Author: AIN Author

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (IPL 2024) ಮುಂಬೈ ತಂಡದ ನಾಯಕ ಸ್ಥಾನ ಬದಲಾದ ಬಳಿಕ ಮೊದಲ ಬಾರಿಗೆ ರೋಹಿತ್‌ ಶರ್ಮಾ ಮತ್ತು ಹಾರ್ದಿಕ್‌ ಪಾಂಡ್ಯ (Hardik Pandya) ಮುಖಾಮುಖಿ ಎದುರಾಗಿದ್ದಾರೆ. ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ ತಂಡದ ಅಭ್ಯಾಸದ ಅವಧಿಯಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಅಪ್ಪಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ https://www.instagram.com/reel/C4vX2C1MGRK/?utm_source=ig_web_copy_link ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಬದಲಾದಾಗ ಪಾಂಡ್ಯ ಮತ್ತು ರೋಹಿತ್‌ ವಿಚಾರವಾಗಿ ಹಲವು ರೀತಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಕುರಿತು ಮಾತನಾಡಿದ ಪಾಂಡ್ಯ, ರೋಹಿತ್ ಶರ್ಮಾ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿದ್ದಾರೆ. ಅದು ನನಗೆ ಸಹಾಯ ಮಾಡುತ್ತದೆ. ಅವರ ನಾಯಕತ್ವದಲ್ಲಿ ಈ ತಂಡ ಸಾಧಿಸಿರುವುದನ್ನು ನಾನು ಮುಂದುವರಿಸುತ್ತೇನೆ. ನಾನು ರೋಹಿತ್‌ ಅವರ ನಾಯಕತ್ವದಲ್ಲಿ ಇಡೀ ವೃತ್ತಿಜೀವನವನ್ನು ಆಡಿದ್ದೇನೆ. ಅವರು ಯಾವಾಗಲೂ ನನ್ನ ಭುಜದ ಮೇಲೆ ಕೈ ಇಡುತ್ತಾರೆ ಎಂದು ತಿಳಿಸಿದರು. ಐಪಿಎಲ್‌ ಸಮಯದಲ್ಲಿ ರೋಹಿತ್‌ ಅವರು ನನಗೆ…

Read More

ಧಾರವಾಡ: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿ ಸಂಭವಿಸಿದೆ. ನ್ಯಾಯವಾದಿಯೊಬ್ಬರ ಪುತ್ರ ಸಾಯಿರಾಂ (27) ಎಂಬ ಬೈಕ್‌ ಸವಾರನೇ ಈ ಘಟನೆಯಲ್ಲಿ ಸಾವನ್ನಪ್ಪಿದವನು. https://ainlivenews.com/do-you-know-jogging-and-yoga-are-enough-to-get-rid-of-depression/ ಬೈಕ್ ತೆಗೆದುಕೊಂಡು ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್‌ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು, ಸಾಯಿರಾಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ, ದೂರು ದಾಖಲಿಸಿಕೊಂಡಿದ್ದಾರೆ.

Read More

ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ (IPL 2024) ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್​ ಕ್ರೀಡಾಂಗಣದಲ್ಲಿ ಶುಕ್ರವಾರ ಅದ್ಧೂರಿ ಸಮಾರಂಭದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದ್ದು, ಇನ್ನೆರಡು ತಿಂಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಚುನಾವಣೆ ಹೊರತಾಗಿಯೂ ಈ ಬಾರಿ ಸಂಪೂರ್ಣ ಐಪಿಎಲ್‌ ಲೀಗ್‌ ಭಾರತದಲ್ಲೇ ಆಯೋಜಿಸುವುದಾಗಿ ಬಿಸಿಸಿಐ (BCCI) ಕಾರ್ಯದರ್ಶಿ ಜಯ್‌ ಶಾ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಮೊದಲ 15 ದಿನಗಳ ಕಾಲ ನಡೆಯಲಿರುವ 21 ಪಂದ್ಯಗಳಿಗೆ ಮಾತ್ರ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಉಳಿದ ಪಂದ್ಯಗಳ ವೇಳಾಪಟ್ಟಿಯೂ ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆಯಿದೆ. ಶುಕ್ರವಾರ (ಮಾ.22) ಉದ್ಘಾಟನಾ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ 3 ಬಾರಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು (RCB) ಮುಖಾಮುಖಿಯಾಗಲಿವೆ. ಆರ್‌ಸಿಬಿ ಮತ್ತು ಚೆನ್ನೈ ನಡುವೆ 31 ಪಂದ್ಯಗಳು ನಡೆದಿದ್ದು, 20 ಪಂದ್ಯಗಳಲ್ಲಿ ಚೆನ್ನೈ, 10 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ.…

Read More

ಬೆಂಗಳೂರು: 5, 8, 9  ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ (Public Exam) ವಿಚಾರದಲ್ಲಿ ಮಕ್ಕಳ ಜೊತೆ ಶಿಕ್ಷಣ ಇಲಾಖೆ ಚೆಲ್ಲಾಟ ಆಡುತ್ತಿದ್ಯಾ ಎಂಬ ಅನುಮಾನ ಮೂಡಿದೆ. ಪರೀಕ್ಷೆ ಇದೆಯೋ? ಇಲ್ಲವೋ ಗೊಂದಲದಲ್ಲಿ ವಿದ್ಯಾರ್ಥಿಗಳಿದ್ದಾರೆ. ಸುಪ್ರಿಂ ಕೋರ್ಟ್‌ನಲ್ಲಿ (Supreme Court) ಪರೀಕ್ಷೆಗೆ ತಡೆ ನೀಡಿದ ಬಳಿಕ ಶಿಕ್ಷಣ ಇಲಾಖೆ (Education Department) ಯಾವುದೇ ಮಾಹಿತಿ ನೀಡುತ್ತಿಲ್ಲ. ವಿದ್ಯಾರ್ಥಿಗಳಿಗೆ (Students) ಯಾವುದೇ ಸಂದೇಶ ನೀಡದೇ ಗೊಂದಲ ಉಂಟಾಗಿದೆ. DVS PC: ‘ಸಹಿಸಿಕೊಳ್ಳೋರಿಗೆ ತಾಳ್ಮೆಯಿದ್ರೆ, ದುಃಖ ಕೊಟ್ಟವರು ಇದ್ದೂ ಸತ್ತಂತೆ’: DV ಸದಾನಂದಗೌಡ ಹೇಳಿದ್ಯಾಕೆ? ಮಾರ್ಚ್ 11ರಿಂದ ಮಾರ್ಚ್ 18ರವರೆಗೆ ಪರೀಕ್ಷೆ ನಿಗದಿಯಾಗಿತ್ತು. ಮಾರ್ಚ್ 11 ಮತ್ತು 12 ಎರಡು ದಿನ ಎರಡು ವಿಷಯಗಳ ಪರೀಕ್ಷೆ ನಡೆದ ಬಳಿಕ ಪರೀಕ್ಷೆಗೆ ತಡೆ ನೀಡಲಾಗಿದೆ. 5ನೇ ತರಗತಿಗೆ ಎರಡು ವಿಷಯಗಳ ಪರೀಕ್ಷೆ ಮಾತ್ರ ಬಾಕಿ ಉಳಿದಿದೆ. 8 ಮತ್ತು 9ನೇ ತರಗತಿಗಳಿಗೆ ಇನ್ನೂ 4 ವಿಷಯಗಳ ಪರೀಕ್ಷೆ ಬಾಕಿ ಇದೆ. ಬಾಕಿ ವಿಷಯಗಳ ಪರೀಕ್ಷೆ ಬಗ್ಗೆ ಶಿಕ್ಷಣ ಇಲಾಖೆ…

Read More

ಹುಬ್ಬಳ್ಳಿ: ಬೆಂಗಳೂರಿನ ಚಿಕ್ಕಪೇಟೆಯ ಒಂದು ಓಣಿಯಲ್ಲಿ ಮೊಬೈಲ್ ಅಂಗಡಿಯಲ್ಲಿ ಸಹಜವಾಗಿಯೇ ಹನುಮಾನ್ ಚಾಲೀಸ್ ಸಂಬಂಧಿಸಿದಂತೆ ಹಾಡು ಹಾಕಿದ್ದಾರೆ. ಅಲ್ಲಿ ಮುಸಲ್ಮಾನ ಗೂಂಡಾಗಳು ದಾಳಿ ಮಾಡಿದ್ದಾರೆ, ಅದನ್ನು ಬಚಾವ್ ಮಾಡುವ ಸಲುವಾಗಿ ಬೇರೆ ಬೇರೆ ಕಥೆ ಕಟ್ಟುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆರೋಪ ಮಾಡಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈಗ ಮುಸ್ಲಿಮರ ರಂಜಾನ್ ಹಬ್ಬದಲ್ಲಿ ಹಿಂದೂಗಳು ಪೂಜೆ ಮಾಡಬಾರದಾ? ಹಾಡು ಹಾಕಬಾರದಾ ಇದು ಪಾಕಿಸ್ತಾನನಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ‌ಏನು ಬೇಕಾದರು ಮಾಡಬಹುದು ಅಂದುಕೊಂಡರೆ ಇಲ್ಲಿ ನಡೆಯಲ್ಲ ಡಾ. ಅಂಬೇಡ್ಕರ್ ಸಂವಿಧಾನ ಇದೆ, ಕಾನೂನು ಇದೆ. ಆ ಬದ್ಧತೆ ಬಿಟ್ಟು ನಡೆಯುವುದಿಲ್ಲ ಎಂದರು. https://ainlivenews.com/do-you-know-jogging-and-yoga-are-enough-to-get-rid-of-depression/ ಈಗಾಗಲೇ ಅಲ್ಲಿ ದೊಡ್ಡ ಪ್ರತಿಭಟನೆ ಆಗಿದೆ.‌ ಇಲ್ಲಿ ಗೂಂಡಾಗಿರಿ ನಡೆಯಲ್ಲ. ಹಾಗಾಗಿ ಇದನ್ನು ನಾನು ಖಂಡಿಸುತ್ತೇವೆ. ಕಾಂಗ್ರೆಸ್ ಸರಕಾರ ಇದ್ದ ಕಾರಣ ಇವರ ಆಟ ನಡೆತಾ ಇದೆ, ಇವರು ಬಾಲ ಬಿಚ್ಚುತ್ತಾ ಇದ್ದಾರೆ, ಈ ರೀತಿಯ ಪ್ರವೃತ್ತಿ ಎದುರಿಸಲು ಹಿಂದೂ ಸಮಾಜ‌…

Read More

ಬೆಂಗಳೂರು: ಬಿಜೆಪಿ ಲೋಕಸಭೆ ಟಿಕೆಟ್ ಕೈತಪ್ಪಿದ್ದರಿಂದ ನನಗೆ ನೋವಾಗಿದೆ ನನಗೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿರುವುದು ಸತ್ಯ ಆದ್ರೆ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಎಂದು ಡಿವಿಎಸ್ ಸ್ಪಷ್ಟನ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದು ತಿಳಿಸಿದ್ದಾರೆ. BIGG BREAKING: ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಬಿಜೆಪಿಗೆ ಗುಡ್‌ ಬೈ! ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು,  ನಿಮ್ಮ ಮುಂದಿನ ನಡೆ ಏನು ಎಂಬುದನ್ನು ಹಲವರು ಕೇಳಿದ್ದಾರೆ ಬಿಜೆಪಿ ಶುದ್ದೀಕರಣದ ಕಡೆಗೆ ನನ್ನ ನಡೆ ಎಂದ ಸದಾನಂದಗೌಡ ಬಿಜೆಪಿಯಲ್ಲೇ ಇದ್ದು ಪಕ್ಷ ಶುದ್ದೀಕರಣ ಮಾಡುತ್ತೇನೆಂದ ಡಿವಿಎಸ್ ಎಲ್ಲಿ ನಿಂತೂ ಗೆಲ್ಲಿಸುತ್ತೇವೆಂದು ಕಾಂಗ್ರೆಸ್ಸಿನವರು ಹೇಳಿದ್ದಾರೆ ನನಗೆ ಟಿಕೆಟ್ ತಪ್ಪಿಸಿದವರು ಪಶ್ಚಾತ್ತಾಪ ಪಡುತ್ತಾರೆ ಸಿಎಂ ಆಗಿ, ಕೇಂದ್ರ ಸಚಿವನಾಗಿ ನನ್ನ ಕೆಲಸ ತೃಪ್ತಿ ತಂದಿದೆ ನಾನೇನೂ ಮಾಡಿಲ್ಲ ಎಂದು ಹೇಳಿದವರಿಗೆ ಇದೇ ನನ್ನ ಉತ್ತರ ಎಂದು ಹೇಳಿದರು. ‘ಸಹಿಸಿಕೊಳ್ಳೋರಿಗೆ ತಾಳ್ಮೆಯಿದ್ರೆ, ದುಃಖ ಕೊಟ್ಟವರು ಇದ್ದೂ ಸತ್ತಂತೆ’ ಕರ್ನಾಟಕದಲ್ಲಿ ಮತ್ತೆ ಮೋದಿ ಪರ ವಾತಾವರಣ ಸೃಷ್ಟಿಯಾಗಬೇಕು.…

Read More

ಸಕ್ಕರೆ ನಾಡು ಮಂಡ್ಯದಿಂದ ಮಾಜಿ ಸಿಎಂ ಕುಮಾರಸ್ವಾಮಿ ಲೋಕಸಭಾ ಅಖಾಡಕ್ಕೆ ಇಳಿಯೋದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮತ್ತಷ್ಟು ಆಕ್ಟೀವ್ ಆಗಿದ್ದಾರೆ. ಚುನಾವಣೆ ಗೆಲ್ಲೋದಕ್ಕೆ ರಣತಂತ್ರ ಎಣೆಯುತ್ತಿದ್ದು, ಭಾವನಾತ್ಮಕವಾಗಿ ಮತದಾರರ ಮನಗೆಲ್ಲೋದಕ್ಕೆ ಮುಂದಾಗಿದ್ದಾರೆ. ಅದರ ಬಾಗವಾಗಿ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಮಂಡ್ಯ ನಗರದಲ್ಲಿ ಸ್ವಂತ ಮನೆ ಖರೀದಿಸಿದ್ದಾರೆ. ಆ ಮೂಲಕ ಐದು ವರ್ಷಗಳ ಬಳಿಕ ಮತ್ತೆ ಹೌಸ್ ಪಾಲಿಟಿಕ್ಸ್ ಮುನ್ನೆಲೆಗೆ ಬಂದಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ. 2019ರ ಲೋಕಸಭೆ ಚುನಾವಣೆ ವೇಳೆ ಮಂಡ್ಯದಲ್ಲಿ ಹೌಸ್ ಪಾಲಿಟಿಕ್ಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಮತದಾರರನ್ನ ಭಾವನಾತ್ಮಕಾಗಿ ಸೆಳೆಯಲು ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಿಸಿ ನೆಲೆಯೂರುವುದಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಪೈಪೋಟಿಗೆ ಬಿದ್ದು ಹೇಳಿಕೆ ಕೊಟ್ಟಿದ್ರು. ಚುನಾವಣೆಯಲ್ಲಿ ಸೋತ ಬಳಿಕ ನಿಖಿಲ್ ಮನೆ ನಿರ್ಮಿಸುವ ನಿರ್ಧಾರ ಕೈಬಿಟ್ರೆ, https://ainlivenews.com/do-you-know-jogging-and-yoga-are-enough-to-get-rid-of-depression/ ಇತ್ತ ಸಂಸದೆ ಸುಮಲತಾ ಅವ್ರು 2021ರಲ್ಲಿ ಮಂಡ್ಯ ತಾಲ್ಲೂಕಿನ ಹನಕೆರೆ ಬಳಿ ಭೂಮಿ ಪೂಜೆಯನ್ನೂ ನೆರವೇರಿಸಿ ಮನೆ ನಿರ್ಮಿಸದೇ…

Read More

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಪೇಟೆ ಚುನಾವಣಾಧಿಕಾರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. BIGG BREAKING: ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಬಿಜೆಪಿಗೆ ಗುಡ್‌ ಬೈ! ನಗರ್ತ್‌ ಪೇಟೆಯಲ್ಲಿ ಪ್ರತಿಭಟನೆ ಮಾಡಿ ಭಾಷಣ ಮಾಡಿದ್ದ ತೇಜಸ್ವಿ ಸೂರ್ಯ ವಿರುದ್ಧ ಐಪಿಸಿ ಸೆಕ್ಷನ್ 153a, 295a, RP act 123(3a) ಅಡಿಯಲ್ಲಿ ಕೇಸ್ ದಾಖಲಾಗಿದೆ. ಮೊಬೈಲ್ ಶಾಪ್ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಕ್ಕೆ ಪ್ರತಿಭಟನೆ ನಡೆಸಿದ್ದರು. ತೇಜಸ್ವಿ ಸೂರ್ಯ ಎಕ್ಸ್‌ ಖಾತೆಯಲ್ಲಿ ಹಾಕಿದ್ದ ಪೋಸ್ಟ್‌ಗಳನ್ನ ದಾಖಲಾತಿಯಾಗಿ ಇಟ್ಟಿಕೊಂಡು ಪೊಲೀಸರಿಗೆ ದೂರು ನೀಡಲಾಗಿತ್ತು ನಗರ್ತ್ ಪೇಟೆ ಘಟನೆಯ ವರದಿಯನ್ನು ತುಷಾರ್ ಗಿರಿನಾಥ್ ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು. ವರದಿ ಸಲ್ಲಿಸಿದ ಬಳಿಕ ರಾಜ್ಯ ಚುನಾವಣಾ ಆಯೋಗದಿಂದ ಜಿಲ್ಲಾ ಚುನಾವಣಾಧಿಕಾರಿಗೆ ದೂರು ದಾಖಲು ಮಾಡಲು ಸೂಚನೆ ನೀಡಲಾಗಿದೆ. ಸೂಚನೆ ಸಿಕ್ಕ ಬಳಿಕ ಚಿಕ್ಕಪೇಟೆ ಚುನಾವಣಾಧಿಕಾರಿ ದೂರು ಕೊಟ್ಟಿದ್ದಾರೆ.

Read More

ಬೆಂಗಳೂರು: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) 17ನೇ ಆವೃತ್ತಿ ಆರಂಭಗೊಳ್ಳಲು ಒಂದು ದಿನವಷ್ಟೇ ಬಾಕಿಯಿದೆ. ಮಾರ್ಚ್​ 22ರಿಂದ ಮಹತ್ವದ ಟೂರ್ನಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್​ ಕ್ರೀಡಾಂಗಣದಲ್ಲಿ ಇತ್ತಂಡಗಳು ಕಾದಾಟ ನಡೆಸಲಿದ್ದು, ಹಣಾಹಣಿ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ BIGG BREAKING: ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಬಿಜೆಪಿಗೆ ಗುಡ್‌ ಬೈ! ಅಲ್ಲದೇ ಈ ಬಾರಿ ಬೇಸಿಗೆಯ ಬಿಸಿ ಐಪಿಎಲ್‌ ಟೂರ್ನಿಗೂ ತಟ್ಟಿದ್ದು, ಪಂದ್ಯದ ವೇಳೆ ಮೈದಾನ ಹದಗೊಳಿಸಲು ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳಲು ಮುಂದಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರನ್ನು ಪೂರೈಸುವಂತೆ ಆಡಳಿತ ಮಂಡಳಿ ಪದಾಧಿಕಾರಿಗಳು…

Read More

ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ INDIA ಒಕ್ಕೂಟ ಗೆದ್ದರೆ ಮೇಕೆದಾಟು ಯೋಜನೆಗೆ (Mekedatu Project) ತಡೆ ಒಡ್ಡುವುದಾಗಿ ಡಿಎಂಕೆ ಘೋಷಣೆ ಮಾಡಿದೆ. ಲೋಕಸಭಾ ಚುನಾವಣೆಗೆ ತಮಿಳುನಾಡಿನಲ್ಲಿ (Tamil Nadu) ಆಡಳಿತ ನಡೆಸುತ್ತಿರುವ ಸ್ಟಾಲಿನ್‌ (CM Stalin) ನೇತೃತ್ವದ ಡಿಎಂಕೆ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಕಾವೇರಿ ನದಿಗೆ (Cauvery Water) ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆ ಯೋಜನೆ ನಿರ್ಮಾಣಕ್ಕೆ ತಡೆ ಒಡ್ಡುವುದಾಗಿ ಹೇಳಿದೆ. https://ainlivenews.com/do-you-know-jogging-and-yoga-are-enough-to-get-rid-of-depression/ INDIA ಒಕ್ಕೂಟದಲ್ಲಿ ಕಾಂಗ್ರೆಸ್‌ (Congress) ಪ್ರಧಾನ ಪಕ್ಷವಾಗಿದ್ದು ಕರ್ನಾಟಕದಲ್ಲಿ (Karnataka) ಕಾಂಗ್ರೆಸ್‌ ಸರ್ಕಾರವೇ ಅಧಿಕಾರ ನಡೆಸುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೊದಲು ಡಿಕೆ ಶಿವಕುಮಾರ್‌ (DK Shivakumar) ನೇತೃತ್ವದಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ ಪಾದಯಾತ್ರೆ ಸಹ ನಡೆಸಿತ್ತು. ಈಗ ಮೈತ್ರಿ ಭಾಗವಾಗಿರುವ ಡಿಎಂಕೆ ಈ ವಿಚಾರವನ್ನೇ ಪ್ರಣಾಳಿಕೆಯಲ್ಲಿ ಸೇರಿಸಿದ್ದು ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ.

Read More