Author: AIN Author

ಮಾತೆತ್ತಿದರೆ ಕಾಂಗ್ರೆಸ್ ನಾಯಕರು ಕಲಬುರಗಿಗೆ ಪ್ರಧಾನಿ ಮೋದಿಯವರ ಕೊಡುಗೆ ಏನು ಅಂತ ಕೇಳ್ತಾರೆ ಆದ್ರೆ ಕೇಂದ್ರ ಸರ್ಕಾರದ ಜಲ್ ಜೀವನ್ ಯೋಜನೆ ಭಾರತ್ ಮಾಲಾ ರಸ್ತೆ ಯೋಜನೆ ರೈಲ್ವೆ ಯೋಜನೆ ಹೀಗೆ ಹತ್ತಾರು ಯೋಜನೆಗಳಿವೆ. ಹೀಗಾಗಿ ಸಚಿವ ಶರಣ ಪ್ರಕಾಶ ಪಾಟೀಲ್ ಮೊದ್ರು ಕೇಂದ್ರದ ಯೋಜನೆಗಳನ್ನ ತಿಳಿದುಕೊಳ್ಳಲಿ ಅಂತ ತಿರುಗೇಟು ನೀಡಿದ್ರು.. ಪ್ರಧಾನಿಯಂತಹ ದೊಡ್ಡ ಹುದ್ದೆ ಬಗ್ಗೆ ಹಗುರವಾಗಿ ಮಾತಾಡೋದನ್ನ ಕಾಂಗ್ರೆಸ್ ನಾಯಕರು ನಿಲ್ಲಿಸಬೇಕು ಅಂತ ಹೇಳಿದ್ರು.

Read More

ಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಮಾರ್ಚ್ 25 ರಿಂದ 29 ರವರೆಗೆ ಹೋಳಿ ಹಬ್ಬದ ಅಂಗವಾಗಿ ಬಣ್ಣದ ಓಕುಳಿ (ರಂಗಪಂಚಮಿ) ಆಚರಿಸುವುದರಿಂದ, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಧಾರವಾಡ ನಗರದಲ್ಲಿ ಮಾರ್ಚ್ 25 ರಂದು ಸಂಜೆ 6 ಗಂಟೆಯಿಂದ ಮಾರ್ಚ್ 26 ರಂದು ಮಧ್ಯರಾತ್ರಿ 11.59 ಗಂಟೆಯವರೆಗೆ ಹಾಗೂ ಹುಬ್ಬಳ್ಳಿ ನಗರದಲ್ಲಿ ಮಾರ್ಚ್ 27 ರಂದು ಸಂಜೆ 6 ಗಂಟೆಯಿಂದ ಮಾರ್ಚ 30 ರಂದು ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯಪಾನ ನಿಷೇಧಾಜ್ಞೆ ಹೊರಡಿಸಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ಆದೇಶಿಸಿದ್ದಾರೆ. ಮದ್ಯದ ಅಂಗಡಿ, ಬಾರ್, ಕ್ಲಬ್ ಮತ್ತು ಹೊಟೇಲ್ ಗಳಲ್ಲಿ ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಮದ್ಯದ ಅಂಗಡಿ, ಕೆ.ಎಸ್.ಬಿ.ಸಿ.ಎಲ್ ಡಿಪೋ ಹಾಗೂ ಹೊಟೇಲ್ ಗಳಲ್ಲಿರುವ ಬಾರ್ ಗಳನ್ನು ಮುಚ್ಚಬೇಕು. ಎಲ್ಲಾ ಅಬಕಾರಿ ಸನ್ನದು ಅಂಗಡಿಗಳನ್ನು ತೆರೆಯಬಾರದು. ಸಾರ್ವಜನಿಕ ಶಾಂತತೆಯನ್ನು…

Read More

ತುಮಕೂರು: ಕುಕ್ಕರ್ ನನಗೆ ಯಾಕೆ ಕೊಡಲಿಲ್ಲ ಎಂದು ಕೇಳಿದ್ದಕ್ಕೆ ವಯೋವೃದ್ಧ ಮಹಿಳೆಯ ಮೇಲೆ ಕಾಂಗ್ರೆಸ್ ಕಾರ್ಯಕರ್ತ ನಾರಾಯಣ್ ಎಂಬಾತನಿಂದ ಹಲ್ಲೆ ಆರೋಪ ಕೇಳಿಬಂದಿದೆ. ಹೌದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಆಮಿಷಾ ಆರೋಪ ಈಗಾಗಲೇ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಉಜ್ಜನಿ ಗ್ರಾಮ ಗಂಗಮ್ಮ ಎಂಬ ವಯೋವೃದ್ಧ ಮಹಿಳೆ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಗೆ ಮತ ನೀಡುವಂತೆ ಆಮಿಷ ಒಡ್ಡಲಾಗಿತ್ತು. ಉಜ್ಜಿನಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ ನಾರಾಯಣ್ ಕುಕ್ಕರ್ ಹಂಚಿದ್ದರು ಎನ್ನಲಾಗಿದೆ. ಈ ವೇಳೆ ಗ್ರಾಮದಲ್ಲಿ ಗಂಗಮ್ಮ ಇರಲಿಲ್ಲ. ಬಳಿಕ ವಿಚಾರ ತಿಳಿದು ಇಂದು ನಾರಾಯಣ್ ಬಳಿ ಕುಕ್ಕರ್ ಕೇಳಿದ್ದಕ್ಕೆ ಕೋಪಗೊಂಡ ನಾರಾಯಣ್ ಗಂಗಮ್ಮನಿಗೆ ಕಪಾಳಮೋಕ್ಷ ಮಾಡಿ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಹಲ್ಲೆಯ ವೇಳೆ ಗಂಗಮ್ಮನ ಕೈ ಬಳೆ ಕಿವಿಯ ಓಲೆ ಮುರಿದು ಹೋಗಿದ್ದು, ಸಣ್ಣಪುಟ್ಟ…

Read More

ಕೋಲಾರ: ನಗರದ ಕೀಲುಕೋಟೆಯಲ್ಲಿ ಶ್ರೀ ಬೀರೇಶ್ವರ ದೊಡ್ಡ ದ್ಯಾವರ ಜಾತ್ರಾ ಮಹೋತ್ಸವವು ಮಾ.21, 22 ಹಾಗೂ 23ರಂದು ಮೂರು ದಿನಗಳ ಕಾಲ ಶ್ರದ್ಧಾ ಭಕ್ತಿಗಳಿಂದ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಬೀರೇಶ್ವರ, ಭತ್ತೇಶ್ವರ, ಸಿದ್ದೇಶ್ವರ ಚಾರಿಟಬಲ್ ಟ್ರಸ್ಟ್’ನ ಪ್ರಧಾನ ಕಾರ್ಯದರ್ಶಿ ಎನ್.ನಾರಾಯಣಸ್ವಾಮಿ ಕೋರಿದರು. ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.21, 22 ಹಾಗೂ 23ರಂದು ಬೀರೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಸುಮಾರು 9 ವರ್ಷಗಳಲ್ಲಿ ನಡೆಯುತ್ತಿರುವ ಜಾತ್ರೆ ಇದಾಗಿದೆ. ಕುರುಬ ಸಮುದಾಯದ ಹಾಲುಮತಸ್ಥ ಕುಟುಂಬಸ್ಥರು ಸೇರಿ ಭಕ್ತಿಭಾವದಿಂದ ದೊಡ್ಡ ದ್ಯಾವರ ನಡೆಸಲಾಗುತ್ತದೆ ಎಂದು ಹೇಳಿದ್ರು. ಶ್ರೀ ಗುರು ಸಿದ್ದಲಿಂಗ ಆರಾಧ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಮಾ.21 ಗುರುವಾರ ನೂತನವಾಗಿ ನಿರ್ಮಿಸಿರುವ 21 ವೀರಗಾರರ ಗುಡಿ ಹಾಗೂ ಕಾಡು ಸಿದ್ದೇಶ್ವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನರೆವೆರಲಿದೆ. ಮೂಲ ದೇವರಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ, ಸಂಜೆ ರಸಮಂಜರಿ ಕಾರ್ಯಕ್ರಮ. ಮಾ.22 ಶುಕ್ರವಾರ ಅಂತರಗಂಗೆ…

Read More

ತುಮಕೂರು: ನಾನು ಕಾಂಗ್ರೆಸ್ ನಿಂದ ಬಿ ಫಾರಂ ಕೊಟ್ಟರೂ ಖಂಡಿತಾ ನಿಲ್ಲಲ್ಲ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ  ಹೇಳಿದರು. ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರದಲ್ಲಿ ಮಾತನಾಡಿದ ಅವರು, ಎಲ್ಲೋ ಪೇಪರ್ ನಲ್ಲಿ ಅನೌನ್ಸ್ ಮಾಡಿದ್ದಾರೆ. ಕಾಂಗ್ರೆಸ್ ನ ಬಿ ಫಾರಂ ಮಾಧುಸ್ವಾಮಿಗೆ ಸಿಗುತ್ತೆ ಅಂತ ಹೇಳಿದ್ದಾರೆ. ಬಿ ಫಾರಂ ಚೇಂಜ್ ಮಾಡಿ ಕಾಂಗ್ರೆಸ್ ನವರು ಕರೆದರೂ ನಿಲ್ಲಲ್ಲ. ಬಿಜೆಪಿಯವರು ಕರೆದರೂ ನಿಲ್ಲಲ್ಲ. ಯಾರೋ ನೋಡಿ ಬಂದ ಹೆಣ್ಣನ್ನ ನಾನು ಆಗಲ್ಲ. ಯಾಕೆ ಪೇಪರ್ ಅಲ್ಲಿ ಬರೀತಾರೋ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ. “ನಾನು ಯಾರಿಗೂ ಕಾಂಗ್ರೆಸ್ ಗೆ ಬರ್ತೀನಿ, ಬಂದೇ ಬರ್ತೀನಿ ಅಂತಾ ಅಲ್ಲಿನ ನಾಯಕರಿಗೆ ಹೇಳಿಲ್ಲ. ಆದರೆ, ನನ್ನನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿ ನನ್ನ ಮನೆಗೆ ಬಂದವರ ಬಳಿ ಸೌಜನ್ಯವಾಗಿ ಮಾತನಾಡಿದ್ದೀನಿ. ಬರ್ತೀನಿ ಅಂತಲೂ ಹೇಳಿಲ್ಲ, ಬರಲ್ಲ ಅಂತಲೂ ಎಲ್ಲೂ ಹೇಳಿಲ್ಲ’’ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ. ತನಗೆ ಟಿಕೆಟ್ ನೀಡದಂಥ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದ್ದರೆ ಅದು ತನಗೆ…

Read More

ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆ  ತುರುವೇಕೆರೆ ಮಾಜಿ ಬಿಜೆಪಿ ಶಾಸಕ ಮಸಾಲೆ ಜಯರಾಮ್ ತೋಟದಲ್ಲಿ ಬಿಜೆಪಿ ಮುಖಂಡರ ಸಭೆ ಏರ್ಪಡಿಸಲಗಿತ್ತು. ಮಸಾಲೆ ಜಯರಾಮ್ ನೇತೃತ್ವದಲ್ಲಿ ನಡೆದ ಸಭೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಸೋಮಣ್ಣ ಗೆಲ್ಲಿಸಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕ್ಷೇತ್ರದಲ್ಲಿ ಅತಿಹೆಚ್ಚು ಲೀಡ್ ನೀಡಲು ಮುಖಂಡರಿಗೆ ಸೂಚಿಸಲು ಸಭೆಯಾಗಿದ್ದು, ನೂರಾರು ಬಿಜೆಪಿ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

Read More

ಕೋಲಾರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,50,250ಲಕ್ಷ ರೂಪಾಯಿ ಹಣ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆದಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಹಕ್ಕಿಪಿಕ್ಕಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ. ಶಿಡ್ಲಘಟ್ಟ ಮೂಲದ ಗೋಪಾಲ ಎಂಬುವರಿಗೆ ಸೇರಿದ ಹಣ ಹಾಗೂ ದ್ವಿಚಕ್ರ ವಾಹನವಾಗಿದ್ದು, ಆಂದ್ರದಲ್ಲೂ ವಿಧಾನಸಭೆ ಚುನಾವಣೆ ಹಿನ್ನಲೆ ಕಟ್ಟುನಿಟ್ಟಿನ ತಪಾಸಣೆ ಮಾಡುತ್ತದ್ದಾರೆ. ಮದನಪಲ್ಲಿ ಯಿಂದ ಶಿಡ್ಲಘಟ್ಟ ತಾಲ್ಲೂಕಿನ ಬುಡಗವಾರಪಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದ ಹಣವಾಗಿದ್ದು, ಇನ್ಸ್ಪೆಕ್ಟರ್ ಜಯಾನಂದ್ ನೇತೃತ್ವದಲ್ಲಿ ತಪಾಸಣೆ ನಡೆಸಿ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಬಾಗಲಕೋಟೆ: ದೇಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಮೀಟಿಂಗ್ ನಡೆಸಿದೆ. ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಶಿವಾನಂದ ಪಾಟೀಲ್ ಟಿಕೆಟ್ ಬಹುತೇಕ ಪಕ್ಕ ಎನ್ನಲಾಗುತ್ತಿದೆ ಕಾಂಗ್ರೆಸ್ ಉನ್ನತ ಮೂಲಗಳಿಂದ ಮಾಹಿತಿ ದೊರಕಿದೆ. ಸಚಿವ ಶಿವಾನಂದ ಪಾಟೀಲ್ ರವರ ಪುತ್ರಿ ಸಂಯುಕ್ತ ಶಿವಾನಂದ ಪಾಟೀಲ ಕಳೆದ ಬಾರಿ ಬಾಗಲಕೋಟೆ ಲೋಕಸಭಾ ಅಭ್ಯರ್ಥಿಯಾಗಿದ್ದ ವೀಣಾ ಕಾಶಪ್ಪನವರ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಬಹುದು. ವೀಣಾ ಕಾಶಪ್ಪನವರ ಅಭಿಮಾನಿಗಳಿಗೆ ಭಾರಿ ಬೇಸರ ವ್ಯಕ್ತವಾಗಿದೆ ಪ್ರಕಾಶ ಕುಂಬಾರ ಬಾಗಲಕೋಟೆ

Read More

ಗದಗ: ಗಜೇಂದ್ರಗಡ ಸಮೀಪದ ಚಿಲಝರಿ ಕ್ರಾಸ್‌ನಲ್ಲಿ ಇರುವ ಚೆಕ್‌ಪೋಸ್ಟ್‌ನಲ್ಲಿ 1ಲಕ್ಷ 32 ಸಾವಿರ ಹಣ ಸಿಕ್ಕಿದೆ. ಹುಬ್ಬಳ್ಳಿಯಿಂದ ಗಜೇಂದ್ರಗಡ ಪಟ್ಟಣಕ್ಕೆ ಬರುತ್ತಿದ್ದ ಟಾಟಾಏಸ್ ವಾಹನದಲ್ಲಿ ಈ ಹಣ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ‌ನೀಡಿದ್ದಾರೆ. ಹುಬ್ಬಳ್ಳಿ ಮೂಲದ ಮಹಮ್ಮದ್ ಗೌಸ್ ಈ ಹಣ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಅಕ್ರಮವಾಗಿ ಎರಡು ಕೆ.ಜಿ ತೂಕದ ಬೆಳ್ಳಿ ವಸ್ತುಗಳನ್ನು ಕೂಡ ಜಪ್ತಿ ಮಾಡಲಾಗಿದೆ. ಗದಗ ನಗರದಿಂದ ಗಜೇಂದ್ರಗಡ ಪಟ್ಟಣಕ್ಕೆ ಈ ಬೆಳ್ಳಿ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಯಾವುದೇ ದಾಖಲೆ ಇಲ್ಲದೆ ಗದಗ ಮೂಲದ ಗುರುವಂಧನ್ ಎಂಬುವವರು ಈ ಬೆಳ್ಳಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಹಣ ಹಾಗೂ ಬೆಳ್ಳಿ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.ಈ ಎರಡು ಪ್ರಕರಣಗಳು ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.

Read More

ಬಳ್ಳಾರಿ: ವೇದಿಕೆ ಬ್ಯಾನರ್ ನಲ್ಲಿ ಪೋಟೋ ಹಾಕದ ಹಿನ್ನೆಲೆ ಬಿಜೆಪಿ ಬೂತ್ ವಿಜಯ ಅಭಿಯಾನ ಸಭೆಯಲ್ಲಿ ಗಲಾಟೆಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸಂಬಂಧಿ ಕೆ. ರಾಮಲಿಂಗಪ್ಪ ಗರಂ ಆಗಿದ್ದು, ವೇದಿಕೆಯ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕುರುಬ ಮುಖಂಡನನ್ನ ಯಾಕೆ ಕಡೆಗಣಿಸುತ್ತೀರಾ ಅಂತಾ ಆಕ್ರೋಶ ವ್ಯಕ್ತಪಡಿಸಿ ವೇದಿಕೆಯಿಂದ ಹೊರನಡೆದರು. ಮತ್ತೆ ಸಮಾಧಾನ ಪಡಿಸಿ ಕೆ.ರಾಮಲಿಂಗಪ್ಪ ಅವರನ್ನ ವೇದಿಕೆಗೆ ಕರೆತಂದ ಮುಖಂಡರು, ಇನ್ನೂ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು,ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ವೈಎಂ ಸತೀಶ್ ಉಪಸ್ಥಿತಿಯಿದ್ದರು.

Read More