Author: AIN Author

ಗದಗ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕೊಡಗಾನೂರು ಕ್ರಾಸ್ ಬಳಿ ಎದುರಿಗೆ ಬರುತ್ತಿದ್ದ ಬಸ್‌ಗೆ ಸೈಡ್ ಕೊಡಲು ಹೋಗಿ ಮತ್ತೊಂದು ಸಾರಿಗೆ ಬಸ್ ಕಂದಕಕ್ಕೆ ಉರುಳಿದ ಘಟನೆ ನಡೆದಿದೆ. ಏಕಾಏಕಿ‌ ಬಸ್ ಕಂದಕ್ಕೆ ಉರುಳಿದ ಪರಿಣಾಮ ಸುಮಾರು 20 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಗಜೇಂದ್ರಗಡದಿಂದ ಗದಗ ಕಡೆಗೆ ಬಸ್‌ ಹೊರಟಿತ್ತು. ಇದೇ ವೇಳೆ ಗದಗನಿಂದ ಬರುತ್ತಿದ್ದ ಮತ್ತೊಂದು ಬಸ್‌ಗೆ ದಾರಿ ಬಿಡುವಾಗ ಆಯತಪ್ಪಿ ಕಂದಕಕ್ಕೆ ಬಿದ್ದಿದೆ. ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಪ್ರಯಾಣಿಕರಿಗೆ ಮತ್ತೊಂದು ಬಸ್‌ ಮೂಲಕ ತೆರಳಲು ವ್ಯವಸ್ಥೆ ಮಾಡ ಲಾಯಿತು. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಹುಬ್ಬಳ್ಳಿ ; ಸಿಸಿಬಿ ಪೋಲೀಸರ ಭರ್ಜರಿವ ಕಾರ್ಯಾಚರಣೆ ಮಾಡಿದ್ದು ಎಂಡಿಎಂಎಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರ ಬಂಧನ ಮಾಡಲಾಗಿದೆ. ಬಂಧಿತರಿಂದ 11.57 ಲಕ್ಷ ರೂಪಾಯಿ ಮೌಲ್ಯದ ವಸ್ತು ವಶಕ್ಕೆ ತೆಗೆದುಕೊಂಡಿದ್ದು ಕಾರಿನಲ್ಲಿ ಬಂದು MDMA ಎಂಬ ಹೈಟೆಕ್ ಡ್ರಗ್ಸ್‌ ನ್ನು ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಆರೋಪಿಗಳು ಮೂರು ಜನ ಆರೋಪಿಗಳನ್ನು ಬಂಧಿಸಿ ಮಾರಾಟ ಯತ್ನ ವಿಫಲಗೊಳಿಸಿದ್ದಾರೆ ಪೊಲೀಸರು.ಹುಬ್ಬಳ್ಳಿಯ ಕೇಶ್ವಾಪುರದ ಆಜಾದ್ ನಗರದಲ್ಲಿ ನಡೆದ ಘಟನೆಯಲ್ಲಿ ನಡೆದಿದೆ. ನಿಷೇಧಿತ ಮಾದಕ ವಸ್ತು MDMA ಮಾರಾಟದಲ್ಲಿ ತೊಡಗಿದ್ದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಸಿಸಿಬಿ ವಿಭಾಗದ ಎಸಿಪಿ ಎಸ್.ಟಿ.ಒಡೆಯರ್ ನೇತೃತ್ವದಲ್ಲಿ ನಡೆದ ದಾಳಿ ಮಾಡಲಾಗಿದೆ. ಸಿಸಿಬಿ ವಿಭಾಗದ ಪೊಲೀಸ್ ಇನ್ಸಪೆಕ್ಟರ್‌ ಮಾರುತಿ ಗುಳ್ಳಾರಿ, ಪ್ರಭು ಗಂಗೇನಹಳ್ಳಿ ಮತ್ತಿತರರ ಸಿಬ್ಬಂದಿಯಿಂದ ದಾಳಿಮೂರು ಜನ ಆರೋಪಿಗಳ ಬಂಧನ ಹುಬ್ಬಳ್ಳಿ ಗಾಂಧಿವಾಡದ ಅನಫಲ್ ಅಬ್ದುಲ್ ಅಜೀಜ್, ಆಕಾಶಪಾರ್ಕ ನ ವಿಕ್ರಮ್ ಚೌಧರಿ, ನವನಗರದ ದಾವಲ್ ಮಲಿಕ್ ನದಾಫ ಬಂಧಿತರು ಆರೋಪಿಗಳು. ಬಂಧಿತರಿಂದ 1,38,450 ರೂ ಮೌಲ್ಯದ 0.923…

Read More

ಬೆಂಗಳೂರು: ಫುಡ್ ಡೆಲಿವರಿ ಬಾಯ್‌ (Food Delivery Boy) ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ತಡವಾಗಿ ಬೆಳಕಿಗೆ ಬಂದಿದ್ದು, ಇಲ್ಲಿನ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡೆಲಿವರಿ ಬಾಯ್ ಬಿ.ಆಕಾಶ್ ವಿರುದ್ಧ ದೂರು ದಾಖಲಾಗಿದೆ. DVS PC: ‘ಸಹಿಸಿಕೊಳ್ಳೋರಿಗೆ ತಾಳ್ಮೆಯಿದ್ರೆ, ದುಃಖ ಕೊಟ್ಟವರು ಇದ್ದೂ ಸತ್ತಂತೆ’: DV ಸದಾನಂದಗೌಡ ಹೇಳಿದ್ಯಾಕೆ? ಏನಿದು ಘಟನೆ: ಕಳೆದ ಮಾರ್ಚ್ 17ರಂದು (ಭಾನುವಾರ) ಸಂಜೆ 6:30ರ ವೇಳೆಗೆ ಹೆಚ್‌ಎಎಲ್ ಪೊಲೀಸ್ ಠಾಣಾ (HAL Police Station) ವ್ಯಾಪ್ತಿಯ ಮನೆಯೊಂದಕ್ಕೆ ಫುಡ್ ಡೆಲಿವರಿ ನೀಡಲು ಹೋಗಿದ್ದ. ಫುಡ್ ನೀಡಿದ ಬಳಿಕ ವಾಶ್‌ ರೂಂ ಉಪಯೋಗಿಸಲು ಮನವಿ ಮಾಡಿ, ಮನೆಯೊಳಕ್ಕೆ ಎಂಟ್ರಿಕೊಟ್ಟಿದ್ದಾನೆ. ಬಳಿಕ ಯುವತಿಗೆ ಕುಡಿಯಲು ನೀರು ಕೊಡುವಂತೆ ಕೇಳಿದ್ದಾನೆ. ಆಕೆ ನೀರು ತರಲು ಒಳಗೆ ಹೋದಾಗ ತಾನೂ ಹಿಂಬಾಲಿಸಿ ಹೋಗಿದ್ದಾನೆ. ನಂತರ ಯುವತಿಯ ಕೈ ಹಿಡಿದು ಎಳೆದಾಡಿದ್ದಾನೆ, ಅನುಚಿತವಾಗಿ ವರ್ತಿಸಿದ್ದಾನೆ. ಘಟನೆ ಸಂಬಂಧ ಯುವತಿ ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ…

Read More

ಬೆಂಗಳೂರು: 2018ರಲ್ಲಿ ತೆರೆಕಂಡ ತಮಿಳಿನ `ಇರುಂಬುತಿರೈ’ (ಕಬ್ಬಿಣದ ಪರದೆಯ ಹಿಂದೆ) (Irumbu Thirai) ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಸೈಬರ್ ವಂಚಕರು ಹೇಗೆಲ್ಲಾ ವಂಚನೆ ಮಾಡಲು ಸಾಧ್ಯವಿದೆ? ಎಂಬುದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ನಕಲಿ ಸಂದೇಶಗಳನ್ನು ಕಳುಹಿಸಿ ಜನರ ಬ್ಯಾಂಕ್ ಖಾತೆಗಳಿಂದ (Bank Account) ಹೇಗೆ ಹಣ ಎಗರಿಸುತ್ತಾರೆ ಎಂಬುದನ್ನ ತೋರಿಸಲಾಗಿತ್ತು. ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅದೇ ರೀತಿಯ ವಂಚನೆ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. BIGG BREAKING: ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಬಿಜೆಪಿಗೆ ಗುಡ್‌ ಬೈ! ಹೊಸ ರೂಪದಲ್ಲಿ ಅಗೋಚರ ಶತ್ರುವಿನ ಪ್ರತ್ಯಕ್ಷವಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಸೈಬರ್ ಖದೀಮರು ಕೂಡ ಫುಲ್ ಅಲರ್ಟ್ ಆಗಿದ್ದಾರೆ. ಚುನಾವಣೆ ಹೊತ್ತಲ್ಲೇ ನಕಲಿ ಮೆಸೇಜ್‌ಗಳ (Fake Messages) ಹಾವಳಿ ಸಹ ಹೆಚ್ಚಾಗುತ್ತಿವೆ. ಇಲ್ಲಿ ಸ್ವಲ್ಪ ಯಾಮಾರಿದ್ರೂ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಬೀಳೋದು ಗ್ಯಾರಂಟಿ. ಚುನಾವಣೆ ಸಂದರ್ಭದಲ್ಲಿ ಪ್ರಧಾನಿಗಳ ಫೋಟೋ ಬಳಸಿ ಫೇಕ್ ಮೆಸೇಜ್ ಹರಿಬಿಡಲಾಗುತ್ತಿದೆ. ಎಲ್ಲರ ಖಾತೆಗೆ ಮೋದಿಯವರ ಕಡೆಯಿಂದ 5,000 ರೂಪಾಯಿ ಅನ್ನೋ ಫೇಕ್…

Read More

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ನಾಲ್ಕು ನಿಗಮದ ಬಸ್ ಗಳಲ್ಲಿ ಪ್ರಯಾಣಿಸುವವರಿಗೆ ಇನ್ನು ಮುಂದೆ ಲಗ್ಗೇಜ್ ಗಳಲ್ಲಿ ಕೆಲವು ವಸ್ತುಗಳನ್ನು ಕೊಂಡುಯುವಂತಿಲ್ಲ. ನೀತಿ ಸಂಹಿತೆ ಜಾರಿಯಾಗಿದ್ದು ,ಎಲ್ಲಾ ಕಡೆಯಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಇದರ ಬೆನ್ನೆಲೆ ರಾಜ್ಯ ಸಾರಿಗೆ ಬಸ್ ಗಳಲ್ಲಿ ಲಗೇಜ್ ಸಾಗಿಸಲು ಪ್ರಯಾಣಿಕರಿಗೆ ಕೆಲವು ಕಟ್ಟಪಣೆ ಹಾಕಲಾಗಿದೆ. DVS PC: ‘ಸಹಿಸಿಕೊಳ್ಳೋರಿಗೆ ತಾಳ್ಮೆಯಿದ್ರೆ, ದುಃಖ ಕೊಟ್ಟವರು ಇದ್ದೂ ಸತ್ತಂತೆ’: DV ಸದಾನಂದಗೌಡ ಹೇಳಿದ್ಯಾಕೆ? ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ತಯಾರಿ ನಡೆಯುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಮತದಾರರನ್ನು ಸೆಳೆಯಲು ಸರ್ಕಸ್ ಶುರು ಮಾಡಿದ್ದಾರೆ. ಇದರ ನಡುವೆ 4 ನಿಗಮಗಳಿಗೆ ಹೊಸ ನಿಯಮ ಜಾರಿಯಾಗಿದೆ. ಸೂಕ್ತ ದಾಖಲೆ ಅಥವಾ ನೀತಿ ಸಂಹಿತೆಗೆ ಧಕ್ಕೆ ಬರುವ ವಸ್ತುಗಳ ಸಾಗಟ ಮಾಡುವಂತಿಲ್ಲ. ಈ ಬಗ್ಗೆ ಚಾಲಕ ಹಾಗೂ ನಿರ್ವಾಹಕರಿಗೆ ನಿಗಮದ ಭದ್ರತಾ ಮತ್ತು ಜಾಗೃತ ವಿಭಾಗದ ಹಿರಿಯ ಅಧಿಕಾರಿಗಳು ಸೂಚನೆ ಕೊಟ್ಟಿದ್ದು, ಪ್ರಯಾಣಿಕರು ಯಾವುದೇ ದಾಖಲೆ ಇಲ್ಲದ ಬೆಲೆಬಾಳುವ ವಸ್ತುಗಳನ್ನು ಬಸ್ನಲ್ಲಿ ತೆಗೆದುಕೊಂಡು ಹೋಗುವಂತಿಲ್ಲ.…

Read More

ಇಂದು ವಿಶ್ವ ಜಲ ದಿನ. ಸಕಲ ಜೀವರಾಶಿಗಳ ಮೂಲ ನೀರು. ನೀರಿಲ್ಲದ ಬದುಕು ಊಹೆಗೂ ನಿಲುಕದ್ದು, ಹುಟ್ಟಿನಿಂದ ಸಾಯುವವರೆಗೂ ಪ್ರತೀ ಜೀವಿಗೆ ನೀರು ಅತ್ಯಗತ್ಯ. ಸಾಯುವ ಮೊದಲೂ ಕೂಡ ಒಂದು ಹನಿ ನೀರು ಬಾಯಿಗೆ ಬೇಕು ಎನ್ನುವ ಪದ್ಧತಿ ಇದೆ. ಹೀಗಾಗಿ ನೀರನ್ನು ಜೀವಜಲ ಎಂದೇ ಕರೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಡಿನ ನಾಶದಿಂದ ಸರಿಯಾಗಿ ಮಳೆಯಾಗದೆ ನೀರಿನ ಕೊರತೆ ಎದುರಾಗುತ್ತಿದೆ. ಬಯಲು ಸೀಮೆಯಂತಹ ಪ್ರದೇಶಗಳಲ್ಲಿ ಬೇಸಿಗೆ ಬಂತೆಂದರೆ ಸಾಕು ಎಲ್ಲಡೆ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ ಎನ್ನುವುದು ದುರಂತಹ. ಇಂತಹ ಸಮಸ್ಯೆಗಳಿಗೊಂದು ಪರಿಹಾರ ನೀಡಬೇಕು. ಮುಂದಿನ ಪೀಳಿಗೆಗೆ ನೀರಿನ ಮಹತ್ವವನ್ನು ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತೀ ವರ್ಷ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.  https://ainlivenews.com/international-day-of-happiness%ca%bc%ca%bc-what-is-its-background-here-is-the-detail/ ಪ್ರತೀ ವರ್ಷ ಮಾರ್ಚ್​ 22 ರಂದು ಜಗತ್ತಿನಾದ್ಯಂತ ಜಲ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 1993 ರಿಂದ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ವಿಶ್ವದಲ್ಲಿ ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು…

Read More

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್‌ ಮೈತ್ರಿ ಹಿನ್ನೆಲೆಯಲ್ಲಿ ಈ ಎರಡು ಪಕ್ಷಗಳು ಒಂದೂಗೂಡಿ ಕಾರ್ಯನಿರ್ವಹಿಸುತ್ತಿದ್ದು ಇಂದು   ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ  ಮಾಜಿ ಸಚಿವ ರೇವಣ್ಣ, ಪುತ್ರ ಪ್ರಜ್ವಲ್ ರೇವಣ್ಣ ಆಗಮಿಸಿದ್ದಾರೆ ನಗರದ ಧವಳಗಿರಿ ನಿವಾಸದಲ್ಲಿ   ಯಡಿಯೂರಪ್ಪ ರನ್ನ ಭೇಟಿಯಾದ ರೇವಣ್ಣ, ಪ್ರಜ್ವಲ್.. ಮುಂದಿನ ಲೋಕಸಭಾ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಪುತ್ರ ವಿಜಯೇಂದ್ರ ಕೂಡ ಉಪಸ್ಥಿತಿ ಇದ್ದು ಇವರು ಕೂಡ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಆ ನಂತರ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ,  ಇವತ್ತು ಯಡಿಯೂರಪ್ಪ ಸಾಹೇಬ್ರು ಮತ್ತು ವಿಜಯೇಂದ್ರನ್ನ ಭೇಟಿ ಮಾಡಿದ್ದೇನೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿದ್ದೇನೆ ಹಾಸನದ ಚುನಾವಣಾ ಪ್ರಚಾರಕ್ಕೆ ತಾವು ಬರಬೇಕು ಎಂದು ಕೇಳಿಕೊಂಡಿದ್ದೇನೆ ಯಡಿಯೂರಪ್ಪನವರು ಮತ್ತು ವಿಜಯೇಂದ್ರನವರು ಚುನಾವಣಾ ಪ್ರಚಾರಕ್ಕೆ ಬರೋದಾಗಿ ಹೇಳಿದ್ದಾರೆ ತಮ್ಮ ಮಗನ ಚುನಾವಣೆಯಂತೆ ಮುಂದೆ ನಿಂತು ಭಾಗಿಯಾಗೋದಾಗಿ ಹೇಳಿದ್ದಾರೆ ಎರಡೆರಡು ಬಾರಿ ಪ್ರಚಾರಕ್ಕೆ ಬರೋದಾಗಿ ಹೇಳಿದ್ದಾರೆ ನಮ್ಮ ಗುರಿ ಒಂದೇ ,ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು.. 400ಕ್ಷೇತ್ರವನ್ನ…

Read More

ಕಲಬುರಗಿ: ಹನ್ನೆರಡು ಅಡಿ ಎತ್ತರದ ಏಕಶಿಲಾ ಗಣಪನ ಸೊಂಡಿಲು ಬೆಳಗಾದ್ರಲ್ಲಿ ಮೆತ್ತಗಾಯ್ತು..ಇಂತಹದೊಂದು ಅಚ್ಚರಿಯ ಪವಾಡ ನಡೆದದ್ದು ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರು ಗ್ರಾಮದಲ್ಲಿ ನಡೆದಿದೆ..ಕಲ್ಲಿನ ಗಣಪನ ಸೊಂಡಿಲು ಸ್ಪರ್ಷಿಸಿದಾಗ ಮೆತ್ತನೆಯ ಅನುಭವ ಕಂಡುಬಂದಿದೆ.. ಈ ವಿಷ್ಯ ಗೊತ್ತಾಗ್ತಿದ್ದಂತೆ ಜನ ತಂಡೋಪ ತಂಡವಾಗಿ ಗಣಪನ ದರ್ಶನಕ್ಕೆ ಆಗಮಿಸಿದೆ..ಹೀಗಾಗಿ ಇದೇನು ಪವಾಡವೋ ಇಲ್ಲ ಇನ್ನಾವುದೋ ವೈಜ್ಞಾನಿಕ ಕಾರಣವೋ ಅನ್ನೋ ಚರ್ಚೆ ಇಡೀ ಊರಲ್ಲಿ ನಡೆದಿದೆ..

Read More

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರಳೆಹಳ್ಳಿ ಗ್ರಾಮದಲ್ಲಿ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿನ ಬಣವೆ ಭಸ್ಮವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಗ್ರಾಮದ ಜಿ ಎಚ್ ಅಣ್ಣಪ್ಪ ಇಪ್ಪತ್ತು ಎಕರೆಯಲ್ಲಿ ಬೆಳೆದಿದ್ದ ಭತ್ತದ ಹುಲ್ಲು ಆಗಿದ್ದು, ಬರಗಾಲ ಹಿನ್ನಲೆ ಹುಲ್ಲಿನ ಗೋಡೌನ್ ನಲ್ಲಿ ಸಂಗ್ರಹಿಸಿಟ್ಟಿದ್ದರು. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಇನ್ನೂ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಬಳ್ಳಾರಿ: ಕಳೆದ ಮಾರ್ಚ್ 5 ರಂದು ಬಳ್ಳಾರಿಯಲ್ಲಿ ಮಾಜಿ ಮೇಯರ್ ಮಗನಿಂದ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೇ ಹಲ್ಲೆಗೊಳಗಾದ ಯುವಕ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾರೆ. ತಲೆ ಭಾಗಕ್ಕೆ ಬಡಿಗೆಯಿಂದ ಬಲವಾದ ಏಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು, ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದ್ರೆ  ಚಿಕಿತ್ಸೆ ಫಲಕಾರಿಯಾಗದೇ ಹಲ್ಲೆಗೊಳಗಾದ ಯುವಕ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾರೆ. ಘಟನೆ ಹಿನ್ನಲೆ ಬಳ್ಳಾರಿ ಮಾಜಿ ಮೇಯರ್ ನಾಗಮ್ಮ ಮಗ ರಘು ಹುಟ್ಟು ಹಬ್ಬದ ದಿನದಂದೇ ಡಿಜೆ ಹಾಕಿ ತಲವಾರ್ ಹಿಡಿದು ಡ್ಯಾನ್ಸ್ ಮಾಡುತ್ತಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ರಘು ಹಾಗೂ ಅವನ ಸ್ನೇಹಿತರಿಂದ ತಿಪ್ಪೇಸ್ವಾಮಿ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಲಾಗಿತ್ತು. ಬಡಿಗೆ ಯಿಂದ ಹಲ್ಲೆ ಮಾಡಿದರ ಪರಿಣಾಮ ತಿಪ್ಪೆಸ್ವಾಮಿಯ ತೆಲೆ ಹಾಗೂ ದೇಹದ ಇತರ ಭಾಗಗಕ್ಕೆ ತೀವ್ರ ಗಾಯಗಳಾಗಿತ್ತು.  ಬಳ್ಳಾರಿ ಗಾಂಧಿ ನಗರ ಠಾಣೆಯಲ್ಲಿ ರಘು ಸೇರಿ ಎಂಟು ಜನರ ವಿರುದ್ದ ಎಫ್ ಐ ಆರ್ ಆಗಿತ್ತು. ಪ್ರಮುಖ ಆರೋಪಿ…

Read More