Author: AIN Author

ನವದೆಹಲಿ:- ಇಶಾ ಫೌಂಡೇಶನ್‌ನ ಸಂಸ್ಥಾಪಕ, ಸದ್ಗುರು ಜಗ್ಗಿ ವಾಸುದೇವ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಗುರು ಮೆದುಳಿನಲ್ಲಿ ‌ಭಾರೀ ಊತ ರಕ್ತಸ್ರಾವ ಉಂಟಾಗಿದ್ದು, ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆರೋಗ್ಯ ಸುಧಾರಿಸುತ್ತಿದೆ ಎಂದು ಇಶಾ ಫೌಂಡೇಶನ್‌ ಸಾಮಾಜಿಕ ಜಾಲತಾಣದ ಖಾತೆಯಿಂದ ಸ್ಪಷ್ಟನೆ ನೀಡಲಾಗಿದೆ. ತೀವ್ರ ತಲೆನೋವಿನಿಂದ ಆಸ್ಪತ್ರೆಗೆ ದಾಖಲಾಗುವ ಮೊದಲು ಸದ್ಗುರು ಮೆದುಳಿನಲ್ಲಿ ತೀವ್ರ ರಕ್ತಸ್ರಾವವನ್ನು ಅನುಭವಿಸಿದರು ಎಂದು ಹೇಳಿಕೆ ತಿಳಿಸಿದೆ. ಮಾರ್ಚ್ 17 ರಂದು ರಕ್ತಸ್ರಾವವನ್ನು ನಿವಾರಿಸಲು ಅಪೋಲೋ ಆಸ್ಪತ್ರೆಯಲ್ಲಿ ತಲೆಬುರುಡೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ”ತೀವ್ರ ತಲೆನೋವಿನ ಹೊರತಾಗಿಯೂ ಸದ್ಗುರುಗಳು ತಮ್ಮ ಕಾರ್ಯಕ್ರಮಗಳನ್ನು ಮುಂದುವರೆಸಿದರು.ಮಾರ್ಚ್ 17 ರಂದು, ಸ್ಥಿತಿಯು ತೀವ್ರವಾಗಿ ಹದಗೆಟ್ಟಿತು, ತೀವ್ರ ವಾಂತಿಯೊಂದಿಗೆ ತಲೆನೋವು ಉಲ್ಬಣಗೊಂಡಿತು. ತಲೆಬುರುಡೆಯಲ್ಲಿನ ರಕ್ತಸ್ರಾವವ ನಿಲ್ಲಿಸಲು ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದರು”ಎಂದು ಇಶಾ ಫೌಂಡೇಶನ್ ಹೇಳಿದೆ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ ವಿನಿತ್ ಸೂರಿ, ಸದ್ಗುರುಗಳು ಸ್ಥಿರವಾದ…

Read More

ತುಮಕೂರು:- ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಜರುಗಿದೆ. ಗೀತಾ,ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ಎಂದು ಹೇಳಲಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ರೈತ ಮಲ್ಲಿಕಾರ್ಜುನ್ ನಿಂದ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ. 33 ಗುಂಟೆ ಜಮೀನನ್ನ ಭೂ ಪರಿವರ್ತನೆ ಮಾಡಿಕೊಡಲು 3 ಲಕ್ಷ ಲಂಚಕ್ಕೆ ತಹಶಿಲ್ದಾರ್ ಗೀತಾ ಬೇಡಿಕೆಯಿಟ್ಟಿದ್ದರು. ಅದರಂತೆ ಇಂದು ಬೆಳಗ್ಗೆ 20 ಸಾವಿರ ಹಣ ಪಡೆಯುವಾಗ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರು ಲೋಕಾಯುಕ್ತ ಡಿವೈಎಸ್ ಪಿ ರಾಮಕೃಷ್ಣ ಹಾಗೂ ಉಮಾಶಂಕರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ತಹಶಿಲ್ದಾರ್ ಗೀತಾರನ್ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Read More

ಹೈದರಾಬಾದ್:- ಮನೆಯಲ್ಲಿ ಪ್ರಿಯಕರನ ಜೊತೆ ಇದ್ದ ಮಗಳನ್ನು ಕತ್ತು ಹಿಸುಕಿ ತಾಯಿ ಕೊಂದ ಘಟನೆ ಹೈದರಾಬಾದ್‌ನಲ್ಲಿ ಜರುಗಿದೆ. ಇಬ್ರಾಹಿಂಪಟ್ಟಣದ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಗಳು ಭಾರ್ಗವಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಜಂಗಮ್ಮ ನೋಡಿದ್ದಾರೆ. ಇದರಿಂದ ಕೋಪಗೊಂಡು ತಾಯಿ ಕತ್ತು ಹಿಸುಕಿ ಮಗಳ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಜಂಗಮ್ಮ ಕೆಲಸ ಮುಗಿಸಿ ಮನೆಗೆ ಊಟಕ್ಕೆ ಬಂದಿದ್ದರು. ಈ ವೇಳೆ ಅವರ ಪುತ್ರಿ ಭಾರ್ಗವಿ ತನ್ನ ಪ್ರಿಯಕರನ ಜೊತೆಯಲ್ಲಿದ್ದಳು. ಮಗಳ ಪ್ರಿಯಕರನನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿದ್ದಾಳೆ. ನಂತರ ಮಗಳ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಕೊಲೆಯಾದ ಯುವತಿಯ ಅಪ್ರಾಪ್ತ ಸಹೋದರ, ತಾನು ಕೊಲೆಯನ್ನು ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತನ್ನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಾನೆ. ತಾಯಿ ತನ್ನ ಸಹೋದರಿಯ ಮೇಲೆ ಹಲ್ಲೆ ಮಾಡುವುದನ್ನು ಕಿಟಕಿಯಿಂದ ನೋಡಿದ್ದಾನೆ ಎಂದು ಇಬ್ರಾಹಿಂಪಟ್ಟಣಂ ಪೊಲೀಸ್ ಅಧಿಕಾರಿ ಸತ್ಯನಾರಾಯಣ ತಿಳಿಸಿದ್ದಾರೆ.

Read More

ಚಿಕ್ಕಬಳ್ಳಾಪುರ:- ಅಲೋಕ್ ವಿಶ್ವನಾಥ್​ಗೆ ಟಿಕೆಟ್​ ಕೊಡಲ್ಲ ಅಂದ್ರೆ ನನಗೆ ಟಿಕೆಟ್ ಕೊಡಲಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನಾನು ಸಹ ಅಭ್ಯರ್ಥಿ‌ ಎನ್ನುವ ಮೂಲಕ ಶಾಸಕ ಎಸ್ ಆರ್ ವಿಶ್ವನಾಥ್ ಕೂಡ ಹೊಸಬಾಂಬ್ ಸಿಡಿಸಿದ್ದಾರೆ. ಸುಧಾಕರ್ ವಿರುದ್ದ ಈಗಾಗಲೆ ಜಿಲ್ಲೆಯಲ್ಲಿ ವಿರೋಧಿ ಅಲೆ ಇದೆ. ಅವರಿಗೆ ಕೊಡಬಾರದು ಎಂದು ಸಾಕಷ್ಟು ಜನ ಹೇಳ್ತಿದ್ದಾರೆ. ಅಲೋಕ್ ವಿಶ್ವನಾಥ್ ಆರು ತಿಂಗಳಿಂದಲೇ ತಯಾರಿ ಶುರು ಮಾಡಿದ್ದಾರೆ. ಸುಧಾಕರ್ ನನ್ನ ಬಳಿಯು ಮಾತನಾಡಿ ನನಗೆ ಯಾರು ಗೌರವ ಕೊಡ್ತಿಲ್ಲ. ಯಾರು ಕರೆ ಮಾಡ್ತಿಲ್ಲ, ನಾಲ್ಕು ವರ್ಷ ಸಂಸದನಾಗಿರ್ತೀನಿ ಎಂದು ಹೇಳಿದ್ದಾರೆ. ಆದರೆ ನನ್ನ ಮಗ ಇನ್ನೂ‌ 25 ವರ್ಷ ರಾಜಕೀಯ ಮಾಡಬೇಕಿದೆ. ಹೀಗಾಗಿ ಅಲೋಕ್​ಗೆ ಟಿಕೆಟ್ ಸಿಗಬೇಕು ಎಂದು ಸರ್ವೆಯಲ್ಲೂ ಮುಖಂಡರು ಹೇಳಿದ್ದಾರೆ. ಅಲೋಕ್​ಗೆ ಟಿಕೆಟ್ ಕೊಡಲ್ಲ ಅಂದ್ರೆ ನನಗೆ ಕೊಡಲಿ ನಾನು ಸ್ವರ್ಧೆ ಮಾಡ್ತೀನಿ. ನಮ್ಮ ಕ್ಷೇತ್ರವನ್ನ ಬೇರೊಬ್ಬರಿಗೆ ಬಿಟ್ಟು ಕೊಡಲು ನಾವು ತಯಾರಿಲ್ಲ. ನಮ್ಮ ಯಲಹಂಕ ಒಂದು ಕ್ಷೇತ್ರದಲ್ಲೇ ಎರಡು ಕ್ಷೇತ್ರಗಳಷ್ಟು ಮತಗಳಿವೆ. ಹೈಕಮಾಂಡ್…

Read More

ಬೆಂಗಳೂರು:- ರಾಜಕಾರಣ ಮಾಡಿದ್ರೆ ಅದು ಮಂಡ್ಯದಿಂದ ಮಾತ್ರ ಎಂದು ಸುಮಲತಾ ಖಡಕ್ ಹೇಳಿಕೆ ನೀಡಿದ್ದಾರೆ. ಲೋಕಸಭೆ ಟಿಕೆಟ್‌ ಬಗ್ಗೆ ಚರ್ಚೆ ಮಾಡಿದ್ದೇವೆ, ಪಾಸಿಟಿವ್‌ ರೆಸ್ಪಾನ್ಸ್‌ ಸಿಗುವ ಸೂಚನೆ ಇದೆ ಎಂದ ಸುಮಲತಾ, ಕೆಲವರು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ ಆದೆ ನಾನು ಬೆಂಗಳೂರು ಉತ್ತರ ಕ್ಷೇತ್ರವನ್ನೇ ಬೇಡ ಎಂದಿದ್ದೇ, ರಾಜಕಾರಣ ಮಾಡಿದರೆ ಮಂಡ್ಯದಲ್ಲಿ ಮಾತ್ರ ಎಂದು ಸುಮಲತಾ ಹೇಳಿದ್ದಾರೆ. ಇನ್ನೂ ಸುಮಲತಾಗೆ ಬಿಜೆಪಿ ಟಿಕೆಟ್‌ ನೀಡುವುದೋ ಅಥವಾ ಬೇರೆ ಕ್ಷೇತ್ರಕ್ಕೆ ಒಪ್ಪಿಸುವುದೋ? ಸುಮಲತಾ ಪಕ್ಷೇತ್ರವಾಗಿಯೇ ಸ್ಪರ್ಧಿಸುತ್ತಾರಾ? ಎಂಬ ಹಲವು ಕುತೂಹಲಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.

Read More

ಬೆಂಗಳೂರು:- ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಐಪಿಎಲ್ ಪಂದ್ಯವಾಳಿಯಲ್ಲಿ ನೀರಿನ ಪೂರೈಕೆಗೆ ಜಲಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಒದಗಿಸಲು ಜಲಮಂಡಳಿ ಒಪ್ಪಿಗೆ ನೀಡಿದ್ದು, ಐಪಿಎಲ್ ಮ್ಯಾಚ್‌ ಸಂಧರ್ಭದಲ್ಲಿ ನೀರು ಪೋಲಾಗುತ್ತೆ ಅನ್ನೋ ಆರೋಪ ಕೇಳಿ ಬಂದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೀರು ಒದಗಿಸಲು ಕೋರಿ KSCA ಆಡಳಿತ ಮಂಡಳಿಯಿಂದ ಮನವಿ ಮಾಡಲಾಗಿದೆ. ಜಲಮಂಡಳಿ‌ ಅಧ್ಯಕ್ಷ ಡಾ.ವಿ. ರಾಮ್ ಪ್ರಸಾತ್ ಮನೋಹರ್ ಇಂದು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದರು. ಪಂದ್ಯಾವಳಿಗಳ ಸಂದರ್ಭದಲ್ಲಿ ಪ್ರತಿನಿತ್ಯ ಸುಮಾರು 75,000 ಲೀಟರ್ಗಳಷ್ಟು ನೀರಿನ ಅವಶ್ಯಕತೆ ಇದೆ. ಇದಕ್ಕಾಗಿ ಕಬ್ಬನ್ ಪಾರ್ಕ್ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಅಗತ್ಯ ನೀರನ್ನು ದೊರಕಿಸಿ ಕೊಡುವಂತೆ KSCA ಮನವಿ ಮಾಡಿದ್ದರು. ಸದ್ಯ ಸಂಸ್ಕರಿಸಿದ ನೀರನ್ನ ಪೂರೈಕೆ ಮಾಡಲು ಜಲಮಂಡಳಿಯಿಂದ ಒಪ್ಪಿಗೆ ನೀಡಲಾಗಿದೆ.

Read More

ನಮ್ಮ ದೇಹವು ಕೊಲೆಸ್ಟ್ರಾಲ್ ಸಹಾಯದಿಂದ ಜೀವಕೋಶಗಳನ್ನು ಉತ್ಪಾದಿಸುತ್ತದೆ. ದೇಹದ ಕಾರ್ಯನಿರ್ವಹಣೆಗೆ ಕೊಲೆಸ್ಟ್ರಾಲ್ ರಚನೆಯು ಬಹಳ ಅಗತ್ಯ. * ತೊಂಡೆಕಾಯಿ ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ 2 ಮತ್ತು ವಿಟಮಿನ್ ಸಿಯಂತಹ ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ. ಇದು ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಈ ತರಕಾರಿಯ ಉತ್ತಮ ಅಂಶವೆಂದರೆ ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆದ್ದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. * ಸೌತೆಕಾಯಿ ಬಹುತೇಕ ನೀರಿನಂಶದಿಂದ ಕೂಡಿರುತ್ತದೆ. ಉಳಿದ ದ್ರವ್ಯರಾಶಿ ಹೆಚ್ಚಾಗಿ ಆಹಾರದ ಫೈಬರ್ ರೂಪದಲ್ಲಿರುವ ಕಾರ್ಬೋಹೈಡ್ರೇಟ್‌ಗಳಾಗಿವೆ. ವಿಟಮಿನ್ ಇ ಸಣ್ಣ ಕರುಳಿನಲ್ಲಿ ಕೊಲೆಸ್ಟ್ರಾಲ್​ನೊಂದಿಗೆ ಸೇರುತ್ತದೆ ಮತ್ತು ಒಟ್ಟಾರೆ ಕಡಿಮೆ ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಉಂಟುಮಾಡುತ್ತದೆ. * ನಿಮ್ಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕಲ್ಲಂಗಡಿ ಹಣ್ಣು ಸಹಕಾರಿಯಾಗಿದೆ. ಕಲ್ಲಂಗಡಿ ನೈಸರ್ಗಿಕವಾಗಿ ಲೈಕೋಪೀನ್ ಅನ್ನು ಹೊಂದಿರುತ್ತದೆ. ಇದು ಲಿಪಿಡ್ ಅನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ ಆಲಿವ್ ಎಣ್ಣೆಯು ಮೆಡಿಟರೇನಿಯನ್ ಆಹಾರದ ಪ್ರಮುಖ…

Read More

ತುಮಕೂರು:- ಟಾಯ್ಲೆಟ್ ಗೆ ಬಳಸುವ ಆ್ಯಸಿಡ್ ಬಾಟಲ್ ಸಿಡಿತಗೊಂಡು ಹಲವರಿಗೆ ಸಣ್ಣ ಪುಟ್ಟ ಗಾಯವಾಗಿರುವ ಘಟನೆ ತುಮಕೂರು ತಾಲೂಕಿನ ಗೂಳೂರು ಬಳಿ‌ ಜರುಗಿದೆ. ಖಾಸಗಿ ಬಸ್ ‌ನಲ್ಲಿ ಆ್ಯಸಿಡ್ ಬಾಟಲ್ ಇಟ್ಟುಕೊಂಡು ತುಮಕೂರು ಕಡೆ ಮಹಿಳೆ ಬರುತ್ತಿದ್ದರು. ತುಮಕೂರು ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಿಂದ ಮಹಿಳೆ ಬರ್ತಿದ್ದರು. ಬಾಟಲ್ ಗೆ ಒತ್ತಡ ಹೆಚ್ಚಾಗಿ ಸಿಡಿದಿರುವ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ. ಸಣ್ಣ ಪುಟ್ಟ ಗಾಯವಾದವರಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ವಿಜಯಪುರ:- 2024 ರ ಲೋಕಸಭಾ ಚುನಾವಣೆಗೆ ಕಾರ್ಯಪ್ರವೃತ್ತರಾಗಿರುವ ಚುನಾವಣಾ ಅಧಿಕಾರಿಗಳು, ಧೂಳಖೇಡ ಚೆಕ್ ಪೋಸ್ಟ್ ನಲ್ಲಿ 4.5 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ. ಲೋಕಸಭಾ ಚುನಾವಣಾ ಹಿನ್ನಲೆ ಮಹಾರಾಷ್ಟ್ರ ದಿಂದ ವಿಜಯಪುರಕ್ಕೆ ಬರುವಾಗ ತಪಾಸಣೆ ನಡೆಸಲಾಗಿದ್ದು, ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತವಾದ 4 ಲಕ್ಷ 50 ಸಾವಿರ ರೂ.ಜಪ್ತಿ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯದ ಔರಂಗಾಬಾದ ಜಿಲ್ಲೆಯ ರೋಶನ ಗಜಾನನ ಕರನಾಶೆ ಎಂಬಾತನ ಬಳಿ ಯಾವುದೇ ಅಧಿಕೃತ ದಾಖಲೆ ಇಲ್ಲದೆ ಹಣ ಸಾಗಾಟ ಮಾಡಲಾಗಿದೆ. ಎಮ್ ಹೆಚ್ 20 ಎಫ್ ಯು 2039 ಕಾರ್‌ನಲ್ಲಿ 4 ಲಕ್ಷ 50 ಸಾವಿರ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಧೂಳಖೇಡ ಮಾರ್ಗದಿಂದ ಬೆಂಗಳೂರ ಕಡೆ ಹೊರಟಿದ್ದರು. ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಹಣ ಜಪ್ತಿ ಮಾಡಲಾಗಿದೆ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಬೆಂಗಳೂರು:- ಸದಾನಂದಗೌಡರು ಬಿಜೆಪಿ ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸದಾನಂದಗೌಡರು ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡೋದಿಲ್ಲ. ಸದಾನಂದಗೌಡರು ಪಕ್ಷ ಬಿಡುತ್ತಾರೆ ಅನ್ನೋದು ಸುಳ್ಳು ಸುದ್ದಿ ಎಂದರು. ಸದಾನಂದಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ. ಸದಾನಂದಗೌಡರು ಪಕ್ಷ ಬಿಡುತ್ತಾರೆ ಅನ್ನೋದು ಸುಳ್ಳು ಸುದ್ದಿಗಳು. ಸದಾನಂದಗೌಡ ಪಕ್ಷ ಬಿಡುವ ಯೋಚನೆ ಕೂಡಾ ಮಾಡಲ್ಲ ಎಂದರು ಸದಾನಂದಗೌಡರು ನಮ್ಮ ಹಿರಿಯರು. ನಾನು ಮೊದಲ ದಿನ ಹೋದಾಗಲೇ ಆಶೀರ್ವಾದ ಮಾಡಿದ್ದಾರೆ. ಆದಾದ ಮೇಲೆ ಕೆ.ಆರ್ ಪುರಂ ಮತ್ತು ಪುಲಕೇಶಿ ನಗರದಲ್ಲಿ ಚುನಾವಣೆ ಪ್ರಚಾರದಲ್ಲಿ ಬಂದು ಭಾಗಿಯಾಗಿದ್ದರು. ನನಗಿಂತ ಉತ್ಸಾಹದಿಂದ ಅವರು ಓಡಾಡುತ್ತಾರೆ. ಅವರು ಇವತ್ತು ಊರಿಗೆ ಹೋಗಿದ್ದಾರೆ. ವಾಪಸ್ ಬಂದ ಮೇಲೆ ನಮ್ಮೆಲ್ಲರ ಪರವಾಗಿ ಅವರು ಕೆಲಸ ಮಾಡುತ್ತಾರೆ. ನನ್ನ ಪರ ಮಾತ್ರವಲ್ಲ ಮೈಸೂರಿಗೆ ಅವರು ಹೋದರೂ ಅನುಕೂಲ ಆಗುತ್ತದೆ. ಅಲ್ಲೂ ಕೂಡಾ ಪ್ರಚಾರ ಮಾಡುತ್ತಾರೆ. ಅವರು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು…

Read More