Author: AIN Author

ಹಾಸನ: ತಾಳಿ ಕಟ್ಟುವ ವೇಳೆ ಮದುವೆ ಮಂಟಪಕ್ಕೆ ಮತ್ತೋರ್ವ ಯುವಕನ ಎಂಟ್ರಿಯಿಂದ ಮದುವೆ ಮುರಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದಿದೆ. ಇಂದು ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯಬೇಕಿದ್ದ ಮದುವೆಯಾಗಿದ್ದು, ಆದರೆ ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದ ನವೀನ್​​ ಎಂಬಾತನಿಂದ ಮದುವೆಗೆ ಅಡ್ಡಿ ಆರೋಪ ಮಾಡಲಾಗಿದೆ. ತಾಳಿ ಕಿತ್ತುಕೊಂಡು ತೇಜಸ್ವಿನಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಜೊತೆ ಮದುವೆ ಮಾಡಿ ಎಂದು ಪಟ್ಟುಹಿಡಿದಿದ್ದಾನೆ. ಹೀಗಾಗಿ ಕಲ್ಯಾಣಮಂಟಪದಲ್ಲಿ ಕೆಲಕಾಲ‌ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಪ್ರವೇಶಿಸಿದ ಬೇಲೂರು ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. https://youtu.be/4mhGEYXyMn4 ತೇಜಸ್ವಿನಿ ತನ್ನನ್ನ ಪ್ರೀತಿಸುತ್ತಿದ್ದಳು. ತನಗೆ ವಿಚಾರ ಮುಚ್ಚಿಟ್ಟು ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂದು ಯುವಕ ಆರೋಪಿಸಿದ್ದಾನೆ. ಇತ್ತ ಪ್ರೀತಿ ವಿಚಾರ ತಿಳಿದ ಮದುಮಗ ಮದುವೆ ಬೇಡ ಎಂದು ಹೊರಟು ಹೋಗಿದ್ದಾನೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ನವದೆಹಲಿ: ಪಕ್ಷವು ಆರ್ಥಿಕವಾಗಿ ಸೊರಗುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ವ್ಯವಸ್ಥಿತ ಪ್ರಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಲೋಕಸಭೆ ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. “ನಾವು ಇಂದು ಪ್ರಸ್ತಾಪಿಸುತ್ತಿರುವ ವಿಷಯ ಬಹಳ ಗಂಭೀರವಾಗಿದೆ. ಈ ಸಮಸ್ಯೆ ಕಾಂಗ್ರೆಸ್ ಅನ್ನು ಮಾತ್ರವಲ್ಲದೆ, ನಮ್ಮ ಪ್ರಜಾಪ್ರಭುತ್ವಕ್ಕೇ ಹೆಚ್ಚು ಮೂಲಭೂತವಾಗಿ ಅಪಾಯಕಾರಿಯಾಗಿದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ ಅನ್ನು ಆರ್ಥಿಕವಾಗಿ ದುರ್ಬಲಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ವ್ಯವಸ್ಥಿತ ಪ್ರಯತ್ನ ನಡೆಸಿದ್ದಾರೆ. ಜನರಿಂದ ಸಂಗ್ರಹಿಸಿದ ದೇಣಿಗೆಗಳನ್ನು ತಡೆ ಹಿಡಿಯಲಾಗುತ್ತಿದೆ ಮತ್ತು ನಮ್ಮ ಖಾತೆಗಳಿಂದ ಬಲವಂತವಾಗಿ ಹಣ ಕಿತ್ತುಕೊಳ್ಳಲಾಗುತ್ತಿದೆ” ಎಂದು ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದರು. https://ainlivenews.com/those-with-these-health-problems-should-not-eat-eggplant/ “ಇಂತಹ ಅತ್ಯಂತ ಸವಾಲಿನ ಸಂದರ್ಭದಲ್ಲಿಯೂ, ನಮ್ಮ ಚುನಾವಣಾ ಪ್ರಚಾರದ ಪರಿಣಾಮಕಾರಿತ್ವವನ್ನು ಕಾಪಾಡಲು ನಮ್ಮ…

Read More

ಶಿವಮೊಗ್ಗ: ಮಗನಿಗೆ ಟಿಕೆಟ್ ಸಿಕ್ಕಿಲ್ಲ ಅಂತ ಮಾತ್ರ ತಾನು ಅಸಮಾಧಾನಗೊಂಡಿಲ್ಲ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮಗನಿಗೆ ಟಿಕೆಟ್ ಸಿಕ್ಕಿಲ್ಲ ಅಂತ ಮಾತ್ರ ತಾನು ಅಸಮಾಧಾನಗೊಂಡಿಲ್ಲ, ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ಧ ಮತ್ತು ಹಿಂದೂತ್ವ ಉಳಿಸಲು ಹೋರಾಟ ಮಾಡುತ್ತಿರುವುದಾಗಿ ಹೇಳಿದರು. ರಾಷ್ಟ್ರಮಟ್ಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪರಿವಾರವಾದವನ್ನು ವಿರೋಧಿಸುವ ಹಾಯೆಯೇ ತಾನು ಕರ್ನಾಟಕದಲ್ಲಿ ಯಡಿಯೂರಪ್ಪರ ಕುಟುಂಬ ವಾದದ ವಿರುದ್ಧ ಸೆಡ್ಡು ಹೊಡೆದಿರುವೆ ಎಂದು ಈಶ್ವರಪ್ಪ ಹೇಳಿದರು. ಅವರ ಒಬ್ಬ ಮಗ ಸಂಸದನಾಗಿದ್ದಾರೆ ಮತ್ತೊಬ್ಬ ಶಾಸಕನಾಗಿದ್ದಾರೆ ಮತ್ತು ಅವರು ಕೇಂದ್ರ ಚುನಾವಣಾ ಮಂಡಳಿಯ ಸದಸ್ಯರಾಗಿದ್ದಾರೆ. ಅಷ್ಟಾಗಿಯೂ ಅವರು ವಿಧಾನಸಭಾ ಚುನಾವಣೆಯ ಆರು ತಿಂಗಳ ಬಳಿಕ ದೆಹಲಿಗೆ ಹೋಗಿ ತಮ್ಮ ಮಗನಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದರು ಎಂದು ಈಶ್ವರಪ್ಪ ಹೇಳಿದರು. https://ainlivenews.com/those-with-these-health-problems-should-not-eat-eggplant/ ಹಿಂದೂತ್ವವಾದಿಗಳಾಗಿರುವ ಸಿಟಿ ರವಿ, ಪ್ರತಾಪ್ ಸಿಂಹ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸದಾನಂದಗೌಡರನ್ನು ಯಡಿಯೂರಪ್ಪ ಮೂಲೆಗುಂಪು ಮಾಡಿದರು ಎಂದು ಈಶ್ವರಪ್ಪ ಹೇಳಿದರು.…

Read More

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ರ ಆರಂಭಿಕ ಪಂದ್ಯ ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣಸಲಿದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ವೇಳಾಪಟ್ಟಿ 1. ಮಾರ್ಚ್ 22ರಂದು 8 ಗಂಟೆಗೆ: ಸಿಎಸ್‌ಕೆ vs ಆರ್‌ಸಿಬಿ, ಚೆನ್ನೈ 2. ಮಾರ್ಚ್ 23 ರಂದು ಮಧ್ಯಾಹ್ನ 3.30 ಗಂಟೆಗೆ: ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮೊಹಾಲಿ. 3. ಮಾರ್ಚ್ 23ರಂದು ಸಂಜೆ 7.30 ಗಂಟೆಗೆ: ಕೆಕೆಆರ್ vs ಎಸ್‌ಆರ್‌ಎಚ್, ಕೋಲ್ಕತ್ತಾ. 4. ಮಾರ್ಚ್ 24ರಂದು ಸಂಜೆ 7.30 ಗಂಟೆಗೆ: ಆರ್‌ಆರ್ vs ಎಲ್‌ಎಸ್‌ಜಿ, ಜೈಪುರ 5. ಮಾರ್ಚ್ 24ರಂದು ಸಂಜೆ 7.30 ಗಂಟೆಗೆ: ಜಿಟಿ vs ಎಂಐ, ಅಹಮದಾಬಾದ್ 6. ಮಾರ್ಚ್ 25ರಂದು ಸಂಜೆ 7.30 ಗಂಟೆಗೆ: ಆರ್‌ಸಿಬಿ vs ಪಂಜಾಬ್ ಕಿಂಗ್ಸ್, ಬೆಂಗಳೂರು 7. ಮಾರ್ಚ್ 26ರಂದು ಸಂಜೆ 7.30 ಗಂಟೆಗೆ:…

Read More

ಬೆಂಗಳೂರು: ಗ್ರಾಮಾಂತರ ಕ್ಷೇತ್ರದಲ್ಲಿ ಸಾಕಷ್ಟು ಚುನಾವಣಾ ಅವ್ಯವಹಾರ ನಡೆಯುತ್ತಿದೆ. ಚುನಾವಣೆಗೆ ಹಂಚೋದಕ್ಕಾಗಿ ಕಾಂಗ್ರೆಸ್‌ನವರು 8 ಲಕ್ಷ ಕುಕ್ಕರ್‌ ಸಂಗ್ರಹಿಸಿದ್ದಾರೆ. ಮನೆ-ಮನೆಗಳಿಗೆ ಹೋಗಿ ದುಡ್ಡು ಕೊಡ್ತಿದ್ದಾರೆ. ಈ ಅಕ್ರಮಗಳನ್ನು ತಡೆಯಲು ಪ್ಯಾರಾ ಮಿಲಿಟರಿ ಫೋರ್ಸ್ ಬರಬೇಕು ಎಂದು ಆರ್‌ಆರ್ ನಗರ ಶಾಸಕ ಮುನಿರತ್ನ ಆಗ್ರಹಿಸಿದ್ದಾರೆ.Namma Metro : ವೈಟ್‌ ಫೀಲ್ಡ್- ಚಲ್ಲಘಟ್ಟ ಸಂಚಾರ ಸ್ಥಗಿತಗೊಂಡಿದ್ದ ಮೆಟ್ರೋ ಪುನಾರಂಭ! ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.ಕೆ ಸುರೇಶ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣೆಗೆ ಹಂಚಲು ಕಾಂಗ್ರೆಸ್‌ನವರು ಕುಕ್ಕರ್, ಸೀರೆ ಸಂಗ್ರಹ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಳ್ತಿಲ್ಲ. ದಾಳಿ ಮಾಡಿದ್ರೆ ತೊಂದರೆ ಆಗುತ್ತೆ ಅಂತಾ ಹೆದರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಡಾ.ಸಿ.ಎನ್ ಮಂಜುನಾಥ್ ಅವರು ಪ್ರಾಮಾಣಿಕ ವ್ಯಕ್ತಿ, ಅಂತಹ ವ್ಯಕ್ತಿ ನಮ್ಮ ಗ್ರಾಮಾಂತರಕ್ಕೆ ಅಭ್ಯರ್ಥಿಯಾಗಿ ಸಿಕ್ಕಿದ್ದಾರೆ. ಒಳ್ಳೆಯ ರೀತಿಯ ಚುನಾವಣೆ ಮಾಡೋದನ್ನು ಬಿಟ್ಟು, ಇಂತಹ ಕೆಲಸ ಮಾಡ್ತಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯವರು ಕಂಡರೆ ಹೊಡೆಯಿರಿ ಅಂತ ಕರೆ ಕೊಟ್ಟಿದ್ದಾರೆ. ನಮ್ಮ…

Read More

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಬರುವಾಗ ಯುವಕನೊಬ್ಬ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪರ್ಪಲ್​ ಲೈನ್​ನ  ಮಾಗಡಿ ರಸ್ತೆಯಿಂದ ಚಲ್ಲಘಟ್ಟ ವರೆಗಿನ ಮೆಟ್ರೋ ಸಂಚಾರ ಪುನಾರಂಭವಾಗಿದೆ. ಗುರುವಾರ ಮಧ್ಯಾಹ್ನ 2:10ರ ಸುಮಾರಿಗೆ ಮೆಟ್ರೋ ಹಳಿಗೆ ವ್ಯಕ್ತಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೆಟ್ರೋ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ವ್ಯಕ್ತಿ ಹಳಿಗೆ ಧುಮುಕಿದ್ದು, ಮೆಟ್ರೊ ಆಡಳಿತ ಮಂಡಳಿ ಕೂಡಲೇ ಮೆಟ್ರೋ ರೈಲನ್ನು ನಿಲ್ಲಿಸಿದ್ದಾರೆ. ಬಳಿಕ ರೈಲ್ವೆ ಹಳಿಗೆ ಬಿದ್ದ ವಿದ್ಯಾರ್ಥಿಯ ಮೃತದೇಹವನ್ನು ಹೊರತೆಗೆಯಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. BIGG BREAKING: ಮೆಟ್ರೋ ಟ್ರ್ಯಾಕ್‌ʼನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ: ವೈಟ್‌ ಫೀಲ್ಡ್- ಚಲ್ಲಘಟ್ಟ ಸಂಚಾರ ಸ್ಥಗಿತ! ಘಟನೆಯಿಂದ ಚಲ್ಲಘಟ್ಟದಿಂದ ಮೆಜೆಸ್ಟಿಕ್ ಕಡೆಗೆ ಸಂಚಾರ ಮಾಡುತ್ತಿದ್ದ ಮೆಟ್ರೋ ರೈಲುಗಳಲ್ಲಿ ವ್ಯತ್ಯಯವುಂಟಾಗಿದೆ. ಮೆಟ್ರೋ ಪ್ರಯಾಣಿಕರನ್ನು ಕೆಳಗಿಳಿಸಿ ಬೇರೆ ಸಾರಿಗೆ ಅವಲಂಭಿಸುವಂತೆ ಮನವಿ ಮಾಡಲಾಗಿದೆ. ಮಾಗಡಿ ರೋಡ್‌ನಿಂದ ಚಲ್ಲಘಟ್ಟ ಮೆಟ್ರೋ ಸೇವೆ ಸ್ಥಗಿತಗೊಂಡಿದ್ದು, ವೈಟ್ ಫೀಲ್ಡ್‌ನಿಂದ ಮಾಗಡಿ ರೋಡ್‌ವರೆಗೂ ಮಾತ್ರ ಮೆಟ್ರೋ ಸೇವೆ ಲಭ್ಯವಿದೆ. ಸ್ಥಗಿತಗೊಂಡಿದ್ದ ಮೆಟ್ರೋ ಪುನಾರಂಭ…

Read More

ಮೈಸೂರು : ಸಿದ್ದರಾಮಯ್ಯ ದುರಂಹಕಾರದ ಮಾತು ಬಿಡಬೇಕು. ಮೈಸೂರು ಮಹಾರಾಜರ ಕೊಡುಗೆ ಅನನ್ಯವಾದದ್ದು. ಮಹಾರಾಜರು ಮಾಡಿರುವ ಎಳ್ಳಷ್ಟು ಕೆಲಸವನ್ನು ಮಾಡಲು ನಿಮ್ಮ ಕೈಲಿ ಆಗಿದೆಯಾ? ಮೈಸೂರಿಗೆ ನಿಮ್ಮ ಕೊಡುಗೆ ಏನು? ರಾಜ ಮನೆತನದ ಬಗ್ಗೆ ಗೌರವ ಇಟ್ಟುಕೊಂಡು ಮಾತನಾಡಿ ಎಂದು ಮಾಜಿ ಡಿಸಿಎಂ ಡಾ ಸಿಎನ್‌ ಅಶ್ವತ್ಥ ನಾರಾಯಣ್‌ ಹೇಳಿದ್ದಾರೆ. ಈ ಮೂಲಕ ಯದುವೀರ್ ಯಾವ ಮಹಾರಾಜ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. https://ainlivenews.com/those-with-these-health-problems-should-not-eat-eggplant/ ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್- ಬಿಜೆಪಿ ಮೈತ್ರಿಯಲ್ಲಿ ಯಾವುದೇ ಗೊಂದಲ‌ವಿಲ್ಲ. ಜೆಡಿಎಸ್‌ನವರು ಮೂರು ಸೀಟು ಕೇಳಿದ್ದರು‌. ವರಿಷ್ಠರ ಹಂತದಲ್ಲಿ ಎಲ್ಲವೂ ತೀರ್ಮಾನ ಆಗಲಿದೆ. ನಾವು ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಎಚ್‌ಡಿ ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರನ್ನೂ ರಾಜ್ಯದಾದ್ಯಂತ ಪಕ್ಷದ ಪ್ರಚಾರಗಳಿಗೆ ಮುಂದಿನ ದಿನಗಳಲ್ಲಿ ಆಹ್ವಾನಿಸಲಾಗುವುದು ಎಂದು ಹೇಳಿದರು.  

Read More

ಬೆಂಗಳೂರು: ಚಲಿಸುತ್ತಿದ್ದ ಮೆಟ್ರೋ ರೈಲಿಗೆ ಸಿಲುಕಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಹೋಳಿ ಆಚರಣೆಗೆ ಕಾವೇರಿ, ಬೋರ್‌ ವೆಲ್‌ ನೀರು ಬಳಸದಂತೆ BWSSB ಖಡಕ್‌ ಸೂಚನೆ! ಗುರುವಾರ ಮಧ್ಯಾಹ್ನ 2:10ರ ಸುಮಾರಿಗೆ ಮೆಟ್ರೋ ಹಳಿಗೆ ವ್ಯಕ್ತಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೆಟ್ರೋ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ವ್ಯಕ್ತಿ ಹಳಿಗೆ ಧುಮುಕಿದ್ದು, ಮೆಟ್ರೊ ಆಡಳಿತ ಮಂಡಳಿ ಕೂಡಲೇ ಮೆಟ್ರೋ ರೈಲನ್ನು ನಿಲ್ಲಿಸಿದ್ದಾರೆ. ಬಳಿಕ ರೈಲ್ವೆ ಹಳಿಗೆ ಬಿದ್ದ ವಿದ್ಯಾರ್ಥಿಯ ಮೃತದೇಹವನ್ನು ಹೊರತೆಗೆಯಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಘಟನೆಯಿಂದ ಚಲ್ಲಘಟ್ಟದಿಂದ ಮೆಜೆಸ್ಟಿಕ್ ಕಡೆಗೆ ಸಂಚಾರ ಮಾಡುತ್ತಿದ್ದ ಮೆಟ್ರೋ ರೈಲುಗಳಲ್ಲಿ ವ್ಯತ್ಯಯವುಂಟಾಗಿದೆ. ಮೆಟ್ರೋ ಪ್ರಯಾಣಿಕರನ್ನು ಕೆಳಗಿಳಿಸಿ ಬೇರೆ ಸಾರಿಗೆ ಅವಲಂಭಿಸುವಂತೆ ಮನವಿ ಮಾಡಲಾಗಿದೆ. ಮಾಗಡಿ ರೋಡ್‌ನಿಂದ ಚಲ್ಲಘಟ್ಟ ಮೆಟ್ರೋ ಸೇವೆ ಸ್ಥಗಿತಗೊಂಡಿದ್ದು, ವೈಟ್ ಫೀಲ್ಡ್‌ನಿಂದ ಮಾಗಡಿ ರೋಡ್‌ವರೆಗೂ ಮಾತ್ರ ಮೆಟ್ರೋ ಸೇವೆ ಲಭ್ಯವಿದೆ.

Read More

ಬೆಂಗಳೂರು: “ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲೇ ಅತಿ ಹೆಚ್ಚು ಯುವ, ಮಹಿಳಾ, ವಿದ್ಯಾವಂತ, ಪ್ರಜ್ಞಾವಂತರಿಗೆ, ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಇವರೆಲ್ಲಾ ಈ ಬಾರಿ ಗೆದ್ದು ಭವಿಷ್ಯದಲ್ಲಿ ಪಕ್ಷದ ದೊಡ್ಡ ನಾಯಕರಾಗಿ ಬೆಳೆಯುತ್ತಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು; ಕೇವಲ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ್ದು, ಕಾರ್ಯಕರ್ತರಿಗೆ ನೀಡಿಲ್ಲ ಎಂದು ಕೇಳಿದಾಗ “ಕಾರ್ಯಕರ್ತರಿಗೂ ಟಿಕೆಟ್ ನೀಡಿದ್ದೇವೆ. ಯಾರು ಟಿಕೆಟ್ ಕೇಳಿದ್ದಾರೋ ಅವರಿಗೆ ನೀಡಿದ್ದೇವೆ. ಯಾರು ಕೇಳುವುದಿಲ್ಲವೋ ಅವರಿಗೆ ನೀಡಲು ಆಗುವುದಿಲ್ಲ. ಮೊದಲು ಆಸಕ್ತಿ, ಛಲ ಇರಬೇಕು”. ಡಿಸಿಎಂ ಡಿ ಕೆ ಶಿವಕುಮಾರ್ ಭೇಟಿಯಾಗಿ ಆಶೀರ್ವಾದ ಪಡೆದ ಮೃಣಾಲ್ ಹೆಬ್ಬಾಳ್ಕರ್ ಇಂದು ಸಂಜೆ ಅಂತಿಮ ಪಟ್ಟಿ “ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು ತಮಿಳುನಾಡು, ಉತ್ತರಪ್ರದೇಶದ ಪಟ್ಟಿ ಅಂತಿಮಗೊಳ್ಳುತ್ತಿದ್ದು ಇಂದು (ಗುರುವಾರ) ಸಂಜೆ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ಇಂದು ಸಂಜೆಯೇ ಎಲ್ಲಾ ಅಭ್ಯರ್ಥಿಗಳು ಮತ್ತು ಮಂತ್ರಿಗಳ ಜೊತೆ…

Read More

ಚೆನ್ನೈ: ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವದಿಂದ ಲೆಜೆಂಡ್‌ ಎಂ.ಎಸ್‌ ಧೋನಿ ಕೆಳಗಿಳಿದಿದ್ದಾರೆ. ಅವರ ಬದಲಿಗೆ ನೂತನ ನಾಯಕನಾಗಿ ಬಲಗೈ ಬ್ಯಾಟರ್‌ ಋತುರಾಜ್‌ ಗಾಯಕ್ವಾಡ್‌ ನೇಮಕಗೊಂಡಿದ್ದಾರೆ. ಆದರೆ, ಗಾಯಕ್‌ವಾಡ್‌ ಅವರ ಪರಾಕ್ರಮಗಳು ಕೇವಲ ಬ್ಯಾಟ್‌ಗೆ ಮಾತ್ರ ಸೀಮಿತವಾಗಿರಲಿಲ್ಲ. ಸ್ಪರ್ಧೆಯ ನಂತರ, ಆರಂಭಿಕ ಆಟಗಾರನು ಸಹ ಆಟಗಾರ ರಾಜವರ್ಧನ್ ಹಂಗರ್ಗೇಕರ್ ಅವರೊಂದಿಗೆ ಪಂದ್ಯದ ಆಟಗಾರ ಪ್ರಶಸ್ತಿಯನ್ನು ಹಂಚಿಕೊಂಡಾಗ ಸುಂದರವಾದ ಗೆಸ್ಚರ್ ಮೂಲಕ ಹಲವಾರು ಹೃದಯಗಳನ್ನು ಗೆದ್ದರು. ಹಂಗರ್ಗೇಕರ್ ಬೌಲ್‌ನೊಂದಿಗೆ ಪ್ರಮುಖ ಪಾತ್ರ ವಹಿಸಿದರು ಮತ್ತು ಅವರ ಕೋಟಾದಲ್ಲಿ ಐದು ವಿಕೆಟ್‌ಗಳನ್ನು ನೆತ್ತಿಗೇರಿಸಿದರು. ಅವರ ಪ್ರಯತ್ನದಿಂದ ಮಹಾರಾಷ್ಟ್ರವು ಉತ್ತರ ಪ್ರದೇಶವನ್ನು 47.4 ಓವರ್‌ಗಳಲ್ಲಿ 272 ರನ್‌ಗಳಿಗೆ ಕಟ್ಟಿಹಾಕಿತು.

Read More