Author: AIN Author

ಬೆಂಗಳೂರು:- ಶಾಲೆಗಳ 5, 8, 9, 11ನೇ ತರಗತಿಗಳ ಬೋರ್ಡ್ ಪರೀಕ್ಷೆ ವಿಚಾರಕ್ಕೆ ಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ವಿಚಾರಣೆ ಪೂರ್ಣವಾಗಿದ್ದು, ಕೆಲವೇ ದಿನಗಳಲ್ಲಿ ಹೈಕೋರ್ಟ್ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಸರ್ಕಾರದ ಮೇಲ್ಮನವಿ ಸಂಬಂಧ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿತ್ತು. ಇದೀಗ ವಿಚಾರಣೆ ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ. ನ್ಯಾಯಾಂಗ ಹೋರಾಟದ ಗೊಂದಲದ ನಡುವೆಯೇ ಕೆಲವು ಪರೀಕ್ಷೆಗಳನ್ನು ರಾಜ್ಯ ಶಿಕ್ಷಣ ಇಲಾಖೆ ನಡೆಸಿದ್ದು, 4 ಪರೀಕ್ಷೆಗಳಷ್ಟೇ ಬಾಕಿ ಉಳಿದಿದ್ದವು. ಇದುವರೆಗೆ ಏನೇನಾಯಿತು 10 ಅಂಶಗಳ ವಿವರಣೆ ಇಲ್ಲಿದೆ. * 1) 2023ರ ಅಕ್ಟೋಬರ್ 6 ಮತ್ತು 9: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಎರಡು ಸುತ್ತೋಲೆಗಳು ಪ್ರಕಟವಾಗಿದ್ದು, 5, 8, 9, 11ನೇ ತರಗತಿಗೆ ಬೋರ್ಡ್ ಎಕ್ಸಾಂ ನಡೆಸಲು ಸರ್ಕಾರ ನಿರ್ಧಾರವನ್ನು ಅಧಿಕೃತವಾಗಿ ಸೂಚಿಸಲಾಯಿತು. 2) ಸರ್ಕಾರದ ಸುತ್ತೋಲೆಗಳನ್ನು ವಿರೋಧಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ’ (ರುಪ್ಪಾ) ಹಾಗೂ “ಅನುದಾನ ರಹಿತ…

Read More

ಕರುಳಬಳ್ಳಿಯ ಸಂಬಂಧ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಕಾಣಸಿಗುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಭೂಮಿಯಲ್ಲಿ ಪೋಷಕರಿಗೆ ಯಾವಾಗಲೂ ವಿಶೇಷ ಸ್ಥಾನವಿದೆ. ತಾಯಿಯನ್ನು ನಿಜವಾದ ದೇವತೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ತಾಯಿ ತನ್ನ ಮಕ್ಕಳಿಗಾಗಿ ಮಾಡುವುದನ್ನು ಜಗತ್ತಿನಲ್ಲಿ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. https://twitter.com/TheBrutalNature/status/1769984253096505791?ref_src=twsrc%5Etfw%7Ctwcamp%5Etweetembed%7Ctwterm%5E1769984253096505791%7Ctwgr%5E10bd6952b41cb8d68a9fc26fe2b2ac788a8109ed%7Ctwcon%5Es1_c10&ref_url=http%3A%2F%2Fapi-news.dailyhunt.in%2F ಮಕ್ಕಳಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುವವಳು ತಾಯಿ ಮಾತ್ರ.. ಇದು ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಕಾಣಸಿಗುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ನೆಟ್‌ನಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಮೊಸಳೆಯು ಆಹಾರಕ್ಕಾಗಿ ಮರಿ ಕೋತಿಯ ಮೇಲೆ ದಾಳಿ ಮಾಡಿದೆ. ಆದರೆ ಮೊಸಳೆಯು ಮರಿ ಕೋತಿಯನ್ನು ಕಚ್ಚಿ ಹೊರಗೆ ನೀರಿಗೆ ಹೋದಾಗ ತಾಯಿ ಕೋತಿ ತಕ್ಷಣವೇ ಜಾಗೃತಗೊಂಡಿತು. ತಕ್ಷಣವೇ ಮೊಸಳೆಯ ಮೇಲೆ ದಾಳಿ ಮಾಡಿ ತನ್ನ ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಈ ಪ್ರಯತ್ನದಲ್ಲಿ ಮರಿ ಕೋತಿ ಸಾಯುತ್ತದೆ. ಈ ಭಾವನಾತ್ಮಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ TheBrutalNature ID ಹೆಸರಿನಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ 36 ಸೆಕೆಂಡ್‌ಗಳ ವಿಡಿಯೋವನ್ನು ಇಲ್ಲಿಯವರೆಗೆ 54 ಸಾವಿರಕ್ಕೂ…

Read More

ನವದೆಹಲಿ:- ಕೇಂದ್ರ ಸರ್ಕಾರವು IVF ಮೂಲಕ ಮಗು ಪಡೆಯಬಹುದು ಎಂದುಕೊಂಡಿದ್ದವರಿಗೆ ಬಿಗ್ ಶಾಕ್ ನೀಡಿದ್ದು, ವಯಸ್ಸಿನ ಮಿತಿ ನಿಗದಿಪಡಿಸಿದೆ. ಇತ್ತೀಚೆಗೆ ದಿವಂಗತ ಗಾಯಕ ಸಿಧು ಮೂಸ್ ವಾಲಾ ಅವರ ಪೋಷಕರು ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಕೇಂದ್ರ ಈ ನಿರ್ಧಾರಕ್ಕೆ ಬಂದಿದೆ. ಮಗುವಿನ ಬಗ್ಗೆ ದಾಖಲೆಗಳಿಗಾಗಿ ಜಿಲ್ಲಾಡಳಿತವು ತನಗೆ ಕಿರುಕುಳ ನೀಡುತ್ತಿದೆ ಎಂದು ಗಾಯಕನ ತಂದೆ ಬಲ್ಕೌರ್ ಸಿಂಗ್ ಆರೋಪಿಸಿದ್ದಾರೆ. ಗಾಯಕ-ಮಗನನ್ನು ಗುಂಡಿಕ್ಕಿ ಕೊಂದ ಸುಮಾರು ಎರಡು ವರ್ಷಗಳ ನಂತರ, ದಂಪತಿಗೆ ಕಳೆದ ಶನಿವಾರ ಮಗು ಜನಿಸಿತು ಎನ್ನಲಾಗಿದೆ.

Read More

ಗಿಳಿ ಜ್ವರ ನಾವು ಹೊಸದಾಗಿ ಕೇಳಿಸಿಕೊಂಡ ಸೋಂಕಾದರೆ ಯುರೋಪ್‌ನಾದ್ಯಂತ ಈ ವರ್ಷ ಐವರ ಸಾವಿಗೆ ಕಾರಣವಾಗಿದೆ. ಈ ಮೂಲಕ ಯೂರೋಪಿಯನ್ನರನ್ನು ಭಾರೀ ಆತಂಕಕ್ಕೆ ದೂಡಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಡೆನ್ಮಾರ್ಕ್‌ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನೆದರ್‌ಲ್ಯಾಂಡ್‌ನಲ್ಲಿ ಓರ್ವ, ಮತ್ತು ಆಸ್ಟ್ರಿಯಾ, ಜರ್ಮನಿ ಮತ್ತು ಸ್ವೀಡನ್‌ನಾದ್ಯಂತ ಡಜನ್‌ಗಟ್ಟಲೆ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಿದ್ರೆ ಏನಿದು ಗಿಳಿ ಜ್ವರ..?, ಇದರ ಲಕ್ಷಣಗಳೇನು..?, ಚಿಕಿತ್ಸೆ ಏನು ಎಂಬುದನ್ನು ನೋಡೋಣ. ಏನಿದು ಗಿಳಿ ಜ್ವರ?: ಈ ಜ್ವರವನ್ನು ಸಿಟ್ಟಾಕೋಸಿಸ್‌ ಎಂದೂ ಕರೆಯುತ್ತಾರೆ. ಇದು ಅಪರೂಪದ ಗಂಭೀರ ಸಮಸ್ಯೆ ಉಂಟು ಮಾಡುವ ವೈರಸ್‌ ಆಗಿದೆ. ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಇದು ಉಂಟಾಗುತ್ತದೆ. ಇದು ಪಕ್ಷಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಗಿಳಿಗಳು, ಪಾರಿವಾಳಗಳು ಹಾಗೂ ಕೋಳಿಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಬ್ಯಾಕ್ಟೀರಿಯಾವು ಗಾಳಿಯಿಂದ ಮನುಷ್ಯರಿಗೂ ಹರಡುತ್ತದೆ ಎಂಬುದಾಗಿ ವೈದ್ಯ ಮೂಲಗಳು ತಿಳಿಸಿವೆ. ಗಿಳಿ ಜ್ವರ ಹೇಗೆ ಬರುತ್ತದೆ?: ಗಿಳಿ ಜ್ವರವು ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಬ್ಯಾಕ್ಟೀರಿಯಾದ…

Read More

ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತವಾಗಿದೆ. ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು, ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ Holi Festival 2024: ಹೋಳಿ ಹಬ್ಬ ಯಾಕೆ ಮಾಡ್ತಾರೆ: ಈ ಹಬ್ಬದ ಮಹತ್ವವೇನು ತಿಳಿಯೋಣ! ಹೋಳಿ ಹಬ್ಬದ ಸಂದರ್ಭದಲ್ಲಿ ವಾಸ್ತುವಿಗೆ ಸಂಬಂಧ ಪಟ್ಟ ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡು ವಿಶೇಷ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸಂತೋಷ, ಸಮೃದ್ಧಿ ಯಾವಾಗಲೂ ಇರಲು ಹೋಳಿ ಹಬ್ಬದ ಮುಂಚಿತವಾಗಿ ಮನೆಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಮನೆಯಲ್ಲಿ ತುಳಸಿ ಗಿಡವು ಒಣಗಿದ್ದರೆ, ಓಕುಳಿ ಅಥವಾ ಹೋಳಿ ಹಬ್ಬದ ಮೊದಲು ಅದನ್ನು ತೆಗೆದು ಮನೆಯಲ್ಲಿ ಹೊಸ ಸಸ್ಯವನ್ನು ನೆಡಿ ಅನೇಕ ಬಾರಿ…

Read More

ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ, ಕೆಲಸದಿಂದಾಗಿ ಹೆಚ್ಚಾಗಿ ಯುವಜನರ ಮೇಲೂ ಹೆಚ್ಚು ಒತ್ತಡ ಬೀರುತ್ತಿದೆ. ಒತ್ತಡದಿಂದಾಗಿ ಅನೇಕ ಜನರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದ ಹೊರಬರಲು ಅನೇಕ ದಿನಗಳೇ ಬೇಕಾಗುತ್ತದೆ. ಈ ಮಾನಸಿಕ ಖಿನ್ನತೆಯಿಂದಾಗಿ ಜನರು ತಮ್ಮ ಸಂತೋಷವನ್ನೇ ಮರೆಯುತ್ತಿದ್ದಾರೆ. ಖಿನ್ನತೆ ಅಥವಾ ಡಿಪ್ರೆಷನ್‌ ಮನುಷ್ಯನನ್ನು ನಿಧಾನವಾಗಿ ಕೊಲ್ಲುತ್ತದೆ. ಆತ ಈ ಬದುಕು ಬೇಡ ಅನ್ನೋ ಸ್ಥಿತಿಗೆ ತಲುಪಿ ಬಿಡುತ್ತಾನೆ. ಅಷ್ಟೇ ಯಾಕೆ ಆತನಿಂದ ಯಾವುದೇ ಕೆಲಸ ಮಾಡೋದಿಕ್ಕೆ ಆಗೋದಿಲ್ಲ. ದಿನಾಲೂ ಒಂದೇ ವಿಚಾರವನ್ನು ನೆನೆದು ನೆನೆದು ಕೊರಗುತ್ತಾನೆ. ಹಾಗಾದ್ರೆ ಖಿನ್ನತೆಯಿಂದ ಹೊರ ಬರೋಕೆ ಈ ಆಹಾರಗಳನ್ನು ಸೇವಿಸಿ.. ಮೀನು ತಿನ್ನಿ: ಆಲ್ಬಕೋರ್ ಹಾಗೂ ಸಾಲ್ಮನ್‍ಗಳಂತಹ ಮೀನುಗಳಲ್ಲಿ (Fish) ಒಮೆಗಾ – 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದನ್ನು ತಿನ್ನುವುದರಿಂದ ನಿಮ್ಮ ಖಿನ್ನತೆಯ ಮಟ್ಟ ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲದೇ ದಿನವಿಡೀ ಸಂತೋಷದಿಂದ ಕಳೆಯಹುದು. ಈ ಆಮ್ಲಗಳು ಸೆಲ್ ಸಗ್ನಲಿಂಗ್ ಮತ್ತು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಚಾಕಲೇಟ್‍ಗಳು: ಚಾಕಲೇಟಿನಲ್ಲಿ (Chocolate) ಸಕ್ಕರೆಯ ಅಂಶವಿರುವುದರಿಂದ ನಿಮ್ಮ ಮನಸ್ಸನ್ನು ಖುಷಿಯಿಂದ…

Read More

ಸೂರ್ಯೋದಯ: 06:22, ಸೂರ್ಯಾಸ್ತ : 06:23 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪಾಲ್ಗುಣ ಮಾಸ , ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ದ್ವಾದಶಿ,ನಕ್ಷತ್ರ: ಆಶ್ಲೇಷ, ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: రా.11:39 ನಿಂದ రా.1:27 ತನಕ ಅಭಿಜಿತ್ ಮುಹುರ್ತ: ಬೆ.11:59 ನಿಂದ ಮ.12:47 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಫ್ಯಾನ್ಸಿ ವ್ಯಾಪಾರಸ್ಥರಿಗೆ ನಷ್ಟ, ಸಿದ್ದ ಉಡುಪು ತಯಾರಿಕಾ ಉದ್ಯಮ ದಾರರಿಗೆ ಆರ್ಥಿಕ ಚೇತರಿಕೆ ಆಗಲೂ ಸ್ವಲ್ಪ ಸಮಯ ಬೇಕಾಗುವುದು,ದೇಶಕ್ಕೆ ಹೋಗುವ ಕನಸು ಸದ್ಯಕ್ಕೆ ಬೇಡ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ಕೆಲಸ ಬದಲಾವಣೆ ಸಾಧ್ಯತೆ ಮತ್ತು ಕೆಲವರಿಗೆ…

Read More

ಬೆಂಗಳೂರು:- ಅವ್ರದ್ದು ಮುದ್ದಾದ ಕುಟುಂಬ..ಹೊರರಾಜ್ಯದಿಂದ ಬಂದು ಬೆಂಗ್ಳೂರ್ ನಲ್ಲಿ ವಾಸವಾಗಿದ್ರು..ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದ ಗಂಡ ಪತ್ನಿ ಹಾಗೂ ಮಗುವಿನ ಬಗ್ಗೆ ಸುಂದರ ಭವಿಷ್ಯದ ಕನಸು ಕಂಡಿದ್ದ. ಹೀಗಿರುವಾಗ ಕೈಯಲ್ಲಿಡಿದು ಆಡಿಸಬೇಕಿದ್ದ ತನ್ನ ಕಂದನನ್ನೇ ತಾಯಿ ಕೊಲೆ ಮಾಡಿದ್ದಾಳೆ..ಈ ಕುರಿತ ಕರುಣಾಜನಕ ಸ್ಟೋರಿ ಇಲ್ಲಿದೆ ನೋಡಿ.. ಈ ಪೊಟೋದಲ್ಲಿ ಕಾಣ್ತಿರೋ ಮುದ್ದಾ್ ಕುಟುಂಬವನ್ನು ನೋಡಿ..ಹೆಸ್ರು ಲಕ್ಷ್ಮಿ ನಾರಾಯಣ್ ಪತ್ನಿ ಚಿನ್ನಾ ಹಾಗೂ ಎರಡು ವರಬಂದಿದ್ದು ಶೃತಿಕಾ..ಮೂಲತ: ಆಂದ್ರದ ಚಿತ್ತೂರು ಮೂಲದ ಲಕ್ಷ್ಮಿ ನಾರಾಯಣ್ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ರು.ಹೀಗೆ ಕೆ ಆರ್ ಪುರಂ ಠಾಣಾ ವ್ಯಾಪ್ತಿಯ ಸೀಗೇಹಳ್ಳಿ ಬಳಿ ಬಾಡಿಗೆ ಮನೆ ಮಾಡಿಕೊಂಡು ಪತ್ನಿ ಮಗುವಿನ ಜೊತೆ ವಾಸವಾಗಿದ್ರು..ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದ ಲಕ್ಷ್ಮಿ ನಾರಾಯಣ್ , ವೈಟ್ ಫೀಲ್ಡ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಜೀವನ ಸಂತೋಷವಾಗಿಯೇ ಸಾಗಿತ್ತು.. ಈ ನಡುವೆ ಗಂಡ ಹೆಂಡ್ತಿ ನಡುವೆ ವೈಮನಸ್ಸು ಗಲಾಟೆ ಮಾಮೂಲಿ ಆಗಿತ್ತು..ಆಗ ಹಿರಿಯರು ಸಂಧಾನ ಮಾಡಿ…

Read More

ಗದಗ:- ಲೋಕಸಭಾ ಟಿಕೇಟ್ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ವಿಚಾರವಾಗಿ ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಗದಗ್ ನಲ್ಲಿ ಮಾತನಾಡಿದ ಅವರು, ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಬಿಡುಗಡೆ ಆಗಬಹುದು. ಮೂರು ಕ್ಷೇತ್ರ ಬಿಟ್ಟು ಆಲ್ ಮೋಸ್ಟ್ ಎಲ್ಲಾ ಆಗಿದ್ದಾವೆ ಎಂದು ಅಧ್ಯಕ್ಷರೇ ಹೇಳಿದ್ದಾರೆ. ಆಲ್ ಮೋಸ್ಟ್ ಫೈನಲ್ ಆಗಿದೆ ಎರಡು ಮೂರು ಕ್ಷೇತ್ರಗಳ ಬದಲಾವಣೆ ಬಗ್ಗೆ ಮಾತಾಡ್ತಿದ್ದಾರೆ.. ಮಾತುಕತೆ ನಡೆದಿರಬಹುದು. ಬಿಜೆಪಿಯಲ್ಲಿ ಕೊಪ್ಪಳ , ಹಾವೇರಿ, ಕೋಲಾರ, ಮಂಡ್ಯ, ದಾವಣಗೆರೆಯಲ್ಲಿ ರಾಜಕೀಯ ಗೊಂದಲದ ಗೂಡಗಿವೆ ಎಂದರು. ಕರ್ನಾಟಕದ ಬಿಜೆಪಿ ಅಮಿತ್ ಶಾ ಮಾತು ಕೇಳ್ತಿಲ್ಲ, ಮೋದಿ ಮಾತು ಕೇಳ್ತಿಲ್ಲ. ಬಿಜೆಪಿ ನಾಯಕರು, ಬಿಜೆಪಿ ಕಟ್ಟಿದವರು ಅವರಲ್ಲಿ ಈಶ್ವರಪ್ಪ ಕೂಡಾ ಒಬ್ಬರು. ಮೋದಿ ಬಂದಾರ ಅಂದ್ರೆ ಬಂದಿದ್ದಾನು ಹೋಗೋ ಅಂದ್ರು. ಇದು ಬಿಜೆಪಿ ಅವರ ನಾಯಕರನ್ನು ಅಗೌರವದಿಂದ ನೋಡೋದಕ್ಕೆ ಸಾಕ್ಷಿಯಾಗಿದೆ ಎಂದರು.

Read More

ನವದೆಹಲಿ:- ಇಶಾ ಫೌಂಡೇಶನ್‌ನ ಸಂಸ್ಥಾಪಕ, ಸದ್ಗುರು ಜಗ್ಗಿ ವಾಸುದೇವ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಗುರು ಮೆದುಳಿನಲ್ಲಿ ‌ಭಾರೀ ಊತ ರಕ್ತಸ್ರಾವ ಉಂಟಾಗಿದ್ದು, ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆರೋಗ್ಯ ಸುಧಾರಿಸುತ್ತಿದೆ ಎಂದು ಇಶಾ ಫೌಂಡೇಶನ್‌ ಸಾಮಾಜಿಕ ಜಾಲತಾಣದ ಖಾತೆಯಿಂದ ಸ್ಪಷ್ಟನೆ ನೀಡಲಾಗಿದೆ. ತೀವ್ರ ತಲೆನೋವಿನಿಂದ ಆಸ್ಪತ್ರೆಗೆ ದಾಖಲಾಗುವ ಮೊದಲು ಸದ್ಗುರು ಮೆದುಳಿನಲ್ಲಿ ತೀವ್ರ ರಕ್ತಸ್ರಾವವನ್ನು ಅನುಭವಿಸಿದರು ಎಂದು ಹೇಳಿಕೆ ತಿಳಿಸಿದೆ. ಮಾರ್ಚ್ 17 ರಂದು ರಕ್ತಸ್ರಾವವನ್ನು ನಿವಾರಿಸಲು ಅಪೋಲೋ ಆಸ್ಪತ್ರೆಯಲ್ಲಿ ತಲೆಬುರುಡೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ”ತೀವ್ರ ತಲೆನೋವಿನ ಹೊರತಾಗಿಯೂ ಸದ್ಗುರುಗಳು ತಮ್ಮ ಕಾರ್ಯಕ್ರಮಗಳನ್ನು ಮುಂದುವರೆಸಿದರು.ಮಾರ್ಚ್ 17 ರಂದು, ಸ್ಥಿತಿಯು ತೀವ್ರವಾಗಿ ಹದಗೆಟ್ಟಿತು, ತೀವ್ರ ವಾಂತಿಯೊಂದಿಗೆ ತಲೆನೋವು ಉಲ್ಬಣಗೊಂಡಿತು. ತಲೆಬುರುಡೆಯಲ್ಲಿನ ರಕ್ತಸ್ರಾವವ ನಿಲ್ಲಿಸಲು ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದರು”ಎಂದು ಇಶಾ ಫೌಂಡೇಶನ್ ಹೇಳಿದೆ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ ವಿನಿತ್ ಸೂರಿ, ಸದ್ಗುರುಗಳು ಸ್ಥಿರವಾದ…

Read More