ್ಯಕ್ಕೆ (Sullia) ಪ್ರಯಾಣಿಸಿದ್ದಾರೆ. ಬೆಂಗಳೂರು ಉತ್ತರ (Bengaluru North) ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸದಾನಂದ ಗೌಡ ಇಂದು ಬೆಳಗ್ಗೆಯೇ ಸುಳ್ಯದತ್ತ ಪ್ರಯಾಣಿಸಿದ್ದು ಕುಟುಂಬಸ್ಥರು, ಸಂಬಂಧಿಕರ ಜತೆ ಸಮಾಲೋಚನೆ ನಡೆಸಲಿದ್ದಾರೆ. https://ainlivenews.com/the-jal-board-sought-csr-funds-to-implement-rain-water-harvesting/ ಮಾರ್ಚ್‌ 18 ರಂದು ಹುಟ್ಟುಹಬ್ಬ ಆಚರಿಸಿದ್ದ ವೇಳೆ ನಾನು ನಾಳೆ ಸುದ್ದಿಗೋಷ್ಠಿ ನಡೆಸಿ ಮುಂದಿನ ನಡೆಯ ಬಗ್ಗೆ ಹೇಳುತ್ತೇನೆ ಎಂದು ತಿಳಿಸಿದ್ದರು. ಆದರೆ ಅವರು ಸುದ್ದಿಗೋಷ್ಠಿ ನಡೆಸಿರಲಿಲ್ಲ. ‌ ಹೀಗಾಗಿ ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿತ್ತು. ಸದಾನಂದ ಗೌಡ ಗುರುವಾರ ಬೆಂಗಳೂರಿಗೆ (Bengaluru) ವಾಪಸ್‌ ಆಗಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿಗೆ ಬಂದ ನಂತರ ಮುಂದಿನ ರಾಜಕೀಯ ನಡೆಯ ಬಗ್ಗೆ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಕೈ ತಪ್ಪಿದರಿಂದ ಅಸಮಾಧಾನಗೊಂಡಿರುವ ಡಿವಿಎಸ್‌ ಮೈಸೂರಿನಿಂದ (Mysuru) ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಯಾರೂ ಈ ವಿಚಾರವನ್ನು ಅಧಿಕೃತಗೊಳಿಸಿಲ್ಲ. ಮಾಧ್ಯಮಗಳ ಜೊತೆ ಮಾತನಾಡಿದ್ದ ಸದಾನಂದ…

Read More

ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಮಂಗಳವಾರ ಡಿಕೆಶಿ ಬ್ರದರ್ಸ್ ವಿರುದ್ಧ  ಕುಕ್ಕರ್ ಆರೋಪ ವಿಚಾರ ಬಗ್ಗೆ ಸಂಸದ ಡಿಕೆ ಸುರೇಶ್  ಪ್ರತಿಕ್ರಿಯೆ ನೀಡಿದ್ದಾರೆ. ನ‌ಗರದಲ್ಲಿ ಮಾತನಾಡಿದ ಅವರು,  ನಾನು ಯಾರಿಗೂ ವಿಷ ಹಾಕುವವರಲ್ಲ. ನಾನು ಎಲ್ಲರಿಗೂ ಒಳ್ಳೆಯದನ್ನ ಬಯಸುವವರು ಎಂದು ಹೇಳುವ ಮೂಲಕ ಹೆಚ್ ಡಿ ಕುಮಾರಸ್ವಾಮಿಗೆ (HD Kumaraswamy) ಸಂಸದ ಡಿ.ಕೆ ಸುರೇಶ್ (DK Suresh) ತಿರುಗೇಟು ನೀಡಿದ್ದಾರೆ. ಸಿಎಸ್​ಆರ್​ ನಿಧಿ ಮೊರೆ ಹೋದ ಜಲಮಂಡಳಿ – ಮಳೆ ನೀರು ಕೋಯ್ಲು ಅಳವಡಿಕೆಗೆ ಒತ್ತು! ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗಿಫ್ಟ್ ಹಂಚಿಕೆ ಆರೋಪದ ಕುರಿತು ಮಾತನಾಡಿ, ಈ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಕುಮಾರಸ್ವಾಮಿ ಏನೇನ್ ಹೇಳ್ತಾರೋ ಗೊತ್ತಿಲ್ಲ. ಅವರಿಗೆ ಆಪರೇಷನ್ ಆಗಬೇಕು ಅಂತ ಆಸ್ಪತ್ರೆಗೆ ಹೋಗ್ತಿದ್ದಾರೆ, ಒಳ್ಳೆದಾಗ್ಲಿ ಎಂದರು. ಕೆಲವರು ಅವಾಗವಾಗ ಪ್ರಚಾರದಲ್ಲಿ ಇರಬೇಕು ಅಂತ ಏನೇನೊ ಮಾಡ್ತಿರ್ತಾರೆ ಸದ್ಯಕ್ಕೆ ಕುಮಾರಸ್ವಾಮಿ ಆರೋಗ್ಯ ಸರಿಯಿಲ್ಲ ಅಂತ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರು ಗುಣಮುಖರಾಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡ್ತೀನಿ…

Read More

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಆರ್‌ಸಿಬಿ ತಂಡದ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಆರ್‌ಸಿಬಿಯ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಅವರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ವೇದಿಕೆಯಲ್ಲಿ ಮಾತನಾಡುತ್ತಾ ಕೊಹ್ಲಿ ಅವರು ʼಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎಂದು ಹೇಳಿದರು. ಈ ವೇಳೆ ಕಾರ್ಯಕ್ರದಲ್ಲಿ ನೆರೆದಿದ್ದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಯೊಂದಿಗೆ ಕೊಹ್ಲಿಯನ್ನು ಕೊಂಡಾಡಿದರು. https://youtube.com/shorts/OntXhNQrXsQ?feature=share ಇತ್ತ ನಿರೀಕ್ಷೆಯಂತೆ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಆರ್‌ಸಿಬಿ (RCB) ತನ್ನ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರ್‌ ಇನ್ಮುಂದೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎಂದು ಬದಲಾಗಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಆರ್‌ಸಿಬಿ, ‘ನಾವು ಪ್ರೀತಿಸುವ ನಗರ, ನಾವು ಸ್ವೀಕರಿಸುವ ಪರಂಪರೆ ಮತ್ತು ಇದು ನಮ್ಮ ಹೊಸ ಅಧ್ಯಾಯದ ಸಮಯ. ನಿಮಗೆ ಪ್ರಸ್ತುತಪಡಿಸಲಾಗುತ್ತಿದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಮ್ಮ ತಂಡ, ನಿಮ್ಮ RCB!’ ಎಂದು ಬರೆದುಕೊಂಡಿದೆ. ಇದರ ಜೊತೆಗೆ ಹೆಸರು ಬದಲಾಯಿಸಿರುವ ಲೋಗೋ ಹಾಗೂ ನೀಲಿ ಬಣ್ಣ ಹೊಸ ಜೆರ್ಸಿ ತೊಟ್ಟಿರುವ ಆರ್‌ಸಿಬಿ…

Read More

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಿಂದ DVS ಕಣಕ್ಕಿಳಿಸಲು ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನಲಾ ಗುತ್ತಿದೆ. ಹೌದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನ ಗೊಂಡಿರುವ ಡಿವಿ ಸದಾನಂದಗೌಡ ಅವರು ಬಿಜೆಪಿ ಮಾಸ್ಟರ್ ಸ್ಟ್ರೋಕ್ ಕೊಡುವ ಸಾಧ್ಯತೆ ಇದೆ. ಈ ನಡುವೆ ಸದಾನಂದಗೌಡರನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಿದ ಬಿಜೆಪಿ ಹೈಕಮಾಂಡ್,  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಫರ್ ಕೊಟ್ಟು ಮುನಿಸು ಶಮನಗೊಳಿಸುವ ಪ್ರಯತ್ನ ಮಾಡಿದೆ ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಬಗ್ಗೆ ಹೈಕಮಾಂಡ್ ಆಫರ್ ನೀಡಿದ್ದರೂ ಸದಾನಂದಗೌಡ ಅವರು ಸಹಮತ ಸೂಚಿಸಿಲ್ಲ. ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಗೆ ತೆರಳುವ ಮುನ್ನ ಸದಾನಂದಗೌಡರ ಜೊತೆ ದೂರವಾಣಿ ಮೂಲಕ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳು ಪ್ರಯತ್ನ ನಡೆಸಿದರು. https://ainlivenews.com/good-news-for-tourists-direct-flight-from-bangalore-to-lakshadweep/ ವರಿಷ್ಠರ ಜೊತೆ ಚರ್ಚೆ ನಡೆಸುವ ಬಗ್ಗೆ ಸದಾನಂದಗೌಡರಿಗೆ ವಿಜಯೇಂದ್ರ ಅವರು ಭರವಸೆ ನೀಡಿದ್ದಾರೆ. ಈ ಹಿಂದೆ ಆಪ್ತರನ್ನು ಕಳುಹಿಸಿ ಮನವೊಲಿಕೆ ಮಾಡುವ ಯತ್ನ ವಿಜಯೇಂದ್ರ ನಡೆಸಿದ್ದರು. ಒಂದು ಕಡೆ, ಬೆಳಗ್ಗೆ…

Read More

ಬೆಂಗಳೂರು : ನನ್ನನ್ನು ಕಿಂಗ್ ಅನ್ನಬೇಡಿ, ನನಗೆ ಮುಜುಗರ ಆಗುತ್ತದೆ ಎಂದು ಆರ್​ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಅನ್​ಬಾಕ್ಸ್​ ಈವೆಂಟ್​ನಲ್ಲಿ ಕನ್ನಡದಲ್ಲಿಯೇ ಮಾತನಾಡಿದ ವಿರಾಟ್ ಕೊಹ್ಲಿ ಕೆಲವು ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ. ಈ ಸಮಾರಂಭದಲ್ಲಿ ನಿರೂಪಕರು, ಹೇಗೆನ್ನಿಸುತ್ತಿದೆ ಕಿಂಗ್ ಕೊಹ್ಲಿ? ಎಂದು ವಿರಾಟ್​ಗೆ ಕೇಳುತ್ತಾರೆ. ಈ ವೇಳೆ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಏಕಾಏಕಿ ‘ಕೊಹ್ಲಿ.. ಕೊಹ್ಲಿ..’ ಎಂದು ಜೈಕಾರ ಕೂಗುತ್ತಾರೆ. ಬಳಿಕ ಮಾತು ಮುಂದುವರಿಸಿದ ವಿರಾಟ್ ಕೊಹ್ಲಿ, ಅಭಿಮಾನಿಗಳೇ ಶಾಂತವಾಗಿರಿ. ನಾವು ಬೇಗ ಚೆನ್ನೈಗೆ ತೆರಳಬೇಕಿದೆ ಎಂದರು. ಅಲ್ಲದೆ, ನಿರೂಪಕರನ್ನುದ್ದೇಶಿಸಿ, ನೀವು ‘ನನ್ನನ್ನು ಕಿಂಗ್ ಅನ್ನಬೇಡಿ. ಆ ರೀತಿ ನೀವು ಕರೆದರೆ ನನಗೆ ಮುಜುಗರವಾಗುತ್ತದೆ. ವಿರಾಟ್ ಅಂತ ಕರೆಯಿರಿ’ ಎಂದು ಕೋರಿದ್ದಾರೆ. ಹೊಸ ಜೆರ್ಸಿಯಲ್ಲಿ ವಿರಾಟ್ ಮಿಂಚು ಇದೇ ವೇಳೆ ಐಪಿಎಲ್-2024ಗಾಗಿ ಆರ್​ಸಿಬಿ ತಂಡ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿತು. ವಿರಾಟ್ ಕೊಹ್ಲಿ ಸೇರಿದಂತೆ ಆರ್​ಸಿಬಿ ತಂಡದ ಆಟಗಾರರು ಹೊಸ ಜೆರ್ಸಿ ತೊಟ್ಟು ಫೋಸ್ ನೀಡಿದರು.…

Read More

ಕಲಬುರ್ಗಿ:- ವೃತ್ತಿಯಲ್ಲಿ ರಾಜಕಾರಣಿ ಆಗಿರುವ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಮೂಲವೃತ್ತಿ ವೈದ್ಯಕೀಯ ಕ್ಷೇತ್ರ..ಡಾಕ್ಟರ್ ಆಗಿರುವ ಜಾಧವ್ ನಿನ್ನೆ ಅಫಜಲಪುರ ಮತಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಕುಡಿಯೋ ನೀರಿಗಾಗಿ ಹೋರಾಟ ಮಾಡ್ತಿದ್ದ ಶಿವಕುಮಾರ್ ನಾಟೀಕರ್ ಸ್ಥಳಕ್ಕೆ ತೆರಳಿದ ವೇಳೆ ಹೋರಾಟಗಾರರ ಆರೋಗ್ಯ ಏರುಪೇರಾಗಿರೋದನ್ನ ಗಮನಿಸಿದ್ರು. ಕೂಡಲೇ ಬಿಪಿ ಚಕ್ ಮಾಡಿದ್ರು. ಪಲ್ಸ್ ನೋಡಿದ್ರು. ತಕ್ಷಣವೇ ಆಸ್ಪತ್ರೆಗೆ ಫೋನ್ ಮಾಡಿ ಮುಂದಿನ ಚಿಕಿತ್ಸೆ ಕೊಡಿ ಅಂತ ವೈದ್ಯಾಧಿಕಾರಿಗೆ ಸೂಚನೆ ಕೊಟ್ಟರು. ಎಲೆಕ್ಷನ್ ಪ್ರಚಾರದ ನಡುವೆಯೂ ಜಾಧವ್ ವೈದ್ಯರಾಗಿದ್ದುದು ನೋಡಿ ಎಲ್ಲರೂ ಪ್ರಶಂಸೆ ಮಾಡಿದ್ರು..

Read More

ದೇಹದ ಆರೋಗ್ಯ ಕಾಪಾಡಲು ಬಾಯಿ ಸ್ವಚ್ಛತೆ ಕೂಡ ತುಂಬಾನೇ ಮುಖ್ಯ. ದಂತದ ಸಮಸ್ಯೆ ಮಕ್ಕಳಲ್ಲಿ ಕಂಡು ಬರುವುದು, ಚಿಕ್ಕ ಪ್ರಾಯದಲ್ಲಿ ಹುಳುಕು ಹಲ್ಲು ಉಂಟಾಗುವುದು, ಈ ಹುಳುಕು ಹಲ್ಲು ತಡೆಗಟ್ಟಲು ಏನು ಮಾಡಬೇಕು ಎಂದು ಇಲ್ಲಿ ವಿವರಿಸಲಾಗಿದೆ. ಶಿಶುವಿನ ಹಂತದಲ್ಲೇ ಬಾಯಿಯ ಆರೋಗ್ಯ ಕಾಳಜಿ ಮುಖ್ಯ. ಉತ್ತಮ ಅಭ್ಯಾಸಗಳನ್ನು ಈ ಹಂತದಿಂದಲೇ ಆರಂಭಿಸುವುದರಿಂದ ಮಕ್ಕಳ ಹಲ್ಲು ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮಕ್ಕಳ ಬೆಳವಣಿಗೆಯ ಹಂತದಲ್ಲಿ ಬಾಯಿಯ ಆರೋಗ್ಯ ತುಂಬಾನೆ ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಮಗುವಿನ ಒಟ್ಟಾರೆ ಯೋಗಕ್ಷೇಮಕ್ಕೆ ಇದು ಪ್ರಮುಖವಾದುದು. ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಬಾಯಿ ಸ್ವಚ್ಛತೆಯ ಅಭ್ಯಾಸಗಳನ್ನು ಮಾಡದಿದ್ದಲ್ಲಿ ಹಲ್ಲು ಹುಳುಕು ಕಾಣಿಸಿಕೊಳ್ಳಬಹುದು. ತದನಂತರ ಹಲ್ಲು ನೋವು, ಸೋಂಕುಗಳು ಕಾಣಿಸಿಕೊಂಡು ಮಗುವಿನ ಆರೋಗ್ಯಯುತ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆಗ್ಗಾಗ್ಗೆ ಸಕ್ಕರೆಯುತ ಆಹಾರಗಳು ಮತ್ತು ಪಾನೀಯಗಳ ಸೇವನೆ ದೀರ್ಘಕಾಲದ ಹಾಲಿನ ಬಾಟಲಿಗಳ ಬಳಕೆಯಿಂದಲೂ ಹಲ್ಲು ಹುಳುಕಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಶಿಶುವಿನಲ್ಲಿ ಪ್ರಾಥಮಿಕ ಹಲ್ಲು ಕಾಣಿಸಿಕೊಂಡ ನಂತರ ರಾತ್ರಿ…

Read More

ಶಿವಮೊಗ್ಗ:- ನಾನು ಸ್ವತಂತ್ರವಾಗಿ ಸ್ಪರ್ಧಿಸಿದರೆ ಪಕ್ಷ ಏನು ಮಾಡಲು ಸಾಧ್ಯ? ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮನವೊಲಿಕೆಗೆ ಯಾರೇ ಬಂದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸುವ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ, ಸ್ಪರ್ಧೆ ಮಾಡುವುದು ಅಚಲ. ಸ್ಪರ್ಧಿಸಿದರೆ ಪಕ್ಷ ಏನು ಮಾಡಲು ಸಾಧ್ಯ?. ಹೆಚ್ಚೆಂದರೆ ಉಚ್ಚಾಟನೆ ಮಾಡಬಹುದು. ಗೆದ್ದ ಮೇಲೆ ಪಕ್ಷಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿರುವ ಕೆ.ಎಸ್. ಈಶ್ವರಪ್ಪ ಹೇಳಿದರು. ಈ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಜಗದೀಶ್‌ ಶೆಟ್ಟರ್‌ ಅವರನ್ನು ಯಡಿಯೂರಪ್ಪನವರು ಮನೆಗೆ ಹೋಗಿ ಮರಳಿ ಕರೆದುಕೊಂಡು ಬಂದರು. ಬೆಳಗಾವಿ ಟಿಕೆಟ್‌ ಕೂಡಾ ಅವರಿಗೆ ನೀಡಲಾಗುವುದು ಎಂದು ಘೋಷಿಸಿದರು. ನಾನು ಗೆದ್ದರೆ ನಾಳೆ ಪಕ್ಷ ನನ್ನನ್ನು ಸೇರಿಸಿಕೊಳ್ಳುವುದಿಲ್ಲವೆ? ಸೇರಿಸಿಕೊಳ್ಳಲೇಬೇಕು ಎಂದು ಹೇಳಿದರು. ಸದ್ಯಕ್ಕೆ ನನ್ನ ಸ್ಪರ್ಧೆಯನ್ನು ತಡೆಯುವ ವಿಫಲ ಪ್ರಯತ್ನವನ್ನು ಬಿಜೆಪಿ ಮುಖಂಡರು ನಿಲ್ಲಿಸಲಿ. ನನ್ನ ಈ…

Read More